Nithya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 02) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ 2) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಹಸ್ತಾ, ಯೋಗ: ವ್ಯಾಘಾತ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 48 ನಿಮಿಷಕ್ಕೆ, ರಾಹು ಕಾಲ 03:39 ರಿಂದ 05:13ರ ವರೆಗೆ, ಯಮಘಂಡ ಕಾಲ 09: 20 ರಿಂದ 10:55 ವರೆಗೆ, ಗುಳಿಕ ಕಾಲ 12:29 ರಿಂದ 02:04 ರ ವರೆಗೆ.
ಮೇಷ: ಆರೋಗ್ಯವನ್ನು ಕಾಪಾಡಿಕೊಳ್ಳಲೇ ಬೇಕು ಎಂಬ ದೃಢನಿರ್ಧಾರದಿಂದ ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ಪ್ರಯತ್ನವನ್ನು ಆರಂಭಿಸುವಿರಿ. ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳು ಕೇಳಿ ಬರಬಹುದು. ತೀರ್ಥಕ್ಷೇತ್ರವನ್ನು ದರ್ಶನ ಮಾಡುವ ಮನಸ್ಸಾಗುವುದು. ಸ್ತ್ರೀಯರು ನಿಮ್ಮನ್ನು ಪ್ರಶಂಸಿಸಿಯಾರು. ಗುಡ್ಡ ಬೆಟ್ಟಗಳ ಏರುವ ಸಾಹಸಕ್ಕೆ ಹೋಗುವಿರಿ. ನಿಮ್ಮನ್ನು ಅಪರಿಚಿತರೊಬ್ಬರು ಮಾತನಾಡಿಸಿಯಾರು. ಕೈಲಾದ ಸಹಾಯವನ್ನು ಮಾಡಿ. ಸಾಧ್ಯವಾದರೆ ನಿತ್ಯವೂ ಅನ್ನದಾನ ನಡೆಯುವ ಸ್ಥಳಕ್ಕೆ ಹೋಗಿ ಸುವಸ್ತುವನ್ನು ಕೊಡಿ. ಸುಳ್ಳಾಡುವವರ ಬಗ್ಗೆ ಅತಿಯಾದ ಕೋಪವಿರಲಿದೆ.
ವೃಷಭ: ಹಳೆಯ ವಿಚಾರಗಳನ್ನು ಪತಿಯಿಂದ ಕೇಳುವ ಸಂದರ್ಭ ಬರಬಹುದು. ಸಾಮಾಜಿಕವಾದ ಕೆಲಸವನ್ನು ಮಾಡುವವರಿಗೆ ತಾಳ್ಮೆ ಮುಖ್ಯವಾಗಿ ಬೇಕಾಗಿದೆ. ಸ್ವಭಾವವನ್ನು ತಿದ್ದಿಕೊಳ್ಳಲು ಇಷ್ಟಪಟ್ಟರೂ ನಿಮ್ಮ ಜೊತೆಗಿರುವವರು ಅದನ್ನು ಬಿಡಲಾರರು. ನಿಮ್ಮನ್ನು ಛೇಡಿಸುತ್ತ ಹಾಸ್ಯ ಮಾಡುವರು. ಸಾಲವನ್ನು ಮಾಡಬೇಕಾಗಿ ಬಂದರೆ ಬಹಳ ಎಚ್ಚರಿಕೆಯಿಂದ ಜನರನ್ನು ನೋಡಿ ಮಾಡಿ. ವಾಹನದಲ್ಲಿ ಓಡಾಟ ಮಾಡುವುದರಿಂದ ಸಂತೋಷವಾದೀತು. ಯಾರದೋ ದಾಕ್ಷಿಣ್ಯಕ್ಕೆ ಒಳಗಾಗಿ ನಿಮ್ಮ ಕೆಲಸವನ್ನು ಅರ್ಧಕ್ಕೆ ಬಿಡಬೇಡಿ. ಯಾವುದಾದರೂ ಘಟನೆಯು ನಿಮ್ಮನ್ನು ಇಂದು ಹೆಚ್ಚು ಕಾಡಬಹುದು.
ಮಿಥುನ: ಯಾರನ್ನೂ ಸಾಧರಣ ಮನುಷ್ಯ ತಿಳಿದುಕೊಳ್ಳಬೇಡಿ. ಅವರ ಯೋಗ್ಯತೆಯನ್ನು ಅವರ ಬಟ್ಟೆಯಿಂದ, ಮಾತಿನಿಂದ ಅಳೆಯಲು ನೀವಿಂದು ಅಶಕ್ಯರು. ಒಂದೊಂದೇ ಖರ್ಚನ್ನು ನೀವು ನಿಭಾಯಿಸುವಾಗ ಅದೊಂದು ದೊಡ್ಡ ಮೊತ್ತವಾಗಿ ಕಾಣಬಹುದು. ನಿಮ್ಮಷ್ಟಕ್ಕೇ ನೀವು ಹೊಸತನವನ್ನು ಸೃಷ್ಟಿಸಿಕೊಂಡು ಅಪಮಾನಕ್ಕೆ ಒಳಗಾಗುವಿರಿ. ಗೋಸೇವೆಯನ್ನು ಮಾಡಲು ಮನಸ್ಸಾದೀತು. ಮೇಲೆಧಿಕಾರಿಗಳ ದಯಾಪಾಶವು ನಿಮ್ಮನ್ನು ವೃತ್ತಿಯಲ್ಲಿ ಉಳಿಸಬಹುದು. ನೀವಿಂದು ಪೂರ್ವಾವಲೋಕನವನ್ನು ಮಾಡಿಕೊಳ್ಳುವಿರಿ. ಸಂಕಷ್ಟ ಬಂದಾದ ಎಲ್ಲದಕ್ಕೂ ಏನೋ ಒಂದು ಕಾರಣವಿರಬಹುದು ಎಂದು ಸಮಾಧಾನವನ್ನು ತಂದುಕೊಳ್ಳುವಿರಿ.
ಕಟಕ: ಕುಟುಂಬದಲ್ಲಿ ತಾನೇ ಶ್ರೇಷ್ಠ ಎಂಬ ಭಾವ ಬೇಡ. ಸಮಯವು ಒಂದೇ ರೀತಿಯಲ್ಲಿ ಇರದು. ಅಕಸ್ಮಾತ್ ಆಗಿ ಸಿಕ್ಕ ಜವಾಬ್ದಾರಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಸ್ವೇಚ್ಛೆಯಿಂದ ವರ್ತಿಸಬೇಡಿ. ಇರುವ ಸಮಸ್ಯೆಯನ್ನು ಎದುರಿಸಲು ಹೋಗಿ ಮತ್ತೊಂದು ಸಮಸ್ಯೆಯನ್ನು ಹುಟ್ಟುಹಾಕಿಕೊಳ್ಳಬೇಡಿ. ಕುಟುಂಬದ ಸದಸದ್ಯರು ನಿಮ್ಮ ಏಳ್ಗೆಯನ್ನು ಇಷ್ಟಪಡುವವರು. ಅವರ ಮೇಲೆ ಬುದ್ಧಿವಂತಿಕೆ ಸವಾರಿ ಮಾಡಬೇಡಿ. ಅವರ ಬೇಸರವೇ ನಿಮಗೆ ದುಃಖವನ್ನು ತಂದುಕೊಟ್ಟೀತು. ಯಾರನ್ನೂ ನಂಬದವರು ಇಂದು ನಂಬಿ ಮೋಸ ಹೋಗಬಹುದು.