Horoscope Today 22 August : ಇಂದು ಈ ರಾಶಿಯವರಲ್ಲಿ ಯಾವುದೇ ಗೌಪ್ಯತೆ ಉಳಿಯದು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಶ್ರಾವಣ ಮಾಸ ಕೃಷ್ಣ ಪಕ್ಷದ ಚತುರ್ದಶೀ ತಿಥಿ ಶುಕ್ರವಾರ ವಿವಾದಕ್ಕೆ ಮಾತುಕತೆ, ದೀರ್ಘಾವಧಿಯ ಉತ್ಸಾಹ, ತಪ್ಪಿಗೆ ಹೊಣೆ, ಆರ್ಥಿಕ ಕಳಂಕ, ಒಪ್ಪಂದದ ನವೀಕರಣ ಇವೆಲ್ಲ ಇಂದಿನ ವಿಶೇಷ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರ ಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಶುಕ್ರ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಆಶ್ಲೇಷಾ, ಯೋಗ : ವಜ್ರ, ಕರಣ : ಭದ್ರ, ಸೂರ್ಯೋದಯ – 06 – 20 am, ಸೂರ್ಯಾಸ್ತ – 06 – 50 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 11:02 – 12:35, ಗುಳಿಕ ಕಾಲ 07:25 – 09:28 ಯಮಗಂಡ ಕಾಲ 15:43 – 17:16
ಮೇಷ ರಾಶಿ :
ನಿಮ್ಮ ದಾರಿ ತಪ್ಪಿಸುವ ಕೆಲಸಕ್ಕೆ ಯಾರಾದರೂ ಸರಿಯಾಗಿ ತಯಾರಿರುತ್ತಾರೆ. ನಿಮ್ಮ ನಡವಳಿಕೆಯೇ ಸಮೀಪಕ್ಕೆ ಜನರು ಬರುವಂತೆ ಮಾಡಿದೆ. ಇಂದು ನೀವು ಅತಿಥಿಗಳ ಕಡೆ ಗಮನ ಕೊಡದೆ ಅವರಿಗೆ ಬೇಸರ ಮಾಡುವಿರಿ. ಅತಿಯಾದ ಬಳಕೆಯಿಂದ ಸಂಬಂಧಗಳು ಹಳಸಬಹುದು. ಸಂಗಾತಿಯ ಮಾತನ್ನು ನೆರವೇರಿಸುವುದು ಕಷ್ಟವಾಗಬಹುದು. ಬೇಸರಕ್ಕೆ ಸಾಂತ್ವನದ ಮಾತುಗಳು ಬಹಳ ಉಪಯುಕ್ತವಾಗಲಿದೆ. ನೀವು ಇಂದು ಅಧ್ಯಾತ್ಮದ ವಿಚಾರದಿಂದ ಪ್ರಭಾವಿತರಾಗಿರುವಿರಿ. ನಿಮ್ಮ ಆತುರದ ನಿರ್ಧಾರದಿಂದ ಕುಟುಂಬಕ್ಕೆ ಸಮಸ್ಯೆಯಾಗಬಹುದು. ಗಂಭೀರವಾದ ವಿಷಯವನ್ನು ಬಹಳ ಲಘುವಾಗಿ ತೆಗೆದುಕೊಳ್ಳುವಿರಿ. ನಿಮ್ಮ ಯೋಜನೆಯ ಸಂಪೂರ್ಣ ಚಿತ್ರಣ ದೊರೆತಮೇಲೆ ಕಾರ್ಯವನ್ನು ಆರಂಭಿಸಿ. ಅವಸರವಾಗಿ ಬೇಡ. ಸಂತಾನ ವಾರ್ತೆಯಿಂದ ಶುಭವಿದೆ. ಕಛೇರಿಯಲ್ಲಿ ಇಂದು ವಾದಗಳು ನಡೆಯಬಹುದು. ಅಧ್ಯಾತ್ಮಕ್ಕೆ ಸಂಬಂಧಿಸಿದ ಚರ್ಚೆಯನ್ನು ನಿಮ್ಮ ಜೊತೆ ವಿವಾದಕ್ಕಾಗಿ ಮಾಡುವರು. ವಿದ್ಯಾರ್ಥಿಗಳಿಗೆ ಸಾಲಬಾಧೆ ತಟ್ಟುವ ಸಾಧ್ಯತೆ ಇದೆ. ಅದನ್ನು ಸರಿ ಮಾಡಿಕೊಳ್ಳುವ ಮಾರ್ಗವೂ ಇದೆ.
