Horoscope Today 08 October : ಇಂದು ಈ ರಾಶಿಯವರ ವಿಶ್ವಾಸವೇ ಅವರನ್ನು ವಂಚಿಸುವುದು
ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಆಶ್ವಯುಜ ಮಾಸ ಕೃಷ್ಣ ಪಕ್ಷದ ದ್ವಿತೀಯಾ ತಿಥಿ ಬುಧವಾರ ಸ್ವಯಂ ಪ್ರಜ್ಞೆ, ಸಂಗಾತಿಯ ದೂರು, ಕಾರ್ಯದಲ್ಲಿ ಗೊಂದಲ, ಹಕ್ಕಿನ ಚಲಾವಣೆ, ವೃತ್ತಿಯ ಸ್ಥಳ ಬದಲು ಇವೆಲ್ಲ ಇಂದಿನ ವಿಶೇಷ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಹಸ್ತ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ ನಿತ್ಯನಕ್ಷತ್ರ : ಭರಣೀ, ಯೋಗ : ಧೃತಿ, ಕರಣ : ತೈತಿಲ, ಸೂರ್ಯೋದಯ – 06 – 10 am, ಸೂರ್ಯಾಸ್ತ – 06 – 03 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:07 – 13:36, ಗುಳಿಕ ಕಾಲ 10:038 – 12:07, ಯಮಗಂಡ ಕಾಲ 07:39 – 09:09
ಮೇಷ ರಾಶಿ :
ಒಂದರಲ್ಲಿ ಸ್ಥಿರವಾಗಿ, ಮತ್ತೊಂದನ್ನು ಪ್ರಯತ್ನಿಸಿ. ಉದ್ವೇಗದಿಂದ ಅನರ್ಥವು ನಡೆಯುವ ಸಾಧ್ಯತೆ ಇದೆ. ಆರ್ಥಿಕ ಉಳಿತಾಯವನ್ನು ಅನ್ಯರಿಂದ ಕೇಳಿ ಪಡೆಯುವುದು ಉಚಿತ. ನಿಮ್ಮ ವಿವಾಹವು ಮುಂದೆ ಮಂದೆ ಹೋಗುವುದಕ್ಕೆ ಕಾರಣವನ್ನು ದೈಜ್ಞರಿಂದ ಪಡೆಯಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳಿಗೆ ಓದು ಅಸಮಾಧಾನ ತರಿಸಬಹುದು. ತಪ್ಪು ಕಲ್ಪನೆಗಳನ್ನು ನೀವೇ ಬದಲಿಸಿಕೊಳ್ಳಿ ಅಥವಾ ಬಗೆಹರಿಯುವ ತನಕ ಏನನ್ನೂ ಹೇಳಿಕೊಳ್ಳಬೇಡಿ. ಪ್ರಶಾಂತ ವಾತಾವರಣವನ್ನು ಹುಡುಕುವಿರಿ. ನಿಮ್ಮ ಮಾತೇ ನಿಮಗೆ ಬೇರೆಯವರ ಮೂಲಕ ಬರಬಹುದು. ನಿಮ್ಮಿಂದ ಅತಿಥಿಗಳಿಗೆ ಸಂತೋಷವಾಗಬಹುದು. ಹೊಸ ವಾಹನದ ಖರೀದಿಗೆ ಹಣವನ್ನು ಖರ್ಚು ಮಾಡಬೇಕಾದೀತು. ಧಾರ್ಮಿಕ ಆಚರಣೆಗಳಲ್ಲಿ ನಿರಾಸಕ್ತಿ ಇರುವುದು. ಸಂಗಾತಿಯ ದೂರನ್ನು ಸರಿಯಾಗಿ ತಿಳಿಯುವಿರಿ. ನಿಮ್ಮ ಮೇಲೆ ಕೆಟ್ಟ ದೃಷ್ಟಿಯಿಂದ ಆರೋಗ್ಯ ಕೆಡುವುದು. ರಾಜಕಾರಣದ ಸ್ಪರ್ಶದಿಂದ ನಿಮ್ಮ ವ್ಯವಹಾರಕ್ಕೆ ಹೊಸ ದಿಕ್ಕು ಸಿಗಬಹುದು. ಹಳೆಯ ವಸ್ತುಗಳನ್ನು ಹೊಸದಾಗಿ ಮಾಡಿಕೊಂಡು ಉಪಯೋಗಿಸುವಿರಿ.
