Horoscope Today 11 June: ಈ ರಾಶಿಯವರು ಪ್ರೀತಿಪಾತ್ರರನ್ನು ಕಳೆದುಕೊಳ್ಳಬಹುದು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಕೃಷ್ಣ ಪಕ್ಷದ ಪ್ರತಿಪತ್ ತಿಥಿ ಬುಧವಾರ ಪ್ರತಿನಿಧಿಯಾಗಿ ಭಾಗವಹಿಸುವುದು, ಅಜ್ಞಾತ ಸ್ಥಳದಲ್ಲಿ ವಾಸ, ಚಿಂತೆಯಿಂದ ಆರೋಗ್ಯ ಹಾಳು ಇವೆಲ್ಲ ಇರಲಿದೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ವೃಷಭ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಮೂಲಾ, ಯೋಗ: ವ್ಯತಿಪಾತ್, ಕರಣ: ಭದ್ರ, ಸೂರ್ಯೋದಯ – 06 : 04 am, ಸೂರ್ಯಾಸ್ತ – 07 : 00 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ12:32 – 14:09, ಯಮಘಂಡ ಕಾಲ 07:41 – 09:18, ಗುಳಿಕ ಕಾಲ10:55 – 12:32
ಮೇಷ ರಾಶಿ: ಕುಟುಂಬದಲ್ಲಿ ತಪ್ಪು ಗ್ರಹಿಕೆಯಿಂದ ಮನಸ್ತಾಪ ಬರಲಿದೆ. ನಿಮಗೆ ಪ್ರತಿಭೆ, ಸಾಮರ್ಥ್ಯಗಳು ಇವೆ ಎಂದು ನಿಮಗೆ ಅನ್ನಿಸದೇ ಹೋಗಬಹುದು. ಎಲ್ಲವೂ ಏಕಕಾಲಕ್ಕೆ ಪ್ರಕಟವಾಗದು. ಕಾಲಕ್ಕಾಗಿ ತಾಳ್ಮೆಯಿಂದ ಕುಳಿತುಕೊಳ್ಳಬೇಕು. ಕೂಡಿಟ್ಟ ಹಣವು ಇಂದು ನಿಮ್ಮ ಸಮಯಕ್ಕೆ ಸರಿಯಾಗಿ ಸಿಗುವುದು. ನಿಮ್ಮಿಂದ ಪ್ರೀತಿಯನ್ನು ಬಯಸುವವರಿಗೆ ಪ್ರೀತಿಯನ್ನು ಕೊಡಿ. ಅನಾರೋಗ್ಯದ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕು. ನಿರೀಕ್ಷಿತ ವ್ಯಕ್ತಿಗಳ ಭೇಟಿಯಿಂದ ಸಂತಸವಾಗಲಿದೆ. ಎಲ್ಲರಿಂದ ಒಂಟಿಯಾಗಿ ಇರಬೇಕಾಗುವುದು. ಇಂದಿನ ಸನ್ನಿವೇಶವನ್ನು ನಿಭಾಯಿಸುವ ಸಾಮರ್ಥ್ಯವು ಕಂಡು ಸಹೋದ್ಯೋಗಿಗಳು ಆಶ್ಚರ್ಯಪಡುವರು. ಸಣ್ಣ ಉಳಿತಾಯಕ್ಕೆ ಇಂದು ಬೆಲೆಯು ಬಂದಂತಾಗುವುದು. ಜೀವನದ ಲಕ್ಷ್ಯವು ಬೇರೆ ಕಡೆಗೆ ಬದಲಿಸಬಹುದು. ವಿದ್ಯಾಭ್ಯಾಸವನ್ನು ಮುಗಿಸಿದ ನಿಮಗೆ ಕೆಲಸವೂ ಶೀಘ್ರವಾಗಿ ಸಿಗಲಿದೆ. ಇಂದಿನ ನಿಮ್ಮ ಸಮಯದ ವ್ಯತ್ಯಾಸದಿಂದ ಕೆಲವು ಕಾರ್ಯಗಳು ಬದಲಾವಣೆ ಆಗಬಹುದು. ಸಂಗಾತಿಯು ನಿಮ್ಮ ಗುಟ್ಟನ್ನು ಹೊರಹಾಕಬಹುದು. ಬಹಳ ದಿನಗಳಿಂದ ಕಾರ್ಮಿಕರ ವಿಚಾರದಲ್ಲಿ ನಿಮಗೆ ಅಸಮಾಧಾನವಿದ್ದು ಅದನ್ನು ತೋರ್ಪಡಿಸುವಿರಿ.
