Astrology: ಮಾಡಲು ಹೊರಟ ಕೆಲಸವು ಅರ್ಧಕ್ಕೆ ನಿಲ್ಲಬಹುದು, ಇತರರ ಮಾತನ್ನು ನಂಬುವುದಕ್ಕೂ ಮುನ್ನ ಯೋಚಿಸಿ

ರಾಶಿ ಭವಿಷ್ಯ ಶುಕ್ರವಾರ(ಆ. 30): ಇಂದು ನಿಮಗೆ ಶ್ರೇಷ್ಠವ್ಯಕ್ತಿಗಳ ಸಹವಾಸ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಇಂದು ಬಂಧುಗಳು ನಿಮ್ಮ ಮನೆಯಲ್ಲಿ‌ ಇರುವರು. ದುರಭ್ಯಾಸದಿಂದ ದೂರವಿರುವುದು ಉತ್ತಮ. ನಿಮಗೆ ಇಷ್ಟವಾಗದ ಸಂಗತಿಗಳೇ ಮತ್ತೆ ಮತ್ತೆ ಕೇಳಿಬರಬಹುದು. ಹಾಗಾದರೆ ಆಗಸ್ಟ್​ 30ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಮಾಡಲು ಹೊರಟ ಕೆಲಸವು ಅರ್ಧಕ್ಕೆ ನಿಲ್ಲಬಹುದು, ಇತರರ ಮಾತನ್ನು ನಂಬುವುದಕ್ಕೂ ಮುನ್ನ ಯೋಚಿಸಿ
ಮಾಡಲು ಹೊರಟ ಕೆಲಸವು ಅರ್ಧಕ್ಕೆ ನಿಲ್ಲಬಹುದು, ಇತರರ ಮಾತನ್ನು ನಂಬುವುದಕ್ಕೂ ಮುನ್ನ ಯೋಚಿಸಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Aug 30, 2024 | 12:20 AM

ಜ್ಯೋತಿಷ್ಯದಿಂದ ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ರಾಶಿಗಳನ್ನು ಹೊಂದಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ವ್ಯತಿಪಾತ್, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:44 ಗಂಟೆ, ರಾಹು ಕಾಲ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:33, ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ ಸಂಜೆ 05:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:54 ರಿಂದ 09:27ರ ವರೆಗೆ.

ಧನು ರಾಶಿ: ಇಂದು ನೀವು ಮನೆಯನ್ನು ಸುಂದರವಾಗಿಡಲು ತೊಡಗುವಿರಿ. ವ್ಯವಹಾರದಲ್ಲಿ ನಿಮಗೆ ಇಂದು ನಿಮಗೆ ನಿಂದನೆ ಸಿಗಬಹುದು. ಇಂದು ನಿಮಗೆ ಶ್ರೇಷ್ಠವ್ಯಕ್ತಿಗಳ ಸಹವಾಸ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಇಂದು ಬಂಧುಗಳು ನಿಮ್ಮ ಮನೆಯಲ್ಲಿ‌ ಇರುವರು. ದುರಭ್ಯಾಸದಿಂದ ದೂರವಿರುವುದು ಉತ್ತಮ. ನಿಮಗೆ ಇಷ್ಟವಾಗದ ಸಂಗತಿಗಳೇ ಮತ್ತೆ ಮತ್ತೆ ಕೇಳಿಬರಬಹುದು. ನಿಮ್ಮ ಚಟುವಟಿಕೆಗಳನ್ನು ಬೇರೆಯವರು ಗಮನಿಸುವರು. ಉದ್ಯೋಗವನ್ನು ಬದಲಾಯಿಸಲು ಆಲೋಚಿಸುವಿರಿ. ಬಿಡುವಿನ ಸಮಯವನ್ನು ಸದುಪಯೋಗ ಮಾಡಿಕೊಳ್ಳುವುದು ಉತ್ತಮ. ಉಪಕಾರದ ಸ್ಮರಣೆಯು ನಿಮ್ಮಲ್ಲಿ ಇರದು. ಚಂಚಲವಾದ ಮನಸ್ಸನ್ನು ಒಮ್ಮೆಲೇ ಪಕ್ವಗೊಳ್ಳದು. ನಿಮ್ಮ ವಿದ್ಯೆಯನ್ನು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳುವಿರಿ. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಬಹುದು. ಸಮಾಧಾನದಿಂದ ಆಲೋಚಿಸಲು ನಿಮಗೆ ಬಾರದು. ಮಾತನಾಡುವಾಗ ಜಾಣತನದ ಅವಶ್ಯಕತೆ ಇರುವುದು.

