ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನುರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಬ್ರಹ್ಮ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 38 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:54 ರಿಂದ ಮಧ್ಯಾಹ್ನ 12:19ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:09 ರಿಂದ 04:34 ರವರೆಗೆ, ಗುಳಿಕ ಕಾಲ ಬೆಳಗ್ಗೆ 08:03 ರಿಂದ 09:29 ರವರೆಗೆ.
ಮೇಷ ರಾಶಿ: ಇಂದಿನ ವ್ಯಾಪರವು ನಿರಾಸೆ ಯರಿಸುವುದು. ಸಂಪತ್ತು ಇದ್ದರೂ ಇಲ್ಲವೆಂದು ಕೊರಗುವಿರಿ. ನಿಮಗೆ ಅಂದಾಜು ಸಿಗದೇ ಇಂದಿನ ಹಣವು ಅಧಿಕವಾಗಿ ಖರ್ಚಾಗುವುದು. ಯಾವುದಾದರೂ ಒಪ್ಪಂದವನ್ನು ಮಾಡಿಕೊಳ್ಳುವಾಗ ಸ್ವಲ್ಪ ಚಿಂತನೆ ಮಾಡುವುದು ಅವಶ್ಯಕ. ವಾಹನದ ಉದ್ಯೋಗವನ್ನು ಮಾಡುತ್ತಿದ್ದರೆ ಲಾಭ ಗಳಿಸುವ ಸಾಧ್ಯತೆ ಇದೆ. ಇಂದು ನಿಮಗೆ ವೃತ್ತಿಯಲ್ಲಿ ಸಹಾಕಾರವು ಸಿಗದೇ ತೊಂದರೆಪಡುವಿರಿ. ನಿಮ್ಮ ಮನಸ್ಸು ಯಾವುದರಲ್ಲಿಯೂ ಸ್ಥಿರವಾಗಿ ಇರದೇ ಬಹಳ ಚಂಚಲವಾಗಿ ಇರುವುದು. ಪ್ರಯಾಣವನ್ನು ಮುಂದೂಡುವ ಸಾಧ್ಯತೆ ಇದೆ. ನಿಮ್ಮ ಆಲೋಚನೆಯನ್ನು ದೀರ್ಘವಾಗಿ ಹರಿದುಬಿಡುವಿರಿ. ಮನಸ್ಸು ಬಹಳ ದುರ್ಬಲಗೊಂಡು ನಕಾರಾತ್ಮಕ ಆಲೋಚನೆಯೇ ಹೆಚ್ಚು ಇರುವುದು. ನಿಮಗೆ ವಿರೋಧಿಗಳ ಭಯವು ಕಾಡುವುದು. ಸಾಮಾಜಿಕ ಕೆಲಸದಲ್ಲಿ ಆಸಕ್ತಿಯು ಕಡಿಮೆ ಆಗುವುದು. ಎಲ್ಲದಕ್ಕೂ ನಕಾರಾತ್ಮಕ ಹೇಳಿಕೆಯನ್ನು ಕೊಡುವುದು ಬೇಡ. ಹಣಕಾಸಿನ ವಿಚಾರಕ್ಕೆ ದಾಖಲೆಗಳಿಲ್ಲದೇ ಯಾವುದನ್ನೂ ಕೊಡುವುದು ಬೇಡ.
