ದಿನ ಭವಿಷ್ಯ: ಇಂದು ಈ ರಾಶಿಯವರು ಭಾರವನ್ನು ಕಳೆದಿಕೊಳ್ಳುವಿರಿ
Daily Horoscope 11 February: ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಕೃಷ್ಣ ಪಕ್ಷದ ನವಮೀ ತಿಥಿ ಬುಧವಾರ ಲಾಭ, ಅನುಮಾನ, ಪ್ರಯಾಣ,ಅವಿಶ್ವಾಸ ಪ್ರದರ್ಶನ, ಏಕಾಂತ, ಅಧ್ಯಾತ್ಮಿಕ ಚಿಂತನೆ ಇವೆಲ್ಲ ಇಂದಿನ ವಿಶೇಷ.

ಮೇಷ ರಾಶಿ :
ಆತುರದಲ್ಲಿ ಏನನ್ನಾದರೂ ಮಾಡಿಕೊಂಡೀರ. ನಿಮ್ಮ ಮಾತಿನಲ್ಲಿ ತಾರ್ಕಿಕತೆ ಹೆಚ್ಚು ಕಾಣುವುದು. ಅಮೂಲ್ಯ ವಸ್ತುಗಳ ಖರೀದಿಯಿಂದ ಹಣದ ಉಳಿತಾಯ. ಸಮಯೋಚಿತ ಮಾತುಗಳಿಂದ ಪ್ರಶಂಸೆಯು ಸಿಗಬಹುದು. ವಿವಾಹಯೋಗವು ಬಂದರೂ ಅದನ್ನು ನೀವು ಸ್ವೀಕರಿಸುವ ರೀತಿ ಭಿನ್ನವಾಗಿ ಇರಲಿದೆ. ಇಂದಿನ ನಿಮ್ಮ ಸಮಯದ ವ್ಯತ್ಯಾಸದಿಂದ ಕೆಲವು ಕಾರ್ಯಗಳು ಬದಲಾವಣೆ ಆಗಬಹುದು. ಸಂಗಾತಿಗೆ ಸುಳ್ಳು ಹೇಳಿ ನಿಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಪಕ್ಷಪಾತದಿಂದ ನಿಮಗೇ ತೊಂದರೆ ಎದುರಾದೀತು.
ವೃಷಭ ರಾಶಿ:
ಇಂದು ಸಮಯದ ಹೊಂದಾಣಿಕೆಯಲ್ಲಿ ನೀವು ಸೋಲಬಹುದು. ಸಭ್ಯರಂತೆ ಇಂದು ನೀವು ತೋರುವಿರಿ. ನೀವು ಮೊದಲೇ ನಿರ್ಧರಿಸಿರುವ ಕೆಲಸಗಳನ್ನು ಪೂರ್ಣ ಮಾಡಲು ಸಮಯವು ಸಿಗದೇ ಹೋದೀತು. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇದೆ. ಯಾರಾದರೂ ಬಂದು ನಿಮ್ಮ ಬಳಿ ಕೆಲಸ ಮಾಡಿಕೊಡಲು ಕೇಳಬಹುದು. ಗೊತ್ತಿರುವ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳಿ.
ಮಿಥುನ ರಾಶಿ:
ನಿಮ್ಮ ಏಕಾಗ್ರತೆಯ ಕಾರ್ಯಕ್ಕೆ ಭಂಗವಾಗುವ ಸಾಧ್ಯತೆ ಇದೆ. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು. ಜವಾಬ್ದಾರಿಯಿಂದ ತಲೆ ಭಾರವಾಗುವುದು. ಅನವಶ್ಯಕ ಹರಟೆಯಿಂದ ಅಧಿಕಾರಿಗಳು ನಿಮ್ಮ ಮೇಲೆ ಸಿಟ್ಟಾಗಬಹುದು. ಬೆನ್ನು ನೋವಿನ ಸಮಸ್ಯೆಗೆ ಸೂಕ್ತ ಪರಿಹಾರವು ಸಿಕ್ಕೀತು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಎಲ್ಲರ ಬಳಿ ಹೇಳಿಕೊಳ್ಳುವಿರಿ. ಮನಸ್ಸನ್ನು ಖಾಲಿ ಬಿಡದೇ ಏನಾದರೊಂದು ಕಾರ್ಯದಲ್ಲಿ ತೊಡಗಿಸಿ.