ವೃಷಭ ರಾಶಿ :
ಇಂದು ಬಿಡುವಿನ ಸಮಯದಲ್ಲಿ ನಿಮ್ಮ ವೈಯಕ್ತಿಕ ಕೆಲಸವನ್ನು ಮಾಡಿ ಮುಗಿಸಿಕೊಳ್ಳುವಿರಿ. ನಿಮ್ಮದಲ್ಲದ ತಪ್ಪಿಗೂ ನೀವು ಕ್ಷಮೆಯನ್ನು ಕೇಳಬೇಕಾಗುವುದು. ವ್ಯವಹಾರದ ಮೋಸವನ್ನು ನೀವು ಸಹಿಸಲಾರಿರಿ. ಉಳಿದಿದ್ದ ಎಲ್ಲ ಸಾಲವನ್ನೂ ತೀರಿಸುವಿರಿ. ಸಹೋದರನ ಅಸಹಕಾರವು ನಿಮಗೆ ಹಿಂಸೆಯನ್ನು ಕೊಡುವುದು. ಅತಿಯಾದ ಅನಾರೋಗ್ಯವು ಉಂಟಾದರೆ ವೈದ್ಯರ ಸಲಹೆಯನ್ನು ಪಡೆಯಿರಿ. ಸಕಾರಾತ್ಮ ಆಲೋಚನೆಗಳೇ ನಿಮ್ಮನ್ನು ಸಂತೋಷವಾಗಿ ಇಡುವುದು. ಇನ್ನೊಬ್ಬರ ಅನವಶ್ಯಕ ವಿಚಾರಕ್ಕೆ ನೀವು ಸಲಹೆಗಾರರಾಗುವುದು ಬೇಡ. ಅಂದುಕೊಳ್ಳದೇ ಇರುವ ವೃತ್ತಿಯಿಂದ ಕರೆಬರಲಿದೆ. ಉದ್ಯೋಗದ ಸ್ಥಾನದಲ್ಲಿ ನಿಮಗೆ ಸೂಕ್ತ ಸಲಹೆಯನ್ನು ಅನುಸರಿಸಿ. ಸೌಂದರ್ಯಕ್ಕೆ ಹೆಚ್ಚು ಮಹತ್ತ್ವವನ್ನು ಕೊಡುವಿರಿ. ಆಸ್ತಿಯ ರಕ್ಷಣೆಯನ್ನು ಮಾಡುವುದು ನಿಮಗೆ ಬಹಳ ಕ್ಲಿಷ್ಟ ಎನಿಸಬಹುದು. ಮಧ್ಯಗತಿಯಲ್ಲಿ ಇರುವ ಆರ್ಥಿಕತೆಯನ್ನು ಬಲಗೊಳಿಸುವ ಪ್ರಯತ್ನವು ನಡೆಯುವುದು. ನೌಕರರ ನಿರ್ಲಕ್ಷ್ಯದಿಂದ ಆಗುವ ಹೊಣೆಯನ್ನೂ ಹೊರಬೇಕಾಗುವುದು.
ಮಿಥುನ ರಾಶಿ :
ವಿರುದ್ಧ ಮನಸ್ಥಿತಿಯ ಇಬ್ಬರು ಸೇರಿದರೆ ಕಲಹವೇ ಆಗುವುದು. ಎರಡನ್ನೂ ಗೌರವಿಸುವುದು ಗೊತ್ತಿರಲಿ. ನಿಮ್ಮ ಪ್ರಧಾನಕಾರ್ಯಕ್ಕಿಂತ ಅಪ್ರಧಾನದಿಂದ ಆದಾಯವು ಅಧಿಕವಾಗಿ ಸಿಗುವುದು. ನಿಮ್ಮ ಪ್ರಭಾವವು ಎಲ್ಲರಿಗೂ ತಿಳಿಯಬಹುದು. ಸರ್ಕಾರಿ ಉದ್ಯೋಗದಲ್ಲಿ ಹೆಚ್ಚಿನ ಪ್ರಗತಿಯಾಗಲಿದೆ. ತಂದೆಯ ಸೇವೆಯನ್ನು ಮಾಡುವ ಮನಸ್ಸು ಆಗಲಿದೆ. ಬೇರೆಯವರ ಮಾತನ್ನು ಪೂರ್ಣವಾಗಿ ನಂಬಲು ನಿಮಗೆ ಇಷ್ಟವಾಗುವುದು. ನಿಮಗೆ ಮಕ್ಕಳಿಂದ ಹೆಚ್ಚಿನ ಸಂತೋಷವು ನಿಮಗೆ ಸಿಗಲಿದೆ. ದುಶ್ಚಟಗಳಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಸ್ವಾಭಿಮಾನವು ನಿಮಗೆ ಕೈ ಕಟ್ಟಿದಂತೆ ಆಗುವುದು. ನಿಮ್ಮ ಗಮನವನ್ನು ಬೇರೆ ಕಡೆ ಸೆಳೆದು ವಂಚಿಸಬಹುದು. ಯಾರನ್ನೂ ನಿರಾಸೆಗೊಳಿಸದೇ ನಗುಮೊಗದಿಂದ ಮಾತನಾಡಿ. ಲಾಭಕ್ಕಾಗಿ ಎಂದು ಗೊತ್ತಿಲ್ಲದ ಕೆಲಸಕ್ಕೆ ಕೈ ಹಾಕಿ ಸುಟ್ಟುಕೊಳ್ಳಬೇಕಾದೀತು. ಸಾವಧಾನತೆಯಿಂದ ಇದ್ದರೆ ನಿಮಗೆ ಶುಭವಾಗುವುದು. ನಿಮ್ಮ ಮಾತು ಕೋಪವನ್ನು ತರಿಸಬಹುದು. ನಿಮ್ಮಲ್ಲಿರುವ ನ್ಯೂನತೆಗಳನ್ನು ನೀವೇ ತಿಳಿದು ಸರಿಪಡಿಸಿಕೊಳ್ಳಿ.
ಕರ್ಕಾಟಕ ರಾಶಿ :
ಮಕ್ಕಳ ಮೇಲೆ ಅತಿಯಾದ ನಿಯಮವನ್ನು ಹೇರುವುದು ಬೇಡ. ಅವರು ಅದನ್ನು ಮೀರಲು ಯತ್ನಿಸುವರು. ನಿಮ್ಮ ಮಿತಿಯಲ್ಲಿ ಬಯಕೆಯು ಇರಲಿ. ವೃತ್ತಿಯಲ್ಲಿ ಮೇಲೇರಿದ ಅನುಭವ ಆಗಬಹುದು. ಮನೆಯಲ್ಲಿಯೇ ಇದ್ದು ನಿರುಮ್ಮಳವಾಗಿ ಇರುಲಿರುವಿರಿ. ಸಮಸ್ಯೆಗಳನ್ನು ನೀವು ಹಂಚಿಕೊಳ್ಳಲು ಹಿಂಜರಿಯುವಿರಿ. ಬಂಧುಗಳ ವಿಯೋಗವಾಗಬಹುದು. ನಿಮ್ಮ ಜೀವನದ ದಿನಚರಿಯನ್ನು ಬದಲು ಮಾಡಿಕೊಳ್ಳಲು ಇಷ್ಟಪಡುವಿರಿ. ಇಂದು ಯಾವ ಕಾರ್ಯವನ್ನು ಮೊದಲು ಮಾಡಬೇಕು ಎಂಬ ಯೋಜನೆಯನ್ನು ಇಟ್ಟುಕೊಳ್ಳುವಿರಿ. ದಾಂಪತ್ಯದಲ್ಲಿ ನಿಮಗೆ ವೈಮನಸ್ಯ ಉಂಟಾದರೂ ಅದು ಸರಿಮಾಡಿಕೊಳ್ಳುವಿರಿ. ಯಾರಿಗಾದರೂ ಸಹಾಯ ಮಾಡಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳಬಹುದು. ಇಂದು ನಿಮ್ಮ ಮನಸ್ಸು ಉಲ್ಲಾಸದಿಂದ ಇರಲಿದೆ. ನಿಮ್ಮನ್ನೇ ನೀವು ಪರೀಕ್ಷಿಸಿಕೊಳ್ಳಬೇಕಾಗಬಹುದು. ನಿಮ್ಮ ಯೋಚನೆಯನ್ನು ಬಲಿಷ್ಠವಾಗಿದ್ದರೂ ಅದನ್ನು ಕ್ರಿಯಾರೂಪಕ್ಕೆ ತರುವುದು ಕಷ್ಟವಾದೀತು. ಯಾವುದೇ ರೀತಿಯ ವ್ಯವಹಾರಕ್ಕೆ ನಿಮ್ಮ ಕೆಲಸದ ಗುಣಮಟ್ಟಕ್ಕೆ ಹೆಚ್ಚಿನ ಗಮನ ಬೇಕಾಗುತ್ತದೆ.
