
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಕಾರ್ತಿಕ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಅನುರಾಧಾ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಪುನರ್ವಸು ಯೋಗ : ಶುಕ್ಲ, ಕರಣ : ಗರಜ, ಸೂರ್ಯೋದಯ – 06 – 26 am, ಸೂರ್ಯಾಸ್ತ – 05 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:52 – 09:17, ಯಮಗಂಡ ಕಾಲ 10:43 – 12:08, ಗುಳಿಕ ಕಾಲ 13:34 – 14:59.
ಮೇಷ ರಾಶಿ: ಎಲ್ಲವನ್ನೂ ನೀವು ಪ್ರೀತಿಯಿಂದ ವಿಶ್ವಾಸದಿಂದ ಪಡೆಯಲಾಗದು. ಯಾರ ಬೆಂಬಲಕ್ಕೂ ನೀವು ಸುಮ್ಮನೇ ಇರಲಾರಿರಿ. ಯಾರಾದರೂ ನಿಮ್ಮನ್ನು ಎಚ್ಚರಿಸುವರು. ನಿಮ್ಮ ಬಗ್ಗೆ ಸರಿಯಾಗಿ ತಿಳಿಹೇಳುವರು. ಸಿಟ್ಟಾಗುವ ಸ್ಥಿತಿಯಲ್ಲಿಯೂ ನೀವು ಶಾಂತರಾಗುವಿರಿ. ಕಟ್ಟಡವನ್ನು ನಿರ್ಮಾಣದವರಿಗೆ ದೊಡ್ಡ ಯೋಜನೆ ಸಿಗಲಿದೆ. ಒಳ್ಳೆಯ ಗುಣವೇ ನಿಮ್ಮನ್ನು ಸಾಕಬಹುದು. ಹಣದ ಲೆಕ್ಕಾಚಾರದಲ್ಲಿ ನಿಮಗೆ ಮೋಸವಾದುದ್ದು ತಿಳಿದುಬರುವುದು.
ವೃಷಭ ರಾಶಿ: ಕೆಲವು ಸುದ್ದಿಗಳು ನಿಮ್ಮನ್ನು ಭ್ರಾಂತಗೊಳಿಸಬಹುದು. ಅಪರಿಚಿತ ವ್ಯಕ್ತಿಗಳು ನಿಮಗೆ ಬಹಳ ಆಪ್ತರಾಗುವರು. ಉದ್ಯೋಗದ ಕಾರಣಕ್ಕೆ ಮಾಡಿದ ಪ್ರಯಾಣದಿಂದ ಆಯಾಸವಾಗುವುದು. ಆರ್ಥಿಕ ತೊಂದರೆಯನ್ನು ನೀವು ಮನೆಯಲ್ಲಿ ಹೇಳಿಕೊಳ್ಳುವಿರಿ. ಅಪ್ರತೀಕ್ಷಿತ ಸುಖ ಲಭ್ಯ. ಹೂಡಕೆಯ ಹಣದಲ್ಲಿ ತೊಡಕಾಗಬಹುದು. ಸರ್ಕಾರದಿಂದ ಬರುವ ಹಣವು ಬಾರದೇ ಇರುವುದು. ನಿಮ್ಮ ಇಂದಿನ ಕಾರ್ಯವು ಪೂರ್ವಯೋಜನೆಯಂತೆ ನಡೆಯದು.
ಮಿಥುನ ರಾಶಿ: ಕಛೇರಿಯಲ್ಲಿ ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳಲುವಂತೆ ಇರಿ. ಸಂಗಾತಿಯ ಜೊತೆ ಕಲಹದ ಕಾರಣ ಎಲ್ಲವೂ ಅಸ್ತವ್ಯಸ್ತ ಆಗಬಹುದು. ಕೆಲವು ತೊಂದರೆಗಳನ್ನು ನೀವಾಗಿಯೇ ತಂದುಕೊಳ್ಳಲಿದ್ದೀರಿ. ನಿಮ್ಮ ಮತ್ತು ನೌಕರರ ನಡುವಿನ ಸಂಬಂಧವು ಚೆನ್ನಾಗಿ ಇರದು. ಪರಿಶ್ರಮದ ಫಲಗಳು ಸ್ಪಷ್ಟವಾಗಿ ಕಾಣುವ ದಿನ. ಹಿರಿಯರಿಂದ ಗೌರವ, ಮಾತುಗಳಿಗೆ ತೂಕ. ಹಣಕಾಸಿನಲ್ಲಿ ಸ್ಥಿರತೆ ಹಾಗೂ ನಿರೀಕ್ಷಿತ ಆದಾಯ.
