Horoscope Today 21 November: ಇಂದು ಈ ರಾಶಿಯವರ ಸಂಶೋಧನೆಗೆ ಹಿರಿಯರ ಮನ್ನಣೆ

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶೀ ತಿಥಿಯ ಶನಿವಾರದಂದು ಸಂಬಂಧದಲ್ಲಿ ಅಪನಂಬಿಕೆ, ಸಣ್ಣ ವಾಹನ ಖರೀದಿ, ಗುಪ್ತ ಲಾಭ, ಹಠಾತ್ ಅವಕಾಶಗಳು, ಮನೆಯ ದುರಸ್ತಿ, ದೇವಕಾರ್ಯ, ಆರೋಗ್ಯಕ್ಕೆ ಖರ್ಚು, ಉದ್ಧಟತನ, ಅವಿಶ್ರಾಂತಿ ಇವೆಲ್ಲ ಇಂದಿನ ವಿಶೇಷ.

Horoscope Today 21 November: ಇಂದು ಈ ರಾಶಿಯವರ ಸಂಶೋಧನೆಗೆ ಹಿರಿಯರ ಮನ್ನಣೆ
ದಿನ ಭವಿಷ್ಯ
Image Credit source: Google
Edited By:

Updated on: Nov 21, 2026 | 1:06 AM

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ಅನುರಾಧಾ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ಹರ್ಷಣ, ಕರಣ : ಬವ, ಸೂರ್ಯೋದಯ – 06 – 22 am, ಸೂರ್ಯಾಸ್ತ – 05 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:14 – 10:40, ಯಮಗಂಡ ಕಾಲ 13:31 – 14:57, ಗುಳಿಕ ಕಾಲ 06:22 – 07:48.

ಮೇಷ ರಾಶಿ: ನಿಮ್ಮ ಪ್ರೇಮಜೀವನವು ಹಿಂದಿಗಿಂತಲೂ ಭಿನ್ನವಾಗಿ ತೋರುವುದು. ಆಸೆಯನ್ನು ಈಡೇರಿಸಿಕೊಂಡು ಸಂತೋಷಪಡುವಿರಿ. ದಾನದಲ್ಲಿ ಹೆಚ್ಚಿನ ಶ್ರದ್ಧೆಯನ್ನು ತೋರುವಿರಿ. ನಿಮ್ಮ ಬಗ್ಗೆ ಒಳ್ಳೆಯ ಭಾವವು ಬರಬಹುದು. ಸಂಗಾತಿಯ ಇಂದಿನ ಮಾತುಕತೆಗಳು ವಾಗ್ವಾದಕ್ಕೆ ತಿರುಗಬಹುದು. ಕಷ್ಟದ ಮೆಲುಕು ಹಾಕುವ ಸಂದರ್ಭ ಬರಬಹುದು. ನಿಮ್ಮ ಆರಂಭವೇ ಸರಿಯಾಗದೇ ಇರುವುದರಿಂದ ಗುರಿಯೂ ತಪ್ಪಬಹುದು. ಭವಿಷ್ಯದ ಬಗ್ಗೆ ನಿಮಗೆ ಭೀತಿ ಇರುವುದು.

Loading...

ವೃಷಭ ರಾಶಿ: ಅಪರೂಪದ ವ್ಯಕ್ತಿಗಳನ್ನು ಭೇಟಿ ಮಾಡುವ ಸಂದರ್ಭವು ಬರಬಹುದು. ಉಪಕಾರದ ಸ್ಮರಣೆಯನ್ನು ನೀವು ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳು ಪರೀಕ್ಷೆಯತ್ತ ಗಮನ ಕೊಡಬೇಕಾಗುವುದು. ಬಂಧುಗಳ ಮಾತು ನಿಮಗೆ ಕಿರಿಕಿರಿ ತರಿಸಬಹುದು. ಪುಣ್ಯಸ್ಥಳಗಳ ಭೇಟಿ ಮಾಡವಿರಿ. ನಿಮ್ಮ ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುವಿರಿ. ಮಾತನಾಡುವಾಗ ಕಟುವಾಗಿ ಹೇಳುವ ಸಾಧ್ಯತೆ. ಆಸ್ತಿಯನ್ನು ಮಾರಾಟ‌ ಮಾಡಲು ಇಚ್ಛೆ ಇರುವುದು.

ಮಿಥುನ ರಾಶಿ: ನಿಮ್ಮ ಕಾರ್ಯಗಳು ನಿಮ್ಮನ್ನೇ ಸುತ್ತಿಕೊಂಡೀತು. ಆರ್ಥಿಕದಿಂದ ನೀವು ಬಲವಾಗುವಿರಿ. ಧನವು ನಷ್ಟವಾದ ಕಾರಣ ಹತಾಶೆಯು ನಿಮ್ಮಲ್ಲಿ ಬರಬಹುದು. ಬೇಡವೆಂದರೂ ನಿಮಗೆ ಧನಸಹಾಯ ಬರುವುದು. ವ್ಯವಹಾರದಲ್ಲಿ ಪಾರದರ್ಶಕತೆ ಕಾಣಿಸುವುದು. ಸಹೋದರಿಗೆ ಉಡುಗೊರೆ ನೀಡಿ ಖುಷಿಪಡಿಸುವಿರಿ. ನಿಮ್ಮ ಸಾಮರ್ಥ್ಯದ ಬಗ್ಗೆ ಇತರರಿಂದ ತಿಳಿದು ಖುಷಿಯಾಗುವುದು. ರಾಜಕೀಯದಲ್ಲಿ ಮುಂದುವರಿಯುವುದು ಕಷ್ಟವೆನಿಸಬಹುದು.

ಕರ್ಕಾಟಕ ರಾಶಿ: ಪ್ರಭಾವೀ ವ್ಯಕ್ತಿಗಳನ್ನು ಎದುರು ಹಾಕಿಕೊಳ್ಳುವ ಸಂದರ್ಭವು ಬರಬಹುದು. ನೂತನ ಅಧಿಕಾರವು ಪ್ರಾಪ್ತವಾಗಲಿದೆ. ಮೇಲಧಿಕಾರಿಗಳ ಜೊತೆ ಯೋಜನೆಯ ಕುರಿತು ಚರ್ಚೆ ನಡೆಸುವಿರಿ. ಯಂತ್ರಗಳ ಮಾರಾಟ ಮಾಡುವವರಿಗೆ ಉತ್ತಮ ಲಾಭವಿರಲಿದೆ. ಕೆಲಸದಲ್ಲಿ ಆಸಕ್ತಿ ಇದ್ದರೂ ನಿಮ್ಮನ್ನು ಟೀಕಿಸಿದ ಕಾರಣ ಹಿಂದೇಟು ಹಾಕುವಿರಿ. ದುರಾಲೋಚನೆಯು ನಿಮ್ಮ ಮಾರ್ಗವನ್ನು ಬದಲಾಯಿಸುವುದು. ಮಕ್ಕಳ ಮೇಲೆ ನಿಮ್ಮ ಅನುಕಂಪವು ಹೆಚ್ಚಾಗುವುದು.

ಸಿಂಹ ರಾಶಿ: ಖರೀದಿ ಮಾಡಿದ ನಿವೇಶನವನ್ನು ಹೊಂದಾಣಿಕೆಯ ಕೊರತೆಯಿಂದ ಮಾರಾಟ ಮಾಡುವಿರಿ. ಮಹಿಳೆಯ ಕಾರಣದಿಂದ ನಿಮಗೆ ಧನನಷ್ಟವು ಆಗಬಹುದು. ಭೂಮಿಯನ್ನು ನಿಮ್ಮದಾಗಿಸಿಕೊಳ್ಳುವ ಪ್ರಯತ್ನವು ಸಫಲವಾಗುವುದು. ನಿಮಗೆ ಬರುವ ಪ್ರಶಂಸೆಯ ಮಾತನ್ನು ಅಲ್ಲಗಳೆಯುವಿರಿ. ಉನ್ನತ ಸ್ಥಾನವು ನಿಮ್ಮನ್ನು ಕರೆಯಬಹುದು. ಗೃಹನಿರ್ಮಾಣದ ರೂಪವನ್ನು ನಿರ್ಧರಿಸಿಕೊಳ್ಳುವಿರಿ. ಗುಪ್ತ ಲಾಭ, ಹಠಾತ್ ಅವಕಾಶಗಳು ಕಾಣಿಸುವ ದಿನ.