ವೃಷಭ ರಾಶಿ: ಅನಾರೋಗ್ಯದ ಸಮಸ್ಯೆಗೆ ಚಿಕಿತ್ಸೆಯ ಮೂಲಕ ಅಥವಾ ದೈವದ ಮೂಲಕ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ. ಇಂದು ವ್ಯಾವಹಾರಿಕವಾಗಿರುವ ಮನಶ್ಚಾಂಚಲ್ಯ ಅನೇಕ ವಿಧವಾಗಿ ಕಾಡಬಹುದು. ನಿರಂತರ ಶ್ರಮಕ್ಕೆ ಫಲವಿರುತ್ತದೆ. ಕರ್ತವ್ಯದ ದೃಷ್ಟಯಿಂದ ಮಾಡಿ. ಫಲಾಪೇಕ್ಷೆಯು ಇದ್ದರೆ ಹತಾಶೆಯು ಖಂಡಿತಾ ಇರುವುದು. ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳನ್ನು ತೆಗೆದುಹಾಕಿ. ಬರಬೇಕಾದ ಹಣವು ಮಧ್ಯದಲ್ಲೇ ನಿಲ್ಲಬಹುದು. ಧನಾತ್ಮಕ ಅಂಶಗಳನ್ನು ಹುಡುಕಿ ಮುನ್ನಡೆಯಿರಿ. ದಾರಿ ತಾನಾಗಿಯೇ ತೆರದುಕೊಳ್ಳುವುದು. ಮಕ್ಕಳಿಗೆ ಜವಾಬ್ದಾರಿ ಕೊಡಲು ಭಯ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಮಾಡಿ, ಆದರೆ ಇನ್ನೊಬ್ಬರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಕಲಾವಿದರಿಗೆ ತಿಳಿವಳಿಕಯಿಂದ ಕೂಡಿದ ನಿಮ್ಮ ಜೀವನ ಸುಗಮವಾಗಲಿದೆ. ನೀವು ಸಹಾಯ ಮಾಡುತ್ತೀರೆಂಬ ನಂಬಿಕೆಯಿಂದ ಜನರು ನಿಮ್ಮ ಬಳಿ ಕೇಳುವರು. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇದೆ. ನಿಮ್ಮ ವಿವಾಹದ ಮಾತುಕತೆಗಳು ನಿಮಗೆ ಖುಷಿ ಕೊಡಬಹುದು.
ಮಿಥುನ ರಾಶಿ: ಅಪರಿಚಿತ ವಿಚಾರದಲ್ಲಿ ಆಯ್ಕೆ ಮಾಡುವ ಸನ್ನಿವೇಶ ಬರುವುದು. ಇದು ನಿಮ್ಮ ಪರೀಕ್ಷೆಯ ಕಾಲವೂ ಹೌದು. ಇಂದು ತಂದೆ ಹಾಗು ತಾಯಿಯರ ಸೇವೆಯನ್ನು ಮಾಡುವ ಅವಕಾಶವು ಸಿಗುವುದು. ಮನೆಯಿಂದ ದೂರ ಹೋಗುವಾಗ, ಕಛೇರಿಗೆ ಹೋಗುವಾಗ ದೇವರಿಗೆ ನಮಸ್ಕರಿಸಿ ಮುನ್ನಡೆಯಿರಿ. ದೇಹ ಸೌಂದರ್ಯವನ್ನು ಬೆಳೆಸಿಕೊಳ್ಳಲು ಸಮಯವನ್ನು ಮೀಸಲಿಡುವಿರಿ. ವಿಧಿಯನ್ನು ಹಳಿದು ನಿಮಗೆ ಸಮಾಧಾನವನ್ನು ತಂದುಕೊಳ್ಳುವಿರಿ. ನಿಮ್ಮ ಮಾತುಗಳಿಂದ ಕೆಲವರು ಪ್ರೇರಣೆ ಪಡೆದರೆ, ಕೆಲವರು ನಿಮ್ಮ ಮಾತನ್ನೇ ಆಡಿಕೊಳ್ಳುವರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತಲ್ಲೀನರಾಗಿ ಹೊರ ಜಗತ್ತನ್ನು ಮರೆಯುವರು. ಮನೆ ಮತ್ತು ಉದ್ಯೋಗವೆಂದು ಅಲೆಯುತ್ತಿದ್ದರೆ ಸ್ವಲ್ಪ ದಿನ ವಿರಾಮ ಪಡೆದು ಆಮೇಲೆ ಹೋಗಿ. ಕೆಲಸವು ಚೆನ್ನಾಗಿ, ಉತ್ಸಾಹದಿಂದ ನಡೆಯುವುದು. ನಿಮ್ಮ ವಿರುದ್ಧ ಮಾತನಾಡಿದವರಿಗೆ ಇಂದು ಕಾಲವೇ ಉತ್ತರಿಸುವುದು. ನಿಮ್ಮ ಏಕಾಗ್ರತೆಯ ಕಾರ್ಯಕ್ಕೆ ಭಂಗವಾಗುವ ಸಾಧ್ಯತೆ ಇದೆ. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು. ಜವಾಬ್ದಾರಿಯಿಂದ ತಲೆ ಭಾರವಾಗುವುದು.
ಕರ್ಕಾಟಕ ರಾಶಿ: ಕಛೇರಿಯಲ್ಲಿ ಅಧಿಕಕೆಲಸ ಕೊಟ್ಟು ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಬಹುದು. ನೀವು ಯಾರನ್ನೂ ಲಘುವಾಗಿ ಕಾಣುವುದು ಬೇಡ. ನೀರೀಕ್ಷಿಸಿದ ವಸ್ತುಗಳು ಕೆಲವು ಸಿಗಲಿವೆ. ಮನಸ್ಸು ಸ್ವಲ್ಪ ಎಲ್ಲವನ್ನೂ ಮರೆತು ಹಗುರಾಗಬಹುದು. ಅನಾರೋಗ್ಯದಿಂದಲೂ ಚೇತರಿಕಯನ್ನು ಕಂಡುಕೊಳ್ಳಬಹುದಾಗಿದೆ. ಮಕ್ಕಳ ಮುಂದಿನ ವಿದ್ಯಾಭ್ಯಾಸದ ಚಿಂತೆ ಇರಲಿದೆ. ಒತ್ತಾಯ ಪೂರ್ವಕವಾಗಿ ನಿಮಗೆ ಇಚ್ಛೆಯಿರುವ ವಿಷಯವನ್ನು ಹೇರಬೇಡಿ. ಹಂಚಿಕೆಯ ವಿಚಾರದಲ್ಲಿ ನಿಮಗೆ ಪೂರ್ಣವಾದ ಮನಸ್ಸಿರದು. ಆಯ್ಕೆ ಮಾಡಲು ಅವರಿಗೆ ಸ್ವಾತಂತ್ರ್ಯವಿರಲಿ. ಇದರಿಂದ ನಿಮಗೆ ನಿರಾಸೆಯಾಗಲಿದೆ. ಬಹಳ ಬೇಸರಗೊಳ್ಳುವಿರಿ. ಹಣವೂ ನಷ್ಟ ಶ್ರಮವೂ ನಷ್ಟವಾಗಿ ದುಃಖಿಸುವಿರಿ. ಕಳೆದುಕೊಂಡದ್ದನ್ನು ಪಡೆಯಬೇಕು ಎಂಬ ಛಲವು ನಿಮ್ಮಲ್ಲಿ ಇರುವುದು. ಮನಸ್ತಾಪವನ್ನು ಮನಸ್ಸಿನೊಳಗೇ ಇಟ್ಟುಕೊಳ್ಳುವಿರಿ. ಆಸ್ತಿಯ ವಿಚಾರಕ್ಕೆ ನೆರೆಹೊರೆಯ ನಡುವೆ ಕಲಹವಾದೀತು. ನಿಮ್ಮ ಆರಾಮದ ದಿನಚರಿಯಲ್ಲಿಯೂ ನಿಮಗೆ ಇಂದು ಕಿರಿಕಿರಿ ಆಗುವುದು.
