
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್ 07) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಮಾಘ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ವರೀಯಾನ್, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 46 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:13 ರಿಂದ 03:42ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:47 ರಿಂದ 08:16ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:45 ರಿಂದ 11:14ರ ವರೆಗೆ.
ಮೇಷ ರಾಶಿ: ನಿಮ್ಮ ಮುಕ್ತ ಸ್ವಭಾವವು ಇತರರಿಗೆ ಇಷ್ಟವಾಗದೇ ಇರಬಹುದು. ಅತಿಯಾದ ನಿರೀಕ್ಷೆಯಿಂದ ಸಂಕಟವಾಗಬಹುದು. ಕಾರ್ಯದ ಸ್ಥಳದಲ್ಲಿ ಅಡಚಣೆಯು ಉಂಟಾಗುತ್ತದೆ. ನಿಮ್ಮ ಬಗ್ಗೆ ಬರುವ ಮಾತನ್ನು ಸುಮ್ಮನಿದ್ದು ತಳ್ಳಿಹಾಕುವಿರಿ. ಮಾಡುವ ಕೆಲಸದಲ್ಲಿ ವಿಳಂಬವಾಗಲಿದೆ. ಆತಂಕ ಮತ್ತು ಉದ್ವೇಗ ಇರುತ್ತದೆ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಉದ್ಯೋಗದಲ್ಲಿ ಕೆಲಸದ ಹೊರೆ ಇರುತ್ತದೆ. ಧಾರ್ಮಿಕ ಕರ್ಮವು ನಿಮ್ಮ ಇಷ್ಟಾರ್ಥದ ಸಿದ್ಧಿಗಾಗಿ ಮಾಡುವಿರಿ. ದೇಹಕ್ಕೆ ವಿಶ್ರಾಂತಿಯ ಅವಶ್ಯಕತೆ ಇದ್ದರೂ ಸಮಯವು ಮಾತ್ರ ಸಿಗದೇಹೋದೀತು. ಹಿತಶತ್ರುಗಳಿಂದ ಸಣ್ಣ ಆಪತ್ತು ಬರಬಹುದು. ಕರ್ತವ್ಯಕ್ಕೆ ನಿಮ್ಮ ಮನಸ್ಸನ್ನು ಕೊಟ್ಟುಕೊಳ್ಳುವಿರಿ. ಸಂಗಾತಿಯ ಬಗ್ಗೆ ಸಂಶಯವನ್ನು ಅನ್ಯರ ಬಳಿ ವ್ಯಕ್ತಪಡಿಸಬಹುದು. ಆಲಸ್ಯದ ಪಟ್ಟದಿಂದ ಕೆಳಗಿಳಿಯುವುದು ಅಸಾಧ್ಯ. ಅನಿರೀಕ್ಷಿತ ಕೆಟ್ಟ ಸುದ್ದಿಯಿಂದ ವಿಚಲಿತರಾಗದಿರಿ.
ವೃಷಭ ರಾಶಿ: ಇಂದು ನೀವು ಶುಭ ಸಮಾರಂಭಗಳಲ್ಲಿ ಅನಿರೀಕ್ಷಿತವಾಗಿ ಭಾಗವಹಿಸುವಿರಿ. ಮಕ್ಕಳ ಬೆಂಬಲವನ್ನು ನೀವು ಅಪೇಕ್ಷಿಸದಿದ್ದರೂ ಸಿಗುವುದು. ಒಂದರಮೇಲೆ ಒಂದರಂತೆ ಅನಾರೋಗ್ಯವು ನಿಮ್ಮನ್ನು ಪೀಡಿಸಬಹುದು. ಸಂಗಾತಿಯ ಮಾತಿಗೆ ವಿರೋಧವನ್ನು ವ್ಯಕ್ತಪಡಿಸುವಿರಿ. ಇನ್ನೊಬ್ಬರ ಮಾತುಗಳನ್ನು ನೀವು ಸಹನೆಯಿಂದ ಆಲಿಸುವಿರಿ. ಮಕ್ಕಳಿಂದ ಇಂದು ಹೆಚ್ಚು ನಿರೀಕ್ಷಿಸುವಿರಿ. ನಿಮ್ಮ ಸಂಯಮ ಕೆಡಬಹುದು. ವೃತ್ತಿಯಲ್ಲಿ ಕಿರಿಕಿರಿ ಅಧಿಕವಾಗಬಹುದು. ಮೆಚ್ಚುಗೆಯ ಮಾತುಗಳಿಂದ ದೂರವಾದ ಸಂಬಂಧವು ಹತ್ತಿರವಾಯಬಹುದು. ಸರಳ ಮಾರ್ಗದಿಂದ ಕೆಲಸವನ್ನು ಪೂರ್ಣ ಮಾಡಿಕೊಳ್ಳಿ. ಆರೋಗ್ಯದ ಬಗ್ಗೆ ಆತಂಕ ಬೇಡ. ವಿನೀತಭಾವವು ನಿಮ್ಮನ್ನು ಇಷ್ಟಪಡುವಂತೆ ಮಾಡಬಹುದು. ಉದ್ಯೋಗದಲ್ಲಿ ನೀವು ಪ್ರಗತಿಯನ್ನು ಸಾಧಿಸುವಿರಿ. ಪಶ್ಚಾತ್ತಾಪವು ನಿಮ್ಮ ನೋವನ್ನು ಪರಿಹರಿಸೀತು.