ಸಿಂಹ ರಾಶಿ :
ಮುಂಗಡ ಹಣವನ್ನು ಮರಳಿ ಪಡೆಯುವ ಪ್ರಯತ್ನ ವಿಫಲ. ಕಾರಣಗಳನ್ನು ಹೇಳಿ ನಿಮ್ಮನ್ನು ಯಾಮಾರಿಸುವರು. ದೈನಂದಿನ ಬಳಕೆಗೆ ಬೇಕಾದ ವಸ್ತುಗಳನ್ನು ಮಾರಾಟ ಮಾಡುವವರ ಆದಾಯದಲ್ಲಿ ಅಧಿಕಲಾಭವು ಆಗುವುದು. ಸಂಬಂಧಗಳನ್ನು ನಿರ್ವಹಿಸುವುದು ಕಷ್ಟವಾದೀತು. ನಿಮಗೆ ಸ್ನೇಹಿತರಿಂದ ಧನಸಹಾಯವು ಸಿಗಲಿದೆ. ಶತ್ರುಗಳು ನಿಮ್ಮ ಏಳ್ಗೆಯನ್ನು ಸಹಿಸಲು ಕಷ್ಟವಾದೀತು. ಅದಕ್ಕೆ ಏನಾದರೂ ತೊಂದರೆಯಾದೀತು. ಪ್ರಯಾಣಕ್ಕೆ ಇಂದು ಅನುಕೂಲವಿಲ್ಲ. ಕೆಲಸಗಳನ್ನು ಮಾಡಿಕೊಳ್ಳಲು ನಿಮಗೆ ಹಣವನ್ನು ನೀಡಬೇಕಾದೀತು. ಸ್ತ್ರೀಯರ ಸಹಾಯವನ್ನು ಪಡೆದು ನೀವು ಕಛೇರಿಯ ಕೆಲಸವನ್ನು ಮುಗಿಸುವಿರಿ. ನಿದ್ರೆಯ ವ್ಯತ್ಯಾಸದಿಂದ ನಿಮಗೆ ಕಿರಿಕಿರಿ ಆಗಬಹುದು. ಹೊಸ ಜವಾಬ್ದಾರಿಗಳನ್ನು ಪಡೆಯಲು ನೀವು ಬಹಳ ಉತ್ಸುಕರಾಗಿ ಇರುವಿರಿ. ಹಳೆಯ ಜವಾಬ್ದಾರಿಯನ್ನು ಪುನಃ ವಹಿಸಿಕೊಳ್ಳಬೇಕಾಗುವುದು. ಪುಣ್ಯಕ್ಷೇತ್ರಕ್ಕೆ ನೀವು ಬಂಧುಗಳ ಜೊತೆಗೆ ಹೋಗುವಿರಿ. ವ್ಯವಹಾರದಲ್ಲಿ ನೀವು ತೆಗೆದುಕೊಳ್ಳುವ ತ್ವರಿತ ನಿರ್ಧಾರಗಳು ಸಕಾರಾತ್ಮಕವಾಗಿರುತ್ತವೆ. ಕಳೆದ ಸಮಯವನ್ನು ಚಿಂತಿಸುವಿರಿ.
ಕನ್ಯಾ ರಾಶಿ :
ಸಂಗಾತಿಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಬೇಡ. ತಾನಾಗಿಯೇ ಅರ್ಥವಾದರೆ ಅದು ಸ್ಪಷ್ಟವಾಗಲಿದೆ. ಮಕ್ಕಳನ್ನು ಒಳ್ಳೆಯ ಅಭ್ಯಾಸಕ್ಕೆ ತೊಡಗಿಸುವ ಯೋಚನೆ ಬರುವುದು. ಒಳಗೊಂದು ಹೊರಗೊಂದು ಸ್ವಭಾವವನ್ನು ತೋರಿಸುವುದು ಬೇಡ. ಮಕ್ಕಳ ಪ್ರಗತಿಯನ್ನು ನೀವು ನಿರೀಕ್ಷಿಸಿದ್ದು ಇಂದು ಸಾಫಲ್ಯದಂತೆ ಇರುವುದು. ಅತಿಯಾದ ವಿಶ್ವಾಸದಿಂದ ನಿಮಗೆ ವಂಚನೆಯಾಗಲಿದೆ. ನಿಮಗೂ ಸರ್ಕಾರದ ನಡುವೆಯೂ ವಿವಾದಗಳು ನಡೆಯಬಹುದು. ಯಾರಾದರೂ ನಿಮ್ಮ ಮೇಲೆ ಹಕ್ಕು ಚಲಾಯಿಸಬಹುದು. ಅದೃಷ್ಟವನ್ನು ನಂಬಿ ನಿಮ್ಮ ಪ್ರಯತ್ನವು ಇಲ್ಲದೆಯೂ ಇರಬಹುದು. ಉದ್ಯೋಗದ ಕಾರಣದಿಂದ ನೀವು ದೂರ ಪ್ರಯಾಣವನ್ನು ಮಾಡಬೇಕಾಗಬಹುದು. ದಾಂಪತ್ಯದಲ್ಲಿ ನಡೆಯುತ್ತಿರುವ ಶೀತಲಸಮರವು ಸ್ಫೋಟವಾಗಬಹುದು. ಮಕ್ಕಳಿಗೆ ಬೇಕಾದ ತಿಳಿವಳಿಕೆಯನ್ನು ಕೊಡಲಿದ್ದೀರಿ. ದೇಹದಂಡನೆಯಿಂದ ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳು ಹೆಚ್ಚು ಸಮಯ ಕಳೆಯಬಹುದು.
