
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ಹರ್ಷಣ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ ಸಂಜೆ 05:17 ರಿಂದ 06:53ರ ವರೆಗೆ, ಯಮಘಂಡ ಕಾಲ 12:29 ರಿಂದ ಮಧ್ಯಾಹ್ನ 02:05ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:41 ರಿಂದ ಸಂಜೆ 05:17ರ ವರೆಗೆ.
ಸಿಂಹ ರಾಶಿ: ನೀವು ಮನಸ್ಸಿಗೆ ಹಿಡಿಸದ ಸಂಗತಿಗಳ ವಿರುದ್ಧ ಧೈರ್ಯವಾಗಿ ನಿಲ್ಲುವ ಸಾಮರ್ಥ್ಯ ಇರುವುದು. ನಿಮ್ಮ ಪ್ರಾಮಾಣಿಕ ಪ್ರಯತ್ನಗಳು ಫಲ ನೀಡುತ್ತವೆ. ಸಮೀಪದ ಸಂಬಂಧಿಗಳ ಆರೋಗ್ಯದಲ್ಲಿ ಸುಧಾರಣೆಯು ಕಾಣಬಹುದು. ಭಾವೋದ್ವೇಗಕ್ಕೆ ಒಳಗಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಡಿ. ಸಮಯದ ಅಭಾವದಿಂದ ನೀವು ಅದನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ರಾಜಕೀಯ ಪ್ರೇರಿತದಿಂದ ನಿಮ್ಮ ಬಗ್ಗೆ ಸುಳ್ಳು ಸುದ್ದಿಗಳು ಬರಬಹುದು. ಪ್ರಭಾವೀ ಜನರು ನಿಮ್ಮನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಕಾರ್ಯವನ್ನು ಸಾಧಿಸಿಕೊಳ್ಳುವರು. ಮಕ್ಕಳ ಏಳಿಗೆಯಲ್ಲಿ ನಿಮಗೆ ಸಂತೋಷ ಇರುವುದು. ನಿಂದನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ. ರಕ್ಷಣೆಯ ಸ್ಥಾನದಲ್ಲಿ ಇರುವವರಿಗೆ ಭಯವಿರುವುದು. ಸಂಕಟವನ್ನು ಪರಿಹರಿಸಿಕೊಳ್ಳಲು ಮಾರ್ಗವು ಸಿಗದೇ ಹೋಗಬಹುದು.
ಕನ್ಯಾ ರಾಶಿ: ಇಂದು ಕುಟುಂಬವನ್ನು ಆರ್ಥಿಕವಾಗಿ ಗಟ್ಟಿ ಮಾಡುವ ಬಗ್ಗೆ ಯೋಚನೆ ಇರುವುದು. ಸಮಯದಲ್ಲಿ ನೀವು ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಿರಿ. ಇಂದು ಸಮಯವನ್ನು ವ್ಯರ್ಥ ಮಾಡಬೇಡಿ. ನಿಮ್ಮ ಆಲೋಚನೆಗಳಿಗೆ ಆದ್ಯತೆ ನೀಡಿ. ಈ ಸಮಯದಲ್ಲಿ ವ್ಯಾಪಾರದಲ್ಲಿ ಕೆಲವು ಹೊಸ ಕೊಡುಗೆಗಳು ಇರಬಹುದು. ಹೆಚ್ಚು ಯೋಚಿಸಿ ಸಮಯ ವ್ಯರ್ಥ ಮಾಡಬೇಡಿ. ವಾತಾವರಣದ ಬದಲಾವಣೆಯಿಂದ ಆರೋಗ್ಯವು ಹಾಳಾಗಬಹುದು. ನಾನಾ ರೀತಿಯಲ್ಲಿ ಹೂಡಿಕೆಯನ್ನು ಮಾಡುವ ಮನಸ್ಸಾಗುವುದು. ಸ್ವಾಭಿಮಾನವನ್ನು ಬಿಟ್ಟು ಇರುವುದು ಅಸಾಧ್ಯ ಎನಿಸಬಹುದು. ಕೆಲವರಿಂದ ತಪ್ಪಿಸಿಕೊಳ್ಳಲು ನೋಡುವಿರಿ. ಅನಾರೋಗ್ಯವು ನೆಪವಾಗಬಹುದು. ಯಾವುದೋ ಕಾರ್ಯಕ್ಕೆ ಸಹಾಯವು ಸಿಗದೇ ಕಷ್ಟವಾಗುವುದು. ಸ್ತ್ರೀಯರಿಗೆ ಸಹಾಯ ಮಾಡಲು ಹೋಗಿ ಹಾಸ್ಯಕ್ಕೆ ಒಳಗಾಗುವಿರಿ. ಹೂಡಿಕೆಯನ್ನು ಮಾಡುವುದು ನಿಮಗೆ ಅನಿವಾರ್ಯವಾಗಬಹುದು.
ತುಲಾ ರಾಶಿ: ಇಂದು ನೀವು ಹಿಂದೆ ಪಡೆದ ಸಾಲವನ್ನು ಬೇರೆ ರೀತಿಯಲ್ಲಿ ಹಿಂದಿರುಗಿಸುವಿರಿ. ಸಮಯದಲ್ಲಿ ಅಹಿತಕರ ಸುದ್ದಿಗಳ ಸೂಚನೆಗಳೂ ಇವೆ. ಇಂದು ಮನಸ್ಸಿನಲ್ಲಿ ಭಯ ಮತ್ತು ಖಿನ್ನತೆಯಂತಹ ವಿಷಯಗಳಿಗೆ ಕಾರಣವಾಗಬಹುದು. ಸ್ನೇಹಿತರೊಂದಿಗೆ ಯಾವುದೇ ರೀತಿಯ ಸಹಯೋಗವನ್ನು ನಿರೀಕ್ಷಿಸಬೇಡಿ. ಸಂಗಾತಿಯ ಮತ್ತು ಕುಟುಂಬದ ಸದಸ್ಯರ ಸಹಕಾರವು ಇರಲಿದೆ. ಹೊಸತನ್ನು ಕಲಿಯುವ ಉತ್ಸಾಹವಿರಲಿದೆ. ನಿಮಗೆ ಧನಾತ್ಮಕ ಶಕ್ತಿಯನ್ನು ಪಡೆಯುವ ತಂತ್ರವು ತಿಳಿದಿರುತ್ತದೆ. ಭೂಮಿಯನ್ನು ಖರೀದಿಸುವ ಸಂದರ್ಭ ಬಂದರೂ ಪೂರ್ತಿ ಹಣವನ್ನು ಸೇರಿಸಲು ಆಗದು. ಯಾರ ಬಳಿಯೂ ಕೆಲಸವಿಲ್ಲ ಎಂದು ಹೇಳಬೇಡಿ. ಯಾರ ತಪ್ಪನ್ನೂ ನೇರವಾಗಿ ಹೇಳದೇ ಅರ್ಥ ಮಾಡಿಸಿ, ತಿದ್ದಿ. ನಿಮ್ಮ ಘನತೆಗೆ ಧಕ್ಕೆ ಬರುವುದು. ಸಹೋದ್ಯೋಗಿಗಳ ಜೊತೆ ಎಲ್ಲಿಗಾದರೂ ಪ್ರಯಾಣ ಮಾಡುವಿರಿ. ಸಮಯಪಾಲನೆಗೆ ಪ್ರಶಂಸೆಯು ಸಿಗುವುದು.
ವೃಶ್ಚಿಕ ರಾಶಿ: ಇಂದು ಭೇಟಿಯಾಗುವ ವ್ಯಕ್ತಿಗಳು ನಿಮ್ಮೊಳಗೆ ಧನಾತ್ಮಕ ಶಕ್ತಿಯನ್ನು ತುಂಬಿಸುವರು. ಕೆಲವು ವೈಫಲ್ಯಗಳು ನಿಮಗೆ ಪಾಠವಾಗಿ ಕಲಿಯಬೇಕು. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ಅಪರಿಚಿತ ಸ್ನೇಹಿತರ ಜೊತೆ ಹೆಚ್ಚು ಹತ್ತಿರವಾಗಬೇಡಿ. ನಿಮ್ಮ ವೈಯಕ್ತಿಕ ಕಾರ್ಯಗಳ ಮೇಲೆ ಗಮನವಿರಲಿ. ಪುಣ್ಯಕ್ಷೇತ್ರಗಳಿಗಾಗಿ ದೂರ ಪ್ರಯಾಣ ಮಾಡಬಹುದು. ಉದ್ಯೋಗವು ಅನುಕೂಲಕರವಾಗಿರುತ್ತದೆ. ಉದ್ಯಮದಲ್ಲಿ ಚಿಂತಿತ ಲಾಭ ಕಾಣದೇ ಚಿಂತೆಯಾಗುವುದು. ಉತ್ಸಾಹದಿಂದ ಇರಲು ನಿಮಗೆ ಮಾರ್ಗಗಳೂ ಕಡಿಮೆ ಇರಬಹುದು. ಇಷ್ಟವಿಲ್ಲದಿದ್ದರೂ ಉದ್ಯೋಗಕ್ಕೆ ತೆರಳಬೇಕಾದೀತು. ಉದ್ಯೋಗವನ್ನು ಬದಲಿಸುವ ಮೊದಲು ಸ್ನೇಹಿತರ ಸಲಹೆಯನ್ನು ಪಡೆಯುವಿರಿ. ಸಣ್ಣ ಕೆಲಸವಾದರೂ ಶ್ರದ್ಧೆಯಿಂದ ಮಾಡುವಿರಿ. ನಿಮ್ಮ ಹೆಚ್ಚಿನವರ ಭೇಟಿಯಾಗುವುದು. ಸಣ್ಣ ಉದ್ಯಮಿಗಳು ಬಂದ ಕೆಲಸವನ್ನು ಬಿಡದೇ ಮಾಡಬೇಕು.