
ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಲಾಭವಿಲ್ಲ, ಬಂದ ಹಣವೆಲ್ಲ ಯಾವುದಾದರೂ ಒಂದು ರೀತಿಯಲ್ಲಿ ಖಾಲಿಯಾಗುತ್ತದೆ ಎನ್ನುವವರೇ ಬಹಳ ಜನ. ಅದಕ್ಕೆ ಅವರದೇ ಆದ ಹತ್ತಾರು ಕಾರಣಗಳು ಇದ್ದರೂ ಅವರಲ್ಲ ಅವರವರು ಪಡೆದುಕೊಂಡಿದ್ದು ಎನ್ನುವುದೂ ಆಗಾಗ ಹೇಳುತ್ತಾರೆ. ಜ್ಯೋತಿಷ್ಯದಲ್ಲಿ ಇರುವ ಅನೇಕ ಯೋಗಗಳು ಮನುಷ್ಯನ ಉನ್ನತಿ ಅವನತಿ, ಯಥಾಸ್ಥಿತಿಗಳನ್ನು ತಿಳಿಸುತ್ತವೆ. ಅನುಭವವನ್ನು ಅರಿತು ಪರಿಹಾರವನ್ನೂ ಕಂಡುಕೊಳ್ಳಬಹುದು. ಅಂತಹ ಯೋಗಗಳಲ್ಲಿ ಕಾಳಸರ್ಪ ಯೋಗವೂ ಒಂದು. ಈ ಯೋಗವು ರಾಹು ಮತ್ತು ಕೇತುಗಳ ನಡುವೆ ಎಲ್ಲ ಗ್ರಹಗಳು ಇದ್ದಾಗ ಉಂಟಾಗುತ್ತದೆ.
ಸದ್ಯ ಈ ಯೋಗ ಸಂಭವಿಸಿದೆ. ಕುಂಭದಲ್ಲಿ ರಾಹು ಸಿಂಹದಲ್ಲಿ ಕೇತು ಇರುವ ಕಾರಣ ಮತ್ತೆಲ್ಲ ಗ್ರಹಗಳೂ ಅವುಗಳ ಒಳಗೇ ಬರುತ್ತವೆ. ಹೀಗೆ ಇದ್ದಾಗ ಮನುಷ್ಯನಿಗೆ ಅಸಫಲತೆ, ಶ್ರಮಕ್ಕೆ ಅಪೂರ್ಣ ಫಲ ಸಿಗುವುದು.
ಮೇ ತಿಂಗಳ ೨೧ ನೇರ ದಿನಾಂಕದಿಂದ ಜುಲೈ ತಿಂಗಳ ೨೮ರವರೆಗೆ ಜನಿಸಿದ ಎಲ್ಲರಿಗೂ ಕಾಳಸರ್ಪಯೋಗ ಬರಲಿದೆ ಹಾಗೂ ಕುಂಭ, ಮೀನ, ಮೇಷ, ವೃಷಭ, ಮಿಥುನ, ಕರ್ಕಾಟಕ ಸಿಂಹ ರಾಶಿಯವರಿಗೆ ಉಂಟಾದ ಕಾಳಸರ್ಪಯೋಗವು ವಿರುದ್ಧ ಪರಿಣಾಮವನ್ನು ಉಂಟುಮಾಡುವುದು. ಕನ್ಯಾ, ತುಲಾ, ವೃಶ್ಚಿಕ ಧನು ಮಕರ ಈ ರಾಳಿಗೆ ಈ ಯೋಗದಿಂದ ತೊಂದರೆ ಇಲ್ಲ.
ನಿಮ್ಮ ಉದ್ಯಮ, ವಿದ್ಯಾಭ್ಯಾಸ, ಗೃಹನಿರ್ಮಾಣ, ಉದ್ಯೋಗ, ಸ್ಥಾನಮಾನಪ್ರಾಪ್ತಿ, ವಿವಾಹ ಈ ಎಲ್ಲದರಲ್ಲಿಯೂ ನೀವು ಎಣಿಸಿದ ರೀತಿಯಲ್ಲಿ ಆಗದು. ನಿಮ್ಮ ಯೋಜನೆ ಪೂರ್ಣಪ್ರಮಾಣದಲ್ಲಿ ಸರಿಯಾಗಿಯೇ ಇದ್ದರೂ ಫಲಿಸುವುದು ಕಷ್ಟ. ಈ ಯೋಗವು ನಿಮ್ಮ ಎಲ್ಲ ಪ್ರಯತ್ನವನ್ನೂ ತಾನೇ ನುಂಗಿಹಾಕುತ್ತದೆ. ಸದ್ಯದ ಸ್ಥಿತಿ ಹೀಗಾದರೆ, ಜನಿಸುವಾಗ ಈ ಯೋಗವಿದ್ದರೆ ಆಮರಣಾಂತ ಇದರ ಫಲವನ್ನು ಅನುಭವಿಸಬೇಕು.
ಇದನ್ನೂ ಓದಿ: ಪುರಿ ಜಗನ್ನಾಥ ದೇವಸ್ಥಾನಕ್ಕೆ ಅವಿವಾಹಿತ ಜೋಡಿ ಏಕೆ ಭೇಟಿ ನೀಡಬಾರದು?
ಕಾಳಸರ್ಪಯೋಗ ಶಾಂತಿಯನ್ನು ದೋಷ ಪರಿಹಾರಾರ್ಥವಾಗಿ ಮಾಡಬಹುದು. ನಿರಂತರವಾಗಿ ರಾಹು ಹಾಗೂ ಕೇತುವಿನ ಸ್ತೋತ್ರವನ್ನು ಮಾಡುವುದು, ಪೌರಾಣಿಕ ಮಹಿಮೆಯುಳ್ಳ ಸುಬ್ರಹ್ಮಣ್ಯನ ಕ್ಷೇತ್ರಕ್ಕೆ ಹೋಗುವುದು, ನಾಗದೇವರಿಗೆ ಆಶ್ಲೇಷಾ ನಕ್ಷತ್ರ ಹಾಗೂ ಷಷ್ಠಿಯಲ್ಲಿ ಪೂಜೆ ಸಲ್ಲಿಸುವುದು, ಬ್ರಹ್ಮಚಾರಿಗೆ ಭೋಜನ ಮಾಡಿಸುವುದು, ಗೋವಿಗೆ ಗ್ರಾಸ ನೀಡುವುದು, ಕಾಳಹಸ್ತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವುದು, ಅಲ್ಲಿ ಆಶ್ಲೇಷಾ ಬಲಿಯನ್ನು ಮಾಡಿಸುವುದು, ನಾಗರ ಬಿಂಬವನ್ನು ದಾನವಾಗಿ ನೀಡುವುದು, ನಾಗರ ಪ್ರತಿಷ್ಠೆ ಹೀಗೆ ಹತ್ತಾರು ವಿಧಿವಿಧಾನಗಳನ್ನು ಮಾಡಬಹುದು. ಆದರಡ ಎಲ್ಲವೂ ಶುದ್ಧ ಮನಸ್ಸಿನಿಂದ, ಸಂಕಲ್ಪಪೂರ್ವಕವಾಗಿ ಮಾಡಿದರೆ ಪರಿಹಾರ ಸಾಧ್ಯ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