Horoscope 1 Dec: ದಿನಭವಿಷ್ಯ, ವಿದ್ಯಾರ್ಥಿಗಳಿಗೆ ಇಂದು ಶುಭ ದಿನ, ಮಕ್ಕಳ‌ ಆರೋಗ್ಯವು ಹದ ತಪ್ಪಬಹುದು

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಡಿಸೆಂಬರ್​​​​ 01) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 1 Dec: ದಿನಭವಿಷ್ಯ, ವಿದ್ಯಾರ್ಥಿಗಳಿಗೆ ಇಂದು ಶುಭ ದಿನ, ಮಕ್ಕಳ‌ ಆರೋಗ್ಯವು ಹದ ತಪ್ಪಬಹುದು
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 01, 2023 | 12:02 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಡಿಸೆಂಬರ್​​​​ 01 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣರಾಜ, ವಾರ: ಶುಕ್ರ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಶುಕ್ಲ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 42 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:57 ರಿಂದ 12:22 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:11 ಗಂಟೆ 04:36 ನಿಮಿಷಕ್ಕೆ, ಗುಳಿಕ ಕಾಲ ಬೆಳಗ್ಗೆ 08:07 ರಿಂದ 09:32ರ ವರೆಗೆ.

ಮೇಷ ರಾಶಿ: ಶತ್ರುಗಳ ದಾರುಣ ಸ್ಥಿತಿಯನ್ನು ಕೇಳಿ ಒಳಗೇ ಸಂತಸಪಡುವಿರಿ. ಸ್ವಾಲಂಬಿಯಾಗುವ ಕಡೆಗೆ ಗಮನವು ಹೆಚ್ಚಿರುವುದು. ಹಿರಿಯರ ಆರೋಗ್ಯದ ಬಗ್ಗೆ ಸಮಸ್ಯೆಗಾಗಿ ಹೆಚ್ಚು ಓಡಾಟವನ್ನು ಮಾಡಬೇಕಾದೀತು. ಜಾಣ್ಮೆಯ ವ್ಯವಹಾರದಿಂದ ಇಂದು ವ್ಯಾಪಾರದಲ್ಲಿ ಲಾಭ ಪಡೆಯುವಿರಿ. ಅನಿರೀಕ್ಷಿತವಾಗಿ ಸಿಕ್ಕ ಸಂಪತ್ತನ್ನು ಯಾರಿಗಾದರೂ ಕೊಡುವಿರಿ. ದುರ್ವ್ಯಸನವು ನಿಮ್ಮನ್ನು ಅಂಟಿಕೊಳ್ಳಬಹುದು. ಬಹಳಷ್ಟು ಕಾರ್ಯಗಳಿದ್ದರೂ ಎಲ್ಲವನ್ನೂ ಬಿಟ್ಟು ಆರಾಮಾಗಿ ಇರುವಿರಿ. ಕಳೆದ ಸಮಯವನ್ನು ನೀವು ಮೆಲುಕು ಹಾಕಿಕೊಂಡು ಸಂತೋಷಪಡುವಿರಿ. ನೀವು ತೆಗೆದುಕೊಳ್ಳುವ ನಿರ್ಧಾರವು ಸ್ಪಷ್ಟವಾಗಿ ಇರಲಿದೆ. ಸಮಯಸ್ಫೂರ್ತಿಯಿಂದ ಕೆಲಸವನ್ನು ಮಾಡುವಿರಿ. ಬೇಕಾದಷ್ಟನ್ನೇ ಮಾತನಾಡಿ. ಸಂಪತ್ತಿನ ಬಗ್ಗೆ ತಾತ್ಸಾರಭಾವವು ಬೇಡ. ಇಂದಿನ ಲೆಕ್ಕಾಚಾರದಿಂದ ಧನವ್ಯಯದ ಮಾಹಿತಿಯು ಸಿಗುವುದು. ಆತ್ಮಗೌರವಕ್ಕೆ ಚ್ಯುತಿ ಬರಬಹುದು.