ಸಿಂಹ ರಾಶಿ: ಮನೆಯ ಹೊರ ಭಾಗದ ಸುಂದರೀಕರಣಕ್ಕೆ ಪ್ರಾಶಸ್ತ್ಯ ಕೊಡುವಿರಿ. ನೀವು ಇಂದು ಹೊಸತನವನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುವಿರಿ. ವಿದೇಶಕ್ಕೆ ಹೋಗಲು ಆಲೋಚನೆ ಮಾಡಿದ್ದರೆ ಹೊರಡಬಹುದು. ಆನಾರೋಗ್ಯದಿಂದ ಮುಕ್ತಿಸಿಗಲಿದೆ. ಸಹೋದರನ ಹಾಗೂ ತಂದೆಯ ಸಹಾಯ ನಿಮಗೆ ಸಿಗಲಿದೆ. ಆಪ್ತರ ಚಿಕಿತ್ಸೆಗೆ ಧನಸಹಾಯ ಮಾಡಬೇಕಾಗುವುದು. ರಾಜಕಾರಣಿಗಳು ಗೆಲ್ಲುವ ತಂತ್ರವನ್ನು ಹೂಡುವರು. ನೂತನ ವಿದ್ಯುತ್ ಉಪಕರಣವನ್ನು ಖರೀದಿಸುವಿರಿ. ವಾಹನವು ರಿಪೇರಿಗೆ ಬರಲಿದೆ. ಹಣವೂ ನಷ್ಟವಾಗುವುದು. ಕಳ್ಳತನದ ಅಪವಾದವನ್ನು ಹೊತ್ತುಕೊಳ್ಳುವಿರಿ. ಸಂಗಾತಿಯ ಬೇಸರವನ್ನು ದೂರ ಮಾಡಲು ಎಲ್ಲಿಯಾದರೂ ದೂರ ಕರೆದುಕೊಂಡು ಹೋಗಿ. ಅಂತರಂಗದ ಪರಿವರ್ತನೆ ಸುಲಭವಲ್ಲ. ದೈಹಿಕ ಶ್ರಮವು ಇಂದು ಅಧಿಕವಾಗುವುದು. ನಿಮ್ಮ ಶಿಷ್ಯರಿಂದ ನಿಮಗೆ ಉಡುಗೊರೆ ಸಿಗುವ ಸಾಧ್ಯತೆ ಇದೆ. ಭೂಮಿಯನ್ನು ಮಾರಾಟಮಾಡುವ ಸ್ಥಿತಿಯು ಬರಲಿದೆ. ಉತ್ಸಾಹದಿಂದ ನೀವು ಇಂದಿನ ಕಾರ್ಯವನ್ನು ಮಾಡುತ್ತಿದ್ದರೂ ದಿನದ ಕೊನೆಗೆ ಸಲ್ಲದ ಮಾತು.
ಕನ್ಯಾ ರಾಶಿ: ದೂರ ಪ್ರಯಾಣಕ್ಕೆ ಸಹಚರು ಒತ್ತಾಯ ಮಾಡಬಹುದು. ಇಂದು ನಿಮ್ಮ ಹಳೆಯ ಕಾರ್ಯಗಳನ್ನೇ ನೆನೆದು ಹತಾಶಗೊಳ್ಳಬಹುದು. ನೀವು ಒಂಟಿಯಾಗಿರುವುದನ್ನು ಯಾರಾದರೂ ತಪ್ಪಿಸಬಹುದು. ಆಪ್ತರ ಜೊತೆ ಮನಸ್ಸು ಬಿಚ್ಚಿ ಮಾತನಾಡಿ. ಸರ್ಕಾರದ ಕೆಲಸಗಳು ನಿಧಾನವಾಗಲಿದೆ. ಮತ್ತೆ ಮತ್ತೆ ಬರುವ ಸಂಕಷ್ಟಕ್ಕೆ ದೈವಕ್ಕೆ ಮೊರೆ ಹೋಗಬೇಕಾಗುವುದು. ಭಾರವಾದುದನ್ನು ಎತ್ತಿ ಅಪಾಯ ತಂದುಕೊಳ್ಳುವಿರಿ. ಪ್ರತಿಕೂಲ ವಾತಾವರಣದಲ್ಲಿಯೂ ನಿಮಗೆ ಅನುಕೂಲಕರ ವಾತಾವರಣ ಇರಲಿದೆ. ಸರ್ಕಾರಿ ಉದ್ಯೋಗಿಗಳಿಗೆ ನಿವೃತ್ತಿ ಸಿಗುವ ದಿನ. ಬಹಳ ದಿನಗಳ ಅನಂತರ ದಾಂಪತ್ಯದಲ್ಲಿ ಸಂತೋಷ ಕಾಣಿಸುವುದು. ಖಾಸಗಿ ಉದ್ಯೋಗಿಗಳನ್ನು ಸಂಸ್ಥೆ ತೆರವುಗೊಳಿಸಬಹುದು. ಕುಟುಂಬದಲ್ಲಿ ನಿಮ್ಮನ್ನು ಸರಿಯಾಗಿ ಆದರಿಸದೇ ಇರಬಹುದು. ಸುತ್ತಾಟದಿಂದ ಆಯಾಸವಿದೆ. ಸ್ವಲ್ಪ ವಿಶ್ರಾಂತಿಯ ಅವಶ್ಯಕತೆ ಇರಲಿದೆ. ನಿಮ್ಮ ಇಷ್ಟದವರು ನಿಮ್ಮ ಭೇಟಿಯಾಗಬಹುದು.
