Horoscope 11 Nov: ದಿನಭವಿಷ್ಯ, ಈ ರಾಶಿಯವರಿಗೆ ಆತ್ಮವಿಶ್ವಾಸವು ಒಂದು ಮಿತಿಯಲ್ಲಿ ಇರಲಿ
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ನವೆಂಬರ್ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಪ್ರೀತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 32 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆಗೆ, ರಾಹು ಕಾಲ ಬೆಳಗ್ಗೆ 09:25 ರಿಂದ ಮಧ್ಯಾಹ್ನ 10:15ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:42 ರಿಂದ 03:08ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:33 ರಿಂದ 07:59ರ ವರೆಗೆ.
ಮೇಷ ರಾಶಿ :ಅನಿರೀಕ್ಷಿತ ಪ್ರಯಾಣದಲ್ಲಿ ಕೆಲವು ಲಾಭವಾಗುವುದು. ಸಣ್ಣ ವಿಚಾರಕ್ಕೂ ಸಿಟ್ಟಗುವಿರಿ. ರಕ್ಷಣಾಸಿಬ್ಬಂದಿಗಳಿಗೆ ಸ್ವಲ್ಪ ಅನನುಕೂಲ ಸನ್ನಿವೇಶವು ಇರಲಿದೆ. ಪರಸ್ಪರ ನೆರವಿನಿಂದ ಇಂದಿನ ಕೆಲಸವು ಸಾಧ್ಯವಾಗುವುದು. ಸ್ನೇಹಿತರು ದೂರವಾದ್ದರಿಂದ ನಿಮಗೂ ನೆಮ್ಮದಿ ಸಿಗುವುದು. ಆದಾಯದ ಮೂಲವನ್ನು ಹೆಚ್ಚುಮಾಡಿಕೊಳ್ಳುವಿರಿ. ಸ್ಥಿರಾಸ್ತಿಯನ್ನು ಅಲಕ್ಷ್ಯ ಮಾಡುವಿರಿ ಕಾರಣಾಂತರಗಳಿಂದ ನಿಮ್ಮ ಯಾತ್ರೆಯು ಸ್ಥಗಿತವಾಗುವುದು. ಮನೆಯವರನ್ನು ಕಾಣದೇ ನಿಮಗೆ ಬೇಸರವಾದೀತು. ಅಧ್ಯಾತ್ಮದ ಚಿಂತನೆಯನ್ನು ಇಂದು ಮಾಡುವಿರಿ. ಆರ್ಥಿಕವಾಗಿ ನೀವು ಸಬಲರಾಗುವುದು ನಿಮ್ಮ ನಡತೆಯಲ್ಲಿ ಕಾಣುವುದು. ನಿಮ್ಮ ಬಗ್ಗೆ ಕೀಳರಿಮೆ ಉಂಟಾಗಬಹುದು. ಎಚ್ಚರಿಕೆ ಇರಲಿ.
ವೃಷಭ ರಾಶಿ : ಸಂಕುಚಿತ ಮನಃಸ್ಥಿತಿಯು ಎಲ್ಲದರಿಂದ ನಿಮ್ಮನ್ನು ದೂರವಿಡುವುದು. ಪಕ್ಷಪಾತವು ನಿಮ್ಮ ಎಲ್ಲ ಸದ್ಭಾವವನ್ನು ನುಂಗಿ ಹಾಕುವುದು. ದಾಂಪತ್ಯದಲ್ಲಿ ಬೇಸರವಿರಲಿದೆ. ಯಾರ ಮೇಲೂ ದೂರನ್ನು ಹೇಳುವುದು ಬೇಡ. ಇಬ್ಬರೂ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು. ಸಮಾರಂಭಗಳಲ್ಲಿ ನೀವು ಹೇಳಿದ ಮಾತು ವಿವಾದವಾಗಬಹುದು. ಸ್ನೇಹಿತರನ್ನು ಕಳೆದುಕೊಂಡಿರುವುದರ ಪರಿಣಾಮವು ಕೂಡಲೇ ಗೊತ್ತಾಗದು. ಅಮೂಲ್ಯ ವಸ್ತುವನ್ನು ಕೊಟ್ಟು ಆರ್ಥಿಕ ಸಂಕಷ್ಟವನ್ನು ತಂದುಕೊಳ್ಳುವಿರಿ. ಕೆಲವು ಸೂಚನೆಗಳು ನಿಮಗೆ ಭವಿಷ್ಯವನ್ನು ತಿಳಿಸಬಹುದು. ಕುಟುಂಬದಲ್ಲಿ ಶಾಂತಿಯು ಕದಡಲು ನಿಮ್ಮ ಪಾತ್ರವೇ ಇರುವುದು. ಕಳೆದುಕೊಂಡ ವಸ್ತುವನ್ನು ಮರಳಿ ಪಡೆಯುವಿರಿ.
