ವೇದಿಕೆ ಮೇಲೆ ಸಮಂತಾಗೆ ‘ಐ ಲವ್ ಯೂ’ ಹೇಳಲು ನಿರಾಕರಿಸಿದ ಪತಿ ರಾಜ್ ನಿಡಿಮೋರು
2023ರ ‘ಶಾಕುಂತಲಂ’ ಮತ್ತು ‘ಖುಷಿ’ ಸಿನಿಮಾಗಳ ಬಳಿಕ ಸಮಂತಾ ನಟಿಸಿದ ‘ಮಾ ಇಂಟಿ ಬಂಗಾರಂ’ ಈಗ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಸಮಂತಾ ಪತಿ ರಾಜ್ ನಿಡಿಮೋರು ಕೂಡ ಭಾಗವಹಿಸಿದ್ದರು. ಈ ವೇದಿಕೆಯಲ್ಲಿ ಅವರು ಸಮಂತಾಗೆ ‘ಐ ಲವ್ ಯೂ’ ಎನ್ನಲು ಹಿಂದೇಟು ಹಾಕಿದರು.

ದೇಶಾದ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗ ಹೊಂದಿರುವ ನಟಿ ಸಮಂತಾ ರುತ್ ಪ್ರಭು (Samantha) ಸದ್ಯ ತಮ್ಮ ಮುಂಬರುವ ಚಿತ್ರ ‘ಮಾ ಇಂಟಿ ಬಂಗಾರಂ’ (Maa Inti Bangaram) ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಈ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಸಮಂತಾ ಮತ್ತು ಅವರ ಪತಿ, ಖ್ಯಾತ ನಿರ್ದೇಶಕ ರಾಜ್ ನಿಡಿಮೋರು (Raj Nidimoru) ಒಟ್ಟಿಗೆ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಈ ವೇಳೆ ವೇದಿಕೆ ಮೇಲೆ ನಡೆದ ಒಂದು ಮಜಾವಾದ ಪ್ರಸಂಗದ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಕಾರ್ಯಕ್ರಮದ ನಿರೂಪಕಿ ಸುಮಾ ಅವರು ವೇದಿಕೆ ಮೇಲಿದ್ದ ರಾಜ್ ನಿಡಿಮೋರು ಅವರಿಗೆ, ‘ಸಮಂತಾ ಅವರಿಗೆ ಸಾರ್ವಜನಿಕವಾಗಿ ಐ ಲವ್ ಯೂ ಅಂತ ಹೇಳಿ’ ಎಂದು ಕೇಳಿಕೊಂಡರು. ಇದಕ್ಕೆ ಅಲ್ಲಿದ್ದ ಅಭಿಮಾನಿಗಳು ಕೂಡ ಜೋರಾಗಿ ಕಿರುಚುತ್ತಾ ಬೆಂಬಲ ನೀಡಿದರು. ಆದರೆ ರಾಜ್ ನಿಡಿಮೋರು ವೇದಿಕೆ ಮೇಲೆ ಪ್ರೀತಿ ವ್ಯಕ್ತಪಡಿಸಲು ನಿರಾಕರಿಸಿದರು.
ಅದಕ್ಕೆ ಅವರು ನೀಡಿದ ಕಾರಣ ಕೇಳಿ ಅಲ್ಲಿದ್ದ ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು. ‘ಈಗಾಗಲೇ ವೇದಿಕೆ ಮೇಲಿಂದ ಮತ್ತು ಆಡಿಯನ್ಸ್ ಕಡೆಯಿಂದ ಸಾಕಷ್ಟು ಜನರು ಸಮಂತಾಗೆ ಐ ಲವ್ ಯೂ ಅಂತ ಹೇಳುತ್ತಿದ್ದಾರೆ. ಹೀಗಾಗಿ ನಾನು ಹೊಸದಾಗಿ ಹೇಳುವುದರಲ್ಲಿ ಏನೂ ವಿಶೇಷತೆ ಇಲ್ಲ’ ಎಂದು ರಾಜ್ ತಮಾಷೆಯಾಗಿ ಉತ್ತರಿಸಿದರು. ಅಲ್ಲದೇ ಅವರು ಸಿನಿಮಾ ಬಗ್ಗೆ ಮಾತ್ರ ಮಾತನಾಡಿದರು.
ವೇದಿಕೆ ಮೇಲೆ ಪ್ರೀತಿ ವ್ಯಕ್ತಪಡಿಸಲು ಹಿಂಜರಿದರೂ, ರಾಜ್ ನಿಡಿಮೋರು ಅವರು ಸಮಂತಾ ಅವರ ನಟನಾ ಕೌಶಲ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ‘ಈ ಸಿನಿಮಾದಲ್ಲಿ ಕೆಲಸ ಮಾಡುವಾಗ ಸಮಂತಾ ಅವರ ನಟನೆಯ ಆಳ ಮತ್ತು ಸೂಕ್ಷ್ಮತೆಗಳು ನನಗೆ ಇನ್ನಷ್ಟು ಹತ್ತಿರದಿಂದ ಅರ್ಥವಾದವು. ಎಷ್ಟೋ ಕಷ್ಟದ ಎಮೋಷನಲ್ ದೃಶ್ಯಗಳನ್ನು ಸಮಂತಾ ಮೊದಲ ಟೇಕ್‌ನಲ್ಲೇ ಅದ್ಭುತವಾಗಿ ನಟಿಸಿ ಇಡೀ ಚಿತ್ರತಂಡಕ್ಕೆ ಆಶ್ಚರ್ಯ ಮೂಡಿಸುತ್ತಿದ್ದರು. ಅವರು ಪ್ರತಿ ಸಿನಿಮಾದಲ್ಲೂ ಹೊಸ ಆಯಾಮವನ್ನು ತೋರಿಸುವ ಅದ್ಭುತ ನಟಿ’ ಎಂದರು.
ಇದನ್ನೂ ಓದಿ: ರಿಲೀಸ್ಗೂ ಮೊದಲೇ ಸೇಫ್ ಆದ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’
‘ಮಾ ಇಂಟಿ ಬಂಗಾರಂ’ ಸಿನಿಮಾವನ್ನು ಸಮಂತಾ ತಮ್ಮದೇ ‘ಟ್ರಾ ಲಾಲಾ ಮೂವಿಂಗ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ‘ನಟಿಯಾಗಿ ನಟಿಸುವುದು ಸುಲಭ, ಆದರೆ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ಮಾಪಕಿಯಾಗುತ್ತಿರುವುದರಿಂದ ಸಿನಿಮಾ ಬಿಡುಗಡೆಗೂ ಮುನ್ನ ಕೊಂಚ ಒತ್ತಡ ಎದುರಾಗಿದೆ’ ಎಂದು ಹಂಚಿಕೊಂಡರು. ಜೊತೆಗೆ ಸಿನಿಮಾದ ಯಶಸ್ಸಿಗೆ ತೆರೆಮರೆಯಲ್ಲಿ ಶ್ರಮಿಸಿದ ಪ್ರತಿಯೊಬ್ಬ ತಂತ್ರಜ್ಞರಿಗೂ ಅವರು ಧನ್ಯವಾದ ಅರ್ಪಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




