Daily Horoscope 13 July: ಜವಾಬ್ದಾರಿಗಳು ಹೆಗಲೇರಬಹುದು, ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ
ಇಂದಿನ (2023 ಜುಲೈ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಧೃತಿ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 11 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:15 ರಿಂದ 03:51ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:12 ರಿಂದ 07:48 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:25 ರಿಂದ 11:01ರ ವರೆಗೆ.
ಮೇಷ: ನಿಮ್ಮ ಮಾತಿಗೆ ಗೌರವವು ಕಡಿಮೆ ಆಗಬಹುದು. ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲು ಮಾನಸಿಕ ಸ್ಥಿತಿಯಲ್ಲಿ ಕೊರತೆ ಕಾಣುವುದು. ಮಾತನ್ನು ಇಂದು ಕಡಿಮೆ ಮಾಡಲಿದ್ದು, ಅಚ್ಚರಿಯಾದೀತು. ಉಳಿತಾಯದ ಹಣವನ್ನು ಹಾಗೆಯೇ ಇಟ್ಟುಕೊಳ್ಳುವುದು ಉತ್ತಮ. ಆಲಸ್ಯದಿಂದ ದೂರವಿದ್ದರೂ ಅಪವಾದವು ಬರಬಹುದು. ನಿಮ್ಮ ಸಾಧನೆಯನ್ನು ಗೌರವಿಸಲಿದ್ದಾರೆ. ಮೂರ್ಖರಂತೆ ವಾದ ಮಾಡಲು ಹೋಗಿ ಮನಸ್ಸನ್ನು ಕೆಡಿಸಿಕೊಳ್ಳುವುದು ಬೇಡ. ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ನಿಮ್ಮ ಕೆಲಸವನ್ನು ಏಕಾಗ್ರತೆಯಿಂದ ಮಾಡಿ.
ವೃಷಭ: ಅನಿವಾರ್ಯವಾಗಿ ಸ್ನೇಹಿತರ ಸಹಾಯವನ್ನು ಪಡೆಯುವಿರಿ. ನಿಮ್ಮ ವೇಗಕ್ಕೆ ನಿಯಂತ್ರಣವನ್ನು ಕಂಡುಕೊಳ್ಳುವುದು ಉತ್ತಮ. ನಿಮ್ಮ ಬಗ್ಗೆ ನಿಮಗೇ ಅಸಮಾಧಾನ ಉಂಟಾಗಬಹುದು. ಬರಬೇಕಿದ್ದ ಹಣವು ಬಾರದೇ ಚಿಂತೆಯಾಗುವುದು. ಹೊಸ ಸ್ಥಳವು ನಿಮಗೆ ಒಗ್ಗದೇ ಹೋಗಬಹುದು. ಅಂದುಕೊಂಡ ಕೆಲಸಗಳಿಗೆ ಅಡ್ಡಿಗಳು ಬರಲಿದ್ದು, ಹತಾಶಾಭಾವವು ಮೂಡಬಹುದು. ನಿಮ್ಮ ಎಂದಿನ ಸಹನೆಯನ್ನು ಬಿಡದೇ ಇಟ್ಟುಕೊಂಡರೆ ಸತ್ಫಲವನ್ನು ಉಣ್ಣುವ ಅವಕಾಶವು ಸಿಗಬಹುದು. ಧರ್ಮದಲ್ಲಿ ನಂಬಿಕೆ ಹೆಚ್ಚಾಗಬಹುದು. ಗುರುದರ್ಶನವು ನಿಮಗೆ ನೆಮ್ಮದಿಯನ್ನು ನೀಡಬಹುದು.
ಮಿಥುನ: ನಿಮಗೆ ಅನೇಕ ದ್ವಂದ್ವಗಳು ಕಾಡಲಿದ್ದು ತೀರ್ಮಾನವನ್ನು ಮಾಡಲು ಕಷ್ಟವಾದೀತು. ಶತ್ರುಗಳ ಮೇಲೆ ನೀವು ಬಲಪ್ರದರ್ಶವನ್ನು ಮಾಡಲು ಆಲೋಚಿಸುವಿರಿ. ನಿಮ್ಮ ಉದ್ಯಮದ ಕಡೆ ಗಮನಹರಿಸಲು ಕಷ್ಟವಾದೀತು. ಒತ್ತಡಗಳು ನಿಮ್ಮ ಕೆಲಸವನ್ನು ನಿಧಾನವಾಗುವಂತೆ ಮಾಡಿವೆ. ಹೊಂದಾಣಿಕೆಯನ್ನು ಮಾಡಿಕೊಳ್ಳಲು ನಿಮಗೆ ಬೇಸರವಸದೀತು. ಎಲ್ಲದಕ್ಕೂ ನಿವೇ ಭಾಗಬೇಕು ಎಂಬ ಮನೋಭಾವವನ್ನು ಇಟ್ಟುಕೊಳ್ಳುವುದು ಬೇಡ. ನಿಮಗೆ ಕೆಲವು ಜವಾಬ್ದಾರಿಗಳು ಬರಲಿದ್ದು ಅದನ್ನು ನಿಭಾಯಿಸುವ ಸಾಮರ್ಥ್ಯವನ್ನು ನೀವೇ ಗಮನಸಿಕೊಳ್ಳಿ. ದುರ್ಗೆಯನ್ನು ಆರಾಧಿಸಿ.
ಕರ್ಕ: ಆರ್ಥಿಕವಾಗಿ ನೆರವನ್ನು ನೀಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಸೌಜನ್ಯವಾದರೂ ಇರಲಿ. ಸ್ತ್ರೀಯರಿಂದ ಬೈಗುಳವು ಸಿಗಬಹುದು. ಉದ್ಯೋಗದಲ್ಲಿ ಪ್ರಾಮಾಣಿಕತೆ ಇದ್ದರೂ ಅಪವಾದವು ಬರಬಹುದು. ಸಾಮಾಜಿಕ ಕಾರ್ಯದಲ್ಲಿ ಜನರನ್ನು ಒಗ್ಗೂಡಿಸಿ ಕೆಲಸವನ್ನು ಮಾಡುವಿರಿ. ಸಂಗಾತಿಯಿಂದ ಸಿಗಬೇಕಾದ ಪ್ರೀತಿಯು ಕಡಿಮೆ ಆಗಬಹುದು. ನಿಮ್ಮ ವರ್ತನೆಯು ಬೇರೆ ರೀತಿಯಲ್ಲಿ ತೋರಲಿದೆ. ಏಕಾಂತವನ್ನು ಇಚ್ಛಿದರೂ ಇರಲು ನಿಮಗೇ ಕಷ್ಟವಾದೀತು. ಬೇಸರವನ್ನು ಆಪ್ತರ ಬಳಿ ಸಮಾಧಾನ ಮಾಡಿಕೊಳ್ಳಿ. ಯಾರು ಏನೇ ಕೊಟ್ಟರೂ ಅಗತ್ಯತೆನ್ನು ಗಮನಿಸಿಕೊಂಡು ಸ್ವೀಕರಿಸಿ.
ಸಿಂಹ: ಇಂದು ಬುದ್ಧಿಪೂರ್ವಕವಾಗಿ ತಪ್ಪನ್ನು ಮಾಡಿ ಪಶ್ಚಾತ್ತಾಪಪಡುವಿರಿ. ಇರುವ ಕೆಲಸವನ್ನೂ ಬಿಟ್ಟು ನೀವು ಹೊಸ ಕೆಲಸ ಸಿಗದೇ ಮನಸ್ಸಿನಲ್ಲಿಯೇ ಒದ್ದಾಡುವಿರಿ. ಕೋಪವು ಬಂದರೂ ವ್ಯಕ್ತಪಡಿಸಲಾಗದ ಸ್ಥಿತಿ ಬರಲಿದೆ. ನೂತನ ವಸ್ತುಗಳನ್ನು ಖರೀದಿಸುವಿರಿ. ನಾಲಿಗೆ ಚಪಲಕ್ಕೆ ಆಹಾರವನ್ನು ತಿಂದು ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ಸಂಗಾತಿಯ ಜೊತೆ ಸಮಯವನ್ನು ಕಳೆಯುವ ಮನಸ್ಸಾಗುವುದು. ಇಬ್ಬರ ಸಮ್ಮತಿಯನ್ನು ಕೇಳಿಕೊಳ್ಳುವುದು ಉತ್ತಮ. ದೂರಪ್ರಯಾಣವನ್ನು ರದ್ದು ಮಾಡಿರಿ. ಆರೋಗ್ಯಕ್ಕಾಗಿ ಸೂರ್ಯನ ಸ್ತೋತ್ರವನ್ನು ಸೂರ್ಯೋದಯಕ್ಕಿಂತ ಸ್ವಲ್ಪ ಮೊದಲು ಪಠಿಸಿ.
