AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 23 September : ಇಂದು ಈ ರಾಶಿಯವರ ಪಾಲುದಾರಿಕೆ ಪಡೆಯುವ ಯೋಜನೆ ಮಾಡುವಿರಿ

ನವರಾತ್ರದ ಎರಡನೇ ದಿನದಲ್ಲಿ ಬ್ರಹ್ಮಚಾರಿಣೀ ದೇವಿಯ ಪೂಜೆ. ಶೈಲಪುತ್ರಿಯಾಗಿ ಜನಿಸಿದ ಆಕೆ ಬ್ರಹ್ಮವಾರಿಣಿಯಾಗಿ ಪೂಜೆಗೊಳ್ಳುವಳು. ಅಧ್ಯಾತ್ಮ ಸಾಧನೆಗೆ ಬ್ರಹ್ಮಚಾರಣಿಯನ್ನು ಉಪಾಸನೆ ಮಾಡುತ್ತಾರೆ. ಮಹಾಕಾಳಿಯ ಎರಡನೇ ಅವತಾರ. ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಆಶ್ವಯುಜ ಮಾಸ ಶುಕ್ಲ ಪಕ್ಷದ ದ್ವಿತೀಯಾ ತಿಥಿ ಮಂಗಳವಾರ ನಾಲಗೆಯ ಹಿಡಿತವಿರದು, ದೈಹಿಕ ಶ್ರಮ, ದೇವತೋಪಾಸನೆ, ನಿರ್ಮಮತ್ವ, ಸಂಶಯ ನಿವಾರಣೆ, ಉದ್ಯೋಗದಲ್ಲಿ ಮಾನಸಿಕ ಸ್ಥಿರತೆ ಇವೆಲ್ಲ ಇಂದಿನ ವಿಶೇಷ.

Horoscope Today 23 September : ಇಂದು ಈ ರಾಶಿಯವರ ಪಾಲುದಾರಿಕೆ ಪಡೆಯುವ ಯೋಜನೆ ಮಾಡುವಿರಿ
Horoscope
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಸುಷ್ಮಾ ಚಕ್ರೆ|

Updated on: Sep 23, 2025 | 5:01 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಉತ್ತರಾಫಲ್ಗುಣೀ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಚಿತ್ರಾ, ಯೋಗ : ಶಿವ, ಕರಣ : ಕೌಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 13 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:13 – 16:43, ಗುಳಿಕ ಕಾಲ 12:12 – 13:42, ಯಮಗಂಡ ಕಾಲ 09:11 – 10:41

ನವರಾತ್ರದ ಎರಡನೇ ದಿನದಲ್ಲಿ ಬ್ರಹ್ಮಚಾರಿಣೀ ದೇವಿಯ ಪೂಜೆ. ಶೈಲಪುತ್ರಿಯಾಗಿ ಜನಿಸಿದ ಆಕೆ ಬ್ರಹ್ಮವಾರಿಣಿಯಾಗಿ ಪೂಜೆಗೊಳ್ಳುವಳು. ಆಕೆಯ ಸ್ವರೂಪ ಬಿಳಿಯ ಬಣ್ಣದ ವಸ್ತ್ರ ಧರಿಸಿ, ಅಕ್ಷಮಾಲೆ ಹಾಗೂ ಕಮಂಡಲುಗಳನ್ನು ಹಾಗೂ ಯಜ್ಞದ ಉಪಕರಣಗಳಾದ ಸೃಕ್ ಮತ್ತು ಸ್ರುವಗಳನ್ನು ಧರಿಸಿ, ಬಿಳಿಯ ಹಂಸವನ್ನು ವಾಹನ ಮಾಡಿಕೊಂಡು ಆತ್ಮಸಾಧನೆಗೆ ತೊಡಗಿಕೊಂಡ ರೂಪ. ಅಧ್ಯಾತ್ಮ ಸಾಧನೆಗೆ ಬ್ರಹ್ಮಚಾರಣಿಯನ್ನು ಉಪಾಸನೆ ಮಾಡುತ್ತಾಎ. ಮಹಾಕಾಳಿಯ ಎರಡನೇ ಅವತಾರ.