ತುಲಾ ರಾಶಿ :
ವಾಹನ ಚಾಲನೆಯಲ್ಲಿ ಎಚ್ಚರ ತಪ್ಪುವ ಸಾಧ್ಯತೆ ಇದೆ. ನಿಮ್ಮ ಮನಸ್ಸು ಹಲವು ದ್ವಂದ್ವಗಳಿಂದ ಏಕಾಂತದಲ್ಲಿ ಇರುವ ಮನಸ್ಸಾಗುವುದು. ಅನುಭವಿಗಳ ಮುಂದೆ ಮೌನವಾಗಿರುವುದು ಲೇಸು. ಆರ್ಥಿಕವಾದ ಸಮಾನರಲ್ಲಿ ನಿಮ್ಮ ಸಖ್ಯವು ಇರಲಿದೆ. ನಿರಂತರ ಕಾರ್ಯದಿಂದ ನಿಮಗೆ ಫಲವು ಲಭ್ಯವಾಗುವುದು. ಮಕ್ಕಳ ನಡುವಿನ ಕಲಹವನ್ನು ಪರಿಹರಿಸಲು ನೀವು ಮಧ್ಯಪ್ರವೇಶ ಮಾಡುವಿರಿ. ದಾಂಪತ್ಯದಲ್ಲಿ ಬಿರಕು ಬಂದು ಮನೆಯಿಂದ ದೂರ ಇರುವಿರಿ. ಇಂದು ಸುಮ್ಮನೇ ಸುತ್ತಾಡುವ ಮನಸ್ಸಾಗುವುದು. ದೈವದ ಬಗ್ಗೆ ಭಕ್ತಿಯ ಕೊರತೆ ಇರಲಿದೆ. ಸಂಬಂಧವನ್ನು ಉಳಿಸಿಕೊಳ್ಳಲು ಸಮಯವನ್ನೂ ಕೊಡಬೇಕಾದೀತು. ಸ್ವ ಉದ್ಯೋಗವನ್ನು ನಡೆಸುತ್ತಿದ್ದರೆ, ಕೆಲಸದಿಂದ ಬಿಡುವಿರಿ. ನಿಮಗೆ ಕಾರ್ಯದಿಂದ ಪಾಪಪ್ರಜ್ಞೆಯು ಕಾಡಬಹುದು. ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ. ಯಾವ ಸಂದರ್ಭದಲ್ಲಿಯೂ ನೀವು ನಿಮ್ಮ ಮಾರ್ಗವನ್ನು ಬಿಟ್ಟುಹೋಗಲಾರಿರಿ. ಬಂಧುಗಳ ವಿಚಾರದಲ್ಲಿ ಅಸಮಾಧಾನವು ಇರುವುದು. ನಿಮಗೆ ಎದುರಾಗುವ ಸಂಕಟಗಳ ಬಗ್ಗೆ ಗಮನವಿರಲಿ. ಸೌಹಾರ್ದತೆಯ ಚರ್ಚೆಯಿಂದ ಒಳ್ಳೆಯದಾಗುವುದು.