ಕರ್ಕಾಟಕ ರಾಶಿ:
ಭವಿಷ್ಯದ ಬಗ್ಗೆ ಅತಿಯಾದ ಆಲೋಚನೆ ಇರಲಿದೆ. ಸಹೋದರನಿಂದ ನಿಮಗೆ ಸಮಸ್ಯೆ ಆಗಬಹುದು. ಹಠದ ಸ್ವಭಾವದಿಂದ ಸಂಗಾತಿಗೆ ಕಿರಿಕಿರಿ ಎನಿಸಬಹುದು. ಮನಸ್ತಾಪವನ್ನು ಮನಸ್ಸಿನೊಳಗೇ ಇಟ್ಟುಕೊಳ್ಳುವಿರಿ. ಸಮಯಪ್ರಜ್ಞೆಯು ಇಂದು ಕೆಲಸ ಮಾಡದು. ಉತ್ತಮ ಅವಕಾಶಗಳಿಂದಲೂ ನೀವು ವಂಚಿತರಾಗುವಿರಿ. ಕುಟುಂಬದ ನಡವಳಿಕೆಯು ನಿಮಗೆ ಅರ್ಥವಾಗದೇ ಹೋದೀತು. ದುರಭ್ಯಾಸದ ಕಡೆ ನಿಮ್ಮ ಗಮನವು ಇರಲಿದೆ.
ಸಿಂಹ ರಾಶಿ:
ಜಾಣ್ಮೆಯಿಂದ ಇಂದು ನೀವು ಪ್ರಶಂಸೆಯನ್ನು ಪಡೆಯುವಿರಿ. ವೃತ್ತಿಯಲ್ಲಿ ಕೆಲವು ಸಂತೋಷದ ಕ್ಷಣಗಳು ನಿಮ್ಮದಾಗಲಿವೆ. ಮನೋವಿಕಾರವನ್ನು ಎಲ್ಲರೆದುರೂ ತೋರಿಸುವುದು ಬೇಡ. ನಿಮ್ಮದು ಅಂದುಕೊಂಡವು ವಸ್ತುವು ದೂರವಾಗಬಹುದು. ಪರರ ದುಃಖಕ್ಕೆ ಸ್ಪಂದನೆ ಇರಲಿ. ಆಪ್ತರ ಮೇಲೆ ಬೇಸರಪಟ್ಟುಕೊಳ್ಳುವ ಸಾಧ್ಯತೆ ಇದೆ. ಉತ್ಸಾಹದಿಂದ ನೀವು ಇಂದಿನ ಕಾರ್ಯವನ್ನು ಮಾಡುತ್ತಿದ್ದರೂ ದಿನದ ಕೊನೆಗೆ ಸಲ್ಲದ ಮಾತುಗಳನ್ನು ನೀವು ಕೇಳಬೇಕಾದೀತು.
ಕನ್ಯಾ ರಾಶಿ:
ಅಧಿಕಾರವರ್ಗದಿಂದ ಶೋಷಣೆಗೆ ಒಳಗಾಗುವಿರಿ. ನಿಮ್ಮಿಂದ ಉಪಕಾರ ಪಡೆದವರು ನಿಮ್ಮ ವಿರುದ್ಧ ಬೀಳಬಹುದು. ಸಿಕ್ಕ ಸಣ್ಣ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿ. ಇಷ್ಟ ದೇವರನ್ನು ಪ್ರಾರ್ಥಿಸಿ ನೀವು ಮುಂದಿನ ಕಾರ್ಯಗಳಿಗೆ ತೆರಳುವಿರಿ. ನಿಮ್ಮ ಕೆಲಸದಲ್ಲಿ ಇಂದು ಅಡತಡೆಗಳು ಬರಲಿದೆ. ಅದನ್ನು ಗಂಭಿರವಾಗಿ ತೆಗೆದುಕೊಳ್ಳುವುದು ಬೇಡ. ಬದುಕಿಗೆ ತಿರುವು ಬರುವ ಸಾಧ್ಯತೆ ಇದೆ. ಸಣ್ಣ ಉಳಿತಾಯಕ್ಕೆ ಇಂದು ಬೆಲೆಯು ಬಂದಂತಾಗುವುದು. ಜೀವನದ ಲಕ್ಷ್ಯವು ಬೇರೆ ಕಡೆಗೆ ಇರಲಿದೆ.