ಮಿಥುನ ರಾಶಿ : ಸಿಕ್ಕ ಅವಕಾಶಗಳನ್ನು ದುರುಪಯೋಗ ಮಾಡಿಕೊಳ್ಳುವಿರಿ. ನಂಬಿಕೆಯಲ್ಲಿ ದ್ರೋಹವಾಗಿದೆ ಎಂದು ಅನ್ನಿಸಬಹುದು. ಕಛೇರಿಯ ನಿಯಮಗಳನ್ನು ನೀವೇ ಉಲ್ಲಂಘಿಸುವಿರಿ. ಮೇಲಧಿಕಾರಿಗಳ ಜೊತೆ ನಿಮಗೆ ಆಪ್ತತೆ ಬೇಡ. ಸಂಗಾತಿಯ ಮನಃಸ್ಥಿತಿಯನ್ನು ಬದಲಿಸಲು ಪ್ರಯತ್ನಿಸುವಿರಿ. ನಿಮಗೆ ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯತೆ ಬರಬಹುದು. ಹಳೆಯ ಪ್ರೇಮವನ್ನು ಸಂಗಾತಿಯಲ್ಲಿ ಹೇಳಿಕೊಳ್ಳುವಿರಿ. ನೀವು ಇದರಿಂದ ನಿರಾಳರಾಗುವಿರಿ. ಕಛೇರಿಯಲ್ಲಿ ನಿಮ್ಮ ಮಾತನ್ನು ಪಾಲಿಸುವರು. ವಿದೇಶೀ ವಿನಿಮಯದಿಂದ ಲಾಭವಾಗಲಿದೆ. ನಿಮ್ಮ ಅನುಪಸ್ಥಿತಿಯಲ್ಲಿ ಕೆಲಸವನ್ನು ಬೇರೆಯವರು ಮಾಡುವರು. ಅನಾರೋಗ್ಯವು ಬೆನ್ನು ಬಿಡದ ಬೇತಾಳದಂತೆ ಕಾಡಬಹುದು.
ಕಟಕ ರಾಶಿ : ಸ್ನೇಹಿತರು ನಿಮ್ಮ ಸಮಯವನ್ನು ವ್ಯರ್ಥ ಮಾಡಬಹುದು. ಸ್ವಾಭಿಮಾನವನ್ನು ಬಿಟ್ಟು ಇರುವುದು ಕಷ್ಟವಾದೀತು. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಕೋಪದಲ್ಲಿ ಏನನ್ನಾದರೂ ಹೇಳುವಿರಿ. ಕಠಿಣ ಕೆಲಸವನ್ನು ಸರಳ ಮಾಡಿಕೊಳ್ಳುವ ವಿಧಾನವು ಗೊತ್ತಿರಲಿ. ನಿಮ್ಮ ಕಾರ್ಯದ ಉದ್ದೇಶವೇ ಮರೆತುಹೋಗಬಹುದು. ಇಂದು ನೋವು ಅತಿಯಾಗಬಹುದು. ಇಂದಿನ ಖರ್ಚು ನಿಮ್ಮನ್ನು ಕುಗ್ಗಿಸಬಹುದು. ಅಶಿಸ್ತಿನ ಕಾರಣ ಹಿರಿಯರಿಂದ ಬೈಸಿಕೊಳ್ಳಬೇಕಾಗುವುದು. ಸದಾ ಕಾಲ ಹೊಸತನ್ನು ಅಪೇಕ್ಷಿಸುವಿರಿ. ನಿಮ್ಮ ವಸ್ತುವನ್ನು ಅನ್ಯರಿಗೆ ಕೊಟ್ಟು ಕಳೆದುಕೊಂಡು ಸಂಕಟಪಡುವಿರಿ. ಆದಾಯವನ್ನು ಹೆಚ್ಚು ಮಾಡಿಕೊಳ್ಳುವುದು ಅನಿವಾರ್ಯವಾದೀತು. ಒತ್ತಾಯದಿಂದ ಯಾರನ್ನೂ ಬಳಸಿಕೊಳ್ಳವುದು ಬೇಡ.
ಸಿಂಹ ರಾಶಿ : ಮೇಲಧಿಕಾರಿಗಳ ಜೊತೆ ಕಲಹ ಮಾಡಿಕೊಳ್ಳುವಿರಿ. ಮಿತ್ರರ ನಡುವೆ ದ್ವೇಷವು ಬೆಳೆಯಬಹುದು. ವೃತ್ತಿಯಲ್ಲಿ ಒತ್ತಡವು ಹೆಚ್ಚಾಗಿರುವುದು. ಸಂಗಾತಿಯ ಜೊತೆ ಸಮಾರಂಭಗಳಲ್ಲಿ ಭಾಗವಹಿಸುವಿರಿ. ಆರ್ಥಿಕ ವ್ಯವಹಾರದಲ್ಲಿ ನೀವು ಇಂದು ದುರ್ಬಲರಾಗುವಿರಿ. ಹೊಸ ಕಾರ್ಯದಲ್ಲಿ ಹುಮ್ಮಸ್ಸು ಅತಿಯಾಗುವುದು. ಕೆಲವು ಸ್ವಭಾವವನ್ನು ತೋರಿಸುವುದು ಉಚಿತವಾಗದು. ವಸ್ತುವನ್ನು ಕಳೆದುಕೊಂಡು ಚಿಂತಿತರಾಗುವಿರಿ. ಸ್ವಾವಲಂವನೆಯಿಂದ ಜೀವನವನ್ನು ನಡೆಸುವಿರಿ. ನಿಮಗೆ ವಹಸಿದ ಕೆಲಸದಲ್ಲಿ ನಿಷ್ಠೆಯನ್ನು ತೋರಿಸುವಿರಿ. ಅಶುಭವಾರ್ತೆಯು ನಿಮ್ಮನ್ನು ಕುಗ್ಗಿಸಬಹುದು. ವ್ಯರ್ಥ ಕಾಲಹರಣವನ್ನು ಮಾಡಿ ಸಂಪತ್ತನ್ನೂ ಕಳೆದುಕೊಳ್ಳಬೇಕಾಗುವುದು. ಅತಿಯಾದ ನೋವನ್ನೂ ಸಹಿಸುವಿರಿ.
ಕನ್ಯಾ ರಾಶಿ : ಮಾತಿನಲ್ಲಿ ಉದ್ವೇಗವು ಹೆಚ್ಚಿರಲಿದೆ. ನಿಮ್ಮೊಳಗೇ ನಾನಾ ದ್ವಂದ್ವಗಳು ಕಾಣಿಸಿಕೊಳ್ಳಲಿವೆ. ದೈವಾನುಗ್ರಹವನ್ನು ನೀವು ಪಡೆದುಕೊಳ್ಳಬೇಕಾಗುವುದು. ನಕಾರಾತ್ಮಕ ಭಾವನೆಗಳಿಂದ ನಿಮಗೆ ಕಿರಿಕಿರಿಯಾಗಿ ಬಿಡಲೂ ಸಾಧ್ಯವಾಗದು. ಸಾಲ ಹೆಚ್ಚಾಗುವ ಭೀತಿಯು ಇರುವುದು. ಸಂಗಾತಿಯ ಪರವಾಗಿ ನೀವು ಮಾತನಾಡುವುದು ಅಚ್ಚರಿಯಾದೀತು. ನಿಮ್ಮವರಿಗೆ ಆದ ಅಪಮಾನದಿಂದ ನೀವು ಕೋಪಗೊಳ್ಳುವಿರಿ. ನಿಮ್ಮ ಔದಾರ್ಯವನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಒರಟು ಸ್ವಭಾವವನ್ನು ಬಿಡುವುದು ಉತ್ತಮ. ಅದೃಷ್ಟವನ್ನು ನಂಬುವುದಕ್ಕಿಂತ ಸಾಮರ್ಥ್ಯವನ್ನು ನಂಬುವುದು ಒಳ್ಳೆಯದು. ಅತಿಯಾದ ಧನಾರ್ಜನೆಯ ಚಿಂತೆಯು ನಿಮ್ಮ ಎಲ್ಲ ಕೆಲಸಗಳನ್ನು ಮರೆಸುವುದು. ಕಾನೂನು ಸಮರದಲ್ಲಿ ಸೋಲುಣ್ಣಬೇಕಾಗುವುದು. ನಿಮ್ಮ ವ್ಯಕ್ತಿತ್ವದ ನಿರ್ಮಾಣವು ಇನ್ನಷ್ಟು ಆಗಬೇಕಿದೆ. ಅನುಕರಿಸುವ ಸ್ವಭಾವವು ಹೆಚ್ಚು ಇರುವುದು.
ತುಲಾ ರಾಶಿ : ಶತ್ರುಗಳ ತೊಂದರೆಯಿಂದ ತಪ್ಪಿಸಿಕೊಳ್ಳಲು ನಿಮ್ಮ ಬೇರೆ ಕೆಲಸಗಳನ್ನು ಪಕ್ಕಕ್ಕಿರಿಸುವಿರಿ. ಅನಿರೀಕ್ಷಿತ ಸಹಾಯವು ನಿಮಗೆ ಸಿಕ್ಕಲಿದೆ. ಇಂದು ನಿಮ್ಮಲ್ಲಿ ವಿನೋದದ ಮನಃಸ್ಥಿತಿ ಇರುವುದು. ಸಾಮಾಜಿಕ ಚಟುವಟಿಕೆಯಲ್ಲಿ ಬಹಳ ದಿನಗಳ ಅನಂತರ ಭಾಗವಹಿಸುವಿರಿ. ಪ್ರಣಯದಲ್ಲಿ ಆಸಕ್ತಿಯು ಹೆಚ್ಚು ಇರುವುದು. ಮನಸ್ಸು ಉದ್ವೇಗದಿಂದ ಹೊರಬರಲು ಮನಸ್ಸು ಮಾರ್ಗವನ್ನು ಹುಡುಕುವುದು. ಆಪ್ತರನ್ನು ಕಳೆದುಕೊಳ್ಳುವ ಭಯವು ಉಂಟಾಗಬಹುದು. ಧನಲಾಭದಿಂದ ಆರ್ಥಿಕತೆಯೂ ಸುಸ್ಥಿರವಾಗುವುದು. ಬಹಳ ದಿನಗಳಿಂದ ಸಾಗುತ್ತಿದ್ದ ಕೆಲಸವನ್ನು ಇಂದೇ ಮುಗಿಸಬೇಕೆಂದು ನಿರ್ಧರಿಸುವಿರಿ. ಸಂದರ್ಭವನ್ನು ನೋಡಿ ಮಾತನಾಡುವುದು ಉತ್ತಮ. ಸುಲಭದ ಕೆಲಸಗಳನ್ನು ಮೊದಲು ಮಾಡಿಕೊಳ್ಳಿ.
