March 2026 Horoscope: ಈ ನಾಲ್ಕು ರಾಶಿಯವರಿಗೆ ಮಾರ್ಚ್​​ ತಿಂಗಳಿನಲ್ಲಿ ಲಕ್ಕೋ ಲಕ್ಕು

ಮಾರ್ಚ್ 2026 ರಲ್ಲಿ ಶುಕ್ರನು ತನ್ನ ಉಚ್ಚ ಸ್ಥಾನಕ್ಕೆ ಪ್ರವೇಶಿಸಿ ತಿಂಗಳ ಕೊನೆಯಲ್ಲಿ ಸ್ಥಾನ ಬದಲಾಯಿಸುವುದರಿಂದ ಇದು ಶುಕ್ರ ದಶೆಯವರಿಗೆ ಅತ್ಯಂತ ಶುಭ ಕಾಲ. ಆರ್ಥಿಕ ಲಾಭ, ಭೋಗ, ಪ್ರೇಮ ಜೀವನದಲ್ಲಿ ಮಧುರತೆ ಮತ್ತು ಸಮಾಧಾನ ಲಭಿಸಲಿದೆ. ಪ್ರತಿ ರಾಶಿಯವರಿಗೆ ವೃತ್ತಿ, ಆರೋಗ್ಯ, ಹಣಕಾಸು ಮತ್ತು ಸಂಬಂಧಗಳಲ್ಲಿ ಪ್ರಮುಖ ಬದಲಾವಣೆಗಳು ನಿರೀಕ್ಷಿತ. ನಿಮ್ಮ ಮಾಸಿಕ ಭವಿಷ್ಯವನ್ನು ತಿಳಿದು ಸಿದ್ಧರಾಗಿ.

March 2026 Horoscope: ಈ ನಾಲ್ಕು ರಾಶಿಯವರಿಗೆ ಮಾರ್ಚ್​​ ತಿಂಗಳಿನಲ್ಲಿ ಲಕ್ಕೋ ಲಕ್ಕು
ಸಾಂದರ್ಭಿಕ ಚಿತ್ರ
Edited By:

Updated on: Feb 28, 2026 | 10:33 PM

ಮಾರ್ಚ್- 2026 ರಲ್ಲಿ ಶುಕ್ರನು ತನ್ನ ಉಚ್ಚಸ್ಥಾನಕ್ಕೆ ಹೋಗಿ ತಿಂಗಳ ಕೊನೆಯಲ್ಲಿ ಸ್ಥಾನವನ್ನು ಬದಲಿಸುವನು. ಶುಕ್ರ ದಶೆಯವರಿಗೆ ಇದು ಅತ್ಯಂತ ಶುಭ ಕಾಲ‌. ಹಣಕಾಸು ಕೈಸೇರುವುದಲ್ಲದೇ ಅನೇಕ ಭೋಗಗಳು, ಭೋಜನ, ಸಂಚಾರ, ವಿಶ್ರಾಂತಿ, ಸಂಗಾತಿಯ ಜೊತೆ ಆಪ್ತತೆ ಇವೆಲ್ಲ ಇರಲಿದೆ.

ಮೇಷ ರಾಶಿ

​ಈ ತಿಂಗಳು ನಿಮಗೆ ಮಿಶ್ರಫಲ ದೊರೆಯಲಿದೆ. ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಆರ್ಥಿಕವಾಗಿ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹೂಡಿಕೆಯಲ್ಲಿ ಎಚ್ಚರವಿರಲಿ. ಕುಟುಂಬದವರೊಂದಿಗೆ ಸಮಯ ಕಳೆಯಲು ಪ್ರಯತ್ನಿಸಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಉತ್ತಮ.

ವೃಷಭ ರಾಶಿ

​ಆರ್ಥಿಕ ಪ್ರಗತಿಗೆ ಈ ತಿಂಗಳು ಪೂರಕವಾಗಿದೆ. ಸ್ಥಗಿತಗೊಂಡಿದ್ದ ಕೆಲಸಗಳು ಪುನರಾರಂಭಗೊಳ್ಳಲಿವೆ. ಉದ್ಯೋಗದಲ್ಲಿ ಬಡ್ತಿ ಅಥವಾ ಗೌರವ ಸಿಗುವ ಯೋಗವಿದೆ. ಪ್ರೇಮ ಜೀವನದಲ್ಲಿ ಮಧುರತೆ ಇರಲಿದ್ದು, ಹಳೆಯ ಮಿತ್ರರ ಭೇಟಿ ಮನಸ್ಸಿಗೆ ಸಂತೋಷ ನೀಡಲಿದೆ. ಆರೋಗ್ಯ ಉತ್ತಮವಾಗಿರುತ್ತದೆ.

ಮಿಥುನ ರಾಶಿ

​ನಿಮ್ಮ ಮಾತು ಮತ್ತು ಸಂಯಮ ಈ ತಿಂಗಳು ಬಹಳ ಮುಖ್ಯ. ವೃತ್ತಿಯಲ್ಲಿ ಸಣ್ಣಪುಟ್ಟ ಸವಾಲುಗಳು ಎದುರಾಗಬಹುದು, ಆದರೆ ಧೃತಿಗೆಡಬೇಡಿ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಯಿದೆ. ದೂರದ ಪ್ರಯಾಣವು ಲಾಭದಾಯಕವಾಗಿರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿವೆ.

​ಕರ್ಕಾಟಕ ರಾಶಿ

​ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಸಮಯವಿದು. ಹಣಕಾಸಿನ ವಿಚಾರದಲ್ಲಿ ಯಾರನ್ನೂ ಅಂಧವಾಗಿ ನಂಬಬೇಡಿ. ವ್ಯಾಪಾರಸ್ಥರಿಗೆ ಮಧ್ಯಮ ಲಾಭ ದೊರೆಯಲಿದೆ. ಮನೆ ಬದಲಾವಣೆ ಅಥವಾ ನವೀಕರಣದ ಆಲೋಚನೆ ಇದ್ದರೆ ಈ ತಿಂಗಳು ಶುಭವಾಗಿದೆ. ಆಧ್ಯಾತ್ಮದ ಕಡೆಗೆ ನಿಮ್ಮ ಒಲವು ಹೆಚ್ಚಾಗಲಿದೆ.

ಸಿಂಹ ರಾಶಿ

​ಆತ್ಮವಿಶ್ವಾಸದಿಂದ ಕೆಲಸ ಮಾಡಿ, ಯಶಸ್ಸು ಖಚಿತ. ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗಲಿದೆ. ಸರ್ಕಾರಿ ಕೆಲಸಗಳಲ್ಲಿ ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ. ಸಂಗಾತಿಯ ಬೆಂಬಲ ನಿಮ್ಮ ಆತ್ಮಬಲವನ್ನು ಹೆಚ್ಚಿಸುತ್ತದೆ. ಹೂಡಿಕೆಯಿಂದ ಲಾಭ ನಿರೀಕ್ಷಿಸಬಹುದು. ಆಹಾರ ಕ್ರಮದ ಬಗ್ಗೆ ಎಚ್ಚರವಿರಲಿ.

​ಕನ್ಯಾ ರಾಶಿ

​ಕೆಲಸದ ಒತ್ತಡ ಹೆಚ್ಚಾಗಿ ಮಾನಸಿಕ ಕಿರಿಕಿರಿ ಉಂಟಾಗಬಹುದು. ತಾಳ್ಮೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆಯಿದೆ. ವಿನಾಕಾರಣ ವಾದವಿವಾದಗಳಲ್ಲಿ ಭಾಗಿಯಾಗಬೇಡಿ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ.

​ತುಲಾ ರಾಶಿ

​ಸೃಜನಶೀಲ ಕೆಲಸಗಳಿಗೆ ಈ ತಿಂಗಳು ಹೇಳಿಮಾಡಿಸಿದಂತಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಇರಲಿದೆ. ವಿದೇಶಿ ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭ ಸಿಗಲಿದೆ. ಮನಸ್ಸು ಪ್ರಸನ್ನವಾಗಿರಲಿದೆ.

​ವೃಶ್ಚಿಕ ರಾಶಿ

​ಶತ್ರುಗಳ ಕಾಟವಿದ್ದರೂ ನಿಮ್ಮ ಬುದ್ಧಿವಂತಿಕೆಯಿಂದ ಜಯಿಸುವಿರಿ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭವಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಮಕ್ಕಳ ಶಿಕ್ಷಣದ ಬಗ್ಗೆ ಶುಭ ಸುದ್ಧಿ ಕೇಳುವಿರಿ. ಚಾಲನೆ ಮಾಡುವಾಗ ಜಾಗರೂಕರಾಗಿರಿ. ಗೆಳೆಯರೊಂದಿಗೆ ಸಣ್ಣಪುಟ್ಟ ಮನಸ್ತಾಪವಾಗುವ ಸಾಧ್ಯತೆಯಿದೆ.

ಧನು ರಾಶಿ

​ಭಾಗ್ಯೋದಯದ ಕಾಲವಿದು. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಗಳಾಗುವಿರಿ. ಹೊಸ ವಾಹನ ಅಥವಾ ಆಸ್ತಿ ಖರೀದಿಸುವ ಯೋಗವಿದೆ. ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆಗಳು ಕಂಡುಬರಲಿವೆ. ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುವ ತಿಂಗಳು.

​ಮಕರ ರಾಶಿ

​ಕೆಲಸದ ಸ್ಥಳದಲ್ಲಿ ರಾಜಕೀಯದಿಂದ ದೂರವಿರಿ. ಆತುರದ ನಿರ್ಧಾರಗಳು ನಷ್ಟಕ್ಕೆ ಕಾರಣವಾಗಬಹುದು. ಸಾಲದ ಹೊರೆ ಇಳಿಸಲು ಯೋಜನೆ ರೂಪಿಸುವಿರಿ. ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು. ಯೋಗ ಮತ್ತು ಧ್ಯಾನದಿಂದ ಮಾನಸಿಕ ಶಾಂತಿ ಪಡೆಯಬಹುದು. ತಾಳ್ಮೆಯೇ ಈ ತಿಂಗಳ ಮಂತ್ರ.

​ಕುಂಭ ರಾಶಿ

​ಹೊಸ ಯೋಜನೆಗಳನ್ನು ಆರಂಭಿಸಲು ಈ ತಿಂಗಳು ಪ್ರಶಸ್ತವಾಗಿದೆ. ಸಮಾಜದಲ್ಲಿ ಹೊಸ ಪರಿಚಯಗಳು ಉಂಟಾಗಲಿವೆ. ಪ್ರೇಮಿಗಳಿಗೆ ವಿವಾಹ ಯೋಗವಿದೆ. ಕಲಾ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ವೇದಿಕೆ ಸಿಗಲಿದೆ. ಆದಾಯದ ಹರಿವು ಉತ್ತಮವಾಗಿದ್ದರೂ ಉಳಿತಾಯದ ಕಡೆಗೆ ಗಮನ ನೀಡಿ.

​ಮೀನ ರಾಶಿ

​ಧನ ಲಾಭದ ಜೊತೆಗೆ ವೃತ್ತಿಯಲ್ಲಿ ಅಭಿವೃದ್ಧಿ ಕಾಣುವಿರಿ. ನಿಮ್ಮ ಕಾರ್ಯಕ್ಷಮತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ. ಕುಟುಂಬದವರೊಂದಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಹಳೆಯ ಅನಾರೋಗ್ಯದಿಂದ ಚೇತರಿಸಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ.

– ಲೋಹಿತ ಹೆಬ್ಬಾರ್

Follow Us