ಮಿಥುನ ರಾಶಿ: ನಿಮ್ಮ ಚರಾಸ್ತಿಯ ಮೌಲ್ಯವು ಕಡಿಮೆ ಆಗುವುದು. ದೊಡ್ಡ ಲಾಭಕ್ಕೆ ನಿಮ್ಮ ಶ್ರಮವು ಹೆಚ್ಚಾಗುವುದು. ಅದೃಷ್ಟದಿಂದ ಸಫಲತೆಯನ್ನು ಕಾಣುವಿರಿ. ಕೆಲವು ಹಂತವನ್ನು ತಲುಪಲು ನಿಮಗೆ ಆಗದೇ ಇರಬಹುದು. ಸ್ನೇಹಿತರಿಂದ ಬೆಂಬಲ ಸಿಗಲಿದೆ. ಮನೆಯಲ್ಲಿ ಮತ್ತು ಹೊರಗೆ ಸಂತೋಷ ಇರುತ್ತದೆ. ದೂರ ಪ್ರಯಾಣ ಹೊರಟ ನಿಮಗೆ ಅಡೆತಡೆಗಳು ಬರಬಹುದು. ಉದ್ಯೋಗವನ್ನು ಬದಲಿಸಿದ ಕಾರಣ ಸಮಯವು ಓಡಾಟದಲ್ಲಿ ವ್ಯರ್ಥವಾಗಬಹುದು. ಸಾಮಾಜಿಕ ಕಾರ್ಯಕ್ಕೆ ನಿಮಗೆ ಪ್ರಶಂಸೆಯು ಸಿಗುವುದು. ಕಛೇರಿಯಲ್ಲಿ ಕೆಲವರ ವರ್ತನೆಯು ಬದಲಾದಂತೆ ತೋರುವುದು. ನಿಮಗೆ ಇಷ್ಟವಾದದನ್ನು ಪಡೆಯುವ ಕಡೆಗೆ ಗಮನ ಇರಲಿ. ನೀವು ವೃತ್ತಿಯನ್ನು ಮಾಡುತ್ತಲೇ ಉನ್ನತ ಪದವಿಯನ್ನು ಪಡೆಯುವಿರಿ. ಯಶಸ್ಸು ನಿಮ್ಮ ಹಿಂದೆ ತಾನಾಗಿಯೇ ಬರುವುದು. ಇಂದು ನಿಮಗೆ ಅವ್ಯಕ್ತ ಭಯವು ಇರಲಿದೆ.
ಕಟಕ ರಾಶಿ: ಇಂದು ನಿಮ್ಮ ಆತುರವು ಕೆಲಸವನ್ನು ಕೆಡಿಸುವುದು. ಯಾರದೋ ಮಾತನ್ನು ಕೇಳಿ ಸಮಸ್ಯೆಯನ್ನು ಹೆಚ್ಚು ಮಾಡಿಕೊಳ್ಳುವಿರಿ. ಯಾರ ವಿರೋಧವನ್ನೂ ನೀವು ಕೇಳಲಾರಿರಿ. ಪ್ರೇಮದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯವಾದೀತು. ನೆಮ್ಮದಿಯ ಕೊರತೆಯು ಹೆಚ್ಚು ಕಾಡಬಹುದು. ಯಾವುದಾರೂ ಆಕಸ್ಮಿಕ ಸುದ್ದಿಯಿಂದ ವಿಚಲಿತರಾಗುವುದು ಬೇಡ. ಹೂಡಿಕೆಯ ಬಗ್ಗೆ ನಿಮಗೆ ಸರಿಯಾದ ಮಾಹಿತಿಯ ಕೊರತೆ ಇರುವುದು. ಇಂದು ನಿಮ್ಮ ನಕಾರಾತ್ಮಕ ಭಾವನೆಗಳು ಹೆಚ್ಚಿರುವುದು. ಉಸಿರಾಟದ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಬೇಕಾದೀತು. ನಿಮ್ಮ ಸಂತೋಷವನ್ನು ವ್ಯಕ್ತಪಡಿಸುವ ವಿಧಾನವು ವಿಭಿನ್ನವಾಗಿರಲಿದೆ. ಯಾವ ನೋವನ್ನೂ ನಿರ್ಲಕ್ಷಿಸುವುದು ಬೇಡ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ನಿಮ್ಮ ಮನಸ್ಸು ತಳಮಳಗೊಳ್ಳುವುದು. ಅಧಿಕಾರಿಗಳಾಗಿದ್ದರೆ ನೀವೇ ಇಂದು ಆಗಬೇಕಾದ ಕಾರ್ಯಗಳ ಪರಿಶೀಲನೆ ಮಾಡುವಿರಿ.