ತುಲಾ ರಾಶಿ: ಬರುವ ಆದಾಯವನ್ನು ಮತ್ತಾರೋ ಕಸಿದುಕೊಳ್ಳಬಹುದು. ನಿಮ್ಮ ವಿವಾಹದ ಪ್ರಸ್ತಾಪಗಳು ಬರಬಹುದು. ನೀವು ನಿಮ್ಮ ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ. ಮನೆಯವರ ಜೊತೆ ಖುಷಿಯಿಂದ ಕಾಲಕಳೆಯುವಿರಿ. ಪ್ರವಾಹದ ವಿರದ್ಧ ಈಜಲು ಸಾಧ್ಯವಾಗದು. ವಾಹನ ಅಪಘಾತವು ಆಗಬಹುದು, ಜಾಗರೂಕತೆಯಿಂದ ಇರಿ. ಕೃಷಿಕರು ತಾವು ಬೆಳೆದ ಬೆಳೆಯಿಂದ ನಷ್ಟವನ್ನು ಅನುಭವಿಸುವಿರಿ. ನಿಮ್ಮನ್ನು ಹಾದಿ ತಪ್ಪಿಸಲು ಪ್ರಯತ್ನಿಸಿದ ವ್ಯಕ್ತಿಗಳು ನಿಮ್ಮ ಸಾಧನೆಯನ್ನು ಕಂಡು ಕೊರಗಬಹುದು. ನೀವೇ ನಿರ್ಮಿಸಿಕೊಂಡ ಯಶಸ್ಸಿನ ಮೆಟ್ಟಿಲನ್ನು ಅನಾಯಾಸದಿಂದ, ಆನಂದದಿಂದ ಏರುವಿರಿ. ಪ್ರೀತಿಯನ್ನು ಪ್ರಕಟಪಡಿಸಲು ವಿಳಂಬವಾಗುವುದು. ಬಂಧುಗಳ ಜೊತೆ ವಿವಾದವು ಏರ್ಪಡಲಿದ್ದು ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯವೂ ಬರಬಹುದು. ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲು ಬಹಳ ಪ್ರಯತ್ನಶೀಲರಾಗುವರು. ಆದಾಯದ ಗುಟ್ಟನ್ನು ಎಷ್ಟೇ ಒತ್ತಾಯ ಮಾಡಿದರೂ ಹೇಳಲಾರಿರಿ. ವ್ಯವಹಾರದಲ್ಲಿ ಬರುವ ಸಮಸ್ಯೆಯನ್ನು ಮೊದಲೇ ಯೋಚಿಸಿ, ಸಿದ್ಧತೆ ಮಾಡಿ.
