Horoscope: ನಿತ್ಯಭವಿಷ್ಯ; ಈ ರಾಶಿಯವರಿಗೆ ಇಂದು ಅಚ್ಚರಿ ಉಡುಗೊರೆ ಸಿಗುವ ಸಾಧ್ಯತೆ ಇದೆ
Rashi Bhavishya: ಒಂದಷ್ಟು ಮಂದಿ ಪ್ರತಿನಿತ್ಯ ತಮ್ಮ ಭವಿಷ್ಯ ನೋಡುತ್ತಾರೆ. ಹಾಗಿದ್ದರೆ, ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರಾಗಿದ್ದರೇ, 21 ಮಾರ್ಚ್ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಗುರು, ತಿಥಿ :ದ್ಚಾದಶೀ, ನಿತ್ಯನಕ್ಷತ್ರ : ಆಶ್ಲೇಷಾ, ಯೋಗ : ಸುಕರ್ಮ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 37 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:10 ರಿಂದ ಸಂಜೆ 03:41ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:37 ರಿಂದ 08:08ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:38 ರಿಂದ 11:09 ರ ವರೆಗೆ.
ಮೇಷ ರಾಶಿ : ಇಂದು ನಿಮ್ಮ ತಜ್ಞತೆಯು ಉಪಯೋಗಕ್ಕೆ ಬರುವುದು. ಕಾಲಹರಣ ಮಾಡದೇ ಏನಾದರೂ ಸದುಪಯೋಗವಾಗುವ ವಿಚಾರಕ್ಕೆ ಒತ್ತು ಕೊಡಿ. ಇಂದು ಹೂಡಿಕೆ ಮಾಡಲು ಉತ್ತಮ ದಿನವಲ್ಲ. ಮನೆಯಲ್ಲಿ ವಾತಾವರಣ ಸ್ವಲ್ಪ ಉದ್ವಿಗ್ನವಾಗಿರುತ್ತದೆ. ಕುಟುಂಬ ಸದಸ್ಯರ ಜೊತೆ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಯಾರನ್ನೂ ನಿಮ್ಮ ದೃಷ್ಟಿಯಿಂದ ಅಳೆಯಲು ಆಗದು. ಅಧಿಕಾರಿಗಳ ಕಡೆಯಿಂದ ನಿಮ್ಮ ಬಗ್ಗೆ ವಿಚಾರಣೆ ಇರಬಹುದು. ಅದಕ್ಕಾಗಿ ಸಮಯವನ್ನೂ ವ್ಯರ್ಥ ಮಾಡುವುದು ಬೇಡ. ಸಮಯದ ಹೊಂದಾಣಿಕೆ ಅವಶ್ಯಕ. ಇಂದು ಸಂಗಾತಿಯು ನಿಮ್ಮ ಸಂತೋಷವನ್ನು ಹೆಚ್ಚಿಸಬಹುದು. ಅಚ್ಚರಿ ಉಡುಗೊರೆಯೊಂದು ಸಿಗುವ ಸಾಧ್ಯತೆ ಇದೆ. ವಾಹನದಲ್ಲಿ ಸಂಚಾರಕ್ಕೆ ತೊಂದರೆ ಬರಬಹುದು. ನೀವು ಅಂದುಕೊಂಡಷ್ಟು ಸರಳ ಕೆಲಸಗಳು ಇಂದು ಆಗದು. ಕೌಟುಂಬಿಕ ವ್ಯವಹಾರದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುವಿರಿ.
ವೃಷಭ ರಾಶಿ : ಹತ್ತಾರು ಕೆಲಸಗಳಿದ್ದರೂ ಆಲಸ್ಯದಿಂದ ಇರುವುದು ನಿಮಗೆ ಅಭ್ಯಾಸವಾಗಿರುವುದು. ಯಾರನ್ನೋ ನೋಯಿಸಿರುವುದು ನಿಮ್ಮ ಕಡೆಗೇ ಬರಬಹುದು. ತಂದೆಯ ಆರೋಗ್ಯದ ಕುಸಿತದಿಂದಾಗಿ ಚಿಂತೆ ಮಾಡುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆಯೂ ನೀವು ಕಾಳಜಿ ವಹಿಸಬೇಕು. ಎಲ್ಲರ ಮೇಲೂ ಸಿಟ್ಟಾಗುವಿರಿ. ಮನಸ್ಸು ಸ್ತಿಮಿತವನ್ನು ತಪ್ಪಬಹುದು. ಸಹನೆಯು ನಿಮ್ಮ ಅಸ್ತ್ರವಾಗಬೇಕಾಗಬಹುದು. ಸಂಗಾತಿಯ ಸ್ವಭಾವವನ್ನು ಸುಲಭದಿಂದ ತಿಳಿಯಲು ಸಾಧ್ಯವಾಗದು. ಅತಿಯಾದ ಬಂಧನವೂ ನಿಮಗೆ ಕಿರಿಕಿರಿ ಎನಿಸಬಹುದು. ವೃತ್ತಿಯಲ್ಲಿ ನಿಮ್ಮ ಮೇಲೆ ಅಭಿಮಾನವು ಹೆಚ್ಚಾಗಬಹುದು. ಸ್ನೇಹಿತರ ಜೊತೆ ಸಮಯವು ವ್ಯರ್ಥವಾದೀತು. ನಿಮ್ಮ ನಂಬಿಕೆಗೆ ತೊಂದರೆಯಾಗುವುದು. ಸಹವಾಸವನ್ನು ಯೋಗ್ಯತೆಗೆ ಅನುಸಾರವಾಗಿ ಮಾಡುವಿರಿ.
