ನಿತ್ಯ ಭವಿಷ್ಯ: ಇಂದು ಈ ರಾಶಿಯವರು ಖಿನ್ನತೆಯಿಂದ ಹೊರಬರುವುದು ಕಷ್ಟವಾಗಲಿದೆ…

ಅಕ್ಟೋಬರ್ 6, 2026 ರ ಇಂದಿನ ರಾಶಿ ಭವಿಷ್ಯವು ಪ್ರತಿಯೊಂದು ರಾಶಿಯವರಿಗೂ ವೃತ್ತಿ, ಹಣಕಾಸು, ಸಂಬಂಧಗಳು ಮತ್ತು ಆರೋಗ್ಯದ ಕುರಿತು ಪ್ರಮುಖ ಸೂಚನೆಗಳನ್ನು ನೀಡುತ್ತದೆ. ಖಿನ್ನತೆಯಿಂದ ಹೊರಬರುವುದು ಕಷ್ಟವಾಗಬಹುದು, ಆದರೆ ಸಕಾರಾತ್ಮಕ ಆಲೋಚನೆ ಮತ್ತು ಸಹಕಾರದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ದೈನಂದಿನ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಈ ಭವಿಷ್ಯ ಮಾರ್ಗದರ್ಶನ ನೀಡಲಿದೆ. ನಿಮ್ಮ ದಿನವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಿ.

ನಿತ್ಯ ಭವಿಷ್ಯ: ಇಂದು ಈ ರಾಶಿಯವರು ಖಿನ್ನತೆಯಿಂದ ಹೊರಬರುವುದು ಕಷ್ಟವಾಗಲಿದೆ...
ಸಾಂದರ್ಭಿಕ ಚಿತ್ರ
Edited By:

Updated on: Oct 06, 2026 | 3:28 AM

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಕೃಷ್ಣ ಪಕ್ಷದ ಏಕಾದಶೀ ತಿಥಿಯ ಮಂಗಳವಾರದಂದು ಅಭ್ಯಾಸಕ್ಕೆ ಏಕಾಗ್ರತೆ, ಕ್ರಿಯಾತ್ಮಕ ಚಟುವಟಿಕೆ, ದೇವರಿಗೆ ಸಮರ್ಪಣೆ, ನೇರ ಮಾತು, ವಿದೇಶದಿಂದ ಆಗಮನ, ಅತಿಯಾದ ಧೈರ್ಯ, ಆರ್ಥಿಕ ಮುನ್ನಡೆ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಹಸ್ತಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಆಶ್ಲೇಷಾ, ಯೋಗ : ಸಿದ್ಧ , ಕರಣ : ಭದ್ರ, ಸೂರ್ಯೋದಯ – 06 – 10 am, ಸೂರ್ಯಾಸ್ತ – 06 – 05 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:06 – 16:36, ಯಮಗಂಡ ಕಾಲ 09:09 – 10:38, ಗುಳಿಕ ಕಾಲ 12:08 – 13:37

ಮೇಷ ರಾಶಿ :
ನಿಮ್ಮ ಮಾತುಗಳೇ ನಿಮಗೆ ತಿರುಗುಬಾಣವಾಗಿ ಬರಬಹುದು. ನೀವು ಇಂದು ವಾಹನಕ್ಕೆ ಸಂಬಂಧಿಸಿದಂತೆ ಹಣವನ್ನು ವ್ಯಯಿಸಬೇಕಾಗಬಹುದು. ನಿಮ್ಮ ಮೇಲೆ ಕೆಟ್ಟ ದೃಷ್ಟಿ ಬೀಳುವ ಸಾಧ್ಯತೆ ಇದೆ. ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಕಡಿಮೆ ಆಗಬಹುದು. ನಿಮಗೆ ಇಂದು ಬಹಳ ಕಾರ್ಯದ ಒತ್ತಡ ಇದ್ದರೂ ನೀವು ನಿಮ್ಮವರಿಗೆ ಸಮಯವನ್ನು ಕೊಡುವಿರಿ. ಯಾರಿಗೋ ಸಹಕರಿಸಲು ನೀವು ಒದ್ದಾಟ ಮಾಡಬೇಕಾಗುವುದು.

