Horoscope: ದಿನಭವಿಷ್ಯ: ಇಂದು ಕೋಪವನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಿ

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಜೂ.09 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ: ಇಂದು ಕೋಪವನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಿ
ದಿನಭವಿಷ್ಯ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 09, 2024 | 12:30 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಭಾನುವಾರ(ಜೂನ್ 09) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಗಂಡ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಸಂಜೆ 05:23 ರಿಂದ 06:59ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:32 ರಿಂದ 02:09ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:46 ರಿಂದ 05:23ರ ವರೆಗೆ.

ಸಿಂಹ ರಾಶಿ: ಇಂದು ಕುಟುಂಬದ ಸದಸ್ಯ ನಿಮ್ಮ ಜೊತೆ ಸಮಯವನ್ನು ಕಳೆಯಲು ಒತ್ತಾಯಿಸಬಹುದು. ಮಾತು ಕಡಿಮೆ, ಕಾರ್ಯ ಹೆಚ್ಚು ಮಾಡುವತ್ತ ಗಮನ ಹರಿಸುವುದು ಉತ್ತಮ. ಪ್ರಭಾವೀ ವ್ಯಕ್ತಿಗಳ ಭೇಟಿ ನಿಮ್ಮ ಮನೋಬಲವನ್ನು ಹೆಚ್ಚಿಸುತ್ತದೆ. ಕಛೇರಿಯ ಕೆಲಸದಲ್ಲಿ ವ್ಯತ್ಯಾಸವಾದ ಕಾರಣ ಕೋಪಗೊಳ್ಳುವಿರಿ. ನಿಮ್ಮ ಮೇಲೆ ಸಹೋದ್ಯೋಗಿಗಳು ಕಿಡಿಕಾರಬಹುದು‌. ಉದ್ಯೋಗವನ್ನು ಬಿಡುವುದಾಗಿ ಬೆದರಿಸಿಯಾರು. ಮನೆಯ ಹಿರಿಯರ ಮಾರ್ಗದರ್ಶನದಲ್ಲಿ ಕುಟುಂಬ ವ್ಯವಹಾರವು ಮತ್ತೆ ಬೆಳೆಯುತ್ತದೆ. ನಿಮ್ಮ ಬುದ್ಧಿಯನ್ನು ಪ್ರದರ್ಶಿಸಬೇಡಿ. ನಿಮ್ಮ ವೈಯಕ್ತಿಕವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನೀವು ಇಂದು ಆರಂಭಿಸುವ ಕೆಲಸವು ಹೆಚ್ಚು ಸಮಯವನ್ನು ಪಡೆಯಬಹುದು. ಅಕಾರಣವಾಗಿ ಸಂತೋಷಪಡುವಿರಿ. ಈ ದಿನದ ಆರಂಭವು ಬಹಳ ಉತ್ಸಾಹದಿಂದ ಇರುವುದು.

ಕನ್ಯಾ ರಾಶಿ: ಇಂದು ನೀವು ಕೋಪವು ಹತೋಟಯಲ್ಲಿ ಇರಲಿ. ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ವಿದೇಶದ ವ್ಯಕ್ತಿಗಳ ಸ್ನೇಹವಾಗಲಿದೆ. ನೀವು ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೂ ಕೈಗೂಡದೇ ಹೋಗಬಹುದು. ವ್ಯವಹಾರದಲ್ಲಿ ಅಧಿಕ ಲಾಭವನ್ನು ಅಪೇಕ್ಷಿಸುವಿರಿ. ಒಳ್ಳೆಯ ಕಡೆಗೆ ಹೂಡಿಕೆ ಮಾಡುವುದರಿಂದ ನಿಮ್ಮ ಸಂಪತ್ತು ವೃದ್ಧಿಯಾಗುವುದು. ತುಂಬ ದಿನಗಳಿಂದ ನಡೆಯುತ್ತಿರುವ ಕುಟುಂಬದ ಕಲಹವು ನಿಮಗೆ ಬೇಸರ ತರಿಸೀತು‌. ಯಾರನ್ನಾದರೂ ವಹಿಸಿಕೊಂಡು ಹೋಗುವಿರಿ, ಅವರಿಂದ ನೋವಾಗಲಿದೆ. ನಿಮ್ಮ ಸಂಬಂಧಿಕರಿಂದ ಕೆಲವು ಉತ್ತಮ ಸಲಹೆಯನ್ನು ಪಡೆಯಬಹುದು. ಕಾನೂನು ಪ್ರಕರಣದಲ್ಲಿ ನೀವು ಗೆಲ್ಲುವ ಎಲ್ಲ ಸಾಧ್ಯತೆಗಳಿವೆ. ನಿಮ್ಮ ಉದ್ಯೋಗವನ್ನು ಅಪಹಾಸ್ಯ ಮಾಡಬಹುದು.

ತುಲಾ ರಾಶಿ: ನೀವು ಒಳ್ಳೆಯ ಅಭಿವೃದ್ಧಿ ಸಾಧಿಸುತ್ತಿರುವ ನಿಮಗೆ ಪ್ರೇಮ ಜೀವನವು ಒಳ್ಳೆಯ ತಿರುವು ತೆಗೆದುಕೊಳ್ಳುತ್ತದೆ. ನೀವು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ದೈವದ ಬಗ್ಗೆ ಭಕ್ತಿಯ ಕೊರತೆ ಹೆಚ್ಚಾಗಿ ಕಾಣಿಸುವುದು. ಸಂಬಂಧವು ಗಟ್ಟಿಯಾದರೂ ಖರ್ಚು ಹೆಚ್ಚಾಗಬಹುದು ಎಂಬ ಭಾವನೆಯಲ್ಲಿ ನೀವಿರುವಿರಿ. ನಿಮ್ಮ ಕಾರ್ಯಗಳಿಗೆ ಸಂಗಾತಿಯು ಸಹಕರಿಸಬಹುದು. ಸ್ವ ಉದ್ಯೋಗವನ್ನು ನಡೆಸುತ್ತಿದ್ದರೆ, ಕೆಲಸಕ್ಕೆ ಕೆಲವರನ್ನು ಸೇರಿಸಿಕೊಳ್ಳುವಿರಿ. ಸ್ನೇಹಿತರು ನಿಮ್ಮ ಜೊತೆ ಎಂದಿನಂತೆ ಇಲ್ಲವೆಂಬ ಬುದ್ಧಿಯು ತರ್ಕಿಸುವುದು. ಸಂತೋಷಕ್ಕೆ ಬೇಕಾದ ಎಲ್ಲ ಇದ್ದರೂ ಚಿಂತೆ ಇರಲಿದೆ. ಸಕಾರಾತ್ಮಕ ಆಲೋಚನೆ ಇರಲಿ. ವಿರಳ ಲಾಭದ ಅವಕಾಶಗಳ ಬಗ್ಗೆಯೂ ನೀವು ಗಮನ ಹರಿಸಬೇಕು. ಇದು ಜಾಣತನವೂ ಹೌದು. ಇಂದು ಹಣದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗುವುದು. ಇನ್ನೊಬ್ಬರ ಬಗ್ಗೆ ಆಡಿಕೊಳ್ಳುವುದು ಸರಿ ಎನಿಸದು.

ವೃಶ್ಚಿಕ ರಾಶಿ: ಇಂದು ನೀವು ಮಾತನ್ನು ಕಡಿಮೆ ಮಾಡುವಿರಿ. ಇಲ್ಲದಿದ್ದರೆ ಚಿತ್ರಣದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ. ನಿಮ್ಮ ಸ್ನೇಹಿತರು ಮತ್ತು ಬಂಧುಗಳ ಕಾರಣದಿಂದ ಮನೆಯಲ್ಲಿ ಕಲಹಗಳು ಉಂಟಾಗಬಹುದು. ಒತ್ತಡಕ್ಕೆ ಸಿಲುಕಿ ಅಪ್ರಬುದ್ಧವಾಗಿ ಮಾತನಾಡಬೇಡಿ. ಕುಟುಂಬ ಜೀವನದಲ್ಲಿ ಜಾಗರೂಕರಾಗಿರಿ, ಕೋಪವನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಿ. ಇಲ್ಲದಿದ್ದರೆ ನಿಮ್ಮ ಸಂಬಂಧವು ಮುರಿದುಹೋಗುವುದು. ಆರ್ಥಿಕವಾಗಿ ಸಬಲರಾಗಲು ನಿಮಗೆ ಅನೇಕ ದಾರಿಗಳು ಕಾಣಿಸುವುವು. ನೀವು ಯಾರಿಗಾದರೂ ಹಣವನ್ನು ಸಾಲವಾಗಿ ನೀಡಿದ್ದರೆ, ಅದನ್ನು ಮರಳಿ ಪಡೆಯುವ ಸಾಧ್ಯತೆ ತುಂಬಾ ಕಡಿಮೆ. ಯಾರದೋ ಮಾತಿನಿಂದ ನಿಮ್ಮ ನೆಮ್ಮದಿಯನ್ನು ಕಳೆದುಕೊಳ್ಳುವ ಅವಶ್ಯಕತೆ ಇಲ್ಲ. ಇಂದು ನಿಮಗೆ ಪ್ರಶಂಸೆಯಿಂದ ಜವಾಬ್ದಾರಿಗಳೂ ಹೆಚ್ಚುವುದು.

