AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರ ಜೊತೆ ಹೇಳಿಕೊಳ್ಳಬೇಕಾದುದನ್ನು ಮುಚ್ಚಿಡುವರು

Daily Horoscope, 06 April 2026: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಕೃಷ್ಣ ಪಕ್ಷದ ಪಂಚಮೀ ತಿಥಿಯ ಸೋಮವಾರದಂದು ಸಮೀಪ ಬಂಧುಗಳ ಸಹಕಾರ, ಕಲ್ಪನೆಗೆ ರೂಪ, ತಂದೆಯ ಮೇಲೆ ಮಮಕಾರ, ಎಲ್ಲವೂ ತನ್ನಿಂದ ಎಂಬ ಅಹಂಕಾರ ಇವೆಲ್ಲ ಈ‌ ದಿನದ ಸಮಾಚಾರ.

ದಿನ ಭವಿಷ್ಯ: ಇಂದು ಈ ರಾಶಿಯವರ ಜೊತೆ ಹೇಳಿಕೊಳ್ಳಬೇಕಾದುದನ್ನು ಮುಚ್ಚಿಡುವರು
ರಾಶಿ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Apr 06, 2026 | 12:55 AM

Share

ಮೇಷ ರಾಶಿ:

ಕೆಲಸದಲ್ಲಿರುವ ಅಧಿಕಾರಿಗಳಿಗೆ ನಿಮ್ಮ ಸಲಹೆಯನ್ನು ಕೊಡಲು ಹೋಗಬೇಡಿ. ನೀವು ಸುಲಭವಾಗಿ ಜನರ ವಿಶ್ವಾಸವನ್ನು ಗಳಿಸುವಿರಿ. ನಿಮ್ಮ ಪ್ರಗತಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ನೀವು ವಹಿಸಿಕೊಂಡ ಕಾಮಗಾರಿಯ ವೇಗ ಹೆಚ್ಚಳ. ಆದರೆ ಅದರ ಬಗ್ಗೆ ಸಾಕಷ್ಟು ಯೋಚಿಸಿ ಮುಂದುವರಿಯಿರಿ. ಸ್ವಭಾವವು ಬಹಳ ತೀವ್ರವಾಗಿ ಇರಲಿದೆ. ಯಾರ ಮಾತನ್ನೂ ಕೇಳವ ಸಹನೆ ಇರದು.‌ ಪ್ರತಿಸ್ಪರ್ಧಿಗಳಿಗೆ ಸರಿಯಾದ ಸ್ಪರ್ಧೆಯನ್ನು ಕೊಡುವಿರಿ. ನಿಮ್ಮ ನಿರ್ಧಾರಗಳೇ ಅಂತಿಮವಾಗಬೇಕು ಎನ್ನುವ ಮನಃಸ್ಥಿತಿ ಇರುವುದು.

ವೃಷಭ ರಾಶಿ:

ಕಛೇರಿಯಲ್ಲಿ ನಿಮ್ಮ ಕೆಲಸಗಳನ್ನು ಕಂಡು ನಿಮ್ಮನ್ನು ಪ್ರಶಂಸಿಸುವರು‌. ಹೊಸ ಕೆಲಸವನ್ನು ಆರಂಭಿಸುವ ಹುನ್ನಾರ ನಡೆಸುವಿರಿ. ನಿಮ್ಮ ಒತ್ತಡವನ್ನು ಅನ್ಯರ ಮೇಲೆ ಹಾಕುವಿರಿ. ನಿಮ್ಮನ್ನು ಇಷ್ಟಪಟ್ಟವರೊಡನೆ ಸಮಯವನ್ನು ಕಳೆಯಿರಿ. ನಿಮ್ಮ ಕೆಲಸದ ಮೇಲೆ ನೀವು ಸಂಪೂರ್ಣ ಗಮನವಿಲ್ಲದೇ ಯಾವುದೋ ಯೋಚನೆಯಲ್ಲಿ ಎಡವಟ್ಟು ಮಾಡಿಕೊಳ್ಳುವಿರಿ. ನಿಮ್ಮ ಪ್ರತಿಭೆಗೆ ಯೋಗ್ಯವಾದ ಕಾರ್ಯವು ಸಿಗುವುದು. ಭೂಮಿಯ ವ್ಯವಹಾರವನ್ನು ಒಂಟಿಯಾಗಿ ನಿರ್ವಹಿಸುವಿರಿ.

