Horoscope Today 28 September : ಇಂದು ಈ ರಾಶಿಯವರಲ್ಲಿ ಧನವನ್ನು ಇಟ್ಟು ಮೋಸ ಹೋಗುವಿರಿ
ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಆಶ್ವಯುಜ ಮಾಸ ಶುಕ್ಲ ಪಕ್ಷದ ಷಷ್ಠೀ ತಿಥಿ ಭಾನುವಾರ ಉದಾಸೀನತೆ, ಸಂಪಾದನೆ ಸುಗಮ, ದ್ವಂದ್ವ ನೀತಿ, ಅಂಗದ ಊನತೆ, ಸರಳ ಸಮಸ್ಯೆ, ಸಾಹಿತ್ಯದಲ್ಲಿ ಆಸಕ್ತಿ, ಸಕಾಲಕ್ಕೆ ಸೌಲಭ್ಯ ಇವೆಲ್ಲ ಇಂದಿನ ವಿಶೇಷ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಉತ್ತರಾಫಲ್ಗುಣೀ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಮೂಲಾ, ಯೋಗ : ಬ್ರಹ್ಮ, ಕರಣ : ವಣಿಜ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 10 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:40 – 18:10, ಗುಳಿಕ ಕಾಲ 06:10 – 07:40 ಯಮಗಂಡ ಕಾಲ 15:10 – 16:40
ನವರಾತ್ರದ ಆರನೇ ದಿನ ಕಾತ್ಯಾಯನೀ ದೇವಿ. ಚಂದ್ರನ ಬೆಳದಿಂಗಳ ಕಾಂತಿಯುಳ್ಳ, ಹುಲಿಯ ವಾಹನವನ್ನೇರಿ ದೇವಿಯು ನಾನಾ ಆಯುಧವನ್ನು ಧರಿಸಿದವಳು.
ಮೇಷ ರಾಶಿ :
ಪ್ರಯೋಗಾತ್ಮಕ ವಿಚಾರದಲ್ಲಿ ಅನ್ಯರನ್ನು ಅಶ್ರಯಿಸಿ. ಇನ್ನೊಬ್ಬರನ್ನು ನೋಡಿ ಬದುಕುವುದಕ್ಕಿಂತ ನಿಮ್ಮನ್ನೇ ನೋಡಿದರೆ ಒಳ್ಳೆಯದು. ನೀವು ಇಂದು ಸ್ನೇಹಿತನ ನಂಬಿಕೆಯ ಯಾರಿಗೋ ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ನೂತನ ವಸ್ತ್ರಾದಿಗಳು ಬಂಧುಗಳಿಂದ ನಿಮಗೆ ಸಿಗಲಿದೆ. ಕೆಲಸದಲ್ಲಿ ಬದಲಾವಣೆಯನ್ನು ನೀವು ಬಯಸುವಿರಿ. ದಾರಿ ಅಗಲವಿದೆ ಎಂದು ಹೇಗಾದರೂ ಹೋದರೆ ಬೀಳುವುದು ನೀವೇ. ಅಧಿಕಾರಿಗಳಿಂದ ಪ್ರಶಂಸೆಯು ಸಿಕ್ಕಿ ಕೆಲಸದಲ್ಲಿ ಉತ್ಸಾಹವು ಇರಲಿದೆ. ಸಲೀಸಾಗಿ ಸಾಗುವ ಕಾರ್ಯಕ್ಕೆ ಹೊಸ ವ್ಯಕ್ತಿಗಳು ಅಡ್ಡಗಟ್ಟುವರು. ಖಾಸಗಿ ಉದ್ಯೋಗಿಗೆ ಮುಖ್ಯಸ್ಥರಿಂದ ಕಿರಿಕಿರಿ ಆಗಬಹುದು. ಸ್ನೇಹಿತರ ಸಮಸ್ಯೆಯನ್ನು ಬಿಡಿಸಲು ನೀವು ಮುಂದಾಗುವಿರಿ. ನಿಮ್ಮ ಕೆಲಸಗಳನ್ನು ಮುಗಿಸುವ ಚಿಂತೆಯಲ್ಲಿ ಇರುವಿರಿ. ಹಣಕಾಸಿನ ಹರಿವಿನಿಂದ ಸಂತೋಷವಾಗಲಿದೆ. ಸಂಪಾದನೆಗೆ ಅವಕಾಶಗಳು ನಿಮಗೆ ಸಿಗಬಹುದು. ಇಂದು ಕಾರ್ಯದ ಒತ್ತಡವು ಅಧಿಕವಾಗಿ ಇರಲಿದೆ.
ವೃಷಭ ರಾಶಿ :
ವಿದ್ಯಾದಾನದ ಮಹತ್ತ್ವವು ನಿಮ್ಮ ಅನುಭವಕ್ಕೆ ಬರಲಿದ್ದು, ಅದನ್ನು ಹೆಚ್ಚು ಮಾಡುವಿರಿ. ನಿಮ್ಮ ಅಸತ್ಯಗಳನ್ನು ಜನರು ಎಂದಿನಂತೆ ನಂಬಲಾರರು. ಇಂದು ನಿವು ಏನೂ ಕೆಲಸವಿಲ್ಲದೇ ಸಮಯವನ್ನು ವ್ಯರ್ಥಮಾಡುವಿರಿ. ಅಪರೂಪದ ದ್ರವ್ಯಗಳು ಸಿಗಲಿದೆ. ಕುಟುಂಬದ ಜೊತೆ ಸಮಯವನ್ನು ಕಳೆದುದಕ್ಕೆ ಮನಸ್ಸು ನೆಮ್ಮದಿಯಿಂದ ಇರಲಿದೆ. ಗಣ್ಯರ ವ್ಯಕ್ತಿತ್ವವು ನಿಮ್ಮ ಮೇಲೆ ಪ್ರಭಾವವನ್ನು ಬೀರಬಹುದು. ಖರ್ಚನ್ನು ಕಡಿಮೆ ಮಾಡಿಕೊಂಡ ಕಾರಣ ಆರ್ಥಿಕತೆಯು ಉತ್ತಮವಾದಂತೆ ಅನ್ನಿಸುವುದು. ಸುಮ್ಮನೇ ಆಡಿದ ಮಾತುಗಳೂ ನಿಮಗೆ ತೊಂದರೆಯಾಗಬಹುದು. ಮುಖಸ್ತುತಿಗೆ ಅಂಜುವಿರಿ. ನಿಕಟವರ್ತಿಗಳೇ ನಿಮಗೆ ತೊಂದರೆಯಾಗುವುದು. ನಿಮ್ಮ ವಿರುದ್ಧ ನಡೆಯುವ ಪಿತೂರಿಯನ್ನು ತಿಳಿದುಕೊಳ್ಳುವಿರಿ. ಹಿರಿಯರಿಗೆ ಅಗೌರವವನ್ನು ತೋರುವಿರಿ. ದೇವರ ಸನ್ನಿಧಿಯಲ್ಲಿ ನಿಮಗೆ ನೆಮ್ಮದಿಯು ಸಿಗಲಿದೆ. ಆಗಿರುವ ನಕಾರಾತ್ಮಕತೆಯನ್ನು ಮರೆತು ಮುನ್ನಡೆಯುವಿರಿ. ನಿಮ್ಮ ಸಿದ್ಧಾಂತದ ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು.
ಮಿಥುನ ರಾಶಿ :
ಭೂಮಿಯ ಅಭಿವೃದ್ಧಿಗೆ ಕಾಯಕಲ್ಪ ಕೊಡಬೇಕು. ಸ್ಪರ್ಧಾತ್ಮಕವಾಗಿ ನೀವು ಗೆಲ್ಲಬೇಕು ಎನ್ನುವ ಹಂಬಲವಿರುವುದು. ಇಂದು ನಿಮಗೆ ಇಷ್ಟವಾಗದವರ ಜೊತೆ ಮಾತನಾಡುವ ಸಂದರ್ಭವು ಅನಿರೀಕ್ಷಿತವಾಗಿ ಬರುವುದು. ಶತ್ರುಗಳ ಕಾಟವನ್ನು ಕಡಿಮೆ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ. ಉದ್ಯಮವನ್ನು ಮಾಡುವವರಿಗೆ ಕೆಲವು ತೊಂದರೆಗಳು ಬರಬಹುದು. ಕುಟುಂಬದ ತೊಡಕನ್ನು ಸರಿಮಾಡಿ ಒಂದುಮಾಡುವ ಕಾರ್ಯವು ಸಫಲವಾಗುವುದು. ಅನಾರೋಗ್ಯ ಖರ್ಚಿಗೆ ಸೂಕ್ತ ಪರಿಹಾರ ಮಾಡಿಕೊಳ್ಳಬೇಕು. ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಕೆಲಸದ ಒತ್ತಡವು ಮೇಲಧಿಕಾರಿಗಳಿಂದ ಬರಲಿದೆ. ದೂರ ಪ್ರಯಾಣವನ್ನು ಮಾಡಲು ಬೇಕಾದ ತಯಾರಿಯ ಜೊತೆ ಹೊರಡಿ. ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ. ಸಹೋದರನಿಗೆ ಸಹಾಯವನ್ನು ಮಾಡುವ ಮನಸ್ಸು ಇರಲಿದೆ. ನಿಮ್ಮ ದ್ವಂದ್ವ ನೀತಿಯು ಮನೆಯವರಿಗೆ ಕಷ್ಟವಾಗುವುದು. ಬೇಕಾದ ವ್ಯಕ್ತಿಯಿಂದ ನಿಮಗೆ ಬೇಕಾದುದನ್ನು ಕೇಳಿಕೊಳ್ಳುವಿರಿ. ನೀವು ಸರಳತೆಯನ್ನು ರೂಢಿಸಿಕೊಳ್ಳುವುದು ಉತ್ತಮ. ಬೇಕಾದ ವಸ್ತುವನ್ನೇ ನೀವು ಯಾರಿಗಾದರೂ ಕೊಟ್ಟು ಕಳೆದುಕೊಳ್ಳುವಿರಿ.
ಕರ್ಕಾಟಕ ರಾಶಿ :
ಚುರುಕುತನವಿಲ್ಲದೇ ಇದ್ದರೆ ಎಲ್ಲರೂ ನಿಮ್ಮನ್ನು ಬಿಡುವರು. ಯಾರಿಂದಲೂ ನಿಮಗೆ ಸುಲಭವಾಗಿ ಮೆಚ್ಚುಗೆ ಸಿಗದು. ನೀವು ಇಂದು ದೂರದ ಪ್ರಯಾಣವನ್ನು ಮಾಡಲು ಸಾಧ್ಯವಾಗದು. ಒಂದು ಕಡೆ ಹಣದ ವ್ಯವಹಾರವನ್ನು ಮುಕ್ತಾಯ ಮಾಡಿದರೆ ಮತ್ತೊಂದು ಕಡೆಗೆ ತೆರೆದುಕೊಳ್ಳುವುದು. ಸಂಗಾತಿಯ ಒತ್ತಾಯದ ಮೇರೆಗೆ ಹೊಸ ಉದ್ಯೋಗಕ್ಕೆ ಹೋಗುವ ಮನಸ್ಸು ಮಾಡುವಿರಿ. ಘಾಸಿಯಾದ ಅಂಗದ ರಕ್ಷಣೆಯನ್ನು ಸರಿಯಾಗಿ ಮಾಡಿಕೊಳ್ಳಿ. ವಿದ್ಯಾರ್ಥಿಗಳಿಗೆ ಮನಸ್ಸು ಚಂಚಲವಾಗಿದ್ದು ಗಂಭೀರವಾಗಿ ಇದನ್ನು ಪರಿಗಣಿಸಬೇಕಾದೀತು. ಸಮಾರಂಭಗಳಿಗೆ ಭೇಟಿ ನೀಡುವಿರಿ. ಹೂಡಿಕೆಯ ಹಣವು ಎಷ್ಟೋ ವರ್ಷಗಳ ಅನಂತರ ಸಿಗಲಿದ್ದು ನಿಮ್ಮ ಸರಿಯಾಗಿ ಉಪಯೋಗಕ್ಕೆ ಬರಲಿದೆ. ಉರಿಯುವ ಬೆಂಕಿಗೆ ತುಪ್ಪವನ್ನು ಹಾಕುವುದು ಬೇಡ. ಸುಲಭವಾದ ಕೆಲಸವನ್ನು ಸಂಕೀರ್ಣ ಮಾಡಿಕೊಳ್ಳುವ ಸಾಧ್ಯತೆ ಇದೆ. ಸಂಗಾತಿಗಳು ಒಂದೆಡೆ ಕುಳಿತು ನಿಮ್ಮ ಮನಸ್ಸನ್ನು ಹಂಚಿಕೊಳ್ಳಿ. ನಿಮ್ಮ ಕರ್ತವ್ಯವನ್ನು ಮರೆಯದೇ ನಿಭಾಯಿಸಲು ಪ್ರಯತ್ನಿಸಿ.
ಸಿಂಹ ರಾಶಿ :
ಮುಖ್ಯ ಮಾರ್ಗಕ್ಕೆ ಅನೇಕ ಉಪಮಾರ್ಗಗಳು ಸೇರಿಕೊಳ್ಳುವಂತೆ ಮುಖ್ಯ ಆದಾಯಕ್ಕೆ ಉಪಾದಯಗಳೂ ಸೇರುವುವು. ಇಂದು ನಿಮಗೆ ಸಕಾಲಕ್ಕೆ ಸಿಗುವ ಸಹಾಯದಿಂದ ಸಂತೋಷವಾಗವುದು. ಇನ್ನೊಬ್ಬರ ನೋವಿಗೆ ಸ್ಪಂದನೆ ಸರಿಯಾಗಿ ಇರಲಿ. ಸಾಮಾಜಿಕ ಗೌರವವು ನಿಮಗೆ ಸಿಗಲಿದ್ದು ಇದರಿಂದ ಅಹಂಕಾರವೂ ಬರಬಹುದು. ಪರಿಚಿತರ ವಿಚಾರದಲ್ಲಿ ನೀವು ನಕಾರಾತ್ಮಕವಾಗಿ ಮಾತನಾಡುವುದು ಸರಿಯಾಗದು. ಮಕ್ಕಳಿಗೆ ನಿಮ್ಮ ಪ್ರೀತಿಯ ಅವಶ್ಯಕತೆ ಇರಲಿದೆ. ಸಂಪತ್ತಿನ ಕಡೆ ಅಧಿಕವಾದ ಗಮನ ಇರಲಿದ್ದು ಸಂಬಂಧಗಳು ಸಡಿಲಾಗುವುದು. ನಿಮ್ಮ ಪ್ರತಿಭೆಯನ್ನು ತೋರಿಸುವ ಮನಸ್ಸು ಮಾಡುವಿರಿ. ಭೂಮಿಯ ಮೇಲೆ ಹೂಡಿಕೆ ಮಾಡುವ ನಿಮ್ಮ ಯೋಜನೆಗೆ ಪ್ರೋತ್ಸಾಹವು ಸಿಗಬಹುದು. ಕಾಲಕ್ಕೆ ಸಿಗದೇ ಇರುವುದನ್ನು ಮತ್ತೆ ಪಡೆಯುವುದು ಬೇಡ. ಉದ್ಯಮದಲ್ಲಿ ನಿಮಗೆ ಆದಾಯವು ಕಡಿಮೆ ಆಗಬಹುದು. ಒಪ್ಪಿಕೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸಿ. ನಿಮ್ಮವರಿಗಾಗಿ ಕೆಲವನ್ನು ಕಳೆದುಕೊಳ್ಳುವಿರಿ. ಸಮಸ್ಯೆಯನ್ನು ಸರಳ ಮಾಡಿಕೊಂಡು ಬಗೆಹರಿಸಿಕೊಳ್ಳಿ.
ಕನ್ಯಾ ರಾಶಿ :
ನಿಮ್ಮ ಮನೆಯ ಜಾಗದಲ್ಲಿ ಹಳೆಯ ವಸ್ತುಗಳು ಸಿಗಲಿದೆ. ಅಮೂಲ್ಯವಾದುದನ್ನು ರಕ್ಷಿಸಿಕೊಳ್ಳಿ. ನಿಮ್ಮ ಹಸ್ತಕ್ಷೇಪವು ಇತರರಿಗೆ ಕಷ್ಟವಾದೀತು. ನಿಮ್ಮ ಅತಿಯಾದ ಸಲುಗೆಯು ದ್ವೇಷಕ್ಕೆ ಕಾರಣವೂ ಆಗಬಹುದು. ಆರ್ಥಿಕ ಸಹಾಯವನ್ನು ನಿಮ್ಮ ಸ್ನೇಹಿತರು ನಿಮ್ಮಿಂದ ಬಯಸುವರು. ಒತ್ತಡಗಳನ್ನು ಮರೆತು ಒಂದೆಡೆ ಇರುವುದು ಸುಖವೆನಿಸುವುದು. ಹೆಚ್ಚಿನ ಒತ್ತಡವನ್ನು ಮಾಡಿಕೊಳ್ಳದೇ ಕೆಲಸವನ್ನು ಮುಗಿಸುವಿರಿ. ವಿದೇಶಪ್ರಯಾಣವನ್ನು ಹೆಚ್ಚು ಅನಂದದಿಂದ ಮಾಡುವಿರಿ. ವಿರಾಮವನ್ನು ಅನಿವಾರ್ಯದ ಕಾರಣಕ್ಕೆ ಕೇಳಿದರೂ ಸಿಗದೇಹೋಗುವುದು. ಆತ್ಮಾವಲೋಕನದಿಂದ ನಿಮಗೆ ಬದಲವಾಣೆ ಬೇಕು ಎನಿಸಬಹುದು. ನಿಮ್ಮ ಭಾವನೆಗಳನ್ನು ಆಪ್ತರ ಜೊತೆ ಹಂಚಿಕೊಂಡು ಸಮಾಧಾನ ಪಡುವಿರಿ. ವಿವಾಹದ ಮಾತುಕತೆಗಳು ನಿಮಗೆ ಸಂತೋಷವನ್ನು ಕೊಡುವುದು. ಅನಪೇಕ್ಷಿತ ಸ್ಥಳದಲ್ಲಿ ನೀವು ಇರಲು ಬಯಸುವುದಿಲ್ಲ. ವಾತಸಂಬಂಧಿ ಖಾಯಿಲೆಯು ಹೆಚ್ಚಾಗಬಹುದು. ದಾನ ಮಾಡವ ಮನಸ್ಸಾಗಲಿದೆ. ನಿಮ್ಮ ಬಗ್ಗೆ ಪ್ರಚಾರದ ಗೀಳು ಇರಬಹುದು.
ತುಲಾ ರಾಶಿ :
ಆರಂಭದಲ್ಲಿ ಸಣ್ಣ ಹೂಡಿಕೆಯನ್ನೇ ಮಾಡುವುದು ಉತ್ತಮ. ದುಷ್ಟರ ಜೊತೆಗೂ ಒಂದು ರಾಜಿ ಮಾಡಿಕೊಳ್ಳಿ. ಇಲ್ಲವಾದರೆ ನಿಮಗೆ ನೆಮ್ಮದಿ ಇರದು. ನಿಮ್ಮ ಪ್ರೇಮವು ಇತರರಿಗೆ ಗ್ರಾಸವಾಗಬಹುದು. ವಾಹನ ಖರೀದಿಸಲು ನಿಮಗೆ ಹಣಕಾಸಿನ ಸಹಾಯವು ಸಿಗಲಿದೆ. ತಂದೆಯ ಮಾತು ನಿಮಗೆ ಕಿರಿಕಿರಿ ಎನಿಸಬಹುದು. ದಾಂಪತ್ಯದಲ್ಲಿ ಕಲಹವಿರಲಿದ್ದು ಮುಂದುವರಿಸುವುದು ಬೇಡ. ಹಗುರವಾದುದನ್ನು ಎತ್ತುವುದು ಸುಲಭ. ಭಾರವಾದುದನ್ನು ಇಟ್ಟುಕೊಳ್ಳುವುದು ಸುಲಭ. ವ್ಯಾಧಿಯ ಏರಿಳಿತವು ಆತಂಕವನ್ನು ತರಿಸುವುದು. ಹೆಚ್ಚು ಪ್ರಯತ್ನದಿಂದ ಅಲ್ಪ ಲಾಭವಾಗಲಿದೆ. ಕೃಷಿಯಲ್ಲಿ ಇಂದು ನೀವು ಹೆಚ್ಚು ತೊಡಗಿಸಿಕೊಳ್ಳುವಿರಿ. ನೇರವಾದ ಮಾತಿನಿಂದ ಇತರರಿಗೆ ನೋವನ್ನು ಉಂಟುಮಾಡುವಿರಿ. ನಿಮ್ಮ ನಿಜವಾದ ಆಪ್ತರು ನಿಮಗೆ ಗೊತ್ತಾಗುವರು. ತಾಯಿಯ ಜೊತೆ ವಾಗ್ವಾದವನ್ನು ಮಾಡಲಿದ್ದೀರಿ. ಸುಳ್ಳನ್ನು ಹೇಳುವುದು ಗೊತ್ತಾದೀತು. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ.
ವೃಶ್ಚಿಕ ರಾಶಿ :
ಬಂಧುಗಳ ಅಗಲಿಕೆಯಿಂದ ಮನಸ್ಸು ಸ್ತಬ್ಧವಾಗಲಿದೆ. ಇಂದು ಖರ್ಚು ಮಾಡುವ ಮೊದಲು ಏನು ಲಾಭವಿದೆ ಎಂಬ ಲೆಕ್ಕಾಚಾರದಲ್ಲಿ ಇರುವಿರಿ. ಇಂದು ಅಪರಿಚಿತ ಕರೆಗಳು ನಿಮ್ಮ ಕೆಲಸಕ್ಕೆ ತೊಂದರೆ ಕೊಡಬಹುದು. ದಾಂಪತ್ಯದಲ್ಲಿ ಪ್ರೀತಿಯು ಅಧಿಕವಾಗಿದ್ದು ಬಹಳ ಸಂತೋಷವನ್ನು ಅನುಭವಿಸುವಿರಿ. ಅಪರಿಚಿತರು ನಿಮ್ಮ ಮನೆಗೆ ಭೇಟಿಯಾಗಲಿದ್ದೀರಿ. ವೃತ್ತಿಯಲ್ಲಿ ನಿಮ್ಮ ಸಹಕಾರವು ಅಧಿಕವಾಗಿದ್ದು ಪ್ರಶಂಸೆಯು ಸಿಗಲಿದೆ. ಸೇವಾ ಕಾರ್ಯದಿಂದ ನಿವೃತ್ತಿಯಾಗುವ ಆಲೋಚನೆ ಬರಬಹುದು. ಕಬ್ಬಿಣದಂತಹ ವಸ್ತುವೂ ಸಮಯ ಸರಿದಾಗ ರೂಪಾಂತರವಾಗುವುದು. ತಾಳ್ಮೆಯು ನಿಮ್ಮನ್ನು ರೂಪಾಂತರ ಮಾಡುವುದು. ಭವಿಷ್ಯದ ಬಗ್ಗೆ ಭಯಗೊಂಡಿದ್ದು ಮಾರ್ಗದರ್ಶನವನ್ನು ಪಡೆಯುವಿರಿ. ನಿಮ್ಮ ಬಗ್ಗೆ ದೂರು ಸಲ್ಲಿಸುವರು. ಯಾರದೋ ಮಾತು ನಿಮಗೆ ಹಿಂಸೆಯನ್ನು ತರಬಹುದು. ಕಳೆದುಹೋದ ಸಂಬಂಧವನ್ನು ಮತ್ತೆ ಕೂಡಿಸಿಕೊಳ್ಳಲಿದ್ದೀರಿ. ಆಪ್ತರ ಮೇಲೆ ಅಪನಂಬಿಕೆ ಇಟ್ಟು ಎಲ್ಲವೂ ಹಾಳಾಗುವುದು.
ಧನು ರಾಶಿ :
ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಯಲ್ಲಿ ಭಾಗಿಯಾಗುವಿರಿ. ಇಂದು ನೀವು ಭಾವಪರವಶರಾಗುವ ಸಾಧ್ಯತೆ ಇದೆ. ನಿಮಗೆ ಇಷ್ಟವಿಲ್ಲದ ವಿಚಾರದಲ್ಲಿ ಚರ್ಚೆ ನಾಡೆಯುವುದು. ಪ್ರೀತಿ ಪಾತ್ರರನ್ನು ನೀವು ದೂರಮಾಡಿಕೊಳ್ಳುವಿರಿ. ನಿರಂತರ ಕೆಲಸವನ್ನು ಮಾಡದೇ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಭೂಮಿಯ ದಾಖಲೆಗಳನ್ನು ಸರಿಮಾಡಿಕೊಳ್ಳಲು ಶ್ರಮಿಸಬೇಕಾದೀತು. ನಿಮಗೆ ಮನ್ನಣೆ ಸಿಗದೇ ಇರುವುದಕ್ಕೆ ಸಿಟ್ಟಗುವಿರಿ. ಸಂಗದೋಷದಿಂದ ಆರಂಭವಾದ ಅಭ್ಯಾಸವು ಗೊತ್ತಾಗದಂತೆ ಮುಂದುವರಿಯುವುದು. ಎಲ್ಲ ಸಂದರ್ಭದಲ್ಲಿ ನಿಮ್ಮ ವರ್ತನೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಹಣವನ್ನು ಕಳೆದುಕೊಳ್ಳಬಹುದು. ಸಂಗಾತಿಯ ಮೇಲೆ ಸಿಟ್ಟುಗೊಳ್ಳಲಿದ್ದೀರಿ. ಸಂಗಾತಿಯು ನಿಮ್ಮನ್ನು ಬೆರಗುಗೊಳಿಸಬಹುದು. ದೂರದ ಬಂಧುಗಳ ಸಮಾಗಮವಾಗಬಹುದು. ಬೇಡವೆಂದರೂ ಕೆಲವು ಮಾತನ್ನು ಆಡುವ ಸಂದರ್ಭವು ಬರುತ್ತದೆ. ನಿಮ್ಮ ಮೆಚ್ಚುಗೆಯನ್ನು ನಿರೀಕ್ಷಿಸಿಯಾರು.
ಮಕರ ರಾಶಿ :
ತೋರಿಕೆಗೆ ಬರುವ ವಿನಯಕ್ಕೆ ಆಯುಷ್ಯ ಕಡಿಮೆ. ಇಂದು ನಿಮ್ಮ ಬಗ್ಗೆ ಬರುವ ಅಪವಾದವನ್ನು ನೀವು ಜೀರ್ಣಿಸಿಕೊಳ್ಳಲು ಕಷ್ಟವಾದೀತು. ಸಂಗಾತಿಯ ವಿಚಾರದಲ್ಲಿ ನಿಮಗೆ ಸಂಪೂರ್ಣ ತೃಪ್ತಿ ಇರದು. ಕೋಪ ಅಲ್ಪಾವಧಿಯಾದರು ಅದು ಹೆಚ್ಚು ಸಮಯವನ್ನು ಹಾಳುಮಾಡುವುದು. ಪ್ರೇಮ ಸಂಬಂಧವು ಆಕರ್ಷಕವಾಗಿದ್ದರೂ ಬಹು ಕಾಲ ಉಳಿಯದು. ಇಂದು ನೀವು ಎದುರಾಳಿಯನ್ನು ಎದುರಿಸುವುದು ಕಷ್ಟವಾದೀತು. ನಿಮ್ಮನ್ನು ತಡೆದುಕೊಳ್ಳುವುದು ಮನೆಯವರಿಗೆ ಕಷ್ಟ. ವೃತ್ತಿಯಲ್ಲಿ ಖುಷಿಯಿಂದ ಈ ದಿನವನ್ನು ಕಳೆಯುವಿರಿ. ಅನ್ಯರಿಂದ ಅಪಹಾಸ್ಯಕ್ಕೆ ಒಳಗಾಗುವಿರಿ. ಅಪರಿಚಿತ ದೂರವಾಣಿ ಕರೆಗಳು ನಿಮ್ಮನ್ನು ಮೋಸ ಮಾಡಬಹುದು. ಆಹಾರದ ವ್ಯಾಪಾರವನ್ನು ನೀವು ನಡೆಸುತ್ತಿದ್ದರೆ ಎಂದಿಗಿಂತ ಅಧಿಕ ಲಾಭವು ಆಗಬಹುದು. ಮಾತಗಳನ್ನು ಇಂದು ಕಡಿಮೆ ಆಡಲಿದ್ದೀರಿ. ಅನಧಿಕೃತ ಮಾಹಿತಿಯನ್ನು ಹಂಚಿ ಎಲ್ಲರ ಕೆಂಗಣ್ಣಿಗೆ ಗುರಿಯಾಗುವಿರಿ. ನಿಮ್ಮ ಮೇಲೆ ದೋಷಪೂರಿತ ಕಣ್ಣು ಬೀಳಬಹುದು. ಪ್ರಭಾವಿ ವ್ಯಕ್ತಿಗಳಿಂದ ತೊಂದರೆಯು ದೂರಾಗಬಹುದು.
ಕುಂಭ ರಾಶಿ :
ತಿಂಗಳ ಕಂತಿನಲ್ಲಿ ವಾಹನ ಖರೀದಿ ಮಾಡುವಿರಿ. ನೀವು ಉದ್ಯಮದಲ್ಲಿ ಅನಿರೀಕ್ಷಿತ ಬದಲಾವಣೆ ತರುವಿರಿ. ಅಪ್ತರ ಮೇಲಿನ ನಂಬಿಕೆಯು ನಷ್ಟವಾಗುವುದು. ನಿಮ್ಮ ಇಂದಿನ ಸಮಯ ಹಾಗೂ ಶಕ್ತಿಯು ಇತರರಿಗೆ ಮೀಸಲಾದೀತು. ನಿಮಗೆ ಸಂಬಂಧಪಡದ ವಿಚಾರದಲ್ಲಿ ತೊಡಗಿಸಿಕೊಳ್ಳಬೇಡಿ. ನಿಮ್ಮ ಸಂಗಾತಿಯ ಜೊತೆ ಇಂದು ಏನನ್ನೂ ಹಂಚಿಕೊಳ್ಳದೇ, ಅವರು ಇಂದು ನಿಮ್ಮ ಜೊತೆ ಜಗಳವಾಡಬಹುದು. ಆಯ್ಕೆಗಳೇ ಇಂದು ನಿಮ್ಮನ್ನು ಗೊಂದಲಕ್ಕೆ ಸಿಲುಕಿಸಬಹುದು. ಸ್ಪರ್ಧೆಯಲ್ಲಿ ಉಂಟಾದ ಉತ್ಸಾಹ ದುಃಖದಲ್ಲಿ ಪರ್ಯವಸಾನ ಆಗಬಹುದು. ಸಂಗಾತಿಯ ಮಾತಗಳು