ವೃಷಭ ರಾಶಿ: ಒಂದೇ ವಿಷಯಕ್ಕೆ ಹತ್ತಾರು ಯೋಚಿಸಿ ಕಾರ್ಯವನ್ನು ಮಾಡುವಿರಿ. ಮಕ್ಕಳ‌ ಆರೋಗ್ಯವು ಹದ ತಪ್ಪಬಹುದು. ಉಸಿರಾಟದ ತೊಂದರೆಯು ನಿಮ್ಮ‌ ಉತ್ಸಾಹವನ್ನು ಭಂಗ ಮಾಡಬಹುದು. ಇಂದು ಕುಟುಂಬದವರ ಮಾತುಗಳು ನಿಮ್ಮ ಮನಸ್ಸಿಗೆ ನಾಟಬಹುದು. ವಿದ್ಯಾರ್ಥಿಗಳು ಶುಭ ಫಲಿತಾಂಶದಿಂದ ಸಂತೋಷಗೊಳ್ಳುವರು. ನಿಮ್ಮ ಅಪೂರ್ಣ ಕಾರ್ಯಗಳನ್ನು ಇಂದು ಪೂರ್ಣಮಾಡಿಕೊಳ್ಳುವಿರಿ. ಪೂರ್ವಪುಣ್ಯವು‌ ನಿಮ್ಮನ್ನು ಕಾಪಾಡಲಿದೆ. ಕೆಲವು ಅಪರಿಪೂರ್ಣವಾದ ಕಾರ್ಯವನ್ನು ಮಾಡಿ ಮುಗಿಸುವಿರಿ. ನಿಮ್ಮನ್ನು ಅಪಹಾಸ್ಯ ಮಾಡಲಿದ್ದು ನಿಮಗೆ ಕೋಪ ಬರುವುದು. ಕೋಪವನ್ನು ಕೋಪದಿಂದಲೇ ತೆಗೆಯಲು ಪ್ರಯತ್ನಿಸುವಿರಿ. ಏನಾದರೂ ನೆಪ ಹೇಳಿ ಇಂದಿನ ಪ್ರಯಾಣವನ್ನು ಮಾಡಲಾರಿರಿ. ಅಸಾಧ್ಯವನ್ನು ನೀವು ಸಾಧಿಸಲು ಅಧಿಕಶ್ರಮವನ್ನು ಹಾಕಬೇಕಾದೀತು. ಉಪಕಾರದ ಸ್ಮರಣೆಯು ನೆನಪಿರದು.

ಮಿಥುನ ರಾಶಿ: ಮಾನಸಿಕ ನೆಮ್ಮದಿಯಿಂದ ಕೆಲಸದಲ್ಲಿ ಉತ್ಸಾಹವು ಹೆಚ್ಚಾಗುವುದು. ಯಾರನ್ನೋ ದೂರುತ್ತ ನಿಮ್ಮ ಕೆಲಸದ ಅವಧಿಯನ್ನು ವ್ಯರ್ಥ ಮಾಡುವುದು ಬೇಡ. ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾ ಹಳೆಯದನ್ನು ನೆನಪಿಸಿಕೊಳ್ಳುವಿರಿ. ಶಿಸ್ತಿಗೆ ಹೆಚ್ಚು ಗಮನವನ್ನು ಇಂದು ಕೊಡುವಿರಿ. ನಿಮ್ಮ ಪ್ರೇಮಪ್ರಕರಣವು ದುಃಖಾಂತವಾಗಲಿದೆ. ಸೃಜನಾತ್ಮಕ ಕೆಲಸದಿಂದ ಹೆಚ್ಚಿನ ಯಶಸ್ಸನ್ನು ಸಾಧಿಸುವಿರಿ. ಸಂಗಾತಿಗಳಿಬ್ಬರೂ ದೂರಾಗುವ ಯೋಚನೆ ಮಾಡಬಹುದು. ನಿಮ್ಮ ಮಾತು ನಿಷ್ಪಕ್ಷಪಾತದಿಂದ ಇರಲಿ. ನಿಮ್ಮ ವಸ್ತುವನ್ನು ಕಳೆದುಕೊಂಡು ಯಾರದೋ‌ ಮೇಲೆ ಅನುಮಾನ‌ಪಡುವಿರಿ. ಕುಳಿತುಕೊಳ್ಳುವ ವ್ಯತ್ಯಾಸದಿಂದ ದೇಹಕ್ಕೆ ಬಾಧೆಯುಂಟಾಗುವುದು. ಸಾಮಾಜಿಕ ಗೌರವವನ್ನು ನೀವು ತಿರಸ್ಕರಿಸುವಿರಿ.

