AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಈ ರಾಶಿಯವರ ಇಂದಿನ ನಿರೀಕ್ಷೆಗಳು ಹುಸಿಯಾಗಬಹುದು, ವ್ಯಕ್ತಿ ಆಯ್ಕೆಯಲ್ಲಿ ನೀವು ಸೋಲುವಿರಿ

ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ನವೆಂಬರ್​ 09) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಈ ರಾಶಿಯವರ ಇಂದಿನ ನಿರೀಕ್ಷೆಗಳು ಹುಸಿಯಾಗಬಹುದು, ವ್ಯಕ್ತಿ ಆಯ್ಕೆಯಲ್ಲಿ ನೀವು ಸೋಲುವಿರಿ
ಪ್ರಾತಿನಿಧಿಕ ಚಿತ್ರ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Nov 09, 2023 | 12:10 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ನವೆಂಬರ್​​​ 09 ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ವೈಧೃತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 30 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:42 ರಿಂದ 03:09 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:32 ರಿಂದ 07:58 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:24 ರಿಂದ 10:50ರ ವರೆಗೆ.

ಮೇಷ ರಾಶಿ: ತಮ್ಮ ಕಾರ್ಯಕ್ಕೆ ಯಾರನ್ನಾದರೂ ಬಳಸಿಕೊಳ್ಳಬಹುದು. ಕಾನೂನಿನ ಕ್ರಮದಲ್ಲಿ ನಿಮ್ಮ ಯೋಜನೆ ಇರಲಿ. ಹೂಡಿಕೆಯನ್ನು ಮಾಡಲು ಒತ್ತಡ ಬರಬಹುದು. ದುರಾಸೆ ಪಡದೆ ಬಂದಿದ್ದನ್ನು ಸುಮ್ಮನೇ ಸ್ವೀಕರಿಸಿ. ನಿಮಗೆ ತಿಳಿದ ವಿಚಾರವನ್ನು ಬೇರೆಯವರಿಗೆ ಯಾವುದೇ ನಿರೀಕ್ಷೆಯಿಲ್ಲದೆ ಹೇಳಿಕೊಡುವಿರಿ. ದಾಂಪತ್ಯದ ಸುಖವು ನಿಮಗೆ ಹೆಚ್ಚು ಇಷ್ಟವಾದೀತು. ಮನಸ್ಸಿನಲ್ಲಿ ಸಂಯಮವಿರಲಿ. ವಾತಾವಣವು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಬಹುದು. ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಸಂಗಾತಿ ಮತ್ತು ಮಕ್ಕಳ ಜೊತೆ ಅನವಶ್ಯಕ ವಾದ ವಿವಾದವು ಆಗಬಹುದು. ನಿಮ್ಮ ತಪ್ಪಿಗೆ ಬೇರೆಯವರನ್ನು ಬೆರಳು ಮಾಡುವಿರಿ. ಮಾತನಾಡುವಾಗ ಪೂರ್ಣ ಮಾಹಿತಿ ಇರಲಿ. ಯಾರನ್ನೂ ಸುಮ್ಮನೇ ದೂಷಿಸುವುದು ಬೇಡ.

ವೃಷಭ ರಾಶಿ: ಅನ್ಯ ಸ್ಥಳದಲ್ಲಿ ನಿಮ್ಮ ವಾಸವು ಇರುವುದು. ಅನಾರೋಗ್ಯವನ್ನು ನಿರ್ಲಕ್ಷಿಸುವುದು ಬೇಡ. ಭೂಮಿಗೆ ಸಂಬಂಧಿತ ಕೆಲಸವನ್ನು ಪೂರ್ಣಮಾಡಿಕೊಳ್ಳುವಿರಿ. ನೀವು ಹಾಳುಮಾಡಿಕೊಳ್ಳುವಿರಿ. ಸಂಗಾತಿಯಿಂದ ಸಿಗುವ ಸುಖದಿಂದ ನೀವು ವಂಚಿತರಾಗುವಿರಿ. ಇಂದಿನ ನಿಮ್ಮ ನಿರೀಕ್ಷೆಗಳು ಹುಸಿಯಾಗಬಹುದು. ವ್ಯಕ್ತಿಯ ಆಯ್ಕೆಯಲ್ಲಿ ನೀವು ಸೋಲುವಿರಿ. ನೀವು ಇಂದು ಅಸಹಜವಾಗಿ ನಡೆದುಕೊಳ್ಳುವಿರಿ. ಆಲಸ್ಯವು ಅಧಿಕವಾಗಬಹುದು. ಬಹಳ ದಿನದಿಂದ ಅಂದುಕೊಂಡ ಸ್ಥಳಕ್ಕೆ ಹೋಗುವಿರಿ. ಸಾಧಿಸಲಾಗದ ಕೆಲಸಕ್ಕೆ ಹೆಚ್ಚು ಶ್ರಮವನ್ನು ಹಾಕುವಿರಿ.‌ ಸ್ನೇಹ ಸಂಬಂಧಗಳನ್ನು ದೂರ ಮಾಡಿಕೊಳ್ಳುವಿರಿ. ಬೇಡದ ವಿಚಾರದ ಕಡೆ ಮನಸ್ಸು ಹೋಗುವುದು‌. ರಾಜಕೀಯದಲ್ಲಿ ಆಸಕ್ತಿ ಹೆಚ್ಚಾಗುವುದು.

ಮಿಥುನ ರಾಶಿ: ಸಲ್ಲದ ಅಪವಾದವು ಬರಬಹುದು. ಬೇಸರಿಸದೇ ಮುನ್ನಡೆಯಿರಿ. ನಿಮ್ಮ ಬಗ್ಗೆ ಸ್ಪಷ್ಟತೆ ಇರಲಿ. ಉಸಿರಿಗೆ ಸಂಬಂಧಿಸಿದ ತೊಂದರೆ ಕಾಣಿಸಿಕೊಳ್ಳಬಹುದು. ವಿದ್ಯಾಭ್ಯಾಸದಲ್ಲಿ ಅತಂತ್ರ ಸ್ಥಿತಿಯನ್ನು ನೀವಾಗಿಯೇ ತಂದುಕೊಳ್ಳುವಿರಿ. ಅವಶ್ಯಕತೆ ಇರುವಷ್ಟು ಮಾತ್ರ ಮಾತನಾಡಿ. ನಿಮಗೆ ಅತಿಥಿ ಸತ್ಕಾರವು ನಡೆಯಬಹುದು. ರಾಜಕೀಯದಿಂದ ಹೊರಬರಲು ಮನಸ್ಸಾಗುವುದು. ಅನಿರೀಕ್ಷಿತ ಅಮೂಲ್ಯ ವಸ್ತುಗಳು ಪ್ರಾಪ್ತವಾಗುವುದು. ಹಠದ ಸ್ವಭಾವವು ವ್ಯವಸ್ಥೆಯನ್ನು ಹಾಳುಮಾಡೀತು. ಇಂದಿನ ಅಧಿಕ ಸಮಯದಲ್ಲಿ ಮೌನವಾಗಿಯೇ ಇರುವಿರಿ. ಯಾವುದೋ ಹತ್ತಾರು ವಿಚಾರದಲ್ಲಿ ನೀವು ಒತ್ತಡಕ್ಕೆ ಒಳಗಾಗುವಿರಿ. ನೇರ ಮಾತಿನಿಂದ ಬೇಸರವನ್ನು ಉಂಟುಮಾಡುವಿರಿ. ಸರಳವಾಗಿ ಇರಲು ಇಷ್ಟವಾಗದು. ಶತ್ರುಗಳ ಬಗ್ಗೆ ನಿರಂತರ ಯೋಚನೆ ಮಾಡುವಿರಿ.

ಕಟಕ ರಾಶಿ: ಖರ್ಚು ಮಾಡುವ ಸಂದರ್ಭ ಬಂದರೂ ಅದು ತಪ್ಪಿ ಹೋಗುವುದು.‌ ಸಂತೋಷಕ್ಕಾಗಿ ನೀವು ಕೆಲವನ್ನು ತ್ಯಾಗಮಾಡಬೇಕಾದೀತು. ಮಕ್ಕಳ ವಿಚಾರದಲ್ಲಿ ಅಧಿಕ ಬದಲಾವಣೆ ಇರಲಿದೆ. ಪ್ರೀತಿಯು ಸುಖಾಂತ್ಯ ಕಾಣಬಹುದು. ವ್ಯಾಪಾರಸ್ಥರು ಶ್ರಮದಾಯಕ ಲಾಭವನ್ನು ಮಾಡಿಕೊಳ್ಳುವರು. ದೇಹದ ಸಮಸ್ಯೆಯನ್ನು ನೀವು ಯಾರ ಬಳಿಯೂ ಹೇಳದೇ ಗೌಪ್ಯವಾಗಿ ಇಟ್ಟಕೊಳ್ಳುವಿರಿ. ನಿರ್ಲಕ್ಷ್ಯವು ನಿಮ್ಮ ಸ್ವಭಾವವಾದರೂ ಕೆಲವು ಸಂದರ್ಭಗಳಲ್ಲಿ ಅದನ್ನ ಬದಲಿಸಿಕೊಳ್ಳುವುದು ಉತ್ತಮ. ವೃತ್ತಿಯಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಆಗಬಹುದು. ಪ್ರಭಾವಿ ವ್ಯಕ್ತಿಗಳ ಭೇಟಿಯು ಸಂತೋಷವನ್ನು ಕೊಡುವುದು. ಉದ್ವೇಗದಿಂದ ಏನನ್ನಾದರೂ ಹೇಳಲು ಹೋಗಿ ನಗೆಪಾಟಲಿಗೆ ಸಿಕ್ಕಿಕೊಳ್ಳುವಿರಿ. ಉದ್ಯಮಿಗಳು ನೌಕರರ ಕ್ಷೇಮ ಸಮಾಚಾರವನ್ನು ವಿಚಾರಿಸಿಕೊಳ್ಳುವಿರಿ.

ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ರಾಶಿಗಳಿಗನುಗುಣವಾಗಿ ಕಷ್ಟಗಳಿಂದ ಪಾರಾಗುವುದು ಹೇಗೆ ಗೊತ್ತಾ?
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