AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope 04 Mar: ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಅನ್ಯರ ಆಗಮನ, ಅಲ್ಪ ಆದಾಯದಲ್ಲಿ ತೃಪ್ತಿ ಹೊಂದಬೇಕಾದೀತು

Nitya Bhavishya: 2024 ಮಾರ್ಚ್​ 04ರ ಸೋಮವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ. ಯಾವ ರಾಶಿಯವರು ಇಂದು ಜಾಗೃಕರಾಗಿರಬೇಕು ಎಂದು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope 04 Mar: ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಅನ್ಯರ ಆಗಮನ, ಅಲ್ಪ ಆದಾಯದಲ್ಲಿ ತೃಪ್ತಿ ಹೊಂದಬೇಕಾದೀತು
ಪ್ರಾತಿನಿಧಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Mar 04, 2024 | 12:02 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್​​​​ 04) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಮಾಘ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ನವಮೀ, ನಿತ್ಯನಕ್ಷತ್ರ: ಮೂಲಾ, ಯೋಗ: ವಜ್ರ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 48 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:18 ರಿಂದ 09:46ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:15 ರಿಂದ ಮಧ್ಯಾಹ್ನ 12:44ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:13 ರಿಂದ 03:42ರ ವರೆಗೆ.

ಮೇಷ ರಾಶಿ: ಇಂದು ನಿಮ್ಮ ಮನಸ್ಸಿನಲ್ಲಿ ಕೆಲವರ ವಿಚಾರದಲ್ಲಿ ಗೊಂದಲವು ಉಳಿಯುತ್ತದೆ. ಕೌಟುಂಬಿಕ ವೈಷಮ್ಯದಿಂದ ನಿಮಗೆ ದುಃಖವಾಗಬಹುದು. ಆರೋಗ್ಯದ ಬಗ್ಗೆ ಗಮನ ಕೊಡಿ. ವಾಹನದ ದುರಸ್ತಿ ಇರುವುದು. ಆಗಿಹೋದ ಸಾಮಾಜಿಕ ಕಾರ್ಯಗಳಿಗೆ ಪ್ರಶಂಸೆ ಬರಬಹುದು. ಏಕಾಂತದಲ್ಲಿ ಇರಲು ಇಷ್ಟಪಡುವಿರಿ. ಆದಾಯಕ್ಕೆ ಮೂಲವಾದುದನ್ನು ಹುಡುಕಿಕೊಳ್ಳುವುದು ಭವಿಷ್ಯ ದೃಷ್ಟಿಯಿಂದ ಉತ್ತಮ. ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವುದು ಕಷ್ಟವಾಗಬಹುದು. ಆದಾಯದ ಮೂಲದಿಂದ ನಿಮಗೆ ನೆಮ್ಮದಿ ಸಿಗುವುದು. ದೂರಪ್ರಯಾಣವನ್ನು ಇಂದು ಇಷ್ಟಪಡುವಿರಿ. ಶತ್ರುಗಳ ಅನ್ಯಾಯಕ್ಕೆ ಸಾಕ್ಷಿಯು ಸಿಗಬಹುದು. ಸಕಾರಾತ್ಮಕತೆಯಲ್ಲಿ ಇರಲು ನಿಮಗೆ ಇಷ್ಟವಾಗುವುದು.

ವೃಷಭ ರಾಶಿ: ಇಂದು ನೀವು ಸಾಮಾಜಿಕ ಕ್ಷೇತ್ರದಲ್ಲಿ ಅವಮಾನವನ್ನು ಎದುರಿಸಬಹುದು. ವಾಹನಗಳ ಬಳಕೆ ಇತ್ಯಾದಿಗಳಲ್ಲಿ ಜಾಗರೂಕರಾಗಿರಿ. ವ್ಯಾಪಾರ ಕ್ಷೇತ್ರದಲ್ಲಿ ಯಾರಿಗೂ ಸಾಲವಾಗಿ ಹಣ ನೀಡಬೇಡಿ. ಕಾರ್ಯೋನ್ಮುಖರಾಗುವ ಅವಶ್ಯಕತೆ ಬಹಳ ಇರಲಿದೆ. ಜೀವನೋತ್ಸಾಹಕ್ಕೆ ನಿಮ್ಮದಾದ ಚಿಂತನೆಗಳು ಇರಲಿ. ಸತ್ಪಾತ್ರರಿಗೆ ಸುವಸ್ತುವನ್ನು ದಾನ ಕೊಡಲು ಇಚ್ಛಿಸುವಿರಿ. ಕೆಲವಾರು ವ್ಯಕ್ತಿತ್ವಗಳು ನಿಮ್ಮನ್ನು ಆಕರ್ಷಿಸಬಹುದು. ಕೆಲವೊಮ್ಮೆ ನಿಮ್ಮ ಸ್ವಭಾವವು ನಾಟಕೀಯದಂತೆ ತೋರುವುದು. ಕಲ್ಪನೆಯಲ್ಲಿ ಓಡಾಡುವುದನ್ನು ಕಡಿಮೆ ಮಾಡಿ. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ತೊಂದರೆ ಬರುವುದು. ಇಲ್ಲದೆ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳಲಿದ್ದೀರಿ. ನಿಮ್ಮ ಕಾರ್ಯದಲ್ಲಿ ತಪ್ಪುಗಳನ್ನು ಹುಡುಕುವರು.

