ಭವಿಷ್ಯದ ಕುರಿತು ಅತಿಯಾದ ಚಿಂತನೆಯನ್ನು ಮಾಡಲಿದ್ದೀರಿ
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ನವಮೀ ತಿಥಿ, ಬುಧವಾರ ವೈರಿಗಳಿಂದ ಅನನಕೂಲತೆ, ಹಿರಿಯರ ಮೇಲೆ ಸೌಮ್ಯತೆ, ಪಾಂಡಿತ್ಯದಲ್ಲಿ ಅಗಾಧತೆ ಈ ದಿನ ಕಾಣಿಸುವುದು. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ವೃಷಭ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಮಂಗಳವಾರ, ತಿಥಿ: ನವಮೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ವೈಧೃತಿ ಕರಣ: ತೈತಿಲ, ಸೂರ್ಯೋದಯ – 06 : 04 am, ಸೂರ್ಯಾಸ್ತ – 06: 53 pm, ಇಂದಿನ ಶುಭಾಶುಭಕಾಲ: ರಾಹು ಕಾಲ 12:29 – 14:05, ಯಮಘಂಡ ಕಾಲ 07:41 – 09:17, ಗುಳಿಕ ಕಾಲ 10:53 – 12:29
ಮೇಷ ರಾಶಿ: ಏನೇ ಮಾಡಿದರೂ ಅನುಕೂಲತೆಯನ್ನು ಎಲ್ಲ ಕಡೆಯಿಂದ ನೋಡಿದರೂ ಕೊನೆಗೆ ಪ್ರತಿಕೂಲದಲ್ಲಿ ಸಿಕ್ಕಿಬೀಳುವಿರಿ. ಇಂದು ನಿಮ್ಮ ಪ್ರೇಮಜೀವನವು ಹಿಂದಿಗಿಂತಲೂ ಭಿನ್ನವಾಗಿ ತೋರುವುದು. ನಿಮ್ಮ ಸಂಗಾತಿಯು ನಿಮ್ಮ ಬಗ್ಗೆ ಉತ್ತಮ ಮನೋಭಾವವನ್ನು ಹೊಂದಿರುವ ಸಾಧ್ಯತೆ ಇದೆ. ನಿಮ್ಮವರು ನಿಮಗೆ ಕೆಲವು ಕಿವಿಮಾತನ್ನು ಹೇಳಬಹುದು. ದುರ್ಬಲತೆಯ ಸಮಯದಲ್ಲೂ ಧೈರ್ಯವಿರಲಿ. ಇಂದು ಕಾರ್ಯಕ್ಷಮತೆ ಹೆಚ್ಚಾಗುವ ಸಾಧ್ಯತೆ ಇದೆ. ಹಣಕಾಸಿನಲ್ಲಿ ಜವಾಬ್ದಾರಿಯುತ ಕ್ರಮ ತೆಗೆದುಕೊಳ್ಳಿ. ಯಾವುದೇ ಆಕಸ್ಮಿಕ ಘಟನೆಗಳಿಗೆ ಹೆದರುವ ಅವಶ್ಯಕತೆಯಿಲ್ಲ. ಅದಕ್ಕಾಗಿ ಸಮಯವನ್ನೂ ವ್ಯರ್ಥ ಮಾಡುವುದು ಬೇಡ. ಸಮಯದ ಹೊಂದಾಣಿಕೆ ಅವಶ್ಯಕ. ಇಂದು ಸಂಗಾತಿಯು ನಿಮ್ಮ ಸಂತೋಷವನ್ನು ಹೆಚ್ಚಿಸಬಹುದು. ಅಚ್ಚರಿ ಉಡುಗೊರೆಯೊಂದು ಸಿಗುವ ಸಾಧ್ಯತೆ ಇದೆ. ವಾಹನದಲ್ಲಿ ಸಂಚಾರಕ್ಕೆ ತೊಂದರೆ ಬರಬಹುದು.