ವೃಶ್ಚಿಕ ರಾಶಿ: ದೀರ್ಘಕಾಲದ ಬಂಡವಾಳ ಹೂಡಿಕೆಗೆ ಯೋಜನೆ ತಯಾರಾಗುವುದು. ಇಂದು ಗೌರವಕ್ಕೆ ಯಾರಿಂದಲಾದರೂ ಚ್ಯುತಿಯಾಗಬಹುದು. ನಡೆ, ನುಡಿಗಳಲ್ಲಿ ಬಹಳ ಜಾಗರೂಕರಾಗಿರಿ. ಧನವು ಕೈಗೆಟುಕದ ದ್ರಾಕ್ಷಿಯಂತೆ ಅನ್ನಿಸಬಹುದು. ಕೆಟ್ಟ ಆಲೋಚನೆಗಳು ನಿಮ್ಮ ಮನಸ್ಸನ್ನು ಹಾಳು ಮಾಡಬಹುದು. ಅನಾರೋಗ್ಯವು ನಿರ್ಲಕ್ಷ್ಯದಿಂದ ಹೆಚ್ಚಾಗುವುದು. ನಿಮಗೆ ಬರಬೇಕಾದ ಹಣದ ಕುರಿತು ಲೆಕ್ಕವಿರಲಿ. ಕೆಲಸದಲ್ಲಿ ಆಲಸ್ಯ ಮಾಡಿ ಬರಬೇಕಾದುದನ್ನು ಕಳೆದುಕೊಳ್ಳುವಿರಿ. ಯೋಗ್ಯರ ಜೊತೆ ನಿಮ್ಮ ಮಾತುಕತೆಗಳು ಇರಲಿ. ಇಲ್ಲದಿದ್ದರೆ ಅಪಮಾನವಾದೀತು. ಯಾವುದನ್ನೇ ಕಳೆದುಕೊಂಡರೂ ಇನ್ನಷ್ಟು ಉತ್ತಮವಾದುದನ್ನು ಪಡೆಯಲು ಸಂಭವಿಸಿರಬಹುದು ಎಂದು ಭಾವಿಸಿ. ಮನಸ್ಸಿನ ನೆಮ್ಮದಿಯು ಕೆಡಬಹುದು. ಆಗದೇ ಇರುವ ಕೆಲಸಕ್ಕೆ ಬೇಸರ ಬೇಡ. ವೃತ್ತಿಯಲ್ಲಿ ಆತಂಕವು ಇರಲಿದೆ. ಪ್ರಾಣಿಗಳಿಂದ ಭಯಗೊಳ್ಳುವ ಸಾಧ್ಯತೆ ಇದೆ. ಎದುರಿನವರ ಇಂಗಿತವನ್ನು ತಿಳಿದುಕೊಳ್ಳದೇ ಏನನ್ನಾದರೂ ಹೇಳುವಿರಿ.
ಧನು ರಾಶಿ: ಮಂದಹಾಸಕ್ಕೆ ಯಾರಾದರೂ ಸೋಲಬಹುದು. ನೀವು ಪ್ರಯಾಣವನ್ನು ಅನಿವಾರ್ಯ ಕಾರಣಕ್ಕೆ ಮಾಡಬೇಕಾಗಬಹುದು. ಅನಿರೀಕ್ಷಿತ ಎದುರಾದ ಖರ್ಚಿನಿಂದಾಗಿ ಸ್ನೇಹಿತರಲ್ಲಿ ಹಣವನ್ನು ಕೇಳುವಿರಿ. ನಿಮ್ಮ ಬಳಿ ಅತಿಯಾದ ಕೆಲಸವನ್ನು ಪಡೆಯಬಹುದು. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿ ವಿವಾದಗಳೂ ತಾರಕಕ್ಕೆ ಹೋಗಬಹುದು. ನಿಮ್ಮ ಮತ್ತು ಮೇಲಧಿಕಾರಿಗಳ ನಡುವೆ ಮನಸ್ತಾಪ ಉಮನಟಾಗಬಹುದು. ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ಸಿಗಲಿದೆ. ಇಂದು ಬೇಸರಗೊಳ್ಳುವ ವಿಚಾರಗಳು ಬರಬಹುದು. ಸುಖ ಹಾಗೂ ದುಃಖವನ್ನು ಸಮವಾಗಿ ತೆಗೆದುಕೊಳ್ಳಬೇಕಾದೀತು. ಅತಿಯಾದ ಸೌಖ್ಯವನ್ನು ಪಡೆಯಲು ಹೋಗಿ ಅನಾಹುತವನ್ನು ಮಾಡಿಕೊಳ್ಳಬಹುದು. ತಪ್ಪಿನಿಂದ ಹೊಬರಲಾಗದು. ಇಂದು ನಿಮ್ಮ ಸಹಾಯದಿಂದ ಕುಟುಂಬವು ಸಂತೋಷಗೊಳ್ಳುವುದು. ಸಮಸ್ಯೆಯನ್ನು ದೊಡ್ಡ ಮಾಡಿಕೊಳ್ಳಲಿದ್ದೀರಿ. ಬಂಧುಗಳು ನಿಮ್ಮ ಸಹಾಯಕ್ಕೆ ಬರಬಹುದು. ಯಾರಾದರೂ ನಿಮ್ಮನ್ನು ಚೇಡಿಸಬಹುದು. ಸ್ನೇಹಿತರಿಗೆ ನಿಮ್ಮದಾದ ಕೆಲವು ಆಯ್ಕೆಗಳನ್ನು ಹೇಳಿ.
ಮಕರ ರಾಶಿ: ಇನ್ನೊಬ್ಬರ ಶಿಪಾರಸ್ಸಿನ ಮೇಲೆ ಉದ್ಯೋಗಕ್ಕೆ ಸೇರುವಿರಿ. ನೀವು ಹಿರಿಯರ ಜೊತೆ ಗೌರವಯುತವಾಗಿ ವರ್ತಿಸಿ. ಕಾರ್ಯಗಳು ಶೀಘ್ರವಾಗಿ ಫಲಿಸದೇ ಇರುವುದು ನಿಮಗೆ ಬೇಸರ ತಂದೀತು. ನಿಮ್ಮ ವೇಗಕ್ಕೆ ಸಕಾಲದಲ್ಲಿ ಆಗುವ ಕಾರ್ಯಗಳೂ ತುಂಬ ದೀರ್ಘವೆನಿಸುತ್ತದೆ. ಹಣಕಾಸಿನ ವಿಚಾರವಾಗಿ ದಾಂಪತ್ಯದಲ್ಲಿ ಸಣ್ಣ ಕಲಹವಾಗಬಹುದು. ತಾತ್ಕಾಲಿಕ ಜವಬ್ದಾರಿಯೇ ಪೂರ್ಣಾವಧಿಯಾಗಿ ಮಾಡಬೇಕಾಗುವುದು. ಯಾರದೋ ಮಾತಿನ ಆಧಾರದ ಮೇಲೆ ನೀವು ನಿಮ್ಮವರನ್ನು ದ್ವೇಷಿಸಬಹುದು. ಉದ್ಯೋಗದಲ್ಲಿ ಒತ್ತಡವಿದ್ದು ಅದನ್ನು ನಿಭಾಯಿಸುವ ಕ್ರಮವನ್ನು ಕಲಿತುಕೊಳ್ಳಿ. ನಿಮ್ಮೊಳಗೆ ಸಿಟ್ಟಿನಿಂದ ಕುದಿಯುವಿರಿ. ನಿಮ್ಮ ಕೆಲಸದಲ್ಲಿ ಅಕಸ್ಮಾತ್ ತೊಂದರೆಗಳು ಬರುವುದು. ಎಲ್ಲವನ್ನೂ ಸಮಾನಮನಸ್ಸಿನಿಂದ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳುವಿರಿ. ಆಪ್ತರ ಜೊತೆ ಒಂದಿಷ್ಟು ಸಮಯವನ್ನು ಕಳೆಯಬಹುದು. ಕುಟುಂಬದಲ್ಲಿ ಭಿನ್ನಮತ ಇರಲಿದೆ.