ಕರ್ಕಾಟಕ ರಾಶಿ: ಮನೆಗೆ ಬಂದವರನ್ನು ಬರಿದಾಗಿ ಕಳುಹಿಸುವುದು ಬೇಡ. ಇಂದು ನೀವು ಹಣವನ್ನು ಖರ್ಚು ಮಾಡದೇ ಜಿಪುಣರಂತೆ ತೋರುವಿರಿ. ನಿಮ್ಮ ನಿಧಾನಗತಿಯನ್ನು ಬದಲಿಸಿಕೊಳ್ಳಿ. ನಿಮ್ಮ ಇಂದಿನ ಮಾತು ಕೇಳುಗರಿಗೆ ಹೃದ್ಯವಾಗಬಹುದು. ಗಂಭೀರವಾದ ಚಿಂತನೆಯನ್ನು ಮಾಡಲು ಮನಸ್ಸು ಸ್ತಿಮಿತದಲ್ಲಿ ಇರದು. ದೂರಸಂಪರ್ಕ ಇಂದು ಪ್ರಯೋಜನಕಾರಿ. ನಿಮ್ಮ ಚುರುಕುತನದಿಂದ ಸಮಸ್ಯೆಗಳು ಬಗೆಹರಿಯುತ್ತವೆ.
ಸಿಂಹ ರಾಶಿ: ಆರ್ಥಿಕ ವಿಚಾರಗಳಲ್ಲಿ ಜಾಣ ನಿರ್ಧಾರದಿಂದ ಲಾಭ. ಎಷ್ಟೇ ಬೇಸರವಾದರೂ ನಿಮ್ಮ ಕಾರ್ಯವನ್ನು ಬಿಡುವಂತಿಲ್ಲ. ಜವಾಬ್ದಾರಿಯ ಸ್ಥಾನದಲ್ಲಿ ಇದ್ದು ನೀವು ವರ್ತಿಸಬೇಕಾಗುವುದು. ಉದ್ಯಮವು ಹಳಿಯನ್ನು ತಪ್ಪಿದಂತೆ ಕಾಣಿಸುವುದು. ಸ್ತ್ರೀಯರಿಂದ ನಿಮಗೆ ಬೇಕಾದ ಸಹಾಯವು ಸಿಗದೇಹೋಗಬಹುದು. ನಿಮ್ಮ ಭಾವಜೀವನಕ್ಕೆ ಹೊಸ ದಿಕ್ಕು ಸಿಗುವ ಸೂಚನೆ. ಅಧ್ಯಾತ್ಮ ಚಿಂತನೆ ಹೆಚ್ಚಿದ್ದು ಮನಸ್ಸಿಗೂ ಭದ್ರತೆ.
ಕನ್ಯಾ ರಾಶಿ: ಪ್ರಭಾವೀ ವ್ಯಕ್ತಿಗಳ ಸಂಪರ್ಕವು ಯಾರದೋ ಮೂಲಕ ಸಿಗುವುದು. ಇಂದು ಎಲ್ಲರಿಗೂ ನೀವು ಇಷ್ಟವಾಗುವಿರಿ. ಕಲಾತ್ಮಕ ವಿಚಾರದಲ್ಲಿ ಇಂದು ಹೆಚ್ಚು ಆಸಕ್ತಿಯನ್ನು ಇಟ್ಟುಕೊಳ್ಳುವಿರಿ. ನಿಮ್ಮ ನಿರ್ಧಾರವನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ. ಎಲ್ಲರ ಮೇಲೂ ಹಿಡಿತ ಸಾಧಿಸುವುದು ಅಶಕ್ಯ. ಹೃದಯಕ್ಕೆ ನೆಮ್ಮದಿ. ಬಂಧುಗಳ ಜೊತೆಗೆ ನಿಮ್ಮ ಒಡನಾಟವು ಚೆನ್ನಾಗಿರುವುದು. ಸಂಬಂಧವು ನಿಮಗೆ ಹೊಸ ಉತ್ಸಾಹವನ್ನು ಕೊಡಬಹುದು.