ವೃಷಭ ರಾಶಿ :
ಸಂತೋಷ ಪಡಲು ನೀವು ನಿಮ್ಮದೇ ಮಾರ್ಗವನ್ನು ಕಂಡುಕೊಳ್ಳುವಿರಿ. ನೋವನ್ನು ಸ್ವಲ್ಪ ಕಾಲ ಮರೆಯುವಿರಿ. ಅನವಶ್ಯಕ ವಿಚಾರಕ್ಕೆ ನೀವು ಸಮಯವನ್ನು ಕೊಡುವಿರಿ. ಎಲ್ಲವೂ ಸರಿಯಿದ್ದರೂ ತಂದೆಯಿಂದ ನಿಂದನೆಯನ್ನು ಪಡೆಯಬೇಕಾಗುವುದು. ಆಶೀರ್ವಾದವೆಂದು ಭಾವಿಸಿ. ಆರ್ಥಿಕ ಪರಿಸ್ಥಿತಿಯು ಮಧ್ಯಗತಿಯಲ್ಲಿ ಇರಲಿದೆ. ನಿಮ್ಮನ್ನು ಕಂಡು ಅವಮಾನಿಸುವವರಿಗೆ ತಕ್ಕ ಉತ್ತರವನ್ನು ಕೊಡುವಿರಿ.

ಮಿಥುನ ರಾಶಿ :
ಇನ್ನೊಬ್ಬರ ಮಾತನ್ನು ಪೂರ್ಣವಾಗಿ ನಂಬಿ ನಿಮ್ಮವರನ್ನು ಕಳೆದುಕೊಳ್ಳಲಿದ್ದೀರಿ. ನಿಮಗೆ ಇಂದು ಮಕ್ಕಳ ಕಡೆಯಿಂದ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಬೇಸರದಿಂದ ದುಶ್ಚಟಗಳಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಸ್ವಾವಲಂಬನೆಯ ಕಡೆಯೇ ನಿಮ್ಮ ಆಲೋಚನೆಗಳು ಇರಲಿವೆ. ಸಾವಧಾನತೆ ನಿಮಗೆ ವರದಾನವಾಗಿದೆ. ನಿಮ್ಮ ಬಗ್ಗೆ ಅಸೂಯೆ ಬಂದರೆ ಅದಕ್ಕಾಗಿ ಚಿಂತೆ ಬೇಡ. ಉಪಕರಣವನ್ನು ನೀವು ಸದುಪಯೋಗ ಮಾಡಿಕೊಳ್ಳುವಿರಿ.

ಕರ್ಕಾಟಕ ರಾಶಿ :
ಮನಸ್ಸಿನಲ್ಲಿ ಮಾತುಗಳು ಕೊರೆಯಿತ್ತಲೇ ಇರುವುದು. ನೀವು ಬದಲಿಸಿಕೊಂಡ ಜೀವನಶೈಲಿಯ ಬಗ್ಗೆ ಕೆಲಸವರು ಆಡಿಕೊಳ್ಳಬಹುದು. ದಾಂಪತ್ಯದಲ್ಲಿ ವಿರಸದ ಮನೋಭಾವವು ಮುಂದುವರಿಯಬಹುದು. ಹಾಳಾದ ವಸ್ತುವನ್ನು ದುರಸ್ತಿ ಮಾಡಿಕೊಳ್ಳುವಿರಿ. ಇಂದು ನೀವು ಶುಭ ವಾರ್ತೆಯನ್ನು ನಿರೀಕ್ಷಿಸಬಹುದು. ತಮಾಷೆಯ ಮಾತುಗಳಿಂದ ನಿಮಗೆ ಕಷ್ಟವಾದೀತು. ಆದರೆ ದುಂದು ವೆಚ್ಚಗಳನ್ನು ಮಾಡಿಕೊಳ್ಳುವುದು ಬೇಡ. ನಿಮ್ಮ ವರ್ತನೆಯು ಬಹಳ ಅಚ್ಚರಿ ಎನಿಸೀತು.