ವೃಶ್ಚಿಕ ರಾಶಿ : ನಿಮ್ಮ ಆತ್ಮವಿಶ್ವಾಸವು ಒಂದು ಮಿತಿಯಲ್ಲಿ ಇರಲಿ. ನಿಮಗೆ ಅಧಿಕಾರವನ್ನು ಕೊಡುವ ಬಗ್ಗೆ ಮಾತುಕತೆಗಳು ನಡೆಯಬಹುದು. ವ್ಯಕ್ತಿಗಳ ಮೇಲೆ ವಿರಕ್ತಿ ಉಂಟಾಗಬಹುದು. ನಿಮ್ಮವರ ಇಂಗಿತವನ್ನು ಅರ್ಥಮಾಡಿಕೊಳ್ಳುವಲ್ಲಿ ಸೋಲುವಿರಿ. ಸಾಹಿತ್ಯಾಸಕ್ತರಿಗೆ ಅನುಕೂಲಕರವಾದ ಸನ್ನಿವೇಶಗಳು ಬರಬಹುದು. ಸಂಕಷ್ಟಗಳ ನಿವಾರಣೆಗೆ ದೈವದ ಮೊರೆ ಹೋಗುವಿರಿ. ಬಲವಂತವಾಗಿ ನೆಮ್ಮದಿಯನ್ನು ತಂದುಕೊಳ್ಳುವಿರಿ. ನಿಮ್ಮ ಯೋಜನೆಯನ್ನು ಸುಲಭ ಮಾಡಿಕೊಂಡು ಖರ್ಚನ್ನು ಕಡಿತಗೊಳಿಸಿ. ಈ ದಿನವು ದುರಂತದಲ್ಲಿ ಕೊನೆಯಾಗಬಹುದು. ನಿಮ್ಮ ಉಪಯೋಗವನ್ನು ಪಡೆದು ಕೈ ಬಿಡಬಹುದು. ಉದ್ಯಮದ ಆದಾಯವನ್ನು ಹೆಚ್ಚು ಮಾಡಿಕೊಳ್ಳುವಿರಿ. ಉದ್ವೇಗದಲ್ಲಿ ಏನಾದರೂ ಮಾಡಿಕೊಳ್ಳುವಿರಿ.
ಧನು ರಾಶಿ : ಹಲವು ದಿನಗಳ ಪ್ರಯತ್ನದ ಅನಂತರ ವಿವಾಹವು ನಿಶ್ಚಯವಾದುದು ಸಂತೋಷವನ್ನು ಕೊಡುವುದು. ಸಹೋದ್ಯೋಗಿಗಳ ಜೊತೆ ವಿರೋಧ ಕಟ್ಟಿಕೊಂಡ ಕಾರಣ ಇಂದಿನ ಕಛೇರಿಯ ಕೆಲಸವು ಅಸ್ತವ್ಯಸ್ತವಾಗುವುದು. ಯಾಂತ್ರಿಕ ಕಾರ್ಯದಲ್ಲಿ ಹೆಚ್ಚು ಸಫಲತೆ ಸಿಗಲಿದೆ. ವೃತ್ತಿಯಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ಸಿಗಬಹುದು. ಸ್ವಂತ ಉದ್ಯಮಕ್ಕೆ ವೇಗವನ್ನು ಕೊಡುವ ಕಾರ್ಯವು ಆಗಬೇಕಿದೆ. ತಂದೆಯಿಂದ ಸಂಪತ್ತನ್ನು ಪಡೆಯುವಿರಿ. ಸಹೋದ್ಯೋಗಿಯ ಕಾರಣದಿಂದ ನಿಮಗೆ ಬೈಗುಳ ಸಿಗುವುದು. ಭಯವನ್ನು ಬಿಟ್ಟು ಬಂದ ಅವಕಾಶಗಳನ್ನು ಪಡೆಯಿರಿ. ಇಂದು ಅಸಾಧ್ಯ ಕಾರ್ಯದಲ್ಲು ದುಸ್ಸಾಹಸ ಮಾಡುವುದು ಬೇಡ. ಸಕಾರಾತ್ಮಕ ಚಿಂತನೆಯ ಬಗ್ಗೆ ಹೆಚ್ಚು ಗಮನವಿರಲಿ. ರಾಜಕೀಯದಲ್ಲಿ ಕೆಲವು ಬದಲಾವಣೆ ಆಗಬಹುದು.
