AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope 24 April: ರಾಶಿ ಭವಿಷ್ಯ; ಬಂಗಾರದ ವ್ಯಾಪರಿಗಳಿಗೆ ಅದೃಷ್ಟ, ಸ್ವಂತ ಉದ್ಯೋಗವಿದ್ದರೆ ಹೆಚ್ಚಿನ ಲಾಭ

Rashi Bhavishya: 2024 ಏಪ್ರಿಲ್​​ 24 ಬುಧವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope 24 April: ರಾಶಿ ಭವಿಷ್ಯ; ಬಂಗಾರದ ವ್ಯಾಪರಿಗಳಿಗೆ ಅದೃಷ್ಟ, ಸ್ವಂತ ಉದ್ಯೋಗವಿದ್ದರೆ ಹೆಚ್ಚಿನ ಲಾಭ
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Apr 24, 2024 | 12:02 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್​​​​​ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ವಿಶಾಖಾ, ಯೋಗ: ಸಿದ್ಧಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 14 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:31 ರಿಂದ 02:05ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:49 ರಿಂದ 09:23 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 10:57 ರಿಂದ  12:21ರ ವರೆಗೆ.

ಮೇಷ ರಾಶಿ: ಶೀಘ್ರದಲ್ಲೇ ಹಣವನ್ನು ಪಡೆಯುವ ವಿಧಾ‌ನಕ್ಕೆ ಕೈ ಹಾಕುವ ಮೊದಲು ಆಪ್ತರ ಸಲಹೆಯನ್ನು ಪಡೆಯಿರಿ. ನಿಮ್ಮಿಂದ ಕುಟುಂಬಕ್ಕೆ ಉತ್ತಮವಾದ ಹೆಸರು ಬರಲಿದೆ. ಇಂದು ನಿಮ್ಮನ್ನು ಹುಡುಕಿಕೊಂಡು ಬರುವರಿಂದ ನಿಮ್ಮ ವಿವಾಹವು ನಿಶ್ಚಯವಾಗಲಿದೆ. ನಿಮ್ಮ‌‌ ಸ್ನೇಹವನ್ನು ಬಯಸಲು ಇಂದು ಅನೇಕರು ಇರಲಿದ್ದಾರೆ. ಅಮುಖ್ಯವಾದ ಕಾರ್ಯಗಳಿಗೆ ಓಡಾಟವನ್ನು ಮಾಡಬೇಕಾದೀತು. ಪಾಲುದಾರಿಕೆಯು ನಿಮಗೆ ಮೋಸದಂತೆ ಕಾಣುವುದು. ಶತ್ರುಗಳ ಬಗ್ಗೆ ಯಾರಾದರೂ ಕಿವಿಚುಚ್ಚುವರು. ನೀರಿನ ಸ್ಥಳದಲ್ಲಿ ಎಚ್ಚರಿಕೆಯಿಂದ ಇರಿ. ಆಪಾಯದ ಸೂಚನೆಯನ್ನು ಗಮನಿಸಿಕೊಳ್ಳಿ. ವ್ಯಾಪಾರವನ್ನು ಅಚ್ಚುಕಟ್ಟಾಗಿ ಮುಗಿಸುವ ಕೌಶಲವು ನಿಮ್ಮಲ್ಲಿರುವುದು. ಹೂಡಿಕೆಯ ವಿಚಾರದಲ್ಲಿ ಯಾರಾದರೂ ದಾರಿಯನ್ನು ತಪ್ಪಿಸಿಯಾರು. ಉದ್ಯಮಿಗಳ ಭೇಟಿ ಮಾಡುವಿರಿ. ಜವಾಬ್ದಾರಿಯನ್ನು ಪೂರೈಸಿ ಕೈಬಿಡಿ.

ವೃಷಭ ರಾಶಿ: ಇಂದು ಲೆಕ್ಕ ಪರಿಶೋಧಕರು ಉತ್ತಮ ಆದಾಯದ ನಿರೀಕ್ಷೆಯಲ್ಲಿ ಇರುವರು. ರಕ್ಷಣಾಕಾರ್ಯದಲ್ಲಿ ಇರುವವರಿಗೆ ಸ್ಥಾನ, ಮಾನ ಪ್ರಾಪ್ತಿಯಾಗಲಿದೆ‌. ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮುಂಗೋಪಿಯಾಗಿ ಕಾರ್ಯಗಳನ್ನು ಮಾಡಬೇಡಿ.‌ ಪ್ರೀತಿಗೆ ಬೆಲೆಯನ್ನು ಕೊಡುವ ನಿಮ್ಮ ಹವ್ಯಾಸವು ಮುಂದುವರಿಯಲಿ. ಯಾರದೋ ಸಂಕಟದಲ್ಲಿ ನೀವು ಭಾಗಿಗಳಾಗುವಿರಿ. ನಿಮ್ಮ ಸಂಗತಿ ಇಂದು ಸ್ವರ್ಗದ ಮೇಲೆ ಇದೆ, ಇಂದು ಅದು ನಿಮಗೆ ಅರ್ಥವಾಗುತ್ತದೆ. ನಿಮ್ಮ ಪ್ರಯತ್ನಕ್ಕೆ ಸರಿಯಾದ ಫಲವು ಸಿಗುವುದು. ಆದಾಯವನ್ನು ನಿರೀಕ್ಷಿತ ಖರ್ಚಿನ ಬಗ್ಗೆ ನಿಯಂತ್ರಣ ಬೇಕು. ನಿಮ್ಮ ಗುರಿಯನ್ನು ಬದಲಾಯಿಸುವುದು ಬೇಡ. ಇಂದು ಖರ್ಚಿನ ಬಗ್ಗೆ ಊಹೆಗೂ ಸಿಗದು. ಹೇಳಬೇಕಾದ‌ ವಿಷಯದಲ್ಲಿ ಮುಚ್ಚು ಮರೆ ಇಲ್ಲದೇ ಸರಿಯಾಗಿ ಹೇಳಿ.‌ ಆದುದರ ಬಗ್ಗೆ ನಿಮಗೆ ಯಾವುದೇ ಬೇಸರವನ್ನು ಮಾಡಿಕೊಳ್ಳುವುದಿಲ್ಲ. ಬೇರೆಯವರನ್ನು ಗೊಂದಲಕ್ಕೆ ಸಿಕ್ಕಿ ಹಾಕಿಸುವುದು ಬೇಡ.

ಮಿಥುನ ರಾಶಿ: ಉಪಯೋಗವಿಲ್ಲದ ವಸ್ತುಗಳನ್ನು ಬೇರೆ ಮಾಡುವಿರಿ. ಮೌನದಲ್ಲಿಯೂ ಅದು ಬಗೆಹರಿಯಬಹುದು ಎನ್ನುವ ಚಿಂತನೆಯನ್ನು ಮೊದಲು ಮಾಡಿಕೊಂಡು ಕಲಹಾದಿಗಳು ಬೇಕೇ ಎನ್ನುವ ತೀರ್ಮಾನಕ್ಕೆ ಬನ್ನಿ. ಪ್ರಯಾಣದ ಆಯಾಸವು ನಿಮ್ಮನ್ನು ದುರ್ಬಲಗೊಳಿಸುತ್ತದೆ‌. ನಿಮ್ಮ ಯೋಜನೆಗೆಳಿಗೆ ಪುರಸ್ಕಾರಗಳು ಸಿಗಬಹುದು. ಸರ್ಕಾರೀ ಕಾರ್ಯಗಳು ವಿಳಂಬವಾಗಲಿದೆ. ಚಿತ್ರಕಾರರಿಗೆ ಅವಕಾಶಗಳು ಬರಬಹುದು. ಜೀವನದಲ್ಲಿ ಅನೇಕರಿಂದ ನೀವು ಹಿಂದೆ ಬೀಳುತ್ತೀರಿ. ಇದು ನಿಮ್ಮ ಜೀವನಸಂಗಾತಿ ಯೊಂದಿಗಿನ ಅದ್ಭುತ ದಿನವಾಗಿದೆ. ನಿಮ್ಮ ಕಾಳಜಿಯು ಇತರರಿಗೆ ಮುಜುಗರವನ್ನು ತಂದೀತು. ಕಟ್ಟಡ ನಿರ್ಮಾಣದವರಿಗೆ ಹೆಚ್ಚು ಲಾಭವಾಗಲಿದೆ. ಹೊಸ ಯೋಜನೆಗಳೂ ಅವರಿಗೆ ಸಿಗಲಿದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇರಲಿದೆ. ನಿಮ್ಮ ದಕ್ಷ ಕಾರ್ಯವು ಎಲ್ಲರಿಗೂ ಮಾದರಿಯಾದೀತು. ಅನಗತ್ಯ ಅಲೆದಾಟವನ್ನು ನಿಲ್ಲಿಸಿ ಕಾರ್ಯದಲ್ಲಿ ಮಗ್ನರಾಗಿ.

ಕಟಕ ರಾಶಿ: ಇಂದು ವಿವಾಹಕ್ಕೆ ಸಂಬಂಧಿಸಿದಂತೆ ನಿಮಗೆ ಕೆಲವು ವಿಘ್ನಗಳು ಬರಲಿವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಸೈನ್ಯ ಮುಂತಾದ ರಕ್ಷಣಾವಲಯದಲ್ಲಿ ಕಾರ್ಯವನ್ನು ಮಾಡಲು ಆಸಕ್ತಿಯುಳ್ಳವರಿಗೆ ಉತ್ತಮ ಮಾರ್ಗಗಳು ಸಿಗಲಿವೆ. ಸಂಗಾತಿಗಳ ಕಲಹವು ಮಕ್ಕಳ ಕಾರಣದಿಂದ ತಣ್ಣಗಾಗುತ್ತದೆ. ಧಾರ್ಮಿಕ ಕಾರ್ಯಗಳಿಗೆ ಸಂಪತ್ತು ಬಳಕೆಯಾಗಲಿದೆ. ಅಪರೂಪದ ವ್ಯಕ್ತಿಗಳು ನಿಮ್ಮ ಸಂಪರ್ಕಕ್ಕೆ ಬರಲಿದ್ದಾರೆ. ಕೃಷಿಯ ಉತ್ಪನ್ನದಿಂದ ಅಧಿಕ‌ಲಾಭವಿರಲಿದೆ. ನಿಮ್ಮನ್ನು ವಿರೋಧಿಸುವವರು ಹೆಚ್ಚಾದಾರು. ವಿರೋಧಿಗಳನ್ನು ಲೆಕ್ಕಿಸದೇ ನಿಮ್ಮಷ್ಟಕ್ಕೆ ಇರುವಿರಿ. ನಿಂತ ಕಾರ್ಯಕ್ಕೆ ಚಾಲನೆ ನೀಡುವಿರಿ. ನಿದ್ರೆ ಇಲ್ಲದೇ ಮಾನಸಿಕ‌ವಾಗಿ ಕುಗ್ಗುವಿರಿ. ಸ್ಪರ್ಧೆಗಾಗಿ ನಡೆಸಿದ ನಿಮ್ಮ ಶ್ರಮವು ವ್ಯರ್ಥವಾದೀತು. ನಿಮ್ಮ‌ ಮೇಲಿರುವ ಭಾವನೆಯು ದೂರಾಗಬಹುದು. ಅಮೂಲ್ಯ ಸಮಯವನ್ನು ಆಲಸ್ಯದಿಂದ ಕಳೆಯುವಿರಿ.

ಸಿಂಹ ರಾಶಿ: ಪಿರ್ತಾರ್ಜಿತ ಆಸ್ತಿಯನ್ನು ಅನುಭವಿಸುವ ಕ್ಷಣ ನಿಮ್ಮದಾಗಿದೆ. ಶತ್ರುಗಳು ನಿಮ್ಮ ಚಲನವಲನಗಳನ್ನು ಗಮನಿಸುತ್ತ ಇರುವರು. ತುಂಬಾ ದಿನಗಳಿಂದ ಕಾಡುವ ಸಮಸ್ಯೆಗೆ ಇಂದು ಪರಿಹಾರ ದೊರಕಲಿದೆ. ಅಪವಾದಗಳು ಬರಬಹುದು.‌ ಜಾಣ್ಮೆಯಿಂದ ಅದನ್ನು ದೂರಮಾಡಿಕೊಳ್ಳಿ. ಪ್ರತ್ಯಕ್ಷವಾಗಿ ಕಂಡಿದ್ದು ಪ್ರಮಾಣೀಕರಿಸಿ ನೋಡುವುದು ಉತ್ತಮ. ಪ್ರಯಾಣವನ್ನು ಅನಿವಾರ್ಯ ಮಾಡಿಕೊಳ್ಳಬೇಡಿ. ಸಮಯದ ಚಕ್ರವು ವೇಗವಾಗಿ ಸುತ್ತಿದಂತೆ ಕಾಣಿಸುವುದು. ಇಂದು ಹಲವು ಕಾರ್ಯಗಳನ್ನು ಒಂದೇ ಸಲ ಮಾಡಬೇಕಾಗಬಹುದು. ಎಲ್ಲವೂ ಆಗಿಹೋದಂತೆ ನಿಮಗೆ ಅನ್ನಿಸಬಹುದು. ನಿಮ್ಮವರನ್ನು ಬಿಟ್ಟು ಹೋದವರ ಬಗ್ಗೆ ಆಲೋಚನೆ ಬೇಡ. ವಸತಿಯಲ್ಲಿ ತೊಂದರೆ ಬಂದ ಕಾರಣ ಬದಲಾಯಿಸುವ ಸಂದರ್ಭವೂ ಬರಬಹುದು. ಸಂತಾನದ ವಿಚಾರದಲ್ಲಿ ಅಶಾಂತಿ ಮೂಡಬಹುದು. ನಿಮ್ಮವರೆಂದುಕೊಂಡವರು ನಿಮ್ಮವರಾಗದೇ ಇರಬಹುದು.

ಕನ್ಯಾ ರಾಶಿ: ನಿಮ್ಮ ಸ್ವಂತ ಉದ್ಯೋಗವಿದ್ದರೆ ಲಾಭವನ್ನು ಕಾಣುವಿರಿ. ಧಾರ್ಮಿಕ ಕಾರ್ಯಗಳನ್ನು ಮಾಡುವವರಿಗೆ ಇಂದು ಹೆಚ್ಚಿನ ಲಾಭವನ್ನು ನಿರೀಕ್ಷಿತ ಲಾಭವನ್ನು ಕಾಣಬಹುದಾಗಿದೆ. ಕಾರಣಾಂತ ರಗಳಿಂದ ಧನವ್ಯಯವಾದೀತು. ನಂಬಿಕೆಯನ್ನು ಉಳಿಸಿಕೊಳ್ಳಲು ಬಹಳ ಪ್ರಯತ್ನವನ್ನು ಮಾಡಬೇಕಾದೀತು. ಉತ್ತಮರ ಸಹವಾಸ ನಿಮ್ಮ ಜೀವನಕ್ಕೆ ತಿರುವನ್ನು ಕೊಟ್ಟೀತು. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ನಿಮ್ಮನ್ನು ಮಾರ್ಗಭ್ರಷ್ಟರನ್ನಾಗಿ ಮಾಡುವ ಕೆಲಸವು ನಿಮಗೆ ಗೊತ್ತಿಲ್ಲದೇ ನಡೆಯುತ್ತಿರುತ್ತದೆ. ಇಂದು ಹಿರಿಯರಿಂದ ಕೆಲವು ಹಿತೋಪದೇಶವನ್ನು ಕೇಳಬೇಕಾದೀತು. ವ್ಯಾಪಾರದ ಸ್ಥಳದಲ್ಲಿ ಇಕ್ಕಟ್ಟು ಉಂಟಾಗಬಹುದು. ತಾಳ್ಮೆಯನ್ನು ಕಳೆದುಕೊಳ್ಳುವುದು ಬೇಡ. ಅನಾರೋಗ್ಯದ ಕಾರಣ ಉತ್ಸಾಹದ ಯಾವ ಕಾರ್ಯವನ್ನೂ ಮಾಡಲಾಗದು. ದಿನದ ಕೆಲಸವನ್ನು ಮಾಡುವಷ್ಟರಲ್ಲಿ ನಿಮ್ಮ ಸಮಯವು ಕಳೆದುಹೋಗುವುದು.

ತುಲಾ ರಾಶಿ: ನಿಮ್ಮ ಕಾರ್ಯದಕ್ಷತೆಗೆ ಉನ್ನತವಾದ ಸ್ಥಾನಮಾನಗಳು ಪ್ರಾಪ್ತವಾಗುವುವು. ಮಾನಸಿಕ ತೊಂದರೆಯನ್ನು ಅನುಭವಿಸುವಿರಿ. ಅವಕಾಶಗಳು ನಿಮ್ಮ ಕೈತಪ್ಪುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಅನಾರೋಗ್ಯದಿಂದ ಪೀಡಿತರಾಗುವಿರಿ. ಪರೀಕ್ಷೆಯ ಭಯವು ನಿಮ್ಮನ್ನು ಅತಿಯಾಗಿ ಕಾಡುವುದು. ಭೂವ್ಯವಹಾರದಲ್ಲಿ ನಷ್ಟವಾಗುವುದು. ನ್ಯಾಯಸಮ್ಮತವಾದ ಮತ್ತು ಉದಾರವಾದ ಪ್ರೀತಿಯಿಂದ ಪ್ರಶಂಸೆ ಸಾಧ್ಯ. ನಿಮ್ಮ ಸಾಮರ್ಥ್ಯವನ್ನು ವರ್ಧಿಸಲು ಕೌಶಲವೂ ಇರಲಿ. ಸ್ತ್ರೀಯರು ತಮ್ಮ ಕೌಶಲವನ್ನು ತೋರಿಸುವರು. ಪಾಲುದಾರಿಕೆಯ ಭೂ ಸಂಬಂಧದ ಕಾರ್ಯದಿಂದ ಲಾಭವಾಗಲಿದೆ. ದಾಂಪತ್ಯವು ಪರಸ್ಪರ ಸೌಹಾರ್ದದ ಮಾತುಗಳಿಂದ ನೆಮ್ಮದಿ ಸಿಗುವುದು.‌ ಮಕ್ಕಳ‌ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ಅವಶ್ಯಕತೆಯನ್ನು ನೋಡಿ. ಯಾರಸದರೂ ಅಸತ್ಯವನ್ನು ಆಡಿದರೆ ಅದನ್ನು ಸರಳವಾಗಿ ಕಂಡು ಹಿಡಿಯುವಿರಿ.‌

ವೃಶ್ಚಿಕ ರಾಶಿ: ನಿಮ್ಮ ಸಾಮಾಜಿಕವಾಗಿ ಮನ್ನಣೆಯನ್ನು ಕಂಡು ಅಸೂಯೆಪಡಬಹುದು. ಬಂಗಾರದ ವ್ಯಾಪರಿಗಳಿಗೆ ಲಾಭವಾಗಲಿದೆ. ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳಲಿದ್ದೀರಿ. ಕುಟುಂಬದಿಂದ ಅಶುಭವಾದ ಸುದ್ದಿಯು ನಿಮಗೆ ತಿಳಿಯಲಿದೆ‌. ಪ್ರಾಮಾಣಿಕತೆಯು ಇಂದು ನಿಮಗೆ ವರವಾಗಿ ಅನೇಕರ ಪ್ರಶಂಸೆಗೆ ಕಾರಣವಾಗಲಿದೆ. ಪ್ರೀತಿಪಾತ್ರರ ಆಗಮನದಿಂದ ಮನಸ್ಸು ಸಂತೋಷಗೊಳ್ಳಲಿದೆ‌. ನಿಮ್ಮನ್ನು ಖುಷಿಪಡಿಸಲು ನಿಮ್ಮ ಜೀವನ ಸಂಗಾತಿ ಇಂದು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ನಿಮ್ಮ ಕೆಲವು ವರ್ತನೆಯನ್ನು ಮಿತ್ರರು ವಿರೋಧಿಸುವರು. ಅಮೂಲ್ಯ ವಸ್ತುಗಳನ್ನು ಖರೀದಿಸುವುದು ಕಷ್ಟವಾದರೂ ಮಾಡುವಿರಿ. ನಿಮ್ಮ‌ ಸಾಮರ್ಥ್ಯಕ್ಕೆ ಕೊಟ್ಟ ಜವಾಬ್ದಾರಿಯು ಸಣ್ಣದಾಗಿರುವುದು. ನಿಮ್ಮ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆಯು ಘಟಿಸುವುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸಿ ಪಡೆದುಕೊಳ್ಳುವಿರಿ.

ಧನು ರಾಶಿ: ನಿಮ್ಮ ದಾಂಪತ್ಯದಲ್ಲಿ ಉಂಟಾದ ವಿರಸವು ನ್ಯಾಯಾಲಯದ ಮೆಟ್ಟಿಲೇರಲೂಬಹುದು. ಆಸ್ತಿಯ ವಿಚಾರದಲ್ಲಿ ಕಲಹಗಳು ಉಂಟಾಗಬಹುದು. ನಿಮ್ಮ ಬಗ್ಗೆ ಅಪಪ್ರಚಾರಗಳು ಕೇಳಿ ಬರಬಹುದು. ಸ್ನೇಹಿತರೊಂದಿಗೆ ಇಂದು ಕಾಲವನ್ನು ಕಳೆಯುವಿರಿ. ದೂರದ ಪ್ರಯಾಣದಿಂದ ನಿಮಗೆ ಸುಖವಿಲ್ಲ. ಆರ್ಥಿಕಸ್ಥಿತಿಯ ಸುಧಾರಣಯಾಗಲಿದೆ. ಸಂಗಾತಿಯ ಯೋಚನೆಗಳಿಗೆ ಪ್ರತಿಸ್ಪಂದನೆಯು ಸಿಗಲಿದೆ. ಹಳೆಯ ನೋವುಗಳು ಕಾಡಬಹುದು. ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ನೋಡಿಕೊಳ್ಳಲು ಹೋಗಿ ನಿಮ್ಮ ಆರ್ಥಿಕತೆಯು ಹಿಂದಡಿ ಇಡಬಹುದು. ಸಮಾರಂಭದಲ್ಲಿ ಹಳೆಯ ಸ್ನೇಹಿತರ ಭೇಟಿಯಾಗುವುದು. ಆಕಸ್ಮಿಕ ಧನಪ್ರಾಪ್ತಿಯಿಂದ ಹರ್ಷಗೊಳ್ಳುವಿರಿ. ಶ್ರೇಷ್ಠ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ವಿದ್ಯಾರ್ಥಿಗಳು ಯಾರ ಬೆಂಬಲಕ್ಕೂ ಕಾಯದೇ ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಮುನ್ನುಗ್ಗುವುದು ಸೂಕ್ತ.

ಮಕರ ರಾಶಿ: ಇಂದು ನೀವು ಮೌಲ್ಯಯುತವಾದ ವಸ್ತುಗಳನ್ನು ಆಸೆಪಟ್ಟು ಖರೀದಿಸುವಿರಿ. ಹಣದ ಪ್ರಾಮುಖ್ಯವನ್ನು ತಿಳಿದುಕೊಳ್ಳುವ ಸಮಯವಿಂದು. ನಿಮ್ಮ ವಿದ್ಯುದುಪಕರಣದಿಂದ ನಿಮಗೆ ನಷ್ಟವಾಗಲಿದೆ. ಅಗತ್ಯವಿದ್ದಷ್ಟು ಮಾತ್ರ ಮಾತನಾಡಿ. ನಿಮ್ಮ ಅಸೂಯಾಗುಣದಿಂದ ನಿಮಗೇ ತೊಂದರೆಯಾದೀತು. ಹಿರಿಯರ ಅನಾರೋಗ್ಯದಲ್ಲಾಗುವ ವ್ಯತ್ಯಾಸದಿಂದ ಆತಂಕವು ಸೃಷ್ಟಿಯಾದೀತು. ಕೆಲವು ಸನ್ನಿವೇಶಗಳಲ್ಲಿ ನಿಯಂತ್ರಣ ಅವಶ್ಯಕ. ಇಂದು ನೀವು ಇತರರಿಗೆ ಹೇಳುವ ಉತ್ಸಾಹವನ್ನು ಮಾಡುವುದಿಲ್ಲ. ನಿಮ್ಮ ಜೀವನಸಂಗಾತಿ ಇಂದು ನಿಮಗೆ ಪೂರ್ಣ ಬಲ ಮತ್ತು ಪ್ರೀತಿಯನ್ನು ನೀಡುವರು. ಎಲ್ಲರ ಜೊತೆಗಿದ್ದರೂ ಒಂಟಿಯಂತೆ ಅನ್ನಿಸುವುದು.‌ ಇಂದು ಸ್ತ್ರೀಯರಿಗೆ ಮಾನಿಸಿಕವಾದ ಕಿರಿಕಿರಿ ಇರಲಿದ್ದು ತೊಂದರೆಯಾಗಬಹುದು. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ಪಡೆಯುವಿರಿ. ನಿಮ್ಮ‌ ವಸ್ತುಗಳ ಮೇಲೆ ಅತಿಯಾದ ಮೋಹವು ಇರುವುದು.

ಕುಂಭ ರಾಶಿ: ಪುಣ್ಯಸ್ಥಳಗಳ ಭೇಟಿಗೆ ಆಸಕ್ತಿಯನ್ನು ಹೊಂದುವಿರಿ. ಆಪ್ತರ ಜೊತೆ ಸಮಾಲೋಚನೆ ನಡೆಸುವಿರಿ. ಕಣ್ಣಿನ ತುರಿಕೆ, ಕಣ್ಣಿನಲ್ಲಿ ನೀರೂರುವ ಅಥವಾ ಕೆಂಗಣ್ಣಿನ ರೋಗವು ನಿಮ್ಮನ್ನು ಕಾಡಬಹುದು. ವೈದ್ಯರನ್ನು ಸಂಪರ್ಕಿಸಿ. ಹಿರಿಯ ಆಶೀರ್ವಾದವೇ ನಿಮ್ಮ ಕಾರ್ಯಗಳಿಗೆ ಬೆಂಬಲವಾಗಲಿದೆ. ಹಣದ ವ್ಯಯವು ನಿಮ್ಮನ್ನು ಆತಂಕಕ್ಕೆ ತಳ್ಳಬಹುದು. ವಿವೇಚನೆ ಇರಲಿ. ದಂಪತಿಗಳ ನಡುವೆ ನಡೆದ ಮಾತುಕತೆಗಳು ಮುಂದಿನ ಹಂತಕ್ಕೂ ಹೋಗಬಹುದು. ನೀವು ಸಾಲ ಪಡೆಯಲು ಯೋಜನೆ ಮಾಡಿದ್ದರೆ ದೀರ್ಘಕಾಲ‌ ಅದನ್ನು ಇಟ್ಟುಕೊಳ್ಳುವುದು ಬೇಡ. ನಿಮ್ಮ ಪ್ರೀತಿಯು ನಿಜವಾಗಿಯೂ ಅದ್ಭುತ ಎನಿಸಬಹುದು. ನಿಮ್ಮ ಅಂದಾಜು ಮೀರಬಹುದು. ಆದಾಯಕ್ಕೆ ನಾನಾ ಮೂಲವನ್ನು ಆಯ್ಕೆ ಮಾಡಿಕೊಳ್ಳುವಿರಿ. ಆಕಸ್ಮಿಕವಾಗಿ ಆರೋಗ್ಯವು ಹದ ತಪ್ಪಬಹುದು. ನಿಮ್ಮನ್ನು ನೀವು ಬದಲಿಸಿಕೊಳ್ಳಬೇಕಾಗುವುದು.

ಮೀನ ರಾಶಿ: ಇಂದು ಒತ್ತಡದ ನಡುವೆಯೂ ನಿಮ್ಮ ಕಾರ್ಯನಿರ್ವಹಣೆಗೆ ಪ್ರಂಶಸೆಗಳು ಸಿಗಲಿವೆ. ಹಣದ ಸಮಸ್ಯೆಗಳಿಂದ ಮುಕ್ತರಾಗುವಿರಿಸಿ. ಅನೇಕ ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ. ವೈದ್ಯವೃತ್ತಿಯನ್ನು ಆರಿಸಿಕೊಂಡ ನಿಮಗೆ ಗೌರವಾದರಗಳು ಸಿಗಲಿವೆ. ತಂದೆ, ತಾಯಿಯರ ಆರೋಗ್ಯದ ಬಗ್ಗೆ ಗಮನವಿರಲಿ. ಕೃಷಿ ಉತ್ಪನ್ನಗಳ ಉದ್ಯಮದವರಿಗೆ ಹೆಚ್ಚು ಲಾಭವಾಗಲಿದೆ‌. ಉನ್ನತ ಉದ್ದೇಶಗಳು ಸಾಕಾರಗೊಳ್ಳುವ ದಿನವಾಗಿದೆ. ಹಬ್ಬದ ವಾತಾವರಣವು ಚೆನ್ನಾಗಿರಲಿದೆ‌. ವೈವಾಹಿಕ ಜೀವನವನ್ನು ನಡೆಸುವ ಬಗ್ಗೆ ನಿಮಗೆ ಸಲಹೆಗಳು ಸಿಗುವುದು. ಭೂಮಿಗೆ ಸಂಬಂಧಿಸಿದ ವಿಚಾರಗಳನ್ನು ಇತ್ಯರ್ಥ ಮಾಡಿಕೊಳ್ಳುವುದು ಉಚಿತ. ಉನ್ನತ ವಿದ್ಯಾಭ್ಯಾಸದ ಪ್ರಯುಕ್ತ ಹೊರಗಡೆ ಇರಲಿರುವಿರಿ. ನಿಮ್ಮ ಕಾರ್ಯವು ಆಗಬೇಕಾದರೆ ಓಡಾಟ ಅನಿವಾರ್ಯವಾಗಲಿದೆ. ನಿಮ್ಮ ಕೆಲಸವು ಬದಲಾವಣೆಯಾಗಬಹುದು.

ಲೋಹಿತ ಹೆಬ್ಬಾರ್ – 8762924271 (what’s app only)

Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್