Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಸೋಮವಾರದ ರಾಶಿ ಭವಿಷ್ಯ

| Updated By: ರಮೇಶ್ ಬಿ. ಜವಳಗೇರಾ

Updated on: Apr 03, 2023 | 6:01 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 03) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಸೋಮವಾರದ ರಾಶಿ ಭವಿಷ್ಯ
ಇಂದಿನ ರಾಶಿ ಭವಿಷ್ಯ
Image Credit source: freepik
Follow us on

ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಏಪ್ರಿಲ್​ 03) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು  ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಮಘಾ, ಯೋಗ : ಗಂಡ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 28 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:59 ರಿಂದ 09:32ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:04 ರಿಂದ 12:36ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:08 ರಿಂದ 03:40ರ ವರೆಗೆ.

ಸಿಂಹ: ದೈವದಲ್ಲಿ ಶ್ರದ್ಧೆ- ಭಕ್ತಿಗಳು‌ ಕಡಿಮೆಯಾಗಲಿವೆ. ಬಂಧು ಬಳಗದವರಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಆಸ್ತಿಯ ವಿಚಾರಕ್ಕಾಗಿ ಅಲೆದಾಟವಿರಲಿದೆ. ಇದರಿಂದ ಸಿಟ್ಟಗೊಳ್ಳಲೂಬಹುದು. ನಿಮ್ಮ ಸಮಸ್ಯೆಯನ್ನು ಹಿರಿಯರ ಜೊತೆ ಅಥವಾ ನಂಬಿಕಸ್ಥರ ಜೊತೆ ಹಂಚಿಕೊಳ್ಳಿ. ಮರಿಹಾರವು ಸಿಕ್ಕೀತು. ಇಲ್ಲವೇ ಸಮಾಧಾನವಾದರೂ ದೊರೆಯುವುದು. ನಿಮ್ಮ ಪಾರದರ್ಶಕ ವ್ಯವಹಾರವು ಇಷ್ಟವಾಗುವುದು. ಅವಿವಾಹಿತರಿಗೆ ವಿವಾಹ ಯೋಗವು ಬರಲಿದೆ.

ಕನ್ಯಾ: ನಿಮಗಿಂದು ಬೇಸರವಾಗುವ ಸಾಧ್ಯತೆ ಇದೆ. ಪೂರ್ವನಿಯೋಜಿತ ವಿಷಯಗಳಿಂದ ಸಫಲತೆಯನ್ನು ಕಾಣಲಿದ್ದೀರಿ. ವಿನಾಕಾರಣ ಚರ್ಚೆಗಳಿಗೆ ಅವಕಾಶವನ್ನು ಕೊಡಬೇಡಿ. ಅದು ಗಂಭೀರವಾಗಿ ಮತ್ತೇನನ್ನೋ ಮಾಡೀತು. ನೂತನ ಮಿತ್ರರ ಭೇಟಿ ಆಗವುದು. ಸೂಕ್ಷ್ಮ ವಿಚಾರಗಳನ್ನು ತಾಳ್ಮೆಯಿಂದ ನಿರ್ವಹಿಸುವುದು ಒಳ್ಳೆಯದು. ಅಪರಿಚಿತರ ಜೊತೆ ಸಲುಗೆ ಬೇಡ. ದಿನಚರ್ಯೆಯನ್ನು ಬದಲಿಸಿಕೊಳ್ಳುವುದು ಒಳ್ಳೆಯದು. ಮಗನಿಗೆ ಕುಟುಂಬ ಜವಾಬ್ದಾರಿಯನ್ನು ಕೊಡಲು ಆಲೋಚಿಸುವಿರಿ.

ತುಲಾ: ಉದ್ಯೋಗದ ಸ್ಥಾನದಲ್ಲಿ ಪ್ರಶಂಸೆಗಳು ಇರಲಿವೆ. ನಿಮಗೆ ಕೃತ್ರಿಮವನ್ನು ಮಾಡಿಸಿದ್ದಾರೆ ಎಂಬ ಭೀತಿ ಪುನಃ ಪುನಃ ಕಾಡಬಹುದು. ಪ್ರತಿ ನಿತ್ಯವೂ ಸಣ್ಣ ರೋಗಗಳು ಕಾಣಿಸಿಕೊಳ್ಳಬಹುದು. ನಿಮಗಿಂದ ಅನಿರೀಕ್ಷಿತ ಸ್ಥಾನಮಾನ, ಗೌರವಗಳು ಸಿಗುವ ಸೂಚನೆ ಸಿಗಲಿದೆ. ಬೇರೆಯವರ ಮೇಲೆ ಉಂಟಾದ ತಪ್ಪು ತಿಳಿವಳಿಕೆಯು ದೂರಾಗುವುದು. ಸಂಗಾತಿಯೊಂದಿಗೆ ಹೆಚ್ಚು ಕಾಲ ಕಳೆಯಲಿದ್ದೀರಿ. ಅತಿಯಾದ ಕಾರ್ಯಗಳಿಂದ ಮಾನಸಿಕವಾಗಿ ಕುಗ್ಗುವಿರಿ. ನಿಮ್ಮ ವಸ್ತುಗಳನ್ನು ವಿದೇಶಕ್ಕೆ ಕಳುಹಿಸಲಿದ್ದೀರಿ.

ವೃಶ್ಚಿಕ: ಮನೆಯಿಂದ ದೂರವಿರುವ ನೀವು ಮನೆಗೆ ಬರಬೇಕೆನಿಸುವುದು. ದುಶ್ಚಟಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಸಹವಾಸ ಮಾಡುವಾಗ ಎಚ್ಚರವಿರಲಿ. ಆರೋಗ್ಯದ ಸಣ್ಣ ಸಮಸ್ಯೆಯನ್ನೂ ಸಹ ನಿರ್ಲಕ್ಷ್ಯ ಮಾಡಬೇಡಿ. ಭವಿಷ್ಯಕ್ಕೆಂದು ತೆಗೆದಿಟ್ಟ ಸಂಪತ್ತು ಇಂದೇ ಖಾಲಿಯಾಗಬಹುದು. ವೈವಾಹಿಕ ಜೀವನವು ಸುಖ ಶಾಂತಿಯಿಂದ ತುಂಬಿರುತ್ತದೆ. ನೀವಿಂದು ಸಹೋದ್ಯೋಗಿ ಹಾಗೂ ಸಂಬಂಧಿಕರ ಬೆಂಬಲವನ್ನು ಪಡೆದು ಕೆಲಸವನ್ನು ಪೂರ್ಣಗೊಳಿಸುವಿರಿ.

-ಲೋಹಿತಶರ್ಮಾ ಇಡುವಾಣಿ

Published On - 5:31 am, Mon, 3 April 23