Horoscope 14 Oct: ದಿನಭವಿಷ್ಯ, ನಿವು ಮಾಡಬೇಕು ಎಂದುಕೊಂಡ ಕಾರ್ಯಗಳಿಗೆ ಅಡೆತಡೆ ಸಾಧ್ಯತೆ, ಹಿರಿಯ ಸಲಹೆ ಪಡೆಯಿರಿ
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಅಕ್ಟೋಬರ್ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಐಂದ್ರ, ಕರಣ: ಕಿಂಸ್ತುಘ್ನ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 12 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:22 ರಿಂದ 10:50ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:47 ರಿಂದ 03:16ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:25 ರಿಂದ 07:53ರ ವರೆಗೆ.
ಮೇಷ ರಾಶಿ: ನಿಮ್ಮ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿ ಅನುಕೂಲತೆಯು ಕೆಲವು ಸಂದರ್ಭಗಳಲ್ಲಿ ಸಿಕ್ಕಿ ಸಂತೋಷವಾಗುವುದು. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ. ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ತೊಂದರೆ ಆದೀತು. ಮನೆಯನ್ನು ಬದಲಿಸಬೇಕಾಗುವುದು. ನೀವು ಸ್ಥಾನಕ್ಕಾಗಿ ಯಾರ ಮೇಲೂ ಅಪವಾದ ಹಾಕಬಹುದು. ಬೋಧಕರಿಗೆ ಉತ್ತಮ ಪ್ರಶಂಸೆಯು ಸಿಗುವುದು. ನಿಮ್ಮದಲ್ಲದ ದ್ರವ್ಯವನ್ನು ನೀವು ಇಟ್ಟುಕೊಳ್ಳಲು ಬಯಸುವುದಿಲ್ಲ. ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಆಗದು. ಆರ್ಥಿಕವಾಗಿ ಸಬಲರಾಗಲು ಗೌಪ್ಯ ವ್ಯಾಪಾರವನ್ನು ನಡೆಸುವಿರಿ. ಯಾರಾದರೂ ನಿಮ್ಮನ್ನು ಕೆರಳಿಸುವಂತೆ ಮಾಡಿಯಾರು. ಕಾರ್ತಿಕೇಯನ ಸ್ಮರಣೆ ಅತ್ಯವಶ್ಯಕ.
ವೃಷಭ ರಾಶಿ: ನಿಮಗೆ ಇಷ್ಟವಾದ ಸ್ಥಳಕ್ಕೆ ನೀವು ಹೋಗಲಿದ್ದೀರಿ. ಸಮಯವನ್ನು ನೀವು ವ್ಯರ್ಥ ಮಾಡಿಕೊಳ್ಳುವಿರಿ. ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ. ತಾಯಿಯ ಕಡೆಯಿಂದ ನಿಮಗೆ ಸಹಾಯವು ಸಿಗಬಹುದು. ಉನ್ನತ ವ್ಯಾಸಂಗದಲ್ಲಿ ಆಸಕ್ತಿಯು ಕಡಿಮೆ ಆಗುವುದು. ಮನೆಯ ಕೆಲಸದಿಂದ ಆಯಾಸವಾಗಬಹುದು. ನಿಮ್ಮ ಆಸೆಗಳನ್ನು ಆಪ್ತರಲ್ಲಿ ಹೇಳಿಕೊಳ್ಳಬಹುದು. ಕಛೇರಿಯ ಕೆಲಸಗಳನ್ನು ಮುಗಿಸಲು ಹೆಚ್ಚು ಸಮಯವನ್ನು ತೆಗದುಕೊಳ್ಳುವಿರಿ. ನಿಮ್ಮ ಹಳೆಯ ವಸ್ತುಗಳನ್ನು ಯಾರಿಗಾದರೂ ನಿಶ್ಶುಲ್ಕವಾಗಿ ಕೊಡುವಿರಿ. ನಿಮ್ಮ ವಿವಾಹದ ಬಗ್ಗೆ ಬಿಸಿಬಿಸಿ ಚರ್ಚೆಯು ಮನೆಯಲ್ಲಿ ನಡೆಯುವುದು. ಇಂದು ಯಾರಾದರೂ ನಿಮ್ಮ ಸಹಾಯಕ್ಕೆ ಬರಬಹುದು.
