AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ; ಈ ರಾಶಿಯವರು ಯಾರದೋ ಕಾರಣಕ್ಕೆ ನೀವು ಸಿಟ್ಟಗುವುದು ಬೇಡ, ಕಲ್ಪನಾ ಜಗತ್ತಿನಿಂದ ಹೊರಬನ್ನಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಮಾರ್ಚ್ 21ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ; ಈ ರಾಶಿಯವರು ಯಾರದೋ ಕಾರಣಕ್ಕೆ ನೀವು ಸಿಟ್ಟಗುವುದು ಬೇಡ, ಕಲ್ಪನಾ ಜಗತ್ತಿನಿಂದ ಹೊರಬನ್ನಿ
ನಿತ್ಯಭವಿಷ್ಯImage Credit source: freepik
Rakesh Nayak Manchi
|

Updated on: Mar 21, 2024 | 6:38 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಮಾರ್ಚ್​​​​​ 21) ಭವಿಷ್ಯ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಗುರು, ತಿಥಿ :ದ್ಚಾದಶೀ, ನಿತ್ಯನಕ್ಷತ್ರ : ಆಶ್ಲೇಷಾ, ಯೋಗ : ಸುಕರ್ಮ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 37 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:10 ರಿಂದ ಸಂಜೆ 03:41ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:37 ರಿಂದ 08:08ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:38 ರಿಂದ 11:09 ರ ವರೆಗೆ.

ಸಿಂಹ ರಾಶಿ : ಭವಿಷ್ಯಕ್ಕೆ ಅಗತ್ಯವಿರುವ ಹಣ, ಅಧಿಕಾರಗಳ ಬಗ್ಗೆ ಯೋಚನೆ ಅಧಿಕವಾಗುವುದು. ವೃತ್ತಿಗೆ ಸಂಬಂಧಿಸಿದಂತೆ ಕೆಲವು ಅನುಕೂಲಕರ ಘಟನೆಗಳು ನಿಮ್ಮದಾಗುವುದು. ಬುದ್ಧಿವಂತಿಕೆಯಿಂದ ಇಂದು ಉತ್ತಮ ಯಶಸ್ಸನ್ನು ಸಾಧಿಸಬಹುದು. ಶತ್ರುಗಳಿಗೆ ನೀವು ಸೂಕ್ತವಾದ ಉತ್ತರವನ್ನು ನೀಡುತ್ತೀರಿ. ಇಂದು ಸಂಪತ್ತಿನ ಹೆಚ್ಚಳವಾಗಲಿದೆ ಮತ್ತು ಇತ್ತೀಚಿನ ಹೂಡಿಕೆಯಿಂದ ದೊಡ್ಡ ಲಾಭವನ್ನು ಪಡೆಯಬಹುದು. ಇಂದು ನೀವು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇರಲಿದೆ. ದೂರದ ಬಂಧುಗಳ ಆಗಮನವು ಆಗಲಿದೆ. ನಿಮ್ಮ ಆರ್ಥಿಕ ದೌರ್ಬಲ್ಯವನ್ನು ಆಡುಕೊಳ್ಳಬಹುದು. ಯಾರದ್ದಾದರೂ ಪ್ರಭಾವವನ್ನು ಬಳಸಿಕೊಂಡು ಅಧಿಕಾರವನ್ನು ಪಡೆಯುವಿರಿ. ನಿಮ್ಮ ಮಾತಿನಿಂದ ಯಾವುದನ್ನೂ ಪೂರ್ಣವಾಗಿ ತಿಳಿಸಲಾಗದು.