ನಿಮಗೆ ಕಿರಿಕಿರಿ ಎನಿಸಿದರೂ ಮಾತನ್ನೇ ಅನುಸರಿಸುವಿರಿ. ಖರ್ಚಿನ ಮಾರ್ಗಗಳು ಒಂದೊಂದೇ ತೆರೆದುಕೊಂಡು ನಿಮಗೆ ಬೇಸರವನ್ನು ಉಂಟುಮಾಡಬಹುದು. ಹೊಸ ಯೋಜನೆಯನ್ನು ನೀವು ಇಂದು ಆರಂಭಿಸುವಿರಿ. ಬೆಂಬಲವು ಚೆನ್ನಾಗಿರಲಿದೆ. ನಿಮ್ಮನ್ನೇ ನೀವು ಪ್ರಶಂಸಿಸಿಕೊಳ್ಳುವಿರಿ. ಹಲವು ತೊಡಕುಗಳಿಂದ ನೀವು ಮುಕ್ತರಾಗಲು ಬಯಸುವಿರಿ. ನಿಮ್ಮ ಕೆಲಸವು ನ್ಯಾಯ ಸಮ್ಮತವಾಗಿ ಇರಿ. ನೀವು ಕಾಲ್ಪನಿಕ ಪ್ರಪಂಚಕ್ಕೆ ಪ್ರಯಾಣಿಸುವಿರಿ.
ಮೀನ ರಾಶಿ :
ಲೌಕಿಕ ಸುಖವು ಸಾಕೆನಿಸುವಷ್ಟು ಅನುಭವಿಸಿದರೆ ನಿರಾಸಕ್ತಿಯೇ ಮುಂದಿನ ಮೆಟ್ಟಿಲು. ಹಾಗಾಗಿ ಅಂತಹ ಹಪಹಪಿಕೆ ಬೇಡ. ಮಕ್ಕಳ ಜೀವನವನ್ನು ಕಂಡು ಇಂದು ದುಃಖವಾಗಬಹುದು. ಆಲಸ್ಯದಿಂದ ಇರುವ ಕಾರಣ ಯಾವ ಕೆಲಸವೂ ಸರಿಯಾದ ಸಮಯಕ್ಕೆ ಮಾಡಲಾಗದು. ತಪ್ಪು ಕೆಲಸದಿಂದ ಅಧಿಕಾರಿಗಳು ಗದರಿಸುವರು. ಸೋತರೂ ಗೆದ್ದರೂ ಯಾರ ಜೊತೆಗೂ ಚರ್ಚೆಯನ್ನು ಮುಂದುವರಿಸುವುದು ಬೇಡ. ನಿಮ್ಮಿಂದ ಸ್ವಲ್ಪ ಉದಾಸೀನತೆಯೂ ಸಮಸ್ಯೆಯನ್ನು ಹೆಚ್ಚಾಗುವಂತೆ ಮಾಡುವುದು. ನೀವು ಪ್ರೀತಿಯಿಂದ ನೋವನ್ನು ಅನುಭವಿಸಬಹುದು. ಸಹೋದ್ಯೋಗಿಗಳು ಇಂದಿನ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಲು ಸಹಾಯ ಮಾಡಬಹುದು. ಏಕಾಗ್ರತೆಯಿಂದ ಮಾಡುವ ಕೆಲಸವನ್ನು ಮಾಡಲು ಕಷ್ಟವಾದೀತು. ಸಂಗಾತಿಯಿಂದ ನಿಮಗೆ ಸಲಹೆಯಂತೆ ಮುಂದುವರಿಯಿರಿ. ಆಗಬೇಕಾದ ಕೆಲಸಕ್ಕೆ ಇಂದಿನ ಸುತ್ತಾಟವು ವ್ಯರ್ಥವಾಗಲಿದೆ. ಮನೆಯ ನಿರ್ಮಾಣದ ಕಾರ್ಯವನ್ನು ಮಾಡುವುದು ಕಷ್ಟವಾಗಲಿದೆ. ಏಕಾಂತದಲ್ಲಿ ಇರಲು ಇಷ್ಟವಾಗುವುದು. ವ್ಯಾವಹಾರಿಕ ಮಾತುಗಳನ್ನು ಬಿಟ್ಟು ಬೇರೆ ಮಾತನಾಡಲು ಸಂಯಮವಿರದು.
– ಲೋಹಿತ ಹೆಬ್ಬಾರ್ – 8762924271 (what’s app only)