ವೃಷಭ ರಾಶಿ: ನಿಮಗೆ ಆಗಬೇಕಾದ ಕಾರ್ಯವನ್ನು ಯಾರಿಂದಲೋ ಮಾಡಿಸುವಿರಿ. ಇಂದು ನೀವು ಏನನ್ನಾದರೂ ನಿರೀಕ್ಷಿಸಿ ಮಾಡಿದ ಕಾರ್ಯಕ್ಕೆ ಫಲ ಸಿಗದು. ದಿನದ ಆರಂಭದಲ್ಲಿ ಉತ್ಸಾಹವಿರದು. ನಮ್ಮ ಪ್ರಾಮಾಣಿಕತೆಗೆ ಉತ್ತಮ ಯಶಸ್ಸನ್ನು ಪಡೆಯುವಿರಿ. ಅಂದುಕೊಂಡ ಕಾರ್ಯಗಳು ಸುಗಮವಾಗಿ ಸಾಗಲಿದ್ದು ನೆಮ್ಮದಿಯು ಇರಲಿದೆ. ಸಿಟ್ಟಿನ ಮೇಲೆ ನಿಯಂತ್ರಣ ಬೇಕಾಗುವುದು. ನಿಮ್ಮ ಮೇಲೆ ಜವಾಬ್ದಾರಿಗಳು ಅಧಿಕವಾಗಲಿವೆ. ನಿಮ್ಮ ಮೇಲಿಟ್ಟ ನಂಬಿಕೆಯನ್ನು ನೀವು ಹುಸಿಗೊಳಿಸುವಿರಿ. ಉದ್ಯೋಗವು ಸಾಕೆನಿಸಿ ನೀವು ಹೊಸ ಉದ್ಯಮವನ್ನು ಆರಂಭಿಸುವ ಯೋಚನೆ ಇರುವುದು. ಆಸ್ತಿ ಖರೀದಿಯನ್ನು ಮಾಡಲು ಅವಕಾಶವು ಸಿಗಬಹುದು. ಅನಿರೀಕ್ಷಿತವಾಗಿ ಉಡುಗೊರೆಯನ್ನು ಆಪ್ತರಿಂದ ಪಡೆಯುವಿರಿ. ಇಷ್ಟಪಟ್ಟವರ ಭೇಟಿಯು ಮನಸ್ಸಿಗೆ ಹಿತವೆನಿಸುವುದು. ಮಕ್ಕಳ ವಿಚಾರದಲ್ಲಿ ಜವಾಬ್ದಾರಿಯು ಅಗತ್ಯವಾಗಿ ಬೇಕಾಗುವುದು. ಹಿತಶತ್ರುಗಳಿಂದ ನಿಮ್ಮ ಕಾರ್ಯವನ್ನು ಗೊತ್ತಾಗದೇ ಮಾಡಿಸಿಕೊಳ್ಳುವಿರಿ.
ಮಿಥುನ ರಾಶಿ: ಹಿರಿಯರ ಉಪದೇಶವನ್ನು ಕೇಳುವ ಆಸಕ್ತಿ ಇರದು. ಇಂದು ಎಲ್ಲವನ್ನೂ ದೈವಲೀಲೆ ಎಂದು ಹೇಳುವುದಕ್ಕಿಂತ ಮನುಷ್ಯ ಪ್ರಯತ್ನವೂ ಸ್ವಲ್ಪ ಇರದು. ಸೌಂದರ್ಯಕ್ಕೆ ಹೆಚ್ಚು ಮನಸ್ಸು ಕೊಡುವಿರಿ. ವ್ಯಾಪಾರದಲ್ಲಿ ಸಾಧಾರಣ ಆದಾಯವು ಇದ್ದು ನಿಮಗೆ ಸಮಾಧಾನವಾಗುವುದು. ವಾಹನ ಖರೀದಿಯಲ್ಲಿ ಮೋಸವಾಗುವ ಸಂಭವವಿದೆ. ಮಕ್ಕಳ ಪ್ರಗತಿಯು ನಿಮಗೆ ಸಂತೋಷವನ್ನು ಕೊಡುವುದು. ಕಛೇರಿಯ ಕೆಲಸಗಳು ಒತ್ತಡದಿಂದ ಇರಲಿದೆ. ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ಉದ್ಯೋಗಕ್ಕೆ ಸಮಯವನ್ನು ಕೊಡಲಾಗದು. ಒತ್ತಡವು ಅಧಿಕವಿರಿಲಿ. ಹತ್ತಾರು ಜವಾಬ್ದಾರಿಗಳನ್ನು ವಹಿಸಿಕೊಳ್ಳುವಿರಿ. ಬೇರೆಯವರ ತಪ್ಪುಗಳನ್ನು ಹುಡುಕಿ ಹೇಳುವುದನ್ನು ಕಡಿಮೆ ಮಾಡಿ. ನಿಮ್ಮ ಅಹಂಕಾರವನ್ನು ಪ್ರದರ್ಶಿಸುವಿರಿ. ಮಿತ್ರರ ಸಹಯೋಗದಿಂದ ಭೂಮಿಯ ಖರೀದಿ ಆಗುವುದು. ಕೃತಜ್ಞತೆಯಿಂದ ಪರೋಪಕಾರವನ್ನು ಮಾಡುವಿರಿ.
ಕರ್ಕಾಟಕ ರಾಶಿ: ಸಹನೆಯಿಂದ ಕೆಲವರನ್ನು ಗೆಲ್ಲಲು ಸಾಧ್ಯ. ಇಂದು ಮಿತ್ರರು ಸಹಾಯವನ್ನು ಕೇಳುವ ಮೊದಲೇ ನೀವೇ ಸಹಾಯ ಮಾಡುವಿರಿ. ಹಿರಿಯರ ಆಶೀರ್ವಾದವನ್ನು ಪಡೆದು ಕಾರ್ಯದಲ್ಲಿ ಪ್ರವೃತ್ತರಾಗುವಿರಿ. ಜಾಣ್ಮೆಯ ವ್ಯವಹಾರದಿಂದ ನಿಮಗೆ ಲಾಭವಾಗುವುದು. ವಿರೋಧಿಗಳು ನಿಮ್ಮ ಹತ್ತಿರ ಬರಲು ಹೆದರುವರು. ಗೌರವ ಸಿಗುವಲ್ಲಿಗೆ ಮಾತ್ರ ನಿಮ್ಮ ಪ್ರಯಾಣ ಇರುವುದು. ನಿಮಗೆ ಅನೇಕ ಕಾರ್ಯಗಳು ಇರುವುದರಿಂದ ಸಮಯವನ್ನು ಹೊಂದಿಸಿಕೊಳ್ಳಲು ಅನಿವಾರ್ಯವಾಗುವುದು. ಇಂದು ಬೆಳಗಿನ ವಾಯುವಿಹಾರದಿಂದ ಆರೋಗ್ಯವು ಕೆಡಬಹುದು. ರಾಜಕೀಯವಾಗಿ ಬೆಳೆಯಲು ಬಹಳ ಆಸಕ್ತಿಯನ್ನು ತೋರುವಿರಿ. ಕಛೇರಿಯಲ್ಲಿ ಸ್ತ್ರೀಯರ ಅಲ್ಪ ಸಹಕಾರವು ಸಿಗುವುದು. ಸಂಗಾತಿಯ ಅನೇಕ ವಿಚಾರಗಳು ನಿಮಗೆ ತಿಳಿಯದೇ ಇರುವುದು. ಕೃಷಿಯು ನಿಮ್ಮ ಇಷ್ಟದ ಸಂಗತಿಯಾಗಲಿದೆ. ಮಾತಿನಿಂದ ನೋವಾಗುವುದು ಎಂಬ ಯೋಚನೆ ಇರದು.
