ಆಗಸ್ಟ್​ ತಿಂಗಳಲ್ಲಿ ಹುಟ್ಟಿದರೆ ಈ ಗುಣಗಳು ಇರುತ್ತವೆ; ನಿಮ್ಮಲ್ಲಿ ಈ ಸ್ವಭಾವ ಇದೆಯೇ?

ಇನ್ನು ನಾಲ್ಕು ದಿನ ಕಳೆದರೆ ಜುಲೈ ತಿಂಗಳು ಮುಗಿಯುತ್ತದೆ. ಆಗಸ್ಟ್ ಆರಂಭವಾಗುತ್ತದೆ. ಇಂದಿನ ಲೇಖನದಲ್ಲಿ ಆಗಸ್ಟ್ ತಿಂಗಳಲ್ಲಿ ಹುಟ್ಟಿದವರ ಸ್ವಭಾವ, ಗುಣಾವಗುಣಗಳು ಹೇಗಿರುತ್ತವೆ ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಈ ಮೂಲಕ ಇವರ ಸಾಮರ್ಥ್ಯ ಏನು ಹಾಗೂ ತಿದ್ದುಕೊಳ್ಳಬೇಕಾದ ಗುಣಗಳು ಏನು ಎಂಬುದು ಸಹ ತಿಳಿಯಲು ಅನುಕೂಲ ಆಗುತ್ತದೆ. ಇನ್ನು ತಡ ಮಾಡುವುದು ಬೇಡ, ಆಗಸ್ಟ್ ತಿಂಗಳಲ್ಲಿ ಹುಟ್ಟಿದವರು ಹೇಗಿರುತ್ತಾರೆ ಎಂಬುದರ ವಿವರ ಇಲ್ಲಿದೆ. – ಎಂಥ ಕಠಿಣ ಸನ್ನಿವೇಶಲ್ಲೂ ತಮ್ಮ ಭರವಸೆವನ್ನು ಕಳೆದುಕೊಳ್ಳದ ಜನ ಇವರು. ಜೀವನ ಅನ್ನೋದೇ […]

ಆಗಸ್ಟ್​ ತಿಂಗಳಲ್ಲಿ ಹುಟ್ಟಿದರೆ ಈ ಗುಣಗಳು ಇರುತ್ತವೆ; ನಿಮ್ಮಲ್ಲಿ ಈ ಸ್ವಭಾವ ಇದೆಯೇ?
ರಾಶಿ ಚಕ್ರ
Follow us
TV9 Web
| Updated By: Skanda

Updated on: Jul 28, 2021 | 6:50 AM

ಇನ್ನು ನಾಲ್ಕು ದಿನ ಕಳೆದರೆ ಜುಲೈ ತಿಂಗಳು ಮುಗಿಯುತ್ತದೆ. ಆಗಸ್ಟ್ ಆರಂಭವಾಗುತ್ತದೆ. ಇಂದಿನ ಲೇಖನದಲ್ಲಿ ಆಗಸ್ಟ್ ತಿಂಗಳಲ್ಲಿ ಹುಟ್ಟಿದವರ ಸ್ವಭಾವ, ಗುಣಾವಗುಣಗಳು ಹೇಗಿರುತ್ತವೆ ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಈ ಮೂಲಕ ಇವರ ಸಾಮರ್ಥ್ಯ ಏನು ಹಾಗೂ ತಿದ್ದುಕೊಳ್ಳಬೇಕಾದ ಗುಣಗಳು ಏನು ಎಂಬುದು ಸಹ ತಿಳಿಯಲು ಅನುಕೂಲ ಆಗುತ್ತದೆ. ಇನ್ನು ತಡ ಮಾಡುವುದು ಬೇಡ, ಆಗಸ್ಟ್ ತಿಂಗಳಲ್ಲಿ ಹುಟ್ಟಿದವರು ಹೇಗಿರುತ್ತಾರೆ ಎಂಬುದರ ವಿವರ ಇಲ್ಲಿದೆ.

– ಎಂಥ ಕಠಿಣ ಸನ್ನಿವೇಶಲ್ಲೂ ತಮ್ಮ ಭರವಸೆವನ್ನು ಕಳೆದುಕೊಳ್ಳದ ಜನ ಇವರು. ಜೀವನ ಅನ್ನೋದೇ ಹಲವು ಅಚ್ಚರಿಗಳ ಸರಮಾಲೆ ಎಂಬುದು ಇವರಿಗೆ ಗೊತ್ತು. ಆದ್ದರಿಂದ ಯಶಸ್ಸು- ವೈಫಲ್ಯಗಳನ್ನು ಸಮಾನವಾಗಿ ಸ್ವೀಕರಿಸುತ್ತಾರೆ. ವೈಫಲ್ಯಗಳು ಇವರನ್ನು ವಿಚಲಿತರನ್ನಾಗಿ ಮಾಡುವುದಿಲ್ಲ. ಅದಕ್ಕೆ ಇವರು ಅವಕಾಶ ಮಾಡಿಕೊಡುವುದಿಲ್ಲ.

– ತಮಗೆ ದೊರೆಯಬೇಕಾದ್ದನ್ನು ಪಡೆದುಕೊಳ್ಳಲು ಬಹಳ ಶ್ರಮ ಪಡುತ್ತಾರೆ. ತಮ್ಮ ಜೀವನದ ಗುರಿಯನ್ನು ತಲುಪುವ ಕಡೆಗೆ ದೃಷ್ಟಿ ನೆಟ್ಟಿರುತ್ತಾರೆ. ಅದು ಆಚೀಚೆ ಆಗದಂತೆ ನೋಡಿಕೊಳ್ಳುತ್ತಾರೆ.

– ಸುಖವೋ ದುಃಖವೋ ಸಮಾಧಾನವೋ ಅಸಮಾಧಾನವೋ ಅದೇನೇ ಆದರೂ ಅದನ್ನು ನೇರವಾಗಿ ಹೇಳಿಕೊಳ್ಳುತ್ತಾರೆ. ತಮ್ಮ ಭಾವನೆಗಳನ್ನು ಮರೆ ಮಾಚಲು ಬಾರದ ವ್ಯಕ್ತಿತ್ವ ಇವರದು. ಆದ್ದರಿಂದ ಇವರಿಗ ಏನಿಷ್ಟವೋ ಏನು ಇಷ್ಟ ಇಲ್ಲವೋ ಎದುರಿನವರಿಗೆ ಸುಲಭವಾಗಿ ತಿಳಿಯುತ್ತದೆ.

– ಇವರು ಎಲ್ಲ ವಿಚಾರದಲ್ಲೂ ಇಂಥದ್ದೇ ಆಗಬೇಕು ಎಂದು ಹಠ ಹಿಡಿಯುವ ಜನ. ಆದ್ದರಿಂದ ಬೇರೆಯವರಿಗೆ ಅಸಾಧ್ಯ ಸಿಟ್ಟು ಕೂಡ ತರಿಸುತ್ತಾರೆ. ಆದರೆ ಇವರನ್ನು ಬದಲಾಯಿಸುವುದಕ್ಕೆ ಆಗಲ್ಲ. ಭಾವನಾತ್ಮಕ ಜೀವಿಗಳಾದ ಇವರು, ತಮ್ಮನ್ನು ಅರ್ಥ ಮಾಡಿಕೊಳ್ಳುವವರೊಂದಿಗೆ ಮಾತ್ರ ಆರಾಮವಾಗಿರುತ್ತಾರೆ.

– ಆಗಸ್ಟ್​ ತಿಂಗಳಲ್ಲಿ ಹುಟ್ಟಿದವರಿಗೆ ಬರವಣಿಗೆ ಕೌಶಲ ಸಹಜವಾಗಿ ಇರುತ್ತದೆ. ಆದರೆ ತಮ್ಮದೇ ಪ್ರತಿಭೆಯ ಬಗ್ಗೆ ಹೆಮ್ಮೆ ಪಡುವಂಥವರಲ್ಲ. ಪದೇಪದೇ ಇವರಿಗೆ ಸಾಮರ್ಥ್ಯವನ್ನು ನೆನಪಿಸುತ್ತಿರಬೇಕು.

– ಭಾವನಾತ್ಮಕ ಜೀವಿಗಳಾದರೂ ಬಹಳ ಗಟ್ಟಿ ಇವರು. ಇತರರಿಗೆ ಕಷ್ಟದ ಸನ್ನಿವೇಶ ಎದುರಾದಾಗ ಬೆನ್ನಿಗೆ ನಿಲ್ಲುತ್ತಾರೆ.

– ತಮ್ಮ ಜತೆಯಲ್ಲಿ ಇರುವವರಿಗೆ ಎಷ್ಟು ಬೋರ್ ಆಗುತ್ತಿದ್ದರೂ ಆ ಕಡೆ ಗಮನ ಇರುವುದಿಲ್ಲ. ತಾನು ಇರೋದೇ ಹೀಗೆ, ಬೇಕಿದ್ದರೆ ಒಪ್ಪಿಕೊಳ್ಳಲಿ- ಇಲ್ಲದಿದ್ದರೆ ಬಿಡಲಿ ಎಂಬ ಧೋರಣೆ ಇವರದು. ಇತರರಿಗೆ ಹೋಲಿಸಿದರೆ ಇವರ ಆಸಕ್ತಿಯೇ ಬೇರೆ ಎಂಬುದರಿಂದ ಹೀಗಾಗುತ್ತದೆ.

– ತಮಗೆ ಬೇಕಾದ್ದು ಸಿಕ್ಕಿದರೆ ಮಾತ್ರ ಸಮಾಧಾನ ಪಡುವ ಇವರು, ಇಲ್ಲದಿದ್ದಲ್ಲಿ ವಿಪರೀತ ಹತಾಶರಾಗುತ್ತಾರೆ. ಮೊಂಡುತನ, ಹಠಮಾರಿತನ ವಿಪರೀತ ಆಗುತ್ತದೆ.

ಇದನ್ನೂ ಓದಿ: Numerology Predictions: 1ರಿಂದ 9ರ ಸಂಖ್ಯೆಗೆ ಯಾವ ದಿನದಲ್ಲಿ ಹುಟ್ಟಿದರೆ ಯಾವ ಗ್ರಹದ ಪ್ರಭಾವ? ಹೇಗಿರುತ್ತದೆ ಸ್ವಭಾವ?

ಇದನ್ನೂ ಓದಿ: Astrology: ಯಾವ ರಾಶಿಗೆ ಯಾವ ಗ್ರಹ ಅಧಿಪತಿ; ಯಾವ ಗ್ರಹಕ್ಕೆ ಎಲ್ಲಿ ಉಚ್ಚ ಸ್ಥಿತಿ ನೀಚ ಸ್ಥಿತಿ ಇಲ್ಲಿದೆ ಮಾಹಿತಿ

(Nature And Characteristics Of August Born People According To Astrology)

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