
ಹಣಕಾಸಿನ ವಿಷಯದಲ್ಲಿ ನೀವು ಎಷ್ಟೇ ಎಚ್ಚರದಿಂದ ಇದ್ದರೂ ವ್ಯಯವಾಗುವ ಸಾಧ್ಯತೆ ಹೆಚ್ಚು ಇರಲಿದೆ. ಆಸ್ತಿ ಹಂಚಿಕೆಯು ಇತ್ಯರ್ಥವಾಗಬಹುದು. ನಿಮ್ಮನ್ನು ಕೆಲವು ಸಂದರ್ಭಗಳು ಪರಿವರ್ತನೆ ಮಾಡಬಹುದು. ಉನ್ನತ ಅಧ್ಯಯನವನ್ನು ಬಯಸಿ ವಿದೇಶಕ್ಕೆ ತೆರಳುವ ಸಾಧ್ಯತೆ ಇರಲಿದೆ. ಹಣಕಾಸಿನ ವ್ಯವಹಾರವನ್ನು ಈಗಲೇ ಸರಿಮಾಡಿಕೊಳ್ಳುವುದು ಉತ್ತಮ. ಪ್ರಭಾವವನ್ನು ಉಂಟುಮಾಡದೇ ನಿಮ್ಮ ಕಾರ್ಯವನ್ನು ಸಾಧಿಸುವಿರಿ. ಸಂಗಾತಿಯ ಜೊತೆಗಿನ ಸಂಬಂಧವನ್ನು ಗಟ್ಟಿಯಾಗಿಸುವಿರಿ.
ಬಹಳ ಹಳೆಯ ಗೆಳೆಯನವಾದರೂ ಹಂಚಿಕೊಳ್ಳುವಷ್ಟು ಆಪ್ತತೆ ಬಾರದು. ಇಂದು ನಿಮಗೆ ಬೇರೆ ಬೇರೆ ಮೂಲಗಳಿಂದ ಸಂಪಾದನೆಗೆ ಅವಕಾಶಗಳು ಸಿಗಬಹುದು. ಸಾಲದ ಹಣವು ಇಂದು ನಿಮ್ಮ ಕೈಸೇರಬಹುದು. ವಿದೇಶೀ ವ್ಯವಹಾರದಲ್ಲಿ ನಿಮಗೆ ಲಾಭವು ಬರಬಹುದು. ಸಾಹಸದ ಕೆಲಸಗಳನ್ನು ಮಾಡುವಾಗ ಎಚರಚರ ಅಗತ್ಯ. ಆಪ್ತರಿಂದ ಸಂಪತ್ತನ್ನು ಪಡೆದುಕೊಳ್ಳುವಿರಿ. ಇನ್ನೊಬ್ಬರ ಒತ್ತಾಯದ ಹೊಸ ಕಲಿಕೆಯನ್ನು ಆರಂಭಿಸುವಿರಿ.
ಉದ್ಯೋಗದಲ್ಲಿ ಎಲ್ಲಿಗಾದರೂ ಪ್ರಯಾಣ ಮಾಡುವ ಅವಕಾಶ ಬರುವುದು. ಇಂದು ಸ್ತ್ರೀಯರು ನಾನಾ ತೊಂದರೆಗಳನ್ನು ಅನುಭವಿಸಬೇಕಾಗಬಹುದು. ಅನಾರೋಗ್ಯವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡಬಹುದು. ಆದಾಯವು ನಿಮ್ಮ ಯೋಜನೆಯಷ್ಟು ಇದ್ದರೂ ಆದಾಯವು ಹೆಚ್ಚಿನ ಖರ್ಚಿಗೆ ಕಾರಣವಾಗಬಹುದು. ಸಂಗಾತಿಯ ಜೊತೆ ಬಹಳ ದಿನಗಳ ಅನಂತರ ಸೌಹಾರ್ದ ಮಾತುಕತೆ ಇರಲಿದೆ.
ಅನಗತ್ಯ ತಿರುಗಾಟದಿಂದ ಬೇಸರವಾಗಬಹುದು. ನಿಮ್ಮ ಕಾರ್ಯಗಳನ್ನು ಮುಂದೂಡುವಿರಿ. ಇಂದು ನೀವು ಮನೋನಿಯಂತ್ರಣದಲ್ಲಿ ಸೋಲುವಿರಿ. ಲಾಭವಿರುವ ಕೆಲಸಗಳನ್ನು ಮಾತ್ರ ಮಾಡಲು ಇಚ್ಛೆಯು ಇರಲಿದೆ. ಸರ್ಕಾರದ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಕರೆಯು ಬರಬಹುದು. ರೋಗಬಾಧೆಯನ್ನು ನೀವು ಲೆಕ್ಕಕ್ಕೆ ತಂದುಕೊಳ್ಳಲಾರಿರಿ. ನಿಮ್ಮ ವೃತ್ತಿಜೀವನಕ್ಕೆ ಮುಖ್ಯವಾದ ಜನರು ಇಂದು ನಿಮಗೆ ಸ್ವಲ್ಪ ತೊಂದರೆ ನೀಡಬಹುದು.
ಅವಿವಾಹಿತರಿಗೆ ವಿವಾಹದ ಚಿಂತೆ ಹೆಚ್ಚಾಗುವುದು. ಇಂದು ನೀವು ಪಿತ್ರಾರ್ಜಿತ ಆಸ್ತಿಯ ಬಗ್ಗೆ ಆಸಕ್ತಿ ಹೊಂದುವಿರಿ. ದ್ವೇಷವನ್ನು ದೀರ್ಘಕಾಲದವರೆಗೆ ಮುಂದೂಡುವ ಅವಶ್ಯಕತೆ ಇರದು. ಇಂದು ಬಹು ದಿನಗಳ ಚಿಂತಿತ ಕಾರ್ಯವು ಸಫಲವಾಗುವುದು. ಎಲ್ಲ ಸಮಯದಲ್ಲಿಯೂ ವಾತಾವರಣವು ನಿಮ್ಮ ಪರವಾಗಿಯೇ ಇರುತ್ತದೆ ಎಂಬುದನ್ನು ಮರೆತುಬಿಡಿ. ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವುದು ಹೊಸತಾಗದು. ಇದಕ್ಕಾಗಿ ನೌಕರರು ತಿರುಗಿ ಬೀಳಬಹುದು.
ಇಂದು ನೀವು ಅನ್ಯಸ್ಥಳದಲ್ಲಿ ಆಕಸ್ಮಿಕವಾಗಿ ವಾಸಮಾಡಬೇಕಾಗುವುದು. ಭೂಮಿಯ ವ್ಯವಹಾರವನ್ನು ಸರಿಯಾದ ಕ್ರಮದಲ್ಲಿ ಮಾಡಿ. ನಕಾರಾತ್ಮಕ ಚಿಂತನೆಯನ್ನು ಹೆಚ್ಚಿಸಲು ಅಂತಹ ವಾತಾವರಣವು ಇರಲಿದೆ. ಉಳಿತಾಯವನ್ನು ನೀವು ಅಲ್ಪವಾದರೂ ಮಾಡಿ. ನಿಮ್ಮ ನಂಬಿಕೆಯನ್ನು ನೀವು ಎಲ್ಲರೆದುರು ಸಮರ್ಥಿಸಿಕೊಳ್ಳುವಿರಿ. ಅಪರಿಚಿತರು ಯಾವುದಾದರೊಂದು ಮಾರ್ಗದ ಮೂಲಕ ನಿಮ್ಮ ಎಲ್ಲ ವಿವರಗಳನ್ನು ಪಡೆಯಲು ಪ್ರಯತ್ನಿಸುವರು.
ಹೊಸ ತಂತ್ರವನ್ನು ನೀವು ರೂಪಿಸಿಕೊಳ್ಳುವಿರಿ. ನಿಮ್ಮೆದುರೇ ಮಾತು ಬದಲಿಸುವವರನ್ನು ನೀವು ಇಷ್ಟಪಡಲಾರಿರಿ. ಹಳೆಯ ನೋವುಗಳು ನಿಮ್ಮನ್ನು ಕಾಡಬಹುದು. ಶುಭ ಸುದ್ದ ನಿರೀಕ್ಷೆಯು ಇಂದು ಕೇವಲ ನಿರೀಕ್ಷೆಯಾಗಿಯೇ ಇರಲಿದೆ. ದಾಂಪತ್ಯದಲ್ಲಿ ಸಣ್ಣ ವಿರಸವು ಇರಲಿದೆ. ನೇರ ಮಾತಿನಿಂದ ಇತರರಿಗೆ ಬೇಸರವಾಗುವುದು. ಮಕ್ಕಳ ವಿಚಾರದಲ್ಲಿ ನಿಮ್ಮ ವರ್ತನೆಯು ಸರಿಯಾದುದು ಆಗಿರದು. ಅಧಿಕಾರಿಗಳನ್ನು ಮೆಚ್ಚಿಸಲು ನೀವು ಸಮಯವನ್ನು ಹಾಳುಮಾಡುವಿರಿ.
ಅತಿಯಾದ ನಂಬಿಕೆಯಿಂದ ಕೆಲವು ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುವಿರಿ. ಮನೆಯಲ್ಲಿ ಅಶಾಂತಿಯ ವಾತಾವರಣವು ಇರಲುದೆ. ನಿಮ್ಮ ವ್ಯವಹಾರಕ್ಕೆ ಯಾರಾದರೂ ಹಸ್ತಕ್ಷೇಪ ಮಾಡಲು ಬರಬಹುದು. ಸಿಟ್ಟು ಮಾಡಿಕೊಂಡರೂ ಕ್ಷಣ ಕಾಲದಲ್ಲಿ ಅದು ಸರಿಯಾಗುವುದು. ಇಟ್ಟುಕೊಳ್ಳಲು ಕೊಟ್ಟ ಹಣವು ಪುನಃ ಬಾರದೇ ಇದ್ದೀತು. ಹಿರಿಯರ ಎದುರು ಮಾತನಾಡಲು ನೀವು ಹೆದರುವಿರಿ. ಆತ್ಮವಿಶ್ವಾಸವು ಇದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳಲು ಆಗದು.
ಯಾರ ಮೇಲೋ ಹಠಸಾಧಿಸುವುದು ಬೇಡ. ನಿಮ್ಮಷ್ಟಕ್ಕೆ ನೀವು ಇರಿ. ನಿಮ್ಮ ಮಾತಿಗೆ ಇಂದು ವಿರೋಧವು ಬರಬಹುದು. ಆದಷ್ಟು ಇಂತಹ ಸಂದರ್ಭವು ಬಾರದಂತೆ ನೋಡಿಕೊಳ್ಳುವುದು ಉತ್ತಮ. ನಿಮ್ಮ ಸ್ಪಷ್ಟ ಮಾತಿಗೆ ಒಳ್ಳೆಯ ಉದ್ಯೋಗವು ಸಿಗಬಹುದು. ಆರ್ಥಿಕ ನಷ್ಟವನ್ನು ತುಂಬಿಕೊಳ್ಳಲು ಅನ್ಯಮಾರ್ಗವನ್ನು ಹುಡುಕುವಿರಿ. ನಿಮ್ಮನ್ನು ವಿಕೃತ ರೂಪವನ್ನು ತೋರಿಸುವ ಅವಶ್ಯಕತೆ ಇಲ್ಲ. ವಿಶೇಷವಾದ ವಸ್ತುವನ್ನು ಕೊಳ್ಳುವ ಆಸಕ್ತಿಯು ಇರಲಿದೆ.
ಏನೋ ಮಾಡಲು ಹೋಗಿ ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಅಧಿಕ ಆಲೋಚನೆಯನ್ನು ಮಾಡುವುದರಿಂದ ಮನಸ್ಸು ದುರ್ಬಕವಾಗಬಹುದು. ನಿಮಗಮ ಜೀವನ ಕ್ರಮವನ್ನು ಬದಲಿಸಿಕೊಳ್ಳಲು ಇಷ್ಟಪಡುವಿರಿ. ಸ್ವಂತ ಉದ್ಯೋಗದಲ್ಲಿ ನಿಮಗೆ ಕೆಲವು ಕಹಿ ವಿಚಾರವು ಗೊತ್ತಾಗಲಿದೆ. ಅಜ್ಞಾತ ಸ್ಥಳದಿಂದ ಹೊರಬರುವ ನಿರ್ಧಾರ ಮಾಡಬೇಕು. ಕಚೇರಿಯಲ್ಲಿ ನಿಮ್ಮ ಸಾಧನೆಗೆ ಮೆಚ್ಚುಗೆ ಸಿಗಲಿದೆ. ನೂತನ ವಸ್ತುಗಳ ಖರೀದಿಗೆ ಹೆಚ್ಚು ಮನಸ್ಸು ಮಾಡುವಿರಿ.
ನಿಮಗೆ ಆತ್ಮೀಯರ ಒಡನಾಡ ಅಧಿಕವಾಗಲಿದೆ. ಸಹೋದ್ಯೋಗಿಗಳನ್ನು ಕೆಲಸದಲ್ಲಿ ಸಹಾಯಕ್ಕಾಗಿ ಕೇಳುವಿರಿ. ನಿಮ್ಮದಾದ ಚಿಂತನೆಯನ್ನು ಬಿಟ್ಟು ಬೇರೆ ಕಡೆ ಯೋಚನೆಯನ್ನು ಮಾಡಲಾರಿರಿ. ಆನಂದದಿಂದ ಈ ದಿನವನ್ನು ಕಳೆಯಲು ಬಯಸುವಿರಿ. ಅನಿರೀಕ್ಷಿತ ಪ್ರಯಾಣವು ಬರಬಹುದು. ನಿಮಗೆ ಸರಿಯಾದ ಸಮಯದಲ್ಲಿ ಹಣವು ಸಿಕ್ಕಿರುವುದು ಸಂತೋಷದ ವಿಚಾರವಾಗಲಿದೆ. ಮನೆಯವರ ಜೊತೆ ಹೆಚ್ಚು ಆನಂದದಿಂದ ಇರುವಿರಿ.
ಮನೆಯಲ್ಲಿ ನಿಮಗೆ ನಿರಾಸೆಯ ಅನುಭವ ಆಗಬಹುದು. ಆಲಸ್ಯದಿಂದ ನಿಮ್ಮ ಕೆಲಸದಲ್ಲಿ ಹಿನ್ನಡೆಯಾಗಬಹುದು. ಕೃಷಿಯಲ್ಲಿ ನೀವು ಹೆಚ್ಚಿನ ಪ್ರಗತಿಯನ್ನು ಸಾಧಿಸುವ ಮನಸ್ಸನ್ನು ಇಟ್ಟುಕೊಳ್ಳುವಿರಿ. ನೀವು ಇಂದು ಅತಿಥಿಯಾಗಿ ಕಾರ್ಯದಲ್ಲಿ ಭಾಗವಹಿಸುವಿರಿ. ಕಳೆದ ದಿಮಗಳನ್ನು ಒಂದೊಂದಾಗಿಯೇ ಮೆಲುಕು ಹಾಕಿಕೊಂಡು ಸಂತೋಷಪಡುವಿರಿ. ಧಾರ್ಮಿಕ ವಿಚಾರದಲ್ಲಿ ಆಸಕ್ತಿಯು ಕಡಿಮೆ ಆಗಿದೆ ಎಂದು ಅನ್ನಿಸಬಹುದು.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಹಸ್ತಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಮಘಾ, ಯೋಗ : ಸಾಧ್ಯ , ಕರಣ : ಬಾಲವ, ಸೂರ್ಯೋದಯ – 06 – 10 am, ಸೂರ್ಯಾಸ್ತ – 06 – 04 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:17 – 13:37, ಯಮಗಂಡ ಕಾಲ 07:39 – 09:09, ಗುಳಿಕ ಕಾಲ 10:38 – 12:07
– ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:19 am, Wed, 7 October 26