ತುಲಾ ರಾಶಿ: ಆಪ್ತರಿಂದ ದೊರೆಯುವ ಮೃದು ಮಾತು ಮನಸ್ಸಿಗೆ ಶಾಂತಿ ನೀಡುತ್ತದೆ. ನಿಮ್ಮ ಭಾರ ಕಡಿಮೆಯಾಗಲು ಉಪಾಯವನ್ನು ಕಂಡುಕೊಳ್ಳುವಿರಿ. ಪರ ಊರು ನಿಮ್ಮ ಆರೋಗ್ಯವನ್ನು ಹಾಳುಮಾಡುವುದು. ನಿಮ್ಮ ಮಾತಿಗೆ ಯಾರಾದರೂ ಕಲಹವಾಡುತ್ತ ಬರಬಹುದು. ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ಮಾತು ನಡೆಯಲಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳಿ. ನಿಮ್ಮ ನಿಖರತೆ, ಶಿಸ್ತು ಮತ್ತು ಬುದ್ಧಿವಂತಿಕೆಯ ಗೆಲುವಿನ ದಿನ.
ವೃಶ್ಚಿಕ ರಾಶಿ: ಹಿರಿಯರಿಂದ ಒಳ್ಳೆಯ ಸಲಹೆ ದೊರೆತು ಸಕಾರಾತ್ಮಕ ಬದಲಾವಣೆ ಉಂಟಾಗುವುದು. ಪ್ರಭುತ್ವವನ್ನು ಇನ್ನೊಬ್ಬರಿಂದ ಪಡೆಯುವಿರಿ. ಯಾರನ್ನೋ ಟೀಕಸುತ್ತ ನಿಮ್ಮ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ಇಂದಿನ ಆದಾಯ ಕಡಿಮೆ ಇದ್ದರೂ ನೆಮ್ಮದಿ ಇರಲಿದೆ. ನಿಮ್ಮ ಸರಳತೆಯು ನಿಮಗೆ ಧನಾತ್ಮಕ ಅಂಶಗಳಿಗೆ ಕಾರಣವಾಗುವುದು. ಈ ದಿನ ನಿಮಗೆ ಕೀರ್ತಿ, ಧೈರ್ಯ ಮತ್ತು ಗೌರವ ತರುವುದರಲ್ಲಿ ಸಂಶಯವಿಲ್ಲ.
ಧನು ರಾಶಿ: ಆರ್ಥಿಕವಾಗಿ ಸ್ಥಿರತೆ ಮತ್ತು ಚಿಕ್ಕ ಲಾಭಗಳ ಸಾಧ್ಯತೆ. ಕೈಯಲ್ಲಿರುವ ಬೆಣ್ಣೆ ಬಿಟ್ಟು ತುಪ್ಪಕ್ಕೆ ಅರಸಿದರೆ ಅದು ಕಷ್ಟ. ನಿಮ್ಮ ಆತ್ಮವಿಶ್ವಾಸವೇ ಏಕಾಗ್ರತೆಯನ್ನು ತರುವುದು. ಯಾರ ಮೇಲೂ ದ್ವೇಷ ಬರುವಂತಹ ಕೆಲಸವನ್ನು ಮಾಡುವುದು ಬೇಡ. ಇದ್ದ ನಿಮ್ಮ ಸ್ವಭಾವದಲ್ಲಿ ಪರಿವರ್ತನೆ ಕಾಣಿಸಿಕೊಳ್ಳುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ.