ತುಲಾ ರಾಶಿ:
ಗುಟ್ಟನ್ನು ಯಾರೇ ಒತ್ತಾಯ ಮಾಡಿದರೂ ಬಿಟ್ಟುಕೊಡಲಾರಿರಿ. ಇಂದು ನೀವು ಸಂತೋಷ ಆಗದೇಹೋಗಬಹುದು. ನಿಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾದ ಮಾತುಗಳು ಎಲ್ಲ ಕಡೆ ಇರಲಿವೆ. ಇಂದಿನ ಎಲ್ಲ ಕಾರ್ಯದಲ್ಲಿಯೂ ಜಯವನ್ನು ಪಡೆಯುವಿರಿ. ಆರ್ಥಿಕಸ್ಥಿತಿಯು ಸುಧಾರಿಸಿದ್ದು ನಿಮಗೆ ಸ್ವಲ್ಪ ನೆಮ್ಮದಿ ಇರುವುದು. ಯಾರ ಜೊತೆಯೂ ಭೇದಭಾವ ಎಣಿಸುವ ಅವಶ್ಯಕತೆ ಬರದಂತೆ ನೋಡಿ. ನೆಚ್ಚಿನ ತಾಣವು ನಿಮಗೆ ಹೊಸ ಉತ್ಸಾಹವನ್ನು ನೀಡುವುದು.
ವೃಶ್ಚಿಕ ರಾಶಿ:
ಇಂದು ಕಛೇರಿಯನ್ನು ಮಹಿಳೆಯರು ನಿರ್ವಹಿಸಬೇಕಾಗುವುದು. ಮಾಡದ ಕಾರ್ಯಕ್ಕೆ ಅಪವಾದ ಬರುವುದು. ನಿರಂತರ ಕೆಲಸವು ನಿಮಗೆ ಬೇಸರ ತಂದೀತು. ಇಂದು ವೃತ್ತಿಯಲ್ಲಿ ಆತಂಕವು ಬರಬಹುದು. ಪ್ರಾಣಿಗಳಿಂದ ಭೀತರಾಗುವ ಸಾಧ್ಯತೆ ಇದೆ. ನಿಮ್ಮ ಇಷ್ಟದವರ ಭೇಟಿಯಾಗುವಿರಿ. ನಿಮ್ಮ ಸಾಮರ್ಥ್ಯಕ್ಕೆ ಯೋಗ್ಯವಾದ ಕೆಲಸವನ್ನು ಮಾಡಿ. ಯಾರ ಬಗ್ಗೆಯೂ ಅನಗತ್ಯ ಟೀಕೆಗಳು ಬೇಡ. ನೌಕರರ ವಿಚಾರದಲ್ಲಿ ಅಸಮಾಧಾನವಿರಲಿದೆ. ಆಧ್ಯಾತ್ಮದ ಕಡೆ ಮನಸ್ಸು ಇರಬಹುದು.
ಧನು ರಾಶಿ:
ಸಹೋದ್ಯೋಗಿಗಳು ನಿಮ್ಮ ಬಗ್ಗೆ ನಕಾರಾತ್ಮಕ ಅಂಶಗಳು ಅಧಿಕಾರಿಗಳಿಗೆ ಹೇಳುವರು. ಹೇಳಿದ್ದು ಮತ್ತು ಮಾಡಿದ್ದಕ್ಕೂ ವ್ಯತ್ಯಾಸವಿರುವುದು. ಯಾರಾದರೂ ನಿಮ್ಮನ್ನು ಛೇಡಿಸಬಹುದು. ವಾಹನ ಖರೀದಿಗೆ ಗೊಂದಲದ ಮನಸ್ಸು ಬೇಡ. ವೃತ್ತಿಯನ್ನೇ ಬದಲಾಯಿಸುವ ಆಸೆ ಬರಬಹುದು. ಸ್ನೇಹಿತರಿಗೆ ನಿಮ್ಮದಾದ ಕೆಲವು ಆಯ್ಕೆಗಳನ್ನು ಹೇಳಿ. ಹೂಡಿಕೆಯ ವಿಚಾರವನ್ನು ಸ್ನೇಹಿತರ ಮೂಲಕ ಗೊತ್ತುಮಾಡಿಕೊಳ್ಳುವಿರಿ. ಸಿಟ್ಟಿನಿಂದ ಕೂಗಾಡುವಿರಿ.
