AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಕನ್ನಡ ರಾಜ್ಯೋತ್ಸವದಂದು ಯಾವ ರಾಶಿಗೆ ಒಲಿಯಲಿದೆ ಅದೃಷ್ಟ ತಿಳಿಯಿರಿ

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಷಷ್ಠೀ ತಿಥಿಯ ಭಾನುವಾರದಂದು ವಿದೇಶ ಪ್ರವಾಸ, ಮುಖವಾಡ ಬಯಲು, ಮಾನಸಿಕ ತೊಂದರೆ, ಶಂಸೆಯೂ ಅಪಹಾಸ್ಯ, ಉದಗವೇಗಕ್ಕೆ ಒಳಗಾಗುವುದು, ಅಶಾಂತಿ, ಆಹಾರಾಭಾವ, ಕಲಹದಿಂದ ಧನಸ್ವೀಕಾರ ಇವೆಲ್ಲ ಇಂದಿನ ಭವಿಷ್ಯ.

ದಿನ ಭವಿಷ್ಯ: ಕನ್ನಡ ರಾಜ್ಯೋತ್ಸವದಂದು ಯಾವ ರಾಶಿಗೆ ಒಲಿಯಲಿದೆ ಅದೃಷ್ಟ ತಿಳಿಯಿರಿ
ದಿನ ಭವಿಷ್ಯImage Credit source: Getty images
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Nov 01, 2026 | 1:02 AM

Share

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಸ್ವಾತಿ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಪುಷ್ಯಾ, ಯೋಗ : ಸಿದ್ಧ, ಕರಣ : ಭದ್ರ, ಸೂರ್ಯೋದಯ – 06 – 14 am, ಸೂರ್ಯಾಸ್ತ – 05 – 51 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:25 – 17:52 ಯಮಗಂಡ ಕಾಲ 12:03 – 13:30, ಗುಳಿಕ ಕಾಲ 14:57 – 16:25.

ಮೇಷ ರಾಶಿ: ಮನಸ್ಸು ಬಿಚ್ಚಿ ಇಂದು ನೀವು ಯಾವ ಕಾರ್ಯವನ್ನೂ ಮಾಡುವುದಿಲ್ಲ. ಎಲ್ಲದಕ್ಕೂ ನಿಮ್ಮೊಳಗೆ ಭಯವಿರುವುದು. ಅತಿಯಾದ ಸುಖವು ನಿಮ್ಮ‌ ಕ್ರಿಯಾತ್ಮಕತೆಯನ್ನು ಕೊಲ್ಲುವುದು. ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವುದು ನಿಮ್ಮ ಸ್ವಭಾವವಗಳಲ್ಲಿ ಒಂದು. ಆಯುಧವನ್ನು ಬಹಳ ಜಾಗರೂಕತೆಯಿಂದ ಬಳಸಿ. ಸಂಗಾತಿಯ ಮೇಲೆ ನಿಮಗೆ ಅನುಮಾನ ಹೊಗೆ ಕಾಣಿಸಬಹುದು. ಪ್ರೇಮವು ಕೌತುಕರಹಿತವಾದ ಕಾರಣ ಮುರಿದು ಹೋಗುವ ಸಾಧ್ಯತೆ ಇದೆ.

ವೃಷಭ ರಾಶಿ: ಕೆಲವು ಪ್ರತಿನಿಧಿಗಳಿಂದ ನಿಮಗೆ ಮಾನಸಿಕ ತೊಂದರೆಯಾಗಲಿದೆ. ಸಹೋದರರ ಶೀತಲ ಸಮರವು ಇಂದು ಎಲ್ಲರಿಗೂ ತಿಳಿಯಬಹುದು. ವ್ಯಾಪಾರವನ್ನು ನಿರ್ಲಕ್ಷ್ಯದಿಂದ ನಷ್ಟ ಮಾಡಿಕೊಳ್ಳುವಿರಿ. ಬಂಧುಗಳ ಮನೆಯಲ್ಲಿ ವಾಸಮಾಡಬೇಕಾದ ಸ್ಥಿತಿಯು ಬರಬಹುದು. ರಾಜಕೀಯದ ಹೊಡೆತದ ನೋವು ಬಾಧಿಸುವುದು. ಹೊಗಳಿಕೆಯಿಂದ ನಿಮ್ಮ ದುಃಖಕ್ಕೆ ವಿರಾಮ ಸಿಗುವುದು. ನಿಮ್ಮನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು. ಉದಗವೇಗಕ್ಕೆ ಒಳಗಾಗದೇ ಇರಲು ನೀವು ಪ್ರಯತ್ನಿಸುವಿರಿ.

