Horoscope: ಶತ್ರುಗಳೂ ನಿಮಗೆ ಪರೋಕ್ಷವಾಗಿ ಉಪದೇಶ ಕೊಡಬಹುದು
ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ಡಿಸೆಂಬರ್ 03: ಕಿವಿಮಾತಿನಿಂದ ಬುದ್ಧಿ ಅನ್ಯ ಮಾರ್ಗವನ್ನು ಹಿಡಿಯಬಹುದು. ನೀವು ಇಂದು ಅನವಶ್ಯಕ ವಿವಾದಗಳಿಗೆ ಮಾತನ್ನು ಹರಿದುಬಿಡುವುದು ಬೇಡ. ಇಂದು ನಿಮ್ಮ ಮಾತು ಮಿತಿಯನ್ನು ಮೀರಬಹುದು. ಹಾಗಾದರೆ ಡಿಸೆಂಬರ್ 03ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನುರಾಧಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಮೂಲಾ, ಯೋಗ: ಶೂಲಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 44 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:12 ರಿಂದ 04:36ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:33 ರಿಂದ 10:58 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 12:23 ರಿಂದ 01:47 ರವರೆಗೆ.
ತುಲಾ ರಾಶಿ: ಅತಿಯಾದ ಅವಲಂಬನೆ ಬೇಡ. ಸ್ವತಂತ್ರರಾಗುವ ಬಗ್ಗೆ ಯೋಚನೆ ಬರಲಿ. ಚಾಣಾಕ್ಷತನದಿಂದ ಗಿಟ್ಟಿಸಿಕೊಂಡ ಅಧಿಕಾರವು ಸಮಯಮಿತಿಯಲ್ಲಿ ಇರುತ್ತದೆ. ಮನಸ್ಸನ್ನು ನಿಯಂತ್ರಿಸಲು ದುಶ್ಚಟಕ್ಕೆ ಬೀಳುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣವು ಹಾಳಾಗಬಹುದು. ಕಲಿಕೆಯ ವಿಚಾರದಲ್ಲಿ ನೀವು ಹಿಂದುಳಿಯುವಿರಿ. ಪ್ರೀತಿಯಿಂದ ನಿಮಗೆ ದುಃಖವಾಗುವ ಸಂದರ್ಭವಿದೆ. ನಿಮ್ಮನ್ನು ನಿಂದಿಸುವವರ ವಿರುದ್ಧ ಅತಿಯಾದ ಕೋಪ ಮಾಡಿಕೊಳ್ಳುವಿರಿ. ಶತ್ರುಗಳೂ ನಿಮಗೆ ಪರೋಕ್ಷವಾಗಿ ಉಪದೇಶ ಕೊಡಬಹುದು. ಹಣಕಾಸಿನ ವಿಚಾರದಲ್ಲಿ ಅನಾದರ ಬೇಡ. ನಿಮ್ಮ ವಿದ್ಯಾರ್ಥಿಗಳಿಂದ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಳ್ಳುವಿರಿ. ನಿಮ್ಮ ಸಮಸ್ಯೆಯು ನಗಣ್ಯವಾಗಿದ್ದರೂ ಅದನ್ನು ದೊಡ್ಡ ಮಾಡಿಕೊಳ್ಳುವಿರಿ. ಆರೋಗ್ಯವು ನಿಮಗೆ ವರವಾಗಿದ್ದರೂ ಕೆಲವು ಸಮಯ ತೊಂದರೆ ಕೊಡುವುದು. ನಿಮ್ಮವರನ್ನು ನೀವು ಸಂಪೂರ್ಣವಾಗಿ ಮರೆಯುವಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವು ರೂಢಿಯಾಗಬಹುದು.
ವೃಶ್ಚಿಕ ರಾಶಿ: ಬೆಂಬಲಿಗರು ನಿಮ್ಮನ್ನು ತಡೆಯಬಹುದು. ನಿಮ್ಮ ಮಾತುಗಳು ಚಾಣಾಕ್ಷತನದಂತೆ ಇರುವುದು. ನಿಮ್ಮ ಸಾಧನೆಯನ್ನು ಹಂಚಿಕೊಳ್ಳುವಿರಿ. ಯೋಗ್ಯ ಪುರಸ್ಕಾರ, ಮಾತುಗಳು ಸಿಗಲಿವೆ. ಆದಾಯಕ್ಕಾಗಿ ಅನ್ಯ ಮಾರ್ಗವನ್ನೂ ನೀವು ಅವಲಂಬಿಸಬಹುದು. ದೇವತಾಕಾರ್ಯದಿಂದ ನಿಮಗೆ ಇಂದಿನ ಎಲ್ಲ ಕಾರ್ಯಗಳೂ ಸುಗಮವಾಗುವುದು. ಆರ್ಥಿಕವಾಗಿ ವಂಚನೆಗೆ ಸಿಲುಕಿದ್ದು ಎಷ್ಟೋ ದಿನದ ಮೇಲೆ ಗೊತ್ತಾಗುವುದು. ನಿಮ್ಮ ಉಪಸ್ಥಿತಿಯನ್ನು ಗೌರವಿಸುವರು. ಮಾತಿನ ಮೇಲೆ ನಿಯಂತ್ರಣವು ತಪ್ಪಬಹುದು. ವಿಳಂಬದ ಕಾರ್ಯದಿಂದ ನೀವು ವ್ಯಥೆ ಪಡುವಿರಿ. ನಿಮಗೆ ಧೈರ್ಯವನ್ನು ತುಂಬಲು ಸಂಗಾತಿಯ ಸಹಾಯವು ಸಿಗುವುದು. ನಿದ್ರಾಹೀನತೆಯಿಂದ ನಿಮಗೆ ಕೆಲವು ತೊಂದರೆಗಳು ಆಗಬಹುದು. ಅನಪೇಕ್ಷಿತ ಖರ್ಚನ್ನು ಮಾಡುವುದು ಬೇಡ. ನಿಮ್ಮನ್ನು ನೀವು ಕುಗ್ಗಿಸಿಕೊಳ್ಳುವುದು ಬೇಡ. ವೃತ್ತಿಯಲ್ಲಿ ಒಂದೇ ಕೆಲಸವನ್ನು ಇಬ್ಬರು ಮಾಡಲು ಹೋಗಿ ವೈಮನಸ್ಯ ಉಂಟಾಗುವುದು.
ಧನು ರಾಶಿ: ಅಜ್ಞಾನದ ಆವರಣದಿಂದ ನೀವು ಮುಕ್ತರಾಗಬೇಕು. ನೀವೇ ನಿಮ್ಮನ್ನು ಸರಿಮಾಡಿಕೊಳ್ಳುವ ಬಗ್ಗೆ ಯೋಚಿಸಿದರೆ ಉತ್ತಮ. ಕಾನೂನಿನಿಂದ ಜಯಸುವ ಉತ್ಸಾಹವು ಇಂದು ನಿರುತ್ಸಾಹದಲ್ಲಿ ಕೊನೆಯಾಗಲಿದೆ. ಸಂಗಾತಿಯ ಮಾನಸಿಕ ಸ್ಥಿತಿಯು ಬದಲಾಗಬಹುದು. ಹತ್ತಾರು ವಿಚಾರಗಳನ್ನು ನೀವು ಏಕಕಾಲದಲ್ಲಿ ಚಿಂತಿಸಿ ತಲೆಯನ್ನು ಹಾಳು ಮಾಡಿಕೊಳ್ಳುವಿರಿ. ಎಲ್ಲವೂ ವಿಧಿಯಂತೆ ಆಗುತ್ತದೆ ಎಂಬ ಸತ್ಯವನ್ನು ನೀವು ಅರಿತರೂ ದುಃಖಿಸುವಿರಿ. ನಿಮ್ಮರನ್ನು ನೀವು ದೂರ ಮಾಡಿಕೊಳ್ಳುವಿರಿ. ನಿಮಗೆ ಬರುವ ವಿವಾಹ ಸಂಬಂಧವನ್ನು ಬೇರೆ ಬೇರೆ ಕಾರಣಗಳನ್ನು ಕೊಟ್ಟು ನಿರಾಕರಿಸುವಿರಿ. ವಾಹನ ಚಾಲನೆಯಲ್ಲಿ ನುರಿತವರಾದರೂ ಎಚ್ಚರಿಕೆಯಿಂದ ಓಡಿಸಿ. ನಿಮ್ಮ ನೇರ ನುಡಿಯಿಂದ ಇನ್ನೊಬ್ಬರಿಗೆ ನೋವಾದೀತು ಎಂಬ ಆಲೋಚನೆ ಇರಲಿ. ಒಂದೇ ಕಾರ್ಯವನ್ನು ಬಹಳ ದಿನಗಳ ವರೆಗೆ ಮಾಡುವಿರಿ. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುವುದು.
ಮಕರ ರಾಶಿ: ಸುಮ್ಮನೆ ಮಸ್ತಾಪಕ್ಕಿಂತ ದೂರ ಉಳಿಯುವುದೇ ಶ್ರೇಯಸ್ಕರ. ಸಮಾನಮನಸ್ಕರು ಸೇರಿದಾಗ ಮಾತ್ರ ನಿಮ್ಮ ಕಾರ್ಯವು ಸಾಧುವಾಗುವುದು. ನಿಮ್ಮ ಮನಸ್ಸು ಕೆಲವು ಮಾತಿನಿಂದ ದುರ್ಬಲವಾಗಬಹುದು. ಕಲಹರಣಕ್ಕೆ ಯಾರ ಜೊತೆಗಾದರೂ ಮಾತನಾಡುತ್ತಾ ಇರುವಿರಿ. ನೀವು ವಿರಾಮವನ್ನು ಆನಂದದಿಂದ ಕಳೆಯುವಿರಿ. ಸ್ನೇಹಿತರ ಮೇಲೆ ಸಂದೇಹ ಉಂಟಾಗಬಹುದು. ಹಣಕಾಸಿನ ವಿಚಾರವನ್ನು ನೀವು ಯಾರ ಬಳಿಯೂ ಹೇಳುವುದಿಲ್ಲ. ಕಛೇರಿಯಲ್ಲಿ ನಿಮ್ಮನ್ನು ನೋಡುವ ದೃಷ್ಟಿಯು ಬದಲಾಗುವುದು. ಭೂವ್ಯವಹಾರಕ್ಕೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳ ಸಹಾಯ ಪಡೆಯಿರಿ. ಒಂದಿಷ್ಟು ಕಾರ್ಯದಲ್ಲಿ ಒತ್ತಡವಿರಲಿದೆ. ನಿಮ್ಮದೇ ಬಳಗವನ್ನು ಮಾಡಿಕೊಂಡು ಸಮಯವನ್ನು ಕಳೆಯುವಿರಿ. ಯಾರ ಒತ್ತಾಯಕ್ಕೂ ಮಣಿಯದೇ ನಿರ್ಧಾರವನ್ನು ಬದಲಿಸಿಕೊಳ್ಳಲು ಹೋಗುವುದಿಲ್ಲ. ಅಪರಿಚಿತರ ಬಂಧನದಿಂದ ನೀವು ಮುಕ್ತಾರಾಗಲು ಕಷ್ಟವಾಗಬಹುದು. ಸ್ನೇಹ ಸಂಬಂಧದಲ್ಲಿ ಅನ್ಯರ ಆಗಮನವಾಗಲಿದೆ.
