Horoscope Today 18 May: ಈ ರಾಶಿಯವರು ಇನ್ನೊಬ್ಬರ ಪ್ರಶಂಸೆಯನ್ನು ಸಹಿಸಲಾರರು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ಷಷ್ಠೀ ತಿಥಿ, ಭಾನುವಾರ ಮನೋರಂಜನೆಯಲ್ಲಿ ಭಾಗಿ, ಅಧ್ಯಾತ್ಮದಲ್ಲಿ ಆಸಕ್ತಿ, ಕ್ರೀಡೆಯಲ್ಲಿ ನಿರಾಶೆ ಇವೆಲ್ಲ ಇರಲಿದೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

Horoscope Today 18 May: ಈ ರಾಶಿಯವರು ಇನ್ನೊಬ್ಬರ ಪ್ರಶಂಸೆಯನ್ನು ಸಹಿಸಲಾರರು
ಜ್ಯೋತಿಷ್ಯ
Edited By:

Updated on: May 18, 2025 | 1:18 AM

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಭಾನುವಾರ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಶುಕ್ಲ, ಕರಣ: ಗರಜ, ಸೂರ್ಯೋದಯ – 06 : 05 am, ಸೂರ್ಯಾಸ್ತ 06 : 52 pm, ಇಂದಿನ ಶುಭಾಶುಭಕಾಲ: ರಾಹು ಕಾಲ 17:17 – 18:53, ಯಮಘಂಡ ಕಾಲ 12:29 – 14:05, ಗುಳಿಕ ಕಾಲ 15:41-17:17

ಮೇಷ ರಾಶಿ: ವಿಶ್ರಾಂತಿಯಿಂದ ಆಲಸ್ಯ ಅಧಿಕವಾಗಲಿದೆ. ನಿಮ್ಮ ಬಹಳ ದಿನಗಳಿಂದ ಹಾಗೆಯೇ ಇದ್ದ ಸರ್ಕಾರದ ಕೆಲಸಗಳು ಮುಕ್ತಾಯ ಮಾಡಬೇಕಾದ ಸ್ಥಿತಿ ಇರುವುದು. ಹತ್ತಿರದ ಸಂಬಂಧಿಗಳೊಂದಿಗೆ ಪ್ರಮುಖ ಚರ್ಚೆಯನ್ನು ಮಾಡುವಿರಿ. ಮಕ್ಕಳಿಂದ ಲಾಭ, ಹೆಮ್ಮೆ ಸಿಗಬಹುದು. ಸಮಯವನ್ನು ಸಮಾಜಮುಖಿ ಕಾರ್ಯಗಳಲ್ಲಿ ಬಳಸಿದರೆ ಒಳಿತು. ಪ್ರೀತಿಯಲ್ಲಿ ತಿಳಿವಳಿಕೆ ಹೆಚ್ಚಾಗುತ್ತದೆ. ಯಾರ ಸ್ನೇಹವನ್ನೂ ವೇಗವಾಗಿ ಒಪ್ಪಿಕೊಳ್ಳಲಾರಿರಿ. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿರಿ. ಅಪರಿಚಿತರನ್ನು ನಂಬಿ ಹಣವನ್ನು ಕಳೆದುಕೊಳ್ಳಬೇಡಿ. ನೋವನ್ನು ಮನಸ್ಸನಲ್ಲಿ ಇಟ್ಟುಕೊಂಡು ಸಂಕಟಪಡುವಿರಿ. ಬಾಂಧವರ ಸಂಪರ್ಕದಿಂದ ದೂರವಿರುವಿರಿ. ಹೊಸ ವಸ್ತ್ರಗಳನ್ನು ಧರಿಸುವಿರಿ. ಯಾರದೋ ಮಾತಿಗೆ ಕುಣಿಯುವುದು ಬೇಡ. ನಿಮ್ಮ ಮನಸ್ಸಿಗೆ ಸರಿ ಎನಿಸಿದ್ದರೆ ಮುಂದುವರಿಯಿರಿ. ಉಡುಗೊರೆಯನ್ನು ಸ್ನೇಹಿತರಿಂದ ಸ್ವೀಕರಿಸುವಿರಿ. ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಇಂದಿನ ಸಮಯವು ವ್ಯರ್ಥವಾಗುವುದು.