ಕನ್ಯಾ: ದೈವಜ್ಞರ ಸೂಚನೆಯ ಮೇರೆಗೆ ದೋಷಪರಿಹಾರಕ್ಕಾಗಿ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ನಿಮ್ಮ ಬೆಂಬಲಕ್ಕೆ ಹಿರಿಯರು ನಿಲ್ಲುವರು. ಶತ್ರುಗಳ ವಿರುದ್ಧ ನೀವು ದೂರನ್ನು ದಾಖಲಿಸುವಿರಿ. ಕಚೇರಿಯ ಕಾರ್ಯಗಳು ಮಂದಗತಿಯಲ್ಲಿ ಸಾಗಲಿದ್ದು ವೇಗವನ್ನು ಪಡೆಯಲು ಸೂಚನೆ ಬರಬಹುದು. ನಿಮ್ಮ ದುಃಖಕ್ಕೆ ಬಂಧುಗಳ ಸಾಂತ್ವನವು ಸಿಗಲಿದೆ. ಲಭ್ಯತೆಯನ್ನು ರೂಢಿಸಿಕೊಳ್ಳಲು ಶ್ರಮಿಸುವಿರಿ. ಹಣಕಾಸಿನ ವ್ಯವಹಾರದಿಂದ ಇಂದು ನೀವು ದೂರ ಉಳಿಯುವುದು ಉತ್ತಮ. ಲಕ್ಷ್ಮೀನಾರಾಯಣ ಕೃಪೆಯನ್ನು ಬಯಸಬೇಕಾಗುವುದು. ಕೆಲಸದಲ್ಲಿ ಧೈರ್ಯದ ಕೊರತೆ ಕಾಣಲಿದೆ.
ತುಲಾ: ಯಂತ್ರೋಪಕರಣ ಹಾಗೂ ವಾಹನದ ಕಾರಣಕ್ಕೆ ನಿಮ್ಮ ಹಣವು ಖರ್ಚಾಗಬಹುದು. ಶ್ರಮವಹಿಸಿದಷ್ಟು ಫಲವು ಸಿಗಲಿಲ್ಲ ಎಂಬ ಹತಾಶೆಯು ಸ್ವಲ್ಪ ಸಮಯ ಕಾಡಬಹುದು. ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವಿರಿ. ಇನ್ನೊಬ್ಬರಿಗೆ ಹೇಳಲು ಅಂಜುವಿರಿ. ದಾಂಪತ್ಯದಲ್ಲಿ ಮಾತಿಗೆ ಮಾತು ಬೆಳೆದು ಅಣ್ಣ ಬಿರುಕು ಬಿಡಬಹುದು. ಪ್ರೇಮಿಯನ್ನು ನೀವು ಬಹಳ ಜತನದಿಂದ ನೋಡಿಕೊಳ್ಳಬೇಕಾದ ಅವಶ್ಯಕತೆ ಇರಲಿದೆ. ಹಿರಿಯರಿಗೆ ಎದುರುತ್ತರವನ್ನು ಕೊಡುವ ಅಭ್ಯಾಸ ಒಳ್ಳೆಯದಲ್ಲ. ಹೇಳಿದಂತೆ ಮಾಡಿ. ಲಕ್ಷ್ಮೀಕಟಾಕ್ಷವನ್ನು ಬಯಸಿ ಇಂದು ಮನೆಯಲ್ಲಿ ಧಾರ್ಮಿಕ ಆಚರಣೆಗಳನ್ನು ಮಾಡುವಿರಿ.
ವೃಶ್ಚಿಕ: ಮಾತಿನಿಂದ ದ್ವೇಷವನ್ನು ಕಟ್ಟಿಕೊಳ್ಳುವಿರಿ. ಉತ್ಸಾಹದಿಂದ ವಾಹನೆ ಚಾಲನೆ ಬೇಡ. ಅಪಾಯವನ್ನು ತಂದುಕೊಳ್ಳಬಹುದು. ಮೇಲಧಿಕಾರಿಗಳ ಜೊತೆ ಸಂಬಂಧವು ಚೆನ್ನಾಗಿರಲಿ. ಸ್ತ್ರೀಯರು ಎಚ್ಚರಿಕೆಯಿಂದ ಇರುವುದು ಮುಖ್ಯ. ಖಾಸಗಿ ಸಂಸ್ಥೆಯಲ್ಲಿ ಉನ್ನತಸ್ಥಾನವನ್ನು ಪಡೆಯುವಿರಿ. ಅವಿವಾಹಿತರಿಗೆ ಯೋಗ್ಯವಾದ ಸಂಬಂಧವು ಕೂಡಿಬರಬಹುದದು. ಉದ್ಯೋಗವನ್ನು ಬದಲಿಸಿ ಉತ್ತಮ ಉದ್ಯೋಗವನ್ನು ಗಳಿಸುವಿರಿ. ವಿದ್ಯಾರ್ಥಿಗಳು ಓದಿನ ಕಡೆಗೆ ಲಕ್ಷ್ಯ ವಹಿಸದೇ ಧನಾರ್ಜನೆಯತ್ತ ಗಮನ ಹರಿಸುವಿರಿ. ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿ ಮಾಡುವ ಕೆಲಸದತ್ತ ಏಕಾಗ್ರತೆಯನ್ನು ಪ್ರಾರ್ಥಿಸಿ.
ಧನು: ಮಕ್ಕಳ ಶ್ರಮವನ್ನು ಕಂಡು ಪಾಲಕರಿಗೆ ಸಂತೋಷವಾಗಲಿದೆ. ನಿಮ್ಮವರ ಆರೋಗ್ಯದಲ್ಲಿ ಏರುಪೇರಾಗಿದ್ದ ತುರ್ತು ಚಿಕಿತ್ಸೆಯನ್ನು ಕೊಡಿಸಬೇಕಾದೀತು. ಹಲವು ದಿನಗಲಕ ಅನಂತರ ನೀವು ಋಣಮುಕ್ತರಾಗಿದ್ದೀರಿ. ವೃತ್ತಿಯಲ್ಲಿ ನಿಮಗೆ ಕಿರಿಕಿರಿ ಉಂಟಾಗಲಿದೆ. ಉನ್ನತ ಹುದ್ದೆಗೆ ಆಯ್ಕೆಯಾಗುವ ಸಂಭವವಿದೆ. ಮಕ್ಕಳ ಭವಿಷ್ಯವನ್ನು ನೀವು ಲಕ್ಷಿಸಿ ಕೆಲಸ ಮಾಡುವುದು ಉತ್ತಮ. ಸಮಯ ಮಿತಿಯನ್ನು ಅರಿತು ಕೆಲಸದಲ್ಲಿ ತೊಡಗಿಕೊಳ್ಳಿ. ನಿಮ್ಮ ಸ್ವಭಾವವನ್ನು ಬೇರೆಯವರು ದುರುಪಯೋಗ ಪಡಿಸಿಕೊಳ್ಳಬಹುದು. ನಿಮ್ಮ ಚಿಂತನಾಕ್ರಮವನ್ನು ಬದಲಿಸಿಕೊಳ್ಳಿ. ಸುಖವಾಗಿ ಇರಬಹುದು.
ಮಕರ: ನೀವು ಇಂದು ಉದ್ಯೋಗಕ್ಕೆ ಸೇರಿಕೊಂಡಿದ್ದು ಉದ್ವೇಗಕ್ಕೆ ಒಳಗಾಗುವಿರಿ. ಕೆಲಸಕ್ಕೆ ಧೈರ್ಯದ ಕೊರತೆ ಇರಲಿದ್ದು ಇನ್ನೊಬ್ಬರ ಸಹಾಯದ ಜೊತೆ ನಿಮಗೆ ಕೊಟ್ಟ ಕೆಲಸವನ್ನು ಮುಗಿಸುವಿರಿ. ಕುಟುಂಬದ ಜೊತೆ ಮಾತುಕತೆಯಲ್ಲಿ ಸಮಯವನ್ನು ಕಳೆಯುವಿರಿ. ಸಮಾಜದಿಂದ ಗೌರವದ ನಿರೀಕ್ಷೆಯಲ್ಲಿ ನೀವಿರುವಿರಿ. ತೀರ್ಥ ಕ್ಷೇತ್ರಗಳ ದರ್ಶನವನ್ನು ಮಕ್ಕಳ ಸಹಾಯದಿಂದ ಮಾಡುವಿರಿ. ಮನಸ್ಸನ್ನು ಏಕಾಗ್ರಗೊಳಿಸಲು ಪ್ರಯತ್ನಿಸುವಿರಿ. ಅನಾದರವನ್ನು ನೀವು ಲೆಕ್ಕಿಸದೇ ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ. ಶಿವನ ಆರಾಧನೆಯು ಬಹಳ ಮುಖ್ಯವಾದುದು.
