Horoscope: ಈ ರಾಶಿಯವರಿಗೆ ಸಮಾಧಾನದಿಂದ ಆಲೋಚಿಸಲು ಬಾರದು, ಸಂಗಾತಿಗೆ ಆರೋಗ್ಯ ಸಮಸ್ಯೆ
ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಅಕ್ಟೋಬರ್ 30) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಅಕ್ಟೋಬರ್ 30 ಸೋಮವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತೀ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಭರಣೀ, ಯೋಗ: ಸಾಧ್ಯ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 28 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:55 ರಿಂದ 09:22 ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10: 49 ರಿಂದ 12:16 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:43 ರಿಂದ 03:10ರ ವರೆಗೆ.
ಮೇಷ ರಾಶಿ: ಉದ್ಯೋಗದ ಸ್ಥಳದಲ್ಲಿ ಹೆಚ್ಚು ಲವಲವಿಕೆ ಇರಲಿದೆ. ಸಣ್ಣ ಕಾರ್ಯಕ್ಕೆ ಹೆಚ್ಚು ಶ್ರಮವಹಿಸಬೇಕಾದೀತು. ಆಪ್ತರನ್ನು ದೂರ ಮಾಡಿಕೊಳ್ಳುವಿರಿ. ಆರ್ಥಿಕತೆಗೆ ಸಂಬಂಧಿಸಿದಂತೆ ಪೂರ್ಣ ಸಮಾಧನಾ ಇರದು. ಇನ್ನೊಬ್ಬರ ವಸ್ತುವನ್ನು ಇಟ್ಟುಕೊಳ್ಳುವುದು ಬೇಡ. ಸೋತರೂ ಗೆದ್ದವರ ಜೊತೆ ನಿಮ್ಮ ಪ್ರತಿಷ್ಠೆಯನ್ನು ತೋರಿಸುವಿರಿ. ಹಣದ ವಿಚಾರದಲ್ಲಿ ನಿಮಗೆ ಇಂದು ಲೋಭವು ಇರದು. ನೀವು ಇಂದು ಯಾರ ಮಾತನ್ನೂ ನಂಬುವ ಮನಃಸ್ಥಿತಿಯಲ್ಲಿ ಇಲ್ಲ. ಆರ್ಥಿಕತೆಯ ತೊಂದರೆಯಿಂದ ಮನೆಯ ಕಾರ್ಯವು ಅರ್ಧಕ್ಕೇ ನಿಲ್ಲುವುದು. ಹೊಸಬರ ಪರಿಚಯಿಸಿದಿಂದ ನಿಮಗೆ ಹೊಸ ವಿಷಯಗಳು ಗೊತ್ತಾಗುವುದು.
ವೃಷಭ ರಾಶಿ: ಮಕ್ಕಳ ವಿವಾಹವು ವಿಳಂಬವಾಗುತ್ತಿರುವುದು ನಿಮಗೆ ಆತಂಕವಾಗಬಹುದು. ನೂತನ ಗೃಹನಿರ್ಮಾಣದ ಬಗ್ಗೆ ಮನೆಯವರ ಜೊತೆ ಮಾತನಾಡುವಿರಿ. ಸ್ನೇಹವು ದೂರ ಮಾಡಿಕೊಳ್ಳುವಿರಿ. ಹೊಸ ಕೆಲಸಗಳ ಕಡೆ ಗಮನ ಇರುವುದು. ಅಹಂಕಾರವು ಕಡಿಮೆ ಮಾಡಿಕೊಳ್ಳುವುದು ಉತ್ತಮ. ಇಲ್ಲವಾದರೆ ಜನರನ್ನು ದೂರಮಾಡಿಕೊಳ್ಳುವಿರಿ. ನಿಮ್ಮ ಅಮೂಲ್ಯ ವಸ್ತುಗಳು ಕಾಣೆಯಾಗಬಹುದು. ಮನೆಯ ಸದ್ಯರ ಜೊತೆ ಹೆಚ್ಚು ಸಮಯ ಕಾಲಹರಣ ಮಾಡುವಿರಿ. ಹಿತಶತ್ರುಗಳ ಬಾಧೆಯು ಕಾಣಿಸಿಕೊಳ್ಳುವುದು. ನಿಮ್ಮ ಮಾತು ಸ್ನೇಹಿತರಿಗೆ ಕಿರಿಕಿರಿಯಾಗಬಹುದು. ಅತಿಥಿಸತ್ಕಾರಕ್ಕೆ ಅವಕಾಶಗಳು ಬರಬಹುದು.
ಮಿಥುನ ರಾಶಿ: ವಿದ್ಯಾರ್ಥಿಗಳು ಪ್ರೇಮದಲ್ಲಿ ಬೀಳುವ ಸಾಧ್ಯತೆ ಇದೆ. ಮನೆಯವರ ಮಕ್ಕಳ ಮೇಲೆ ಗಮನ ಇರಿಸುವುದು ಮುಖ್ಯ. ಮಾತುಗಾರರಿಗೆ ಅವಕಾಶವು ಸಿಗಲಿದೆ. ಸಂಸ್ಥೆಯ ಜವಾಬ್ದಾರಿಯನ್ನು ಹೊತ್ತು ಅದನ್ನು ನಿಮ್ಮ ಹಿಡಿತದಲ್ಲಿ ಇರುವಂತೆ ನೋಡಿಕೊಳ್ಳಿ. ನಿಮ್ಮ ಕಾರ್ಯಗಳಿಗೆ ಪರಿಚಿತರು ಸಹಾಯ ಮಾಡುವರು. ಆಸ್ತಿಯ ಖರೀದಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸರಿಯಾಗಿ ಪಡೆಯಿರಿ. ಇನ್ನೊಬ್ಬರ ಸಂಕಷ್ಟವನ್ನು ನಿವಾರಿಸಲು ಉತ್ಸಾಹದಿಂದ ಇರುವಿರಿ. ಮನೆಯಲ್ಲಿ ಸಂತೋಷದಿಂದ ಕಾಲ ಕಳೆಯುವಿರಿ. ಸಂಗಾತಿಯ ಆರೋಗ್ಯವು ಕೆಡಲಿದ್ದು ಓಡಾಟ ಮಾಡಬೇಕಾದೀತು. ಸರ್ಕಾರಿ ಕೆಲಸದಲ್ಲಿ ತೊಡಕಾಗುವುದು. ಉನ್ನತ ಅಧ್ಯಯನಕ್ಕಾಗಿ ನೀವು ಬೇರೆ ಕಡೆಗೆ ಹೋಗಬೇಕಾದೀತು.
ಕಟಕ ರಾಶಿ: ಸಂಗಾತಿಯ ಆರೋಗ್ಯದ ಸಮಸ್ಯೆಯನ್ನು ನೀವು ಬಗೆಹರಿಸುವುದು ಕಷ್ಟವಾದೀತು. ಶತ್ರುಗಳಿಂದ ನಿಮಗೆ ವಂಚನೆಯಾಗಿದ್ದು ವಿಳಂಬವಾಗಿ ಗೊತ್ತಾಗುವುದು. ಸಿಟ್ಟಿನ ಸ್ವಭಾವದಿಂದ ಮನೆಯಲ್ಲಿ ಅಸಮಾಧಾನ ಇರುವುದು. ಎಲ್ಲ ವಿಚಾರದಲ್ಲಿಯೂ ಒಂದಿಲ್ಲೊಂದು ಕಿರಿಕಿರಿ ಕಾಣಿಸೀತು. ಸಮಾಧಾನದಿಂದ ಆಲೋಚಿಸಲು ನಿಮಗೆ ಬಾರದು. ಬಹಳ ದಿನಗಳ ಅನಂತರ ಬಂಧುಗಳ ಮನೆಗೆ ಹೋಗಲಿದ್ದೀರಿ. ಒಳ್ಳೆಯ ರೀತಿಯಲ್ಲಿ ನಿಮ್ಮನ್ನು ಉಪಚಾರವೂ ಸಿಗುವುದು. ಸಂಗಾತಿಯ ವಿಚಾರದಲ್ಲಿ ಉದ್ವೇಗಕ್ಕೆ ಒಳಗಾಗುವುದು ಬೇಡ. ನಿಮ್ಮ ಆರ್ಥಿಕ ಸ್ಥಿತಿಯೂ ಕ್ಷೀಣಿಸಿದ್ದು ಆತಂಕವಾಗಬಹುದು. ನಿಮ್ಮದಲ್ಲದ ವಸ್ತುವನ್ನೂ ನೀವು ಬಿಟ್ಟುಕೊಡಲಾರಿರಿ.