ವೃಷಭ ರಾಶಿ :
ಒಂದೇ ಕಾರ್ಯದಲ್ಲಿ ದೀರ್ಘಾವಧಿ ಕಳೆದ ಅನಂತರವೂ ನೀವು ಉತ್ಸಾಹದಲ್ಲಿಯೇ ಇದ್ದುದು ವಿಶೇಷವೆನಿಸಬಹುದು. ಇಂದು ನಿಮಗೆ ಕೆಲವು ಕಾರ್ಯಗಳು ವ್ಯರ್ಥವೆನಿಸಬಹುದು. ಯಾರನ್ನೋ ಪ್ರಶಂಸಿಸಿದ ಮಾತ್ರ ನೀವು ಚಿಕ್ಕಘಘ ವರ್ಗರಾಗ ಲಾರಿ ಒಂದಾದಮೇಲೊಂತೆ ಬರುವ ಕೆಲಸಗಳು ನಿಮಗೆಇದ್ದ ಘಘಘಗ ಒತ್ತಡವಾಗಲಿದೆ. ಅನಗತ್ಯ ಓಡಾಟವನ್ನು ನಿಲ್ಲಿಸಿ. ಇದು ನಷ್ಟದ ಓಡಾಟವೇ ಆಗಲಿದೆ. ದೇಹವನ್ನು ನೀವು ದಂಡಿಸುವಿರಿ. ಬಂಧುಗಳಲ್ಲಿಯೇ ನಿಮ್ಮ ವಿವಾಹವಾಗಲಿದ್ದು, ಬೇಸರದ ಜೊತೆ ಸಂತೋಷವೂ ಇದೆ. ಕಛೇರಿಯ ಘಟನೆಯನ್ನು ಮನೆಯಲ್ಲಿ ಹೇಳಿ ಅವರನ್ನು ಆತಂಕಕ್ಕೆ ತಳ್ಳುವವರಿದ್ದೀರಿ. ಸ್ನೇಹಿತರ ಸಹವಾಸದಿಂದ ಧನನಷ್ಟವು ಆಗಲಿದೆ. ಕುಚೋದ್ಯದ ಮನಃಸ್ಥಿತಿ ನಿಮಗೆ ಇಷ್ಡವಾಗದು. ಇದಕ್ಕೆ ಜಗಳವೂ ಆಗಬಹುದು. ಆದಷ್ಟು ತಾಳ್ಮೆಯಿಂದ ಇರುವುದು ಮುಖ್ಯ. ಕೆಲವು ವಿರೋಧವನ್ನು ನೀವು ಸಹಿಸಿಕೊಳ್ಳಲು ತಯಾರಿರಬೇಕು. ಅದರೂ ಅನಿವಾರ್ಯ ಎನಿಸೀತು. ಸನ್ನಿವೇಶವನ್ನು ಎದುರಿಸುವುದು ಕಷ್ಟವಾಗಲಾರದು. ನಕಾರಾತ್ಮಕ ಸೂಚನೆ ನಿಮಗೆ ಸಿಗಲಿದ್ದು, ಅದನ್ನು ನಿರ್ಲಕ್ಷ್ಯ ಮಾಡುವಿರಿ.
ಮಿಥುನ ರಾಶಿ :
ನೀವಾಡುವ ಸಣ್ಣ ಮಾತೂ ದೊಡ್ಡ ಆತಂಕಕ್ಕೆ ಕಾರಣವಾಗಬಹುದು. ನಿಮ್ಮ ಆಲೋಚನೆಗಳಿಂದ ನಿಮಗೆ ಯೋಗ್ಯ ಸ್ಥಾನವು ಲಭಿಸುವುದು. ನಿರ್ಲಕ್ಷ್ಯವನ್ನು ಮಾಡದೇ ಕೆಲಸಗಳನ್ನು ಮಾಡಿ ಮುಗಿಸಿ. ಉತ್ಸಾಹಕ್ಕೆ ಭಂಗ ಬರುವ ಸನ್ನಿವೇಶವನ್ನು ನೀವು ಎದುರಿಸುವಿರಿ. ನೀವು ಇನ್ನೊಬ್ಬರ ಜೊತೆ ಮಾತನಾಡುವುದು ಇಷ್ಟವಾಗದು. ಕರಕುಶಲೆಯನ್ನು ಬೇಡಿಕೆಗೆ ಅನುಸಾರವಾಗಿ ಪೂರೈಸಬೇಕಾಗುವುದು. ತುರ್ತು ಕಾರ್ಯದ ಕಾರಣ ಪ್ರಯಾಣ ಮಾಡಬೇಕಿದ್ದು ಅದರ ಬದಲಿ ವ್ಯವಸ್ಥೆಯನ್ನು ಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಮುಂದಾಲೋಚನೆಯು ಹೆಚ್ಚಿನ ಅನುಕೂಲವನ್ನು ಮಾಡಲಿದೆ. ಬೆಳಗಿನ ಜಾವ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ, ನಿಮ್ಮ ಅನೇಕ ಆರೋಗ್ಯದ ಸಮಸ್ಯೆಗಳು ದೂರಾಗಲಿದೆ. ಪ್ರಖ್ಯಾರ ದೇವಾಲಯದಲ್ಲಿ ನೀವು ಸೇವೆ ಸಲ್ಲಿಸುವಿರಿ. ಮೂಲಧನವನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ. ಸೂಕ್ಷ್ಮ ವಿಚಾರಗಳನ್ನು ಪಕ್ಷಪಾತವಿಲ್ಲದೇ ನಿರ್ಣಯಿಸಬೇಕಾಗುವುದು. ಮನೆಯಲ್ಲಿ ಹರ್ಷದ ವಾತಾವರಣ ಇದ್ದು ಬಂಧುಗಳು ನಿಮ್ಮ ಜೊತೆಗಿರುವರು.