ಮಕರ ರಾಶಿ: ಇಂದು ನೀವು ಮಾನಸಿಕವಾಗಿ ಹಿಂಸೆಯನ್ನು ಅನುಭವಿಸಲು ಕಷ್ಟವಾಗುವುದು. ಯಾವುದೇ ಕಾರಣಕ್ಕೆ ಹತಾಶರಾಗಂತೆ ನೋಡಿಕೊಳ್ಳುವುದು ನಿಮಗೆ ಬಿಟ್ಟಿದು.‌ ಒತ್ತಡವನ್ನು ಪರಿಹರಿಸಿಕೊಳ್ಳಲು ದೂರದ ಊರಿಗೆ ಹೋಗುವಿರಿ. ವಿವಾಹಕ್ಕೆ ಬೇಕಾದ ತಯಾರಿಯಲ್ಲಿ ನೀವಿರುವಿರಿ. ಸಂಗಾತಿಯ‌ ಜೊತೆ ಪ್ರಯಾಣವನ್ನು ಇಚ್ಛಿಸುವಿರಿ. ಸರ್ಕಾರಿ ಕೆಲಸಕ್ಕಾಗಿ ನೀವು ಅರ್ಜಿಯನ್ನು ಸಲ್ಲಿಸುವಿರಿ. ಭೂಮಿಯ ವ್ಯವಹಾರದಿಂದ ಸ್ವಲ್ಪ ಲಾಭವನ್ನು ಗಳಿಸುವಿರಿ. ಕೃಷಿಯಲ್ಲಿ ಪ್ರಯೋಗಗಳನ್ನು ಹೆಚ್ಚು ಮಾಡುವಿರಿ. ನಿಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸುವ ಸಾಧ್ಯತೆ ಇದೆ. ಹಳೆಯ ದ್ವೇಷವನ್ನು ಮುಂದುವರಿಸುವುದು ಬೇಡ. ಸಾಮರಸ್ಯದಿಂದ ಬದುಕುವುದನ್ನು ಇಷ್ಟಪರುವಿರಿ. ಸಣ್ಣ ವಿಚಾರಗಳ ಬಗ್ಗೆ ಗಮನವಿರದು. ಅದೇ ದೊಡ್ಡದಾಗಬಹುದು. ತಂದೆಯ ಪ್ರೀತಿ ಸಿಗಲಿದೆ. ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಬರುವುದು. ಕೊನೆಗೆ ಅನುಭವಿಸುವವರು ತಾವೇ ಆಗಿರುತ್ತೀರಿ. ಆಸ್ತಿಯ ಖರೀದಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸರಿಯಾಗಿ ಪಡೆಯಿರಿ.

