Daily Horoscope: ಈ ರಾಶಿಯವರಿಗೆ ನಿಮ್ಮ ಬಗ್ಗೆ ನಿಮಗೇ ಅಸಮಾಧಾನ ಉಂಟಾಗಬಹುದು
ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 13) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 13 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಧೃತಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 11 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:15 ರಿಂದ 03:51ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:12 ರಿಂದ 07:48 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:25 ರಿಂದ 11:01ರ ವರೆಗೆ.
ಮೇಷ: ನಿಮ್ಮ ಮಾತಿಗೆ ಗೌರವವು ಕಡಿಮೆ ಆಗಬಹುದು. ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲು ಮಾನಸಿಕ ಸ್ಥಿತಿಯಲ್ಲಿ ಕೊರತೆ ಕಾಣುವುದು. ಮಾತನ್ನು ಇಂದು ಕಡಿಮೆ ಮಾಡಲಿದ್ದು, ಅಚ್ಚರಿಯಾದೀತು. ಉಳಿತಾಯದ ಹಣವನ್ನು ಹಾಗೆಯೇ ಇಟ್ಟುಕೊಳ್ಳುವುದು ಉತ್ತಮ. ಆಲಸ್ಯದಿಂದ ದೂರವಿದ್ದರೂ ಅಪವಾದವು ಬರಬಹುದು. ನಿಮ್ಮ ಸಾಧನೆಯನ್ನು ಗೌರವಿಸಲಿದ್ದಾರೆ. ಮೂರ್ಖರಂತೆ ವಾದ ಮಾಡಲು ಹೋಗಿ ಮನಸ್ಸನ್ನು ಕೆಡಿಸಿಕೊಳ್ಳುವುದು ಬೇಡ. ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ನಿಮ್ಮ ಕೆಲಸವನ್ನು ಏಕಾಗ್ರತೆಯಿಂದ ಮಾಡಿ.
ವೃಷಭ: ಅನಿವಾರ್ಯವಾಗಿ ಸ್ನೇಹಿತರ ಸಹಾಯವನ್ನು ಪಡೆಯುವಿರಿ. ನಿಮ್ಮ ವೇಗಕ್ಕೆ ನಿಯಂತ್ರಣವನ್ನು ಕಂಡುಕೊಳ್ಳುವುದು ಉತ್ತಮ. ನಿಮ್ಮ ಬಗ್ಗೆ ನಿಮಗೇ ಅಸಮಾಧಾನ ಉಂಟಾಗಬಹುದು. ಬರಬೇಕಿದ್ದ ಹಣವು ಬಾರದೇ ಚಿಂತೆಯಾಗುವುದು. ಹೊಸ ಸ್ಥಳವು ನಿಮಗೆ ಒಗ್ಗದೇ ಹೋಗಬಹುದು. ಅಂದುಕೊಂಡ ಕೆಲಸಗಳಿಗೆ ಅಡ್ಡಿಗಳು ಬರಲಿದ್ದು, ಹತಾಶಾಭಾವವು ಮೂಡಬಹುದು. ನಿಮ್ಮ ಎಂದಿನ ಸಹನೆಯನ್ನು ಬಿಡದೇ ಇಟ್ಟುಕೊಂಡರೆ ಸತ್ಫಲವನ್ನು ಉಣ್ಣುವ ಅವಕಾಶವು ಸಿಗಬಹುದು. ಧರ್ಮದಲ್ಲಿ ನಂಬಿಕೆ ಹೆಚ್ಚಾಗಬಹುದು. ಗುರುದರ್ಶನವು ನಿಮಗೆ ನೆಮ್ಮದಿಯನ್ನು ನೀಡಬಹುದು.
ಮಿಥುನ: ನಿಮಗೆ ಅನೇಕ ದ್ವಂದ್ವಗಳು ಕಾಡಲಿದ್ದು ತೀರ್ಮಾನವನ್ನು ಮಾಡಲು ಕಷ್ಟವಾದೀತು. ಶತ್ರುಗಳ ಮೇಲೆ ನೀವು ಬಲಪ್ರದರ್ಶವನ್ನು ಮಾಡಲು ಆಲೋಚಿಸುವಿರಿ. ನಿಮ್ಮ ಉದ್ಯಮದ ಕಡೆ ಗಮನಹರಿಸಲು ಕಷ್ಟವಾದೀತು. ಒತ್ತಡಗಳು ನಿಮ್ಮ ಕೆಲಸವನ್ನು ನಿಧಾನವಾಗುವಂತೆ ಮಾಡಿವೆ. ಹೊಂದಾಣಿಕೆಯನ್ನು ಮಾಡಿಕೊಳ್ಳಲು ನಿಮಗೆ ಬೇಸರವಸದೀತು. ಎಲ್ಲದಕ್ಕೂ ನಿವೇ ಭಾಗಬೇಕು ಎಂಬ ಮನೋಭಾವವನ್ನು ಇಟ್ಟುಕೊಳ್ಳುವುದು ಬೇಡ. ನಿಮಗೆ ಕೆಲವು ಜವಾಬ್ದಾರಿಗಳು ಬರಲಿದ್ದು ಅದನ್ನು ನಿಭಾಯಿಸುವ ಸಾಮರ್ಥ್ಯವನ್ನು ನೀವೇ ಗಮನಸಿಕೊಳ್ಳಿ. ದುರ್ಗೆಯನ್ನು ಆರಾಧಿಸಿ.
ಕರ್ಕ: ಆರ್ಥಿಕವಾಗಿ ನೆರವನ್ನು ನೀಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಸೌಜನ್ಯವಾದರೂ ಇರಲಿ. ಸ್ತ್ರೀಯರಿಂದ ಬೈಗುಳವು ಸಿಗಬಹುದು. ಉದ್ಯೋಗದಲ್ಲಿ ಪ್ರಾಮಾಣಿಕತೆ ಇದ್ದರೂ ಅಪವಾದವು ಬರಬಹುದು. ಸಾಮಾಜಿಕ ಕಾರ್ಯದಲ್ಲಿ ಜನರನ್ನು ಒಗ್ಗೂಡಿಸಿ ಕೆಲಸವನ್ನು ಮಾಡುವಿರಿ. ಸಂಗಾತಿಯಿಂದ ಸಿಗಬೇಕಾದ ಪ್ರೀತಿಯು ಕಡಿಮೆ ಆಗಬಹುದು. ನಿಮ್ಮ ವರ್ತನೆಯು ಬೇರೆ ರೀತಿಯಲ್ಲಿ ತೋರಲಿದೆ. ಏಕಾಂತವನ್ನು ಇಚ್ಛಿದರೂ ಇರಲು ನಿಮಗೇ ಕಷ್ಟವಾದೀತು. ಬೇಸರವನ್ನು ಆಪ್ತರ ಬಳಿ ಸಮಾಧಾನ ಮಾಡಿಕೊಳ್ಳಿ. ಯಾರು ಏನೇ ಕೊಟ್ಟರೂ ಅಗತ್ಯತೆನ್ನು ಗಮನಿಸಿಕೊಂಡು ಸ್ವೀಕರಿಸಿ.
ಸಿಂಹ: ಇಂದು ಬುದ್ಧಿಪೂರ್ವಕವಾಗಿ ತಪ್ಪನ್ನು ಮಾಡಿ ಪಶ್ಚಾತ್ತಾಪಪಡುವಿರಿ. ಇರುವ ಕೆಲಸವನ್ನೂ ಬಿಟ್ಟು ನೀವು ಹೊಸ ಕೆಲಸ ಸಿಗದೇ ಮನಸ್ಸಿನಲ್ಲಿಯೇ ಒದ್ದಾಡುವಿರಿ. ಕೋಪವು ಬಂದರೂ ವ್ಯಕ್ತಪಡಿಸಲಾಗದ ಸ್ಥಿತಿ ಬರಲಿದೆ. ನೂತನ ವಸ್ತುಗಳನ್ನು ಖರೀದಿಸುವಿರಿ. ನಾಲಿಗೆ ಚಪಲಕ್ಕೆ ಆಹಾರವನ್ನು ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ಸಂಗಾತಿಯ ಜೊತೆ ಸಮಯವನ್ನು ಕಳೆಯುವ ಮನಸ್ಸಾಗುವುದು. ಇಬ್ಬರ ಸಮ್ಮತಿಯನ್ನು ಕೇಳಿಕೊಳ್ಳುವುದು ಉತ್ತಮ. ದೂರಪ್ರಯಾಣವನ್ನು ರದ್ದು ಮಾಡಿರಿ. ಆರೋಗ್ಯಕ್ಕಾಗಿ ಸೂರ್ಯನ ಸ್ತೋತ್ರವನ್ನು ಸೂರ್ಯೋದಯಕ್ಕಿಂತ ಸ್ವಲ್ಪ ಮೊದಲು ಪಠಿಸಿ.
ಕನ್ಯಾ: ದೈವಜ್ಞರ ಸೂಚನೆಯ ಮೇರೆಗೆ ದೋಷಪರಿಹಾರಕ್ಕಾಗಿ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ನಿಮ್ಮ ಬೆಂಬಲಕ್ಕೆ ಹಿರಿಯರು ನಿಲ್ಲುವರು. ಶತ್ರುಗಳ ವಿರುದ್ಧ ನೀವು ದೂರನ್ನು ದಾಖಲಿಸುವಿರಿ. ಕಚೇರಿಯ ಕಾರ್ಯಗಳು ಮಂದಗತಿಯಲ್ಲಿ ಸಾಗಲಿದ್ದು ವೇಗವನ್ನು ಪಡೆಯಲು ಸೂಚನೆ ಬರಬಹುದು. ನಿಮ್ಮ ದುಃಖಕ್ಕೆ ಬಂಧುಗಳ ಸಾಂತ್ವನವು ಸಿಗಲಿದೆ. ಲಭ್ಯತೆಯನ್ನು ರೂಢಿಸಿಕೊಳ್ಳಲು ಶ್ರಮಿಸುವಿರಿ. ಹಣಕಾಸಿನ ವ್ಯವಹಾರದಿಂದ ಇಂದು ನೀವು ದೂರ ಉಳಿಯುವುದು ಉತ್ತಮ. ಲಕ್ಷ್ಮೀನಾರಾಯಣ ಕೃಪೆಯನ್ನು ಬಯಸಬೇಕಾಗುವುದು. ಕೆಲಸದಲ್ಲಿ ಧೈರ್ಯದ ಕೊರತೆ ಕಾಣಲಿದೆ.