ಕನ್ಯಾ ರಾಶಿ : ಕೃಷಿಗೆ ಸಂಬಂಧಿಸಿದ ಚಟುವಟಿಕೆಯಲ್ಲಿ ನೀವು ಏನಾದರೂ ಆವಿಷ್ಕಾರ ಮಾಡುವ ಸಂಭವವಿದೆ. ಜನಜಾಗರಣಕ್ಕೆ ನಿಮ್ಮದೇ ಆದ ಕೊಡುಗೆ ಇರುವುದು. ಇಂದು ಅತಿಯಾದ ಆತ್ಮವಿಶ್ವಾಸದಿಂದ ಆಗುವ ತೊಂದರೆಯನ್ನು ನೀವೇ ನೋಡುವಿರಿ. ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಂಡರೆ ಉತ್ತಮ. ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಲಿದೆ. ಕುಟುಂಬ ಜೀವನ ಸಾಮಾನ್ಯವಾಗಿರಲಿದೆ. ಮುಳ್ಳಿನಿಂದ ತೆಗೆಯಬೇಕಾದುದನ್ನು ಚಾಕುವನ್ನು ಇಟ್ಟುಕೊಳ್ಳುವುದು ಸರಿಯಾಗದು. ಮಕ್ಕಳಲ್ಲಿ ಪಕ್ಷಪಾತದಿಂದ ಕಲಹವಾಗುವುದು. ನೌಕರರ ವಿಚಾರದಲ್ಲಿ ನಿಮ್ಮ ವರ್ತನೆಯು ಸರಿಯಾಗಿರಲಿ. ನಿಮ್ಮದೇ ಆದ ಚಿಂತನೆಯಿಂದ ಕಾರ್ಯವನ್ನು ಮಾಡುವಿರಿ. ಬೌದ್ಧಿಕ ಕಸರತ್ತನ್ನು ಪ್ರದರ್ಶಿಸುವಿರಿ. ಒಂದೇ ರೀತಿಯಲ್ಲಿ ಜೀವನ ಸಾಗುವುದು ನಿಮಗೆ ಇಷ್ಟವಾಗದು. ನಿಮ್ಮ ದುರಾಲೋಚನೆಯು ಕೆಲವರಿಗೆ ಇಷ್ಟವಾಗದು.

ತುಲಾ ರಾಶಿ : ಇಂದು ನಿಮ್ಮೊಳಗೆ ಅನಿರೀಕ್ಷಿತ ಉದ್ಯೋಗವು ಕಾಣಿಸಿಕೊಳ್ಳಬಹುದು. ರಾಜಕೀಯ ವ್ಯಕ್ತಿಗಳ ಜೊತೆ ನೀವು ಸಂಧಾನ ಮಾಡಿಕೊಳ್ಳುವಿರಿ. ಇಂದು ಸಂಗಾತಿಯನ್ನು ಹುಡುಕುತ್ತಿದ್ದರೆ ನಿಮಗೆ ನಿರಾಶೆಯಾಗುತ್ತದೆ. ಕೆಲಸದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನೀವು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ನೆರೆಹೊರೆಯರ ಜೊತೆ ಹೊಂದಾಣಿಕೆಯ ಮನಃಸ್ಥಿತಿಯಲ್ಲಿಯೇ ಇರಬೇಕಾಗುವುದು. ಸಮಯಪಾಲನೆಯಿಂದ ನಿಮ್ಮ ಕೆಲಸಗಳು ಸರಿಯಾಗುವುದು. ನೀರಿನಿಂದ ಭೀತಿಯು ಉಂಟಾಗುವುದು. ವಾಹನದ ಮೇಲಿನ ಪ್ರೀತಿ ವ್ಯಾಮೋಹವಾದೀತು. ನಿಮ್ಮ ಮಾತುಗಳಲ್ಲಿ ನಂಬಿಕೆ ಇಲ್ಲವಾದೀತು. ನಿಮ್ಮದಲ್ಲದುದರ ಬಗ್ಗೆ ನಿಮಗೆ ಮೋಹ ಬೇಡ.