ಮಕರ ರಾಶಿ:
ಪುಣ್ಯಕ್ಷೇತ್ರದ ದರ್ಶನದಿಂದ ಮನಸ್ಸು ಪಾವನವಾಗಲಿದೆ. ಹೊಸ ಉದ್ಯೋಗಕ್ಕೆ ನಿಮ್ಮ ಮನಸ್ಸು ತೆರದುಕೊಳ್ಳುವುದು. ಹಿತಶತ್ರುಗಳು ಲಾಭವನ್ನು ತಪ್ಪಿಸುವರು. ಸತ್ಯದ ಮಾತಿನಿಂದ ನಿಮಗೇ ಸಂಕಷ್ಟವು ಬರಬಹುದು. ಸಮಾಜದಿಂದ ಸಿಗುವ ಗೌರವವೂ ನಿಮಗೆ ಬಾರದು. ಬಂಧುಗಳು ನಿಮ್ಮ ಸಹಾಯವನ್ನು ಕೇಳಬಹುದು. ಇಂದು ನಿಮ್ಮಿಂದ ಕುಟುಂಬವು ಸಂತೋಷವಾಗಿರುವುದು. ನಿದ್ರೆಯಲ್ಲಿ ಕೆಟ್ಟ ಕನಸುಗಳನ್ನು ಕಂಡು ಚಿಂತೆಗೊಳ್ಳುವಿರಿ. ಉತ್ತಮ ಕಾಲದ ನಿರೀಕ್ಷೆಯಲ್ಲಿ ನೀವು ಇರುವಿರಿ.
ಕುಂಭ ರಾಶಿ:
ಅಪರಿವಿತರು ನಿಮ್ಮ ಜೊತೆ ಪರಿಚಿತರಂತೆ ಮಾತನಾಡಬಹುದು. ಸಂಗಾತಿಯ ಮನೋಭಾವವನ್ನು ಅರಿತುಕೊಳ್ಳಲು ಕಷ್ಟವಾದೀತು. ದೂರದ ಸ್ಥಳಕ್ಕೆ ಪ್ರವಾಸ ಹೋಗುವ ಸಂದರ್ಭವು ಬರಬಹುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಕೇಳದೇ ಯಾರಿಗೂ ಉಪದೇಶವನ್ನು ನೀಡುವುದು ಬೇಡ. ನೀವು ಪರಿಚಿತರಿಂದ ಸಹಾಯವನ್ನು ಅಪೇಕ್ಷಿಸುವಿರಿ. ಕಛೇರಿಯಲ್ಲಿ ಎಲ್ಲರ ಜೊತೆ ಸೌಹಾರ್ದದಿಂದ ವರ್ತಿಸಿ. ಪ್ರೀತಿಯ ವಿಚಾರದಲ್ಲಿ ಇಂದು ಬೇಸರವಾಗಬಹುದು. ನಿಮಗೆ ಅಗೌರವ ತೋರಬಹುದು.
ಮೀನ ರಾಶಿ:
ನಿಮ್ಮದಾದ ಸ್ವತಂತ್ರ ಆದಾಯವನ್ನು ಇಟ್ಟುಕೊಳ್ಳಿ. ಖಾಸಗಿ ವೃತ್ತಿಯಲ್ಲಿ ಆದಾಯವನ್ನು ಹೆಚ್ಚಿಸಿಕೊಳ್ಳಲು ಮಾತನಾಡುವಿರಿ. ಶತ್ರುಗಳಿಗೆ ನೀವೇ ಕೇಂದ್ರಬಿಂದು ಆಗಿರಬಹುದು. ನಿಮ್ಮ ಯೋಜನೆಗೆ ತಗುಲುವ ಲೆಕ್ಕಾಚಾರವು ತಪ್ಪಾಗಬಹುದು. ಬಂಧುಗಳ ಜೊತೆ ವಿವಾದವು ಏರ್ಪಡಲಿದ್ದು ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯವೂ ಬರಬಹುದು. ನಿಮ್ಮ ವ್ಯಾಪಾರದಿಂದ ಅಧಿಕ ಲಾಭವು ಸಿಗುವುದು. ಅಧಿಕಾರಿ ವರ್ಗದವರ ಕಣ್ಣು ನಿಮ್ಮ ಮೇಲೆ ಇರಲಿದೆ. ಸಣ್ಣ ಅಹಂಕಾರವು ನಿಮ್ಮನ್ನು ಕೆಡಿಸಬಹುದು.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಧನಿಷ್ಠಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ನವಮೀ, ನಿತ್ಯನಕ್ಷತ್ರ : ಮೂಲಾ, ಯೋಗ : ವೃದ್ಧಿ, ಕರಣ : ಕೌಲವ, ಸೂರ್ಯೋದಯ – 06 – 50 am, ಸೂರ್ಯಾಸ್ತ – 06 – 26 pm, ಇಂದಿನ ಶುಭಾಶುಭ ಕಾಲ : ರಾಹು 12:39 – 14:06, ಯಮಗಂಡ ಕಾಲ 08:18 – 09:45, ಗುಳಿಕ ಕಾಲ 11:12 – 12:39
-ಲೋಹಿತ ಹೆಬ್ಬಾರ್ – 8762924271 (what’s app only)