ವೃಶ್ಚಿಕ ರಾಶಿ :
ಅಂತಃಕರಣ ಕಲುಷಿತವಾಗಬಹುದು, ಎಲ್ಲದರಿಂದ ದೂರವಿರಿ. ಭೂಮಿಯ ಖರೀದಯಲ್ಲಿ ವಂಚನೆ ಆಗಬಹುದು. ಇಂದು ನಿಮ್ಮ ಬಗ್ಗೆ ಕಪೋಲಕಲ್ಪಿತ ಸುದ್ದಿಗಳು ಹರಡಬಹುದು. ನಿಮ್ಮನ್ನು ಸ್ಥಾನದಿಂದ ಕೆಳಗೆ ದೂಡಲು ನೋಡಬಹುದು. ಸಿಟ್ಟಿಗೆ ಕಾರಣವಿಲ್ಲದಿದ್ದರೂ ಸಿಟ್ಟಾಗುವಿರಿ. ಮೇಲಧಿಕಾರಿಗಳ ಬೆಂಬಲವು ನಿಮಗೆ ಸಿಕ್ಕರೂ ಸಹೋದ್ಯೋಗಿಗಳಿಂದ ಕಿರಿಕಿರಿ ಆಗಬಹುದು. ಯಂತ್ರೋಪಕರಣದ ಬಳಕೆಯನ್ನು ಹೆಚ್ಚು ಮಾಡುಬಿರಿ. ನಿಮಗೆ ಸೌಲಭ್ಯಗಳು ಸಿಗಲಿದೆ. ಚೋರಭೀತಿಯು ನಿಮಗೆ ಕಾಡಬಹುದು. ನೀವು ಕೆಲವು ಸಮಸ್ಯೆಯನ್ನು ಅನಿರೀಕ್ಷಿತವಾಗಿ ಎದುರಿಸಬೇಕಾಗುವುದು. ನಿಮ್ಮ ದಾಖಲೆಗಳನ್ನು ಸರಿಯಾಗಿ ಇಟ್ಟಕೊಳ್ಳಬೇಕಾಗುವುದು. ಸಣ್ಣ ವಿಚಾರವೂ ನಿಮಗೆ ದೊಡ್ಡದಾಗಲಿದೆ. ನಿಮ್ಮ ಬಗ್ಗೆ ಕುಟುಂಬದಿಂದ ಸಮಾಧಾನವು ಇರಲಿದೆ. ಇಷ್ಟದವರ ಭೇಟಿಯಾಗುವುದು ನಿಮಗೆ ಸಂತೋಷವನ್ನು ಕೊಡಲಿದೆ. ಯಾರ ಬೆಂಬಲವೂ ಇಲ್ಲದ ಕಾರ್ಯವನ್ನು ಮಾಡುವುದು ಬೇಡ. ಪ್ರೇಮ ಸಂಬಂಧದ ಕೋಪದಿಂದ ನೀವು ಭಾವನಾತ್ಮಕ ದೂರವಾಗುವಿರಿ.
ಧನು ರಾಶಿ :
ಎಲ್ಲ ಆದಮೇಲೂ ನಿಮ್ಮ ಬುದ್ಧಿ ಹಳೆಯ ಚಾಳಿಗೇ ಹೋಗುತ್ತದೆ ಎಂದರೆ, ಪತನವನ್ನು ನೀವೇ ತಂದುಕೊಳ್ಳುವಿರಿ. ಇಂದು ಅನಾರೋಗ್ಯದಿಂದ ಚೇತರಿಕೆಯು ನಿಮ್ಮಲ್ಲಿ ಕಾಣಿಸುವುದು. ಮಾನಸಿಕ ಅಸ್ಥಿರತೆಯಿಂದ ಜೊತೆಗಾರರಿಗೆ ಕಷ್ಟವಾಗಲಿದೆ. ವಾಹನದಿಂದ ಅಪಘಾತವು ಆಗಬಹುದು. ನಿಮ್ಮ ಮಾತನ್ನು ನಿಯಂತ್ರಣ ತಪ್ಪಿ ಆಡುವಿರಿ. ನಿಮಗೆ ಯಾರ ಮಾತಿನ ಮೇಲೂ ಪೂರ್ಣ ನಂಬಿಕೆ ಇರದು. ಖುಷಿಯ ಸಂದರ್ಭದಲ್ಲಿ ನಿಮ್ಮ ನೋವನ್ನು ಕುಟುಂಬವು ಹಂಚಿಕೊಳ್ಳಬಹುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಸ್ವಲ್ಪ ಸಮಸ್ಯೆ ಆಗಬಹುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರಬಹುದು. ಯಾರ ಮಾತನ್ನೋ ಕೇಳಿ ನೀವು ಸಮಸ್ಯೆಯನ್ನು ತಂದುಕೊಳ್ಳಬಹುದು. ಕಣ್ಣಿನ ಸಮಸ್ಯೆಯು ಹೆಚ್ಚಾದೀತು. ವಿವಾಹ ಸಂಬಂಧದಿಂದ ನಿಮಗೆ ತೊಂದರೆಯಾಗಬಹುದು. ಕೆಲಸದಲ್ಲಿ ಮಂದಗತಿಯಲ್ಲಿ ಇರುವಿರಿ. ಬಂಧುಗಳನ್ನು ನೀವು ದೂರ ಮಾಡಿಕೊಳ್ಳುವಿರಿ. ಗತಿಸಿ ಹೋದವರ ನೆನಪನ್ನು ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ಅಧ್ಯಯನದಿಂದ ದೂರವಾಗುತ್ತಾರೆ.
ಮಕರ ರಾಶಿ :
ಪ್ರಯಾಣದ ಸರಿಯಾದ ಯೋಜನೆ ಇಲ್ಲದೇ ಓಡಾಟ, ಖರ್ಚುಗಳು ಹೆಚ್ಚಾಗಲಿವೆ. ಸಹೋದರರಿಂದ ನಿಮಗೆ ಧೈರ್ಯವು ಸಿಗುವುದು. ದಾಂಪತ್ಯದಲ್ಲಿ ಸಂತೋಷವಿರಲು ಹೊಸತನ ಬೇಕಾದೀತು. ಮಾನಸಿಕ ಖಿನ್ನತೆಯಿಂದ ಹೊರಬರಲು ಸ್ನೇಹಿತರು ಸಹಾಯ ಮಾಡುವರು. ಸಂಗಾತಿಯ ನಡುವಿನ ವಾಗ್ವಾದವು ವಿಕೋಪಕ್ಕೆ ಹೋಗಬಹುದು. ನೀವು ಅಂದುಕೊಂಡ ಕಾರ್ಯವನ್ನು ಮಾಡಲು ಸಮಯವೇ ಸಿಗದು. ಯಾವುದೇ ಉತ್ತಮ ಸ್ಥಾನಮಾನವಿಲ್ಲದೇ ನಿಮಗಿರಲಾಗದು. ನೀವು ಅಂದುಕೊಂಡಿದ್ದು ಮಾತ್ರವೇ ಸತ್ಯವಾಗಿ ಇರದು. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಫಲವು ದೊರೆಯುವುದು. ವಾಹನ ಸಂಚಾರದಲ್ಲಿ ನಿಮಗೆ ಭಯವಾಗಬಹುದು. ಆರ್ಥಿಕವಾಗಿ ನೀವು ಬಲವಾಗಿತ್ತಿರುವುದು ನಿಮಗೆ ಹೆಮ್ಮೆಯ ವಿಚಾರವಾಗುವುದು. ಪ್ರೇಯಸಿಯ ಜೊತೆ ಕಾಲಹರಣ ಮಾಡಬಹುದು. ವಿಶ್ವಾಸ ಗಳಿಕೆಯು ನಿಮ್ಮ ಇಂದಿನ ಉದ್ದೇಶವಾಗಲಿದೆ. ಕಠಿಣ ಪರಿಶ್ರಮದ ಹೊರತಾಗಿ ಸರಿಯಾದ ಫಲಿತಾಂಶವನ್ನು ಸಾಧಿಸಲಾಗುವುದಿಲ್ಲ.