ವೃಶ್ಚಿಕ ರಾಶಿ : ನೀವು ನೌಕರರಿಗೆ ಸಿಗಬೇಕಾದ ನ್ಯಾಯದ ಪರವಾಗಿ ಇರುವಿರಿ. ನಿರ್ಮಾಣದ ಕಾರ್ಯದಲ್ಲಿ ತೊಡಗಿದವರಿಗೆ ಅಪಯಶಸ್ಸು ಸಿಗಬಹುದು. ಇಂದು ಸ್ವಲ್ಪ ಸಮಯದವರೆಗೆ, ನಿಮ್ಮ ಸಂಗಾತಿಯ ಜೊತೆ ಸಂಬಂಧ ಸರಿಯಾಗಿ ಆಗುತ್ತಿಲ್ಲ. ಅವರ ಆಕ್ರಮಣಕಾರಿ ಸ್ವಭಾವದಿಂದಾಗಿ ನಿಮ್ಮಿಬ್ಬರ ನಡುವಿನ ಅಂತರವು ಗಣನೀಯವಾಗಿ ಹೆಚ್ಚಾಗಿದೆ,. ಆದರೆ ಇಂದು ಅವರ ಮನಃಸ್ಥಿತಿ ಸ್ವಲ್ಪಮಟ್ಟಿಗೆ ಬದಲಾಗಿದೆ. ಏಕೆಂದರೆ ನಿಮ್ಮ ಪ್ರಯತ್ನದಿಂದಾಗಿ ಹೊಸ ಆದಾಯದ ಮೂಲವಿರುತ್ತದೆ. ಮಹಿಳೆಯ ಕಾರಣದಿಂದ ನಿಮಗೆ ಧನನಷ್ಟವು ಆಗಬಹುದು. ಭೂಮಿಯನ್ನು ನಿಮ್ಮದಾಗಿಸಿಕೊಳ್ಳುವ ಪ್ರಯತ್ನವು ಸಫಲವಾಗುವುದು. ನಿಮಗೆ ಸಪ್ಪೆ ಎನಿಸಿದ ವಿಷಯವನ್ನು ಮುಂದುವರಿಸುವುದಿಲ್ಲ. ಉದ್ಯೋಗದ ಒತ್ತಡದಿಂದ ನಿಮಗೆ ಅನಾರೋಗ್ಯದಿಂದ ಬಳಲುವಿರಿ. ಯಾರದೋ ಕಾರಣಕ್ಕೆ ನೀವು ಸಿಟ್ಟಗುವುದು ಬೇಡ. ಕಲ್ಪನಾ ಜಗತ್ತಿನಿಂದ ಹೊರಬನ್ನಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಗಿಲ್ಲಿಯನ್ನು ನೆಗೆಟಿವ್ ಆಗಿ ತೋರಿಸಲು ಪಿಆರ್ ಕೆಲಸ ಮಾಡುತ್ತಿದೆ’; ವಿನಯ್
‘ಗಿಲ್ಲಿಯನ್ನು ನೆಗೆಟಿವ್ ಆಗಿ ತೋರಿಸಲು ಪಿಆರ್ ಕೆಲಸ ಮಾಡುತ್ತಿದೆ’; ವಿನಯ್
ಸಂಸತ್ತಿನ ಒಳಗೆ ಸಿಗರೇಟ್ ಸೇದಿದ್ರಾ ಟಿಎಂಸಿ ಸಂಸದ?
ಸಂಸತ್ತಿನ ಒಳಗೆ ಸಿಗರೇಟ್ ಸೇದಿದ್ರಾ ಟಿಎಂಸಿ ಸಂಸದ?
ವಿವಿಯಲ್ಲಿ ಕಲ್ಲು ತೂರಾಟ, ವಿದ್ಯಾರ್ಥಿಗಳ ಮೇಲೆ ಕಾರು ಹತ್ತಿಸಲು ಯತ್ನ
ವಿವಿಯಲ್ಲಿ ಕಲ್ಲು ತೂರಾಟ, ವಿದ್ಯಾರ್ಥಿಗಳ ಮೇಲೆ ಕಾರು ಹತ್ತಿಸಲು ಯತ್ನ
ಡ್ರೈವರ್ ಇಲ್ಲ, ಇಳಿಜಾರಿನಲ್ಲಿ ಇದ್ದಕ್ಕಿದ್ದಂತೆ ಹಿಂದೆ ಹೋದ ವಾಹನ
ಡ್ರೈವರ್ ಇಲ್ಲ, ಇಳಿಜಾರಿನಲ್ಲಿ ಇದ್ದಕ್ಕಿದ್ದಂತೆ ಹಿಂದೆ ಹೋದ ವಾಹನ
ಈ ರಾಶಿಯವರು ಇಂದು ಭೂ ಖರೀದಿ ಮಾಡಬಹುದು
ಈ ರಾಶಿಯವರು ಇಂದು ಭೂ ಖರೀದಿ ಮಾಡಬಹುದು
ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
ಮಸ್ಕತ್​​ನಲ್ಲಿ ಭಾರತೀಯರಿಂದ ಪ್ರಧಾನಿ ಮೋದಿಗೆ ಯಕ್ಷಗಾನ, ನೃತ್ಯದ ಸ್ವಾಗತ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ಒಮನ್​ಗೆ ತೆರಳಿದ ಪ್ರಧಾನಿ ಮೋದಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು