Horoscope: ದಿನಭವಿಷ್ಯ, ಈ ರಾಶಿಯವರಿಗೆ ಕಾಲಕ್ಕೆ ಸಿಗಬೇಕಾದುದು ಸಿಗಲಿದೆ

ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಜನವರಿ 09) ಭವಿಷ್ಯಹೇಗಿದೆ ಎಂಬುದು ಇಲ್ಲಿದೆ.

Horoscope: ದಿನಭವಿಷ್ಯ, ಈ ರಾಶಿಯವರಿಗೆ ಕಾಲಕ್ಕೆ ಸಿಗಬೇಕಾದುದು ಸಿಗಲಿದೆ
ಇಂದಿನ ರಾಶಿಭವಿಷ್ಯImage Credit source: iStock Photo
Follow us
TV9 Web
| Updated By: Rakesh Nayak Manchi

Updated on: Jan 09, 2024 | 12:30 AM

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಜನವರಿ 09) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಮಾರ್ಗಶೀರ್ಷ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಮೂಲಾ, ಯೋಗ: ವೃದ್ಧಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 18 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:29 ರಿಂದ 04:53 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:50 ರಿಂದ 11:15ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:40 ರಿಂದ 02:04ರ ವರೆಗೆ.

ಸಿಂಹ ರಾಶಿ: ಸುಳ್ಳನ್ನೇ ಸತ್ಯ ಮಾಡಲು ನಿಮ್ಮ ಸಮಯವನ್ನು ವ್ಯರ್ಥ ಮಾಡುವಿರಿ. ಕೊರತೆಯನ್ನು ನೆನೆದು ದುಃಖಿಸುವುದು ಬೇಡ. ಕಾಲಕ್ಕೆ ಸಿಗಬೇಕಾದುದು ಸಿಗಲಿದೆ. ಎಂದಿಗಿಂತ ವ್ಯಾಪಾರದಲ್ಲಿ ಹಿನ್ನಡೆ ಇರಲಿದೆ. ಚಿಂತೆಯು ಕಾಡಬಹುದು. ಪಾಲುದಾರಿಕೆಯಲ್ಲಿ ನಿಮಗೆ ಹೊಂದಾಣಿಕೆಯ ಕೊರತೆ ಆಗಬಹುದು. ಅನಿರೀಕ್ಷಿತ ವೆಚ್ಚವನ್ನು ಮಾಡಬೇಕಾಗಬಹುದು. ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ಸಾಕ್ಷಿಯು ಸಿಗದೇಹೋಗಬಹುದು. ಪ್ರಯಾಣದಲ್ಲಿ ತೊಂದರೆಗಳು ಬಂದರೂ ತಲುಪಬೇಕಾದ ಸ್ಥಳಕ್ಕೆ ಹೋಗುವಿರಿ. ಸರ್ಕಾರಿ ನೌಕರರು ಅಧಿಕಾರಿಗಳಿಂದ ಸಮಸ್ಯೆಯನ್ನು ಎದುರಿಸಬೇಕಾದೀತು. ಮಾನಸಿಕ ಒತ್ತಡಗಳು ನಿಮ್ಮ ಕೆಲಸವನ್ನು ಹಾಳುಮಾಡುವುದು. ಕಛೇರಿಯ ಕೆಲಸವನ್ನು ಹಂಚಿಕೊಂಡು ಮಾಡುವಿರಿ.

ಕನ್ಯಾ ರಾಶಿ: ಆಪ್ತರನ್ನು ದೂರವಿರಿಸಿಕೊಂಡು ಸಂಕಟಪಡುವಿರಿ. ವಿಶ್ವಾಸಘಾತವಾದರೆ ನಿಮಗೆ ನೋವಾಗಲಿದೆ. ವಿದ್ಯಾರ್ಥಿಗಳ ಶ್ರಮವು ವ್ಯರ್ಥವಾಗುವುದು. ಅತಿಯಾದ ಚಿಂತೆಯು ನಿಮ್ಮ ಜೊತೆಗಿರುವವರ ಮನಸ್ಸನ್ನೂ ಕೆಡಿಸೀತು. ಉದ್ಯೋಗದ ಬದಲಾವಣೆ ಆಗಲಿದ್ದು ಸರಿಯಾದ ಪ್ರತ್ಯುತ್ತರ ಸಿಗದೇ ಬೇಸರವಾಗುವುದು. ನಿಮ್ಮ ವಸ್ತುಗಳು ಕಳ್ಳತನವಾಗಬಹುದು. ನಿಮ್ಮ ನಿಯಮಗಳನ್ನು ನೀವೇ ಭಂಗ ಮಾಡಿಕೊಳ್ಳುವಿರಿ. ಎಚ್ಚರಿಕೆಯಿಂದ ನಿಮ್ಮ ಹೆಜ್ಜೆಯನ್ನು ಇಡಿ. ಅಳುಕಿನಿಂದ ಇರುವಿರಿ. ಇಂದು ಕೈಗೊಂಡ ಪ್ರವಾಸದಲ್ಲಿ ನಿಮಗೆ ತೃಪ್ತಿ ಸಿಗದು. ನಿಮ್ಮ ಉತ್ಸಾಹಕ್ಕೆ ಯಾರಾದರೂ ಭಂಗಮಾಡಬಹುದು. ಯಾರದ್ದೋ ಮೂಲಕ ನೀವು ಶತ್ರುಗಳ ಯೋಜನೆಯನ್ನು ತಿಳಿಯುವಿರಿ. ಸಹನೆಯಿಂದ ಆಗುವ ಲಾಭವು ಅನುಭವಕ್ಕೆ ಬರಬಹುದು.

ತುಲಾ ರಾಶಿ: ಅಪರಿಚಿತರ ಸಂಪರ್ಕವನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳುವಿರಿ. ಉತ್ಪನ್ನಗಳನ್ನು ಮಾರಾಟ ಮಾಡಿ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ಸಾಮಾಜಿಕ ಕೆಲಸಗಳು ನಿಮ್ಮನ್ನು ಹುಡುಕಿಕೊಂಡು ಬರಬಹುದು. ವ್ಯವಹಾರದಲ್ಲಿ ಊಹಿಸಿದ್ದಕ್ಕಿಂತ ಹೆಚ್ಚಿನ ಲಾಭವು ಸಿಗುವುದು. ಉದರಬಾಧೆಯಿಂದ ಕಷ್ಟಪಡುವಿರಿ. ದುಡುಕಿ ಮಾತನಾಡಿ ಸತ್ಯವನ್ನು ಹೇಳುವಿರಿ. ಆಸ್ತಿಯ ಕಲಹವನ್ನು ನ್ಯಾಯಾಲಯಕ್ಕೆ ತಡಗೆದುಕೊಂಡು ಹೋಗುವಿರಿ. ವಿನಾಕಾರಣ ಯಾರ ಮೇಲಾದರೂ ಅಧಿಕಾರವನ್ನು ಚಲಾಯಿಸುವಿರಿ. ಅಲ್ಪರ ಸಹವಾಸದಿಂದ ಅಭಿಮಾನಕ್ಕೆ ತೊಂದರೆಯಾಗುವುದು. ಹಣಕಾಸಿನ ವ್ಯವಹಾರವು ಪಾರದರ್ಶಕವಾಗಿ ಇರಲಿ. ಸಂಗಾತಿಯಿಂದ ನಿಮಗೆ ನೂತನ ವಸ್ತ್ರಗಳು ಬರಬಹುದು. ನಿಮ್ಮ ಆದಾಯದ ಮೂಲವನ್ನು ಹೆಚ್ಚುಮಾಡಿಕೊಳ್ಳುವಿರಿ. ಕೆಲಸದಲ್ಲಿ ಪ್ರಾಮಾಣಿಕತೆ ಕಡಿಮೆ ಆದಂತೆ ತೋರಬಹುದು.

ವೃಶ್ಚಿಕ ರಾಶಿ: ನಿಮ್ಮ ಹಣದ ನಷ್ಟಕ್ಕೆ ಮಾತ್ಯಾರನ್ನೋ ದೂರುವುದು ಬೇಡ. ಹೊಸ ಉದ್ಯೋಗವು ನಿಮಗೆ ಆರ್ಥಿಕತೆಯಿಂದ ನೆಮ್ಮದಿಯನ್ನು ನೀಡುವುದು. ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡುವ ಇಚ್ಛೆ ಇರಲಿದೆ. ಬಂಧುಗಳು ನಿಮ್ಮ ಸಮಸ್ಯೆಗೆ ಸ್ಪಂದಿಸುವರು. ವ್ಯಾಪಾರವು ಲಾಭಾಂಶವನ್ನು ಹೆಚ್ಚು ಪಡೆಯುವುದು. ನಿಮ್ಮ ಕೆಲಸಗಳಿಗೆ ಆತ್ಮಸಾಕ್ಷಿಯೇ ಮುಖ್ಯವಾಗಿರುವುದು. ಹುಡುಗಾಟದ ಬುದ್ಧಿಯಿಂದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಸಂಗಾತಿಯ ಬೆಂಬಲವು ಸಿಗದೇಹೋಗಬಹುದು. ನಿಮ್ಮ ಹಿತೈಷಿಗಳಾದರೂ ಅವರ ಜೊತೆಗಿನ ಒಡನಾಟವು ಮಿತಿಯಲ್ಲಿ ಇರಲಿ. ಇಂದಿನ ಕಾರ್ಯದಲ್ಲಿ ಮುನ್ನಡೆಯಿರಲಿದ್ದು ನಿಮ್ಮ ಬಗ್ಗೆ ಸದಭಿಪ್ರಾಯವು ಇರುವುದು. ಆಪ್ತರ ಜೊತೆ ಮಾಡಿದ‌ ಸಮಾಲೋಚನೆಯಿಂದ ಮನಸ್ಸಿಗೆ ಸಂತೋಷ ಸಿಗುವುದು. ವಾಸಸ್ಥಳದ ಬದಲಾವಣೆಯಿಂದ ಹೊಂದಿಕೊಳ್ಳುವುದು ಕಷ್ಟವಾದೀತು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