ವೃಷಭ ರಾಶಿ: ನಿಮಗೆ ಉಂಟಾದ ಬೇಸರವನ್ನು ಹೇಳಿಕೊಳ್ಳಲಾರಿರಿ. ಇಂದು ನೀವು ಅಪರೂಪದ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವಿರಿ. ಅದರಿಂದ ನಿಮ್ಮ ಸ್ಥಾನಮಾನ, ಅಲೋಚನಾ ಕ್ರಮಗಳು ಬದಲಾಗುವುದು.‌ ಹೊಸ ಸ್ನೇಹಿತರು ನಿಮ್ಮ ವ್ಯಕ್ತಿತ್ವದಿಂದ ಆಕರ್ಷಿತರಾಗುತ್ತಾರೆ. ಸಂಗಾತಿಯ ಭಾವನೆಗಳ ಬಗ್ಗೆ ನಿಮ್ಮ ನಿರ್ಲಕ್ಷ್ಯ ತೊಂದರೆ ಉಂಟುಮಾಡಬಹುದು. ನಿಮ್ಮನ್ನು ಕೆಟ್ಟವರ ಸಹವಾಸದಿಂದ ಮನೆಯವರು ದೂರಮಾಡುವರು. ಸಂಭಾಷಣೆಯ ಕೊರತೆ ಮದುವೆಯ ಸಂಬಂಧದಲ್ಲಿ ಬಿರುಕು ತರಬಹುದು. ಸಂಯಮದಿಂದ ನಡೆದುಕೊಳ್ಳುವುದು ಉತ್ತಮ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಮುಖ್ಯ. ಪ್ರಯೋಜನವಿಲ್ಲದೇ ಯಾವ ಕಾರ್ಯವನ್ನೂ ಮಾಡು ಪ್ರಯತ್ನಿಸುವುದಿಲ್ಲ. ಸಾಹಸ ಕಾರ್ಯಕ್ಕೆ ಒಮ್ಮೆಲೇ ಮುಂದಾಗುವುದು ಬೇಡ. ಅಸತ್ಯವನ್ನು ಹೇಳುವುದು ಗೊತ್ತಾದೀತು. ಹಿತವಚನದಿಂದ ಯಾವ ಪರಿವರ್ತನೆಯೂ ಆಗದು. ಒಗ್ಗಟ್ಟಿನ ಕೆಲಸದಲ್ಲಿ ಜಯವಿರಲಿದೆ. ನಿಮ್ಮ ನಡೆವಳಿಕೆಯು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು.

ಮಿಥುನ ರಾಶಿ: ಹಣವಿದೆ ಎಂಬ ಅಹಂಕಾರ ಬದಲಾಗಲಿದೆ. ಇಂದು ನಿಮ್ಮ ಅರ್ಹತೆಗೆ ಯೋಗ್ಯವಾದ ಕೆಲವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಮಕ್ಕಳ ಯಶಸ್ಸಿನಿಂದಾಗಿ ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಮನೆಯಲ್ಲಿ ಕಲಹದಿಂದ ಮನಸ್ಸು ಹಾಳಾಗಲಿದೆ. ಹಣದ ವಿಚಾರದಲ್ಲಿ ತ್ವರಿತ ನಿರ್ಧಾರದಿಂದ ದೂರವಿರಿ. ಮಕ್ಕಳು ನಿಮ್ಮನ್ನು ಪ್ರೀತಿಸುವರು. ಅತಿಥಿಗಳ ಬಳಿ ಉಗ್ರವಾಗಿ ವರ್ತಿಸದಿರಿ. ಸಂಬಂಧಗಳ ಕಾಳಜಿ ಇಟ್ಟುಕೊಳ್ಳಿ. ಪ್ರೇಮ ಸಂಬಂಧದಲ್ಲಿ ಕಠಿಣತೆ ಹಚ್ಚಬೇಡಿ. ಹೊಸ ಕಾರ್ಯಯೋಜನೆಗಳು ತಕ್ಷಣ ಕೈಗೆತ್ತಿಕೊಳ್ಳಬೇಡಿ. ಸಮರ್ಥ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಸಿ. ಸಮಾರಂಭಗಳಲ್ಲಿ ಹೆಚ್ಚಿನ ದಿನವನ್ನು ಕಳೆಯುವಿರಿ. ಹೆಚ್ಚು ಚಿಂತಿಸುವುದರಿಂದ ಯಾವ ಪ್ರಯೋಜನವಾಗದು. ಹಿರಿಯರಿಗೆ ಅಗೌರವದ ಮಾತುಗಳನ್ನು ಆಡಬೇಕಾದೀತು. ನಿಮ್ಮ‌ ಮೇಲೆ ಸಂದೇಹವು ಬರಬಹುದು. ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವಿರಿ. ನಿಮ್ಮ ಮನೆಯ ಸಮಸ್ಯೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು ಬೇಡ.

