Horoscope: ವೃತ್ತಿಯಲ್ಲಿ ಬದಲಾವಣೆ ಬಯಸುವಿರಿ, ನಕಾರಾತ್ಮಕ ವಿಚಾರಗಳಿಂದ ದೂರವಿರಿ
25 ಫೆಬ್ರವರಿ 2025: ಮಂಗಳವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ನಿಮ್ಮ ವಸ್ತುಗಳನ್ನು ರಕ್ಷಣೆ ಮಾಡಿಕೊಳ್ಳುವುದು ಉತ್ತಮ. ಶತ್ರುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರಲಿದೆ. ಹಾಗಾದರೆ ಫೆಬ್ರವರಿ 25ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಶತಭಿಷಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ : ಮಂಗಳ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಉರ್ತರಾಭಾದ್ರ, ಯೋಗ : ವ್ಯತಿಪಾತ್, ಕರಣ : ತೈತಿಲ, ಸೂರ್ಯೋದಯ – 06 – 52 am, ಸೂರ್ಯಾಸ್ತ – 06 – 38 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:42 – 17:10, ಯಮಘಂಡ ಕಾಲ 09:49 – 11:18, ಗುಳಿಕ ಕಾಲ 12:46 – 14:14.
ತುಲಾ ರಾಶಿ: ನಿಮ್ಮ ಸಲೀಸಾದ ವ್ಯವಹಾರಕ್ಕೆ ಅಡ್ಡಗಾಲು ಬಂದೀತು. ಉತ್ತಮ ಆರೋಗ್ಯಕ್ಕೆ ಚಿಕಿತ್ಸೆಯ ಅಗತ್ಯವಿದೆ. ವಿದೇಶ ಪ್ರವಾಸದ ವಾರ್ತೆಯಿಂದ ಖುಷಿಯಾಗಲಿದೆ. ಅನೇಕ ಕೆಲಸವನ್ನು ಒತ್ತಡವಿಲ್ಲದೇ ನಿರ್ವಹಿಸುವಿರಿ. ಹಣವನ್ನು ಅಲ್ಪ ಹೂಡಿಕೆ ಮಾಡಿ ಪರೀಕ್ಷಿಸಿಕೊಳ್ಳಿ. ಕುಟುಂಬದಲ್ಲಿ ನಿಮ್ಮ ಪ್ರತಿ ಮಾತನ್ನು ಅನೇಕ ಅರ್ಥದಲ್ಲಿ ಗ್ರಹಿಸಬಹುದು. ಮೇಲಧಿಕಾರಿಗಳ ಜೊತೆ ನಿಮ್ಮ ಒಡನಾಟವನ್ನು ಚೆನ್ನಾಗಿಟ್ಟುಕೊಳ್ಳಿ. ಮನೆಯವರಿಗೆ ಹಣವನ್ನು ನೀಡಲಾಗದೇ ಅನ್ಯರಿಗೆ ನೀಡುವಿರಿ. ನಿಮ್ಮದೇ ಕಾರ್ಯವಾದರೂ ನಿಮಗೆ ಅದರ ಸಂಪೂರ್ಣ ಯಶಸ್ಸು ಸಿಗದು. ಸಂತೋಷದ ಸುದ್ದಿಯನ್ನು ಆನಂದಿಸುವ ಮನಃಸ್ಥಿತಿ ಇಂದು ನಿಮ್ಮಲ್ಲಿ ಇರದು. ಸ್ನೇಹಿತರ ಮೇಲೆ ಕೂಗಾಡುವಷ್ಟು ಸಲುಗೆ ಬೇಡ. ಉದ್ಯೋಗದಲ್ಲಿ ಒತ್ತಡವನ್ನು ನಿವಾರಿಸಿಕೊಳ್ಳಲು ಯಾರದ್ದಾದರೂ ಸಹಾಯವನ್ನು ಪಡೆಯುವಿರಿ. ನಾಲಿಗೆಯನ್ನು ಹರಿಬಿಡುವಾಗ ಅದು ಎಷ್ಟು ದೂರವೂ ಹೋಗಬಹುದು. ನಿಮಗೆ ಸಿಗಬೇಕಾದ ಗೌರವವು ಗೊಂದಲದಲ್ಲಿ ಇದ್ದು ಕೊನೆಗೂ ನಿಮಗೇ ಸಿಗಲಿದೆ. ತಾಳ್ಮೆಯನ್ನು ಕಳೆದುಕೊಳ್ಳದೇ ಎಲ್ಲರ ಜೊತೆ ವ್ಯವಹರಿಸಿ.
ವೃಶ್ಚಿಕ ರಾಶಿ: ಬಾಂಧವ್ಯದಲ್ಲಿ ವಾಗ್ವಾದ ಮಿತಿಮೀರಬಹುದು. ನಿಮ್ಮ ಆಲೋಚನೆಗಳನ್ನು ಅನೇಕ ಜನರ ಜೊತೆ ಹಂಚಿಕೊಳ್ಳುವಿರಿ. ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವವು ಬರಬಹುದು. ಕುಟುಂಬದ ಜೊತೆ ಸುಳ್ಳು ಹೇಳಿ, ನಿಮ್ಮ ನಿಜವಾದ ಕಾರ್ಯವನ್ನು ಮುಚ್ಚಿಡುವಿರಿ. ನಿಮ್ಮ ಇಷ್ಟವಾದ ವಸ್ತುವು ಕಣ್ಮೆಯಾರಿಗಿರುವುದು ಇಂದು ಗೊತ್ತಾಗುವುದು. ನಿಮ್ಮ ಸಹನೆಯ ಮಿತಿ ಮೀರುವ ಸಾಧ್ಯತೆ ಇದೆ. ಇಂದು ಆರ್ಥಿಕ ಸಹಾಯವನ್ನು ಇನ್ನೊಬ್ಬರಿಂದ ಪಡೆಯುವಿರಿ. ತಾಯಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುವಿರಿ. ಪಕ್ಷಪಾತ ಸ್ವಭಾವವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಬೇಡ. ನಿಮ್ಮನ್ನು ನೋಡು ದೃಷ್ಟಿಯು ಇದರಿಂದ ಬದಲಾದೀತು. ಆರೋಗ್ಯದ ಬಗ್ಗೆ ಮುಂಜಾಗರೂಕತೆ ಬೇಕಾಗುವುದು. ಅನಂತರ ದುಃಖಿಸಿದರೆ ಪ್ರಯೋಜನವಾಗದು. ನೂತನ ಉದ್ಯಮಕ್ಕೆ ಹೆಚ್ಚು ಆದ್ಯತೆ ಇರಲಿದೆ. ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಾಗ ನಿಮ್ಮ ಖರ್ಚಿನ ಅಂದಾಜು ತಪ್ಪಿಹೋಗಬಹುದು. ಅನಿರೀಕ್ಷಿತವಾಗಿ ಪ್ರಭಾವಿ ವ್ಯಕ್ತಿಗಳ ಸಂಪರ್ಕವು ಸಿಗುವುದು.
ಧನು ರಾಶಿ: ವೃತ್ತಿಗೆ ಕೊಡುವ ಪ್ರಾಮುಖ್ಯದಿಂದ ಕುಟುಂಬದಲ್ಲಿ ಮನಸ್ತಾಪ. ಅದೃಷ್ಟವನ್ನು ನಂಬಿ ಕುಳಿತುಕೊಳ್ಳದೇ ನಿಮ್ಮ ಪ್ರಯತ್ನವನ್ನು ಮಾಡುವುದು ಉತ್ತಮ. ಸ್ವಹಿತಾಸಕ್ತಿಯನ್ನು ಮರೆತು ಸಮಯ ಕೊಟ್ಟರೂ ಸಲ್ಲದ ಮಾತುಗಳನ್ನು ಕೇಳುವಿರಿ. ಪ್ರೀತಿಯನ್ನು ನೀವು ಬಹಳ ಸೂಕ್ಷ್ಮವಾಗಿ ಮುಂದುವರಿಸಬೇಕಾಗುವುದು. ವ್ಯಾವಹಾರಿಕ ಜಾಣ್ಮೆಯನ್ನು ನೀವು ಇಟ್ಟುಕೊಂಡು ಲಾಭವನ್ನು ಪಡೆಯುವಿರಿ. ನಿಮಗೆ ವಿದ್ಯೆಯನ್ನು ನೀಡಿದವರು ಅನೇಕ ವರ್ಷಗಳ ಅನಂತರ ಸಿಗಬಹುದು. ಅತ್ಯಂತ ಸಂಭ್ರಮ ಪಡುವಿರಿ. ಕಾನೂನಿನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ನಿಮ್ಮ ಸ್ವಂತ ಕೆಲಸಕ್ಕಾಗಿ ವಿರಾಮ ಸಿಗದು. ಸಂಗಾತಿಯನ್ನು ತಮಾಷೆ ಮಾಡಿ, ಖುಷಿಪಡುವಿರಿ. ಆಸ್ತಿಯನ್ನು ಮಾಡುವ ಚಿಂತನೆ ಅಧಿಕವಾಗಿರುವುದು. ಹಠದ ಸ್ವಭಾವವು ಎಲ್ಲರ ಪ್ರೀತಿಯಿಂದ ನಿಮ್ಮನ್ನು ದೂರಮಾಡಬಹುದು. ಇಂದು ಹಣಕಾಸಿನ ವ್ಯವಹಾರ ಮಾಡಲು ಧೈರ್ಯವು ಸಾಕಾಗದು. ಮಕ್ಕಳ ಒತ್ತಾಯಕ್ಕೆ ಇಂದು ಪ್ರಯಾಣವನ್ನು ಮಾಡುವಿರಿ.
ಮಕರ ರಾಶಿ: ಸಮಯದ ಅಭಾವ, ಹೆಚ್ಚು ಕಾರ್ಯಗಳು ಬರವ ಕಾರಣ ಒತ್ತಡ ಸಹಜವಾಗಿಯೇ ಇರುವುದು. ಅದೃಷ್ಟ ನಿಮ್ಮ ಜೊತೆ ಇದೆ ಎಂದು ಏನೆಲ್ಲ ಮಾಡಿಕೊಳ್ಳುವುದು ಬೇಡ. ಕುಟುಂಬದ ಕಡೆಯಿಂದ ಸಂತೋಷದ ಮಾತುಗಳು ಇರುವುದು. ನಿಮ್ಮ ಕೆಲಸದಿಂದ ಉತ್ತಮ ಹೆಸರು ಕುಟುಂಬಕ್ಕೆ ಸಿಗುವುದು. ಕೊಟ್ಟ ಹಣವನ್ನು ಪುನಃ ಕೇಳಲು ಮುಜುಗರವಾದೀತು. ಸಹೋದರಿಗೆ ನಿಮ್ಮಂದ ಅಪೇಕ್ಷಿತ ಸಹಾಯವು ಸಿಗಲಿದೆ. ಹಳೆಯ ವಾಹನದ ಮಾರಾಟ ಮಾಡಿ ಹೊಸ ವಾಹನವನ್ನು ಖರೀದಿಸುವಿರಿ. ಆಹಾರದ ಸಮಯ ವ್ಯತ್ಯಾಸವಾಗಿ ಆರೋಗ್ಯ ಕೆಡುವುದು. ಉನ್ನತ ಶಿಕ್ಷಣವನ್ನು ಪಡೆಯಲು ನೀವು ಸಫಲರಾಗಬಹುದು. ಉದ್ಯೋಗದಲ್ಲಿ ನಿಮ್ಮ ಕಣ್ತಪ್ಪಿನಿಂದ ಆದ ತಪ್ಪಿಗೆ ನೀವೇ ತಲೆಕೊಡಬೇಕಾದೀತು. ಭೂಮಿಯ ವ್ಯವಹಾರದಲ್ಲಿ ಸುಮ್ಮನೆ ಕೆಲವನ್ನು ನಿಮ್ಮ ಮೇಲೆ ಬರುವಂತೆ ಮಾಡಿಕೊಳ್ಳುವಿರಿ. ಎಷ್ಟು ಅವಶ್ಯಕವೋ ಅಷ್ಟನ್ನು ಮಾತ್ರ ಮಾಡಿ. ತುರ್ತು ಹಣವು ಬೇಕಾಗಿದ್ದು ಸಾಲವನ್ನು ಮಾಡಲು ನಿಮಗೆ ಭಯವಾಗಬಹುದು.
ಕುಂಭ ರಾಶಿ: ಸಹೋದ್ಯೋಗಿಗಳ ಜೊತೆ ಆತ್ಮೀಯತೆಯನ್ನು ತೋರಿಕೆ ಮಾಡುವಿರಿ. ಇದರಿಂದ ನಿಮ್ಮ ಕಾರ್ಯ ಸುಲಭವಾಗುವುದು. ನೀವು ಇಂದು ಅನೇಕರ ಸಹಕಾರದ ಜೊತೆ ಜವಾಬ್ದಾರಿಯಲ್ಲಿ ಯಶಸ್ವಿಯಾಗುವಿರಿ. ನಿಮ್ಮೆದುರೇ ನಿಮ್ಮ ಸಹೋದರರನ್ನು ಹೊಗಳುವುದು ನಿಮಗೆ ಆಗದು. ಯಾರ ಜೊತೆಗಾದರೂ ವೈಮನಸ್ಯವಿದ್ದರೆ ಕುಳಿತು ಮಾತನಾಡಿಕೊಂಡು ಸರಿ ಮಾಡಿಕೊಳ್ಳುವಿರಿ. ನಿಮಗೆ ನಿಮ್ಮವರ ಭಾವವನ್ನು ಸರಿಯಾಗಿ ಅಂದಾಜು ಮಾಡಲಾಗದು. ಸುಮ್ಮನೇ ಯಾರ ಬೆಂಬಲಕ್ಕೂ ನಿಲ್ಲಲು ಹೋಗುವುದು ಬೇಡ. ಬಂಧುಗಳನ್ನು ನೀವು ಆಡಿಕೊಳ್ಳುವಿರಿ. ಕುಟುಂಬವು ನಿಮ್ಮ ಒತ್ತಡವನ್ನು ಕಡಿಮೆ ಮಾಡುವುದು. ಯಾರ ಮೇಲಾದರೂ ದೋಷಾರೋಪ ಮಾಡುವ ಸಂಭವವಿದೆ. ಬರುವ ಆದಾಯಕ್ಕೆ ವಿಘ್ನವು ಬರಬಹುದು. ಅಂತರ್ಜಾಲದಿಂದ ನಿಮಗೆ ಕೆಲಸಕ್ಕೆ ಕರೆ ಬರಬಹುದು. ನಿರಾಕರಿಸುವುದು ಉತ್ತಮ. ಸ್ನೇಹವು ಸಡಿಲವಾಗುವ ಸಾಧ್ಯತೆ ಇದೆ. ಪ್ರಭಾವಿ ವ್ಯಕ್ತಿಗಳ ಸಲಹೆಯಿಂದ ನೀವು ಅಂದುಕೊಂಡ ದಾರಿಯು ಸುಗಮವಾಗುವುದು. ಹಣದ ಆಮಿಷದಲ್ಲಿ ಸಿಕ್ಕಿಕೊಳ್ಳುವಿರಿ.
ಮೀನ ರಾಶಿ: ಇಂದಿನ ನಿಮ್ಮ ಕಾರ್ಯವನ್ನು ಆತ್ಮವಿಶ್ವಾಸದಿಂದ ಮಾಡಿ. ಇಂದು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ಮಾಡುವರು. ಸಾಲವನ್ನು ಕೇಳಿ ಬಂದವರಿಗೆ ಅಲ್ಪವನ್ನು ಮಾತ್ರ ಕೊಡಿ. ವ್ಯಾಪಾರವು ಕೆಲವು ತಿರುವನ್ನು ಪಡೆಯಬಹುದು. ಪರರ ಮೇಲಿನ ಅನುಮಾನದಿಂದ ಸಮಯ ಹಾಳು. ಆತ್ಮೀಯರ ಬಗ್ಗೆ ಕಾಳಜಿ ಹೆಚ್ಚಿರುವುದು. ಚರಾಸ್ತಿಯ ನಷ್ಟಕ್ಕೆ ನೀವೇ ಕಾರಣವಾಗುವಿರಿ. ವೃತ್ತಿಯ ಸ್ಥಳದಲ್ಲಿ ಬದಲಾವಣೆಯನ್ನು ಬಯಸುವಿರಿ. ನಿಮ್ಮ ವಸ್ತುಗಳನ್ನು ರಕ್ಷಣೆ ಮಾಡಿಕೊಳ್ಳುವುದು ಉತ್ತಮ. ಶತ್ರುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರಲಿದೆ. ನಕಾರಾತ್ಮಕ ಅಂಶಗಳು ನಿಮ್ಮನ್ನು ಹುಡುಕಿ ಬರುವುದು. ಕಛೇರಿಗೆ ವಿರಾಮವಿದ್ದರೂ ಅನಿರೀಕ್ಷಿತ ಮೀಟಿಂಗ್ ಗೆ ಹಾಜಾರಾಗಬೇಕಾದೀತು. ನಿಮ್ಮ ಪ್ರಾಮಾಣಿಕತೆಯ ಮಾರ್ಗವನ್ನು ಬಿಡುವುದು ಬೇಡ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಪೂರ್ಣ ಮಾಡುವಿರಿ. ತಾಯಿಯ ಕಡೆಯ ಬಂಧುಗಳಿಂದ ನಿಮಗೆ ಸಹಾಯವು ಸಿಗಲಿದೆ.