ಕಟಕ ರಾಶಿ: ಪವಿತ್ರ ಕ್ಷೇತ್ರಗಳ ದರ್ಶನದ ಬಗ್ಗೆ ಆಸಕ್ತಿಯು ಉಂಟಾಗುವುದು. ಖರೀದಿಗೆ ಬೇಕಾದ ಹಣವನ್ನು ಮಾತ್ರ ಒಯ್ಯುವುದು ಉತ್ತಮ. ಇಂದು ನೀವು ಹೂಡಿಕೆಯ ಮುಖಾಂತರ ಆರ್ಥಿಕ ಸಬಲತೆಯನ್ನು ಪಡೆಯಲು ಯೋಚಿಸುವಿರಿ. ನಿಮ್ಮ ಪ್ರೇಮ ಜೀವನದಲ್ಲಿ ಪ್ರೀತಿ ಹೆಚ್ಚಾಗಿ ಬಹಳ ಉತ್ಸಾಹದಿಂದ ಇರುವಿರಿ. ಯಾರಾದರೂ ತಪ್ಪು ತಿಳಿದಾರು ಎಂಬ ಭಾವವು ನಿಮ್ಮನ್ನು ಕಾಡಬಹುದು. ನೀವು ಹೊಸ ವಾಹನವನ್ನು ಒತ್ತಾಯಕ್ಕೆ ಖರೀದಿ ಮಾಡುವಿರಿ. ಒಂದೇ ತರದ ಜೀವನವು ನಿಮಗೆ ಬೇಸರವಾಗುವುದು. ಇಂದು ಹೆಚ್ಚು ಖರ್ಚು ಮಾಡುವ ಅನಿವಾರ್ಯತೆ ಬರಬಹುದು. ನಿಮ್ಮ ಕಾರ್ಯಗಳನ್ನು ವೇಗವಾಗಿ ಮುಗಿಸಿಕೊಂಡು ನಿಶ್ಚಿಂತೆಯಿಂದ ಇರುವಿರಿ. ಸಾಲವನ್ನು ಮಾಡಿ ವಾಹನವನ್ನು ಖರೀದಿಸುವಿರಿ. ಆದಾಯವನ್ನು ಹೆಚ್ಚಿಸಲು ಮತ್ತೊಂದು ಉದ್ಯೋಗವನ್ನು ಬದಲಾಯಿಸುವ ಆಲೋಚನೆ ಬರುವುದು.

ಸಿಂಹ ರಾಶಿ: ಸಾಲದ ವಿಚಾರದಲ್ಲಿ ನಿಮಗೆ ಪೂರ್ಣ ಧೈರ್ಯ ಸಾಲದು. ಮನೆಯವರ ಬಗ್ಗೆ ನಿಮಗೆ ಪ್ರೀತಿ ಹೆಚ್ಚಾಗುವುದು. ನಿಮಗೆ ಯಶಸ್ಸನ್ನು ಲಾಭವಾಗುವ ಉತ್ತಮ ಕಾರ್ಯವನ್ನು ಆಯ್ಕೆ ಮಾಡಿಕೊಳ್ಳುವಿರಿ. ಸಂಗಾತಿಯ ಪ್ರೀತಿಯಿಂದ ನೀವು ಅಚ್ಚರಿಗೊಳ್ಳುವಿರಿ. ತೆಗಳಿಕೆಗಳನ್ನು ನೀವು ಸಕಾರಾತ್ಮಕವಾಗಿ ಸ್ವೀಕರಿಸುವಿರಿ. ವೃತ್ತಿಯಲ್ಲಿ ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ ಕಾರಣ ಸಿಟ್ಟಾಗಬಹುದು. ಆದಾಯದ ಮೂಲಗಳ ಸಂಖ್ಯೆ ಹೆಚ್ಚಾಗುವುದು.‌ ಬಹಳ ದಿನಗಳಿಂದ ಮರೆತುಹೋಗಿದ್ದ ಸಂಗತಿಯನ್ನು ನೆನಪಿಸಿಕೊಳ್ಳುವಿರಿ. ಪಿತ್ರಾರ್ಜಿತ ಆಸ್ತಿಯನ್ನು ಕೇಳುವ ಒತ್ತಾಯವಿದ್ದರೂ ಧೈರ್ಯ ಸಾಲದು. ಆಪ್ತರನ್ನು ನೀವು ಮಾತಿನಿಂದಾಗಿ ದೂರ ಮಾಡಿಕೊಳ್ಳುವಿರಿ. ಬರಬೇಕಾದ ಹಣವು ನಿಮ್ಮ ಕೈ ಸೇರಲಿದೆ. ಕಷ್ಟದಿಂದ‌ ಸಂಪಾದಿಸಿದ್ದನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ.