ತಾಜಾ ಸುದ್ದಿ
ಡಿಎನ್​ಎ ಟೆಸ್ಟ್ ನಡೆದೇ ಇಲ್ಲ? ದರ್ಶನ್ ಪರ ವಕೀಲರು ಹೇಳಿದ್ದಿಷ್ಟು
ಡಿಎನ್​ಎ ಟೆಸ್ಟ್ ನಡೆದೇ ಇಲ್ಲ? ದರ್ಶನ್ ಪರ ವಕೀಲರು ಹೇಳಿದ್ದಿಷ್ಟು
ಗದಗ: ಗೋದಾಮಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹುಳುಗಳ ಪಾಲು
ಗದಗ: ಗೋದಾಮಿನಲ್ಲಿ ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹುಳುಗಳ ಪಾಲು
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿಚಾರಣೆ ಏಕೆ
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿಚಾರಣೆ ಏಕೆ
Horoscope: ಈ ರಾಶಿಯವರಿಗೆ ಇಂದು ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ
Horoscope: ಈ ರಾಶಿಯವರಿಗೆ ಇಂದು ಪಿತ್ರಾರ್ಜಿತ ಸಂಪತ್ತಗಳು ಸಿಗುವ ಸಾಧ್ಯತೆ
ಹನುಮಂತನಿಗೆ ವೀಳ್ಯದೆಲೆ ಮಾಲೆ ಧಾರಣೆಯ ಮಹತ್ವವೇನು?
ಹನುಮಂತನಿಗೆ ವೀಳ್ಯದೆಲೆ ಮಾಲೆ ಧಾರಣೆಯ ಮಹತ್ವವೇನು?
ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಸರಣಿಯಲ್ಲಿ ಮತ್ತೊಂದು ಲೇಟೆಸ್ಟ್​ ಮಾಡೆಲ್
ಸ್ಯಾಮ್​ಸಂಗ್ ಸ್ಮಾರ್ಟ್​ ಟಿವಿ ಸರಣಿಯಲ್ಲಿ ಮತ್ತೊಂದು ಲೇಟೆಸ್ಟ್​ ಮಾಡೆಲ್
ಡಿಎನ್​ಎ ಟೆಸ್ಟ್​ ಮಾಡಿಸಲು ಆಸ್ಪತ್ರೆಗೆ ತೆರಳುವಾಗಿ ಟೆನ್ಷನ್​ ಆದ ಪವಿತ್ರಾ
ಡಿಎನ್​ಎ ಟೆಸ್ಟ್​ ಮಾಡಿಸಲು ಆಸ್ಪತ್ರೆಗೆ ತೆರಳುವಾಗಿ ಟೆನ್ಷನ್​ ಆದ ಪವಿತ್ರಾ
ಡಿಕೆ ಶಿವಕುಮಾರ್​ ಸಭೆಗೂ ಕೈಕೊಟ್ಟ ವಿದ್ಯುತ್: ಅಧಿಕಾರಿಗಳ ಸರ್ಕಸ್ ನೋಡಿ
ಡಿಕೆ ಶಿವಕುಮಾರ್​ ಸಭೆಗೂ ಕೈಕೊಟ್ಟ ವಿದ್ಯುತ್: ಅಧಿಕಾರಿಗಳ ಸರ್ಕಸ್ ನೋಡಿ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
ಆಕಾಶದಲ್ಲಿದ್ದ ವಿಮಾನದಲ್ಲಿ ಕೈಕೊಟ್ಟ AC, ಪ್ರಯಾಣಿಕರ ಪರದಾಟ: ವಿಡಿಯೋ ನೋಡಿ
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು
‘ಡೆವಿಲ್​ ಎದುರು ನನ್ನ ಸಿನಿಮಾ ರಿಲೀಸ್​’: ಪ್ರಥಮ್​ ಬಹಿರಂಗ ಸವಾಲು