ಕನ್ಯಾ ರಾಶಿ: ನಿಮ್ಮ ಬಗ್ಗೆ ಯಾರಾದರೂ ಅಂದುಕೊಂಡಾರು ಎನ್ನುವ ಹಿಂಜರಿಕೆಯು ಇರಲಿದೆ‌. ವಿದೇಶದ ಹೂಡಿಕೆಗೆ ಗಟ್ಟಿಯಾದ ಮನಸ್ಸು ಮಾಡುವಿರಿ. ಸಂಗಾತಿಯ ಮಾತಿನಿಂದ ಬೇಸರವಾಗಲಿದೆ. ಸಮಯ ಪಾಲನೆಯಿಂದ ನಿಮ್ಮ ಕೆಲಸಗಳು ಸರಿಯಾಗುವುದು. ನೀರಿನಿಂದ ಭೀತಿಯು ಉಂಟಾಗುವುದು. ಸಂಬಂಧವು ಇಂದು ಉಪಯೋಗಕ್ಕೆ ಬರುವುದು. ಒಂದೇ ರೀತಿಯಲ್ಲಿ ಜೀವನವನ್ನು ಸಾಗಿಸಲು ಕಷ್ಟವಾದೀತು.

ತುಲಾ ರಾಶಿ: ಕೆತ್ತನೆಯ ಕಲಾವಿದರಿಗೆ ಹೆಚ್ಚು ಬೇಡಿಕೆ ಬರಬಹುದು. ಪಕ್ಷಪಾತದಿಂದ ಕಲಹವಾಗುವುದು. ನೌಕರರ ವಿಚಾರದಲ್ಲಿ ನಿಮ್ಮ ವರ್ತನೆಯು ಸರಿಯಾಗಿರಲಿ. ಸ್ಪರ್ಧೆಯಲ್ಲಿ ಸೋಲಾಗದಿದ್ದರೂ ಹಿನ್ನೆಲೆ. ಒಂದೇ ರೀತಿಯಲ್ಲಿ ಜೀವನ ಸಾಗುವುದು ನಿಮಗೆ ಇಷ್ಟವಾಗದು. ಆರೋಗ್ಯದಲ್ಲಿ ಸಣ್ಣ ಸಮಸ್ಯೆ ನರ ದೌರ್ಬಲ್ಯ, ತಲೆ ಬೇನೆ ಕಾಣಬಹುದು. ಸಮಯಕ್ಕೆ ಆಹಾರ ಮತ್ತು ವಿಶ್ರಾಂತಿ ಅವಶ್ಯಕ. ನೀವು ಅತಂತ್ರ ಸ್ಥಿತಿಯಲ್ಲಿ ಸಿಕ್ಕಿಕೊಳ್ಳುವ ಹಾಗೆ ಆಗಬಹುದು.

ವೃಶ್ಚಿಕ ರಾಶಿ: ದೂರದ ಬಂಧುಗಳ ಆಗಮನವು ಆಗಲಿದೆ. ಹಳೆಯ ಘಟನೆಗಳು ವಿಸ್ಮರಣೆಯಾಗಬಹುದು. ನಿಮ್ಮ ಆರ್ಥಿಕ ದೌರ್ಬಲ್ಯವನ್ನು ಆಡುಕೊಳ್ಳಬಹುದು. ನಿಮಗೆ ಗೊತ್ತಿಲ್ಲದೇ ಚರಾಸ್ತಿಯು ಇಲ್ಲವಾಗಬಹುದು. ಸಕಾಲಕ್ಕೆ ಯಾವದೂ ಆಗದೇ ಎಲ್ಲವೂ ಅಸ್ತವ್ಯಸ್ತವಾಗಲಿದೆ. ಬೆಲ್ಲದ ಮಾತುಗಳು ಕೇಳಲಷ್ಟೇ ಹಿತ. ಸ್ನೇಹಿತರ ಜೊತೆಗಿನ ಮಾತುಕಥೆಯಲ್ಲಿ ಸ್ಪಷ್ಟತೆ ಇರಲಿ. ನಿಮಗೆ ಸಪ್ಪೆ ಎನಿಸಿದ ವಿಷಯವನ್ನು ಮುಂದುವರಿಸುವುದಿಲ್ಲ.

ಧನು ರಾಶಿ: ನಿಮ್ಮ ಕೆಲಸಕ್ಕೆ ಹಣ ದೊರಕುವುದು ಎಂಬ ನಿರೀಕ್ಷೆಯು ಇರುವುದು. ಯಾರದೋ ಮಾತಿನಿಂದ ಮನೆಯಲ್ಲಿ ಅಸಮಾಧಾನದ ವಾತಾವರಣವು ಇರುವುದು. ನಿಮ್ಮ ಸ್ವಭಾವಗಳು ನಿಮ್ಮವರಿಗೆ ಇಷ್ಟವಾಗದೇ ಹೋಗುವುದು. ಉತ್ಪಾದನೆಯ ಹಂತದಲ್ಲಿ ನಿಮಗೆ ಹಿನ್ನಡೆ ಸಾಧ್ಯತೆ. ನಿಮಗೆ ಸಿಗುವ ಗೌರವದಲ್ಲಿ ವ್ಯತ್ಯಾಸವಾಗಿ ಸಿಟ್ಟು ಬರಬಹುದು. ದಾಂಪತ್ಯದಲ್ಲಿ ಉಂಟಾದ ಬಿರುಕನ್ನು ಮಾತಿನಿಂದಲೇ ಸರಿಮಾಡಿಕೊಳ್ಳಿ.

ಮಕರ ರಾಶಿ: ನೀವು ವಿಶ್ವಾಸ ಯೋಗ್ಯರ ಜೊತೆ ಹೆಚ್ಚು ಬೆರೆಯುವಿರಿ. ಇಂದು ನೀವು ಯಾವುದೇ ಒತ್ತಡಕ್ಕೆ ಸಿಲುಕದೇ ಆಪ್ತರ ಜೊತೆ ಆರಾಮಾಗಿ ಮಾತನಾಡಿ ದಿನವನ್ನು ಕಳೆಯುವಿರಿ. ಬೇಡದ ಸಲಹೆಯನ್ನು ಕೊಡಬಹುದು. ಆರ್ಥಿಕ ವಿಚಾರದಲ್ಲಿ ತಂದೆ‌ ಮಕ್ಕಳ ನಡುವೆ ಮಾತಿನ ಚಕಮಕಿ‌ ಏಳುವುದು. ಮಕ್ಕಳನ್ನು‌ ಮನೆಯಿಂದ ಹೊರಗೆ ಕಳುಹಿಸಿ ಓದಿಸುವುದು ಸೂಕ್ತವಾದೀತು.‌ ಮಾತಿನಲ್ಲಿ ನಿಖರತೆ ಇರಲಿ. ಪ್ರತಿ ಕ್ಷಣವೂ ಅಮೂಲ್ಯ ಎನ್ನಿಸುವಂತೆ ಕಾರ್ಯವಿರುವುದು.‌

ಕುಂಭ ರಾಶಿ: ಅತಿಯಾದ ಬಂಧನವು ನಿಮಗೆ ಕಿರಿಕಿರಿ ತರಿಸಬಹುದು. ವೃತ್ತಿಯಲ್ಲಿ ನಿಮ್ಮ ಮೇಲೆ ಅಭಿಮಾನವು ಹೆಚ್ಚಾಗಬಹುದು. ಸ್ನೇಹಿತರ ಜೊತೆ ಸಮಯವು ವ್ಯರ್ಥವಾದೀತು. ಸರ್ಕಾರದ ಕಡೆಯಿಂದ ನಿಮಗೆ ಆಗಬೇಕಾದ ಕಾರ್ಯವು ವಿಳಂಬ. ನಿಮ್ಮ ನಂಬಿಕೆಗೆ ತೊಂದರೆಯಾಗುವುದು.‌ ಸರ್ಕಾರದ ಕೆಲಸಕ್ಕಾಗಿ ಓಡಾಡುವುದು ನಿಮಗೆ ಬೇಸರ ತಂದೀತು. ಮನಸ್ಸಿನ ಚಾಂಚಲ್ಯವನ್ನು ಕಡಿಮೆ ಮಾಡಿಕೊಳ್ಳುವುದು ಅಗತ್ಯ.

ಮೀನ ರಾಶಿ: ನೀವು ದೂರದ ಊರಿನಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶ ಸಿಗಬಹುದು. ನಿಮ್ಮ ಕೆಲವು ವಿಚಾರದಲ್ಲಿ ತಿಳಿವಳಿಕೆ ಬಂದು ಅದನ್ನು ವಿವೇಕದಿಂದ ನೋಡುವಿರಿ. ವಾಹನ ಸಂಚಾರಕ್ಕೆ ತೊಂದರೆ ಬರಬಹುದು. ಬಹು ದಿನಗಳ ಅನಂತರ ಮನೆಯವರ ಜೊತೆ ಕಾಲ ಕಳೆಯುವ ಅವಕಾಶ ಸಿಗುವುದು.‌ ದಾಂಪತ್ಯದಲ್ಲಿ ಪರಸ್ಪರ ಕಾದಾಟವು ಮಿತಿಮೀರಬಹುದು. ಸಹೋದರರಿಗೆ ಉಡುಗೊರೆಯನ್ನು ಕೊಟ್ಟು ಖುಷಿಪಡಿಸುವಿರಿ.

ಲೋಹಿತ್ ಹೆಬ್ಬಾರ್-8762924271 (what’s app only)

ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Loading...
Unable to load recommendations.
Follow Us