Horoscope: ರಾಶಿಭವಿಷ್ಯ, ಈ ರಾಶಿಯವರು ಆದಾಯದ ಮೂಲವನ್ನು ಬಲಪಡಿಸಿಕೊಳ್ಳಬೇಕಾದೀತು

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 25) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ, ಈ ರಾಶಿಯವರು ಆದಾಯದ ಮೂಲವನ್ನು ಬಲಪಡಿಸಿಕೊಳ್ಳಬೇಕಾದೀತು
ದಿನಭವಿಷ್ಯ
Follow us
TV9 Web
| Updated By: Rakesh Nayak Manchi

Updated on: Sep 25, 2023 | 12:45 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 25 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ದಶಮೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಅತಿಗಂಡ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 25 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:53 ರಿಂದ 09:24ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:54 ರಿಂದ ಮಧ್ಯಾಹ್ನ 12:24ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:55 ರಿಂದ 03:25ರ ವರೆಗೆ.

ಧನು ರಾಶಿ: ಸಮಾರಂಭಗಳಿಗೆ ಭೇಟಿ ಕೊಡುವ ಸಂದರ್ಭವು ಬರಬಹುದು. ನಿಮ್ಮ ದಿನಚರಿಯು ಬದಲಾಗಿದ್ದು ಇದರಿಂದ ಆರೋಗ್ಯದ ಮೇಲೆ ಪರಿಣಾಮವು ಉಂಟಾಗಬಹುದು. ನೀವು ಇಂದು ಅಸರಂಭಿಸಿದ ಕೆಲಸವು ಪೂರ್ಣ ಆಗುವವರೆಗೂ ವಿಶ್ರಾಂತಿಯನ್ನು ಪಡೆಯುವುದಿಲ್ಲ. ಸಂಗಾತಿಯ ಜೊತೆ ಸ್ವಲ್ಪ ಹೊತ್ತು ಕಳೆಯಬೇಕು ಎಂಬ ಮನಸ್ಸಾದೀತು. ವಿದೇಶದ ಸ್ನೇಹಿತರ ಪರಿಚಯವನ್ನು ಮಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ನೀವೇ ಕೇಳಿ ಪಡೆದುಕೊಳ್ಳಬೇಕಾದೀತು. ಯಾರ ಮೇಲೂ ದೋಷಾರೋಪವನ್ನು ಮಾಡುವಿರಿ. ನೀವು ಇಂದು ಕೆಲವರಿಗೆ ಅಪ್ರಾಮಾಣಿಕರಂತೆ ಕಾಣುವಿರಿ. ನಿಮ್ಮ ಗೆಳೆತನದಿಂದ ಸಂಗಾತಿಗೆ ಅಸೂಯೆ ಉಂಟಾಗುವುದು. ಉಸಿರಾಟದಿಂದ ತೊಂದರೆ ಬರುವ ಸಾಧ್ಯ ಇದೆ.

ಮಕರ ರಾಶಿ: ಇಂದು ನಿಮ್ಮ ನಂಬಿಕೆಯು ಬಲವಾಗುವ ಸನ್ನಿವೇಶವು ಕಾಣಿಸಿಕೊಳ್ಳುವುದು. ಸಂಗಾತಿಯ ಸ್ಪಂದನೆಯಿಂದ ಉತ್ಸಾಹವು ಅಧಿಕವಾಗುವುದು.‌ ಯಾರನ್ನಾದರೂ ದ್ವೇಷಿಸುವ ಮನೋಭಾವವು ಬರುವ ಸಾಧ್ಯತೆ ಇದೆ. ನಿಮ್ಮ ವೈಯಕ್ತಿಕ ಕಾರ್ಯಗಳನ್ನು ಇಂದು ಮಾಡಿಕೊಳ್ಳಲಾಗದು. ಇನ್ನೊಬ್ಬರ ಒತ್ತಾಯಕ್ಕೆ ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಂಡು ಭಾಗವಹಿಸುವಿಕೆ ಇರುವುದು. ಆರ್ಥಿಕ ಹಾಗೂ ಸಮಯದ ನಷ್ಟದಿಂದಾಗಿ ಬೇಸರಿಸುವಿರಿ. ಆಪ್ತರು ನೀಡುವ ಹಣಕ್ಕಾಗಿ ನೀವು ಕಾಯುತ್ತಿರಬೇಕಾದೀತು. ವಾಹನದ ನಷ್ಟವು ನಿಮಗೆ ನಿಮಗೆ ಹೊರೆಯಾಗುವುದು. ಇನ್ನೊಬ್ಬರ ವಸ್ತುವನ್ನು ಮರಳಿಕೊಡಲು ನೀವು ಮರೆಯುವಿರಿ. ಸಾಮಾಜಿಕ ಗೌರವವನ್ನು ನೀವಿಂದು ಹೇಳಿಸಿಕೊಂಡು ಪಡೆಯುವಿರಿ. ವಾಹನದಲ್ಲಿ ಸವಾರಿಯನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ.

ಕುಂಭ ರಾಶಿ: ನಿಮ್ಮ ತರ್ಕವು ತಲೆಕೆಳಗಾಗಿ ಅನ್ಯರಿಂದ ಅಪಮಾನವಾಗಬಹುದು. ಆರ್ಥಿಕತೆಯನ್ನು ಬಲಪಡಿಸಿಕೊಳ್ಳುವಿರಿ. ಆದಾಯದ ಮೂಲವನ್ನು ಬಲಪಡಿಸಿಕೊಳ್ಳಬೇಕಾದೀತು. ಇನ್ನೊಬ್ಬರ ಅಪ್ರಯೋಜಕ ಸಲಹೆಗೆ ಕಿವಗೊಟ್ಟು ಒಳ್ಳೆಯ ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳುವಿರಿ. ಸ್ತ್ರೀಯರ ಬಳಿ ವಿನಂತಿ ಮಾಡಿಕೊಂಡು ಸಹಾಯವನ್ನು ಪಡೆದಯುವಿರಿ. ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು ಒಂಟಿಯಾಗಿ ಸುತ್ತಾಡುವಿರಿ. ತಂದೆ ಹಾಗೂ ಮಕ್ಕಳ ಮಧ್ಯ ಕೆಲವು ವಿಚಾರಗಳಿವೆ ಭಿನ್ನಾಭಿಪ್ರಾಯಗಳು ಬಂದು ವಾಗ್ವಾದವೂ ಆಗಬಹುದು. ಉನ್ನತಮಟ್ಟದಲ್ಲಿ ಅಧಿಕಾರಿಗಳ ಸಂಪರ್ಕವನ್ನು ಬೆಳೆಸಿಕೊಳ್ಳುವಿರಿ. ಉದ್ವೇಗಕ್ಕೆ ಒಳಗಾಗಿ ನಿಮ್ಮನ್ನೇ ನೀವು ಮರೆಯಬಹುದು. ಹೊಸಬರ ಗೆಳೆತನವಾಗುವುದು. ಆರೋಗ್ಯವನ್ನು ಗಟ್ಟಿ ಮಾಡಿಕೊಳ್ಳಲು ನಿಮಗೆ ವ್ಯಾಯಾಮ ಅಗತ್ಯ.

ಮೀನ ರಾಶಿ: ದುಡುಕಿನ‌‌ ಕೆಲವು ಸಂದರ್ಭಗಳನ್ನು ನಿಭಾಯಿಸುವುದು ನಿಮಗೆ ಕಷ್ಟವಾದೀತು. ದೇಹದ ಆಲಸ್ಯವನ್ನು ಬಿಡವುದು ನಿಮಗೆ ಇಂದು ಸುಲಭವಾಗದು. ಇಂದು ನಿಮ್ಮ ಅನೇಕ‌ ದಿನಗಳ ಬಯಕೆಯನ್ನು ಪೂರ್ಣ ಮಾಡಿಕೊಳ್ಳುವ ಸಂದರ್ಭವು ಬರಬಹುದು. ರಕ್ಷಣಾವ್ಯವಸ್ಥೆಯಲ್ಲಿ ಇರುವವರಿಗೆ ಉನ್ನತ ಸ್ಥಾನವು ಸಿಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಓದಿಗಾಗಿ ಮನೆಯಿಂದ ದೂರವಿರಬೇಕಾಗಿ ಬರಬಹುದು. ಆರ್ಥಿಕತೆಯ ಕಾರಣದಿಂದ ಕಾರ್ಯಗಳು ಹಿಂದುಳಿಯುವ ಸಾಧ್ಯತೆ ಇದೆ. ಇದಕ್ಕಾಗಿ ಆಪ್ತರಿಂದ ಧನಸಹಾಯವನ್ನೂ ಬಯಸುವಿರಿ. ವಿವಾಹಕ್ಕೆ ತೊಂದರೆಯಾದ ವಿಷಯವನ್ನು ತಿಳಿದುಕೊಂಡು ಪರಿಹಾರ ಮಾಡಿಕೊಳ್ಳುವುದು ಉತ್ತಮ. ಆರೋಗ್ಯವನ್ನು ದೃಢವಾಗಿ ಇರಿಸಿಕೊಳ್ಳಿ. ತುರ್ತು ಪ್ರಯಾಣ ಮಾಡುವ ಸ್ಥಿತಿಯು ಬರಬಹುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