ಕುಂಭ ರಾಶಿ: ಸ್ವಂತ ಮನೆಯನ್ನು ಖರೀದಿಸಲು ಓಡಾಟ ಮಾಡುವಿರಿ. ಇಂದು ಅಧಿಕ ಸಂಪತ್ತಿನ ವ್ಯಯ ಆಗುವುದು. ಕಾರ್ಯ ಮಾಡುವ ಧೈರ್ಯವಿದ್ದರೂ ಕಾರ್ಯದಲ್ಲಿ ನಿರಾಸಕ್ತಿಯೂ ಕಾಣಿಸಬಹುದು. ದೂರದಲ್ಲಿರುವ ನಿಮಗೆ ಸಂಗಾತಿಯ ಸಂಗ ಸಿಗುವ ಸಾಧ್ಯತೆ ಇದೆ. ನಟನೆಯಲ್ಲಿ ಆಸಕ್ತಿಯಿರುವವರಿಗೆ ಅವಕಾಶಗಳು ಲಭ್ಯವಾಗುತ್ತವೆ. ಬಡ್ತಿಯನ್ನು ಪಡೆಯಲು ನಾನಾ ಪ್ರಯತ್ನ ನಡೆಯಲಿದೆ. ಇಂದು ನ್ಯಾಯಾಲಯದಲ್ಲಿ ತೀರ್ಪು ಬರಲಿದೆ. ಎಂತಹದೇ ತೀರ್ಮಾನ ಬಂದರೂ ಸ್ವೀಕರಿಸಿ. ಮಕ್ಕಳ ಜೊತೆ ಸಮಯವನ್ನು ಕಳೆಯುವಿರಿ. ಮನೆಯಿಂದ ದೂರವಿರುವ ನೀವು ಬೇಸರಗೊಳ್ಳುವಿರಿ. ನಿಮ್ಮ ಸ್ನೇಹಿತರು ನಿಮ್ಮ ಗುಟ್ಟನ್ನು ಹೊರಹಾಕಿಯಾರು. ಧಾರ್ಮಿಕವಾಗಿ ಆಸಕ್ತಿಯನ್ನು ಇಟ್ಟುಕೊಳ್ಳುವಿರಿ. ಕಾಲು ನೋವು ಕಾಣಿಸಿಕೊಂಡೀತು. ಹಿರಿಯರಿಂದ ಆಶೀರ್ವಾದವು ಸಿಗಲಿದೆ. ಭೂಮಿಯ ವ್ಯವಹಾರದಲ್ಲಿ ನೀವು ಲಾಭಗಳಿಸಬಹುದಾಗಿದೆ. ಆಪ್ತರೇ ನಿಮ್ಮ ಬಗ್ಗೆ ಹಗುರಾಗಿ ಮಾತನಾಡುವರು. ಧನಲಾಭವಾದರೂ ಮನಸ್ಸಿನಲ್ಲಿ ನೆಮ್ಮದಿ ಕೊರತೆ ಕಾಣುವುದು. ಭೂಮಿಯ ವ್ಯವಹಾರವನ್ನು ಮಾಡಲು ನಿಮಗೆ ಒತ್ತಡ ಬರಬಹುದು.
ಮೀನ ರಾಶಿ: ದೂರದ ಊರಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನ ಬರಬಹುದು. ಇಂದು ಮನಸ್ಸಿನ ಕಿರಿಕಿರಿಯನ್ನು ಅನುಭವಿಸದೇ ಅನ್ಯ ಮಾರ್ಗವಿರದು. ಸ್ವಬುದ್ಧಿಯಿಂದ ಕಾರ್ಯಗಳನ್ನು ಮಾಡುವಿರಿ. ನಿಮ್ಮ ಪ್ರೇಮವು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗದು. ಜಾಗೃತಿ ಮೊದಲಾದ ಸಾಮಾಜಿಕ ಕಾರ್ಯಗಳಿಗೆ ತೆರಳಿ ಒಂಟಿತನವನ್ನು ದೂರಮಾಡಿಕೊಳ್ಳುವಿರಿ. ಇಂದು ನಿಮಗೆ ಹೊಸತನ್ನೇನಾದರೂ ಮಾಡುವ ಮನಸ್ಸಿದ್ದರೂ ಬೇಕಾದ ವ್ಯವಸ್ಥೆ, ಪರಿಸ್ಥಿತಿಗಳು ಇಲ್ಲದೇ ನಿಲ್ಲಿಸಬೇಕಾದೀತು. ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಗೊಂದಲಗಳು ಎದುರಾಗುವುದು. ಉದ್ಯೋಗದಲ್ಲಿ ಸ್ವಲ್ಪ ಹಿನ್ನಡೆಯಾಗುವ ಸಾಧ್ಯತೆ ಇದೆ. ಗೊಂದಲಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ತೀರ್ಮಾನಕ್ಕೆ ಬರದೇ ಅನುಭವಿಸಬೇಕಾಗಬಹುದು. ಅನುಭವಿಗಳ ಮಾರ್ಗದರ್ಶನ ಪಡೆಯಿರಿ. ಮಾತನ್ನು ಹಿತವೂ ಮಿತವೂ ಆಗುವಂತೆ ಮಾಡಿ. ಶತ್ರುಗಳು ನಿಮಗೆ ಹೆಚ್ಚು ತೊಂದರೆಯನ್ನು ಕೊಡಬಹುದು.
-ಲೋಹಿತ ಹೆಬ್ಬಾರ್ – 8762924271 (what’s app only)