ಕನ್ಯಾ ರಾಶಿ: ಪ್ರೇಮದ‌ ವಿಚಾರದಲ್ಲಿ ಮನಸ್ಸು ಬಹಳ ಚಂಚಲವಾಗಲಿದೆ. ಅನಾರೋಗ್ಯದಿಂದ ನಿಮ್ಮ ಉದ್ಯೋಗವು ವೇಗವನ್ನು ಕಳೆದುಕೊಳ್ಳುವುದು. ಕೋಪವನ್ನು ಶಾಂತ ಮಾಡಿಸಲು ಹಲವಾರು ದಾರಿಗಳನ್ನು ಕಂಡುಕೊಳ್ಳುವಿರಿ. ಆರೋಗ್ಯವು ಹದವನ್ನು ಕಳೆದುಕೊಳ್ಳಬಹುದು. ಬಂಧುಗಳ ಜೊತೆ ಆತ್ಮೀಯ ಒಡನಾಟ ಮಾಡುವಿರಿ. ಅಹಂಕಾರಕ್ಕೆ ಸೊಪ್ಪು ಹಾಕುವುದು ಬೇಡ. ನಿರ್ಲಕ್ಷ್ಯದಿಂದ ಎಲ್ಲವೂ ಸಾಧ್ಯ. ಹೂಡಿಕೆಯ ವಿಚಾರವಾಗಿ ಚರ್ಚಿಸುವಿರಿ. ಮಿತ್ರರನ್ನು ಅನುಮಾನದಿಂದ ಕಾಣಬೇಕಾಗುವುದು. ಸಹಾಯ ಮಾಡಲು ಹೋಗಿ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ನೂತನ ಗೃಹದ ಖರೀದಿಯ ಬಗ್ಗೆ ಸದ್ಯ ಮಾತುಕತೆ ಬೇಡ. ಯಾವ ವಸ್ತುವನ್ನೂ ಒತ್ತಾಯದಿಂದ ಪಡೆಯಬೇಡಿ. ವಿವಾಹದ ಮಾತುಕತೆಯನ್ನೂ ಮುಂದೂಡುವುದು ಉತ್ತಮ. ಕುಟುಂಬಕ್ಕೆ ನಿಮ್ಮಿಂದ ಅಲ್ಪ ಧನ ಸಹಾಯವು ಸಿಗುವುದು. ಯಾರನ್ನೂ ಲಘುವಾಗಿ ಕಾಣುವುದು ಸ್ವಭಾವವನ್ನು ಕಡಿಮೆ‌ ಮಾಡಿಕೊಳ್ಳಿ.

ತುಲಾ ರಾಶಿ: ಸ್ತ್ರೀಯರು ಇಂದು ಮುಂಗೋಪಿಗಳಾಗಿ ಎಲ್ಲ ವಿಚಾರಕ್ಕೂ ಯಾರನ್ನಾದರೂ ಬೈದುಕೊಳ್ಳುವಿರಿ. ಆಕಸ್ಮಿಕವಾಗುವ ಜೀವನದ ತಿರುವನ್ನು ನೀವು ಸ್ವೀಕರಿಸಲಾರಿರಿ. ನಿಮ್ಮ ತಪ್ಪನ್ನು ಎಲ್ಲರೆದು ಒಪ್ಪಿಕೊಳ್ಳುವಿರಿ. ಇದು ನಿಮಗೇ ಶೋಭೆಯನ್ನು ತಂದುಕೊಡುವುದು. ಅಧಿಕ ಆಸ್ತಿಯೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ನಿದ್ರೆಯಿಲ್ಲದೇ ಚಿಂತೆ ಆರಂಭವಾಗುವುದು. ಮಾತನ್ನು ಕಡಿಮೆ ಮಾಡಿ ಕಾರ್ಯದಲ್ಲಿ ತೋರಿಸಿ. ಅನಪೇಕ್ಷಿತ ವಿಚಾರದ ಬಗ್ಗೆ ಚರ್ಚೆ ಬೇಡ. ಸುಮ್ಮನೇ ಸಮಯವನ್ನು ಹಾಳು ಮಾಡಿಕೊಳ್ಳುವಿರಿ. ಉದ್ಯಮದಲ್ಲಿ ಕಡಿಮೆ ಲಾಭವು ಸಮಾಧಾನ ತರದು. ಉದ್ಯೋಗದಲ್ಲಿ ಒತ್ತಡವನ್ನು ನಿಭಾಯಿಸಲು ಒದ್ದಾಡುವಿರಿ. ಸಂಗಾತಿಗಾಗಿ ಹಣವನ್ನು ಖರ್ಚು ಮಾಡಬೇಕಾದೀತು. ಅಧಿಕಾರಿಗಳಿಂದ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ.

ವೃಶ್ಚಿಕ ರಾಶಿ: ಕುಟುಂಬದ ಜೊತೆ ನಿಮ್ಮ‌ ನೋವನ್ನು ಮರೆತು ಸ್ವಲ್ಪ ಸಮಯ ಕಳೆಯುವಿರಿ. ಆದಾಯದ ಮೂಲವನ್ನು ನೀವು ವಿಸ್ತರಿಸಿಕೊಳ್ಳಬಹುದು. ಮನೆಯವರ ಜೊತೆ ವಾಗ್ವಾದಕ್ಕೆ ನಿಲ್ಲುವಿರಿ. ಸಂತಾನ ಸಂತೋಷವನ್ನು ನೀವು ಇಂದು ಅನುಭವಿಸುವಿರಿ. ಉದ್ಯೋಗಕ್ಕೆ ಸಂಬಂಧಿಸದಂತೆ ಶುಭವಾರ್ತೆಯೂ ನಿಮ್ಮ ಸಂತೋಷಕ್ಕೆ ಮತ್ತಷ್ಟು ಪುಷ್ಟಿಯನ್ನು ಕೊಡುವುದು. ಆಪ್ತರ ವಿಯೋಗವು ನಿಮ್ಮನ್ನು ಕುಗ್ಗಿಸಬಹುದು. ಅಧಿಕ ಖರ್ಚಿನಂತೆ ಕಾಣುವ ವ್ಯವಹಾರವನ್ನು ನೀವು ಬಿಡುವಿರಿ. ನೀವು ಕಷ್ಟದಲ್ಲಿ ಸುಖವನ್ನು ಕಾಣುವ ಮಾರ್ಗವನ್ನು ಹುಡುಕಿಕೊಳ್ಳುವಿರಿ. ಅಮೂಲ್ಯ ವಸ್ತುಗಳ ಸಂಪಾದನೆಯಾಗಲಿದೆ. ನಿಮ್ಮ ಸುಳಿವು ಸಿಗದೇ ಮನೆಯಲ್ಲಿ ಆತಂಕವಾಹಬಹುದು. ಮಧುರವಾದ ಸಂಬಂಧಗಳಲ್ಲಿ ಒಡಕು ಬರಬಹುದು. ನಿಮ್ಮ ನೋವನ್ನು ಯಾರ ಬಳಿಯಾದರೂ ಹಂಚಿಕೊಂಡು ಸಮಾಧನ ತಂದುಕೊಳ್ಳಿ.