ಸಿಂಹ ರಾಶಿ :
ಕೆಲಸಗಳಲ್ಲಿ ಹಿನ್ನಡೆಯಾಗಿ ಮೇಲಧಿಕಾರಿಗಳಿಂದ‌ ಸೂಚನೆ ಬರಬಹುದು. ಒರಟು ಮಾತುಗಳಿಂದ ಸುಮ್ಮನಾಗಿ. ಕಛೇರಿಯ ಕೆಲಸದಲ್ಲಿ ವ್ಯತ್ಯಾಸವಾದ ಕಾರಣ ಕಿರಿಕಿರಿಯಿಂದ ಕೋಪ ಉಂಟಾಗಬಹುದು. ಅನಿವಾರ್ಯವಾಗಿ ಕಛೇರಿಯ ಕೆಲಸವನ್ನು ಮಾಡಬೇಕಾಗುವುದು. ನೀವೂ ಬಹಳ ಉತ್ಸುಕರಾಗಿರುವಿರಿ. ವ್ಯಾಪಾರವು ನಿಮಗೆ ಲಾಭಾಂಶವನ್ನು ಕಡಿಮೆ‌ ಮಾಡೀತು. ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಆಲೋಚನೆಯನ್ನು ಮಾಡುವಿರಿ.

ಕನ್ಯಾ ರಾಶಿ :
ವೇಗವಾಗಿ ಸಾಲವನ್ನು ಮುಗಿಸಲು ನೀವು ಪ್ರಯತ್ನಿಸಬೇಕಾದೀತು. ಆಲಸ್ಯದಿಂದ ಹೊರಬಂದು ಆ ಕುರಿತು ಆಲೋಚಿಸಿ. ನಿರ್ಜನ ಪ್ರದೇಶದಲ್ಲಿ ಓಡಾಡುವ ಸ್ಥಿತಿ ಬಂದಿದ್ದು, ಅಭ್ಯಾಸವಿಲ್ಲದ ನಿಮಗೆ ಭಯಾಧಿಕ್ಯ. ಅದೃಷ್ಟವನ್ನು ನಂಬಿ ಕುಳಿತುಕೊಳ್ಳುವುದು ಬೇಡ. ನಿಮ್ಮ ಪ್ರಯತ್ನವೂ ಇರಲಿ. ಇಂದು ನೀವು ಯಾವುದೇ ವೈಯಕ್ತಿಕ ಲಾಭವನ್ನು ನಿರೀಕ್ಷಿಸದೇ ಕೆಲಸವನ್ನು ಮಾಡುವಿರಿ. ಹಿರಿಯರು ನಿಮ್ಮ‌ ಬಗ್ಗೆ ವ್ಯಂಗ್ಯವಾಗಿ ಮಾತನಾಡಬಹುದು. ಉದ್ಯೋಗದ ಕಾರಣ ದೂರ ಪ್ರಯಾಣ ಮಾಡಲು ಇಷ್ಟವಾಗದು.

ತುಲಾ ರಾಶಿ :
ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ದಾಂಪತ್ಯದಲ್ಲಿ ಬಿರುಕು ಬರುವ ಸಾಧ್ಯತೆ ಇದೆ. ಇದು ಮಕ್ಕಳ‌ ಮೇಲೆ ಬೇರೆ ಪರಿಣಾಮವನ್ನು ಬೀರಬಹುದು.
ದೈವದ ಬಗ್ಗೆ ಆಸಕ್ತಿ, ಶ್ರದ್ಧೆ, ಭಕ್ತಿಗಳ ಕೊರತೆ ಇರಲಿದೆ. ಸಂಬಂಧವನ್ನು ಉಳಿಸಿಕೊಳ್ಳಲು ನೀವು ಹಣವನ್ನು ವ್ಯಯಿಸಬೇಕಾಗಬಹುದು. ನೆಮ್ಮದಿ ಬೇಕಾದ ಎಲ್ಲ ಸಂಗತಿಗಳು ಇದ್ದರೂ ಚಿಂತೆ ಕಾಡಿಸಬಹುದು. ಸಕಾರಾತ್ಮಕ ಆಲೋಚನೆ ಇರಲಿ. ಸಮಾರಂಭಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ಹೂಡಿಕೆಯ ವಿಚಾರದಲ್ಲಿ ಸಮಸ್ಯೆಯಾಗಬಹುದು.

ವೃಶ್ಚಿಕ ರಾಶಿ :
ಸಂತರಿಗೆ ಸಮಾನವಾದ ವ್ಯಕ್ತಿಗಳಿಂದ‌ ನಿಮಗೆ ಸಾಂತ್ವನ ಸಿಗಲಿದೆ. ನಿಮಗೆ ಸೌಕರ್ಯಗಳು ಅಧಿಕವಾಗಿ ಬೇಕು ಎನಿಸಬಹುದು. ಉದ್ಯಮದ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಸ್ಥಾನಭ್ರಷ್ಟವಾಗುವ ಭಯವು ನಿಮಗೆ ಕಾಡಬಹುದು. ವಿವಾಹದ ವಿಳಂಬಕ್ಕೆ ದೈವಜ್ಞರ ಬಳಿ ಹೋಗಿ ವಿಚಾರಿಸಿ. ರಮಣೀಯ ಪ್ರದೇಶದಲ್ಲಿ ನೀವು ಹೆಚ್ಚು ಸಮಯವನ್ನು ಕಳೆಯುವಿರಿ. ಯಾರನ್ನೋ ಅಪರಿಚಿತರನ್ನು ಆಹಾರಕ್ಕೆ ಅವಲಂಬಿಸುವುದು ನಿಮಗೆ ಕಷ್ಟ.

ಧನು ರಾಶಿ :
ಆದಾಯದಲ್ಲಿ ಹಿನ್ನಡೆ ಆಗುವುದು. ಬುದ್ಧಿವಂತಿಕೆಯಿಂದ ನೀವು ಹಣದ ವಂಚನೆಯಿಂದ ತಪ್ಪಿಸಿಕೊಳ್ಳುವಿರಿ. ದಿನ ನಿತ್ಯದ ಜೀವನವು ಏರುಪೇರಾಗಬಹುದು. ಇದು ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ವೃತ್ತಿಯ ಬಗ್ಗೆ ಗೌರವ ಇರಲಿ. ನಿಮ್ಮ ಕೆಲಸವನ್ನು ಪೂರ್ತಿ ಮಾಡಿಕೊಳ್ಳಲು ಆದ್ಯತೆ ನೀಡಿ. ತಂದೆಯಿಂದ ನಿಮಗೆ ಸಹಕಾರ ಸಿಗಲಿದೆ. ಸಹೋದರರ ಮಾತಿಗೆ ಪೂರ್ಣ ವಿರೋಧ ಬೇಡ. ಆದರೆ ತಿಳಿಸುವ ಕ್ರಮದಲ್ಲಿ ತಿಳಿಸಿ.