ಮಿಥುನ ರಾಶಿ:

ಒಂದಿಲ್ಲೊಂದು ವಿಷಯಗಳಿಂದ ಸುಖವನ್ನು ಪಡೆಯುವ ನಿಮಗೆ ಮುಂಬರುವ ವಿಷಯಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಸ್ಪಷ್ಟತೆಯನ್ನು ಇಟ್ಟುಕೊಂಡಿರುತ್ತೀರಿ. ಶತ್ರುಗಳಿಂದ ಎಚ್ಚರವಾಗಿರಿ. ಇಂದು ನಿಮ್ಮ ಪ್ರಮುಖ ಕೆಲಸಗಳು ವೇಗದಿಂದ ಸಾಗುವುದು. ನಿಮಗೆ ಅಯಾಚಿತವಾಗಿ ಬರುವ ಶುಭಸಂದರ್ಭವನ್ನು ಸಂತೋಷಿಸುವಿರಿ. ಹಳೆಯ ಯೋಜನೆಗಳಿಗೆ ಪುನಶ್ಚೇತನವನ್ನು ನೀಡುವಿರಿ. ಪ್ರಭಾವೀ ಶತ್ರುಗಳನ್ನು ನೀವು ಸೋಲಿಸುವಿರಿ.

ಕರ್ಕಾಟಕ ರಾಶಿ:

ಉದ್ಯಮಿಗಳಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಅನಿರೀಕ್ಷಿತ ಪ್ರಯಾಣವು ಬರಲಿದೆ‌. ಯಾರಿಗಾದರೂ ಕಾದು ಸಮಯವು ಹಾಳಾಗುವುದು. ನಿಮಗೆ ಸಂಬಂಧಗಳಲ್ಲಿ ಗೌರವವನ್ನು ಕಾಪಾಡಿಕೊಳ್ಳುವುದು ಕಷ್ಟವಾದೀತು. ನ್ಯಾಯಾಂಗದ ವಿಷಯಗಳಲ್ಲಿ ನೀವು ತಾಳ್ಮೆಯನ್ನು ಕಾಪಾಡಿಕೊಳ್ಳಬೇಕು. ಜಾಣ್ಮೆಯಿಂದ ನಿಮ್ಮ ಕೆಲಸವನ್ನು ಬೇಗ ಪೂರ್ಣ‌ಮಾಡುವಿರಿ. ಉದ್ಯೋಗದಲ್ಲಿ ಹೊಸ ವಿಚಾರಗಳನ್ನು ನೀವು ಕಲಿಯಬೇಕಾಗುವುದು. ಕಳೆದುಕೊಂಡಷ್ಟು ವೇಗವಾಗಿ ಉಳಿಸಿಕೊಳ್ಳುವುದು ಕಷ್ಟವೆನಿಸುವುದು.

ಸಿಂಹ ರಾಶಿ:

ಮದದಲ್ಲಿ ಬುದ್ಧಿಯನ್ನೂ ಸ್ಥಳವನ್ನೂ ಸಂದರ್ಭವನ್ನೂ ವ್ಯಕ್ತಿಯನ್ನೂ ನಗಣ್ಯಗೊಳಿಸಬೇಡಿ. ನಿಮ್ಮ ನೇರ ಮಾತಿನಿಂದ ತೊಂದರೆ ಆಗಬಹುದು. ಪ್ರೇಮದಲ್ಲಿ ಯಾರನ್ನಾದರೂ ನಿಮ್ಮವರನ್ನಾಗಿ ಮಾಡಿಕೊಳ್ಳುವ ಕಲೆ ನಿಮಗೆ ತಿಳಿದುಬರುವುದು. ನಿಮ್ಮ ಕುಟುಂಬದ ಬಗ್ಗೆ ಹೆಮ್ಮೆಯ ಭಾವ ಮೂಡುತ್ತದೆ. ಮನೆಯಲ್ಲಿಯೇ ವಾಸಿಸುವವರು ಸಣ್ಣ ಆದಾಯದ ಬಗ್ಗೆ ಆಲೋಚಿಸುವಿರಿ. ಯಾರಾದರೂ ಮುಖಸ್ತುತಿಯನ್ನು ಮಾಡಬಹುದು. ಮುಜುಗರವೂ ನಿಮಗೆ ಆದೀತು. ಅತಿಯಾದ ನಂಬಿಕೆಯು ನಿಮ್ಮ ಮೌಲ್ಯಯುತ ವಸ್ತುಗಳನ್ನು ಕಳೆದುಕೊಳ್ಳುವಂತೆ ಮಾಡುವುದು.

ಕನ್ಯಾ ರಾಶಿ:

ಮಾನಸಿಕ ಸ್ಥಿತಿ ಬಲಾಢ್ಯವಾಗಿರಲಿ. ಅಲ್ಲಿಯ ತನಕ ತಾಳ್ಮೆಯಿಂದ ಇರಬೇಕಾದ ಕರ್ತವ್ಯವಿದೆ. ಒಳ್ಳೆಯವರ ಸಂಗ ಸಿಗಬಹುದು.‌ ಸಿಗದಿದ್ದರೆ ನೀವೇ ಹೋಗಿ.‌ ಒಳ್ಳೆಯ ಪುಸ್ತಕವನ್ನು ತಂದು ಓದಿ. ಸ್ನೇಹಿತನ‌ ಕೆಲಸವನ್ನು ಅದು ಮಾಡುವುದು. ಇಂದು ನಿಮ್ಮ ಭಾವನೆಗಳನ್ನು ನಿಯಂತ್ರಿಸಲಾಗದೇ ಎಲ್ಲವನ್ನೂ ಹೊರಹಾಕುವಿರಿ. ನೀವು ಮನೆಯ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಇರಲಿದೆ. ಉದ್ಯೋಗದ ಕಾರಣ ದೂರ ಪ್ರಯಾಣ ಮಾಡಲು ಇಷ್ಟವಾಗದು. ರಾಜಕೀಯವಾಗಿ ಹಿನ್ನಡೆಯಾಗಬಹುದು. ನಿಮ್ಮದಾದ ದ್ವೀಪವನ್ನು ಮಾಡಿಕೊಂಡು ನೀವಿರುವಿರಿ.

ತುಲಾ ರಾಶಿ:

ಇಷ್ಟಮಿತ್ರರ ಭೇಟಿಯಿಂದ ಖುಷಿಯು ಹೆಚ್ಚಾಗುವುದು. ವಿಶ್ವಾಸಘಾತಕ ಕಾರ್ಯಗಳಿಗೆ ಮುನ್ನುಗ್ಗಲು ಯಾರಿಂದಲಾದರೂ ಪ್ರೇರಣೆ ಸಿಕ್ಕೀತು. ಪೆಟ್ಟು ತಿಂದರೆ ಮತ್ತೇಳುವುದು ಕಷ್ಟ. ಯಾವುದೇ ಕಾರಣಕ್ಕೂ ಬಿಟ್ಟುಕೊಡಲು ಇಷ್ಟಪಡಲಾರಿರಿ. ಎಲ್ಲರ ಜೊತೆ ಬೆರೆಯುವುದು ನಿಮಗೆ ಖುಷಿಯ ವಿಚಾರವಾಗಲಿದೆ. ಪ್ರಯಾಣದಲ್ಲಿ ಯಾವುದೇ ತೊಂದರೆಗಳು ಬಾರದು. ಕೆಲವು ಜನರ ಭೇಟಿಯು ನಿಮಗೆ ಖುಷಿ ಕೊಡುವುದು. ಹೂಡಿಕೆಯ ವಿಚಾರದಲ್ಲಿ ಸಮಸ್ಯೆಯಾಗಬಹುದು.