ವೃಷಭ ರಾಶಿ: ಹಣ ಖರ್ಚಾಗುವುದೆಂಬ ಭಯದಿಂದ ಎಲ್ಲಿಗೂ ಹೋಗಲಾರಿರಿ. ಈ ದಿನ ನೀವು ಸಕಾರಾತ್ಮಕವಾಗಿ ಇರಬೇಕು ಎಂದುಕೊಂಡರೂ ಆಗದು. ನೂತನ ಗೃಹದ ಹುಡುಕಾಟ ಮಾಡಲಿದ್ದೀರಿ. ಹೊಸ ಮನೆಯ ಖರೀದಿಯೇ ನಿಮಗೆ ಉತ್ತಮ ಎನಿಸಬಹುದು. ಆಂತರಿಕ ಆಳದ ಬಲ ನಿಮ್ಮನ್ನು ಪ್ರಭಾವಶಾಲಿಯಾಗಿ ಉಳಿಸುತ್ತದೆ. ನಿಮ್ಮ ಮಾತಿಗೆ ಅಪರಿಚಿತರ ಬೆಂಬಲವೂ ಸಿಗಲಿದೆ. ಉದ್ಯೋಗದಲ್ಲಿ ಸೃಜನಶೀಲತೆಗೆ ಸ್ಪಷ್ಟತೆ ತರಲು ಇಂದಿನ ದಿನ ಪೂರಕವಾಗಿದೆ. ಆರೋಗ್ಯದಲ್ಲಿ ತಲೆನೋವು, ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಇರುತ್ತವೆ. ಸ್ನೇಹಿತರ ಸಹಾಯಕ್ಕೆ ಬರುವ ಸಮಯ ಇದಾಗಿದೆ. ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಸಿದ್ಧಿಸಿದ ಗುಣವಾಗಿದೆ. ಆಲಸ್ಯವು ಸ್ವಲ್ಪವಿದ್ದರೂ ನಿಮ್ಮ ಇಂದಿನ ಕಾರ್ಯಗಳು ನಿಮ್ಮನ್ನು ಚುರುಕಾಗಿಸುತ್ತವೆ. ಯಾವುದನ್ನೂ ಕೃತಕವಾಗಿ ತೋರಿಸಲು ಹೋಗುವುದು ಬೇಡ. ಸಹಜತೆಯು ನಿಮ್ಮ ಸ್ವಭಾವವಾಗಿರಲಿ. ಸಂಗಾತಿಯ ಸ್ವಭಾವವನ್ನು ಸುಲಭದಿಂದ ತಿಳಿಯಲು ಸಾಧ್ಯವಾಗದು. ಅತಿಯಾದ ಬಂಧವೂ ನಿಮಗೆ ಕಿರಿಕಿರಿ.
ಮಿಥುನ ರಾಶಿ: ನಿಮ್ಮ ಸೌಮ್ಯ ಗುಣವು ಹಲವರಿಗೆ ಇಷ್ಟವಾಗಲಿದೆ. ಇಂದು ನಿಮ್ಮ ಸಂಗಾತಿಯಿಂದ ಯಾವುದೇ ಸ್ಪಂದನೆಯು ಯಾವ ವಿಚಾರಕ್ಕೂ ಸಿಗದು. ನಿಮ್ಮನ್ನು ತಾತ್ಸಾರ ಮಾಡುತ್ತಿದ್ದಾರೆ ಎಂಬ ಭಾವನೆ ಮೂಡುವ ಸಾಧ್ಯತೆ ಇದೆ. ಹವ್ಯಾಸಗಳಲ್ಲಿ ಸಮಾನತೆ ಹೊಂದಿದರೆ ಪ್ರೀತಿ ಬೆಳೆದುಹೋಗುತ್ತದೆ. ಕೃಷಿಯ ಕೆಲಸದಲ್ಲಿ ಅನುಭವಿಗಳನ್ನು ಜೋಡಿಸಿಕೊಳ್ಳಿ. ಪ್ರಯಾಣ ನಿಮಗೆ ಆಧ್ಯಾತ್ಮಿಕ ಮತ್ತು ಮನರಂಜನೆಯ ಅನುಭವ ನೀಡುತ್ತದೆ. ಇನ್ನೊಬ್ಬರಿಗೆ ಕೊಡುವ ಸಮಯವಿದ್ದರೆ ಒಪ್ಪಿಕೊಳ್ಳಿ. ಬರವಣಿಗೆಯಲ್ಲಿ ತೊಡಗಿದರೆ ಹೆಚ್ಚು ಸ್ಫೂರ್ತಿ, ಹಣಕಾಸಿನಲ್ಲಿ ಸ್ವಲ್ಪ ಸುಧಾರಣೆ ಕಾಣಬಹುದು. ಕೆಲಸದ ವಿಷಯದಲ್ಲಿ ನೀವು ಬಹಳ ಚುರುಕಾಗಿ ಇರಲಿದ್ದೀರಿ. ನಿಮ್ಮ ಜೊತೆ ಸಂವಹನವನ್ನು ಮಾಡುವವರಿಗೆ ಖುಷಿ ಸಿಗಲಿದೆ. ಸಮಯ ವ್ಯಾಪಾರಿಗಳಿಗೆ ಅನುಕೂಲಕರವಾಗಿಲ್ಲ. ಇಂದು ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಮಕ್ಕಳ ಮೇಲೆ ಪ್ರೀತಿ ಅಧಿಕವಾಗುವುದು. ಯಾರಾದರೂ ನಿಮಗೆ ಬೇಡದ ಸಲಹೆಯನ್ನು ಕೊಡಬಹುದು.
ಕರ್ಕಾಟಕ ರಾಶಿ: ಎಲ್ಲದರಲ್ಲಿಯೂ ಉತ್ತಮನೆನೆಸಿಕೊಳ್ಳಲಾಗದು. ಅಂತಹ ಯೋಚನೆಯಿಂದ ಹೊರಬರುವುದು ಉತ್ತಮ. ನೀವು ಕುಟುಂಬದವರ ಪ್ರೀತಿಯನ್ನು ಬಹಳ ಕಾಲದ ಅನಂತರ ಅನುಭವಿಸುವಿರಿ. ಮಾಡಲು ಕೆಲಸಗಳಿದ್ದರೂ ಮಾಡದೇ ಸಮಯವನ್ನು ಹಾಳುಮಾಡುವಿರಿ. ನೈಜತೆಯನ್ನು ಮರೆಯಬೇಡಿ. ಕಲ್ಪನೆ ಮತ್ತು ಭಾವನೆಗಳು ಜತೆಯಾಗಿ ಕೆಲಸ ಮಾಡಲಿ. ಉದ್ಯೋಗದಲ್ಲಿ ನೂತನ ಕಲಿಕೆಗಳು ಸಿಗುತ್ತವೆ. ಆರೋಗ್ಯದಲ್ಲಿ ನೀರಿನ ಸೇವನೆ ಹೆಚ್ಚಿಸಬೇಕು. ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವ ಅಥವಾ ಧಾರ್ಮಿಕ ಕ್ಷೇತ್ರಗಳಿಗೆ ಹೋಗಿವ ಯೋಚನೆ ಮಾಡುವಿರಿ. ಅನ್ಯೋನ್ಯತೆಯ ಬಗ್ಗೆ ಕಣ್ಣು ಬೀಳಬಹುದು. ಆರ್ಥಿಕತೆ ಒಂದೇ ರೀತಿಯಲ್ಲಿ ಇರಲಿದೆ. ನೀವು ದೀರ್ಘಕಾಲದವರೆಗೆ ಕೆಲಸದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸಲಿಲ್ಲ, ಆದರೆ ಇಂದು ನೀವು ನಿಮ್ಮ ಅತ್ಯುತ್ತಮವಾದದನ್ನು ನೀಡುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸುತ್ತೀರಿ. ಹಳೆಯ ನೋವಿನ ಬಗ್ಗೆ ನಿಮಗೆ ಭಯವಿರುವುದು.
ಸಿಂಹ ರಾಶಿ: ನೀವು ಬಯಸಿದಂತಹದ್ದು ಸಿಗದೇ ಇದ್ದರೂ ಅಲ್ಪ ಲಾಭದಿಂದ ತೃಪ್ತಿ. ಇಂದು ನೀವು ಮಾನಸಿಕ ಮತ್ತು ದೈಹಿಕವಾಗಿ ಸಬಲರು. ಉಲ್ಲಾಸ ಮತ್ತು ಸಂತೋಷಗಳು ಎಂದಿಗಿಂತ ಹೆಚ್ಚು ಇರಲಿದೆ. ನಿಮಗಿಷ್ಟವಾದ ಸಮಾರಂಭಕ್ಕೆ ಭೇಟಿ ಕೊಡುವಿರಿ. ಆಪ್ತರನ್ನು ಭೇಟಿಯಾಗುವಿರಿ. ಅಧಿಕಾರವನ್ನು ಬಳಸಿಕೊಳ್ಳುವ ಆಲೋಚನೆ ಸರಿಯಾದುದಲ್ಲ. ಏಕಾಂಗಿಯಾಗಿ ಜೀವನವನ್ನೂ ನಿಭಾಯಿಸಬಹುದು ಎಂಬ ಬಲದ ಅರಿವು ಬರಲಿದೆ. ಕೆಲಸದ ಸಮಯದಲ್ಲಿ ಹೊಸ ಆಲೋಚನೆಗಳನ್ನು ಹಂಚಿಕೊಳ್ಳಿ. ಕಿಡ್ನಿ ಅಥವಾ ಮೂತ್ರಪಿಂಡದ ಸಂಬಂಧಿತ ಸಮಸ್ಯೆ ಎದುರಾಗಬಹುದು, ಎಚ್ಚರಿಕೆಯಿಂದಿರಿ. ಬರೆಯುವುದು ಒಳ್ಳೆಯ ಒತ್ತಡ ನಿವಾರಣೆ ಪರಿಹಾರವಾಗಿದೆ. ನಿಮ್ಮವರಿಂದ ಇಂದು ಯಾವುದನ್ನೂ ನಿರೀಕ್ಷಿಸದೇ ಇದ್ದರೂ ತಾನಾಗಿಯೇ ಬಂದು ಒದಗುವುದು. ತಪ್ಪು ಹಾದಿಗೆ ಯಾರಿಂದಲಾದರೂ ಪ್ರೇರಣೆ ಸಿಗಲಿದೆ. ನಿಮ್ಮ ವಿವೇಕವನ್ನು ಬಳಸಿ. ಇಂದು ನೀವು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಕನ್ಯಾ ರಾಶಿ: ಮನಸ್ಸು ನಕಾರಾತ್ಮಕವಾಗಿ ಇದ್ದಾಗ ನೀವು ಬಯಸುವ ಶಾಂತಿಯನ್ನು ಎಲ್ಲಿಯೂ ಪಡೆಯಲಾಗದು. ಯಾವದೇ ತಾಳ್ಮೆಯಿಂದ ಅವುಗಳನ್ನು ತಣ್ಣಗಾಗಿಸಿ. ಹೆಚ್ಚು ಮಾತನಾಡಿ ಇನ್ನೊಂದಕ್ಕೆ ನಾಂದಿ ಹಾಡಬೇಡಿ. ಭವಿಷ್ಯದ ಕುರಿತು ಅತಿಯಾದ ಚಿಂತನೆಯನ್ನು ಮಾಡಲಿದ್ದೀರಿ. ಸ್ಥಿತಿಗತಿಗಳ ಒತ್ತಡ ನಿಮ್ಮ ಮನಸ್ಸನ್ನು ಹಿಂಡಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ನಿರ್ಣಯಗಳು ಮುಂದಿನ ಪ್ರಗತಿಗೆ ಕಾರಣವಾಗಬಹುದು. ನಿಮಗೆ ಮಕ್ಕಳು ನೆಮ್ಮದಿ ಕೊಡುವರು ಎಂಬ ಸಮಾಧಾನ ಕಾಣಿಸುವುದು. ಸ್ನೇಹಿತರ ಸಲಹೆ ಇಂದು ನಿಮಗೆ ಪ್ರೇರಣೆದಾಯಕವಾಗಬಹುದು. ಎಲ್ಲದಕ್ಕೂ ಅಡ್ಡದಾರಿಯಲ್ಲೇ ಹೋಗಬೇಕು ಎಂಬ ತೀರ್ಮಾನ ಬೇಡ. ವಿಳಂಬವಾದರೂ ತೊಂದರೆ ಇಲ್ಲ. ಮಕ್ಕಳಲ್ಲಿ ಪಕ್ಷಪಾತದಿಂದ ಕಲಹವಾಗುವುದು. ನೌಕರರ ವಿಚಾರದಲ್ಲಿ ನಿಮ್ಮ ವರ್ತನೆಯು ಸರಿಯಾಗಿರಲಿ. ನಿಮ್ಮದೇ ಆದ ಚಿಂತನೆಯಿಂದ ಕಾರ್ಯವನ್ನು ಮಾಡುವಿರಿ. ನಿಮ್ಮ ಬೌದ್ಧಿಕ ಕಸರತ್ತನ್ನು ಪ್ರದರ್ಶಿಸುವಿರಿ.