ಮಕರ ರಾಶಿ :
ನೀವಂದುಕೊಂಡಿದ್ದೇ ಸತ್ಯ ಎನ್ನುವ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಂಡಿದ್ದರೆ ಅದರಿಂದ ಹೊರಬರುವುದು ಒಳ್ಳೆಯದು. ಯಾವುದೇ ಉಪಕರಣಗಳನ್ನು ಮರುಬಳಕೆಗೆ ಯೋಚಿಸುವಿರಿ.‌ ಇಲ್ಲವಾದರೆ ಎಲ್ಲ ಕಡೆಯೂ ಇದೇ ಸ್ಥಿತಿ ಎದುರಾಗಿ ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗಬಹುದು. ನಿಮ್ಮ ಮಕ್ಕಳು ಪ್ರಗತಿಯತ್ತ ಸಾಗುತ್ತಿರುವುದು ನಿಮಗೆ ಖುಷಿಯ ಸಂಗತಿಯಾಗಿದೆ. ಪಾಲುದಾರಿಕೆಯಲ್ಲಿ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಹಣಿಸುವಿರಿ.

ಕುಂಭ ರಾಶಿ :
ನಿಮ್ಮ ವೃತ್ತಿಯ ಆದಾಯಕ್ಕಿಂತ ಬೇರೆ ಕಡೆಯಿಂದ ಆದಾಯ ಸಿಗಲಿದೆ. ಮನೋರಂಜನೆಗೆ ಅಧಿಕ ಸಮಯವನ್ನು ನೀವು ನೋಡುವಿರಿ. ನಿಮ್ಮ ಕಠಿಣ ಪರಿಶ್ರಮದಿಂದ ಚಿಂತಿತಕಾರ್ಯವು ಸಾಧ್ಯವಾಗಬಹುದು. ವಿದೇಶದಲ್ಲಿ ಇದ್ದವರಿಗೆ ಕೆಲವು ಆತಂಕದ ಸನ್ನಿವೇಶವು ಬರಬಹುದು. ನಿಮ್ಮ ಮನಸ್ಸನ್ನು ಯೋಗ್ಯರ ಜೊತೆ ಹಂಚಿಕೊಳ್ಳಿ. ವ್ಯಾಪಾರ ಮಾಡುವ ಜನರ ಜೊತೆ ಸೇರಿ ಕೆಲವು ಕೆಲಸಗಳನ್ನು ಮಾಡಲು ಅವಕಾಶವಿದೆ. ನಿಮ್ಮ ಕನಸಿಗೆ ಆಕಾರ ಸಿಕ್ಕಿದ್ದು ಖುಷಿಕೊಡುವುದು.

ಮೀನ ರಾಶಿ :
ಪರರ ಭಾಗ್ಯವನ್ನು ನೆನೆದು ಕೊರಗುವುದಕ್ಕಿಂತ ನಿಮ್ಮ ಇರುವ ಭಾಗ್ಯವನ್ನು ನೆನೆದು ಸಂತೋಷಪಡಿ. ತಿಳಿವಳಿಕೆ ಇಲ್ಲದವರಿಗೆ ನಿಮ್ಮ ವ್ಯವಹಾರಗಳನ್ನು ಹೇಳಬೇಡಿ. ನಿಮಗೆ ಬರಬೇಕಾದ ಹಣದ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದ ನಿಮಗೆ ನಷ್ಟವಾಗಬಹುದು. ಆಪ್ತರಿಗಾಗಿ ನೀವು ರಾಜಕೀಯಕ್ಕೆ ಸೇರುವ ಪ್ರಯತ್ನವನ್ನು ಮಾಡುವಿರಿ. ಔದ್ಯೋಗಿಕ ಕ್ಷೇತ್ರಕ್ಕೆ ಸೇರಲು ನಿಮ್ಮ ತರಬೇತಿ ಇರುವುದು. ನಿಮ್ಮನ್ನು ನೆಚ್ಚುವವರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ.

– ಲೋಹಿತ್ ಹೆಬ್ಬಾರ್ – 8762924271 (what’s app only)

Published On - 3:27 am, Tue, 6 October 26

ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Loading...
Unable to load recommendations.
Follow Us