ಕುಂಭ ರಾಶಿ: ಇಂದು ನೀವು ಎಲ್ಲವನ್ನೂ ಶಕ್ತಿಮೀರಿ ಕಾರ್ಯದಲ್ಲಿ ಪ್ರಯತ್ನಶೀಲರಾಗುವಿರಿ. ಕಾರಣಾಂತರಗಳಿಂದ ನಿಮ್ಮ ಉದ್ಯೋಗದಲ್ಲಿ ತೊಂದರೆಯಾಗಲಿದೆ. ಹೊಸಬರನ್ನು ಪರಿಚಯಿಸಿಕೊಳ್ಳುವ ಹಂಬಲವು ಇರುವುದು. ನಿಮ್ಮ ಮೇಲೆ‌ ಕೆಟ್ಟ ದೃಷ್ಟಿಯು ಬೀಳುವ ಸಾಧ್ಯತೆ ಇದೆ. ಮನೆಯ ಕಾರ್ಯದಲ್ಲಿ ನೀವು ಭಾಗಿಯಾಗುವಿರಿ. ನಿಮ್ಮ ಮಾತನ್ನು ಕೇಳದೇ ಇರುವುದು ನಿಮಗೆ ಬೇಸರವಾಗುವುದು. ಆಸ್ತಿಯ ವಿಚಾರವಾಗಿ ಮನೆಯಲ್ಲಿ ಕಲಹವಾಗಬಹುದು. ಆಲಸ್ಯದಿಂದ ಚಟುವಟಿಕೆಯತ್ತ ಮುಖ ಮಾಡುವಿರಿ. ನಿಮ್ಮ ಜೊತೆಗಾರನ್ನು ಗುರುತಿಸಿಕೊಳ್ಳುವುದು ಕಷ್ಟ. ಮನಸ್ಸಿನ‌ ಏಕಾಗ್ರತೆ ಕೆಡಬಹುದು. ಸರಳವಾದುದನ್ನು ಕ್ಲಿಷ್ಟ ಮಾಡಿಕೊಳ್ಳುವಿರಿ. ಅಸಮತೋಲನ ಸ್ಥಿತಿಯಿಂದ ನಿಮಗೆ ಗ್ರಹಿಸುವುದು ಕಷ್ಟವಾದೀತು. ಹಣಕಾಸಿನಲ್ಲಿ ಸುಧಾರಣೆಯನ್ನು ಮಾಡಿಕೊಳ್ಳಲು ಮಾರ್ಗಗಳನ್ನು ಹುಡುಕುವಿರಿ. ಮನೆಯ ಸದ್ಯರ ಜೊತೆ ಹೆಚ್ಚು ಸಮಯ ಕಾಲಹರಣ ಮಾಡುವಿರಿ.

ಮೀನ ರಾಶಿ: ಇಂದು ಮಹಿಳೆಯರಿಗೆ ಬಿಡುವಿಲ್ಲದ ಕಾರ್ಯವು ಇರಲಿದೆ. ಇಂದು ನೀವು ಇನ್ನೊಬ್ಬರ ಬಗ್ಗೆ ಸಲ್ಲದ ಮಾತುಗಳನ್ನು ಆಡುವಿರಿ. ಸಮಯಕ್ಕೆ ಸಿಕ್ಕ ಸ್ಫೂರ್ತಿಯು ನಿಮ್ಮ‌ ಇಂದಿನ ಕೆಲಸವನ್ನು ಚೆನ್ನಾಗಿಸುವುದು. ಸ್ವಂತ ವಾಹನದ ಬಗ್ಗೆ ನಿಮಗೆ ಮೋಹವು ಹೆಚ್ಚಾಗುವುದು. ಯಾರದೋ ಮಾತಿನ ಆಧಾರದ ಮೇಲೆ ನಿಮಗೆ ನಂಬಿಕೆ ಬಾರದು. ಮಾಡಲು ಹೊರಟ ಕೆಲಸವು ಅರ್ಧಕ್ಕೆ ನಿಲ್ಲಬಹುದು. ನೀವು ಇಂದು ನಿಮ್ಮ ಕೆಲಸವನ್ನು ಸುಲಭ ಮಾಡಿಕೊಳ್ಳಲು ಬಯಸುವಿರಿ. ಮಕ್ಕಳಿಂದ ನಿಮಗೆ ಧನ ಸಹಾಯವು ಆಗುವುದು. ಮಾತನ್ನು ಹದವನ್ನು ಅರಿತು ಮಾತನಾಡಿ. ಹೆಚ್ಚು ಮಾತನಾಡಿ ಇನ್ನೊಬ್ಬರಿಗೆ ನೋವನ್ನು ಕೊಡುವುದು ಬೇಡ. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಬಯಸುವಿರಿ. ಬೇಡವಾದ ಸಂಗತಿಗಳನ್ನು ಯಾರಾದರೂ ನಿಮ್ಮ ತಲೆಗೆ ಹಾಕುವರು. ಮನೋಗತವನ್ನು ಹೇಳಿಕೊಳ್ಳಿ. ಸೋತರೂ ಗೆದ್ದವರ ಜೊತೆ ನಿಮ್ಮ ಪ್ರತಿಷ್ಠೆಯನ್ನು ತೋರಿಸುವಿರಿ.

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು