Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 30ರ ದಿನಭವಿಷ್ಯ
ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 30ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ನೀವು ಯಾರ ಜತೆಗೆ ನಿತ್ಯ ವ್ಯವಹರಿಸುತ್ತೀರೋ ಅಥವಾ ನೀವು ಕೆಲಸ ಮಾಡುವ ಸ್ಥಳವೋ ಬಹಳ ಬುದ್ಧಿವಂತಿಕೆಯಿಂದ ಮಾತನಾಡುತ್ತಾ ಇದ್ದಾರೆ, ನೀವು ಪಡುವ ಶ್ರಮಕ್ಕೆ ಹಾಗೂ ಬರುವ ಫಲಿತಾಂಶಕ್ಕೆ ಇನ್ನೊಂದಿಷ್ಟು ಸ್ಮಾರ್ಟ್ ವರ್ಕ್ ಮಾಡಬೇಕು ಎಂದೇನಾದರೂ ಅನಿಸುತ್ತಾ ಇದ್ದಲ್ಲಿ ‘ಗ್ರೀನ್ ಅವೆಂಚೂರಿಯನ್’ ಧರಿಸಿ. ನಿಮ್ಮಲ್ಲಿ ಆಗುವ ಬದಲಾವಣೆ ಕಂಡು ಬೇರೆಯವರು ಆಶ್ಚರ್ಯಕ್ಕೆ ಒಳಗಾಗುತ್ತಾರೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ನೀವು ಯಾರಿಗಾದರೂ ಸಾಲ ನೀಡಿದ್ದಲ್ಲಿ ಒಂದಲ್ಲ ಒಂದು ಕಾರಣ ಕೊಡುತ್ತಾ ವಾಯಿದೆ ಮುಂದಕ್ಕೆ ಹಾಕುತ್ತಾ ಬರುತ್ತಿದ್ದಾರೆ ಎಂದಾದಲ್ಲಿ ಈ ದಿನ ಗಟ್ಟಿಯಾಗಿ ಪ್ರಯತ್ನಿಸಿ. ಸ್ವಲ್ಪ ಗಟ್ಟಿಯಾದ ಧ್ವನಿಯಲ್ಲಿ ಕೇಳಿದರೂ ಅಡ್ಡಿಯಿಲ್ಲ, ಆ ಸಾಲ ವಸೂಲಿ ಆಗುವ ಅವಕಾಶ ಹೆಚ್ಚಿದೆ. ದಿಢೀರ್ ದೂರ ಪ್ರಯಾಣ ಮಾಡಬೇಕಾಗುತ್ತದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ಉದ್ಯೋಗ ಮಾಡುತ್ತಿದ್ದವರು ಏನಾದರೊಂದು ಕಾರಣಕ್ಕೆ ಕೆಲಸವನ್ನು ಬಿಟ್ಟು, ಗ್ಯಾಪ್ ಬಂದಿದೆ ಎಂದಾದಲ್ಲಿ ಈಗೇನಾದರೂ ಮತ್ತೆ ಪ್ರಯತ್ನ ಮಾಡುತ್ತಾ ಇದ್ದರೆ ಈ ದಿನ ಹೆಚ್ಚು ಪ್ರಯತ್ನವನ್ನು ಮಾಡಿ. ನಿಮಗೆ ಬರುವಂಥ ರೆಫರೆನ್ಸ್ ಗಳನ್ನು ಗಂಭೀರವಾಗಿ ಪರಿಗಣಿಸಿ. ದೀರ್ಘಾವಧಿಗೆ ಸಹಾಯ ಆಗುವಂಥ ಬೆಳವಣಿಗೆಗಳು ಆಗಲಿವೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ನನಗೆ ಗೊತ್ತಿರುವ ವಿಚಾರ ಇಷ್ಟೇ ಅಂತ ನೀವೇ ಒಂದು ಕಂಫರ್ಟ್ ಝೋನ್ ಒಳಗೆ ಇದ್ದು ಬಿಟ್ಟಿದ್ದಲ್ಲಿ ಅದರಿಂದ ಹೊರಗೆ ಬರುವಂಥ ದಿನ ಇದಾಗಿರುತ್ತದೆ. ಹೊಸ ಕಾಂಟ್ಯಾಕ್ಟ್ ಗಳು ಸಹಾಯಕ್ಕೆ ಬರುತ್ತವೆ. ಬಹಳ ಸಮಯದಿಂದ ನೀವು ಆಸೆ ಪಟ್ಟಿದಂಥ ವಸ್ತುವೊಂದು ಖರೀದಿ ಮಾಡುವಂಥ ಯೋಗ ಈ ದಿನ ನಿಮಗೆ ಇದೆ.
ಲೇಖನ- ಸ್ವಾತಿ ಎನ್.ಕೆ.