ಧನು ರಾಶಿ: ನೀವು ಏನನ್ನಾದರೂ ಸಾಧಿಸಲು ಧೈರ್ಯ ಮಾಡುವಿರಿ. ಮಿತಿಮೀರಿದ ಆಹಾರ ಸೇವೆಯಿಂದ ತೊಂದರೆಯಾದೀತು. ಅಂದುಕೊಂಡಷ್ಟು ಸಫಲತೆಯನ್ನು ಇಂದು ಸಾಧಿಸಲಿದ್ದೀರಿ. ಆರ್ಥಿಕವಾದ ಸಂತೃಪ್ತಿಯು ನಿಮ್ಮ ಮುಖದಲ್ಲಿ ಕಾಣುವುದು. ಇಂದಿನ ಪ್ರಯಾಣವು ನಿಮಗೆ ಸಮಾಧಾನ ನೀಡದು. ಅನ್ಯರು ನಿಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಲಿದ್ದು ನಿಮಗೆ ಸಹಿಸಲಾಗದು. ನೀವು ಅಂದುಕೊಂಡ ಸಹಾಯವು ಸರಿಯಾದ ಸಮಯಕ್ಕೆ ಸಿಗುವುದು. ಹಳೆಯ ನೆನಪುಗಳು ನಿಮ್ಮ ಕಾಡುವುವು. ಇಂದು ನೀವು ಆಕರ್ಷಕ ವ್ಯಕ್ತಿಗಳಾಗಿ ಕಾಣುರುವಿರಿ. ಕೃಷಿಯ ಕೆಲಸದಲ್ಲಿ ನಿಮ್ಮ ಉತ್ಸಾಹ ಕಡಿಮೆ ಇರುವುದು. ಕುಶಲ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಿರುವುದು. ನಿಮಗೆ ಶೋಧನೆಯ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಿರುವುದು. ನಿಜವಾದ ಮಿತ್ರರ ಅರಿವಾಗುವ ಸಮಯ ಬರಬಹುದು.

ಮಕರ ರಾಶಿ: ನಿಮ್ಮ ಜಾಣ್ಮೆಯ ಪ್ರದರ್ಶನವಾಗಲಿದೆ. ಬಹುದಿನಗಳ ಬಯಕೆಯ ಆಸ್ತಿಯ ಖರೀದಿಯಿಂದ ನಿಮಗೆ ನೆಮ್ಮದಿ ಸಿಗಲಿದೆ. ಅಪರಿಚಿತರ ಮಾತು ನಿಮಗೆ ಸಮಾಧಾನ ತರಿಸದು. ಯಾರ ಮಾತನ್ನೂ ನೀವು ಕೇಳಲಾರಿರಿ. ಉದ್ಯೋಗದಲ್ಲಿ ನಿಮ್ಮ ಸ್ಥಾನವು ಬದಲಾಗುವುದು. ಉದ್ಯೋಗದಲ್ಲಿ ಸಿಗುವ ಉನ್ನತ ಸ್ಥಾನಮಾನವನ್ನು ತಳ್ಳಿಹಾಕುವಿರಿ. ಸಮಯವೂ ಬದಲಾಗಲಿದ್ದು ಹೊಂದಿಕೊಳ್ಳುವುದು ಕಷ್ಟವಾದೀತು. ಆತ್ಮಿಯರ ಜೊತೆ ಮಾತುಕತೆಗೆ ಇಳಿಯುವಿರಿ. ದಾಂಪತ್ಯದಲ್ಲಿ ಸ್ವಪ್ರತಿಷ್ಠೆಯು ಕಾಣಿಸಿಕೊಳ್ಳಬಹುದು. ಬಂಧುಗಳು ನಿಮ್ಮ ಕಷ್ಟಕ್ಕೆ ನೆರವಾಗುವರು. ಹೊಸ ಪರಿಚಯದಲ್ಲಿ ಆತ್ಮೀಯತೆ ಬೆಳೆಯುವುದು. ಅತಿಯಾದ ಆಸೆಯಿಂದಾಗಿ ದುಃಖಿಸಬೇಕಾದೀತು. ಲಾಭವಾದರೂ ನಷ್ಟವೇ ಹೆಚ್ಚಾದಂತೆ ಕಾಣಿಸುವುದು. ಸಿಕ್ಕ ಅವಕಾಶದಿಂದ ವಂಚಿತರಾಗಿ ನೋಯುವಿರಿ. ಸ್ತ್ರೀಯರ ಜೊತೆ ಮಾತನಾಡುವುದು ನಿಮಗೆ ಕಷ್ಟವಾದೀತು.

ಕುಂಭ ರಾಶಿ: ಸಾಲವಿದ ವಿಷಯದಲ್ಲಿ ಅನಾದರ ಬೇಡ.‌ ಆಗುವಷ್ಟನ್ನು ತೀರಿಸಿಕೊಳ್ಳಿ. ನಿಮ್ಮ ಸ್ಥಿರಾಸ್ತಿಯಿಂದ ಲಾಭವನ್ನು ಗಳಿಸುವಿರಿ. ಧಾರ್ಮಿಕ ಆಚರಣೆಗಳಲ್ಲಿ ನಿಮಗೆ ಶ್ರದ್ಧೆಯು ಅಧಿಕವಾಗಿ ಇರುವುದು. ನೀವು ಕೇಳಿದ ಸಾಲವು ನಿಮಗೆ ದೊರೆಯಬಹುದು. ಆಡಿದ ಮಾತಿಗೆ ಪಶ್ಚಾತ್ತಪಪಡಬೇಕಾದೀತು. ಖರ್ಚಿನ ವಿಚಾರದಲ್ಲಿ ಕೈ ಹಿಂದೆ ಮಾಡುವುದು ಒಳ್ಳೆಯದು. ಜವಾಬ್ದಾರಿಗಳಿಂದ ನೀವು ಮುಕ್ತರಾಗಿ ಸಂತೋಷಿಸುವಿರಿ. ಅಪರಿಚಿತರು ನಿಮಗೆ ಸಮಸ್ಯೆಯನ್ನು ಕೊಡುವರು. ಭೇಟಿಯಾಗದ ಜನರು ಅಪರೂಪಕ್ಕೆ ಸಿಕ್ಕಿಯಾರು. ನಿಮ್ಮ ನಡವಳಿಕೆಯು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುವುದು. ಕಛೇರಿಯ ಕೆಲಸಗಳನ್ನು ಯಾವುದೇ ನಿರ್ಬಂಧವಿಲ್ಲದೇ ಮಾಡುವಿರಿ. ಅನಾರೋಗ್ಯದ ಕಾರಣಕ್ಕಡ ಹಣವನ್ನು ಖರ್ಚು ಮಾಡಬೇಕಾಗುವುದು. ಸಮಯಕ್ಕೆ ಸರಿಯಾಗಿ ನಿಮ್ಮ ಕಾರ್ಯವನ್ನು ಮಾಡಲು ಯಾರಾದರೂ ಸಿಗುವರು. ಅವರನ್ನು ಬಳಸಿಕೊಳ್ಳುವಿರಿ.

ಮೀನ ರಾಶಿ: ಸ್ತ್ರೀಯರಿಗೆ ಇಂದು ಉದ್ಯೋಗದಲ್ಲಿ ಹೊಸತನ ಕಾಣಿಸುವುದು. ಅಸಹಾಯಕರ‌‌ ಕಡೆ ನಿಮ್ಮ‌‌ ಮನಸ್ಸು ಹರಿಯುವುದು. ನೀವು ಬಯಸದಿದ್ದರೂ ನಿಮಗೆ ಪ್ರಶಂಸೆ ಸಿಗುವುದು. ತಿರುಗಾಟದಲ್ಲಿರುವ ನಿಮ್ಮನ್ನು ಕಂಡು ಮನೆಯಲ್ಲಿ ಬೇಸರ ವ್ಯಕ್ತಪಡಿಸಬಹುದು. ನಿಮಗೆ ಅಧಿಕ‌ ಖರ್ಚು ಎಂದು ಕಂಡರೆ ಅದನ್ನು ಮಾಡದೇ ಇರುವುದು ಉತ್ತಮ. ಇಷ್ಟವಿಲ್ಲದಿದ್ದರೂ ನೀವು ಹಿರಿಯರ ಮಾತನ್ನು ಕೇಳಬೇಕಾಗುವುದು. ಪ್ರೇಮಜೀವನಕ್ಕೆ ನಿಮಗೆ ಒಗ್ಗದು. ಬಂಧನದಂತೆ ಅನ್ನಿಸಬಹುದು. ಸಂಗಾತಿಯ ಆಲೋಚನೆಗಳು ನಿಮಗೆ ಇಷ್ಟವಾಗಬಹುದು. ಸಂತೋಷವಾಗುವಂತೆ ಇರುವಿರಿ. ಬೇಕಾದ ವಸ್ತುವನ್ನು ಕೇಳಿ ಪಡೆಯಿರಿ. ಹೊಸ ಗೆಳೆತನವು ನಿಮಗೆ ಮತ್ತಷ್ಟು ಸುಖವನ್ನು ಕೊಡುವುದು. ಆಪ್ತರ ಮೇಲೆ ಭಾವನೆಯು ಬದಲಾಗಬಹುದು.

ಲೋಹಿತಶರ್ಮಾ – 8762924271 (what’s app only)

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್