ಮಿಥುನ ರಾಶಿ: ಶ್ರಮಕ್ಕೆ ಯೋಗ್ಯವಾದ ಫಲವು ಲಭಿಸುವುದು. ಅಪರೂಪದ ವಸ್ತುವು ನಿಮಗೆ ಲಾಭವಾಗಲಿದೆ. ಮಹಿಳೆಯರು ಅಲಂಕಾರಿಕ ವಸ್ತುಗಳಿಗಾಗಿ ಖರ್ಚು ಮಾಡಬೇಕಾಗುವುದು. ಮಿತ್ರರ ನಡುವೆ ವೈಮನಸ್ಯ ಬರಬಹುದು. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಫಲರಾಗುವಿರಿ. ಸಹಾವಾಸದಿಂದ ನಿಮಗೆ ಅಪವಾದವು ಬರಬಹುದು. ಕುಟುಂಬದ ಜೊತೆ ಬಹಳ ದಿನಗಳ ಅನಂತರ ಸಂಯೋಷದ ಸಮಯವನ್ನು ಕಳೆಯುವಿರಿ. ಸಂಗಾತಿಯನ್ನು ಹೂಡಿಕೆಗೆ ಪ್ರೇರಿಸುವಿರಿ. ವಿದ್ಯಾರ್ಥಿಗಳ ಪ್ರತಿಭೆ ಪುರಸ್ಕಾರವು ಲಭ್ಯವಾಗುವುದು. ಆತುರದ ತೀರ್ಮಾನವನ್ನು ತೆಗೆದುಕೊಳ್ಳುವುದು ಬೇಡ. ಪ್ರಾಮಾಣಿಕತೆಯು ನಿಮ್ಮನ್ನು ಗೆಲ್ಲಿಸುವುದು.
ಕರ್ಕ ರಾಶಿ: ಮಕ್ಕಳ ವಿದ್ಯಾಭ್ಯಾಸವು ನಿಮಗೆ ಸಮಾಧಾನ ತರದು. ಸಮಾರಂಭಗಳಿಗೆ ಹೋಗುವ ಮನಸ್ಸಾದೀತು. ನಿಮ್ಮ ಭಾವನೆಗಳನ್ನು ಯಾರ ಜೊತೆಯೂ ಪ್ರಕಟಗೊಳಿಸುವುದಿಲ್ಲ. ಅಲ್ಪ ಲಾಭಕ್ಕೆ ನೀವು ತೃಪ್ತಿ ಪಡಬೇಕಾಗುವುದು. ಸ್ತ್ರೀಯರ ವಿಚಾರದಲ್ಲಿ ನೀವು ಜಾಗರೂಕತೆಯಿಂದ ಇರಬೇಕಾಗುವುದು. ನಿಮಗೆ ಬರಬೇಕಾದ ಹಣವು ನಿಮ್ಮ ಕೈಗೆ ಸಿಗದು. ಸಂಗಾತಿಯ ಮೇಲೆ ಬೇಸರದ ಭಾವವೂ ಮೂಡುವ ಸಾಧ್ಯತೆ ಇದೆ. ನಿಮ್ಮ ಅಶಿಸ್ತಿನ ವರ್ತನೆಯಿಂದ ಸಹೋದ್ಯೋಗಿಗಳ ನಡುವೆ ಮಾತುಕತೆಗಳು ಆಗಬಹುದು. ಇಂದು ನೀವು ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ಕೊಡುವಿರಿ. ಅತಿಥಿ ಸತ್ಕಾರವನ್ನು ಮಾಡಲು ಉತ್ಸಾಹವಿರುವುದು. ಉದ್ಯಮಕ್ಕೆ ಸಂಬಂಧಿಸಿದಂತೆ ನಿಮ್ಮ ಯೋಜನೆಯನ್ನು ಯಾರಾದರೂ ಬದಲಿಸಿಯಾರು.
ಸಿಂಹ ರಾಶಿ: ದಿನದ ಆರಂಭವು ಬಹಳ ಉತ್ಸಾಹದಿಂದ ಇರಲಿದ್ದು ಎಲ್ಲ ಜೊತೆ ಸೌಹಾರ್ದವಾಗಿ ಇರುವಿರಿ. ಉದ್ಯೋಗದ ಸ್ಥಳದಲ್ಲಿ ಮಿತವಾದ ಮಾತುಗಳನ್ನು ಆಡಬೇಕಾದೀತು. ವಾಹನ ಚಾಲನೆಯನ್ನು ಸುರಕ್ಷಿತವಾಗಿ ಮಾಡಿ. ಆಪ್ತರಿಂದ ನಿಮಗೆ ಉಡುಗೊರೆ ಸಿಗಬಹುದು. ನಿಮಗೆ ಸಿಕ್ಕ ಜವಾಬ್ದಾರಿಯಲ್ಲಿ ಪೂರ್ಣ ತೃಪ್ತಿ ಇರದು. ಯಾರ ಜೊತೆಯಾದರೂ ಬೆರೆಯಬೇಕು ಅನ್ನಿಸುವುದು. ಸಂಗಾತಿಗೆ ಕಿರಿಕಿರಿ ಉಂಟಾಗುವಂತೆ ಮಾಡುವಿರಿ. ಎಲ್ಲ ತಪ್ಪುಗಳಿಗೂ ನಿಮ್ಮನ್ನೇ ಬೆರಳು ಮಾಡಿ ತೋರಿಸಬಹುದು. ಸರಿಯಾದ ಉತ್ತರವನ್ನು ನೀಡಬೇಕಾಗುತ್ತದೆ. ಮಾಧ್ಯಮದ ಉದ್ಯೋಗಿಗಳಿಗೆ ಹೆಚ್ಚು ಒತ್ತಡ ಇರಲಿದೆ. ಮೇಲಧಿಕಾರಿಗಳ ವಿಶ್ವಾಸವನ್ನು ಗಳಿಸಲು ವಿಫಲರಾಗುವಿರಿ. ಯಾರದೋ ಮಾತಿಗೆ ಉದ್ವೇಗಕ್ಕೆ ಒಳಗಾಗುವಿರಿ. ನಿಮ್ಮ ನಾಜೂಕಿನ ಕಾರ್ಯಗಳು ಎಲ್ಲರಿಗೂ ಇಷ್ಟವಾಗುವುದು.
ಕನ್ಯಾ ರಾಶಿ: ಕಾರ್ಯಗಳಿಗೆ ಅಡೆತಡೆ ಉಂಟಾಗುವ ಶಂಕೆಯು ದೂರವಾಗುವುದು. ಮಿತವಾದ ಆಹಾರ ಸೇವನೆಯನ್ನು ಮಾಡುವಿರಿ. ಮಿತ್ರರ ಜೊತೆ ಪ್ರವಾಸ ಹೋಗಬಹುದು. ಹಿರಿಯರಿಂದ ನಿರೀಕ್ಷಿತ ಲಾಭವು ಸಿಗಲಿದ್ದು ಸಂತೋಷವಾಗುವುದು. ಇಂದು ವೈಯಕ್ತಿಕ ಕಾರ್ಯಗಳನ್ನು ಮಾಡಿ ಮುಗಿಸಿಕೊಳ್ಳುವಿರಿ. ಚರ್ಮಕ್ಕೆ ಸಂಬಂಧಿಸಿದಂತೆ ಏನಾದರೂ ಕಾಣಿಸಿಕೊಳ್ಳಬಹುದು. ಎಲ್ಲರನ್ನೂ ನಿಮ್ಮ ಪರವಾಗಿ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ವ್ಯರ್ಥ ತಿರುಗಾಟವನ್ನು ಮಾಡುವರು. ಉತ್ತಮ ಭೂಮಿಯ ಖರೀದಿಗೆ ಬಂಧುಗಳ ಸಲಹೆ ಪಡೆಯಿರಿ. ಇಂದು ನಿಮ್ಮ ಶ್ರಮದ ಕಾರ್ಯಗಳು ನಿರರ್ಥಕವಾಗಬಹುದು. ತೊಂದರೆಗಳನ್ನು ನೀವು ಸಕಾರಾತ್ಮಕವಾಗಿ ತೆಗೆದುಕೊಂಳ್ಳುವಿರಿ.
ತುಲಾ ರಾಶಿ: ಆಲಸ್ಯದ ಪ್ರವೃತ್ತಿಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಕ್ರಿಯಾಶೀಲತೆಗೆ ಬೇಕಾದ ಕ್ರಮವನ್ನು ತೆಗೆದುಕೊಳ್ಳುವುದು ಅನಿವಾರ್ಯ ಆಗಬಹುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು. ನಕಾರಾತ್ಮಕ ಆಲೋಚನೆಯನ್ನು ಇಂದು ಹೆಚ್ಚು ಮಾಡುವಿರಿ. ಮಕ್ಕಳ ವಿವಾಹಕ್ಕಾಗಿ ನೀವು ಓಡಾಡಿ ಆಯಾಸಪಡುವಿರಿ. ನಿಮ್ಮ ಜವಾಬ್ದಾರಿಯ ಮನೋಭಾವಕ್ಕೆ ಹೆಚ್ಚು ಒತ್ತಡವು ಬರಬಹುದು. ನಿಮ್ಮ ಇಂದಿನ ವರ್ತನೆಯಿಂದ ಬಂಧುಗಳಿಗೆ ಅಸಮಾಧಾನವಾಗುವುದು. ಸರ್ಕಾರದಿಂದ ಆಗಬೇಕಾದ ಕಾರ್ಯಗಳಲ್ಲಿ ಹಿನ್ನಡೆಯಾಗುವುದು. ನಿಮ್ಮ ಹಣವನ್ನು ಉಚಿತ ಸ್ಥಳದಲ್ಲಿ ಹೂಡಿಕೆ ಮಾಡಿ. ಯಾವುದೇ ಸಾಹಸ ಕಾರ್ಯವನ್ನು ಮಾಡಲು ಹೋಗುವುದು ಬೇಡ. ಕಷ್ಟಕಾಲದಲ್ಲಿ ಸಹಾಯ ಮಾಡಿದವರನ್ನು ನೀವು ಸ್ಮರಿಸಿಕೊಳ್ಳುವಿರಿ. ಗೃಹೋದ್ಯಮ ನಡೆಸುವವರಿಗೆ ಲಾಭವಿದೆ. ಅಪರಿಚಿತರ ಜೊತೆ ಮಾತುಕತೆ ಮಿತಿಯಲ್ಲಿ ಇರಲಿ.
ವೃಶ್ಚಿಕ ರಾಶಿ: ಮನೆಯಲ್ಲಿ ಮಂಗಲಕಾರ್ಯವನ್ನು ಮಾಡಲು ಪ್ರಯತ್ನಿಸುವಿರಿ. ಆದಾಯಕ್ಕೆ ಹತ್ತಾರು ಮೂಲಗಳು ನಿಮ್ಮೆದುರು ತೆರದುಕೊಳ್ಳುವುದು. ನೌಕರರ ವಿಚಾರಕ್ಕೆ ನೀವು ಸಿಟ್ಟುಗೊಳ್ಳುವಿರಿ. ಮತ್ತೆ ಮತ್ತೆ ನಿಮಗೆ ಅನಾರೋಗ್ಯವು ಕಾಣಿಸಿಕೊಂಡಿದ್ದು ವೈದ್ಯರಿಂದ ಚಿಕಿತ್ಸೆ ಪಡೆಯಿರಿ ಮತ್ತು ದೈವಜ್ಞರನ್ನು ಸಂಪರ್ಕಿಸಿ ದೈವಾನುಕೂಲದ ಬಗ್ಗೆಯೂ ಮಾತನಾಡಿ. ನಿಮ್ಮ ಪೊರ್ವಯೋಜಿತ ಕಾರ್ಯಗಳನ್ನು ಕ್ರಿಯಾರೂಪಕ್ಕೆ ತರಲು ನಿಮಗೆ ಸಾಧ್ಯವಾಗದು. ಏನಾದರೂ ಅಡೆತಡೆಗಳು ಬರಬಹುದು. ನಿಮಗೆ ಯಾರೂ ಸ್ಪಂದನೆ ಕೊಡದೇ ಹೋಗಬಹುದು. ಪುಣ್ಯ ಕ್ಷೇತ್ರಗಳ ದರ್ಶನವನ್ನು ಮಾಡಲು ಪ್ರಯಾಣ ಮಾಡುವಿರಿ. ಅನಿರೀಕ್ಷಿತವಾಗಿ ಕೆಲವು ವ್ಯಕ್ತಿಗಳ ಸಹಕಾರವು ಸಿಕ್ಕಿ ಸಂತೋಷವಾಗುವುದು. ನಿಮ್ಮ ಉನ್ನತ ಸ್ಥಾನಕೊಡುವ ಬಗ್ಗೆ ಒಮ್ಮತದ ಅಭಿಪ್ರಾಯವು ಬರಲಿದೆ.
ಧನು ರಾಶಿ: ನಿಮ್ಮ ಪ್ರೇಮವು ವಿಪರೀತ ಹೊದಲದಲ್ಲಿ ಸಿಕ್ಕಿಕೊಂಡಿದ್ದು ಇದು ಅದೇ ಚಿಂತೆಯು ನಿಮ್ಮನ್ನು ಕಾಡುವುದು. ನಿಮಗೆ ಆಗಬೇಕಾದ ಕಾರ್ಯಕ್ಕೆ ಹಣವೂ ಓಡಾಟವೂ ಅತಿಯಾಯಿತು ಎಂದು ಅನ್ನಿಸುವುದು. ಬಾರದಿರುವ ಹಣದ ಬಗ್ಗೆ ತಲೆ ಕೆಡಿಸಿಕೊಳ್ಳದೇ ವಿಧಿಚಿತ್ತದಂತೆ ಆಗುತ್ತದೆ ಎಂದು ಕೈ ಚೆಲ್ಲಿ ಕೂರುವಿರಿ. ಕಛೇರಿಯ ಒತ್ತಡದಿಂದ ಬೇರೆ ಯೋಚನೆಯ ಕಡೆ ಮನಸ್ಸು ಹೋಗದು. ಪ್ರಯಾಣದ ಸಮಯದಲ್ಲಿ ನಿಮ್ಮ ವಸ್ತುಗಳು ಕಳೆದುಹೋಗಬಹುದು. ಹೊಸ ವಿಚಾರಗಳು ನಿಮ್ಮ ಆಸಕ್ತಿಯನ್ನು ಹೆಚ್ಚಿಸುವುದು. ಬಂಧುಗಳ ಸಹಾಯದಿಂದ ಉದ್ಯೋಗ ಪ್ರಾಪ್ತಿಯ ಸಂಭವವಿದೆ. ಪ್ರಭಾವೀ ವ್ಯಕ್ತಿಗಳನ್ನು ವೈಯಕ್ತಿಕ ಕಾರ್ಯಗಳಿಗೆ ಬಳಸಿಕೊಳ್ಳುವಿರಿ. ಕೆಟ್ಟ ಮಾರ್ಗವನ್ನು ನೀವು ಗೊತ್ತಿಲ್ಲದೇ ಅನುಸರಿಸುವಿರಿ.
ಮಕರ ರಾಶಿ: ಕುಟುಂಬಕ್ಕೆ ನಿಮ್ಮಿಂದ ಆಗಬೇಕಾದ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವಿರಿ. ನಿಮ್ಮ ವಿದೇಶ ಪ್ರವಾಸವು ಕಾರಣಾಂತರಗಳಿಂದ ರದ್ದಾಗುವುದು. ನಿರೀಕ್ಷಿತ ಬಂಧುಗಳ ಆಗಮನದಿಂದ ಸಂತೋಷವಾಗುವುದು. ಸಮಾರಂಭದಲ್ಲಿ ನೀವು ಭಾಗವಹಿಸಲು ಉತ್ಸುಕರಾಗಿರುವಿರಿ. ನಿಮ್ಮ ಮಕ್ಕಳ ಮಾತಿಗೆ ಕೊಡುವ ಬೆಲೆಯಿಂದ ಅವರಿಗೆ ಸಂತೋಷವಾಗಿ ನಿಮ್ಮನ್ನು ಹೆಚ್ಚು ಇಷ್ಟಪಡುವರು. ದೂರ ಪ್ರಯಾಣದಿಂದ ಸುಖ ಪಡುವಿರಿ. ನ್ಯಾಯಾಲಯದಲ್ಲಿ ನಿಮ್ಮ ಕಾರ್ಯಗಳು ವಿಳಂಬವಾಗಿ ನಿಮ್ಮ ಮುಂದಿನ ಕಾರ್ಯಗಳಿಗೆ ತೊಂದರೆಯಾಗುವಂತೆ ತೋರುವುದು. ಯಾರಿಂದಲೋ ಅಧ್ಯಾತ್ಮದ ಕಡೆ ಪ್ರಭಾವಿತರಾಗುವಿರಿ. ದೀರ್ಘಕಾಲದ ಗೆಳೆತನವು ಕಲಹದಲ್ಲಿ ಮುಕ್ತಾಯವಾಗಬಹುದು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾದ ಕಾರಣ ಸೂಕ್ತ ಚಿಕಿತ್ಸೆ ನೀಡಿ. ಮಕ್ಕಳ ಏಕಾಗ್ರತೆಗೆ ತಜ್ಞರಿಂದ ಸಲಹೆ ಪಡೆಯಿರಿ.
ಕುಂಭ ರಾಶಿ: ಉದ್ಯೋಗದಲ್ಲಿ ಉನ್ನತ ಸ್ತರವನ್ನು ನೀವು ಏರುವ ಸನ್ನಿವೇಶವು ಸೃಷ್ಟಿಯಾಗುವುದು. ಎಲ್ಲರ ಒತ್ತಾಯಕ್ಕೆ ನೂತನ ವಾಹನದ ಖರೀದಿಗೆ ಮನಸ್ಸು ಮಾಡುವಿರಿ. ನಿಮ್ಮ ಔದಾರ್ಯವು ದುರ್ಬಳಕೆ ಆಗುವುದು. ಸಂತಾನದ ಬಗ್ಗೆ ಸಂಗಾತಿಯ ಜೊತೆ ಮಾತನಾಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆಯು ಇಲ್ಲದೇ ಹೋಗಬಹುದು. ಮಕ್ಕಳಿಗೆ ಭವಿಷ್ಯದ ಬಗ್ಗೆ ಕಲ್ಪನೆಯನ್ನು ಕೊಡುವಿರಿ. ಅಪೂರ್ಣ ಮಾಡಿಕೊಂಡ ಕಛೇರಿಯ ಕೆಲಸಗಳನ್ನು ಇಂದು ಪೂರ್ಣ ಮಾಡುವಿರಿ. ಅವಿವಾಹಿತರಿಗೆ ಬಂಧುಗಳಲ್ಲಿ ಉತ್ತಮ ಸಂಬಂಧವು ಪ್ರಾಪ್ತವಾಗುವುದು. ಆಸ್ತಿಯ ವಿಚಾರವಾಗಿ ವ್ಯರ್ಥ ವಾಗ್ವಾದಗಳನ್ನು ಮಾಡುವ ಬದಲು ಕಾನೂನಾತ್ಮಕ ಕ್ರಮಗಳಿಂದ ಅವುಗಳನ್ನು ಸರಿ ಮಾಡಿಕೊಳ್ಳಿ. ಔಚಿತ್ಯಯುಕ್ತವಾದ ಮಾತಿನಿಂದ ನಿಮಗೆ ಗೌರವವು ಸಿಗುವುದು. ನೀಲಕಂಠನ ಆರಾಧನೆಯನ್ನು ಮಾಡಿ.
ಮೀನ ರಾಶಿ: ನಿಮ್ಮ ಹೊಸ ಪ್ರಯತ್ನಕ್ಕೆ ಕುಟುಂಬದ ಬೆಂಬಲವು ಸಿಗುವುದು. ಅಲ್ಪಾವಧಿಯಲ್ಲಿ ಹೆಚ್ಚು ಪಡೆಯಬೇಕು ಎನ್ನುವ ಅತಿಯಾದ ಆಸೆ ಬೇಡ. ಸಂಗಾತಿಯ ಜೊತೆ ಕಲಹವಾಡಿ ಯಾವ ಕಾರ್ಯವನ್ನೂ ಮಾಡಲು ಹೋಗುವುದು ಬೇಡ. ಹಣದ ಮೇಲೆ ಸ್ವಲ್ಪ ನಿಯಂತ್ರಣ ಇಂದು ಅವಶ್ಯಕ. ವೈವಾಹಿಕ ಜೀವನದಲ್ಲಿ ಸಂತೋಷದ ಕ್ಷಣಗಳು ಬರಲಿದೆ. ಬೇಡದ ವಿಚಾರಗಳನ್ನು ಮಾತನಾಡುತ್ತ ಇರುವುದನ್ನು ಬಿಟ್ಟು ನಿಮ್ಮ ಕೆಲಸದಲ್ಲಿ ತೊಡಗಿ. ಪ್ರೀತಿಯಿಂದ ಹೇಳಿದರೆ ನಿಮ್ಮ ಕೆಲಸವು ಸಲೀಸಾಗಿ ಆಗುವುದು. ಅನ್ಯಾನ್ಯ ಆಲೋಚನೆಯನ್ನು ಮಾಡುವ ಮನಸ್ಸಿಗೆ ಸರಿಯಾದ ಕೆಲಸವನ್ನು ಕೊಡಿ. ಅನುರೂಪವಾದ ಸಂಗಾತಿಯ ಅನ್ವೇಷಣೆಯನ್ನು ಮಾಡುವಿರಿ. ವಿದ್ಯೆಯು ನಿಮ್ಮ ಬಳಕೆಗೆ ಬರಲಿದೆ.
-ಲೋಹಿತಶರ್ಮಾ – 8762924271 (what’s app only)