ಮಕರ ರಾಶಿ: ಮನೆಯಲ್ಲಿ ಅಸ್ವತಂತ್ರತೆಯ ಅನುಭವ ಬರಬಹುದು. ಒಮ್ಮೆಲೇ ಅಧಿಕ ಲಾಭವನ್ನೂ ಇಂದು ಯಾರಿಂದಲೂ ನಿರೀಕ್ಷಿಸಬಾರದು. ನೀವು ಇಂದು ದೇವರ ಮೇಲೆ ಸಂಪೂರ್ಣ ಭಾರ ಹಾಕಿ ನಿಮ್ಮ ಕಾರ್ಯವನ್ನು ಆರಂಭಿಸುವಿರಿ. ಪ್ರೀತಿಯನ್ನು ನೀವು ಒಪ್ಪಿಕೊಳ್ಳದೇ ನಿಮ್ಮದೇ ವಾದ ಮಾಡುವಿರಿ. ಸಾಮಾಜಿಕ ಕೆಲಸಗಳು ನಿಮಗೆ ದಿನದ ಕೆಲಸದಂತೆ ಅಭ್ಯಾಸವಾಗುವುದು. ಬಂಧುಗಳ ಆಗಮನವು ಖುಷಿಕೊಡುವುದು.
ಕುಂಭ ರಾಶಿ: ಸಹಾಯಕನೊಬ್ಬರಿಂದ ದೊರೆಯುವ ಸಣ್ಣ ಸಲಹೆಯೇ ದೊಡ್ಡ ಬದಲಾವಣೆಗೆ ಕಾರಣ. ಇಂದು ನಿಮ್ಮ ಹಳೆಯ ವೈರವು ಮುರಿದುಬೀಳುವುದು. ನೆಮ್ಮದಿಗೆ ನಿಮ್ಮದೇ ಸೂತ್ರಗಳನ್ನು ನೀವು ಅನುಸರಿಸುವಿರಿ. ಇನ್ನೊಬ್ಬರಿಗೆ ಉಪಕಾರ ಮಾಡಲು ಹೋಗಿ ನೀವು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಆರ್ಥಿಕವಾಗಿ ಒಂದು ಸುಂದರ ಸೂಚನೆ ಬರಬಹುದಾದ ಸಂದರ್ಭ. ಯಾವುದನ್ನೂ ತಿಳಿವಳಿಕೆ ಇಲ್ಲದೇ ಮುಂದುವರಿಯುವುದು ಬೇಡ.
ಮೀನ ರಾಶಿ: ದಿನದ ಅಂತ್ಯದಲ್ಲಿ ನಿಮಗೆ ದೈವಾನುಗ್ರಹದ ಅನುಭವವಾಗಲಿದೆ. ಮಾಡಿದ ತಪ್ಪನ್ನೇ ಮತ್ತೆ ಮಾಡಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗುವಿರಿ. ಇಂದು ನೀವು ಏಕಾಂತವಾಗಿ ಇರಲು ಆಗದು. ಕೆಲಸದಲ್ಲಿ ಗೊಂದಲವು ಉಂಟಾಗಬಹುದು. ಯಾವುದನ್ನು ಯಾವಾಗ ಮಾಡಬೇಕು ಎಂಬ ಚಿಂತೆ ಬರಬಹುದು. ನಿಮ್ಮ ಮಾತುಗಳಿಗೆ ತೂಕ ಹೆಚ್ಚಿ, ಸುತ್ತಮುತ್ತಲವರಿಂದ ಗೌರವ ಸಿಗುತ್ತದೆ. ನಿಮ್ಮ ವರ್ತಮಾನದ ಸನ್ನಿವೇಶವನ್ನು ನೀವು ಆಪ್ತರಿಗೆ ತಿಳಿಸುವಿರಿ.
ಲೋಹಿತ್ ಹೆಬ್ಬಾರ್-8762924271 (what’s app only)
Published On - 1:05 am, Mon, 30 November 26