ಕುಂಭ ರಾಶಿ :
ನಿಮ್ಮ ವಸ್ತುವಿಗೆ ಆಗುವ ಅಲ್ಪ ಹಾನಿಯನ್ನೂ ನೀವು ಸಹಿಸಲಾರಿರಿ. ಅನಾಯಾಸದಿಂದ ಬರುವ ಹಣವನ್ನು ದುರುಪಯೋಗ ಮಾಡುವಿರಿ. ಒತ್ತಡದಿಂದ ಕಾರ್ಯವನ್ನು ಮಾಡುವುದು ನಿಮಗೆ ಅಭ್ಯಾಸವಾಗಿದೆ. ಆತ್ಮೀಯರಿಂದ ನೀವು ಸಹಾಯವನ್ನು ಪಡೆಯುವಿರಿ. ನೀವು ಕಾರ್ಯದಲ್ಲಿ ತದೇಕಚಿತ್ತದಿಂದ ಇರುವಿರಿ. ಕೂಡಿಟ್ಟ ಹಣದಿಂದ ನಿಮಗೆ ಇಂದು ಪ್ರಯೋಜನವು ಸಿಗುವುದು. ಹಳೆಯ ರೋಗವು ಮತ್ತೆ ಕಾಣಿಸಿಕೊಳ್ಳಬಹುದು. ಕಛೇರಿಯಲ್ಲಿ ಅನ್ಯ ಕಾರಣಗಳಿಂದ ನಿಮ್ಮ ಕೆಲಸಗಳು ನಿಧಾನವಾಗಿ ಸಾಗಬಹುದು. ಅಪಮಾನವಾದರೂ ತೊಂದರೆ ಇಲ್ಲ, ಬೇಕಾದುದನ್ನು ಕೇಳಿಪಡೆಯಿರಿ. ಅನಿರೀಕ್ಷಿತ ಸುದ್ದಿಯು ನಿಮ್ಮ ಮನಸ್ಸಿಗೆ ಘಾಸಿಯನ್ನು ಮಾಡಬಹುದು. ಜಟಿಲ ಸಮಸ್ಯೆಯನ್ನು ಬಿಡಿಸಿಕೊಳ್ಳಲು ಕಷ್ಟವಾದೀತು. ಆರ್ಥಿಕಭದ್ರತೆಯ ಕಡೆ ಅಧಿಕ ಗಮನವನ್ನು ಕೊಡುವಿರಿ. ಮನಸ್ಸಿಗೆ ನಕಾರಾತ್ಮಕ ಆಲೋಚನೆಯು ಬರದಂತೆ ನೋಡಿಕೊಳ್ಳಿ. ಇಂದು ಹಣಕಾಸಿನ ವಿಚಾರದಲ್ಲಿ ಯಾರನ್ನೂ ಅತಿಯಾಗಿ ನಂಬಬೇಡಿ.
ಮೀನ ರಾಶಿ :
ಅನಾರೋಗ್ಯದದಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಅಸಾಧಾರಣ ಸೋಲೂ ನಿಮಗೆ ಹೆಮ್ಮೆಯನ್ನು ತರಬಹುದು. ಇಂದು ನಿಮ್ಮ ಕುಟುಂಬವು ಸಂತೋಷವಾಗಿ ಇರುವುದನ್ನು ಕಣ್ತುಂಬಿಕೊಳ್ಳುವಿರಿ. ಕೆಲಸದಲ್ಲಿ ಸಾವಧಾನತೆ ಇರಲಿ. ದಾಂಪತ್ಯ ಜೀವನವನ್ನು ಜೋಪಾನವಾಗಿ ನಡೆಸಬೇಕಾದೀತು. ಯಾವುದನ್ನೂ ಕಲ್ಪಿಸಿಕೊಂಡು ದುಃಖಿಸುವುದು ಬೇಡ. ಹಣದ ಪ್ರಾಬಲ್ಯವನ್ನು ತೋರಿಸುವಿರಿ. ಕೆಲವು ಘಟನೆಗಳು ನಿಮ್ಮನ್ನು ಭ್ರಾಂತಗೊಳಿಸಬಹುದು. ಯಾರದೋ ಒತ್ತಡದಿಂದ ನಿಮ್ಮ ದಿನಚರಿಯನ್ನು ವ್ಯತ್ಯಾಸ ಮಾಡಿಕೊಳ್ಳುವಿರಿ. ನಿಮಗೆ ಬರಬೇಕಾದ ಹಣದ ಬಗ್ಗೆ ನಿರ್ಲಕ್ಷ್ಯ ಬೇಡ. ನೀರೀಕ್ಷಿಸಿದಂತೆ ಎಲ್ಲವೂ ನಡೆಯದೇ ಇರಬಹುದು. ನಿಮಗೆ ಬರುವ ಎಚ್ಚರಿಕೆಯ ಕರೆಯನ್ನು ಗಮನಿಸದೇ ಮುನ್ನಡೆಯುವಿರಿ. ಉತ್ತಮವಾದ ಸಮಯವನ್ನು ಎದುರು ನೋಡುವಿರಿ. ಹಣದ ಒಳ ಹರಿವು ನಿಮಗೆ ನೆಮ್ಮದಿಯನ್ನು ಕೊಟ್ಟೀತು. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ.
– ಲೋಹಿತ ಹೆಬ್ಬಾರ್ – 8762924271 (what’s app only)




