Horoscope 29 Oct: ದಿನಭವಿಷ್ಯ, ಈ ರಾಶಿಯವರು ಆತ್ಮೀಯರನ್ನು ಕಳೆದುಕೊಳ್ಳಬೇಕಾಗುವುದು
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಅಕ್ಟೋಬರ್ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತೀ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಸಿದ್ಧಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 27 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಸಂಜೆ 04:37 ರಿಂದ 06:05 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:16 ರಿಂದ 01:43 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:10 ರಿಂದ 04:37ರ ವರೆಗೆ.
ಮೇಷ ರಾಶಿ: ಅವಿವಾಹಿತರಿಗೆ ವಿವಾಹದ ಸಂತೋಷವು ಇರಲಿದೆ. ಕೃಷಿಯ ಕುರಿತು ಕುತೂಹಲ ಹಾಗೂ ಆಸೆಯು ಬರಬಹುದು. ಕಳೆದುಕೊಂಡಿದ್ದು ನಿಮ್ಮ ಕೈಸೇರಬಹುದು. ಸಣ್ಣ ಕಲಾವಿದರಿಗೆ ಪ್ರೋತ್ಸಾಹವು ಸಿಗಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸುವಿರಿ. ಸ್ಥಾನಮಾನವನ್ನು ಪಡೆಯಲು ಏನಾದರೂ ಮಾಡುವಿರಿ. ಸಣ್ಣ ಕಾರಣಕ್ಕೆ ಸ್ನೇಹವನ್ನು ಮುರಿದುಕೊಳ್ಳುವಿರಿ. ಯಾರಿಗೂ ಒತ್ತಾಯ ಪೂರ್ವಕ ಇಟ್ಟುಕೊಳ್ಳುವುದು ಬೇಡ. ಸಂಗಾತಿಯು ನಿಮ್ಮ ಹಳೆಯ ವಿಚಾರವನ್ನು ನೆನಪಿಸಿ ಜಗಳವಾಡಬಹುದು. ಹೂಡಿಕೆ ಯಾರಾದರೂ ಒತ್ತಾಯ ಮಾಡಬಹುದು. ಇಂದು ನಿಮಗೆ ಇಷ್ಟವಾದ ಕೆಲಸವನ್ನು ಮಾತ್ರ ಮಾಡಿ. ಬೇರೆಯವರ ಬಗ್ಗೆ ಚಿಂತೆ ಬೇಡ.
ವೃಷಭ ರಾಶಿ: ಇಷ್ಟವಾಗದವರ ಜೊತೆ ವೃಥಾ ಕಾಲಹರಣ ಮಾಡುವುದು ಬೇಡ. ನಿಮ್ಮಷ್ಟಕ್ಕೆ ನೀವು ಇದ್ದುಬಿಡಿ. ಅಹಿತಕರ ಆಹಾರದಿಂದ ಆರೋಗ್ಯವು ಕೆಡಬಹುದು. ನೀರಿನ ಭೀತಿಯು ಇರಲಿದೆ. ಅತಿಯಾದ ಮನೆಯ ಕೆಲಸದಿಂದ ಆಯಾಸವಾಗಬಹುದು. ಅನಿರೀಕ್ಷಿತ ವಾರ್ತೆಯನ್ನು ನೀವು ನಂಬಲಾರಿರಿ. ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟವಾಗುವುದು. ಯಾರಾದರೂ ನಿಮಗೆ ಬೇಜಾರು ಮಾಡಿಸುವರು. ನೀವು ಇಂದು ಮೌನವನ್ನೇ ಹೆಚ್ಚು ಇಷ್ಟಪಡುವಿರಿ. ಇಬ್ಬಗೆಯ ಮಾನಸಿಕತೆಯು ಬೇಡ. ವೈದ್ಯ ವೃತ್ತಿಯವರಿಗೆ ಅಪವಾದವು ಬರಬಹುದು. ಮಾನಸಿಕ ಕಿರಿಕಿರಿಯಿಂದ ಸ್ವಲ್ಪ ನೆಮ್ಮದಿ ಸಿಗಲಿದೆ.