ಕುಂಭ ರಾಶಿ: ನಿಮ್ಮ ಅಭಿಪ್ರಾಯವನ್ನು ಹೇಳಲು ಸ್ವತಂತ್ರರು. ಆದರೆ ಅದನ್ನು ಹೇರುವ ಕೆಲಸ ಮಾಡಬೇಡಿ. ಆಪ್ತರಿಂದ ನಿಮಗೆ ಪರೋಕ್ಷವಾಗಿ ನೋವು ಬರಬಹುದು. ಇಂದು ನಿಮ್ಮ ವೃತ್ತಿಕ್ಷೇತ್ರದಲ್ಲಿ ನೀವು ಕಲಹಕ್ಕೆ ದಾರಿ ಮಾಡಿಕೊಡುವಿರಿ. ಮಕ್ಕಳಿಗೆ ಧೈರ್ಯವನ್ನು ಹೇಳುವಿರಿ. ಜ್ವರವು ಕಾಣಿಸಿಕೊಂಡೀತು. ಸ್ನೇಹಿತರನ್ನು ಕಳೆದುಕೊಳ್ಳುವಿರಿ. ಇಷ್ಟಪಡುವವರಿಗೆ ಸಮಯವನ್ನು ಕೊಡಲಾಗದು. ನಿಮ್ಮನ್ನು ಸಂತೋಷಪಡಿಸಲು ನಿಮ್ಮನ್ನು ಹೊಗಳುವರು. ಪುಣ್ಯಸ್ಥಳಕ್ಕೆ ಹೋಗಲು ಇಚ್ಛಿಸುವಿರಿ. ನಿಮ್ಮ ದಾರಿಯನ್ನು ಸುಗಮ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ನೀವು ಯಾರ ಸಹಕಾರವನ್ನೂ ಅನಪೇಕ್ಷಿತವಾದೀತು. ವೈದ್ಯ ವೃತ್ತಿಯಲ್ಲಿ ಇರುವವರು ಯಶಸ್ಸನ್ನು ಗಳಿಸುವರು. ನಿಮಗೆ ಅನೇಕ ವಿಚಾರಗಳನ್ನು ತಿಳಿಯಬೇಕು ಎಂಬ ಆಸೆಯು ಅತಿಯಾಗುವುದು. ಹೊಸ ಉದ್ಯೋಗಕ್ಕೆ ಪ್ರವೇಶ ಪಡೆಯುವಿರಿ. ನಿಮ್ಮ ಅನುಕೂಲವನ್ನು ನೋಡಿ ಖರ್ಚು ಮಾಡಿ. ನಿಮ್ಮ ವರ್ತನೆಯು ಸಂಗಾತಿಗೆ ಇಷ್ಟವಾಗದು. ವ್ಯಾಪಾರದ ನಿರ್ಲಕ್ಷ್ಯದಿಂದ ಅಲ್ಪ ನಷ್ಟವಾಗುವುದು.
ಮೀನ ರಾಶಿ: ಕಿವಿಮಾತಿನಿಂದ ಬುದ್ಧಿ ಅನ್ಯ ಮಾರ್ಗವನ್ನು ಹಿಡಿಯಬಹುದು. ನೀವು ಇಂದು ಅನವಶ್ಯಕ ವಿವಾದಗಳಿಗೆ ಮಾತನ್ನು ಹರಿದುಬಿಡುವುದು ಬೇಡ. ಇಂದು ನಿಮ್ಮ ಮಾತು ಮಿತಿಯನ್ನು ಮೀರಬಹುದು. ಅಧಿಕ ವೇತನದ ಉದ್ಯೋಗಕ್ಕೆ ಅವಕಾಶವು ಬರಬಹುದು. ಯೋಚಿಸಿ ತೀರ್ಮಾನ ಮಾಡಿ. ಸ್ನೇಹಕ್ಕೆ ಒತ್ತಾಯ ಮಾಡುವುದು ಬೇಡ. ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧಾನ ಆಗುವುದು. ನಿಮ್ಮನ್ನು ಇಷ್ಟಪಡುವವರಿಗೆ ಸಮಯವನ್ನು ಕೊಡದೇ ಅಹಂಕಾರ ತೋರಿಸುವಿರಿ. ಅಪರೂಪದ ಆಹಾರದಿಂದ ದೇಹಕ್ಕೆ ತೊಂದರೆ. ಕೆಲವು ವಿಚಾದಲ್ಲಿ ನಿಮಗೆ ತಾಳ್ಮೆ ಕಡಿಮೆ ಎನಿಸಬಹುದು. ಉತ್ಸಾಹದಿಂದ ನಿಮಗೆ ಕೆಲವು ಕಾರ್ಯಗಳು ಸಾಧ್ಯವಾಗುವುದು. ನೋವನ್ನು ನುಂಗಲು ಕಷ್ಟವಾದೀತು. ದಿನಚರಿಯ ವ್ಯತ್ಯಾಸದಿಂದ ಆರೋಗ್ಯ ತಪ್ಪುವುದು. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು.