AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಪಾರಿಯಾಗಿದ್ದರೆ ಇಂದು ನೀವು ದೊಡ್ಡ ವ್ಯವಹಾರ ವಹಿವಾಟು ಸಿಗಲಿದೆ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ನವಮೀ ತಿಥಿ, ಬುಧವಾರ ವೈರಿಗಳಿಂದ ಅನನಕೂಲತೆ, ಹಿರಿಯರ ಮೇಲೆ ಸೌಮ್ಯತೆ, ಪಾಂಡಿತ್ಯದಲ್ಲಿ ಅಗಾಧತೆ ಈ ದಿನ ಕಾಣಿಸುವುದು. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ವ್ಯಾಪಾರಿಯಾಗಿದ್ದರೆ ಇಂದು ನೀವು ದೊಡ್ಡ ವ್ಯವಹಾರ ವಹಿವಾಟು ಸಿಗಲಿದೆ
ಜ್ಯೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: May 21, 2025 | 1:41 AM

Share

ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ವೃಷಭ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಮಂಗಳವಾರ, ತಿಥಿ: ನವಮೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ವೈಧೃತಿ ಕರಣ: ತೈತಿಲ, ಸೂರ್ಯೋದಯ – 06 : 04 am, ಸೂರ್ಯಾಸ್ತ – 06: 53 pm, ಇಂದಿನ ಶುಭಾಶುಭಕಾಲ: ರಾಹು ಕಾಲ 12:29 – 14:05, ಯಮಘಂಡ ಕಾಲ 07:41 – 09:17, ಗುಳಿಕ ಕಾಲ 10:53 – 12:29

ತುಲಾ ರಾಶಿ: ಬಹು ಆಯಾಸವನ್ನು ಮಾಡಿಕೊಳ್ಳಲು ಹೋಗಲಾರಿರಿ. ಅನ್ಯರ ಯಶಸ್ಸಿಗೆ ನೀವು ಅಸೂಯೆ ಪಡುವ ಅವಶ್ಯಕತೆ ಇಲ್ಲ. ನಿಮಗೆ ಅಪಮಾನ ಮಾಡಲು ಪಿತೂರಿಗಳೂ ಆಗಬಹುದು. ನೀವು ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನವಿಡಿ. ವೇತನವನ್ನು ಹೆಚ್ಚು ಮಾಡಿಕೊಳ್ಳಲು ನಿಮಗೆ ದಾರಿ ಕಾಣಲಿದೆ. ಅಸ್ಪಷ್ಟವಾದ ವಿಚಾರಗಳನ್ನು ತಿಳಿಯುವ ಕುತೂಹಲ ನಿಮಗೆ. ಜೀವನದಲ್ಲಿ ದೃಷ್ಟಿಕೋನ ಬದಲಿಸಿದರೆ ಸಂತೋಷವಿದೆ. ನಿಮ್ಮಬುದ್ಧಿವಂತಿಕೆ ನಿಮ್ಮ ನೈಜ ಬಲ. ದಾಂಪತ್ಯದಲ್ಲಿ ಬಿರುಕು ಸರಿಯಾಗಿ ಸಂತೋಷವನ್ನು ಅನುಭವಿಸುವಿರಿ. ಓದಿನ‌ ಕಡೆ ಮನಸ್ಸನ್ನು ಕೊಡಲಾಗದು. ನೀವು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ನೆರೆಹೊರೆಯರ ಜೊತೆ ಹೊಂದಾಣಿಕೆಯ ಮನಃಸ್ಥಿತಿಯಲ್ಲಿಯೇ ಇರಬೇಕಾಗುವುದು. ಅತಿಯಾದ ಲೋಭವು ನಿಮ್ಮ ಕಾರ್ಯವನ್ನು ಹಾಳು ಮಾಡುವುದು. ಸಮಯಪಾಲನೆಯಿಂದ ನಿಮ್ಮ ಕೆಲಸಗಳು ಸರಿಯಾಗುವುದು. ನೀರಿನಿಂದ ಭೀತಿಯು ಉಂಟಾಗುವುದು.

ವೃಶ್ಚಿಕ ರಾಶಿ: ಸಮಯಕ್ಕೆ ಸರಿಯಾಗಿ ನಿಮ್ಮ ಹಣವನ್ನು ಪಡೆಯಲಾಗದೇ ಸಾಲ ಮಾಡಬೇಕಾಗುವುದು. ಸಿಕ್ಕ‌ಕೂಡಲೇ ಹಿಂದಿರುಗಿಸುವುದನ್ನು ಮರೆಯುವುದು ಬೇಡ. ಇಂದು ನಿಮ್ಮ ಖಾಲಿ ಮನಸ್ಸಿಗೆ ಸಲ್ಲದ ಆಲೋಚ‌ನೆಗಳು ಒಂದೊಂದಾಗಿಯೇ ಬರಬಹುದು. ಸುಮ್ಮನೇ ಕುಳಿತುಕೊಳ್ಳುವುದು ಬೇಡ. ಏನಾದರೂ ಕಾರ್ಯವನ್ನು ಮಾಡುತ್ತಲೇ ಇರಿ. ನಿಮ್ಮೊಳಗಿನ ಆಸೆಯು ಪ್ರಿಯತೆಯನ್ನು ತಣಿಸುತ್ತದೆ. ಹಣಕಾಸಿನಲ್ಲಿ ಲಾಭ, ಆದರೆ ಸಹೋದ್ಯೋಗಿಗಳಿಂದ ದೂರವಿರಲು ಪ್ರಯತ್ನಿಸಿ. ಬೆನ್ನು ನೋವು ತಪ್ಪಿಸಲು ವೈದ್ಯರ ಸಲಹೆ ಬೇಕಾದಲ್ಲಿ ತೆಗೆದುಕೊಳ್ಳಿ. ಕಾಲಕಾಲಕ್ಕೆ ನಿಟ್ಟುಸಿರು ತೆಗೆದುಕೊಳ್ಳಿ, ಇದು ಮನಸ್ಸಿಗೆ ಶಾಂತಿ ನೀಡುತ್ತದೆ. ಇಷ್ಟು ದಿನ ಮಾಡುತ್ತಿದ್ದವರ ಬಳಿಯಿಂದ ಹಣಕಾಸಿನ ವ್ಯವಹಾರವನ್ನು ಬದಲಾಯಿಸುವಿರಿ. ನಿಮ್ಮ ಕಾರ್ಯದ ವೇಗವು ಹೆಚ್ಚುವ ಅವಶ್ಯಕತೆ ಇದೆ. ಮಹಿಳೆಯ ಕಾರಣದಿಂದ ನಿಮಗೆ ಧನನಷ್ಟವು ಆಗಬಹುದು. ಭೂಮಿಯನ್ನು ನಿಮ್ಮದಾಗಿಸಿಕೊಳ್ಳುವ ಪ್ರಯತ್ನವು ಸಫಲವಾಗುವುದು. ನಿಮಗೆ ಸಪ್ಪೆ ಎನಿಸಿದ ವಿಷಯವನ್ನು ಮುಂದುವರಿಸುವುದಿಲ್ಲ.

ಧನು ರಾಶಿ: ಹುರುಳಿಲ್ಲದ ಮಾತು ನಿಮಗೆ ಮೆಚ್ಚುಗೆಯಾಗಲಿದೆ. ಇಂದು ನಿಮಗೆ ಸಹೋದ್ಯೋಗಿಗಳ ಸಹಕಾರವೂ ಸಿಕ್ಕಿ ಕಛೇರಿಯ ಇಂದಿನ ಕೆಲಸವನ್ನು ಇಂದೇ ಮಾಡುವಿರಿ. ನಿದ್ರಾಹೀನತೆಯಿಂದ ಸ್ವಲ್ಪ ಆಲಸ್ಯವೂ ಇರಲಿದೆ. ಸಂಗಾತಿಯ ಜೊತೆ ದೂರಪ್ರಯಾಣ ಮಾಡಬಹುದು. ಪ್ರೀತಿಯ ಹೊಸ ಆಯಾಮಕ್ಕೆ ಹೆಜ್ಜೆ ಹಾಕಿ. ಗಾಂಭೀರ್ಯದಿಂದ ಇರಲು ಹೆಚ್ಚು ಸಮಯ ಆಗದು. ಭಾವನೆಗಳಲ್ಲಿ ಭಾರವಿದ್ದರೆ ಏಕಾಂತ ಬೇಕು. ಕುಟುಂಬದ ಬೆಂಬಲ ನಿಮ್ಮ ಶಕ್ತಿ ಆಗಲಿದೆ. ಯಾರಿಗೂ ಕೆಟ್ಟದ್ದನ್ನು ಮನಸ್ಸಿನಲ್ಲಿಯೂ ಅಂದುಕೊಳ್ಳುವುದು ಬೇಡ. ನಿಮ್ಮ ಕಾರ್ಯದಲ್ಲಿ ತೊಡಗಿ. ಸಂಗಾತಿಯ ಹಳೆಯ ಸ್ವಭಾವ ಮರುಕಳಿಸಬಹುದು. ಹೇಗಾದರೂ, ಇಂದು ಯಾವುದೇ ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಂಗಾತಿಯ ಕಡೆಯನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಯಾರದೋ ಕಾರಣಕ್ಕೆ ನೀವು ಓಡಾಟ ಮಾಡಬೇಕಾಗುವುದು. ಅಂದುಕೊಂಡ ಕೆಲಸವನ್ನು ಪೂರೈಸಲು ನಿಮಗೆ ಸಮಸ್ಯೆಯು ಬರಬಹುದು.

ಮಕರ ರಾಶಿ: ಅನಾಯಾಸವಾಗಿ ಸಿಗುವ ಗೌರವವನ್ನು ಕಳೆದುಕೊಳ್ಳಬೇಡಿ. ಇಂದು ನಿಮಗೆ ಕಛೇರಿಯಲ್ಲಿ ಕೆಲವು ಸವಾಲಗಳು ಇರಲಿವೆ. ಒತ್ತಡಕ್ಕೆ ಸಿಲುಕದೇ ಆಪ್ತರ ಜೊತೆ ಸಮಾಲೋಚನೆ ಮಾಡಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ನೀತಿಯ ಜೊತೆಗಿನ ನಡಿಗೆ ಕಷ್ಟಕರವಾಗಬಹುದು. ಸಾಲಕೊಟ್ಟ ಹಣವು ನಿಮಗೆ ಸಿಗಲಿದೆ. ನಿರೀಕ್ಷೆಗಳಿಲ್ಲದ ಸಂಬಂಧಗಳು ನೆಮ್ಮದಿಯನ್ನು ಕೊಡುತ್ತವೆ. ಸುಮ್ಮನಿರುವ ಬದಲು, ಪ್ರೀತಿಗೆ ಸೂಕ್ತ ಆಯ್ಕೆ ಮಾಡಿ. ಹಣಕಾಸಿನಲ್ಲಿ ಹೆಚ್ಚು ಬದಲಾವಣೆ ಇಲ್ಲದಿದ್ರೂ ನಿರಾಶೆಯಾಗಬೇಡಿ. ಕೆಲಸದಲ್ಲಿ ಗುರಿ ನಿಗದಿಪಡಿಸಿ, ಕಾರ್ಯತತ್ಪರರಾಗಿರಿ. ಇದು ನಿಮಗೆ ಬಹಳ ನೋವಾಗಲಿದೆ. ಆದರೆ ಬೇಗ ತಿಳಿಯಿತು ಎಂಬ ಸಮಾಧನ ಮಾಡಿಕೊಳ್ಳಿ. ಏಕಾಗ್ರತೆಯ ಕೊರತೆ ಕಾಣಲಿದೆ. ಮನೆಯಲ್ಲಿ ಹಬ್ಬದ ವಾತಾವರಣವು ಇರಲಿದೆ. ಇಂದು ನಿಮಗೆ ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ಕೊಡಲಾರಿರಿ. ಧನವು ನಷ್ಟವಾದ ವಿಚಾರಗಳನ್ನು ಯಾರ ಬಳಿಯೂ ಹೇಳಲಾರಿರಿ. ತಂದೆಯ ಜೊತೆ ವಾಗ್ವಾದ ಮಾಡಿಕೊಳ್ಳುವಿರಿ.

ಕುಂಭ ರಾಶಿ: ನಿಮ್ಮ ಆಲೋಚನೆಗಳು ವ್ಯಕ್ತಿತ್ವವೇ ಬೇರೆಯಾಗುವಂತೆ ಮಾಡಬಹುದಿ. ನೀವು ಅನಾರೋಗ್ಯದಿಂದ ಆರೋಗ್ಯದ ಕಡೆಗೆ ಹಂತ ಹಂತವಾಗಿ ಕ್ರಮಿಸುವಿರಿ. ಇಂದು ನೀವಿರುವ ವಾತಾವರಣವು ನಿಮಗೆ ಹಾಯೆನಿಸಬಹುದು. ಯಾರ ಜೊತೆ ಬೆರೆಯಬೇಕು ಎನ್ನುವುದು ನಿಮ್ಮ ಬುದ್ಧಿಗೆ ಬಿಟ್ಟಿದ್ದು. ಪ್ರೀತಿಗೆ ಮುಕ್ತ ಮನಸ್ಸು ಅಗತ್ಯ. ಸಂಪರ್ಕ ಹೊಂದುವ ಪ್ರತಿಯೊಬ್ಬರಿಗೂ ಶ್ರದ್ಧೆಯಿಂದ ವರ್ತಿಸಿ. ಪ್ರಯಾಣದಲ್ಲಿ ತಂಗುದಾಣ ಮತ್ತು ಮನರಂಜನೆಗೂ ಜಾಗರೂಕರಾಗಿರಿ. ಸಂತಾನೋತ್ಪತ್ತಿ ಸಮಸ್ಯೆ ಬಂದರೆ ವಿಳಂಬವಿಲ್ಲದೆ ವೈದ್ಯರ ಬಳಿ ಹೋಗಿ. ಅದನ್ನು ಗಮನಿಸಿಕೊಳ್ಳಿ. ಹೊಸ ವಸ್ತುಗಳು ನಿಮಗೆ ಸಂತೋಷ ಕೊಡಲಿದ್ದು ಅದನ್ನೇ ಹೆಚ್ಚು ಬಳಸುವಿರಿ. ಪತಿಯ ಪ್ರೀತಿ ಇಂದು ಸಿಗಲಿದೆ. ಇಂದಿನ ದುಡಿಮೆಯು ಕಷ್ಟವೆನಿಸಬಹುದು. ನೋವಿಗೆ ಸ್ಪಂದಿಸುವ ಸ್ವಭಾವವು ನಿಮಗೆ ಇಷ್ಟವಾಗುವುದು. ಬಂಧುಗಳ ಮಾತು ನಿಮಗೆ ಕಿರಿಕಿರಿ ತರಿಸಬಹುದು. ನಿಮ್ಮ ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುವಿರಿ.

ಮೀನ ರಾಶಿ: ಸಂತೋಷಕ್ಕಾಗಿ ಮಾರ್ಗವನ್ನು ಅನ್ವೇಷಣೆ ಮಾಡುವ ಬದಲು ಇರುವುದರಲ್ಲಿಯೇ ನೆಮ್ಮದಿಯನ್ನು ಕಾಣುವ ಕಲೆ ಬೇಕಾಗುವುದು. ಇಂದು ನಿಮಗೆ ಕೆಲವು ವಿಚಾರದಲ್ಲಿ ತಿಳಿವಳಿಕೆ ಬಂದು ಅದನ್ನು ವಿವೇಕದಿಂದ ನೋಡುವಿರಿ. ಇಂದು ನಡೆಯುವ ನಕಾರಾತ್ಮಕ ವಾರ್ತೆಯನ್ನು ಲೆಕ್ಕಿಸದೇ ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ಮೋಸದ ಅನುಭವದಿಂದ ಪಾಠ ಕಲಿಯಿರಿ. ಬಾಂಧವ್ಯದ ಶೈಥಿಲ್ಯವನ್ನು ಗಟ್ಟಿ ಮಾಡಿಕೊಳ್ಳಬೇಕಿದೆ. ಪಾಠ ಕಲಿತವರು ಮುಂದೆ ಸಾಗುತ್ತಾರೆ. ಇಂದು ಸಾಲ ನಿವಾರಣೆಗೆ ಉತ್ತಮ ಸಮಯ, ಪ್ರಾಮಾಣಿಕತೆ ಕೆಲಸದಲ್ಲಿ ನಿಮ್ಮ ಶಕ್ತಿಯಾಗಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ, ಉಸಿರಾಟ ಸಮಸ್ಯೆಗೆ ಚಿಕಿತ್ಸೆ ತೆಗೆದುಕೊಳ್ಳಿ. ಭಾವನೆಗಳಲ್ಲಿ ದೃಢತೆ ಇರಲಿ. ನಿಮ್ಮ ಅಧ್ಯಯನ ಶೀಲತೆಯಲ್ಲಿ ಹಿನ್ನಡೆ ಆಗಿರುವುದು ನಿಮ್ಮ ಅರಿವಿಗೆ ಬರಲಿದೆ. ವ್ಯಾಪಾರಿಯಾಗಿದ್ದರೆ ಇಂದು ನೀವು ದೊಡ್ಡ ವ್ಯವಹಾರ ವಹಿವಾಟು ಸಿಗಲಿದೆ. ಪ್ರೀತಿಪಾತ್ರರ ಜೊತೆ ಸಂಬಂಧ ಉತ್ತಮವಾಗಿರುತ್ತದೆ. ಇಂದು ಕುಟುಂಬ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯಬಹುದು. ಆಕಸ್ಮಿಕ ಧನಪ್ರಾಪ್ತಿಯಿಂದ ಸಂತೋಷವು ಇರುವುದು.