ಕರ್ಕಾಟಕ ರಾಶಿ :
ನಿಮ್ಮದಲ್ಲದಿದ್ದರೂ ತಪ್ಪಿಗೆ ಆಂಶಿಕವಾಗಿ ಸೇರಿಕೊಳ್ಳುವಿರಿ. ಎಲ್ಲದಕ್ಕೂ ಒಂದೇ ರೀತಿಯ ಪರಿಹಾರವಿಲ್ಲ. ಸಂದರ್ಭಕ್ಕೆ ತಕ್ಕಂತೆ ಬದಲಾಗಬಹುದು. ನಿಮ್ಮ ಅಗತ್ಯದ ಹಣವನ್ನು ಪೂರೈಸಲು ಶ್ರಮಪಡುವಿರಿ. ನೂತನ ಉದ್ಯೋಗವನ್ನು ಅರಸುತ್ತಿರುವಿರಿ. ಈಗಾಗಲೇ ಉದ್ಯೋಗದಲ್ಲಿ ಇರುವವರು ವೇತನವನ್ನು ಹೆಚ್ಚಿಸಲು ವಿನಂತಿಸಲಿದ್ದೀರಿ. ನಿಮ್ಮದೇ ಆದ ವ್ಯಕ್ತಿತ್ವವು ನಿಮಗೆ ಗೌರವವನ್ನು ತರಿಸಬಹುದು. ವ್ಯಾಪಾರದ ಹಂತದ ಬಗ್ಗೆ ತಿಳಿವಳಿಕೆ ಬರುವುದು. ದುರ್ಘಟನೆಯನ್ನು ಮನಸ್ಸಿನಿಂದ ಹೊರಹಾಕಲು ಕಷ್ಟವಾದೀತು. ಸಾಲವನ್ನು ಹಿಂಪಡೆಯುವ ಬಗ್ಗೆ ಗಂಭೀರವಾಗಿ ಆಲೋಚಿಸಿ. ಸಂತೋಷವನ್ನು ನೀವು ಯಾರ ಜೊತೆ ಹಂಚಿಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ಸಂತೋಷ ನಿಂತಿದೆ. ವಿದ್ಯಾಭ್ಯಾಸದ ಬಗ್ಗೆ ನಿಮಗೆ ಬಹಳ ತುಡಿತವಿದ್ದು ಮಾರ್ಗದರ್ಶನ ಹಾಗೂ ಸಹಾಯದ ಕೊರತೆ ಇರಲಿದೆ. ಯಾವುದನ್ನೂ ಮನಸ್ಸಿನಲ್ಲಿ ಅತಿಯಾಗಿ ಅಂದುಕೊಳ್ಳುವುದು ಬೇಡ. ವಾಹನ ಮುಂತಾದ ಉದ್ಯಮವನ್ನು ನಡೆಸುತ್ತಿದ್ದರೆ ಲಾಭವು ಇರುವುದು. ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಎಡವಟ್ಟು ಮಾಡಿಕೊಳ್ಳುವಿರಿ.
ಸಿಂಹ ರಾಶಿ :
ಸವಾಲುಗಳು ಎಂದಿನಂತೆ ಬಂದರೂ ಅದನ್ನು ನಿರ್ವಹಸುವ ಸಮಯ ತಾಳ್ಮೆ ಎರಡೂ ಇರದು. ಜಟಿಲ ಸಮಸ್ಯೆಗಳನ್ನು ನಿಮ್ಮ ಬಳಿ ಹೇಳಿಕೊಳ್ಳುವರು. ಯಾರನ್ನೋ ಮೆಚ್ಚಿಸಲು ನಿಮ್ಮ ಸಮಯವನ್ನು ವ್ಯಯಿಸಬೇಕಾಗುವುದು. ದುರಾಸೆಯಿಂದ ಸಂಕಷ್ಟವನ್ನು ಹೆಚ್ಚು ಮಾಡಿಕೊಳ್ಳುವಿರಿ. ಯಾರಿಗಾದರೂ ಯೋಗ್ಯರಿಗೆ ದಾನವನ್ನು ಮಾಡಿ. ನಿಮ್ಮವರಿಗೆ ನೀಡಿದ ಹಣವನ್ನು ಪಡೆಯಲು ಬಹಳ ಸಾಹಸ ಪಡುವಿರಿ. ಸಂಗಾತಿಯನ್ನು ನೀವು ಅಲಕ್ಷಿಸುವ ಸಾಧ್ಯತೆ ಇದೆ. ಮಂದಗತಿಯಲ್ಲಿ ಸಾಗುವ ಕೆಲಸಕ್ಕೆ ವೇಗವನ್ನು ಕೊಡಬೇಕಾದೀತು. ಗೌಪ್ಯತೆಯನ್ನು ಕಾಪಾಡಲು ಹಣವನ್ನು ಕೊಡುವಿರಿ. ಬಲವಂತವಾಗಿ ಸಂಗಾತಿಯಿಂದ ಸಹಾಯವನ್ನು ಪಡೆದುಕೊಳ್ಳಬೇಕಾಗಬಹುದು. ಶ್ರೀಮಂತಿಕೆಯ ಅಮಲು ನಿಮ್ಮನ್ನು ನೆಮ್ಮದಿಯಿಂದ ಇರಲು ಬಿಡದು. ಸಂಗಾತಿಯ ನಡುವೆ ಹಳೆಯ ವಿಚಾರಕ್ಕೆ ಹೆಚ್ಚು ಮತ್ತೆ ಜಗಳವಾಗಬಹುದು. ಮೌನದಿಂದ ಇರುವುದು ಒಳ್ಳೆಯದು. ಅನವಶ್ಯಕವಾಗಿ ಹಣವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಎಲ್ಲವನ್ನೂ ಪ್ರಾರಬ್ಧ ಎಂದು ಸುಮ್ಮನಾಗುವುದಕ್ಕಿಂತ ಭಿನ್ನವಾಗಿ ಯೋಚಿಸುವಿರಿ. ಸಂಗಾತಿಯ ಬೆಂಬಲ ಸಿಗಲಿದೆ.
ಕನ್ಯಾ ರಾಶಿ :
ನಿಮಗೆ ಗೊತ್ತಾಗದೇ ಇರುವಂತೆ ನಿಮಗೊಂದು ಸಣ್ಣ ಕಳಂಕ ಅಂಟಿಕೊಳ್ಳುವುದು. ಇಂದು ಬಿಡಲಾಗದ ದುಶ್ಚಟಗಳು ನಿಮ್ಮ ವ್ಯಕ್ತಿತ್ವವನ್ನು ಘಾಸಿಗೊಳಿಸಬಹುದು. ಹಣದ ಆಮಿಷವನ್ನು ತೋರಿಸಿ ನಿಮ್ಮನ್ನು ವಂಚಿಸುವ ಸರಳ ಉಪಾಯವಾಗಿದೆ. ನಿಮಗೆ ಪರಿಹರಿಸಿಕೊಳ್ಳಲು ಕಷ್ಟವಾದ ಸಮಸ್ಯೆಯನ್ನು ನೀವು ಅನುಭವಿಗಳ ಅಥವಾ ಆಪ್ತರ ಜೊತೆ ಹಂಚಿಕೊಳ್ಳಿ. ಸಜ್ಜನಿಕೆಯನ್ನು ತೋರಿಸಲು ಹೋಗಿ ಕಷ್ಟಕ್ಕೆ ಸಿಕ್ಕಿಕೊಳ್ಳುವಿರಿ. ಕಾನೂನಾತ್ಮಕ ಗೆಲವು ಬಂದರೂ ಎದರಾಳಿಗಳು ಸಮ್ಮನಿರರು. ಬಂಧುಗಳ ಸಲಹೆಯನ್ನು ಸ್ವೀಕರಿಸದೇ ಇದ್ದುದಕ್ಕೆ ನಿಮಗೆ ಬೇಸರವಾಗಬಹುದು. ನೀವು ಆರಂಭಿಸಿದ ಹೊಸ ಉದ್ಯೋಗದಲ್ಲಿ ಬರಬಹುದಾದ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ಮಿತಿಯಲ್ಲಿ ಅವುಗಳನ್ನು ಸರಿಮಾಡಿಕೊಳ್ಳಿ. ಸಮಯಕ್ಕೆ ಬಂದುದನ್ನು ನೀವು ಸ್ವೀಕರಿಸಬೇಕಾದೀತು. ವ್ಯವಸ್ಥೆ ಇರುವುದೇ ಹೀಗೆ ಎಂಬ ನಿರ್ಧಾರದಿಂದ ಸಮಾಧಾನ ಸಿಗಲಿದೆ. ಧಾರ್ಮಿಕತೆಯಲ್ಲಿ ಅನಿರೀಕ್ಷಿತವಾಗಿ ಭಾಗವಹಿಸುವಿರಿ. ಸುಮ್ಮನೇ ಖರ್ಚಿಗೊಂದು ದಾರಿಯಾಗುದು. ಸಾಮರ್ಥ್ಯವನ್ನು ಬಳಕೆಯಾಗುವಲ್ಲಿ ಉಪಯೋಗಿಸಿ.
ತುಲಾ ರಾಶಿ :
ವ್ಯವಹಾರಕ್ಕೆ ಮಾತಿನ ಒಪ್ಪಂದವು ಯಾವತ್ತೂ ಸಿಂಧುವಾಗದು. ದಾನವನ್ನು ಪಡೆಯಲಿಕ್ಕಾಗಿ ಇಂದು ನಿಮ್ಮ ಬಳಿ ಯಾರಾದರೂ ಬರಬಹುದು. ಬುದ್ಧಿವಂತರಾದರೆ ಸಾಲದು. ಅದನ್ನು ಪ್ರಯೋಗಿಸುವ ಚಾಣಾಕ್ಷತೆಯೂ ಬೇಕು. ಯಾವುದನ್ನೂ ಕೊಂಡುಕೊಳ್ಳಬಹುದು. ಆದರೆ ನೆಮ್ಮದಿ ಸುಖವನ್ನು ಖರೀದಿಸಲಾಗದು. ಇರುವುದರಲ್ಲಿ ನೆಮ್ಮದಿಯಿದೆ. ಕೆಲಸದಲ್ಲಿ ಉತ್ಸಾಹ ಕಡಿಮೆ ಎನಿಸಿದಾಗ ಸ್ವಲ್ಪ ಸಮಯ ಬೇರೆ ಕಾರ್ಯದಲ್ಲಿ ಮಗ್ನರಾಗಿ. ಹೊಂದಾಣಿಕೆಯ ಕೊರತೆಯಿಂದ ಸಹೋದರರಲ್ಲಿ ಭೂಮಿಗೆ ಸಂಬಂಧಿಸಿದಂತೆ ವಾಗ್ವಾದ ನಡೆಯುವುದು. ಆಕಸ್ಮಿಕವಾಗಿ ನಿಮ್ಮ ಆರೋಗ್ಯದಲ್ಲಿ ಬದಲಾವಣೆ ಉಂಟಾಗಬಹುದು. ಆಹಾರ ಉದ್ಯಮದಿಂದ ಹಣಕಾಸಿನ ವಿಚಾರ ಸುಧಾರಿಸುವುದು. ನಿಮಗೆ ನಕಾರಾತ್ಮಕ ಅಂಶಗಳೇ ಎಲ್ಲಿಂದ ಎಲ್ಲಿಗೆ ಹೋದರೂ ಸಿಗುವುದು. ಕಛೇರಿಯ ಒತ್ತಡವನ್ನು ನೀವು ಕಳೆದುಕೊಳ್ಳಲು ಇಚ್ಛಿಸುವಿರಿ. ತಾನು ಮಾಡಿದ್ದನ್ನು ತಾನೇ ಉಣ್ಣಬೇಕು ಎಂಬ ಸತ್ಯ ಅರಿವಿಗೆ ಬರುವುದು. ಹಿರಿಯರ ಮಾತನ್ನು ನಿರ್ಲಕ್ಷಿಸದೇ ಪಾಲಿಸಿ. ಹಳೆಯ ಘಟನೆಯನ್ನು ನೆನಪಿಸಿಕೊಂಡು ಸಂಕಟಪಡುವುದು ಬೇಡ.
ವೃಶ್ಚಿಕ ರಾಶಿ :
ಮಕ್ಕಳು ಬದಲಾಗಲು ಅವಕಾಶ ಕೊಡುವಿರಿ. ಮನಸ್ಸನ್ನು ಅಶ್ಲೀಲಭಾವನೆಯಿಂದ ದೂರವಿರಿಸುವುದು ಕಷ್ಟ. ಹೊಸ ಆಲೋಚನೆಯನ್ನು ಮಾಡುವ ಮಾನಸಿಕತೆ ಇದ್ದರೆ ಇಂದು ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವಿರಿ. ಅನಧಿಕೃತ ವಿಚಾರಕ್ಕೆ ನೀವು ಮನಸ್ಸು ಮಾಡುವುದು ಬೇಡ. ಒಮ್ಮೆಲೇ ದೊಡ್ಡ ಯೋಚನೆಯನ್ನು ಕಾರ್ಯಗತಗೊಳಿಸುವುದು ಬೇಡ. ನೀವು ಮೊದಲು ವಿಶ್ವಾಸಾರ್ಹತೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಿ. ಯಾವ ಕಾರ್ಯವನ್ನೇ ಮಾಡಿದರೂ ದಾಖಲೆಗಳು ಅತ್ಯವಶ್ಯಕ. ಪೂರ್ಣವಾಗಿ ಅರ್ಥವಾದಮೇಲೆ ಮುಂದುವರಿಯಿರಿ. ದಾಖಲೆಗಳನ್ನು ಇಟ್ಟುಕೊಂಡೇ ಕಾನೂನಿಗೆ ಸಂಬಂಧಿಸಿದ ಹೋರಾಟದಲ್ಲಿ ತೊಡಗಿ. ಅನಧಿಕೃತ ಪತ್ರಗಳಿಗೆ ನೀವು ಉತ್ತರಿಸುವ ಅವಶ್ಯಕತೆ ಇರುವುದಿಲ್ಲ. ವಿದೇಶದಲ್ಲಿ ಇರುವವರಿಗೆ ನೆಮ್ಮದಿ. ದೂರಪ್ರಯಾಣವನ್ನು ಮುಂದೂಡುವುದು ಒಳ್ಳೆಯದು. ಯಾರನ್ನೋ ದೂಷಿಸುವುದರಿಂದ ಯಾವ ಲಾಭವೂ ಆಗದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು, ಪ್ರೀತಿ ಪಾತ್ರರನ್ನು ನೀವು ಚೆನ್ನಾಗಿ ನೋಡಿಕೊಳ್ಳುವಿರಿ.
ಧನು ರಾಶಿ :
ಒಪ್ಪಂದವನ್ನು ನವೀಕರಿಸುವ ಅವಶ್ಯಕತೆ ಇರಲಿದೆ. ಹತ್ತರ ಜೊತೆ ಹನ್ನೊಂದು ಎನ್ನುವ ಭಾವ ಬೇಡ. ಪಾಲಕರಿಗೆ ನಿಮ್ಮನ್ನು ದೂರ ಕಳುಹಿಸುವುದು ಕಷ್ಟವಾದೀತು. ಉತ್ತಮ ಯೋಜನೆ ನಿಮ್ಮ ಉನ್ನತಾಧಿಕಾರಕ್ಕೆ ಪೂರಕವಾಗಬಹುದು. ಮನೆಯಲ್ಲಿ ಆಡಿದ ಮಾತುಗಳಿಂದ ನೀವು ಹೊರಬರಲು ಸಮಯಬೇಕಾದೀತು. ಉದ್ಯೋಗದ ಕಾರ್ಯಕ್ಕೆ ಹೊರವಲಯಕ್ಕೆ ಹೋಗುವಿರಿ. ಸಂಗಾತಿಯ ಮೇಲೆ ಅನುಮಾನದ ದೃಷ್ಟಿ ಇರಲಿದೆ. ನಿಮ್ಮ ತನವನ್ನು ಉಳಿಸಿಕೊಳ್ಳಲು ಕೆಲವನ್ನು ಬಿಡಬೇಕಾಗುವುದು. ವಿದ್ಯಾಭ್ಯಾಸವು ಪೂರ್ತಿಯಾದರೂ ಕೆಲಸದ ಚಿಂತೆಯು ಕಾಡಬಹುದು. ದೇವರ ಮೊರೆ ಹೋಗದೇ ಬೇರೆ ದಾರಿ ಇಲ್ಲ ಅನ್ನಿಸಬಹುದು. ಸಾಲವು ಸಿಗುವುದು ಎಂದು ನಂಬಿದ್ದರೆ ನಿಮಗೆ ದುಃಖವಾದೀತು. ಸ್ವಾರ್ಥದಿಂದ ನಿಮಗೇ ಕಷ್ಟಗಳು ಗೊತ್ತಾಗುತ್ತದೆ. ನೀವು ಮಾತನಾಡುವುದು ನಿಮ್ಮ ವೈಯಕ್ತಿಕದ್ದಾಗಿರದು. ತಾಯಿಗೆ ನೋಯಿಸದೇ ಇರಲು ಪ್ರಯತ್ನಿಸಿ. ಸುಲಭವೆಂದು ಕೆಲಸವು ಕಷ್ಟವೆನಿಸಬಹುದು. ಕಾಮಗಾರಿಯ ಬಗ್ಗೆ ಸದ್ಭಾವವಿರದು. ಮನೆಯ ಕಾರ್ಯದಲ್ಲಿ ನಿಮ್ಮ ಇಡೀ ದಿನವು ಕಳೆದು ಹೋದುದ್ದು ಗೊತ್ತಾಗದೇ ಹೋಗಬಹುದು.
ಮಕರ ರಾಶಿ :
ಉಡುಗೊರೆಯಿಂದ ಸಂತೋಷವಾಗಲಿದೆ. ಇಂದು ನಿಮ್ಮ ವ್ಯಾಪಾರದಲ್ಲಿ ಚೇತರಿಕೆ ಕಾಣಿಸಿಕೊಂಡರೂ ನೀವು ಯಾವುದೋ ಗಹನವಾದ ಆಲೋಚನೆಯಲ್ಲಿಯೇ ಇರುವಿರಿ. ತಪ್ಪು ಆಲೋಚನೆಗಳಿಂದ ಮಾಡಿದ ಕಾರ್ಯವು ತಪ್ಪಾಗಿಯೇ ಆಗುತ್ತದೆ. ಶಾರೀರಿಕ ಕೊರತೆಯನ್ನು ನೀಗಿಸಿಕೊಳ್ಳಲು ವೈದ್ಯರ ಭೇಟಿ ಮಾಡುವಿರಿ. ನೀವು ಸಂಗಾತಿಯ ಮೇಲೆ ಭಾವನಾತ್ಮಕವಾಗಿ ಇರುವಿರಿ. ಉದ್ಯೋಗದ ನಿಮಿತ್ತ ಸಂಗಾತಿಯನ್ನು ಬಿಡಲು ನಿಮಗೆ ಕಷ್ಟವಾದೀತು. ಆರ್ಥಿಕ ಸ್ಥಿತಿಯನ್ನು ಬಹಳ ಪರಿಶ್ರಮದಿಂದ ಸರಿಮಾಡಿಕೊಳ್ಳುವಿರಿ. ಕೌಶಲ್ಯವನ್ನೂ ಬೆಳೆಸಿಕೊಳ್ಳುವುದು ಇಂದಿನ ವಿದ್ಯಮಾನಕ್ಕೆ ಸರಿಹೊಂದುವುದಾಗಿದೆ. ಇಂದಿನ ಜೀವನದ ಬಗ್ಗೆ ದೈವಜ್ಞರ ಬಳಿ ಕೇಳಿ ಅಗತ್ಯವಾದ ಪರಿಹಾರವನ್ನು ಮಾಡಿಕೊಳ್ಳುವುದು ಒಳ್ಳೆಯದು. ಅತಿಥಿಗಳ ಜೊತೆ ಇಂದಿನ ಸಮಯವನ್ನು ಕಳೆಯಬಹುದು. ಹೊಸ ಮನೆಯ ಖರೀದಿಗೆ ಹುಡುಕಾಟ ಮಾಡುವಿರಿ. ವಿವಾದವಾಗುವ ಮಾತುಗಳನ್ನು ಆಡಬೇಡಿ. ಸಂಗಾತಿಯ ಜೊತೆಗಿನ ಕಲಹವು ನಿಮ್ಮ ಇಡೀ ದಿನವನ್ನು ಸರಿಯಾಗಿ ಕಳೆಯುವಂತೆ ಮಾಡದು.
