Nitya Bhavishya: ಆಸ್ತಿಗೆ ಸಂಬಂಧಿಸಿದಂತೆ ದಾಯಾದಿಗಳ ಕಲಹ ಎಚ್ಚರಿಕೆ ಇರಲಿ

ಇಂದಿನ (2023 ಏಪ್ರಿಲ್​ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Nitya Bhavishya: ಆಸ್ತಿಗೆ ಸಂಬಂಧಿಸಿದಂತೆ ದಾಯಾದಿಗಳ ಕಲಹ ಎಚ್ಚರಿಕೆ ಇರಲಿ
ಪ್ರಾತಿನಿಧಿಕ ಚಿತ್ರImage Credit source: deathbattle.fandom.com
Follow us
ಗಂಗಾಧರ​ ಬ. ಸಾಬೋಜಿ
|

Updated on: Apr 17, 2023 | 5:00 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವನೀ ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ರವಿ, ತಿಥಿ: ಏಕಾದಶೀ, ನಿತ್ಯನಕ್ಷತ್ರ : ಶ್ರವಣಾ, ಯೋಗ: ಶುಭ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06-18 ಕ್ಕೆ, ಸೂರ್ಯಾಸ್ತ ಸಂಜೆ 06-44 ಕ್ಕೆ, ರಾಹು ಕಾಲ 07:52 – 09:25ರ ವರೆಗೆ, ಯಮಘಂಡ ಕಾಲ 10:59 – 12:32ರ ವರೆಗೆ, ಗುಳಿಕ ಕಾಲ 02:05 – 03:39 ರವರೆಗೆ.

ಮೇಷ: ಮಹಿಳೆಯರಿಂದ ತೊಂದರೆಗಳು ಬರಬಹುದು. ಅವರ ಜೊತೆ ಮಾತನಾಡುವಾಗ ಎಚ್ಚರ ಇರಲಿ. ಆಮೇಲೆ ದುಃಖಗೊಂಡರೆ ಪ್ರಯೋಜನ ಇಲ್ಲ. ಇಂದು ಅಂದುಕೊಂಡ ಕಾರ್ಯಗಳು ಮುಗಿಯುವ ಹಂತವನ್ನು ತಲುಪಿದ್ದು ಪೂರ್ಣತೃಪ್ತಿ ಇರಲಾರದು. ನೀವು ವಿದ್ಯಾರ್ಥಿಗಳಾಗಿದ್ದರೆ ಗೊಂದಲವಿರಬಹುದು. ನೀವೇ ವಿವಿಧ ಮೂಲಗಲಕಿಂದ ಮಾಹಿತಿಯನ್ನು ಒಡೆದು ಸರಿಮಾಡಿಕೊಳ್ಳಿ. ಏಕಾಂತವು ಬೇಕು ಎಂದು ಅನ್ನಿಸಬಹುದು. ದಾಂಪತ್ಯವು ಎಂದೂ ಇರದ ರೀತಿಯಲ್ಲಿ ಸರಸದಿಂದ ಇರಲಿದೆ. ಪತಿ-ಪತ್ನಿಯರು ಅನ್ಯೋನ್ಯದಿಂದ ಇರುವರು. ಮುಖದಲ್ಲಿ ಮಂದಹಾಸವಿರಲಿ. ಸೂರ್ಯನು ತನ್ನ ಉಚ್ಚಸ್ಥಾನಕ್ಕೆ ಬಂದು ಫಲವನ್ನು ಕೊಡಲು ಆರಂಭಿಸಿದ್ದಾನೆ. ಆನಂದಿಸಿ.