ಕರ್ಕಾಟಕ ರಾಶಿ: ಆಹಾರಕ್ಕಾಗಿ ದೂರ ಪ್ರಯಾಣ ಮಾಡುವಿರಿ. ಇಂದು ನಿಮಗೆ ಏನನ್ನೂ ಸಾಧಿಸುತ್ತೇನೆ ಎಂಬ ಉತ್ಸಾಹವಿರುವುದು. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಿಕೊಂಡು ನಿರಾಳವಾಗುವಿರಿ. ಸಮಾನ ಮನಸ್ಕರ ಜೊತೆಗೆ ವಾದವಾಗಲಿದೆ. ಹಿರಿಯರ ಒತ್ತಡದಿಂದ ಕೆಲಸಕ್ಕೆ ಏಕಾಗ್ರತೆ ಕಡಿಮೆಯಾಗಬಹುದು. ಹಣದ ಬಗ್ಗೆ ತುರ್ತು ನಿರ್ಧಾರ ತೆಗೆದುಕೊಳ್ಳುವುದು ತೊಂದರೆ ತರಬಹುದು. ಅತಿಥಿಗಳಿಂದ ದೂರವಿರಲು ಶಿಸ್ತಿನಿಂದ ನಡೆದುಕೊಳ್ಳಿ. ಪ್ರೀತಿಯಲ್ಲಿ ತಾಳ್ಮೆ ಮತ್ತು ಸಹನಶೀಲತೆ ಮುಖ್ಯ. ಕೊನೆಯಲ್ಲಿ ಆಯಾಸದಿಂದ ಕೋಪ ಉಂಟಾಗುತ್ತದೆ.  ಹೇಳಬೇಕಾದ ವಿಚಾರವನ್ನು ನೇರವಾಗಿ ಹೇಳಿ. ಹಳೆಯ ಪ್ರೀತಿಯು ನೆನಪಾಗಿ ಮೌನವಾಗುವಿರಿ. ನಿಮ್ಮ ಮಾತು ಚೌಕಟ್ಟನ್ನು ಮೀರಬಹುದು. ಎಲ್ಲರ ದೃಷ್ಟಿಯಲ್ಲಿ ಸ್ವಾರ್ಥಿಯಂತೆ ಕಾಣಿಸುವಿರಿ. ನಿಮ್ಮದಲ್ಲದ್ದನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು. ಯಾವುದನ್ನೂ ಅನುಭವಿಸಲೂ ಯೋಗ್ಯವಾದ ಕಾಲವು ಬೇಕಾಗುವುದು. ಇಂದು ನೀವು ಯಾವುದಾದರೂ ವಿಚಾರವನ್ನು ಮಾತಿನಿಂದ ನೀವು ಗೆಲ್ಲವುದು ಸುಲಭವಲ್ಲ.