ವೃಶ್ಚಿಕ ರಾಶಿ:

ಸದ್ದಿಲ್ಲದೇ ಮಾಡುವ ಸಾಮಾಜಿಕ ಕಾರ್ಯಕ್ಕೆ ಪ್ರಶಂಸೆ. ಕಲಾವಿದರಿಗೆ ವಿಶೇಷ ಗೌರವ. ಸಿಟ್ಟಿನ ಮೂಟೆಯನ್ನು ಕೆಳಗಿಳಿಸಿ. ಆಗ ಸಿಗುವ ಆನಂದಕ್ಕೆ ಬೆಲೆಯೆಷ್ಟು? ನಿಮ್ಮ ಆಲೋಚನೆಗಳನ್ನು ಇತರ ಜೊತೆ ಹಂಚಿಕೊಂಡರೆ ನಿಮ್ಮ ಸ್ಥಾನಕ್ಕೆ ಚ್ಯುತಿ ಬಂದೀತು. ನಿಮ್ಮ ಕಾರ್ಯಗಳಿಂದ ಪ್ರೀತಿಪಾತ್ರರ ಹೃದಯವನ್ನು ಗೆಲ್ಲಲು ಸಫಲರಾಗುವಿರಿ. ಬಹಳ‌ ದಿನಗಳ ಅನಂತರ ನಿಮ್ಮ ಸಂಗಾತಿಯ ಜೊತೆ ಸ್ವಲ್ಪ ಸಮಯ ಕುಳಿತು ಆಪ್ತವಾಗಿ ಮಾತನಾಡುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿ ಹಣವನ್ನು ವ್ಯಯ ಮಾಡುವಿರಿ. ನಿಮಗೆ ಆಗಬೇಕಾದ ಕೆಲಸವನ್ನು ವಿವಾದ ಇಲ್ಲದೇ ಮಾಡಿಕೊಳ್ಳಿ.

ಧನು ರಾಶಿ:

ಬಹಳ ಉತ್ಸಾಹದಿಂದ ಉತ್ಸವಗಳಲ್ಲಿ ಭಾಗವಹಿಸುವಿರಿ. ದಿನಚರಿಯ ವ್ಯತ್ಯಾಸದಿಂದ ಆರೋಗ್ಯ ಕೆಡಬಹುದು. ಅನಿರೀಕ್ಷಿತ ಸಂಪತ್ತು ಸಿಗುವ ಸಾಧ್ಯತೆ ಇದೆ. ಮೇಲಧಿಕಾರಿಗಳಿಂದ ಪ್ರಗತಿ ಪರಿಶೀಲನೆ. ಬದಲಾವಣೆಗೆ ಸಲಹೆ. ಇಂದು ಬಂದ ಅತಿಥಿಯ ಜೊತೆ ಹರಟೆಯನ್ನು ಹೊಡೆಯುತ್ತೀರಿ. ಅವಿವಾಹಿತರ ಜೀವನದಲ್ಲಿ ಹೊಸ ಅತಿಥಿಯ ಆಗಮನದ ನಿರೀಕ್ಷೆಯು ಇರುವುದು. ವಾಹನ‌ ಚಾಲನೆಯಲ್ಲಿ ಜಾಗರೂಕತೆ ಬೇಕು. ಆಧ್ಯಾತ್ಮದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ.

ಮಕರ ರಾಶಿ:

ನ್ಯಾಯಾಲಯದಲ್ಲಿ ಇರುವ ಪ್ರಕರಣವು ನಿಮಗೆ ಸಮಾಧಾನ ನೀಡುವುದು. ಹಣದ‌ ತೊಂದರೆಗೆ ಮನೆಯಿಂದ ಸಹಾಯ ದೊರೆಯಬಹುದು. ನಿಮಗೆ ಕಲಿಸಿದವರ ಒಡನಾಟವು ಬೆಳೆಯುವುದು. ಸಂಬಂಧಿಕರ ಜೊತೆ ವ್ಯವಹಾರವನ್ನು ಮಾಡಬೇಡಿ. ನಿಮ್ಮ ಆದಾಯ ಮತ್ತು ಖರ್ಚುಗಳನ್ನು ನೀವು ಸಮವಲ್ಲದಿದ್ದರೂ ತೊಂದರೆಯಾಗದಂತೆ ನಿಭಾಯಿಸುವಿರಿ. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ. ಇಂದು ಸ್ತ್ರೀಯರಿಗೆ ಅನಿರೀಕ್ಷಿತ ತೊಂದರೆಗಳು ಇರಲಿದೆ.

ಕುಂಭ ರಾಶಿ:

ಇಂದು ಕುಟುಂಬದ ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುವ ಸಂದರ್ಭ ಬರಬಹುದು. ಆಪ್ತರನ್ನು ಕಳೆದುಕೊಳ್ಳುವ ಭೀತಿ. ಎಷ್ಟೋ ದಿನದ ಸಾಲ ಇಂದು ಮುಕ್ತಾಯಗೊಳ್ಳುವುದು. ಕಛೇರಿಯಲ್ಲಿ ಅನಿರೀಕ್ಷಿತ ಒತ್ತಡಗಳು ಕಾಣಿಸಿಕೊಳ್ಳುವುದು. ನೀವು ಯಾವುದೇ ಅವಲಂಬನೆ ಇಲ್ಲದೆ ಕೆಲಸ ಮಾಡಲು ಬಯಸುವುದಿಲ್ಲ. ವ್ಯಾಪಾರ ಮಾಡುವ ಜನರ ಜೊತೆ ಸೇರಿ ಕೆಲವು ಕೆಲಸಗಳನ್ನು ಮಾಡಲು ಅವಕಾಶವಿದೆ. ನೀವು ಎಣಿಸಿದ್ದನ್ನು ಬಂಧುಗಳು ಮಾಡಿಕೊಡುವರು.

ಮೀನ ರಾಶಿ:

ಬಹು ದಿನದಿಂದ ಸಿಗಬೇಕಿದ್ದ ಆಸ್ತಿ ಕೈ ತಪ್ಪಬಹುದು. ಹಿರಿಯ ಹಾಗೂ ಪ್ರಮುಖವ್ಯಕ್ತಿಗಳನ್ನು ಇಂದು ಭೇಟಿಯಾಗುತ್ತೀರಿ. ನೀವು‌ ಮಾಡುವ ಕಾರ್ಯಕ್ಕೆ ಇತರರ ಸಹಾಯವೂ ಲಭ್ಯವಾಗಲಿದೆ. ನೀವು ಕ್ರಿಯಾ ಯೋಜನೆಯನ್ನು ತಯಾರಿಸಿದರೆ ಯಶಸ್ಸಿಗೆ ಸಮೀಪವಾಗುವಿರಿ. ಬಂಧುಗಳು ಮನೆಗೆ ಬಂದ ಕಾರಣ ಖರ್ಚು ಹೆಚ್ಚಾದೀತು. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಅನುರಾಧಾ, ಯೋಗ : ವಜ್ರ, ಕರಣ : ಗರಜ, ಸೂರ್ಯೋದಯ – 06 – 18 am, ಸೂರ್ಯಾಸ್ತ – 06 – 35 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:50 – 09:22, ಯಮಗಂಡ ಕಾಲ 10:55 – 12:27, ಗುಳಿಕ ಕಾಲ 13:59 – 15:31

-ಲೋಹಿತ ಹೆಬ್ಬಾರ್-8762924271 (what’s app only)

Follow Us