ಕುಂಭ: ಆಸ್ತಿಯ ವಿಚಾರದಲ್ಲಿ ಹಿನ್ನಡೆಯಾಗಲಿದ್ದು, ನಿಮ್ಮ ಮನಸ್ಸೂ ಉತ್ಸಾಹವನ್ನು ಕಳೆದುಕೊಳ್ಳಬಹುದು. ಸಂಗಾತಿಯ ಮಾತನ್ನು ನೀವು ಕೇಳಬೇಕಾದೀತು. ಸ್ನೇಹಿತರಿಗೋಸ್ಕರವಾದರೂ ನೀವು ಹಣವನ್ನು ವ್ಯಯಮಾಡುವಿರಿ. ತಂದೆಯ ಕಡೆಯಿಂದ ಆಸ್ತಿಯನ್ನು ಪಡೆಯಲು ಆಲೋಚಿಸುವಿರಿ. ಆರೋಗ್ಯವು ಸರಿಯಾಗುತ್ತಿದ್ದರೂ ಆಸಕ್ತಿಯು ಕಡಿಮೆ ಇರಲಿದೆ. ನಿಮ್ಮ ವಸ್ತುಗಳನ್ನು ಅತಿಯಾಗಿ ಬಳಸಿ ಹಾಳು ಮಾಡಿಕೊಳ್ಳುವಿರಿ. ನೀವು ಇನ್ನೊಬ್ಬರನ್ನು ಹೋಲಿಕೆ ಮಾಡಿಕೊಂಡು ನಿಮ್ಮೊಳಗೇ ಸಂಕಟಪಡುವಿರಿ. ಶನಿಯ ಅನುಗ್ರಹವನ್ನು ಪಡೆಯಲು ಶನೈಶ್ಚರನಿಗೆ ಎಳ್ಳೆಣ್ಣೆಯ ನಂದಾದೀಪವನ್ನು ಸಂಕಲ್ಪದ ಜೊತೆ ಬೆಳಗಿ.
ಮೀನ: ಇಂದು ನಿಮಗೆ ಸಲ್ಲದ ಸಣ್ಣ ಅಪವಾದವೊಂದು ಬರಲಿದೆ. ಕಲಾವಿದರಿಗೆ ಉತ್ತಮ ಅವಕಾಶ ಹಾಗೂ ಪ್ರಶಂಸೆಯು ಸಿಗಲಿದೆ. ಇಂದು ನಿಮಗೆ ಕಾರ್ಯವು ಆಗಲೇಬೇಕಾಗಿದ್ದು ಪ್ರಯಾಣವು ಅನಿವಾರ್ಯವಾಗಬಹುದು. ಒಂದೇ ಬಾರಿಗೆ ಖರ್ಚಿನ ಎಲ್ಲ ಅವಕಾಶಗಳನ್ನು ಇಟ್ಟುಕೊಲ್ಳುವುದು ಬೇಡ. ನಿಮ್ಮ ಮಾತು ಇನ್ನೊಬ್ಬರಿಗೆ ಸಿಟ್ಟು ಬರುವಂತೆ ಇರಲಿದೆ. ಮಕ್ಕಳ ವಿದ್ಯಾಭ್ಯಾಸದ ಖರ್ಚುನಲ್ಲಿ ಸ್ವಲ್ಪ ಕಡಿಮೆ ಆಗಿದ್ದು ನಿಮಗೆ ಖುಷಿಯ ವಿಚಾರವಾಗಿದೆ. ನಿಮ್ಮ ನೀರೀಕ್ಷೆಯ ಮಟ್ಟಕ್ಕೆ ವ್ಯಾಪಾರವು ತಲುಪದಿರುವುದು ನಿಮ್ಮನ್ನು ಹತಾಶೆಗೊಳಿಸಬಹುದು.