ಮಿಥುನ ರಾಶಿ: ನೀವು ಇಂದು ಆಡಿದ ದುಡುಕಿನ ಮಾತಿನಿಂದ ನಿಮ್ಮ ನೆಮ್ಮದಿ ಕೆಡುವುದು. ವಿದ್ಯಾಭ್ಯಾಸದಲ್ಲಿ ಒಂದು ಮಟ್ಟಿನ ಪ್ರಗತಿಯು ಇರಲಿದೆ. ಹಣದ ಹೊಂದಾಣಿಕೆಯು ಇಂದು ಕಷ್ಟವಾಗಬಹುದು. ವ್ಯಾವಹಾರಿಕ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗಲಿದೆ. ಇಂದಿನ ಕೆಲವು ಸಂದರ್ಭವನ್ನು ನೀವು ನಿಭಾಯಿಸಲು ಕಷ್ಟವಾದೀತು. ಅತಿಯಾದ ಕೋಪವು ನಿಮ್ಮ ದಿನವನ್ನು ಕೆಡಿಸುವುದು. ವಾಹನವನ್ನು ಬಹಳ ಎಚ್ಚರಿಕೆಯಿಂದ ಚಲಾಯಿಸಿ.

ಕರ್ಕಾಟಕ ರಾಶಿ: ನಿಮ್ಮ ಬದಲಾವಣೆಯನ್ನು ಕುಟುಂಬವು ಸ್ವೀಕರಿಸುವುದು ಕಷ್ಟ. ಬಂಧುಗಳ ಸ್ಥಿರಾಸ್ತಿಯ ಖರೀದಿಯನ್ನು ಮಾಡಲಿದ್ದೀರಿ. ಆರಂಭಿಸಿದ ಕಾರ್ಯವು ಪೂರ್ಣ ಸಫಲವಾಗುವವರೆಗೂ ನೀವು ನಿಲ್ಲಿಸುವುದಿಲ್ಲ. ನಿಮ್ಮ ಗಾಂಭಿರ್ಯವು ನಿಮ್ಮರಿಗೆ ಭಯವನ್ನು ತರಿಸುವುದು. ಮಾತು ಬಲ್ಲವರನ್ನು ಸೋಲಿಸಿ ಆನಂದಿಸುವಿರಿ. ಯಾವುದನ್ನೂ ಆಗದು ಎಂಬ ಮಾತು ನಿಮ್ಮಿಂದ ಬರುವುದು ಬೇಡ. ಒಳ್ಳೆಯದರ ನಿರೀಕ್ಷೆಯಿಂದ ನಿಮಗೆ ಸಂತೋಷವಿದೆ.

ಸಿಂಹ ರಾಶಿ: ಎಂದೇ ಆದ ಪರಿಚಯದಿಂದ ನಿಮಗೆ ಸಹಾಯವಾಗಲಿದೆ. ವ್ಯವಹಾರವನ್ನು ತೂಗಿಸಿಕೊಂಡು ಹೋಗುವ ತಂತ್ರಗಳನ್ನು ಅರಿಯುವುದು ಉತ್ತಮ. ಉದ್ಯೋಗದ ನಿಮಿತ್ತ ಹೆಚ್ಚು ತಿರುಗಾಟವು ಆಗಲಿದೆ. ಸಂಗಾತಿಯ ಮಾತುಗಳು ನಿಮ್ಮ‌ ಸ್ವಾಭಿಮಾನಕ್ಕೆ ತೊಂದರೆಯನ್ನು ಉಂಟುಮಾಡುವುದು. ನಿಮ್ಮ ವ್ಯಾಕುಲತೆಯನ್ನು ಒಳಗೇ ಬಂಧಿಸಿಟ್ಟುಕೊಳ್ಳುವಿರಿ. ನಿಮ್ಮ ಸ್ವಭಾವವು ದುರುಪಯೋಗ ಆಗುವುದು. ಕೃಷಿಯಲ್ಲಿ ಸಾಧಿಸಿದ ಖುಷಿ ಇರಲಿದೆ. ಅಕಾರಣವಾಗಿ ದುಃಖದ ಸನ್ನಿವೇಶಗಳು ಎದುರಾಗಬಹುದು.