ಸಿಂಹ ರಾಶಿ: ಹೊಸ ಮನೆಯಲ್ಲಿ ವಾಸ ಮಾಡುವಿರಿ. ಇಂದು ಜಗಳವಾಡಿಯಾದರೂ ಬೇಕಾದುದನ್ನು ಪಡೆಯುವಿರಿ. ಆಸ್ತಿಗೆ ಸಂಬಂಧಿಸಿದಂತೆ ಪ್ರಕರಣವಿಂದು ಹಲವು ವರ್ಷಗಳಿಂದ ನಡೆಯುತ್ತಿದ್ದು, ಇಂದು ಅದರ ಫಲವು ಗೊತ್ತಾಗಲಿದೆ. ಆಭರಣ ವಿಷಯದಲ್ಲಿ ಮನೆಯಲ್ಲಿ ಕಲಹವಾಗಬಹುದು. ಪ್ರೀತಿಯಲ್ಲಿನ ಶೂನ್ಯತೆ ಇಂದು ಕಾಡಬಹುದು. ವೃತ್ತಿಜೀವನದಲ್ಲಿ ಹಡವಿಟ್ಟ ನಿರ್ಧಾರ ತಪ್ಪು ತರುವ ಸಾಧ್ಯತೆ. ಸಮಸ್ಯೆಗಳ ಪರಿಹಾರದಲ್ಲಿ ನಿಮ್ಮ ಬುದ್ಧಿಮತ್ತೆ ಸ್ಪಷ್ಟ ಸಂಗಾತಿಯ ಆರೋಗ್ಯ ಸಮಸ್ಯೆಯಿಂದ ಕೆಲಸದಲ್ಲಿ ಅಡಚಣೆ. ತಾಳ್ಮೆಯಿಂದ ದಿನ ಕಳೆಯಿರಿ. ಸಂತೃಪ್ತಿಯಿಂದ ಇರಲಿದ್ದೀರಿ. ಬೇಕಾದವರ ಸಂಪರನಮ್ಮ ಇಷ್ಟದ ಕೆಲಸದತ್ತ ಹೆಚ್ಚು ಗಮನ ಹರಿಸುವಿರಿ. ದಾಖಲೆಗಳನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ವೃತ್ತಿಪರರು ಗೌರವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವರು. ಉದ್ಯೋಗದ ಅವಕಾಶಗಳ ನಿರೀಕ್ಷೆಯಲ್ಲಿ ಇರುವಿರಿ. ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ಸಂಗಾತಿಯ ಇಂಗಿತವನ್ನೇ ಅರಿತು ಕಾರ್ಯವನ್ನು ಮಾಡುವಿರಿ.

ಕನ್ಯಾ ರಾಶಿ: ಹಣವನ್ನು ಪಡೆದು ಮಾಲಿಕರಿಂದ ನಿಂದನೆ ಬರಬಹುದು. ನೀವು ಇಂದು ಆಪ್ತರಿಂದ ಹಲವು ದಿನಗಳ ಅನಂತರ ಹಣವನ್ನು ಪಡೆಯುವಿರಿ. ಪರಸ್ಪರ ಸಂವಹನದ ಮೂಲಕ ವ್ಯಾಪಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ಮನೆಯ ಕೆಲಸಗಳಲ್ಲಿ ಗಮನ ಹರಿಸಿ. ಪ್ರೇಮ ಸಂಬಂಧದಲ್ಲಿ ನಿರೀಕ್ಷೆಯಂತಿಲ್ಲದ ಪರಿಣಾಮ ಸಿಗಬಹುದು. ತಮಾಷೆಯ ಆಟದಲ್ಲಿ ಗೆಲುವಾಗದು. ಕಚೇರಿಯಲ್ಲಿ ಒಬ್ಬ ಮೋಸವಾಗಬಹುದು. ರವಾನೆಯಾದ ವ್ಯಕ್ತಿಯಿಂದ ನಿಮಗೆ ದಿನದ ಶಕ್ತಿಯನ್ನು ನೀವೇ ಕಡಿಮೆಯಾಗಿಸಿಕೊಳ್ಳಬೇಡಿ. ಸಂಗಾತಿಯೊಂದಿಗೆ ಸಂವಹನ ತಪ್ಪಿಸದಿರಿ. ಯಶಸ್ಸು ತಾನಾಗಿಯೇ ಬರಲಿದೆ. ವ್ಯವಹಾರದಲ್ಲಿ ಬಂಧುಗಳನ್ನು ಇಟ್ಟುಕೊಳ್ಳುವ ಮನಸ್ಸು ಬೇಡ. ಕರಕುಶಲತೆಗಳಿಗೆ ಹೆಚ್ಚು ಸಮಯ ಕೊಡುವಿರಿ. ಕುಟುಂಬದ ಜೊತೆ ಸೌಹಾರ್ದತೆ ಉಂಟಾಗುವುದು. ಇತರರ ಜೊತೆ ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಕಾಣಲಿದೆ. ವಾಹನವನ್ನು ಚಲಾಯಿಸುವಾಗ ಆತುರ ಬೇಡ. ದೂರ ಹೋಗುವವರಿದ್ದರೆ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ.