ಮಿಥುನ ರಾಶಿ: ಹಿತಶತ್ರುಗಳ ಕಿರುಕುಳವನ್ನು ನೀವು ಸಹಿಸಲಾರಿರಿ. ಮಕ್ಕಳ ಬಗ್ಗೆ ಕನಿಕರ ಬರಬಹುದು. ಹೊರಗಿನ ಆಹಾರದಿಂದ ತೊಂದರೆಯಾಗುವ ಸಾಧ್ಯತೆ ಇದೆ. ಮನೆಯ ವಾತಾವರಣವು ಸಂತೋಷವನ್ನು ಕೊಟ್ಟೀತು. ಎಲ್ಲ ವಿಚಾರಕ್ಕೂ ಸಿಟ್ಟು ಉಪಯೋಗಕ್ಕೆ ಬಾರದು. ಪ್ರಾಪಂಚಿಕ ಸುಖದಲ್ಲಿ ಆಸಕ್ತಿಯು ಕಡಿಮೆಯಾಗುವುದು. ಅಧ್ಯಾತ್ಮದ ವಿಚಾರವು ಹೆಚ್ಚು ಇಷ್ಟವಾಗುವುದು. ಇನ್ನೊಬ್ಬರ ದುಃಖಕ್ಕೆ ಸ್ಪಂದಿಸುವಿರಿ. ಎಲ್ಲರ ಜೊತೆ ಉತ್ಸಾಹದಿಂದ ಮಾತನಾಡುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡಬೇಕು ಎಂದುಕೊಳ್ಳುವಿರಿ. ನಿಮ್ಮ ಚೌಕಟ್ಟಿನಲ್ಲಿ ಕೆಲಸವನ್ನು ಮಾಡಿ. ಮರೆತ ವಿಷಯವನ್ನು ಮತ್ತೆ ನೆನಪಿಸಿಕೊಳ್ಳುವಿರಿ.
ಕಟಕ ರಾಶಿ: ಆತ್ಮೀಯರನ್ನು ನೀವು ಕಳೆದುಕೊಳ್ಳಬೇಕಾಗುವುದು. ಪ್ರಯತ್ನಕ್ಕೆ ಸರಿಯಾಗಿ ಫಲವು ಸಿಗದು. ವಸ್ತುಗಳ ಖರೀದಿಯು ಖರ್ಚನ್ನು ಹೆಚ್ಚು ಮಾಡುವುದು. ನಿಮ್ಮವರ ಬಗ್ಗೆ ಯಾರಾದರೂ ಕಿವಿ ಚುಚ್ಚಬಹುದು. ಹೊಂದಾಣಿಕೆಯ ಮನೋಭಾವವು ನಿಮ್ಮಲ್ಲಿ ಇರದು. ಯಾರ ಜೊತೆಗೂ ನಿಮ್ಮ ವರ್ತನೆಯು ಸಹಜತವಾಗಿ ಇರದು. ಆಸ್ತಿಯ ವಿಚಾರದಲ್ಲಿ ಆಕಸ್ಮಿಕ ತಿರುವು ಬರಬಹುದು. ಸಂಗಾತಿಯ ಮಾತಿನಿಂದ ಕೆಲವು ಮಾರ್ಪಾಡು ಮಾಡಿಕೊಳ್ಳುವಿರಿ. ನಿಮ್ಮದೇ ಆದ ಕಾರ್ಯದಲ್ಲಿ ಮಗ್ನರಾಗುವಿರಿ. ವೃತ್ತಿಯಲ್ಲಿ ನಿಮಗೆ ಬೇಕಾದ ಸಹಕಾರವು ಸಿಗದು. ನಾಲ್ಕಾರು ಕಾರ್ಯಗಳನ್ನು ಒಟ್ಟಿಗೇ ವಹಿಸಿಕೊಂಡು ಯಾವುದನ್ನೂ ಮಾಡಲಾರಿರಿ. ಪ್ರಯಾಣದಲ್ಲಿ ನಿಮಗೆ ಜಾಗರೂಕತೆ ಇರಲಿ.
ಸಿಂಹ ರಾಶಿ: ಉನ್ನತ ವಿದ್ಯಾಭ್ಯಾಸದ ಕನಸು ಬಂಧುಗಳ ಸಹಕಾರದಿಂದ ಆಗಲಿದೆ. ಧಾರ್ಮಿಕ ಸ್ಥಳಗಳ ಭೇಟಿಯೂ ಆಗಲಿದೆ. ಸಾಲದ ಮೊತ್ತವನ್ನು ಕಡಿಮೆ ಮಾಡಿಕೊಂಡು ಸಮಾಧಾನವಾಗುವುದು. ಪ್ರೇಮವು ನಿಮಗೆ ಬಂಧನದಂತೆ ಕಾಣಿಸುವುದು. ಸಹೋದರರ ನಡುವೆ ವಿನಾಕಾರಣ ಆರಂಭವಾದ ವಾಗ್ವಾದವು ಗಂಭೀರ ಸ್ವರೂಪವನ್ನು ಪಡೆದುಕೊಳ್ಳುವುದು. ನಿಮ್ಮ ಸೋಲನ್ನು ನೀವು ಒಪ್ಪಿಕೊಳ್ಳಲಾರಿರಿ. ನಿಮ್ಮ ಎಲ್ಲ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಿಕೊಳ್ಳಲು ಆಗದು. ಯಾರದೋ ಒತ್ತಾಯಕ್ಕೆ ಹೂಡಿಕೆಯನ್ನು ಮಾಡುವಿರಿ. ಉತ್ತಮ ಭೋಜನವನ್ನು ಇಂದು ಲಭ್ಯವಿದೆ. ಪಕ್ಷಪಾತ ಮಕ್ಕಳ ವಿಚಾರದಲ್ಲಿ ಮಾಡುವುದು ಬೇಡ. ನಿಮ್ಮನ್ನು ನೋಡುವ ದೃಷ್ಟಿಯು ಬದಲಾದೀತು.
ಕನ್ಯಾ ರಾಶಿ: ಈ ದಿನ ಮಕ್ಕಳ ವಿಚಾರದಲ್ಲಿ ಕೆಲವನ್ನು ಬದಲಿಸಿಕೊಳ್ಳಬೇಕಾದೀತು. ಸಾಮಾಜಿಕ ಕೆಲಸಗಳು ನಿಮಗೆ ಇನ್ನಷ್ಟೂ ಉತ್ಸಾಹವನ್ನು ಕೊಡುವುದು. ವೈದ್ಯರು ಇಂದು ಒತ್ತಡದಿಂದ ಇರುವರು. ದೇಹ ಪೀಡೆಯು ಅಧಿಕವಾಗಿ ಕಾಣಿಸಿಕೊಳ್ಳುವುದು. ಅನಿವಾರ್ಯ ನೀವು ಪ್ರಯಾಣವನ್ನು ಮಾಡಬೇಕಾಗಬಹುದು. ನೀವು ಕಷ್ಟವನ್ನು ಆನಂದದಿಂದ ಕಳೆಯುವಿರಿ, ಅದಕ್ಕೆ ಕಾರಣ ಸುಖವಿದೆ ಎಂಬುಸ. ಸಿಗಬೇಕಾದ ವಸ್ತುವನ್ನು ನೀವು ಬಹಳ ಪ್ರಯತ್ನದಿಂದ ಪಡೆದುಕೊಂಡರೂ ಉಳಿಸಿಕೊಳ್ಳುವುದು ಕಷ್ಟವಾದೀತು. ಸಂಸಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ಯಾರ ಜೊತೆಯೂ ನಿಮ್ಮ ಮಾತು ಸರಿಯಾಗಿ ಇರದು. ಭೂಮಿಯ ವ್ಯವಹಾರದಿಂದ ಕೆಲವು ತೊಂದರೆಗಳನ್ನು ನೀವಾಗಿಯೇ ತಂದುಕೊಳ್ಳುವಿರಿ.
ತುಲಾ ರಾಶಿ: ಕೆಲವು ಘಟನೆಗಳು ನಿಮ್ಮ ವ್ಯಕ್ತಿತ್ವವನ್ನು ಬದಲಿಸಬಹುದು. ಬಂಧುಗಳ ಒಡನಾಟವು ಹೆಚ್ಚಿರಲಿದೆ. ಹಣಕಾಸಿನ ವಿಚಾರಕ್ಕೆ ಸಂಗಾತಿಯ ಜೊತೆ ಮಾತಾಗಬಹುದು. ನೇರ ನುಡಿಯಿಂದ ಆಪ್ತರು ದೂರ ಸರಿಯಬಹುದು. ಇಂದು ನೀವು ಅಂದುಕೊಂಡ ವಿಚಾರದಲ್ಲಿ ಜಯವು ಸಿಗುವುದು. ಕೆಟ್ಟವರ ಸಹವಾಸದಿಂದ ಅಪಕೀರ್ತಿ ಬರಬಹುದು. ಕೆಲವು ವಿಚಾರಗಳಿಗೆ ಸುಮ್ಮನೇ ಪ್ರತಿಕ್ರಿಯೆ ನೀಡಬೇಕಿಲ್ಲ. ಕೃಷಿಯ ಉತ್ಪನ್ನಗಳನ್ನು ಮಾರಾಟ ಮಾಡುವಿರಿ. ಅವಕಾಶಗಳನ್ನು ಕಳೆದುಕೊಂಡು ಮನಸ್ಸಿನಲ್ಲಿಯೇ ದುಃಖಿಸುವಿರಿ. ಕೋಪವನ್ನು ತಾನಾಗಿಯೇ ಕಡಿಮೆ ಆಗಿದ್ದು ನಿಮಗೆ ಆಶ್ಚರ್ಯವಾಗಬಹುದು. ನಿಮ್ಮ ಮನಸ್ಸಿಗೆ ಬಾರದೇ ಯಾರಿಗೂ ಏನನ್ನೂ ಕೊಡುವುದು ಬೇಡ. ಬಂಧುಗಳ ವಿಚಾರದಲ್ಲಿ ನಿಮಗೆ ಅಸಮಾಧನವು ಇರಲಿದ್ದು ಅದನ್ನು ಬೇರೆಯವರ ಬಳಿ ಹೇಳಿಕೊಳ್ಳುವಿರಿ.
ವೃಶ್ಚಿಕ ರಾಶಿ: ಆಪ್ತರ ಭೇಟಿಯು ನಿಮಗೆ ಸಂತೋಷವನ್ನು ಕೊಡುವುದು. ವ್ಯವಹಾರವು ಅಧಿಕ ಲಾಭವನ್ನು ತಂದುಕೊಡದು. ಪ್ರವಾಸ ಹೋಗುವ ಮನಸ್ಸಾದೀತು. ಅಧಿಕಾರಿಗಳು ನಿಮ್ಮ ಉದ್ಯಮವನ್ನು ಪರಿಶೀಲಿಸಬಹುದು. ನಿಮಗೆ ಬೇಡ ಎನಿಸಿದ ವಿಚಾರವೇ ಮತ್ತೆ ಮತ್ತೆ ಕೇಳಿ ಬಂದು ಮಾನಸಿಕ ಹಿಂಸೆಯಾದೀತು. ಮನೆಯಲ್ಲಿ ಜಗಳವಾಡಿ ನೀವು ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ನೀವು ನಿರೀಕ್ಷಿಸಿದ ಸ್ಥಳದಲ್ಲಿ ಉದ್ಯೋಗವು ಸಿಗದು. ಮಕ್ಕಳ ತಪ್ಪನ್ನು ನೀವು ಸಮರ್ಥಿಸಿಕೊಳ್ಳಬೇಕಾದೀತು. ನಿಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಇಂದು ಸಾಧ್ಯವಾಗದು. ಕೊಟ್ಟ ಹಣವನ್ನು ವಾಪಾಸು ಪಡೆಯಲು ಓಡಾಟ ಮಾಡುವಿರಿ.
ಧನು ರಾಶಿ: ಹಳೆಯ ಮಿತ್ರನನ್ನು ಉದ್ಯಮದ ಪಾಲುದಾರಿಕೆಯಲ್ಲಿ ಜೋಡಿಸಿಕೊಳ್ಳುವಿರಿ. ನಿರೀಕ್ಷಿತ ಸಂದರ್ಭವು ಇಂದು ಬರಲಿದ್ದು ಅದನ್ನು ಬಳಸಿಕೊಳ್ಳುವಿರಿ. ಆಕಸ್ಮಿಕವಾಗಿ ಧನಲಾಭವು ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು. ಮನಸ್ಸಿನ ಸ್ಥಿರತೆಯಲ್ಲಿ ಅಭಾವವಿದ್ದು ನಿಮ್ಮ ಗುರಿಯೂ ಬದಲಾಗುವುದು. ಜಾಣ್ಮಯಿಂದ ನಿಮ್ಮ ಕಾರ್ಯವನ್ನು ಸಾಧಿಸಿ. ಪ್ರೇಮವು ಕೊನೆಗೂ ಅಂದುಕೊಂಡಂತೆ ಆಗಲಿದೆ. ಇಂದು ಖುಷಿಯಿಂದ ಹಣವನ್ನು ಖರ್ಚು ಮಾಡುವಿರಿ. ಇಂದು ನೀವಾಡವ ಮಾತು ತೂಕದ್ದಾಗಿರಲಿದೆ. ನಿಮ್ಮ ಕೆಲಸಗಳನ್ನು ಮೇಲಧಿಕಾರಿಗಳು ಪರಿಶೀಲಿಸುವರು. ವ್ಯಾಪಾರದಲ್ಲಿ ನೀವು ತಜ್ಞರಾಗಿದ್ದು ಅಧಿಕ ಲಾಭವನ್ನು ಗಳಿಸುವಿರಿ. ಸಂತೋಷದ ವಿಚಾರವನ್ನು ಹೇಳಲು ಸಂಕೋಚವಾಗುವುದು. ಇಷ್ಟವಿಲ್ಲದಿದ್ದರೂ ಇನ್ನೊಬ್ಬರ ಮಾತಿಗೆ ಮೌಕಿಕ ಬೆಂಬಲ ಕೊಡಬೇಕಾದೀತು.
ಮಕರ ರಾಶಿ: ಅಪರಿಚಿತರ ಸಹಾಯದಿಂದ ಪೂರ್ಣ ನಂಬಿಕೆ ಬರದು. ಹೊಸಬರನ್ನು ಸಾಮಾಜಿಕ ತಾಣದಲ್ಲಿ ಪರಿಚಯ ಮಾಡಿಕೊಳ್ಳುವಿರಿ. ತಂದೆಯ ಮಾತು ನಿಮಗೆ ಬೇಸರ ತರಿಸಬಹುದು. ಕಲಾವಿದರು ಉತ್ತಮ ಅವಕಾಶದ ನಿರೀಕ್ಷೆಯಲ್ಲಿ ಇರುವಿರಿ. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಬಗೆ ಹರಿಯಬಹುದು. ಕುಟುಂಬದ ನೆಮ್ಮದಿಯು ನಿಮ್ಮ ಮಾತಿನಿಂದ ವಿಚಲಿತವಾಗುವುದು. ಸ್ವಂತ ಶ್ರಮದಿಂದ ಗಳಿಸಿದ್ದು ನಿಮಗೆ ಆಪ್ತವೆನಿಸಲಿದೆ. ಮಾಡಬೇಕೆಂದುಕೊಂಡ ಕಾರ್ಯಕ್ಕೆ ತೊಂದರೆ ಬಂದರೂ ಬಿಡದೇ ಮುಂದುವರಿಸುವಿರಿ. ಆದಾಯದ ಹೆಚ್ಚಿಸಿಕೊಳ್ಳು ವಿಚಾರದಲ್ಲಿ ನೀವು ಬಹಳ ಹಿಂದೆ. ಕುಟುಂಬದ ಜೊತೆ ಸುಖವಾದ ಪ್ರಯಾಣವನ್ನು ಮಾಡುವಿರಿ. ದಾಂಪತ್ಯದಲ್ಲಿ ಮನಸ್ತಾಪವು ನಿಮ್ಮ ಮೌನದಿಂದ ಶಾಂತವಾಗುವುದು. ಒಂಟಿಯಾಗಿ ಸುತ್ತುವ ಆಸೆಯಾಗುವುದು.
ಕುಂಭ ರಾಶಿ: ದಿನನಿತ್ಯ ವಸ್ತುಗಳ ಮಾರಾಟಗಾರರಿಗೆ ಲಾಭವು ಹೆಚ್ಚಿರುವುದು. ಮಕ್ಕಳ ವಿದ್ಯಾಭ್ಯಾಸದ ಚಿಂತೆಯು ದೂರಾಗುವುದು. ಉತ್ತಮ ಸ್ಥಳವು ಸಿಕ್ಕಿದ್ದು ನಿಮಗೆ ಖುಷಿಯೂ ಆಗುವುದು. ಮನೆಯಿಂದ ಹೊರಗೆ ಹೋಗಿ ಇಡೀ ದಿನವನ್ನು ಕಳೆದುಬರುವಿರಿ. ಅಪರಿಚಿತರ ಜೊತೆ ಜಗಳವಾಡಿ ಸಮಯವನ್ನು ವ್ಯರ್ಥ ಮಾಡುವಿರಿ. ಪ್ರೀತಿಗೆ ಯೋಗ್ಯರನ್ನು ಹುಡುಕುವಿರಿ. ವಿದ್ಯಾಭ್ಯಾಸದ ಪ್ರಗತಿಯಿಂದ ಮನೆಯಲ್ಲಿ ಖುಷಿ ಇರಲಿದೆ. ನಿಮ್ಮ ಒರಟಾದ ಮಾತು ನೌಕರರು ಸಿಟ್ಟಾಗುವಂತೆ ಮಾಡುವುದಹ. ನಿಯಮದ ತಪ್ಪಿಗೆ ದಂಡವನ್ನು ಕೊಡಬೇಕಾದೀತು. ನಿಮ್ಮ ಅವಕಾಶಗಳನ್ನು ಅನ್ಯರು ಬಳಸಿಕೊಂಡಾರು. ಅತಿಯಾದ ಉತ್ಸಾಹದಲ್ಲಿರುವ ನಿಮಗೆ ಸಂಗಾತಿಯ ಮಾತು ಉತ್ಸಾಹ ಭಂಗವನ್ನು ಮಾಡೀತು. ಹಳೆಯ ಸ್ನೇಹಿತರು ಉಪಕಾರ ಸ್ಮರಣೆಯಿಂದ ಸಹಾಯ ಮಾಡುವರು.
ಮೀನ ರಾಶಿ: ಯಾರ ಮೇಲೂ ಸುಮ್ಮನೇ ಸಂಶಯಪಟ್ಟು ಸಂಬಂಧವನ್ನು ದೂರ ಮಾಡಿಕೊಳ್ಳುವಿರಿ. ದಾಂಪತ್ಯದಲ್ಲಿ ನೆಮ್ಮದಿ ಇಲ್ಲದೇ ಪರಸ್ಪರ ಕಲಹವಾಗಬಹುದು. ಸಾಮಾಜಿಕ ಕಾರ್ಯದಿಂದ ಸಮ್ಮಾನವನ್ನು ನಿರೀಕ್ಷಿಸುವಿರಿ. ಎಲ್ಲರನ್ನೂ ತೃಪ್ತಿಪಡಿಸುವ ಸಂಕಲ್ಪವು ಸುಮ್ಮನೇ ವ್ಯರ್ಥವಾಗಬಹುದು. ನಿಮ್ಮ ಗುರಿಯ ಬಗ್ಗೆ ವಿಶ್ವಾಸವು ನಿಮಗಿರಲಿ. ನಿಮ್ಮಿಂದ ಸಹಾಯ ಪಡೆಯಲು ನಿಮ್ಮನ್ನು ಹೊಗಳುವರು. ಧಾರ್ಮಿಕ ಕಾರ್ಯಗಳಲ್ಲಿ ಶ್ರದ್ಧೆಯು ಇಲ್ಲವಾಗುವುದು. ನಿಮ್ಮ ಮೇಲೆ ಹಿತಶತ್ರುಗಳು ಬೇಕಂತಲೇ ಆರೋಪವನ್ನು ಮಾಡಬಹುದು. ನಿಮ್ಮ ತಿಳಿವಳಿಕೆಯನ್ನು ಇನ್ನೊಬ್ಬರ ಮುಂದೆ ತೋರಿಸಿಕೊಳ್ಳುವುದಿಲ್ಲ. ನಿಮಗೆ ಇಂದು ಚಂಚಲವಾದ ಮನಸ್ಸು ಇದ್ದು ಸ್ಪರ್ಧೆಯಲ್ಲಿ ಸೋಲಬೇಕಾಗುವುದು.
ಲೋಹಿತಶರ್ಮಾ-8762924271 (what’s app only)