ಮೇಷ ರಾಶಿ :

ನಿಮ್ಮ ನಡಿಗೆಯು ಕೆಲವರಿಗೆ ಭಯ ತರಿಸುವುದು. ಯಾರಮೇಲೂ ಸ್ವಾಮಿತ್ವವನ್ನು ಸ್ಥಾಪಿಸಲು ಹೋಗಬಹುದು. ನೆಮ್ಮದಿಯನ್ನು ಭಂಗ ಮಾಡುವ ವಿಚಾರವನ್ನು ಮರೆಯುವುದು ಉತ್ತಮ. ಆಸ್ತಿಯ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಿರಿ. ಸರ್ಕಾರಿಯ ಕೆಲಸದ ವಿಳಂಬದಿಂದ ನಿಮಗೆ ಬೇಸರವಾಗಲಿದೆ. ರಾಜಕಾರಣಿಗಳ ಕಾರ್ಯಕ್ಕೆ ಪ್ರಶಂಸೆಯು ಸಿಗಲಿದೆ. ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಸುಲಭ. ಗೊತ್ತಾಗದಂತೆ ಇನ್ನೊಬ್ಬರ ಅಧಿಕಾರವನ್ನು ಪಡೆಯುವಿರಿ. ಅದರೆ ನಿರ್ವಹಣೆ ಕಷ್ಟ. ವಿರೋಧಿಗಳನ್ನು ಸೃಷ್ಟಿ ಮಾಡಿಕೊಳ್ಳುವ ಸಾಧ್ಯತೆ ಇದೆ. ವಾಹನ ಖರೀದಿಯ ಆಲೋಚನೆಯನ್ನು ಕೈ ಬಿಡುವಿರಿ. ಸಹೋದರರ ಜೊತೆಗಿನ ಸಂಬಂಧವು ಒಂದು ಮಾತಿನಿಂದ ಹಾಳಾಗಬಹುದು. ಸಂಪತ್ತಿನ ರಕ್ಷಣೆಯು ನಿಮಗೆ ಕಷ್ಟವಾದೀತು. ಅಸಲನ್ನು ತಿಳಿಯುವ ಪ್ರಯತ್ನ ಮಾಡುವಿರಿ. ನಿಮ್ಮ ಅಮೂಲ್ಯ ವಸ್ತುವನ್ನು ನಿಮಗೆ ಗೊತ್ತಿಲ್ಲದೇ ಕೊಟ್ಟು ಬಿಡುವಿರಿ. ನಿಮ್ಮ ಮಾತುಗಳು ಅನ್ಯಾರ್ಥವನ್ನು ಕೊಡಲಿದೆ. ಬೇಡವೆಂದರೂ ಕೆಲವು ಜವಾಬ್ದಾರಿಗಳು ನಿಮ್ಮನ್ನು ಸುತ್ತಿಕೊಳ್ಳಬಹುದು. ನಿಮ್ಮ‌ ನೀವು ಬೇರೆ ರೀತಿಯಲ್ಲಿ ಬಿಂಬಿಸಿಕೊಳ್ಳಲು ಇಷ್ಟಪಡುವಿರಿ.

ವೃಷಭ ರಾಶಿ :

ಕಬ್ಬಿಣದ ಉಪಕರಣವನ್ನು ಜೋಪಾನವಾಗಿ ಬಳಸಿ. ನಿಮಗೆ ಇಂದು ಯಾವ ಭರವಸೆಯೂ ವಿಶ್ವಾಸಾರ್ಹವಾಗದು. ನಿಮ್ಮ ಮಾತುಗಳು ಆಪ್ತರ ಹೃದಯಕ್ಕೆ ನಾಟಿವುದು. ದೃಷ್ಟಿದೋಷದಿಂದ ನೀವು ಪೀಡಿತರಾಗುವ ಸಾಧ್ಯತೆ ಇದೆ. ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಕಳೆದುಕೊಂಡು ಕಳವಳಗೊಳ್ಳುವಿರಿ. ಸಹೋದ್ಯೋಗಿಗಳಿಂದ ನಿಮಗೆ ಧೈರ್ಯ ಬರುವುದು. ಹಣವನ್ನು ಪೂರ್ಣ ಕೊಡದೇ ಕಂತಿನ ವ್ಯವಹಾರಕ್ಕೆ ಹೋಗುವಿರಿ. ಆಸ್ತಿಯ ವಿಚಾರದಲ್ಲಿ ವಂಚನೆ ಆಗುವ ಸಾಧ್ಯತೆ ಇದೆ. ಅನಾರೋಗ್ಯವನ್ನು ಇಂದಿನ‌ ವಿಶ್ರಾಂತಿಯಿಂದ ಸರಿಮಾಡಿಕೊಳ್ಳುವಿರಿ. ಇನ್ನೊಬ್ಬರನ್ನು ಕಂಡು ಅಸೂಯೆಪಡುವುದನ್ನು ಬಿಟ್ಟರೆ ನೆಮ್ಮದಿಯು ಸಿಗಬಹುದು. ದಾಂಪತ್ಯವನ್ನು ಸರಿದೂಗಿಸಿಕೊಳ್ಳುವ ಕಲೆಯನ್ನು ನೀವು ಬಲ್ಲವರಾಗಿದ್ದೀರಿ. ಮನೆಯ ನೀಲನಕ್ಷೆ ಅಂತಿಮ ಮಾಡಿಕೊಳ್ಳುವಿರಿ. ಕಾರ್ಯಸ್ಥಾನದ ಬದಲಾವಣೆಯಾಗಲಿದೆ. ವಿವಾಹದ ಮಾತುಕತೆ ಗೊಂದಲದಲ್ಲಿ ಮುಕ್ತಾಯವಾಗಬಹುದು. ಹೊಸ ವಸ್ತುಗಳ ಬಳಕೆಯನ್ನು ತಿಳಿಯದೇ ಅದನ್ನು ಹಾಳು ಮಾಡಿಕೊಳ್ಳುವಿರಿ. ಪ್ರಶಾಂತಿಯನ್ನು ಬಯಸಿದರೂ ಉದ್ವೇಗಕ್ಕೆ ಒಳಗಾಗುವ ಸಂದರ್ಭವೂ ಬರಬಹುದು.

ಮಿಥುನ ರಾಶಿ :

ಲಲಿತಕಲಾವಿರಿಗೆ ಹೆಚ್ಚು ಬೇಡಿಕೆ ಬರಲಿದೆ. ಇಂದು ನಿಮ್ಮ ಜವಾಬ್ದಾರಿಯವ ಕೆಲಸಗಳ ಜೊತೆ ಸಹೋದ್ಯೋಗಿಯ ಕಾರ್ಯವನ್ನೂ ಮಾಡಬೇಕಾದೀತು. ಇಂದು ನಿಮ್ಮವರೇ ನಿಮಗೆ ವಂಚನೆ ಮಾಡಬಹುದು. ನಿಮ್ಮ ಆಸ್ತಿಯ ಮೇಲೆ ಬೇರೆಯವರ ಕಣ್ಣು ಬೀಳಲಿದೆ. ಕೆಲವರು ನಿಮ್ಮಿಂದ ಉಪಕಾರವನ್ನು ಪಡೆದುಕೊಳ್ಳುವವರಿದ್ದಾರೆ. ಅನಂತರ ನಿರ್ಲಕ್ಷ್ಯಿಸಬಹುದು. ನಿಮ್ಮ ಭದ್ರತೆಯನ್ನು ಆಧುನಿಕ ವ್ಯವಸ್ಥೆಯಿಂದ ಬಲಮಾಡಿಕೊಳ್ಳುವಿರಿ. ಸಂಗಾತಿಯನ್ನು ಹಲವು ದಿನಗಳ ಅನಂತರ ಭೇಟಿಯಾಗುವಿರಿ. ಸಂಗಾತಿಯ ಜೊತೆ ಖುಷಿಯ ಸಮಾಚಾರವನ್ನು ಹಂಚಿಕೊಳ್ಳುವಿರಿ. ಇನ್ನೊಬ್ಬರಿಂದ ಲಾಭವನ್ನು ಬಯಸುವುದು ಸರಿಯಾಗದು. ನಿಮ್ಮವರೇ ನಿಮಗ ಸಹಕಾರ ಕೊಡದಿರುವುದು ಬೇಸರ ತರಿಸಬಹುದು. ಮನೆಯ ವಸ್ತುಗಳ ಖರೀದಿಯು ಉತ್ಸಾಹದಿಂದ ಸಾಗಲಿದೆ. ಪ್ರೀತಿಯು ಕೆಲವು ಗೊಂದಲವನ್ನು ಸೃಷ್ಟಿಸೀತು. ನಿಮ್ಮ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಗುರಿಯು ಬದಲಾಗುವುದು. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸಿ, ಅವರಿಂದ ನಿಷ್ಠುರವಾಗುವಿರಿ.

ಕರ್ಕಾಟಕ ರಾಶಿ :

ಬಂಧುಗಳ ಮಾತು ನಿಮಗೆ ಅಸಮಾಧಾನ ತರಿಸುವುದು. ಭೂ ವ್ಯವಹಾರವನ್ನು ಅನುಭವಿಗಳ ಜೊತೆ ಇದ್ದು ಮಾಡಿ. ನಿಮ್ಮ ಮಾತುಕತೆಗಳಿಂದ ನೀವಿನ್ನೂ ತಿಳಿದುಕೊಳ್ಳಬೇಕು ಎಂದು ಅನ್ನಿಸುವುದು. ಹಣಕಾಸಿನ ಸಹಾಯವನ್ನು ಮಿತ್ರರಿಂದ ಪಡೆಯುವಿರಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ನಿಮಗೆ ಆತಂಕವಾಗಲಿದೆ. ಬಂಧುಗಳನ್ನು ಪ್ರೀತಿಸುವಿರಿ. ಆರೋಗ್ಯದ ತಪಾಸಣೆಯನ್ನು ಮಾಡಿಸಿಕೊಂಡು ಶರೀರದ ಬಗ್ಗೆ ತಿಳಿದಿಕೊಳ್ಳುವಿರಿ. ಸಾಲದಿಂದ ಮುಕ್ತರಾಗಲು ಎಷ್ಟೇ ಪರಿಶ್ರಮಿಸಿದರೂ ಸಾಧ್ಯವಾಗದು. ತಾಳ್ಮೆಯನ್ನು ಕಳೆದುಕೊಳ್ಳದೇ ವರ್ತಿಸುವುದು ಮುಖ್ಯವಾಗಲಿದೆ. ರಾಜಕೀಯವನ್ನು ಮನೆಗೆ ತರುವುದು ಬೇಡ. ನೀವು ದ್ವೇಷಿಸುವವರ ಬಳಿಯೇ ಸಹಾಯ ಕೇಳುವ ಸಂದರ್ಭವು ಬರಬಹುದು. ತೊಂದರೆಗಳನ್ನು ನೆನೆನೆದು ದುಃಖಿಸುವಿರಿ. ಕಾನೂನಾತ್ಮಕ ಜಯವು ನಿಮಗೆ ಸಂತೋಷವನ್ನು ಕೊಡುವುದು. ಹಿರಿಯರಿಗೆ ಕೊಡುವ ಅಗೌರವವು ನಿಮಗೂ ಮುಳುವಾಗಬಹುದು ಎಂಬ ಆಲೋಚನೆ ಮನಸ್ಸಿನಲ್ಲಿ ಇರಬೇಕಾದೀತು.

ಸಿಂಹ ರಾಶಿ :

ತಾತ್ಕಾಲಿಕ ಉದ್ಯೋಗವು ಪೂರ್ಣಕಾಲಿಕವಾಗಲಿದೆ. ನೀವು ಇಂದು ಕೆಲವು ಅನಿರೀಕ್ಷಿತ ಸವಾಲನ್ನು ಸ್ವೀಕರಿಸುವಿರಿ. ಇಂದು ನಿಮ್ಮ ಕಲ್ಪನೆಯೇ ಸುಳ್ಳಾಗಬಹುದು. ಯೋಜನೆಯ ಕೆಲಸಗಳು ಹಿಂದುಳಿಯುವುದು. ಕುಟುಂಬದ ಕೆಲಸಕ್ಕೆ ಸಹಕಾರವನ್ನು ನೀಡುವಿರಿ. ಸಂಗಾತಿಯ ಬಗ್ಗೆ ಕಾಳಜಿ ಇರಲಿದೆ. ನೀವು ಇಷ್ಟಪಟ್ಟಿದ್ದನ್ನು ಪಡೆದುಕೊಳ್ಳುವಿರಿ‌. ನಿಮ್ಮ ಗೆಲುವಿಗೆ ಬೀಗದೇ ಸಮಾಧಾನ ಚಿತ್ತದಿಂದ ಆಸ್ವಾದಿಸಿ. ಭವಿಷ್ಯದ ಹಣವನ್ನು ನೀವು ಗೌಪ್ಯವಾಗಿ ಕೂಡಿಡುವಿರಿ. ಇನ್ನೊಬ್ಬರ ಬಗ್ಗೆ ಗೊತ್ತಿಲ್ಲದೇ ಮಾತಡುವಿರಿ. ಸ್ಥಾನಮಾನವನ್ನು ಪಡೆಯಲು ನೀವು ಬಹಳ ಉತ್ಸಾಹದಿಂದ ಇರುವಿರಿ. ರಸಮಯ ಸನ್ನಿವೇಶಕ್ಕೆ ಅನ್ಯರಿಂದ ಭಂಗ. ಕಾಲವನ್ನು ವ್ಯರ್ಥ ಮಾಡಲು ಮನಸ್ಸು ಇಲ್ಲದಿದ್ದರೂ ಅನಿವಾರ್ಯವಾಗಿ ಕಳೆಯಬೇಕಾದೀತು. ಬಂಧುಗಳ ಮಾತಿಗೆ ಕೋಪಗೊಳ್ಳುವಿರಿ. ನಿಮ್ಮ ಕಾರ್ಯಗಳು ಇತರರಿಗೆ ಅಸೂಯೆಯನ್ನು ಕೊಡಬಹುದು. ನಿಮ್ಮ ದೌರ್ಬಲ್ಯಗಳು ಇನ್ನೊಬ್ಬರಿಗೆ ಆಹಾರವಾಗಬಹುದು. ನಿಮ್ಮನ್ನು ಪ್ರಶಂಸಿಸುವವರ ಜೊತೆ ಹೆಚ್ಚು ಸಮಯ ಇರುವಿರಿ.

ಕನ್ಯಾ ರಾಶಿ :

ಸ್ವಾರ್ಥಕ್ಕಾಗಿ ಮಾಡಿಕೊಂಡ ಅನುಕೂಲವೂ ಅಪಾಯವಾಗಲಿದೆ. ಚರಾಸ್ತಿಯ ಖರೀದಿಯ ಬಗ್ಗೆ ಆಪ್ತರಿಂದ ಒತ್ತಾಯವು ಬರಬಹುದು. ವೃತ್ತಿಯಲ್ಲಿ ಒತ್ತಡ ಇಲ್ಲದೇ ಇಂದು ನಿಶ್ಚಿಂತೆಯಿಂದ ಕಾರ್ಯದಲ್ಲಿ ಮಗ್ನರಾಗುವಿರಿ. ಮನಸ್ಸಿಗೆ ಘಾಸಿಯಾಗುವಂತಹ ಮಾತನ್ನು ಬಂಧುಗಳು ಆಡುವರು. ತೆಗೆದುಕೊಂಡ ಸಾಲದ ಬಗ್ಗೆ ನಿಮಗೆ ಲೆಕ್ಕಾಚಾರವಿರಲಿ. ಪ್ರೀತಿಯ ವಿಚಾರದಲ್ಲಿ ನಿಮಗೆ ಕೆಲವು ಹಿತವಚನಗಳನ್ನು ಅನುಭವಿಗಳು ಹೇಳುವರು. ಸರಳವಾಗಿರಲು ಇರುವುದು ಇಷ್ಟವಾಗಲಿದೆ. ನಂಬಿಕೆಯನ್ನು ಇಟ್ಟುಕೊಂಡು ವ್ಯವಹಾರವನ್ನು ಮುಂದುವರಿಸಿ. ನೆಮ್ಮದಿಯನ್ನು ಏಕಾಂತದಲ್ಲಿ ನೀವು ಕಾಣುವಿರಿ. ಪರರ ಅವಲೋಕನವನ್ನು ಸಮಯ ಸಿಕ್ಕಾಗ ಮಾಡುವಿರಿ. ಮನೆಗೆ ಬೇಕಾದ ಧನವನ್ನು ನೀವು ಕೊಡುವಿರಿ. ಸಹಾಯವನ್ನು ಕೇಳಿದಾಗ ನೀರೀಕ್ಷಿಸಿದಂತೆ ನಿಮ್ಮವರಿಂದ ಉತ್ತರ ಬರಲಿದೆ. ಕಾಲಹರಣ ಮಾಡಲು ಅನವಶ್ಯಕ ಮಾತುಗಳನ್ನು ಆಡುವಿರಿ. ಅನಿವಾರ್ಯತೆ ಇರುವಲ್ಲಿ ಮಾತ್ರ ನಿಮ್ಮ ಪ್ರವೇಶವಿರುವುದು ಯೋಗ್ಯವಾಗುವುದು. ನಿಮ್ಮವರನ್ಮು ನಿಮ್ಮವರೆನ್ನಲು ಹಿಂಜರಿಯುವಿರಿ.

ತುಲಾ ರಾಶಿ :

ಸಹೋದರಿಯ ಮೇಲಿನ ಪ್ರೀತಿಯಿಂದ ಆಸ್ತಿಯನ್ನು ಹಂಚಿಕೊಳ್ಳುವಿರಿ. ಉತ್ತಮ ಅಭ್ಯಾಸವನ್ನು ಸರಿಯಾಗಿ ರೂಢಿಸಿಕೊಳ್ಳುವುದು ಕಷ್ಟ. ನೀವೇ ಮಾಡಿಕೊಂಡ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾದೀತು. ಮಿತ್ರರಿಗೆ ಸಹಾಯ ಮಾಡಲು ಹೋಗಿ ನೀವು ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಆಕಸ್ಮಿಕ ಧನಲಾಭವು ನಿಮಗೆ ನೆಮ್ಮದಿಯನ್ನು ತರಬಹುದು. ಶಂಕೆಯನ್ನು ವ್ಯಕ್ತಪಡಿಸುವುದು ಸರಿಯಾದ ವ್ಯಕ್ತಿಯಾಗಿರಲಿ. ಉದ್ಯೋಗದಲ್ಲಿ ಅವಘಡವು ಸಂಭವಿಸಬಹುದು. ಸ್ವಂತಿಕೆಯನ್ನು ಬಿಡದೇ ಆಗಬೇಕಾದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಯಾವುದಾದರೂ ಕಾರಣವನ್ನು ಹೇಳಿ ನಿಮಗೆ ಬಂದ ಕೆಲಸದಿಂದ ಜಾರಿಕೊಳ್ಳುವಿರಿ. ಅಸ್ಪಷ್ಟವಾದ ಆಲೋಚನೆಯು ನಿಮ್ಮ ನಿರ್ಧಾರವನ್ನು ಬದಲಿಸೀತು. ವಿದ್ಯಾರ್ಥಿಗಳಿಗೆ ಪಾಲಕರು ಭವಿಷ್ಯದ ಬಗ್ಗೆ ತಿಳಿಸುವರು. ಮಾತನ್ನು ಆಡುವಾಗ ಗಮನವಿರಲಿ. ನಿಮ್ಮ‌ ಅನುಭವವನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಿ. ಶ್ರದ್ಧೆಯು ಕಡಿಮೆ ಆಗಲಿದೆ. ಬಂಧುಗಳು ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಿದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ.

ವೃಶ್ಚಿಕ ರಾಶಿ :

ನಿರ್ಧರಿಸಿದ ದಿನಕ್ಕಿಂತ ವಿವಾಹ ಮುಂದೆಹೋಗಿ ಬೇಸರವಾಗಲಿದೆ. ಯಾರೊಂದಿಗೋ ಸ್ಪರ್ಧೆ ಮಾಡುವುದಕ್ಕಿಂತ ಬಲಾಬಲವನ್ನು ಅರಿತು ಮುನ್ನಡೆದರೆ ನಿಮಗೇ ಕ್ಷೇಮ. ನೀವು ಕಾನೂನಾತ್ಮಕ ಹೋರಾಟಕ್ಕೆ ತಯಾರಿ ನಡೆಸುವಿರಿ. ದುರ್ಬಲ್ಯವನ್ನು ಬಳಸಿಕೊಂಡು ಆಡಿಕೊಳ್ಳಬಹುದು. ನೇರವಾದ ಮಾತಿನಿಂದ ನೀವು ನಿಷ್ಠುರರಾಗುವಿರಿ. ನಿಮ್ಮೊಳಗಾದ ಬದಲಾವಣೆಯು ನಿಮಗೆ ಆಶ್ಚಯರ್ಯವನ್ನು ಕೊಟ್ಟೀತು.‌ ಎಲ್ಲವನ್ನೂ ಒಟ್ಟಿಗೇ ಹೇರುವುದಕ್ಕಿಂತ ಹಂತಹಂತವಾಗಿ ಹೇಳಿದರೆ ಉತ್ತಮ. ಸಹನೆಯನ್ನು ನೀವು ಬೆಳೆಸಿಕೊಳ್ಳಬೇಕಾಗಿದೆ. ದೇಹಕ್ಕೆ ಬಲವಾದ ಹೊಡೆತ ಬೀಳಬಹುದು. ಅಪರಿಚಿತರ ಜೊತೆ ಮಾತನಾಡಲು ಮುಜುಗರಪಟ್ಟುಕೊಳ್ಳಬಹುದು. ಮನೆ ಕೆಲಸದಲ್ಲಿ ನೀವು ವ್ಯಸ್ತರಾಗುವಿರಿ. ಆರಾಮದಿಂದ ದಿನ ಕಳೆಯಬೇಕು ಎಂದು ಅನ್ನಿಸಬಹುದು. ಸಮೀಪದ ದೇವಾಲಯಕ್ಕೆ ಹೋಗಿ ಮನಸ್ಸಿಗೆ ಶಾಂತಿಯನ್ನು ಪಡೆದುಕೊಂಡು ಬರುವಿರಿ. ಸಿಕ್ಕ ಅಧಿಕಾರವು ಅಲ್ಪ ಕಾಲದ್ದು ಎಂಬ ಭಾವ ಇರಲಿ. ತಪ್ಪಿಗೆ ಕ್ಷಮೆ ಕೇಳಿ ನಿಮ್ಮ ದಾರಿಯನ್ನು ಸರಿಯಾಗಿಸಿಕೊಳ್ಳುವಿರಿ.

ಧನು ರಾಶಿ :

ಬೆದರಿಕೆಯಿಂದ ಎಲ್ಲಿಗೂ ಹೋಗಲಾರಿರಿ. ಇನ್ನೊಬ್ಬರ ಅನುಕರಣೆಯನ್ನು ಮಾಡುವುದು ಇಷ್ಟವಾದರೂ ಬೇಸರವಾಗದಂತೆ ಇರಲಿ. ಇಂದು ತುರ್ತು ಕಾರ್ಯಗಳು ಹೆಚ್ಚಾಗಬಹುದು. ನೀವು ಸ್ವಾರ್ಥಿಗಳಂತೆ ತೋರುವಿರಿ. ಎಲ್ಲವನ್ನೂ ನಿಮಗೆ ಬೇಕೆನ್ನುವ ಬಯಕೆ ಇರಲಿದೆ. ಆರ್ಥಿಕವಾಗಿ ವೃದ್ಧಿಯಾಗಲು ತಂತ್ರಗಳನ್ನು ಹೂಡುವ ಅವಶ್ಯಕತೆ ಇದೆ. ಪ್ರಭಾವೀ ವ್ಯಕ್ತಿಗಳ ಮೆಚ್ಚುಗೆಯಿಂದ ನಿಮಗೆ ಅನುಕೂಲವೂ ಆಗಬಹುದು. ವೃತ್ತಿಯಲ್ಲಿ ನೀವು ಸರಳ ವಿಧಾನದಿಂದ ಕೆಲಸವನ್ನು ಮಾಡುವಿರಿ. ಪ್ರೇಮಿ ಇರುವಾಗಲೇ ಹೊಸ ಪ್ರೇಮಕ್ಕೆ ಆದ್ಯತೆ ಕೊಡುವಿರಿ. ಸಿಗದ ವಸ್ತುವಿನ ಬಗ್ಗೆ ಅತಿಯಾದ ಮೋಹವನ್ನು ಬೆಳೆಸಿಕೊಳ್ಳಲಿದ್ದೀರಿ. ನಿಮ್ಮ ಪ್ರಯಾಣವನ್ನು ಮೊಟಕುಗೊಳಿಸಿ ಮನೆಗೆ ಹಿಂದಿರುಗುವಿರಿ. ನಿಮ್ಮವರನ್ನು ನೀವು ರಕ್ಷಿಸಿಕೊಳ್ಳುವುದು ಕಷ್ಟವಾಗುವುದು. ಮನಸ್ಸು ಬಹಳ ಚಂಚಲವಾಗಿ ಇರಲಿದೆ. ಅತಿಯಾದ ಪ್ರಯತ್ನದಿಂದ ಪಡೆಯುವ ಅವಶ್ಯಕತೆ ಇಲ್ಲ. ರಾಜಕಾರಣಿಗಳಿಗೆ ಸಮಾಜದಿಂದ ಗೌರವವನ್ನು ಪಡೆಯಬೇಕು ಎನ್ನುವ ಆಸೆ ಇರಲಿದೆ.

ಮಕರ ರಾಶಿ :

ಮಾತುಗಾರರು ಪ್ರಸಾರಕ್ಕೆ ಹೋಗಬೇಕಾಗುವುದು. ಸ್ಥಿರಾಸ್ತಿಯ ವಿಚಾರದಲ್ಲಿ ಸೋದರರ ನಡುವೆ ಮಾತುಗಳು ಬರಬಹುದು. ವಿವಾದಕ್ಕೆ ಅವಕಾಶ ಕೊಡದೇ ನಿರ್ವಹಿಸಿ. ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬೇಕಾದ ಆರ್ಥಿಕ ವ್ಯವಸ್ಥೆಯನ್ನು ಮಾಡಿಕೊಳ್ಳುವಿರಿ. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸಲು ಹೋಗುವಿರಿ. ಮೊದಲು ಹೇಳಿದ ಸತ್ಯವನ್ನು ನೀವು ತಿರುಚಿವಿರಿ. ಯೋಜಿತ ಕಾರ್ಯವನ್ನು ಕಾರ್ಯಗತ ಮಾಡಿ ಸಂತೋಷಗೊಳ್ಳುವಿರಿ. ಯೋಜನೆಯನ್ನು ಬದಲಿಸಿದ್ದಕ್ಕೆ ಬೇಸರಗೊಳ್ಳುವಿರಿ. ಹೇಳಲಾಗದ ಭಯವು ನಿಮ್ಮನ್ನು ಕಾಡಬಹುದು. ಮಕ್ಕಳ‌ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ಆಭರಣವನ್ನು ಖರೀದಿಸುವ ಮನಸ್ಸಾಗಲಿದೆ. ಹಳೆಯದನ್ನು ನೆನಪಿಸಿಕೊಂಡು ಬೇಸರಗೊಳ್ಳುವಿರಿ. ಕೋಪವನ್ನು ಮಾಡಬಾರದೆಂದು ತೀರ್ಮಾನಿಸಿದಾಗಲೇ ಕೋಪಕ್ಕೆ ಅವಕಾಶಗಳು ಸಿಗುವುದು. ಏಕಾಂತವು ಬೇಕು ಎನಿಸಬಹುದು. ನಿಮ್ಮ ಆಸ್ತಿಯನ್ನು ಪಡೆಯಲು ಬೇರೆಯವರ ದೃಷ್ಟಿ ಇರುವುದು.

ಕುಂಭ ರಾಶಿ :

ನಿಮಗೆ ಖರ್ಚಿಗಾಗಿ ಹಣ ಸಿಗಲಿದ್ದು, ಹದವರಿತು ಮಾಡಿದರೆ ಉತ್ತಮ. ಇಷ್ಟು ದಿನ ಕಷ್ಟವೆಂದುಕೊಂಡಿದ್ದ ಸಮಸ್ಯೆಯು ಸರಳವಾಗಿ ಇತ್ಯರ್ಥವಾಗುವುದು. ನಿಮಗೆ ಏಕಾಗ್ರತೆ ಕೊರತೆ ಅತಿಯಾಗಿ ಕಾಡುವುದು. ನೀವು ಹೇಳದೇ ಇರುವ ರಹಸ್ಯವನ್ನು ಇಂದು ನಿಮ್ಮಿಂದ ತಿಳಿಯಲಿದೆ. ಮಾನಸಿಕ ಒತ್ತಡವು ಕಡಿಮೆ ಇದ್ದರೂ ನೆಮ್ಮದಿಯ ಕೊರತೆ ಕಾಣಿಸಿಕೊಳ್ಳಲಿದೆ. ಧನಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ. ಬೇಡದ ಸಂಗತಿಗಳನ್ನು ಬೇಗನೆ ರೂಢಿಸಿಕೊಳ್ಳುವಿರಿ. ನಿಮ್ಮ ಭವಿಷ್ಯವನ್ನು ಸರಿಯಾಗಿ ಊಹಿಸಲಾರಿರಿ. ನಿಮ್ಮ ಕ್ಷಮಿಸುವ ಸ್ವಭಾವವು ಹಲವರಿಗೆ ಇಷ್ಟವಾದೀತು. ಮನೆಯಲ್ಲಿ ನೆಮ್ಮದಿ ಇದ್ದರೂ ಎಲ್ಲಿಗಾದರೂ ಹೋಗಬೇಕು ಎನಿಸುವುದು. ನೂತನ ವಸ್ತುಗಳ ಖರೀದಿಯಿಂದ ನಿಮಗೆ ಸ್ವಲ್ಪ ಸಂತೋಷವೂ ಆಗುವುದು. ಬಂಧುಗಳ ಭೇಟಿಯು ಖುಷಿಯನ್ನು ಕೊಡುವುದು. ವಿವಾಹಕ್ಕೆ ಅನ್ಯರಿಂದ ಅಡಚಣೆ ಬರಬಹುದು. ಆದಾಯಕ್ಕಿಂತ ಹೆಚ್ಚು ಖರ್ಚು ಹೆಚ್ಚಿದ್ದು ನಿಮಗೆ ನಿಯಂತ್ರಣವು ಕಷ್ಟವಾದೀತು. ಒತ್ತಡದ ವ್ಯವಹಾರದಿಂದ ಏಕಾಂತ ಬೇಕೆನಿಸುವುದು.

ಮೀನ ರಾಶಿ :

ದೇವಿಯ ದೇವಾಲಯಕ್ಕೆ ಭೇಟಿ, ಉಪಾಸನೆಯಲ್ಲಿ ಭಾಗಿ. ನಿಮ್ಮ ಕಾರ್ಯಕ್ಕೆ ಮಾಡುವ ಶ್ರಮವು ಪ್ರಶಂಸಾರ್ಹವಾಗಿರಲಿದೆ. ಯಶಸ್ಸನ್ನು ಪಡೆಯುವ ಹಂಬಲ ಬೇಡ. ಆರ್ಥಿಕತೆಯನ್ನು ಸುಧಾರಿಸಿಕೊಳ್ಳಲು ಆಪ್ತರ ಜೊತೆ ಮಾತನಾಡಿ. ಔದ್ಯೋಗಿಕ ವಲಯದಲ್ಲಿ ನಿಮ್ಮನ್ನು ಗುರುತಿಸಿಕೊಳ್ಳುವುದು ಸುಲಭವಾಗದು. ಆದರೂ ಪ್ರಯತ್ನವಂತೂ ನಿರಂತರವಾಗಿ ಇರುವುದು. ನಿಮ್ಮ ದುರ್ಬಲರಿಗೆ ಸಹಾಯವನ್ನು ಮಾಡಿ. ನಿಮ್ಮ ಪ್ರತಿಭೆಯನ್ನು ಮಾಧ್ಯಮಗಳಲ್ಲಿ ನೋಡುವರು. ನಕಾರಾತ್ಮಕ ಆಲೋಚನೆಗಳಿಗೆ ಆಸ್ಪದವನ್ನು ಕೊಡುವುದು ಬೇಡ. ಪ್ರಯಾಣವನ್ನು ಮಾಡುವ ಅನಿವಾರ್ಯವಿದ್ದರೆ ಮಾಡಿ. ಅನಗತ್ಯ ಖರ್ಚನ್ನು ನಿಲ್ಲಿಸಿ. ಕೆಲವು ಸಭೆಗಳಿಗೆ ಅನಿವಾರ್ಯವಾಗಿ ಭೇಟಿ ನೀಡಬೇಕಾಗಬಹುದು. ಸಂಕಟಗಳು ನಿಮ್ಮನ್ನು ಪರೀಕ್ಷಿಸುತ್ತವೆ ಎನ್ನುವ ನಂಬಿಕೆ ಇರುವುದು. ಸಾಮಾಜಿಕ ಚಿಂತನೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಬೇಡದ ವಿಚಾರಗಳಿಂದ ನಿಮ್ಮ ತಲೆ ಹಾಳಾಗಬಹುದು.

-ಲೋಹಿತ ಹೆಬ್ಬಾರ್-8762924271 (what’s app only)