Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 29ರ ದಿನಭವಿಷ್ಯ

ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 28ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 29ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ Edited By:

Updated on: Jan 29, 2026 | 8:19 AM

ಸಂಬಂಧಗಳನ್ನು ನಿರ್ವಹಿಸುವುದು ಇದೆಯಲ್ಲಾ ಅದು ಬಹಳ ತಲೆನೋವು. ತಪ್ಪು ಯಾರ ಕಡೆಯಿಂದಲೇ ಆದರೂ ಕ್ಷಮೆಯನ್ನು ಮಾತ್ರ ನಾವೇ ಕೇಳಬೇಕು. ಸಂಬಂಧ, ಪ್ರೀತಿ- ಪ್ರೇಮ, ದಂಪತಿ ಮಧ್ಯೆ ಕಾಡುವ ಜಗಳ- ಕಲಹಗಳಿಗೆ ಬ್ರೇಕ್ ಹಾಕುವುದಕ್ಕೆ ರೋಸ್ ಕ್ವಾರ್ಟ್ಜ್ ಸ್ಟೋನ್ ಒಂದೊಳ್ಳೆ ಪರಿಹಾರ. ಜನ್ಮಸಂಖ್ಯೆ 7, 8, 9ರ ಜನರಿಗೆ ಈ ಸಲಹೆ ಖಂಡಿತಾ ಸಹಾಯ ಆಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಮಗೆ ಸಿಗಬೇಕು ಅಂತಿದ್ದರೆ ಹೇಗಿದ್ದರೂ ಸಿಕ್ಕೇ ಸಿಗುತ್ತದೆ ಎಂಬ ಥಿಯರಿ ಏನೋ ಸರಿ. ಆದರೆ ಆ ಕಾರಣದಿಂದ ನಿಮ್ಮ ಅಭಿಪ್ರಾಯವನ್ನು ಹೇಳುವಂತೆ ಕೇಳಿದರೂ ಬಾಯಿ ಬಿಟ್ಟು ಏನನ್ನೂ ಹೇಳದಿರುವುದು ಎಷ್ಟು ಸರಿ? ಈ ದಿನ ನಿಮಗೆ ಸಿಗುವ ಅವಕಾಶ ಚೆನ್ನಾಗಿ ಬಳಸಿಕೊಳ್ಳಿ. ಬಾಯಿ ಬಿಟ್ಟು ಹೇಳುವುದರೊಂದಿಗೆ ಬೇಕಾದದ್ದನ್ನು ಪಡೆದುಕೊಳ್ಳಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನೀವು ಬೇರೆ ಮತ್ತು ನಿಮ್ಮ ಆಲೋಚನೆ, ಲೆಕ್ಕಾಚಾರಗಳು ಬೇರೆ. ಉಳಿದವರಿಗಿಂತ ನೀವು ಬೇರೆ ಯಾವುದೋ ಲೆಕ್ಕ ಹಾಕಿಕೊಂಡಿದ್ದೀರಿ ಅಂತಾದಲ್ಲಿ ಸಂಶಯ ಪಡುವುದಕ್ಕೆ ಹೋಗಬೇಡಿ. ಅಂದುಕೊಂಡಿದ್ದು, ಅಂದುಕೊಂಡ ರೀತಿಯಲ್ಲಿಯೇ ಜಾರಿಗೆ ತನ್ನಿ. ನಾಲ್ಕಾರು ಜನಕ್ಕೆ ನಿಮ್ಮಿಂದ ಈ ದಿನ ಸಹಾಯ ಆಗುವ ಯೋಗ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಆರೋಗ್ಯದ ಬಗ್ಗೆ ಇನ್ನೊಂಚೂರು ಗಮನ ಕೊಡಬೇಕಿತ್ತು ಎಂದು ಬಲವಾಗಿ ಅನಿಸಲಿದೆ. ನಿಮ್ಮ ಉಳಿತಾಯದ ಹಣವನ್ನು ತೆಗೆದು ಸ್ವಲ್ಪ ರಿಸ್ಕ್ ಇರುವ ವ್ಯವಹಾರದಲ್ಲಿಯೇ ಹೂಡಿಕೆ ಮಾಡುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಆದರೆ ಈ ದಿನ ಯಾವ ಕಾರಣಕ್ಕೂ ಕುಟುಂಬ ಸದಸ್ಯರ ಮೇಲೆ ನಿಮ್ಮ ಸಿಟ್ಟು ತೋರಿಸಬೇಡಿ.

ಲೇಖನ- ಸ್ವಾತಿ ಎನ್.ಕೆ.

Published On - 12:45 am, Thu, 29 January 26

Swathi NK

ಸ್ವಾತಿ ಎನ್.ಕೆ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನೆಂಪೆ ಎಂಬ ಗ್ರಾಮದವರು. ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಮಲೆನಾಡಿನ ಅಡುಗೆ ಮಾಡುವ ಪದ್ಧತಿ ಇವೆಲ್ಲ ಆಸಕ್ತಿ, ಅಚ್ಚುಮೆಚ್ಚು. ಸಮುದ್ರದ ಪರಿಸರಕ್ಕೆ ಪ್ರವಾಸ ಹೋಗುವುದು, ಹೊಸ ಗ್ಯಾಜೆಟ್ ಗಳ ಬಗ್ಗೆ ತಿಳಿಯುವುದು ತುಂಬ ಇಷ್ವವಾದ ಸಂಗತಿ. ಪಡೆದಿರುವುದು ಕಾಮರ್ಸ್ ಡಿಗ್ರಿ. ಅಲ್ಪ ಕಾಲ ಅಲ್ಲಿಲ್ಲಿ ಕೆಲಸ ಮಾಡಿದ ಅನುಭವ ಜತೆಗಿದೆ. ಉಳಿದಂತೆ ಬೆಂಗಳೂರಲ್ಲಿ ಸದ್ಯದ ವಾಸ.

Follow Us