ಮಿಥುನ ರಾಶಿ : ಇಂದು ಎಲ್ಲಿಗೋ ಹೊರಟ ನೀವು ದಾರಿ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಜೊತೆಗಿನ ಸಲುಗೆಯು ವಿಪರೀತ ಪರಿಣಾಮವನ್ನು ಬೀರುವುದು. ಕೆಲಸದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು, ಇದರಿಂದಾಗಿ ನೀವು ಸಾಕಷ್ಟು ಒತ್ತಡವನ್ನು ಅನುಭವಿಸುವಿರಿ. ಇಂದು ಹಿರಿಯರಿಂದ ಯಾವುದೇ ವಿಶೇಷ ಬೆಂಬಲವನ್ನು ಪಡೆಯುವುದಿಲ್ಲ. ಈ ಸಮಯ ವ್ಯಾಪಾರಿಗಳಿಗೆ ಅನುಕೂಲಕರವಾಗಿಲ್ಲ. ಇಂದು ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಮಕ್ಕಳ ಮೇಲೆ ಪ್ರೀತಿ ಅಧಿಕವಾಗುವುದು. ಯಾರಾದರೂ ನಿಮಗೆ ಬೇಡದ ಸಲಹೆಯನ್ನು ಕೊಡಬಹುದು. ಎಲ್ಲದಕ್ಕೂ ಅಡ್ಡಿಯನ್ನು ಕೊಡುವುದು ಬೇಡ. ಇದರಿಂದ ನಿಮ್ಮ ವ್ಯಕ್ತಿತ್ವವೇ ಕಳೆಗುಂದಬಹುದು. ದೈವಾರಾಧನೆಯಲ್ಲಿ ಮನಸ್ಸು ಮುಳುಗುವುದು.
ಕಟಕ ರಾಶಿ : ಇಂದು ನಿಮಗೆ ವಹಿಸಿದ ಜವಾಬ್ದಾರಿಯನ್ನು ಪೂರ್ಣ ಮನಸ್ಸಿನಿಂದ ಮಾಡಲಾಗದು. ಯಾವುದೋ ಅನವಶ್ಯಕ ಆಲೋಚನೆಗಳು ಬರಬಹುದು. ಇಂದು ವೈಯಕ್ತಿಕ ಸಂಬಂಧಗಳು ಉತ್ತಮವಾಗಿಸಿಕೊಳ್ಳುವಿರಿ. ಕುಟುಂಬ ಸದಸ್ಯರಲ್ಲಿ ಸಾಮರಸ್ಯ ಇರುತ್ತದೆ. ಇಂದುಬನಿಮ್ಮ ಸಂಗಾತಿ ಕೂಡ ಉತ್ತಮ ಮನಃಸ್ಥಿತಿಯನ್ನು ಹೊಂದಿರುತ್ತಾರೆ. ನೀವು ದೀರ್ಘಕಾಲದವರೆಗೆ ಕೆಲಸದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸಲಿಲ್ಲ, ಆದರೆ ಇಂದು ನೀವು ನಿಮ್ಮ ಅತ್ಯುತ್ತಮವಾದದನ್ನು ನೀಡುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸುತ್ತೀರಿ. ಹಳೆಯ ನೋವಿನ ಬಗ್ಗೆ ನಿಮಗೆ ಭಯವಿರುವುದು. ಯಾರದೋ ಮಾತಿನಿಂದ ಮನೆಯಲ್ಲಿ ಅಸಮಾಧಾನದ ವಾತಾವರಣವು ಇರುವುದು. ನಿಮ್ಮ ಸ್ವಭಾವಗಳು ನಿಮ್ಮವರಿಗೆ ಇಷ್ಟವಾಗದೇ ಹೋಗುವುದು. ಅತಿಯಾದ ಒತ್ತಡ ಬಂದಾಗ ಸ್ವಲ್ಪ ಸಮಯ ಸುಮ್ಮನೆ ಕುಳಿತು ಅನಂತರ ಆರಂಭಿಸಿ.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