ವೃಷಭ: ಆಸ್ತಿಗೆ ಸಂಬಂಧಿಸಿದಂತೆ ದಾಯಾದಿಗಳ ಕಲಹವು ಅನೂಹ್ಯಸ್ಥಿತಿಗೆ ಹೋಗಬಹುದು. ಅರಿವಿಲ್ಲದೇ ನಿಮಗಾಗದವರನ್ನು ನಿಂದಿಸಿ ಅವರಿಂದ ಅಪಮಾನಕ್ಕೆ ಒಳಗಾಗುವಿರಿ. ಆರ್ಥಿಕವಾಗಿ ಸ್ಥಿರತೆ ಇದ್ಷರೂ ಚರ್ಚನ್ನು ನಿಭಾಯಿಸುವ ಚಾಣಾಕ್ಷತನ ಬೇಕಿದೆ. ನಿಮ್ಮ ಉತ್ತಮ ಹವ್ಯಾಸಕ್ಕೆ ನೀರೆರೆದು ಪೋಷಿಸಿ. ಯಾರ ಸಹವಾಸಕ್ಕೂ ಹೋಗದೇ ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಪೂರೈಸಿಕೊಳ್ಳಿ. ನಿಮ್ಮ ವ್ಯಕ್ತಿತ್ವಕ್ಕೆ ಸರಿಸಾಟಿಯಾದ ವ್ಯಕ್ತಿಯ ಗೆಳೆತನವಾಗಲಿದೆ. ಅಹಂಕಾರ ಪಡದೇ ವಿನೀತರಾಗಿರಬೇಕಾಗಿರುವುದು ಇಂದಿನ ಅವಶ್ಯಕತೆಗಷ್ಟೇ ಆಶಾವಾದಿಗಳಾಗಿರಿ. ಶುಭಗ್ರಹರು ದ್ವಾದಶದಲ್ಲಿರುವರು. ಎಲ್ಲದರಲ್ಲಿಯೂ ಎಚ್ಚರಿಕೆ ಇರಲಿ.

ಮಿಥುನ: ಅಪರಿಚಿತವ್ಯಕ್ತಿಯಿಂದ ನಿಮಗೆ ಸಹಾಯ ದೊರೆಯಲಿದೆ. ವ್ಯಾಪಾರಿಗಳಿಗೆ ತೃಪ್ತಿಕರವಾದ ಆದಾಯ ಸಿಗುವ ಸಂದರ್ಭವಿದೆ. ತಾಯಿಯ ಆಶೀರ್ವಾದವನ್ನು ಪಡೆದು ಇಂದಿನ ಶುಭಕಾರ್ಯಕ್ಕೆ ತೆರಳಿ. ರಾಜಕೀಯ ವ್ಯಕ್ತಿಗಳಿಗೆ ಅವರ ವಿರೋಧಿಗಳಿಂದಲೇ ತೊಂದರೆಯಾಗುವ ಸಾಧ್ಯತೆ ಇದೆ. ನಿಮ್ಮ ಅಧಿಕ ಕೋಪದಿಂದ ಸುಂದರ ಕ್ಷಣಗಳು ನಷ್ಟವಾಗಬಹುದು. ಮಕ್ಕಳ ಏಳಿಗೆಯಲ್ಲಿ ಮಂದಗತಿಯಲ್ಲಿ ಇರಲಿದೆ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಪ್ರಗತಿಯನ್ನು ಕಾಣಬಹುದು. ನಿಮ್ಮ ಅಳತೆಯನ್ನು ಮೀರದೇ ಚೌಕಟ್ಟಿನಲ್ಲಿರಿ.

ಕರ್ಕ: ಔದಾರ್ಯವನ್ನು ನೀವು ನಿಮ್ಮವರಲ್ಲಿ ತೋರಿಸಲು ಹೋಗಿ ಅಪಮಾನಕ್ಕೆ ಸಿಲುಕುವಿರಿ‌. ಮನಸ್ಸು ಬಿಚ್ಚಿ ಮಾತನಾಡಿ ನಿಮ್ಮ ಇಂಗಿತವನ್ನು ಪ್ರಕಾಶಪಡಿಸುವಿರಿ‌ ಉದ್ಯಮಿಗಳು ಹಳೆಯ ವಸ್ತುವಿಗೆ ಹೊಸರೂಪಕೊಟ್ಟು ಮಾರಾಟವನ್ನು ಮಾಡುವಿರಿ. ಕೆಲಸಗಾರರ‌ಜೊತೆ ಅತಿ ಕೋಪವನ್ನು ಮಾಡಿಕೊಳ್ಳಬೇಡಿ. ಅವರಿಂದಲೇ ಎಲ್ಲವೂ ಹಾಳಾಗಬಹುದು. ಹಿತವಚನದಿಂದ ಕೆಲಸವನ್ನು ಮಾಡಿಕೊಳ್ಳಿ. ಇಂದಿನ ಆರ್ಥಿಕಲಾಭವು ನಿಮ್ಮ ನಿರೀಕ್ಷೆಯ ಮಟ್ಟವನ್ನು ತಲುಪಬಹುದು. ವಸ್ತ್ರಾಭರಣಗಳನ್ನು ಮಿತವಾಗಿ ಖರೀದಿಸಿ. ವಯಸ್ಕರಿಗೆ ವಿವಾಹ ಸಂಬಂಧವು ಒದಗಿ ಬರಬಹುದು. ಪೊಲೀಸ್ ಹುದ್ದೆಯಲ್ಲಿರುವವರಿಗೆ ಮಹತ್ವದ ಕಾರ್ಯಾಚರಣೆಯ ಕೆಲಸದಲ್ಲಿ ಯಶಸ್ಸು ಸಿಗಲಿದೆ.

ಸಿಂಹ: ಸಂಪಾದನೆಯನ್ನೇ ವೃತ್ತಿಯಾಗಿಸಿಕೊಂಡವರಿಗೆ ಇಂದು ಏನೂ ಸಿಗದೇ ಹೋಗಬಹುದು. ಕೆಲವರು ನಿಮ್ಮನ್ನು ನಾಯಕನನ್ನಾಗಿ‌ ಮಾಡಿ ಅಪಹಾಸ್ಯ ಮಾಡುವರು. ನ್ಯಾಯವಾದಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಆದಾಯವೂ ಹೆಚ್ಚಬಹುದು. ವಿದ್ಯಾರ್ಥಿಗಳು ಅಂತ್ಯಕಾಲದಲ್ಲಿ ಅಧ್ಯಯನ‌ ಮಾಡಿದರೆ ಯಾವ ಪ್ರಯೋಜನವಿಲ್ಲ. ಇಂದಿನ ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಉಂಟಾಗಬಹುದು. ವ್ಯವಹಾರವನ್ನು ವ್ಯವಹಾರವಾಗಿಯೇ ಮಾಡಿ. ಆಗ ನಿಮ್ಮ ಮಾತಿಗೆ ಹೆಚ್ಚು ಬೆಲೆ ಬಂದೀತು. ವಿದೇಶಿ ಕಂಪನಿಗಳ ಮೇಲೆ ಹೂಡಿದ್ದ ಹಣ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ಅದನ್ನು ಪಡೆದುಕೊಳ್ಳಲು ಕಷ್ಟವಾದೀತು.

ಕನ್ಯಾ: ನಿಮ್ಮ ಭಾವನೆಗಳಿಗೆ ಘಾಸಿಯಾಗುವ ಸಮಾಚಾರವು ಇಂದು ಬರಲಿದೆ. ಮಾತುಗಳನ್ನು ಹೆಚ್ಚು ಎಚ್ಚರದಿಂದ ಆಡಿ. ಇಲ್ಲದಿದ್ದರೆ ಮುಜುಗರಕ್ಕೆ ಒಳಗಾಗುವ ಸಂದರ್ಭವಿದೆ. ಹಣದ ಒಳಹರಿವು ಮಂದಗತಿಯಲ್ಲಿ ಇರಬಹುದು. ನಿರುದ್ಯೋಗಿಗಳು ಬಹಳ ದಿನಗಳಿಂದ ಉದ್ಯೋಗದ ಅನ್ವೇಷಣೆಯಲ್ಲಿ ಇರಲಿದ್ದು, ಉದ್ಯೋಗವು ಲಭ್ಯವಾಗುವುದು. ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು. ಚಿತ್ತ ಚಾಂಚಲ್ಯ ನಿಮ್ಮನ್ನು ಒಂದು ಕಡೆಗೆ ಇರಲು ಬಿಡದು. ವೃತ್ತಿಯಲ್ಲಿ ಹೆಚ್ಚು ತಿರುಗಾಟವಿರಲಿದೆ. ಸಂಗಾತಿಯ ಸಿಡುಕಿನ ನುಡಿಗಳು ನಿಮಗೆ ನೋವು ತರುತ್ತದೆ.

ತುಲಾ: ಆರ್ಥಿಕಸಮಸ್ಯೆಯನ್ನು ಸಮಸ್ಯೆಯಾಗಿ ಇಟ್ಟುಕೊಳ್ಳದೇ ಅದರ ಮುಂದಿನ ಹಂತಕ್ಕೆ ಹೋಗಬೇಕಾಗಿದೆ. ಹೊರಬರಲು ಸರಿಯಾದ ಅವಕಾಶವಿದೆ. ಅಧಿಕಾರಿಗಳಿಂದ ಬಡ್ತಿ, ಹೆಚ್ಚಳ, ಮೆಚ್ಚುಗೆ ಮತ್ತು ಪ್ರೋತ್ಸಾಹಗಳು ಉದ್ಯೋಗದಲ್ಲಿ ಸಿಗಲಿದೆ. ಇಂದಿನ ಯೋಜಿತ ಕೆಲಸಗಳು ಪೂರ್ಣಗೊಳ್ಳುತ್ತವೆ. ಗುಂಪಿನಲ್ಲಿದ್ದಾಗ ನೀವೇನು ಹೇಳುತ್ತೀರೆಂದು ಎಚ್ಚರ ವಹಿಸಿ-ನಿಮ್ಮ ಹಠಾತ್ ಟೀಕೆಗಳಿಗೆ ನೀವು ತೀವ್ರವಾಗಿ ಟೀಕೆ ಎದುರಿಸಬೇಕಾಗಬಹುದು. ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಮರಳಿ ತರುವ ಒಂದು ಆನಂದಮಯ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ.

ವೃಶ್ಚಿಕ: ಮನೆ ನಿರ್ಮಾಣ ಮಾಡುತ್ತಿದ್ದವರಿಗೆ ಇದ್ದ ಅಡೆತಡೆಗಳು ಸ್ವಲ್ಪಮಟ್ಟಿಗೆ ದೂರವಾಗಲಿದೆ. ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದವರಿಗೆ ಹೆಚ್ಚಿನ ಕೆಲಸ ದೊರೆಯುತ್ತದೆ. ಬಂಧುಗಳ ಗಲಾಟೆಗಳಲ್ಲಿ ಮಧ್ಯಸ್ಥಿಕೆ ವಹಿಸುವುದು ನಿಮಗೆ ದುಬಾರಿಯಾಗಬಹುದು. ಪೋಷಕರಿಂದ ಮಕ್ಕಳ ಆಸೆಗೆ ಪ್ರೋತ್ಸಾಹ ದೊರೆಯುತ್ತದೆ. ಯಂತ್ರೋಪಕರಣಗಳನ್ನು ದುರಸ್ತಿ ಮಾಡುವವರಿಗೆ ಹೆಚ್ಚಿನ ಕೆಲಸ ದೊರತು ಸಂಪಾದನೆಯಾಗುತ್ತದೆ. ಹೊಸ ಆಭರಣವನ್ನು ಖರೀದಿಸುವ ಮನಸ್ಸು ಮಾಡುವಿರಿ. ಮೂಳೆ ತೊಂದರೆ ಇರುವವರು ಚಿಕಿತ್ಸೆ ಪಡೆಯುವುದು ಒಳ್ಳೆಯದು. ಕೃಷಿ ಭೂಮಿ ವಿಸ್ತರಣೆಯನ್ನು ಮಾಡುವ ಕಾರ್ಯಕ್ಕೆ ಈಗ ಮುಂದಾಗುವಿರಿ.

ಧನುಸ್ಸು: ಸಂಶೋಧಕರಿಗೆ ಸಂಶೋಧನೆಯಲ್ಲಿ ಉತ್ತಮ ಫಲಿತಾಂಶ ದೊರೆಯುವ ಸಾಧ್ಯತೆಗಳಿವೆ. ಉದ್ಯೋಗದ ನಿಮಿತ್ತ ದೂರದ ಸ್ಥಳಕ್ಕೆ ಹೋಗಿ ಬರುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಇಂದು ನಾನಾ ಸಮಸ್ಯೆಗಳು ಎದುರಾದರೂ ಅದನ್ನು ಧೈರ್ಯದಿಂದ ಎದುರಿಸಿ ಗೆಲ್ಲುವಿರಿ. ನಿಮ್ಮ ಚಾಣಾಕ್ಷದ ನಿರ್ಧಾರಗಳು ನಿಮ್ಮನ್ನು ಗುಂಪಿನಲ್ಲಿ ತೂಕದ ವ್ಯಕ್ತಿಯನ್ನಾಗಿಸುತ್ತದೆ. ಉದ್ಯೋಗದಲ್ಲಿ ತಾಂತ್ರಿಕ ಪರಿಣತರಿಗೆ ಹೆಚ್ಚಿನ ಸ್ಥಾನ ದೊರೆತು ಸಂತಸವಾಗುತ್ತದೆ. ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು.

ಮಕರ: ತಂತ್ರಜ್ಞರಿಗೆ ಹೊಸ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ದಂತ ವೈದ್ಯರಿಗೆ ಹೆಚ್ಚು ಅನುಕೂಲವಿರುತ್ತದೆ. ಬಂಧುಗಳ ಸಹಕಾರ ನಿಮಗೆ ಹೆಚ್ಚಾಗಿ ದೊರೆಯುತ್ತದೆ. ಆಸ್ತಿ ವಿಚಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ಕ್ರೀಡಾಪಟುಗಳಿಗೆ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಸೌಲಭ್ಯ ದೊರೆಯುತ್ತದೆ. ಪ್ರೀತಿ ಪ್ರೇಮದ ಸೆಳೆತಕ್ಕೆ ಸಿಲುಕುವ ಸಾಧ್ಯತೆ ಇದೆ. ಸರ್ಕಾರಿ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ತಂದೆಯಿಂದ ನಿಮ್ಮ ವ್ಯವಹಾರಗಳಿಗೆ ಸಹಕಾರ, ಸಹಾಯ ದೊರೆಯುತ್ತದೆ. ವೃತ್ತಿಯಲ್ಲಿ ಯಾವುದೇ ರೀತಿ ವ್ಯತ್ಯಾಸವಿಲ್ಲ. ಒಂದೇ ರೀತಿಯಲ್ಲಿ ಕೆಲಸವು ಸಾಗುವುದು. ನಿಮ್ಮ ಉದ್ಯೋಗವನ್ನು ಸುಧಾರಿಸಲು ಮತ್ತು ಸರಿದಾರಿಗೆ ತರಲು ಸಾಕಷ್ಟು ಅವಕಾಶಗಳು ಒದಗುತ್ತವೆ.

ಕುಂಭ: ಯುವಕರು ಪ್ರಯಾಣದ ಸಮಯದಲ್ಲಿ ಆಲಸ್ಯದಿಂದ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳಬಹುದು. ವಿಚಾರ ಸಂಕೀರ್ಣದಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ನೂತನ ವಸ್ತ್ರವನ್ನು ಖರೀದಿ ಮಾಡಲಿದ್ದೀರಿ. ಕೌಟುಂಬಿಕವಾದ ಕೆಲವು ಜವಾಬ್ದಾರಿಗಳನ್ನು ಮಕ್ಕಳಿಗೆ ಕೊಟ್ಟು ಆರಾಮಾಗಿ ಇರುವಿರಿ. ಸಣ್ಣ ವ್ಯಾಪಾರಿಗಳಿಗೆ ಹೆಚ್ಚು ವ್ಯವಹಾರ ಆಗುವ ಸಾಧ್ಯತೆಗಳಿವೆ. ಧನದ ಆದಾಯವು ನಿರೀಕ್ಷೆಯನ್ನು ಪೂರ್ಣವಾಗಿ ತಲುಪದು. ಕೆಲವರಿಗೆ ಹಣಕಾಸಿನ ವ್ಯವಹಾರಗಳಲ್ಲಿ ವ್ಯತ್ಯಾಸವಾಗಿ ವೃತ್ತಿಯಲ್ಲಿ ಛೀಮಾರಿಯ ಪ್ರಸಂಗ ಬರಬಹುದು. ಸಿದ್ಧ ಉಡುಪು ತಯಾರಕರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರಲಿಸೆ.

ಮೀನ: ವೈದ್ಯವೃತ್ತಿಯನ್ನು ನಡೆಸುತ್ತಿರುವವರು ಆರ್ಥಿಕವಾಗಿ ಬಲಗೊಳ್ಳುವರು. ವಿದೇಶದಲ್ಲಿರುವ ಕುಟುಂಬಸ್ಥರು ಆರ್ಥಿಕವಾದ ಸಹಕಾರವನ್ನು ನೀಡುವರು. ಪಾದಗಳಲ್ಲಿ ನೋವು ಕಾಣಿಸಬಹುದು. ಔಷಧೋಪಚಾರದಿಂದ ಸರಿ‌ಮಾಡಿಕೊಳ್ಳಿ. ಮಕ್ಕಳ ಕಣ್ಣಿನ ಬಗ್ಗೆ ಎಚ್ಚರವಿರಲಿ. ಮೊಬೈ ಮುಂತಾದ ಉಪಕರಣಕ್ಕೆ ಒಗ್ಗಿ ಕಣ್ಣು ಹಾಳಾಗುವುದು. ಕಲುಷಿತ ಆಹಾರದಿಂದ ಆರೋಗ್ಯದಲ್ಲಿ ವ್ಯತ್ಯಾಸದ ಸಾಧ್ಯತೆ ಇದೆ. ಬರಹಗಾರರಿಗೆ ತಮ್ಮ ಬರಹವನ್ನು ವಿರೋಧಿಸುವವರ ಮಧ್ಯದಲ್ಲಿ ವೇದಿಕೆಯನ್ನು ಹಂಚಿಕೊಳ್ಳುವ ಸಂದರ್ಭವಿದೆ. ಕೋರ್ಟ್ ವ್ಯವಹಾರಗಳಲ್ಲಿ ನಿಮಗೆ ಶುಭಸಮಾಚಾರವಿರುತ್ತದೆ.

ಲೋಹಿತಶರ್ಮಾ ಇಡುವಾಣಿ – 8762924271 (what’s app only)

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