ಮಕರ ರಾಶಿ : ಸಾಮಾಜಿಕ ಕಾರ್ಯವನ್ನು ಮಾಡಲು ಆಸಕ್ತಿಯು ಇದ್ದರೂ ಮಾಡಲಾಗದು. ಬಂಧುಗಳ ಆಗಮನದಿಂದ ನಿಮಗೆ ಕಷ್ಟವಾದಗುವುದು. ಇಂದಿನ ನಿಮ್ಮ ಉದ್ಯೋಗದಲ್ಲಿ ಹೆಚ್ಚಿನ ವೃದ್ಧಿ ಆಗಬಹುದು. ಖರ್ಚನ್ನು ನಿಯಂತ್ರಣಕ್ಕೆ ತಂದುಕೊಳ್ಳಿ. ನಿಮ್ಮದನ್ನಾಗಿ ಮಾಡಿಕೊಂಡಿದ್ದು ಸ್ವಲ್ಪ ಭೂಮಿಯು ಪರರ ಪಾಲಾಗಬಹುದು. ನೀವು ಇಂದು ಬೇಸರದಿಂದ ಯಾರ ಸಹಾಯವನ್ನೂ ಇಚ್ಛಿಸುವುದಿಲ್ಲ. ಬೆಳಗಿನಿಂದ ಮನಸ್ಸಿನಲ್ಲಿ ಭಯವು ಕಾಡಬಹುದು. ಆಲಸ್ಯವು ಇಂದಿನ ಕಛೇರಿಯ ಕೆಲಸವನ್ನು ನಿಧಾನ ಮಾಡಿಸುವುದು. ಮನೋನಿಗ್ರಹದ ಬಗ್ಗೆ ಗಮನವನ್ನು ಕೊಡುವುದು ಮುಖ್ಯವಾಗಿರಲಿ. ನಿಮ್ಮ ಸ್ವಭಾವವು ಇದ್ದಕಿದ್ದಂತೆ ಬದಲಾಗಿ ಪ್ರೀತಿಸುವವರಿಗೆ ಇದು ಕಷ್ಟವಾಗಬಹುದು. ಹಿತಶತ್ರುಗಳನ್ನು ದೂರವಿಟ್ಟು ಕೆಲಸವನ್ನು ಸಾಧಿಸಿಕೊಳ್ಳಬೇಕಾಗಿದೆ. ಜೀವನ ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ.
ಕುಂಭ ರಾಶಿ : ಭವಿಷ್ಯದ ನಿಧಿಯಾಗಿ ಭೂಮಿಯನ್ನು ಖರೀದಿಸುವಿರಿ. ವಿವಾಹಕ್ಕೆ ಬಂದಿರುವ ವಿಘ್ನಗಳನ್ನು ನೀವು ಪರಿಹರಿಸಿಕೊಳ್ಳುವುದು ಅನಿವಾರ್ಯವಾದೀತು. ಓದಿನಲ್ಲಿ ಆಸಕ್ತಿ ಕಡಿಮೆಯಾಗಿ ಅನ್ಯ ಚಟುವಟಿಕೆಯಲ್ಲಿ ತೊಡಗುವಿರಿ. ಪುಣ್ಯಕ್ಷೇತ್ರಗಳ ದರ್ಶನಭಾಗ್ಯವು ಸಿಗುವುದು. ಆರೋಗ್ಯದ ಸಮಸ್ಯೆಯು ದೂರವಾಗಲು ಯೋಗ್ಯವಾದ ಆಹಾರವನ್ನು ಸೇವಿಸಿ. ಬಂಧುಗಳ ಭೇಟಿಯಿಂದ ಉತ್ಸಾಹವಿರಲಿದೆ. ಇಂದು ಆಗಬೇಕಾದ ಕೆಲಸಗಳನ್ನು ವೇಗವಾಗಿಯೂ ಹಾಗೂ ಬಹಳ ಎಚ್ಚರಿಕೆಯಿಂದ ಮಾಡುವಿರಿ. ಸಹೋದರನಿಂದ ಅನಿರೀಕ್ಷಿತ ಸಹಾಯವು ಸಿಗಬಹುದು. ಸಾಲವಾಗಿ ಪರಿಚಿತರಿಗೆ ಹಣವನ್ನು ಕೊಡಬೇಕಾದೀತು. ದಾಂಪತ್ಯದ ಕಲಹವನ್ನು ಮೌನವಹಿಸಿ ನೀವೇ ಶಾಂತಗೊಳಿಸಿ. ಸಂಗಾರಿಯ ನಡುವೆ ಮಾತಿಗೆ ಮಾತು ಬೆಳೆಯುವುದು ಬೇಡ. ಕಾರ್ಯದಲ್ಲಿ ಮನಸ್ಸು ದುರ್ಬಲವಾದಂತೆ ತೋರುವುದು. ನೀವು ಇಂದು ಕಛೇರಿಯ ಚಿಂತೆಯಲ್ಲಿ ಇರುವ ಕಾರಣ ಎಲ್ಲರ ಮೇಲೂ ಸಿಟ್ಟುಗೊಳ್ಳುವಿರಿ.
ಮೀನ ರಾಶಿ : ಅನಿರೀಕ್ಷಿತ ಧನಲಾಭದಿಂದ ಸಂತಸವಾಗಲಿದೆ. ಸ್ನೇಹಿತರು ಹಣದ ಉಳಿತಾಯಕ್ಕೆ ಉಪಾಯವನ್ನು ಕೊಡುವರು. ಉನ್ನತ ವಿದ್ಯಾಭ್ಯಾಸದ ಕುರಿತು ಸ್ನೇಹಿತರ ಜೊತೆ ಚರ್ಚೆ ನಡೆಸುವಿರಿ. ಕುಟುಂಬ ನಿಮ್ಮ ಮಾರ್ಗದರ್ಶನವನ್ನು ಅಪೇಕ್ಷಿಸುವುದು. ಸಭೆಗೆ ಅತಿಥಿಯಾಗಿ ಭಾಗವಹಿಸುವಿರಿ. ಅಸ್ತಿ ಹಂಚಿಕೆಯ ವಿಚಾರವು ಇಂದು ಮುನ್ನೆಲೆಗೆ ಬರಬಹುದು. ನಿಮ್ಮ ಕೆಲಸಗಳಿಗೆ ತಾತ್ಕಾಲಿಕ ತೊಂದರೆಯು ಬರಬಹುದು. ವ್ಯಾಪಾರದಿಂದ ಅಭಿವೃದ್ಧಿಯ ಒಂದೊಂದೇ ಹಂತವನ್ನು ಏರುವಿರಿ. ದಿನಸಿ ವ್ಯಾಪಾರಿಗಳಿಗೆ ಉತ್ತಮ ಲಾಭವು ಇರಲಿದೆ. ಉನ್ನತ ಸ್ಥಾನವು ಪ್ರಭಾವೀ ವ್ಯಕ್ತಿಯ ಸಹಕಾರದಿಂದ ಪ್ರಾಪ್ತವಾಗುವುದು. ನಿಮ್ಮವರ ಮೇಲಿದ್ದ ನಿಮ್ಮ ಅಭಿಪ್ರಾಯವು ಬದಲಾಗಬಹುದು. ನಿಮ್ಮ ನಿರೀಕ್ಷೆಯು ಇಂದು ಕಡಿಮೆಯಾಗಲಿದೆ.
-ಲೋಹಿತಶರ್ಮಾ 8762924271 (what’s app only)
Published On - 12:15 am, Sat, 11 November 23