ಕನ್ಯಾ ರಾಶಿ: ಆರ್ಥಿಕತೆಯನ್ನು ನೀವು ಬಲಗೊಳಿಸಿಕೊಳ್ಳುವಿರಿ. ದುರಭ್ಯಾಸದಿಂದ ಧನನಷ್ಟವನ್ನು ಮಾಡಿಕೊಳ್ಳುವಿರಿ. ಮಿತ್ರರಿಂದ ನಿಮಗೆ ಮೋಸವಾಗುವುದು. ವ್ಯಾವಹಾರಿಕ ಸಂಬಂಧಗಳನ್ನು ಹಾಗೆಯೇ ಉಳಿಸಿಕೊಳ್ಳಿ. ಧಾರ್ಮಿಕ ವಿಚಾರದಲ್ಲಿ ನೀವು ಹೆಚ್ಚು ತಿಳಿವಳಿಕೆಯು ಇರಲಿದೆ. ವಿನ್ಯಾಸಕಾರರಿಗೆ ಇಂದು ಬಿಡುವು ಇರದು. ಸಹೋದ್ಯೋಗಿಯ ಜೊತೆ ಪ್ರೇಮವಾಗುವುದು. ಪೆಟ್ಟು ತಿನ್ನದ ಶಿಲೆಯು ಶಿಲ್ಪವಾಗದು ಎಂಬ ಮಾತು ನೆನಪಿರಲಿ.

ತುಲಾ ರಾಶಿ: ಇಂದು ನಿಮ್ಮ ಮನಸ್ಸನ್ನು ಒಂದೇ ಕಾರ್ಯದಲ್ಲಿ ನಿಲ್ಲಿಸಲಾಗದು. ನಾಜೂಕಾದ ಕಾರ್ಯಗಳಿಗೆ ನಿಮಗೆ ಪ್ರಶಂಸೆಯೂ ಅಪಹಾಸ್ಯವೂ ಸಿಗಲಿದೆ. ಕೋಪದಿಂದ ನಿಮ್ಮ‌ ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ಕುಟುಂಬದ ಕಲಹಕ್ಕೆ ಹೆದರಿ ಹೊಸ ಜೀವನವನ್ನು ನಡೆಸಲು ಇಚ್ಛಿಸುವಿರಿ. ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಗುವುದು. ನಿಮ್ಮ ಅಭಿರುಚಿಗೆ ಪ್ರೋತ್ಸಾಹವು ಸಿಗಲಿದೆ. ಅದಕ್ಕೆ ಇಂದು ಪಶ್ಚಾತ್ತಾಪವನ್ನು ಅನುಭವಿಸುವಿರಿ.

ವೃಶ್ಚಿಕ ರಾಶಿ: ಜಾಣ್ಮೆಯಿಂದ ಮಾಡುವ ಸರ್ಕಾರದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಸ್ವಂತ ವಾಹನದ ದುರಸ್ತಿಯ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಬರುವ ಅಡೆತಡೆಗಳನ್ನು ನೀವು ಧೈರ್ಯವಾಗಿ ಎದುರಿಸುವಿರಿ. ಕೆಲವನ್ನು ಉದ್ವಿಗ್ನತೆಯಿಂದ ಮಾಡುವಿರಿ. ಒಂದೇ ವಿಚಾರವನ್ನು ಮತ್ತೆ ಹೇಳಿ ಹಿಂಸಿಸುವುದು ಬೇಡ. ತಾನು ಕಂಡಿದ್ದು ಮಾತ್ರ ಸರಿ ಎಂಬ ವಾದವು ನಿಮ್ಮವರಿಗೆ ಬೇಸರ ತರಿಸೀತು. ದಾಂಪತ್ಯದಲ್ಲಿ ಉಂಟಾದ ಕಲಹವು ಮಕ್ಕಳ‌ ಮೇಲೆ ಪ್ರಭಾವವನ್ನು ಬೀರುವುದು.

ಧನು ರಾಶಿ: ಆರ್ಥಿಕಸ್ಥಿತಿಯಲ್ಲಿ ಚೇತರಿಕೆ ಇರಲಿದೆ‌. ಮಹಿಳೆಯರಿಗೆ ಹೆಚ್ಚಿನ ಸಹಕಾರವು ಸಿಕ್ಕಿ ಇಂದಿನ‌ ಕಾರ್ಯವು ಅನಾಯಾಸವಾಗಿ ಮುಗಿಯುವುದು. ಉನ್ನತ ಅಧಿಕಾರದ ಆಸೆಯನ್ನು ಆಪ್ತರು ನಿಮ್ಮೊಳಗೆ ತುಂಬುವರು. ಅನಪೇಕ್ಷಿತ ಮಾತುಗಳಿಂದ ನಿಮ್ಮ ಸಮಯವು ವ್ಯರ್ಥವಾಗಬಹುದು. ನಿಮ್ಮ ಭಾವವನ್ನು ಯಾರೂ ಅರ್ಥಮಾಡಿಕೊಳ್ಳಲಾರರು. ನಿಮ್ಮ ಉದ್ದೆಶವು ದಾರಿ ತಪ್ಪುವ ಸಾಧ್ಯತೆ ಇದೆ. ಖುಷಿಪಡುವ ಸಂಗತಿಗಳಿದ್ದರೂ ದುಃಖಿಗಳಾಗುವ ಸಾಧ್ಯತೆ ಇದೆ.

ಮಕರ ರಾಶಿ: ಊಹಿಸದ ಘಟನೆಗಳು ನಿಮ್ಮ ಜೀವನದಲ್ಲಿ ನಡೆಯಬಹುದು. ಗಣ್ಯರ ಭೇಡಿಯಾಗಲಿದೆ. ಅಧಿಕಾರಿಗಳ ಜೊತೆ ಉದ್ಯೋಗದ ವಿಚಾರವನ್ನು ಚರ್ಚಿಸುವಿರಿ. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಬರುವುದು ನಿಮಗೆ ಕಷ್ಟವಾಗುವುದು. ಸಂಗಾತಿಯಿಂದ ಮಾನಸಿಕ ಒತ್ತಡ ಎನಿಸಬಹುದು. ಯಾರನ್ನು ಬೆರಳು ಮಾಡಿ ತೋರಿಸಬೇಡಿ. ನಿಮ್ಮ ಕೊರತೆಯನ್ನು ನೀವು ಮುಚ್ಚಿಡುವಿರಿ. ಬೇರೆಯವರ ತಪ್ಪಿನಿಂದ ನಿಮಗೆ ತೊಂದರೆಗಳು ಆಗಬಹುದು.

ಕುಂಭ ರಾಶಿ: ನಿಮ್ಮ ಸ್ಥಿತಿಯನ್ನು ಕೆಲವರು ಆಡಿಕೊಂಡಾರು. ನಿಮ್ಮದಾದ ವಸ್ತುವನ್ನು ನೀವು ಪಡೆಯಲು ಕಷ್ಟವಾಗುವುದು. ದೇವತಾಕಾರ್ಯದಲ್ಲಿ ಆಸಕ್ತಿ ಕಡಿಮೆ ಇದ್ದರೂ ಅನವಾರ್ಯವಾಗುವುದು. ಆರ್ಥಿಕತೆಯ ಬಗ್ಗೆ ನಿಮ್ಮನ್ನು ಯಾರಾದರೂ ಪ್ರಶ್ನಿಸಬಹುದು. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಮಾಹಿತಿ ಇರಲಿ. ಹಳೆಯ ನೆನಪುಗಳನ್ನು ನಿಮ್ಮನ್ನು ಕಾಡಬಹುದು. ಯಾವುದಾದರೂ ಘಟನೆಯು ನಿಮ್ಮನ್ನು ಇಂದು ಹೆಚ್ಚು ಕಾಡಬಹುದು. ತಾಯಿಯಿಂದ ನಿಮಗೆ ಏನಾದರೂ ಉಡುಗೊರೆಯಾಗಿ ಸಿಗಬಹುದು.

ಮೀನ ರಾಶಿ: ತಾಳ್ಮೆಯಿಂದ ಕೆಲಸಗಳನ್ನು ಪೂರ್ಣ ಮಾಡಿ ನೀವು ಯಶಸ್ವಿಯಾಗುವಿರಿ. ಶುಭಾಶುಭಗಳಿಗೆ ಎಲ್ಲದಕ್ಕೂ ಕಾರಣವು ಇರಲಿದೆ. ಅನಾಯಾಸವಾಗಿ ಸಿಕ್ಕ ಅವಕಾಶಗಳು ನಿಮಗೆ ಇಷ್ಟವಾಗದು. ಯಾರ ಪ್ರಭಾವವನ್ನೂ ನೀವು ಬಳಸಿಕೊಳ್ಳಲು ಇಷ್ಟಪಡುವುದಿಲ್ಲ. ಉದ್ಯೋಗದ ದೃಢತೆಯನ್ನು ನೀವು ಸಾಬೀತುಮಾಡಿಸಿಕೊಳ್ಳುವಿರಿ. ಸುಳ್ಳಾಡುವವರ ಮೇಲೆ ಅತಿಯಾದ ಕೋಪ ತೋರಿಸುವಿರಿ. ನಿಮ್ಮ ಯೋಜನೆಗಳು ಎಣಿಸಿದಂತೆ ಆಗದೇ ಇರಬಹುದು.

ಲೋಹಿತ್ ಹೆಬ್ಬಾರ್ – 8762924271 (what’s app only)

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ಧನುಷ್‌ಗೆ ಮೀಟರ್ ಇಲ್ಲ; ಸೌಂದರ್ಯಾ ಮಾತಿಗೆ ಹೊತ್ತಿ ಉರಿದ ಮನೆ
ಧನುಷ್‌ಗೆ ಮೀಟರ್ ಇಲ್ಲ; ಸೌಂದರ್ಯಾ ಮಾತಿಗೆ ಹೊತ್ತಿ ಉರಿದ ಮನೆ
ಜಿಲ್ಲೆ ಜಿಲ್ಲೆಯಲ್ಲೂ ಕಬ್ಬು ಬೆಳೆಗಾರರ ಕಿಚ್ಚು: ರಾಜ್ಯಾದ್ಯಂತ ಹೋರಾಟ
ಜಿಲ್ಲೆ ಜಿಲ್ಲೆಯಲ್ಲೂ ಕಬ್ಬು ಬೆಳೆಗಾರರ ಕಿಚ್ಚು: ರಾಜ್ಯಾದ್ಯಂತ ಹೋರಾಟ
ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ
ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ಪುಷ್ಪ ನಮನ
ಗುಜರಾತ್‌ನಲ್ಲಿ 400 ಕೋಟಿಗೂ ಅಧಿಕ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ
ಗುಜರಾತ್‌ನಲ್ಲಿ 400 ಕೋಟಿಗೂ ಅಧಿಕ ವೆಚ್ಚದ ಯೋಜನೆಗಳಿಗೆ ಮೋದಿ ಚಾಲನೆ
ದಾಖಲೆ ಇಲ್ಲದ ಜಮೀನಿಗೆ ಇ-ಸ್ವತ್ತು: ಗ್ರಾಮೀಣ ಭಾಗದ ಜನರಿಗೆ ಗುಡ್​ ನ್ಯೂಸ್
ದಾಖಲೆ ಇಲ್ಲದ ಜಮೀನಿಗೆ ಇ-ಸ್ವತ್ತು: ಗ್ರಾಮೀಣ ಭಾಗದ ಜನರಿಗೆ ಗುಡ್​ ನ್ಯೂಸ್
ಬೆನ್ನಹಿಂದೆ ಚಾಕು ಹಾಕಿದ ಯಶಸ್; ಸುದೀಪ್ ಎದುರೇ ಎದ್ದು ನಡೆದ ಸೌಂದರ್ಯಾ
ಬೆನ್ನಹಿಂದೆ ಚಾಕು ಹಾಕಿದ ಯಶಸ್; ಸುದೀಪ್ ಎದುರೇ ಎದ್ದು ನಡೆದ ಸೌಂದರ್ಯಾ
ನದಿ ತಿರುವು ವಿರೋಧಿಸಿ ಸಿಎಂ, ಪ್ರಧಾನಿಗೆ ಪತ್ರ ಬರೆದ ಶಿರಸಿಯ ಶಾಲಾ ಮಕ್ಕಳು
ನದಿ ತಿರುವು ವಿರೋಧಿಸಿ ಸಿಎಂ, ಪ್ರಧಾನಿಗೆ ಪತ್ರ ಬರೆದ ಶಿರಸಿಯ ಶಾಲಾ ಮಕ್ಕಳು
TV9 ಬಿಗ್ ಇಂಪ್ಯಾಕ್ಟ್;ಸೋರುತ್ತಿದ್ದ ಸರ್ಕಾರಿ ಶಾಲೆಗೆ ಬಂತು ಹೊಸ ಮೇಲ್ಛಾವಣಿ
TV9 ಬಿಗ್ ಇಂಪ್ಯಾಕ್ಟ್;ಸೋರುತ್ತಿದ್ದ ಸರ್ಕಾರಿ ಶಾಲೆಗೆ ಬಂತು ಹೊಸ ಮೇಲ್ಛಾವಣಿ
ಜ್ಞಾನಭಾರತಿ ವಿವಿ ಬಳಿ ಸಿಕ್ಕಿದ್ದು ಫೇಕ್​ ಬಾಂಬ್​! ಖಾಲಿ ಪೈಪ್ ಪತ್ತೆ
ಜ್ಞಾನಭಾರತಿ ವಿವಿ ಬಳಿ ಸಿಕ್ಕಿದ್ದು ಫೇಕ್​ ಬಾಂಬ್​! ಖಾಲಿ ಪೈಪ್ ಪತ್ತೆ
ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ; ಕರವೇ ನಾರಾಯಣ ಗೌಡ ಹೇಳಿದ್ದೇನು?
ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ; ಕರವೇ ನಾರಾಯಣ ಗೌಡ ಹೇಳಿದ್ದೇನು?