ಕುಂಭ ರಾಶಿ :
ನಿರೀಕ್ಷಿತ ಸ್ಥಳವನ್ನು ಪ್ರಯಾಣದಲ್ಲಿ ತಲುಪಲಾಗದು. ಒಂದೇ ಉದ್ದೇಶ ಹೊಂದಿದ ಹಲವರನ್ನು ಭೇಟಿ ಮಾಡುವಿರಿ. ಯಾವುದನ್ನಾದರೂ ಮೊದಲು ಬಂದಂತೆ ಸ್ವೀಕರಿಸಿ. ಅನಂತರ ಅದನ್ನು ನಿಮಗೆ ಬೇಕಾದಂತೆ ಮಾಡಿಕೊಳ್ಳಬಹುದು. ಭರವಸೆಯೇ ನಿಮಗೆ ಭವಿಷ್ಯದ ಬೆಳಕಾಗಲಿದೆ. ಮಾನಸಿಕವಾಗಿ ನೀವು ದುರ್ಬಲವಾದರೆ ಸ್ವಲ್ಪ ಸಮಯ ಏಕಾಂತವಾಗಿ ಇರಿ. ನಿಮ್ಮ ಯೋಜನೆಗಳು ಇನ್ನೊಬ್ಬರಿಗೆ ಒಪ್ಪಿಗೆಯಾಗುವಂತೆ ಇರಲಿ. ನೌಕರರ ಅಜಾಗರೂಕತೆಯಿಂದ ನಷ್ಟವಾಗಲಿದ್ದು, ಏನನ್ನೂ ಹೇಳದ ಸ್ಥಿತಿ. ಸಂಬಂಧಗಳಲ್ಲಿಯೂ ನೀವು ಲಾಭವೇನು ಎಂದು ಲೆಕ್ಕಹಾಕುವಿರಿ. ನಿಮ್ಮನ್ನು ಯಾರದರೂ ಆಡಿಕೊಂಡಾರು. ಅದನ್ನು ಲೆಕ್ಕಿಸದೆ ನಿಮ್ಮ ಗುರಿಯ ಕಡೆ ಗಮನವಿರಲಿ. ಹೆಚ್ಚು ಮನೋರಂಜನೆಯಿಂದ ಸಮಯವನ್ನು ಕಳೆಯಬಹುದು. ಪಾಲುದಾರಿಕೆಯಲ್ಲಿ ಸುಧಾರಣೆ ಅವಶ್ಯಕವಾಗಬಹುದು. ಎಲ್ಲದಕ್ಕೂ ಕೂಡಲೇ ಫಲ ಸಿಗಬೇಕು ಎಂಬ ಮಾನಸಿಕತೆಯಿಂದ ಹೊರಬರಬೇಕಾಗಬಹುದು. ವೃತ್ತಿಶೀಲರು ತಮ್ಮನ್ನು ಅತಿಮಾನುಷರಂತೆ ತೋರ್ಪಡಿಸುವರು.
ಮೀನ ರಾಶಿ :
ಅನ್ಯರನ್ನು ಕಂಡು ವಿಲಾಸಿ ಜೀವನದ ಆಸೆಯಾಗಲಿದೆ. ನೀವು ಇಂದು ಅಕಾರಣವಾಗಿ ಚಿಂತೆ ಮಾಡುವಿರಿ. ನಿಮಗೆ ವ್ಯಾಪಾರದ ನಷ್ಟವನ್ನು ಸಹಿಸಿಕೊಳ್ಳುವುದು ಕಷ್ಟವಾದೀತು. ಪೂರ್ಣ ವಿವರಗಳನ್ನು ಪಡೆದು ಕಾರ್ಯಪ್ರವೃತ್ತರಾಗಿ. ಆತುರದಲ್ಲಿ ಮಾಡಿದ ಕಾರ್ಯವನ್ನೇ ಮತ್ತೆ ಮಾಡಬೇಕಾದೀತು. ನಿಮ್ಮಿಂದ ಸಹಾಯವನ್ನು ಪಡೆದರೂ ಅದನ್ನು ಮರೆಯುವ ಹಿತಶತ್ರುಗಳು ಇರಬಹುದು. ನಿಮ್ಮ ಕಾರ್ಯವನ್ನು ನಕಾರಾತ್ಮಕವಾಗಿ ತಿಳಿಯಬಹುದು. ಮೇಲಧಿಕಾರಿಗಳ ಜೊತೆ ವಿವಾದಗಳು ಆಗಬಹುದು. ಅಧಿಕವಾಗಿ ತಿನ್ನಬೇಕೆಂಬ ಆಸೆ ಹೆಚ್ಚಾಗುವುದು. ಅಗತ್ಯತೆಗೆ ಕೆಲವು ಸೌಲಭ್ಯಗಳನ್ನು ಮಾಡಿಕೊಳ್ಳುವಿರಿ. ಇನ್ನೊಬ್ಬರನ್ನು ನೋಡಿ ನಿಮಗೆ ಅಸೂಯೆ ಹೆಚ್ಚಾಗುವುದು. ಮನೆಯಲ್ಲಿ ನಡೆಯುವ ಘಟನೆಗಳು ಕುತೂಹಲ ತರಿಸಬಹುದು. ವ್ಯವಹಾರದಲ್ಲಿ ಇಂದು ನಿಮಗೆ ತುಂಬಾ ಒತ್ತಡದ ದಿನವಾಗಿರುತ್ತದೆ. ನಿಮ್ಮ ಹಣವನ್ನು ಬಲಾತ್ಕಾರದಿಂದ ಪಡೆಯಬೇಕಾಗಬಹುದು. ಸ್ತ್ರೀಯರು ಸಂತೋಷದಿಂದ ದಿನ ಕಳೆಯುವಿರಿ.
ಲೋಹಿತ ಹೆಬ್ಬಾರ್ – 8762924271 (what’s app only)