ಸಿಂಹ ರಾಶಿ: ಆರ್ಥಿಕವಾಗಿ ಸಬಲರಾಗಲು ಗುರಿಯೂ ಹಾದಿಯೂ ಮುಖ್ಯ. ಕೆಲವನ್ನು ಪಡೆಯಲು ಕೆಲವನ್ನು ಬಿಡಬೇಕು. ಆದರೆ ನಿಮ್ಮ ವಿವೇಚನೆಯಿಂದ ಮುಖ್ಯಾಮುಖ್ಯಗಳನ್ನು ತಿಳಿದರೆ ನೆಮ್ಮದಿಯಿಂದ ಇರಬಹುದು. ಇಂದಿನ ನಿಮ್ಮ ಮಾತಿನಿಂದ ದ್ವೇಷವು ಬರಬಹುದು. ಬಹಳ ದಿನಗಳಿಂದ ಉಳಿದಿದ್ದ ಕಾರ್ಯವು ಪೂರ್ಣವಾಗಬಹುದು. ವಿದ್ಯಾದಾನವನ್ನು ಮಾಡಿದವರನ್ನು ಗೌರವಿಸುವಿರಿ. ಭೂಮಿಯ ವ್ಯವಹಾರದಲ್ಲಿ ಮಾತುಕತೆಗಳು ನಡೆಯಲಿದ್ದು ತೀರ್ಮಾನವಾಗದು. ಓಡಾಟದ ಸಮಯದಲ್ಲಿ ನಿಮ್ಮ ವಸ್ತುವು ಕಾಣೆಯಾಗಿದ್ದು ನಿಮಗೆ ಗೊತ್ತಾಗದು. ಅಪರಿಚಿತರು ನಿಮ್ಮಿಂದ ಧನವನ್ನು ಪಡೆಯುವರು. ಮನೆಗೆ ಬಂದ ಅತಿಥಿಯನ್ನು ಸತ್ಕಾರಿಸುವಿರಿ. ವಾಹನದಿಂದ ಬಿದ್ದು ಗಾಯವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಸಹೋದರಿಯ ವಿಚಾರದಲ್ಲಿ ನಿಮಗೆ ಅಸಮಾಧಾನವಾಗುವುದು. ಸಂಗಾತಿಯ ಜೊತೆ ದೇಶಾಂತರ ಹೋಗುವಿರಿ. ನಿಮ್ಮವರ ಕೆಲವು ಮಾತಗಳು ಪ್ರಶಾಂತವಾದ ಮನಸ್ಸನ್ನು ಹಾಳುಮಾಡುವುದು.
ಕನ್ಯಾ ರಾಶಿ: ನಿಮ್ಮ ಬಳಿಯೇ ಬೆಳಕಿದ್ದರೆ ಕತ್ತಲೆಯಾಗುವ ಭಯವೇ ಇರದು. ಇಂದು ಎಲ್ಲರಿಂದ ನೀವು ದೂರವಾಗುವ ಸ್ಥಿತಿ ಬರುವುದು. ಕೆಟ್ಟ ಆಲೋಚನೆಯಿಂದ ದೂರವಿರುವುದು ಸುಖ. ಹಿರಿಯರಿಗೆ ಬಾಯ್ತಪ್ಪಿ ಮಾತನಾಡಿ ಪಶ್ಚಾತ್ತಾಪಪಡುವಿರಿ. ತೀರ್ಥಯಾತ್ರೆಯ ಸಂದರ್ಭವು ಬರಬಹುದು. ಹಣಕಾಸಿನ ಕೊರತೆಯಿಂದ ಯಾವದೋ ಕಾರ್ಯವನ್ನು ಮಾಡುವಿರಿ. ಎಂದೋ ಮಾಡಿದ ಸಹಾಯವು ಇಂದು ಉಪಯೋಗಕ್ಕೆ ಬರುವುದು. ಎಲ್ಲರ ಜೊತೆ ಅತಿಯಾದ ಸಲುಗೆ ಬೇಡ. ಸಾಮಾಜಿಕ ತಾಣದಿಂದ ನಿಮಗೆ ಕೆಲವು ವ್ಯಕ್ತಿಗಳ ಪರಿಚಯವಾದೀತು. ನಿಮ್ಮ ಮಾನಸಿಕ ಸ್ಥಿತಿಯನ್ನು ಕಾಪಾಡಿಕೊಳ್ಳಿ. ಪರೋಕ್ಷವಾಗಿ ನಿಮ್ಮವರನ್ನು ದ್ವೇಷಿಸುವಿರಿ. ಮಕ್ಕಳ ಮೇಲೆ ನಿಮ್ಮ ಮೋಹವು ಅತಿಯಾಗಿದ್ದು ಅದು ಬಂಧನವೂ ಆಗಬಹುದು. ಅಸಾಮಾನ್ಯ ಕಾರ್ಯವನ್ನು ಮಾಡಲು ಬಹಳ ಉತ್ಸಾಹವಿರುವುದು. ನಿಮ್ಮ ಹಣದ ಅಭಾವವನ್ನು ಯಾರ ಬಳಿಯೂ ಹೇಳಿಕೊಳ್ಳುವುದು ಬೇಡ. ಇಂದು ನಿಮ್ಮ ಮನೆಯ ಕೆಲಸದಲ್ಲಿಯೇ ಹೆಚ್ಚು ಆನಂದಿಸುವಿರಿ.
ತುಲಾ ರಾಶಿ: ಕೃತಜ್ಞತೆಯಿಂದ ಉತ್ತಮ ಸಂಬಂಧಗಳು ಏರ್ಪಡುವುದು. ನೀವು ಕಾರ್ಯದಲ್ಲಿ ಎಷ್ಟೇ ಪಳಗಿದರೂ ಎಚ್ಚರಿಕೆಯಿಂದ ಇರುವುದು ಮುಖ್ಯ. ಉತ್ತಮ ದಿನದ ನಿರೀಕ್ಷೆಯಿಂದ ನಿಮಗೆ ಬೇಸರವಾಗಬಹುದು. ಇನ್ನೊಬ್ಬರ ಸಂಧಾನಕ್ಕೆ ಮಧ್ಯಸ್ತಿಕೆಯನ್ನು ವಹಿಸುವಿರಿ. ಕಛೇರಿಯ ವ್ಯವಹಾರವು ನಿಮಗೆ ಸರಿ ಕಾಣಿಸದು. ಹೇಳದೇ ಮೌನದಿಂದ ಇರುವಿರಿ. ಭಾವಾವೇಶಕ್ಕೆ ಸಿಲುಕಿ ನೆಮ್ಮದಿಗಾಗಿ ಚಡಪಡಿಸುವಿರಿ. ಒತ್ತಡವು ನಿಮಗೆ ಯಾವ ವ್ಯವಹಾರಕ್ಕೂ ಆಸಕ್ತಿ ಇರದಂತೆ ಮಾಡಿದೆ. ಆರ್ಥಿಕ ಉಳಿತಾಯಕ್ಕೆ ಹೆಚ್ಚಿನ ಗಮನ ನೀಡಿ. ಅವಕಾಶಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವಿರಿ. ಬಂಧುಗಳ ಮಾತಿನಿಂದ ಅಸಮಾಧನವು ಇರುವುದು. ಒಬ್ಬರೇ ಹೊರಗೆ ಸುತ್ತಾಟ ಮಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳುವಿರಿ. ವಿವಾಹದ ವಿಚಾರದಲ್ಲಿ ಒಳ್ಳೆಯದಾಗುವುದು. ನಿಮ್ಮನ್ನು ಹೊಗಳಿ ಕೆಲಸ ಮಾಡಿಸಿಕೊಳ್ಳುವರು. ಕೆಟ್ಟ ಅಭ್ಯಾಸದತ್ತ ಮನಸ್ಸು ಹರಿಯುವುದು.
ವೃಶ್ಚಿಕ ರಾಶಿ: ಸಣ್ಣ ಉದ್ಯೋಗದಲ್ಲಿ ನಿಮಗೆ ಆಸಕ್ತಿ ಕಡಿಮೆಯಾಗುವುದು. ಅಲ್ಪ ಶ್ರಮದಿಂದ ಗಳಿಸುವ ಮಾರ್ಗದ ಅನ್ವೇಷಣೆ ಆಗಲಿದೆ. ನಿಮ್ಮ ಅನುಕೂಲತೆಯನ್ನು ಗಮನಿಸಿಕೊಂಡು ಯಾವುದಾದರೂ ಕಾರ್ಯವನ್ನು ಒಪ್ಪಿಕೊಳ್ಳಿ. ಇಂದಿನ ಕೆಲಸದಲ್ಲಿ ಕೆಲವು ತೊಂದರೆಗಳು ಕಾಣಿಸಿಕೊಂಡರೂ ಅದನ್ನು ಲೆಕ್ಕಿಸದೇ ಮುಂದೆ ಸಾಗುವಿರಿ. ಅಧಿಕಾರಿಗಳಿಗೆ ಒಂದಿಲ್ಲೊಂದು ಒತ್ತಡವು ಬರಬಹುದು. ಗೆಳೆಯರ ಮಾತನ್ನು ಗೌರವಿಸಿದ್ದು ಅವರಿಗೆ ಸಂತೋಷವಾಗಲಿದೆ. ಬಂಧುಗಳು ನಿಮ್ಮ ಹತ್ತಿರ ಆರ್ಥಿಕ ಸಹಾಯವನ್ನು ಕೇಳಿಕೊಂಡು ಬರಬಹುದು. ಬೇಸರ ಮಾಡದೇ ಕಳುಹಿಸಿ ಕೊಡಿ. ಮನಸ್ಸಿನ ಕಿರಿಕಿರಿಯಿಂದ ಕೋಪವು ಬರಬಹುದು. ಸರ್ಕಾರಿ ಕೆಲಸಕ್ಕಾಗಿ ಅರ್ಜಿಯನ್ನು ಹಾಕಿ ಕಾಯುತ್ತ ಕುಳಿತಿರುವಿರಿ. ಸಂಗಾತಿಯ ಕೋಪವನ್ನು ಶಾಂತ ಮಾಡುವಿರಿ. ಇನ್ನೊಬ್ಬರನ್ನು ಅನುಕರಿಸಿ ಹಾಸ್ಯ ಮಾಡುವಿರಿ. ನಿಮಗೆ ಗೊತ್ತಿಲ್ಲದೇ ನಿಮ್ಮ ಬಗ್ಗೆ ಕೆಲವು ಮಾತುಗಳು ಆಪ್ತರು ಆಡಬಹುದು. ಒರಟು ತನವನ್ನು ಬಿಟ್ಟಷ್ಟು ನಿಮಗೇ ಒಳ್ಳೆಯದು.
ಧನು ರಾಶಿ: ಸಿಕ್ಕ ಸಂಪತ್ತಿಗೆ ಸರಿಯಾದ ನ್ಯಾಯ ಒದಗಿಸಿ. ನಿಮ್ಮ ಆತುರದಿಂದ ಕೆಲವನ್ನು ನಿರ್ವಹಿಸಲಾಗದು. ಸಾಲದಿಂದ ನಿಮ್ಮ ದೊಡ್ಡ ಆಲೋಚನೆಗಳು ಸಣ್ಣದಾಗುವುವು. ನಿಮ್ಮ ಭೀತಿಯನ್ನು ನೀವು ಹೊರಹಾಕದಿದ್ದರೂ ಅರಿವಿಗೆ ಬರುವುದು. ಬಂಧುಗಳ ಆರೋಗ್ಯದ ವಿಚಾರಣೆಗೆ ತಿರುಗಾಟ ಮಾಡಬೇಕಾಗುವುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಂದ ಶಾಂತಿ ಲಭಿಸುವುದು. ಹಣವನ್ನು ನಿಮ್ಮಿಂದ ಕಿತ್ತುಕೊಳ್ಳಬಹುದು. ಮಕ್ಕಳ ಬಗ್ಗೆ ಅನವಶ್ಯಕ ಅನುಮಾನ ಇರುವುದು. ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳುವಿರಿ. ಅಗತ್ಯದ ಖರ್ಚುಗಷ್ಟೇ ಪ್ರಾಧಾನ್ಯವಿರಲಿ. ಅನಿರೀಕ್ಷವಾಗಿ ಬರುವ ಕಾರ್ಯದ ಒತ್ತಡಕ್ಕೆ ಸಿಕ್ಕಿಕೊಳ್ಳುವಿರಿ. ಧ್ಯಾನದ ಅವಶ್ಯಕತೆ ಇದೆ ಎಂದು ಅನ್ನಿಸಬಹುದು. ಸಣ್ಣ ವಿಷಯವನ್ನು ದೊಡ್ಡ ಮಾಡಿಕೊಳ್ಳುವಿರಿ. ಕಛೇರಿಯಲ್ಲಿ ಸಹೋದ್ಯೋಗಿಗಳ ಸಹಾಯವು ಸಿಗುವುದು ಕಷ್ಟವಾದೀತು.
ಮಕರ ರಾಶಿ: ಮಕ್ಕಳ ಬಗ್ಗೆ ಪಕ್ಷಪಾತ ಮಾಡುವುದು ಬೇಡ. ಇಂದು ಹೊಸ ದಾಂಪತ್ಯದಲ್ಲಿ ಸಂಭ್ರಮವಾಗಲಿದೆ. ನಿಮಗಾದ ಒಳ್ಳೆಯ ಅನುಭವವನ್ನು ಆಪ್ತರ ಜೊತೆ ಹಂಚಿಕೊಳ್ಳುವಿರಿ. ಇಷ್ಟವಾಗದವರು ನಿಮ್ಮೆದುರಿಗೆ ಬರುವಾಗ ಕಣ್ತಪ್ಪಿಸಿಕೊಳ್ಳುವಿರಿ. ದಂಡವನ್ನು ತುಂಬಬೇಕಾದ ಸ್ಥಿತಿಯು ಬರಬಹುದು. ಸ್ವಂತ ವಾಹನದಲ್ಲಿ ಒಂಟಿಯಾಗಿ ಓಡಾಡುವಾಗ ಎಚ್ಚರಿಕೆ ಇರಲಿ. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ತ ಕಡೆ ಹೆಚ್ಚು ಪ್ರಯತ್ನಿಸಿ. ಹಿಂದೆ ಮಾಡಿದ ಕಾರ್ಯಕ್ಕಾಗಿ ಇಂದು ಒಳ್ಳೆಯ ಫಲವು ದೊರಕಿದ ಸಂತೋಷದಲ್ಲಿ ಇರುವಿರಿ. ಮನೆಯವರನ್ನು ಕರೆದುಕೊಂಡು ಪ್ರಯಾಣ ಮಾಡುವಿರಿ. ಆಸ್ತಿಯ ದಾಖಲೆಗಳನ್ನು ಅಧಿಕಾರಿಗಳು ವಿಚಾರಿಸಬಹುದು. ಒತ್ತಡವನ್ನು ಹೇರಿ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಸಂಗಾತಿಯ ಆದಾಯವನ್ನು ಅನಿವಾರ್ಯವಾಗಿ ಬಳಸಿಕೊಳ್ಳಬೇಕಾಗುವುದು. ಸತ್ಯವನ್ನು ಮುಚ್ಚಿಟ್ಟಿದ್ದು ನಿಮ್ಮ ಮಾತಿನಲ್ಲಿ ಗೊತ್ತಾಗುವುದು. ಎಲ್ಲ ಅವಕಾಶವನ್ನು ನೀವು ಸರಿಯಾಗಿ ಬಳಸಿಕೊಳ್ಳುವುದು ಉತ್ತಮ.
ಕುಂಭ ರಾಶಿ; ಭಯದಿಂದಲೇ ಎಷ್ಟೋ ವಿಚಾರವನ್ನು ಗೌಪ್ಯವಾಗಿ ಇಡುವಿರಿ. ನೀವು ಇತರರ ದುರ್ಬುದ್ಧಿಯನ್ನು ಅನುಸರಿಸದೇ ಸುಮ್ಮನಿರುವಿರಿ. ಇಂದು ವೃತ್ತಿಯಲ್ಲಿ ಬಂದ ಸಮಸ್ಯೆಯನ್ನು ತಾಳ್ಮೆಯಿಂದ ಗಮನಿಸಿಕೊಂಡು. ಗೆಳೆತನ ಸಾಕು ಎನಿಸಿ ಒಂಟಿಯಾಗಿ ಇರಬೇಕು ಎನಿಸುವುದು. ನಿಮ್ಮದಾದ ಸ್ವಂತಿಕೆಯನ್ನು ಉಳಿಸಿಕೊಳ್ಳಿ. ಮಕ್ಕಳ ವಿಚಾರಕ್ಕೆ ವಾದಗಳು ಆಡಬಹುದು. ನಿಮ್ಮ ವಿರುದ್ಧ ತಂತ್ರಗಳು ನಡೆಯಲಿದ್ದು ನಿಮಗೆ ಗೊತ್ತಾಗದು. ಅನಿರೀಕ್ಷಿತ ಘಟನೆಯು ನಿಮ್ಮನ್ನು ಬೆಚ್ಚಿಬೀಳಿಸುವುದು. ಹೊಸ ವ್ಯಕ್ತಿಯ ಪರಿಚಯು ನಿಮ್ಮ ಬೇಸರವನ್ನು ದೂರ ಮಾಡೀತು. ಹಳೆಯ ಸಾಲಗಳಿಗೆ ನೀವೇ ಮುಕ್ತಿ ಕೊಡಿಸುವಿರಿ. ಉದ್ಯೋಗಿಗಳ ಆದಾಯದಲ್ಲಿ ಅಲ್ಪ ಏರಿಕೆ. ಪಾಲುದಾರಿಕೆಯಲ್ಲಿ ತಾಳ್ಮೆಯನ್ನು ಕಳೆದುಕೊಳ್ಳುವಿರಿ. ಅವಿವಾಹಿತರಿಗೆ ವಿವಾಹಯೋಗವು ಬರಬಹುದು. ನಿಮ್ಮ ಸ್ವಭಾವವನ್ನು ಬೇಕೆಂದೇ ಬದಲಿಸಿಕೊಳ್ಳುವಿರಿ.
ಮೀನ ರಾಶಿ: ಸತತ ಪ್ರಾಮಾಣಿಕ ಪ್ರಯತ್ನದಿಂದಲೂ ಗೆಲುವಾಗದಿದ್ದರೆ ಬೇಸರ ಮಾಡಿಕೊಳ್ಳುವುದು ಬೇಡ. ಇಂದು ನಿಮ್ಮ ದೂರಾಲೋಚನೆಯು ಸರಿಯಾದ ಹಾದಿಯಲ್ಲಿ ಇದೆಯೇ ಎಂಬುದನ್ನು ತಿಳಿದುಕೊಳ್ಳಿ. ಆದಾಯದ ಮೂಲಗಳು ಸೊರಗಿಹೋದಂತೆ ಅನ್ನಿಸಬಹುದು. ಕೊಟ್ಟಿದ್ದನ್ನು ಮರಳಿ ಕೊಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಇನ್ನೊಬ್ಬರಿಗೆ ಆಕರ್ಷಿತರಾಗುವಿರಿ. ನಿಮ್ಮ ಶಾಂತ ಮನಸ್ಸಿನಿಂದ ಸಂಕಷ್ಟವನ್ನು ಎದುರಿಸುವಿರಿ. ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ ಇರಲಿ. ಆತುರಾತುರವಾಗಿ ಏನನ್ನೂ ಮಾಡಲು ಹೋಗುವುದು ಬೇಡ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅನುಮಾನ ಸಂದೇಹ ಬರಬಹುದು. ಅಂದುಕೊಂಡಿದ್ದರ ಕಡೆಗೆ ಗಮನ ಹರಿಸಲು ಸಾಧ್ಯವಾಗದು. ನಿಮ್ಮ ಆಪ್ತರ ಜೊತೆ ಕೆಲವು ರಹಸ್ಯವನ್ನು ಹೇಳಿಕೊಳ್ಳುವಿರಿ. ಇಂದು ಮಾಡುವ ಕೆಲಸದಲ್ಲಿ ಶ್ರದ್ಧೆ ಅವಶ್ಯಕ ಬೇಕು. ನಿಮ್ಮನ್ನು ಹೊಗಳಿ ಶೂಲಕ್ಕೆ ಏರಿಸಬಹುದು. ಸಮಾರಂಭದಿಂದ ನಿಮಗೆ ಸ್ವಲ್ಪ ಬದಲಾವಣೆ ಇರುವುದು.
ಲೋಹಿತ ಹೆಬ್ಬಾರ್-8762924271 (what’s app only)