Horoscope: ಈ ರಾಶಿಯವರು ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸು ಗಳಿಸುವರು
2 ಫೆಬ್ರವರಿ 2025: ಭಾನುವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ನಿಮ್ಮ ಪ್ರತಿಭೆಗೆ ಸೂಕ್ತ ಸ್ಥಾನ ಸಿಗಲಿದೆ. ಮಕ್ಕಳ ವಿವಾಹದ ಬಗ್ಗೆ ಒಂದೊಂದೇ ಚಿಂತೆ ಆರಂಭವಾಗುವುದು. ಹಾಗಾದರೆ ಫೆಬ್ರವರಿ 2ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ಪಂಚಮೀ ನಿತ್ಯನಕ್ಷತ್ರ : ರೇವತೀ, ಯೋಗ : ಶಿವ, ಕರಣ : ಭದ್ರ, ಸೂರ್ಯೋದಯ – 07 – 01 am, ಸೂರ್ಯಾಸ್ತ – 06 – 31 pm, ಇಂದಿನ ಶುಭಾಶುಭಕಾಲ : ರಾಹು ಕಾಲ 17:05 – 18:31, ಯಮಘಂಡ ಕಾಲ 12:47 – 14:13, ಗುಳಿಕ ಕಾಲ 15:39 – 17:05.
ತುಲಾ ರಾಶಿ: ಉದ್ಯಮದಲ್ಲಿ ಆದ ನಷ್ಟವನ್ನು ತುಂಬಲಾಗದೇ ಕಣ್ಣಿಗೆ ಕಾಣದಂತೆ ಇರುವರು. ಸಮಯ ಹಾಗೂ ವ್ಯಕ್ತಿಗಳನ್ನು ಅರಿತು ಮುನ್ನುಗ್ಗುವುದು ಉಚಿತ. ನಿಮ್ಮ ನೈಪುಣ್ಯತೆಯನ್ನು ಯಾರೂ ಊಹಿಸಲಾರರು. ನಿಮ್ಮನ್ನು ಎದುರಗೆ ಹೊಗಳಿ, ನಿಮ್ಮಿಂದ ಆಗಬೇಕಾದುದನ್ನು ಮಾಡಿಸಿಕೊಂಡಾರು. ಅಪರಿಚಿತರು ನಿಮ್ಮನ್ನು ಬೇಗ ವಿಶ್ವಾಸಕ್ಕೆ ತೆಗೆದುಕೊಳ್ಳುವರು. ಅಜಾಗರೂಕತೆಯಿಂದ ಬಿದ್ದು ಗಾಯ ಮಾಡಿಕೊಳ್ಳಬಹುದು. ಕೈಗೊಂಡ ಕಾರ್ಯಗಳಲ್ಲಿ ಪೂರ್ಣ ಜಯವು ಪ್ರಾಪ್ತವಾಗುವುದು. ನಟನೆಯನ್ನು ಇಷ್ಟಪಡುವವರಿಗೆ ಅವಕಾಶಗಳು ಸಿಗುವುದು. ಪ್ರಾಮಾಣಿಕತೆಗೆ ಸಿಕ್ಕ ಪ್ರಶಂಸೆಯಿಂದ ಇನ್ನಷ್ಟು ಉತ್ಸಾಹ ಇರುವುದು. ಯಾರದೋ ಕಾರ್ಯಕ್ಕೆ ನೀವು ದಂಡಿಸಿ ಕೆಲಸ ಮಾಡಬೇಕಾದೀತು. ಸ್ನೇಹಿತರಿಗೆ ಔತಣವನ್ನು ಕೊಡಿಸುವಿರಿ. ನಿಮ್ಮ ಮಾತುಗಳು ಹಾಸ್ಯದಿಂದ ಕೂಡಿರಲಿದೆ. ಹಠದ ಸ್ವಭಾವದಿಂದ ಸುಲಭವಾಗಿ ಸಿಗುವುದನ್ನು ಕಳೆದುಕೊಳ್ಳಬೇಕಾದೀತು.
ವೃಶ್ಚಿಕ ರಾಶಿ: ಇಂದು ಬೇರೆ ಕಾರ್ಯಗಳು ಇರುವ ಕಾರಣ ಕೊಟ್ಟ ಕೆಲಸವನ್ನು ಬೇಗನೆ ಮಾಡುವಿರಿ. ಆರಂಭದಿಂದಲೇ ನಿಮ್ಮೊಳಗೆ ಆತ್ಮವಿಶ್ವಾಸ ಇರಲಿದ್ದು ಅತ್ಯುತ್ಸಾಹದಿಂದ ದಿನವಿಡೀ ಕೆಲಸವನ್ನು ಮಾಡುವಿರಿ. ಆಸ್ತಿ ವ್ಯವಹಾರದ ನಿರ್ಧಾರಗಳು ನಿಮ್ಮ ಪರವಾಗಿರಬಹುದು. ಆದಾಯದ ವಿಚಾರದಲ್ಲಿ ಮನೆಯಿಂದ ಮೆಚ್ಚುಗೆ ಸಿಗಲಿದೆ. ಅನಿವಾರ್ಯವಿದ್ದರೂ ಧನವ್ಯಯದ ಕಾರಣ ಖರೀದಿಯನ್ನು ಮುಂದೂಡುವಿರಿ. ಸಂಗಾತಿಯ ಜೊತೆ ಬಂಧುಗಳ ಮನೆಗೆ ಹೋಗುವಿರಿ. ಇಂದು ನೀವು ತಾಯಿಯ ಪ್ರೀತಿಯಿಂದ ವಂಚಿತರಾಗಬಹುದು. ನಿಮ್ಮ ಮೌನವೇ ಹಲವಾರು ವಿಚಾರಕ್ಕೆ ಕಾರಣವಾಗಲಿದೆ. ಉದ್ಯೋಗದ ಕಾರಣಕ್ಕೆ ದೂರದ ಊರಿಗೆ ಹೋಗಬೇಕಾಗುವುದು. ಪ್ರಯಾಣದ ಮುಂಜಾಗ್ರತೆಯ ಕ್ರಮವಿರಲಿ. ಗೊತ್ತಿಲ್ಲದ ಪ್ರದೇಶಕ್ಕೆ ಒಂಟಿಯಾಗಿ ಹೋಗಬೇಕಾಗಬಹುದು. ಹೊಸ ಉದ್ಯಮವನ್ನು ಮಾಡಲು ಆಪ್ತರ ಅಥವಾ ಅನುಭವಿಗಳ ಸಲಹೆ ಬೇಕಾದೀತು. ದಾಂಪತ್ಯದಲ್ಲಿ ಬಂದ ಒಡಕು ಎಲ್ಲರಿಗೂ ಗೊತ್ತಾಗುವ ಮೊದಲೇ ಸರಿ ಮಾಡಿಕೊಳ್ಳಿ.
ಧನು ರಾಶಿ: ನಿಮ್ಮ ಉತ್ಸಾಹ ಯಾರನ್ನು ಬೆರಗುಗೊಳಿಸುವುದು, ಆದರೆ ಅದು ವಿವೇಕದಿಂದ ಇರಲಿ. ನಿಮ್ಮ ಮನಸ್ಸನ್ನು ಒಂದೆಡೆ ಏಕಾಗ್ರವಾಗಿಸಲು ಪ್ರಯತ್ನಿಸಿ. ನಿತ್ಯ ಬಳಸುವ ವಸ್ತುಗಳ ಮಾರಾಟದಿಂದ ಲಾಭವಿದೆ. ಯುವಕರು ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯು ಅವಕಾಶಗಳಿದ್ದರೂ ಅದನ್ನು ಬಳಸಿಕೊಳ್ಳಲು ಮಾರ್ಗದರ್ಶನದ ಅವಶ್ಯಕತೆ ಇದೆ. ಕಛೇರಿಯಲ್ಲಿ ಯಾರದೋ ತಪ್ಪಿಗೆ ನೀವು ತಲೆ ತಗ್ಗಿಸಬೇಕಾಗಬಹುದು. ಪ್ರಾಣಿಗಳ ಮೇಲೆ ಪ್ರೀತಿ ತೋರಿಸುವಿರಿ. ಮಾತ್ಸರ್ಯವನ್ನು ನಿಮ್ಮ ವ್ಯಕ್ತಿತ್ವಕ್ಕೆ ಅಲ್ಲ. ಎಲ್ಲರನ್ನೂ ಸಮಾಮವಾಗಿ ಕಾಣಬೇಕಾಗುವುದು. ನಿಮ್ಮ ಕಾರ್ಯದಲ್ಲಿ ನಿಮಗೆ ತಪ್ಪು ಕಾಣಿಸಿ, ತಿದ್ದಿಕೊಳ್ಳುವಿರಿ. ಹೊಗಳಿಕೆಯಿಂದ ನಿಮಗೆ ಸಂಕೋಚ ಉಂಟಾಗಬಹುದು. ಮಿತಿಮೀರಿದ ಓಡಾಟವು ನಿಮ್ಮ ಬಲವನ್ನು ಚೆನ್ನಾಗಿ ಇರಿಸುವುದು. ನಿಮ್ಮ ಬಯಕೆಗಳಿಗೆ ಇನ್ಮೊಬ್ಬರು ಪ್ರೇರಣೆ ಆಗಬಹುದು. ಪ್ರೀತಿಯ ಕಾರಣಕ್ಕೆ ಮನಸ್ಸಿನ ಚಾಂಚಲ್ಯವನ್ನು ನಿಯಂತ್ರಿಸುವುದು ಕಷ್ಟವಾದೀತು.
ಮಕರ ರಾಶಿ: ಅದೃಷ್ಟವನ್ನು ನಂಬಿ ಕೆಲಸ ಮಾಡುವುದಕ್ಕಿಂತ ನಿಮ್ಮ ಪ್ರತಿಭೆ, ವಿದ್ಯೆಯ ಮೇಲೆ ಇದ್ದರೆ ಕಾರ್ಯ ಪೂರ್ಣವಾಗಲಿದೆ. ನಿಮ್ಮ ಜಾಣ್ಮೆಯ ಕೆಲಸಕ್ಕೆ ಅಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಮಹಿಳೆಯರು ಸ್ವ ಉದ್ಯೋಗದ ಕಡೆ ಗಮನಹರಿಸುವರು. ನೂತನ ವಸ್ತುಗಳ ಮೇಲೆ ನಿಮಗೆ ಪ್ರೀತಿ ಹೆಚ್ಚಿರುವುದು. ವಿದೇಶದಲ್ಲಿ ಓದುವ ಆಸೆಯು ನಿಮ್ಮೊಳಗೆ ಆರಂಭವಾಗುವುದು. ನಿಮ್ಮ ಮಾತಿನ ಕೌಶಲಕ್ಕೆ ಸಂವಹನದ ಉದ್ಯೋಗ ಸಿಗುವ ಸಾಧ್ಯತೆ ಇದೆ. ಭೂಮಿಯ ವ್ಯವಹಾರದಲ್ಲಿ ಪಾಲುದಾರರಾಗಿ ಸೇರಿಕೊಳ್ಳುವ ಮನಸ್ಸು ಮಾಡುವಿರಿ. ಸಂಗಾತಿಯ ಜೊತೆ ಬಹಳ ಸಂತೋಷದ ಕ್ಷಣವನ್ನು ಕಳೆಯುವಿರಿ. ಉದ್ಯೋಗದ ಸ್ಥಳದಲ್ಲಿ ಉಂಟಾದ ಪಕ್ಷಪಾತದಿಂದ ದ್ವೇಷಭಾವವು ಉಂಟಾಗಬಹುದು. ವಿದೇಶದ ವಾಸದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಸೂಕ್ತ ಚಿಕಿತ್ಸೆ ಪಡೆಯುವಿರಿ. ಸಾಲದ ವಿಚಾರವಾಗಿ ಕುಟುಂಬದ ಜೊತೆ ಬಿಸಿ ಚರ್ಚೆಯಾಗಬಹುದು.
ಕುಂಭ ರಾಶಿ: ವೃತ್ತಿಯಲ್ಲಿ ಮುಂದುವರಿಯಲು ಕೆಲವು ಸವಾಲನ್ನು ತೆಗೆದುಕೊಳ್ಳಲೇಬೇಕು. ಇಂದು ನಿಮ್ಮ ಬಗ್ಗೆ ಆಡುವ ಮಾತಿನಿಂದ ಉತ್ಸಾಹವು ಅಧಿಕವಾಗಿ ಇರುವುದು. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಶ್ರಮದ ಫಲವೇ ಕಾಣುವರು. ನಿಮ್ಮ ಆಪ್ತ ಸ್ನೇಹಿತರ ಅನಿರೀಕ್ಷಿತ ಭೇಟಿಯಾಗುವುದು. ವಾಹನ ಖರೀದಿಗೆ ಬಂಧುಗಳಿಂದ ಒತ್ತಡವು ಬರಬಹುದು. ಬಹಳ ಶ್ರಮದಿಂದ ಭೂಮಿಯ ಮಾರಟವನ್ನು ಮಾಡುವಿರಿ. ನಿಮ್ಮ ಪ್ರಭಾವವನ್ನು ಬೇರೆಯವರ ಮೇಲೆ ಬೀಳಿಸುವಿರಿ. ನಿಮ್ಮ ಪೂರ್ವಯೋಜಿತ ಕಾರ್ಯಗಳನ್ನು ನೀವು ಬದಲಾಯಿಸುವಿರಿ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಲು ಮನೆಯಿಂದ ಒಪ್ಪಿಗೆಯನ್ನು ನಿರಾಕರಿಸಬಹುದು. ಇಂದು ನೀವು ಕೋಪವನ್ನು ಮಾಡಿಕೊಳ್ಳಲು ಕಾರಣವೇ ಬೇಕಾಗದು. ಪ್ರಯಾಣದ ವಿಚಾರದಲ್ಲಿ ಕೋಪಗೊಳ್ಳುವಿರಿ. ನೌಕರರಿಂದ ನಿಮಗೆ ಸರಿಯಾದ ಪ್ರತಿಕ್ರಿಯೆ ಸಿಗದು. ವಿವೇಚನೆ ಇಲ್ಲದ ಮಾತುಗಳಿಂದ ಕಲಹ.
ಮೀನ ರಾಶಿ: ನಿಮ್ಮ ಗುರಿಯನ್ನು ಮುಟ್ಟಲು ಶತ್ರುಗಳೇ ಪರೋಕ್ಷವಾಗಿ ಕಾರಣ. ಅವರಿಂದ ಆದ ಅಪಮಾನವೇ ನಿಮ್ಮ ಸಾಧನೆಗೆ ಅಧಿಕ ಬಲವನ್ನು ಕೊಡುವುದು. ಇಂದು ನಿಮ್ಮ ಕಾರ್ಯಕ್ಷಮತೂ ಉತ್ತಮವಾಗಿರುವುದು. ನಿಮಗೆ ಮಾತನಾಡುವ ಕಲೆಯು ಕರಗತವಾಗಲಿದೆ. ನಿಮ್ಮನ್ನು ಇಂದು ಮಾತಿನಿಂದ ಸೋಲಿಸುವುದು ಕಷ್ಟವಾದೀತು. ನಿಮ್ಮ ಪ್ರತಿಭೆಗೆ ಸೂಕ್ತ ಸ್ಥಾನ ಸಿಗಲಿದೆ. ಮಕ್ಕಳ ವಿವಾಹದ ಬಗ್ಗೆ ಒಂದೊಂದೇ ಚಿಂತೆ ಆರಂಭವಾಗುವುದು. ಅನಿವಾರ್ಯ ಕಾರಣದಿಂದ ನೀವು ಅಧಿಕಾರವನ್ನು ವಹಿಸಿಕೊಳ್ಳಬೇಕಾಗಬಹುದು. ಉದ್ಯೋಗದಲ್ಲಿನ ಒತ್ತಡವು ನಿಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಉಂಟುಮಾಡಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ಬಂಧುಗಳ ಜೊತೆ ಚರ್ಚಿಸುವಿರಿ. ನಿಮ್ಮ ವ್ಯಾಪ್ತಿಯನ್ನು ಮೀರಿದ ಕೆಲಸವನ್ನು ನೀವು ಮಾಡಬೇಕಾದೀತು. ಆಸಕ್ತಿಯು ಇಲ್ಲದಿದ್ದರೂ ಒತ್ತಾಯಕ್ಕೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗುವಿರಿ. ಆಪತ್ತಿನಲ್ಲಿರುವ ನಿಮಗೆ ಸ್ನೇಹಿತರ ಸಣ್ಣ ಸಹಾಯವೂ ಧೈರ್ಯ ಕೊಡುವುದು.