Astrology: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
2023 ಏಪ್ರಿಲ್ 16 ರವಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವನೀ ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ರವಿ, ತಿಥಿ: ಏಕಾದಶೀ, ನಿತ್ಯನಕ್ಷತ್ರ : ಶ್ರವಣಾ, ಯೋಗ: ಶುಭ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06-20 ಕ್ಕೆ, ಸೂರ್ಯಾಸ್ತ ಸಂಜೆ 06-44 ಕ್ಕೆ, ರಾಹು ಕಾಲ 04:12 – 05:45ರ ವರೆಗೆ, ಯಮಘಂಡ ಕಾಲ 12:06 – 02:05ರ ವರೆಗೆ, ಗುಳಿಕ ಕಾಲ 03:39 – 04:12 ರವರೆಗೆ.
ಮೇಷ: ಇಂದಿನ ನಿಮ್ಮ ಕೆಲಸದ ಸುಲಭ ವೇಳಾಪಟ್ಟಿ ವಿಶ್ರಾಂತಿಗೆ ಸಾಕಷ್ಟು ಸಮಯ ಸಿಗಲಿದೆ. ಅವಿವಾಹಿತರಿಗೆ ಪತ್ನಿಯು ಸಿಗಲುದ್ದಾಳೆ. ಎಲ್ಲಾದರೂ ಹೂಡಿಕೆಗಳನ್ನು ಮಾಡುವಾಗ ಸ್ವತಂತ್ರರಾಗಿರಿ. ನಿಮ್ಮ ಸ್ವಂತ ನಿರ್ಧಾರಗಳನ್ನು ಕೈಗೊಳ್ಳಿ. ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಲು ಪದರಯತ್ನಿಸಿ. ಸುಂದರವಾದ ಪ್ರದೇಶಕ್ಕೆ ಹೋಗಲಿದ್ದೀರಿ. ಒಬ್ಬ ಅಪರಿಚಿತ ವ್ಯಕ್ತಿಯ ಜೊತೆ ನಿಮ್ಮ ವಿವಾದವಾಗುವ ಸಾಧ್ಯತೆ ಇದೆ. ಒಳ್ಳೆಯದೆಂದು ತಿಳಿದು ಮೋಸಹೋಗಲಿದ್ದೀರಿ. ನಿಮ್ಮವರನ್ನು ಅಪಹಾಸ್ಯ ಮಾಡಲು ಹೋಗಿ ಗಂಭೀರವಾದೀತು.
ವೃಷಭ: ಇಂದು ನಿಮ್ಮ ಮನೆಯ ಕೆಲಸವನ್ನು ಯಾವಾಗಲೂ ವ್ಯವಸ್ಥಿತವಾಗಿ ಮಾಡಲಿದ್ದೀರಿ. ಇದಕ್ಕೆ ಕುಟುಂಬದಿಂದ ನಿಮಗೆ ಅನೇಕ ಮೆಚ್ಚುಗೆಯಾಗಲಿದೆ. ಪ್ರಶಂಸೆಯೂ ಸಿಗಬಹುದು. ನಿಮ್ಮ ಸಹಾಯಕ್ಕೆಂದೂ ಹಿಂಜರಿಯದ ಸ್ನೇಹಿತರ ಸಮೂಹವು ನಿಮ್ಮದಾಗಿದೆ. ನಿಮ್ಮವರಿಂದ ನಿಮಗೆ ಪ್ರಶಂಸೆಯು ಸಿಗಲಿದೆ. ರಾಜಕೀಯದಲ್ಲಿ ವಿನಾಕಾರಣ ವಾದ-ವಿವಾದಗಳು ಹುಟ್ಟಿಕೊಂಡಾವು. ನೀವು ಸ್ನೇಹಿತರೊಂದಿಗೆ ಸಾಕಷ್ಟು ಮೋಜಿನ ಸಮಯವನ್ನು ಕಳೆಯಬಹುದು. ಇದರೊಂದಿಗೆ ಹೊಸ ಜನರು ಭೇಟಿ ನೀಡುವಂತಹ ಸ್ಥಳಗಳಿಗೆ ಹೋಗುವಂತಹ ಸಾಧ್ಯತೆಯೂ ಇದೆ.
ಮಿಥುನ: ಹೊಸದಾಗಿ ವೈವಾಹಿಕ ಜೀವನವನ್ನು ಆರಂಭಿಸಿದ್ದು ಬಹಳ ಉತ್ಸಾಹವಿರಲಿದೆ. ಅದು ನಿಮ್ಮ ನಡುವಿನ ಸಂಬಂಧವನ್ನು ಬಲವಾಗಿಸುತ್ತದೆ. ಇಂದು ನೀವು ಸಾಲದಿಂದ ಮುಕ್ತರಾಗುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿಯೂ ಚೆನ್ನಾಗಿರಲಿದೆ. ನಿಮ್ಮ ಮಕ್ಕಳು ಪ್ರಗತಿಯತ್ತ ಸಾಗುವುದನ್ನು ಕಂಡು ನಿಮ್ಮ ಮನಸ್ಸಿಗೆ ಆನಂದವಾಗುವುದು. ಇಂದು ನೆರೆ-ಹೊರೆಯವರ ಜೊತೆ ಭಿನ್ನಾಭಿಪ್ರಾಯ ಉಂಟಾಗಬಹುದು. ಹಿರಿಯ ಅಧಿಕಾರಿಗಳ ಸಹಾಯದಿಂದ ನಿಮ್ಮ ಸಂಕೀರ್ಣ ಕಾರ್ಯಗಳು ಸಹ ಇಂದು ಪೂರ್ಣವಾಗಲಿದೆ. ಹಿರಿಯರಿಂದ ಆಶೀರ್ವಾದ ಸಿಗಲಿದೆ.
ಕರ್ಕ: ಇಂದು ನಡೆಯುವ ಮಂಗಲಕಾರ್ಯಗಳಿಗೆ ಧನಸಹಾಯ ಮಾಡುವಿರಿ. ನಿಮ್ಮ ವಸ್ತುವನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಸ್ವಂತ ನಿರ್ಧಾರ ಮತ್ತು ಆಲೋಚನೆಗಳಿಗಿಂತ ಕುಟುಂಬದ ಸದಸ್ಯರ ಸಲಹೆಯನ್ನು ತೆಗೆದುಕೊಂಡರೆ ಒಳ್ಳೆಯದು. ಆದಾಯ ಸ್ಥಿರವಾಗಿದ್ದರೂ ಖರ್ಚು ಹೆಚ್ಚಾಗುತ್ತದೆ. ನಿಮ್ಮ ಚೈತನ್ಯವನ್ನು ಹೆಚ್ಚಿಸಲು ನಿಮ್ಮ ಮನಸ್ಸಿನಲ್ಲಿ ಒಂದು ಪ್ರಕಾಶಮಾನವಾದ ಸುಂದರವಾದ ಮತ್ತು ಅದ್ಭುತವಾದ ಚಿತ್ರವನ್ನು ಕಲ್ಪಿಸಿಕೊಳ್ಳಿ. ನಿಮ್ಮ ಕಚೇರಿಯ ಸಹೋದ್ಯೋಗಿ ನಿಮ್ಮ ಅಮೂಲ್ಯವಾದ ವಸ್ತುವು ಕಳ್ಳತನವಾಗುವ ಸಾಧ್ಯತೆ ಇದೆ. ವ್ಯಾಪಾರಿಗಳು ಹೆಚ್ಚಿನ ಲಾಭವನ್ನು ಕಾಣಬಹುದು.
-ಲೋಹಿತಶರ್ಮಾ ಇಡುವಾಣಿ – 8762924271