ತುಲಾ ರಾಶಿ: ಪ್ರೇಮವನ್ನು ನಿವೇದಿಸಲು ಧೈರ್ಯ ಸಾಲದು. ಇಂದು ನೀವು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಶ್ರದ್ದೆ ವಹೊಸುವಿರಿ. ಸಮಾಜದಿಂದ ಗೌರವ ಸಮ್ಮಾನಗಳು ಸಿಗಲಿವೆ. ಆಸ್ತಿ ಖರೀದಿಸುವ ಯೋಚನೆ ಇದ್ದರೆ ಖರೀದಿಸಿ. ಇಂದು ಕಾಲ ಚೆನ್ನಾಗಿದೆ. ಕೋಪವನ್ನು ತೋರಿಸಲು ಹೋಗಬೇಡಿ. ಬಲವರ್ಧನೆಗೆ ಹೊಸ ಸಂಬಂಧದ ಮೂಲಕ ಅವಕಾಶ. ಮನೆಯ ಕಾರ್ಯಕ್ಕೆ ಆಪ್ತರನ್ನು ಆಮಂತ್ರಿಸುವಿರಿ. ಹೊಸ ಸಂಬಂಧಗಳು ಬೆಳೆದು ಬರುವ ಸಾಧ್ಯತೆ. ಶತ್ರು ಸ್ನೇಹಿತನಾಗಿ ತಿರುಗಬಹುದು. ನಾಲಗೆಯ ಚಪಲಕ್ಮೆ ಆರೋಗ್ಯ ಹಾಳಾಗಲಿದೆ. ಮನೆಯಲ್ಲಿ ಸಮಸ್ಯೆಗಳ ಹಂಚಿಕೆಯಿಂದ ಸಮರ್ಥತೆ ಬಲ. ಪರಿಚಿತರು ಆಪ್ತರಾಗಬಹುದು. ಆಸ್ತಿಯ ವಿಚಾರವಾಗಿ ಕಾನೂನಾತ್ಮಕ ಹೋರಾಟಕ್ಕೆ ತಯಾರಿ ನಡೆಸುವಿರಿ. ನಿಮ್ಮ ಹೆಸರಿನಿಂದ ಬೇರೆಯವರು ಕೆಲಸ ಮಾಡಿಕೊಳ್ಳಬಹುದು. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ. ಇನ್ನೊಬ್ಬರ ಬಗ್ಗೆ ಪ್ರೀತಿ ಇರಲಿ. ಪರಸ್ಪರ ಸಾಮರಸ್ಯಕ್ಕಾಗಿ ದಂಪತಿಗಳು ದಾರಿಯನ್ನು ಹುಡುಕುವಿರು.

ವೃಶ್ಚಿಕ ರಾಶಿ: ಆಗಿಹೋದ ಘಟನೆಯು ಪುನಃ ಯಾರಿಂದಲೋ ಆರಂಭವಾಗಲಿದೆ. ನೀವು ಇಂದು ಅನೇಕ ದಿನಗಳಿಂದ ಬಾಕಿ ಇದ್ದ ಕೆಲಸಗಳನ್ನು ಪೂರ್ಣಗೊಳ್ಳುವುದು ಸೂಕ್ತ. ಆತ್ಮವಿಶ್ವಾಸವು ಋಣಾತ್ಮಕ ಸಂದರ್ಭದಲ್ಲಿಯೂ ಧೈರ್ಯದಿಂದ ಇರುವಂತೆ ಮಾಡುತ್ತದೆ. ವಾಹನ ಸಂಚಾರದಲ್ಲಿ ಎಚ್ಚರಿಕೆ ಇರಲಿ. ಇಂದಿನ ಸೋಲಿನಿಂದ ಪಾಠ ಕಲಿಯಬೇಕಾದೀತು. ಸಂಪತ್ತೇ ನಿಮಗೆ ಹೊರೆಯಾಗಬಹುದು. ಸ್ನೇಹಿತರ ಜೊತೆಗೆ ಸಂತೋಷದ ಸಮಯ. ಪ್ರೇಮ ಸಂಬಂಧದಲ್ಲಿ ಭರವಸೆ ಅಧಿಕವಾಗಲಿದೆ. ಉದ್ಯೋಗದಲ್ಲಿ ಬದಲಾವಣೆಗಳು ಲಾಭಕಾರಿ. ಪರರ ಜೊತೆ ಸಂವಹನದಿಂದ ಗಮನ ಸೆಳೆಯುವಿರಿ. ಸಂಗಾತಿಯೊಂದಿಗೆ ಭಾವಪೂರ್ಣ ಸಮಯ ಕಳೆಯುವುದು ಖಚಿತ. ಪ್ರಯಾಣವು ಆಯಾಸವನ್ನು ಕೊಡಬಹುದು. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪರಾಜಯ ಆಗಬಹುದು. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ. ಸಿಟ್ಟನ್ನು ತಾಳ್ಮೆಯ ಅಸ್ತ್ರದಿಂದ ಎದುರಿಸಿ, ಕಾರ್ಯವನ್ನು ಸಫಲಗೊಳಿಸಿಕೊಳ್ಳಿ.

ಧನು ರಾಶಿ: ಸಿಟ್ಟಿನಿಂದ ಅವಕಾಶ ವಂಚಿತರಾಗಿವಿರಿ. ಇಂದು ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಮಾಡಲು ಆಸಕ್ತಿ ಇರುವುದು. ಸಾಲ ಕೊಡಲಿಕ್ಕಾಗಿ ಬರುವ ದೂರವಾಣಿ ಕರೆಗಳನ್ನು ನಿರ್ಲಕ್ಷಿಸಲಿದ್ದೀರಿ. ಇಂದು ನೀವು ಪ್ರಮುಖ ನಿರ್ಧಾರಗಳನ್ನು ಸ್ವೀಕರಿಸುವ ಸಾಧ್ಯತೆ ಇದೆ. ನಿಮ್ಮ ಖಾಸಗಿ ವಿಷಯಗಳನ್ನು ಬಹಿರಂಗಪಡಿಸದಿರಿ. ಪ್ರೀತಿಯಲ್ಲಿ ತಾತ್ಕಾಲಿಕ ಸಂತೋಷವಿದ್ದರೂ ಭರವಸೆಯ ಕ್ಷಣ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಿಂದ ಪ್ರೇರಣೆ ಸಿಗುವುದು ಸ್ಪಷ್ಟ ನಿಮ್ಮ ವ್ಯಕ್ತಿತ್ವ ಮತ್ತಷ್ಟು ಮುನ್ನಡೆಯುತ್ತದೆ. ಒಳ್ಳೆಯ ಮಾರ್ಗದರ್ಶನದಿಂದ ಖುಷಿಯಾಗಲಿದೆ. ಪೂರ್ವ ನಿಶ್ಚಿತ ಕಾರ್ಯವನ್ನು ನೀವು ಬದಲಿಸುವಿರಿ. ನಿಮ್ಮ ಸಂಗಾತಿಯು ನಿಮ್ಮ ಕೆಲಸಗಳಿಗೆ ಸಲಹೆಯನ್ನು ನೀಡಲಿದ್ದಾರೆ. ಇದರಿಂದ ನಿಮಗೆ ಪ್ರಯೋಜನವಾಗಲಿದೆ. ಪರಾಧೀನ ಸ್ಥಿತಿಯಿಂದ ಮಾನಸಿಕ ಹಿಂಸೆಯಾದೀತು. ಅಧಿಕಾರದಿಂದ ಮಾತ್ರ ಎಲ್ಲವೂ ಸರಿಯಾಗುವುದು ಎಂಬ ಭ್ರಮೆ‌ ಬೇಡ. ಇಂದಿನ ಕಾರ್ಯವು ಯಾವುದೇ ತೊಂದರೆಗಳಿಲ್ಲದೇ ಮುಗಿಯುವುದು.

ಮಕರ ರಾಶಿ: ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಓಡಾಟ ಮಾಡುವಿರಿ. ನೀವು ಸಂಪತ್ತನ್ನು ದಾನ‌ ಮಾಡಲಿದ್ದೀರಿ. ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮನಸ್ಸು ನಿಮ್ಮಲ್ಲಿರಲಿದೆ. ಅಪರಿಚಿತರು ಭೇಟಿಯಾಗಿ ನಿಮ್ಮ ಕಿವಿ ಚುಚ್ಚಲಿದ್ದಾರೆ. ನೀವು ಮಾಡಲಿರುವ ಕೆಲಸದ‌ ಮೇಲೆ ನಿಮ್ಮ ಗಮನವಿರಲಿ. ಹೂಡಿಕೆಯಲ್ಲಿ ಜಾಣತನದಿಂದ ಲಾಭ ಸಿಗುವುದು ಖಚಿತ. ಕುಟುಂಬದ ಬೆಂಬಲದಿಂದ ನೈಜ ಸಮಾಧಾನ. ಪ್ರೀತಿಯಲ್ಲಿ ಶುಭ ಸೂಚನೆಗಳು ಸಿಗುತ್ತವೆ. ಉದ್ಯೋಗದಲ್ಲಿ ಉನ್ನತಿ ಸಾಧ್ಯ. ಸಂಗಾತಿಯನ್ನು ಉದ್ಯೋಗಕ್ಕೆ ಸೇರಿಸುವಿರಿ. ಅಪರಿಚಿತರಿಗೆ ಖರ್ಚನ್ನು ಮಾಡಬೇಕಾಗಿಬರಬಹುದು. ವ್ಯಾಪಾರ ಇಂದು ನಿಧಾನಗತಿಯಲ್ಲಿ ಸಾಗಲಿದೆ. ಯಾರದೋ ಕಾರಣಕ್ಕೆ ಅಪರಿಚಿತರ ಸಂಪರ್ಕವನ್ನು ಮಾಡಬೇಕಾದೀತು. ಸ್ನೇಹಿತರಿಂದ ಆರ್ಥಿಕತೆಗೆ ಸಹಾಯವು ಸಿಗುವುದು. ಚಿಕಿತ್ಸೆಯಿಂದ ಆರೋಗ್ಯದಲ್ಲಿ ಸುಧಾರಣೆ ಇರಲಿದೆ. ಹೊಸತರ ಕಲಿಕೆಯಲ್ಲಿ ಆಸಕ್ತಿಯು ಅಧಿಕವಾಗುವುದು. ಸಮಾರಂಭಗಳಿಗೆ ತೆರಳುವಿರಿ. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ ಇರಲಿದೆ‌.

ಕುಂಭ ರಾಶಿ:
ಆಂತರಿಕ ಭಿನ್ನಾಭಿಪ್ರಾಯವು ಇಂದು ಶಮನವಾಗಲಿದೆ. ಕಾರ್ಯವನ್ನು ಆರಂಭಿಸುವ ಮೊದಲು ಸಂಪೂರ್ಣ ಯೋಜನೆ ಸಿದ್ಧವಿರಲಿ. ಮನೆಗೆ ಸಂಬಂಧಿಸಿದಂತೆ ಸರಿಯಾದ ಖರ್ಚುಗಳ ಮಾಹಿತಿ ಇಲ್ಲದೇ ಅಧಿಕ ಖರ್ಚನ್ನು ಮಾಡಬೇಕಾಗಿಬರಬಹುದು. ಅನಗತ್ಯ ಖರ್ಚು ನಿಮಗೆ ವಿಷಾದ ತರಬಹುದು. ನಿಮಗೆ ಸಿಕ್ಕ ಸಮಯವನ್ನು ಸದುಪಯೋಗ ಮಾಡಿಕೊಳ್ಳುವಿರಿ. ಇಡೀ ಕುಟುಂಬಕ್ಕೆ ಸಂತೋಷವನ್ನು ತರುವ ಸುದ್ದಿ ಸಿಗುವುದು ಸಾಧ್ಯ. ಪ್ರೀತಿಯಲ್ಲಿ ಸ್ಪಂದನೆ. ಹೊಸ ವ್ಯವಹಾರಗಳಿಗೆ ಉತ್ತಮ ಸಮಯ. ಸಮಸ್ಯೆ ಪರಿಹಾರದಲ್ಲಿ ನಿಮ್ಮ ಪ್ರತಿಭೆ ಬೆಳಗಲಿದೆ. ಸಂಗಾತಿಯ ಪ್ರೇಮದ ತೀವ್ರತೆ ಇಂದು ಹೆಚ್ಚಿರುತ್ತದೆ. ಮನಸ್ಸು ಉದ್ವೇಗಕ್ಕೆ ಒಳಗಾದೀತು. ಅಹಂಕಾರವು ನಿಮಗೆ ಶೋಭೆ ತರದು. ಇಂದು ವೈವಾಹಿಕ ಸಂಬಂಧದಲ್ಲಿ ಸಮಸ್ಯೆಗಳನ್ನು ಉಂಟು ಮಾಡಬಹುದು. ಉದ್ಯಮದಲ್ಲಿ ಅಧಿಕ ಚಿಂತೆಯು ಇರಲಿದ್ದು ಪ್ರಯತ್ನವು ಅಧಿಕವಾಗಿ ಇರುವುದು. ಸಂಗಾತಿಯ ಮಾತನ್ನು ಇಂದು ಅನುಸರಿಸುವಿರಿ.

ಮೀನ ರಾಶಿ:  ಸ್ನೇಹಿತರಿಗಾಗಿ ಉಡುಗೊರೆ ಕೊಡುವಿರಿ. ಇಂದು ನಿಮ್ಮ ಕನಸುಗಳು ನನಸಾಗಿಸುವ ಸಮಯವನ್ನು ಎದುರು ನೋಡುತ್ತಿರುವಿರಿ. ಇತರರ ಸಲಹೆಗಳನ್ನು ಕೇಳಿ, ನಿಮಗೆ ಸರಿ ಅನಿಸಿದಂತೆ ಮಾಡುವಿರಿ. ಕೆಲವರ ಪರಿಚಯ ಆತ್ಮೀಯನಿಮಗೆ ಉತ್ತಮ ಅವಕಾಶಗಳು ಸಿಗಲಿವೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಆರ್ಥಿಕ ಸಲಹೆ ನೀಡುವ ವ್ಯಕ್ತಿ ನಿಮ್ಮ ನೆರವಾಗಬಹುದು. ಮಕ್ಕಳ ಸಾಧನೆ ಸಂತೋಷ ತರುತ್ತದೆ. ಉದ್ಯೋಗ ನಿರ್ಧಾರದಲ್ಲಿ ಸ್ವತಂತ್ರತೆ ಉತ್ತಮ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿ ಕುಟುಂಬದೊಂದಿಗೆ ಕಾಲ ಕಳೆಯಿರಿ. ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶ ಸಿಗದ ಕಾರಣ ಬೇಸರವುಂಟಾಗಬಹುದು. ಪ್ರೇಮ ವ್ಯವಹಾರದಿಂದ ದೂರವಿರುವುದು ಉತ್ತಮ. ದೂರದಲ್ಲಿ ಇದ್ದ ಮಕ್ಕಳ ಆಗಮನದಿಂದ ಮನೆಯಲ್ಲಿ ಸಂತೋಷವು ಇರುವುದು. ಆಸ್ತಿಯನ್ನು ಖರೀದಿಸುವ ಕುರಿತು ಮನೆಯಲ್ಲಿ ಚರ್ಚೆಗಳು ನಡೆಯುವುದು. ಆರ್ಥಿಕ ಒತ್ತಡದಿಂದ ನೀವು ಹೊರಬರುವ ಮಾರ್ಗವನ್ನು ಹುಡುಕುವಿರಿ.

-ಲೋಹಿತ ಹೆಬ್ಬಾರ್-8762924271 (what’s app only)