Daily Horoscope: ಮಕ್ಕಳು ಅಡ್ಡದಾರಿ ಹಿಡಿಯಬಹುದು ಎಚ್ಚರವಹಿಸಿ
24 ಮಾರ್ಚ್ 2025: ಸೋಮವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ನೌಕರರ ಮೇಲೆ ಸಿಟ್ಟಾಗಬೇಕಾಗುವುದು. ಕುಟುಂಬದ ಮರ್ಯಾದೆಗೆ ತಕ್ಕಂತೆ ವರ್ತನೆ ಇರಲಿ. ಮಾರ್ಚ್ 24ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ಬೆಂಗಳೂರು, ಮಾರ್ಚ್ 24, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಸೋಮ, ತಿಥಿ : ದಶಮೀ, ನಿತ್ಯನಕ್ಷತ್ರ : ಶ್ರವಣಾ, ಯೋಗ : ಪರಿಘ, ಕರಣ : ವಣಿಜ, ಸೂರ್ಯೋದಯ – 06 – 35 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭಕಾಲ : ರಾಹು ಕಾಲ 08:06 – 09:37, ಯಮಘಂಡ ಕಾಲ 11:08 – 12:39, ಗುಳಿಕ ಕಾಲ 14:10 – 15:41.
ಮೇಷ ರಾಶಿ: ವರವೇ ಶಾಪದಂತಾಗುವ ಸಂದರ್ಭ ಇಂದು ನಿಮ್ಮ ಪಾಲಿಗೆ ಅನಿಸಬಹುದು. ಸಂಗಾತಿಯು ಇಂದು ನಿಮ್ಮ ಆಸೆಗೆ ನೀರೆರೆಚಬಹುದು. ಉದ್ಯೋಗದಲ್ಲಿ ಪ್ರೀತಿಯು ಹಲವು ಕಾರಣಗಳಿಂದ ಕಡಿಮೆ ಆಗಬಹುದು. ಪಕ್ಷಪಾತಧೋರಣೆಯಿಂದ ನೀವು ಹೊರಬಂದರೆ ಮುಂದಿನ ಹಾದಿ ಸುಗಮ. ನಿಮ್ಮ ಕೆಲಸವನ್ನು ಶಿಸ್ತಿನಿಂದ ಮಾಡಿ ಮುಗಿಸುವಿರಿ. ನಿಮ್ಮ ವೇಗಕ್ಕೆ ವಹಿಸಿಕೊಂಡ ಕೆಲಸವು ಆಗದೇ ಇರುವುದು ನಿಮಗೆ ಬೇಸರ ತರಿಸಬಹುದು. ನೌಕರರ ಮೇಲೆ ಸಿಟ್ಟಾಗಬೇಕಾಗುವುದು. ಕುಟುಂಬದ ಮರ್ಯಾದೆಗೆ ತಕ್ಕಂತೆ ವರ್ತನೆ ಇರಲಿ. ಕಛೇರಿಯ ಕಾರ್ಯವು ಇಂದು ಅಧಿಕವಾಗಿ ಇರಲಿದೆ. ಮನಸ್ಸಿನಿಂದ ಗಟ್ಟಿಯದ ಹೊರತು ಯಾವುದನ್ನೂ ನಿಭಾಯಿಸಲು ಆಗದು. ಉಪಾಯದಿಂದ ನಿಮ್ಮ ಸ್ಥಾನವನ್ನು ಸ್ಥಿರವಾಗಿಸಿಕೊಳ್ಳಿ. ನಿಮಗೆ ಜೀವನ ಸುಮ್ಮನೆ ನಷ್ಟವಾಗುತ್ತಿದ್ದಂತೆಲ್ಲ ಭಾಸವಾಗಿ, ಏನಾದರೂ ಹೊಸತನ್ನು ಮಾಡುವ ಆಸೆಯಾಗುವುದು ನಿಮ್ಮ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ಸಂತೋಷದ ದಿನಗಳ ನಿರೀಕ್ಷೆಯು ಹೆಚ್ಚಿರುವುದು.
ವೃಷಭ ರಾಶಿ: ದಿಕ್ಕು ಕಾಣದ ಸ್ಥಿತಿಯಲ್ಲಿ ಯಾರೋ ಕೈಹಿಡಿದು ನಡೆಸಬೇಕು ಎನಿಸದೇ ಇರದು. ಅವಶ್ಯಕತೆ ಇದ್ದಲ್ಲಿ ಬೇಕಾದಷ್ಟೇ ನಿಮ್ಮ ಮಾತು ಇರಲಿ. ನಿಮ್ಮಲ್ಲೇ ತಪ್ಪನ್ನು ಇಟ್ಟುಕೊಂಡು ಪರರನ್ನು ದೂಷಿಸುವುದು ಸರಿಯಾಗದು. ನಿಮ್ಮ ಉದ್ಯಮಕ್ಕ ಅನುಭವಿಗಳ ಕೊರತೆ ಅತಿಯಾದಂತೆ ಕಾಣಿಸುವುದು. ಮಕ್ಕಳು ಅಡ್ಡದಾರಿಗೆ ಹೋಗುವ ಸನ್ನಿವೇಶವು ಬರಬಹುದು. ಮಾತಿಗೆ ಸಂಬಂಧಿಸಿದಂತೆ ದೋಷವು ನಿಮಗೆ ಕಾಣಲು ಸಿಗುವುದು. ಅತಿಯಾದ ಮೋಹವು ನಿಮ್ಮ ವಿವೇಚನಾ ಶಕ್ತಿಯನ್ನು ಕುರುಡು ಮಾಡೀತು. ಒಂದೇ ವಿಚಾರಕ್ಕೆ ಹತ್ತು ಬಾರಿ ಹೇಳಿಸಿಕೊಳ್ಳುವಿರಿ. ಅಪರಿತರಾರಿಗೋ ನೀವು ಸಮಯವನ್ನು ಕೊಡಬೇಕಾಗಬಹುದು. ಕರ್ತವ್ಯದಲ್ಲಿ ನಿರಾಸಕ್ತಿ ಇರುವುದು. ನಿಮ್ಮ ಜವಾಬ್ದಾರಿಗಳನ್ನು ನೀವು ಕಳೆದುಕೊಂಡು ನಿಶ್ಚಿಂತೆಯಿಂದ ಇರುವಿರಿ. ಭವಿಷ್ಯವು ಅನಿಶ್ಚಿತ ಎನಿಸಬಹುದು. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ನಿಮ್ಮದಾಗಿದೆ. ಪ್ರವಾಸವನ್ನು ಹೆಚ್ಚು ಮಾಡುವ ವಿಚಾರದಲ್ಲಿ ಆಸಕ್ತಿಯು ಇರುವುದು.
ಮಿಥುನ ರಾಶಿ: ಮಕ್ಕಳನ್ನು ಬಿಟ್ಟಕೊಡುವುದು ನಿಮಗೆ ಇಂದು ಕಷ್ಟಸಾಧ್ಯವಾಗಬಹುದು. ನೀವೇ ಹಾಕಿಕೊಂಡ ನಿರ್ಬಂಧಗಳನ್ನು ನೀವು ದಾಟುವುದು ಸರಿಕಾಣದು. ಖುಷಿಯ ಕ್ಷಣಗಳನ್ನು ನೀವೇ ಕೈಯಾರೆ ನಾಶ ಮಾಡಿಕೊಳ್ಳುವಿರಿ. ಕೆಲವು ಸೂಕ್ಷ್ಮ ವಿಚಾರವನ್ನು ನೀವು ಜೋಪಾನವಾಗಿ ನಿರ್ವಹಿಸಬೇಕಾಗುವುದು. ಆಪ್ತರನ್ನು ನೀವು ಬಹಳ ಆತ್ಮೀಯವಾಗಿ ಕಾಣುವಿರಿ. ಸಂಪನ್ಮೂಲವನ್ನು ಹಿಡಿದಿಟ್ಟುಕೊಳ್ಳುವುದು ಅಗತ್ಯ. ಧಾರ್ಮಿಕ ಆಚರಣೆಗಳಲ್ಲಿ ನಿಷ್ಠೆ ಇರಲಿದೆ. ಕಲೆಯಲ್ಲಿ ಉಂಟಾದ ಆಸಕ್ತಿಯು ನಿಮ್ಮ ಮನಸ್ಸನ್ನು ಚೆನ್ನಾಗಿಡಬಹುದು. ಗಳಿಸಿದ ಹಣವನ್ನು ಸದ್ವಿನಿಯೋಗಕ್ಕೆ ಕೊಡುವಿರಿ. ಆರ್ಥಿಕತೆಯು ದಾಂಪತ್ಯದಲ್ಲಿ ಕಲಹವಾಗುವಂತೆ ಮಾಡುವುದು. ಕುಟುಂದ ಜೊತೆ ಸಮಯ ಕಳೆಯುವುದು ಇಂದು ಸಾಧ್ಯವಾಗದು. ಹಳೆಯ ರೋಗಗಳಿಂದ ನೀವು ಮುಕ್ತರಾದಂತೆ ತೋರುವುದು. ನಿಮ್ಮ ಸಿಟ್ಟನ್ನು ಇಂದು ತೋರಿಸುವುದು ಬೇಡ. ಇರುವುದರಲ್ಲಿ ಸುಖಪಡುವುದನ್ನು ಕಲಿತುಕೊಳ್ಳಬೇಕಾದೀತು. ಆಪ್ತರ ಅಗಲಿಕೆಯನ್ನು ಸಹಿಸಲಾಗದು.
ಕರ್ಕಾಟಕ ರಾಶಿ: ನಿಮ್ಮ ಉದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಮಾಡುವ ಯೋಚಿಸುವಿರಿ. ಯೋಜನೆಯ ಸಿದ್ಧತೆಗೆ ಪಾಲುದಾರರ ಜೊತೆ ಮಾತುಕತೆ ನಡೆಯುವುದು. ಬಗ್ಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ನೀವು ಪೂರಕವಾಗಿ ಇರುವುದು ಉತ್ತಮ. ಕಳೆದುದನ್ನು ಚಿಂತಿಸಿ ಸಮಯ ವ್ಯರ್ಥ ಮಾಡಿಕೊಳ್ಳುವಿರಿ. ಬೇಕಾದವರನ್ನು ದೂರ ಮಾಡಿಕೊಂಡು ಏನನ್ನೂ ಸಾಧಿಸಲಾರಿರಿ. ಯಾರ ಬೆಂಬಲವನ್ನೂ ನಿರೀಕ್ಷಿಸದೇ ನಿಮ್ಮ ಕಾರ್ಯವನ್ನು ಮಾಡುವಿರಿ. ನಿಮ್ಮ ಯೋಜನೆಗಳು ವಾಸ್ತವಕ್ಕೆ ಹತ್ತಿರವಿರಬಹುದು. ಆಕರ್ಷಣೆಯಿಂದ ನಿಮಗೇ ತೊಂದರೆ. ಸಮಾರಂಭಗಳಿಗೆ ಸ್ನೇಹಿತರ ಜೊತೆ ಹೋಗುವಿರಿ. ಅಪರಿಚಿತರು ನಿಮ್ಮ ಬಳಿ ಹಣಕ್ಕಾಗಿ ಪೀಡಿಸಬಹುದು. ವಂಚನೆಗೆ ಗೊತ್ತಾಗದಂತೆ ಸಿಕ್ಕಿಕೊಳ್ಳಬೇಕಾದೀತು. ನಿಮ್ಮ ಸ್ಥಾನಕ್ಕೆ ಯೋಗ್ಯವಾದ ಮಾತು ಇರಲಿ. ಸ್ತ್ರೀಯರಿಗೆ ಆತ್ಮರಕ್ಷಣೆಯ ಆತಂಕ ಉಂಟಾಗುವುದು. ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕಾಗವುದು. ಯಾರ ಸಲಹೆ ಪಡೆಯದೇ ಮನಸ್ಸಿಗೆ ಬಂದಂತೆ ವ್ಯವಹರಿಸುವುದನ್ನು ಬಿಡಿ. ಸಂಗಾತಿಯ ಆರೋಗ್ಯದ ಬಗ್ಗೆ ಅಧಿಕ ಲಕ್ಷ್ಯ ಅವಶ್ಯಕ. ನಿಮ್ಮವರಿಂದ ನಿಮಗೆ ಭಯವನ್ನು ಕಾಡಬಹುದು.
ಸಿಂಹ ರಾಶಿ: ನಿಮಗಿಂದು ದುರ್ಬಲರಿಗೆ ಸಾಂತ್ವನ ಹೇಳಿದ ಪುಣ್ಯ ಬರುವುದು. ಇಂದು ಆರ್ಥಿಕ ಸುಭದ್ರತೆಯ ಬಗ್ಗೆ ಯಾರದ್ದಾದರೂ ಸಲಹೆಗಾರ ಪಡೆಯುವುದು ಉತ್ತಮ. ಮನಸೋ ಇಚ್ಛೆ ವ್ಯಕ್ತಪಡಿಸಿ ವ್ಯವಹಾರವನ್ನು ಮಾಡಲು ನಿಮಗೆ ಆಗದು. ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ತಡೆಗಟ್ಟಲು ಕೆಲಸದಲ್ಲಿ ಅತಿಯಾದ ದೃಢತೆಯನ್ನು ತಪ್ಪಿಸಿ. ಸಣ್ಣ ವ್ಯಾಪಾರವು ಅಧಿಕಫಲವನ್ನು ಕೊಡುವುದು. ಕೆಟ್ಟ ಅಭ್ಯಾಸಕ್ಕೆ ಹಣವನ್ನು ಖರ್ಚು ಮಾಡುವಿರಿ. ನಿಮ್ಮ ಸರಳ ಉಪಾಯವನ್ನು ಕಾರ್ಯದಲ್ಲಿ ಹಾಕುವಿರಿ. ಹಣವನ್ನು ಅಜಾಗರೂಕತೆಯಿಂದ ಕಳೆದುಕೊಳ್ಳಬೇಕಾಗುವುದು. ಸಿಟ್ಟನ್ನು ಎಲ್ಲರೆದುರು ಹೊರಹಾಕುವುದು ಬೇಡ. ನಿಮ್ಮ ಮಾತು ಸಂಗಾತಿಯನ್ನು ಮೌನಿಯನ್ನಾಗಿ ಮಾಡುವುದು. ನೀವು ಮನೆಯ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕಾದೀತು. ಅತಿಯಾದ ಮಾತಿನಿಂದ ಇತರರಿಗೆ ಕಷ್ಟವಾದೀತು. ಮನೆಯ ಕಾರ್ಯವು ನಿಮಗೆ ತೃಪ್ತಿ ಕೊಡುವುದು. ಉಪಕಾರದ ಸ್ಮರಣೆಯನ್ನು ನೀವು ಇಟ್ಟುಕೊಳ್ಳುವುದು ಅನಿವಾರ್ಯ. ನಿಮ್ಮ ಬಗ್ಗೆ ನಿಮಗೆ ಇರಲೇಬೇಕಾದ ಕೆಲವು ವಿಚಾರಗಳನ್ನು ರೂಢಿಸಿಕೊಳ್ಳಿ.
ಕನ್ಯಾ ರಾಶಿ: ನೀವು ಇತರರಿಗೆ ಸುಲಭವಾಗಿ ಸಿಗುವುದು ಸಂಗಾತಿಗೆ ಇಷ್ಟವಾಗದು. ದೇಹದ ಯಾವುದೋ ಒಂದು ಭಾಗಕ್ಕೆ ಹೊಕ್ಕ ವಿಷವು ಇಡೀ ದೇಹವನ್ನು ನಾಶ ಮಾಡುವಂತೆ ಕುಟುಂಬಕ್ಕೆ ಹೊಕ್ಕ ಕೆಟ್ಟ ವಿಚಾರಗಳು ಕುಟುಂಬವನ್ನೇ ನಾಶ ಮಾಡಲು ಸಾಕು. ಯಾರಿಗೆ ಎಷ್ಟು ಪ್ರಾಮುಖ್ಯ ಕೊಡಬೇಕು ಎನ್ನುವುದನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಮುನ್ನುಗ್ಗಿ ನಡೆಯುವುದು ಸರಿಯಾದರೂ, ದಾರಿ ಹೇಗಿದೆ ಎಂಬುದನ್ನು ಗಮನಿಸಬೇಕಾಗುವುದು. ಪುಣ್ಯಸ್ಥಳಕ್ಕೆ ಏಕಾಂಗಿಯಾಗಿ ಹೋಗುವುದು ಬೇಡ. ಇನ್ನೊಬ್ಬರನ್ನು ಕಂಡು ಕೊರಗುವುದು ಬೇಡ. ನಿಮ್ಮ ತಪ್ಪನ್ನು ಒಪ್ಪಿಕೊಂಡು ಹೊಂದಾಣಿಕೆ ಮಾಡಿಕೊಳ್ಳುವಿರಿ. ನಿಮ್ಮ ಆಲೋಚನೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ. ಚಾಂಚಲ್ಯದ ಕಾರಣ ಉದ್ಯೋಗದಲ್ಲಿಯೂ ಸರಿಯಾದ ಏಕಾಗ್ರತೆಯಿಂದ ಕೆಲಸವನ್ನು ಮಾಡಲಾಗದು. ಸಾಮಾಜಿಕವಾಗಿ ಕಾರ್ಯಗಳಿಗೆ ನಿಮ್ಮ ಹಣವನ್ನೇ ಬಳಸುವಿರಿ. ಯಾವ ವಿರೋಧವನ್ನು ಸಹಿಸುವ ಮನಃಸ್ಥಿತಿ ಇಂದು ನಿಮಗೆ ಇರದು.
Published On - 12:10 am, Mon, 24 March 25