ಮಿಥುನ ರಾಶಿ: ಇಂದು ನಿಮ್ಮ ಉತ್ಸಾಹಕ್ಕೆ ಯಾರಾದರೂ ಭಂಗ ಮಾಡಬಹುದು. ‌ಹಳೆಯ ಘಟನೆಗಳು ಮತ್ತೆ ಮರುಕಳಿಸಬಹುದು. ಮನಸ್ಸು ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಆರೋಗ್ಯ ಇಂದು ಉತ್ತಮವಾಗಿರುತ್ತದೆ. ಮಕ್ಕಳಿಂದ ನಿಮಗೆ ಆಗಬೇಕಾದ ಸಹಾಯವು ಆಗಬಹುದು. ನೌಕರರ ವಿಚಾರದಲ್ಲಿ ಗಟ್ಟಿಯಾದ ನಿಲುವು ಅಗತ್ಯ. ಸಂಗಾತಿಯನ್ನು ವಿಧವಾಗಿ ಪರೀಕ್ಷಿಸುವಿರಿ. ನಂಬಿಕೆಯನ್ನು ಕಳೆದುಕೊಳ್ಳಬೇಕಾಗುವುದು. ನಿಮ್ಮಲ್ಲಿ ಎಷ್ಟೇ ಆತ್ಮವಿಶ್ವಾಸವಿದ್ದರೂ ಕೆಲಸಗಳ ಒತ್ತಡದಲ್ಲಿ ಗೊಂದಲದಲ್ಲಿ ಸಿಕ್ಕಿಕೊಳ್ಳುವಿರಿ. ಸ್ಪರ್ಧೆಗಳಿಗೆ ನಿಮ್ಮ ಆಸೆಗಳನ್ನು ಯಾವುದೇ ಪೂರ್ವಾಪರ ವಿಚಾರವಿಲ್ಲದೇ ಪೂರೈಸಿಕೊಳ್ಳುವಿರಿ. ಕುಟುಂಬ ಸದಸ್ಯರ ಮೇಲೆ ವಿನಾಕಾರಣ ಸಿಟ್ಟಾಗುವಿರಿ. ಮಕ್ಕಳ ಮೇಲೇ ಅಕ್ಕರೆ ಇರುವುದು. ನಿಮ್ಮನ್ನು ಸಮಾಜಮುಖಿಯಾಗಿ ಕಾಣುವ ಮನಸ್ಸು ಇರುವುದು.

ಕಟಕ ರಾಶಿ: ಇಂದು ಸಜ್ಜನರ ಸಹವಾಸ ಸಿಗುವ ಸಾಧ್ಯತೆ ಇದೆ. ಬಂಧುಗಳ ಬಗ್ಗೆ ನಿಮಗೆ ಸದ್ಭಾವವು ಕಡಿಮೆ ಆಗಲಿದೆ. ಭೂಮಿಯ ಬಗ್ಗೆ ನಿಮಗೆ ಆಸಕ್ತಿ ಕಡಿಮೆ‌ ಆಗಲಿದೆ. ನಿಶ್ಚಿತ ಕೆಲಸದಲ್ಲಿ ಆಲಸ್ಯದಿಂದ ಇದ್ದು ಎಲ್ಲರಿಂದ ಹೇಳಿಸಿಕೊಳ್ಳಬೇಕಾಗುವುದು. ಯಾರಿಗಾದರೂ ನಿಜವನ್ನು ತಿಳಿಸಬೇಕಾದರೆ ಮನಸ್ಸಿಗೆ ನೋವಾಗದಂತೆ ತಿಳಿಸಿ. ಉಪಕಾರದ ವಿಚಾರದಲ್ಲಿ ನೀವು ಹಿಂದಿರುವಿರಿ. ವೃತ್ತಿಯು ಬೇಸರ ತರಿಸಬಹುದು. ಎಂದೋ ಆದ ಘಟನೆಯನ್ನು ಮತ್ತೆ ನೆನಪಿಸಿಕೊಂಡು ಮನಸ್ತಾಪವನ್ನು ತಂದುಕೊಳ್ಳುವಿರಿ. ಅಶಿಸ್ತಿನಿಂದ ನೀವು ವರ್ತಿಸುವುದು ಕಡಿಮೆ‌ ಆಗಬಹುದು. ಅಧಿಕಾರಿಗಳಿಂದ ಆರ್ಥಿಕತೆಯ ಪರಿಶೀಲನೆ ನಡೆಯುವುದು. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವನ್ನು ಕಡಮೆ‌ ಮಾಡಿ. ಯಾರ ಮಾತನ್ನೂ ನಂಬದ ಸ್ಥಿತಿಯನ್ನು ನೀವೇ ತಂದುಕೊಳ್ಳುವಿರಿ. ಹೊಸ ವಸ್ತುಗಳನ್ನು ಖರೀದಿಸಿ ಹಾಳುಮಾಡಿಕೊಳ್ಳುವಿರಿ.

ಸಿಂಹ ರಾಶಿ: ಯಾವುದಾದರೂ ವಿಚಾರಕ್ಕೆ ಇಂದು ಮಕ್ಕಳ ಜೊತೆ ಕಲಹವಾಗಬಹುದು. ಕೆಲವು ತಿರುವುಗಳು ಅನಿರೀಕ್ಷಿತವಾಗಿ ಬರಬಹುದು. ವಾಹನ ಚಾಲನೆಯು ನಿಮಗೆ ಇಷ್ಟವಾಗುವುದು. ಶ್ರಮಕ್ಕೆ ಯೋಗ್ಯವಾದ ಆದಾಯವನ್ನು ನೀವು ಮಾತ್ರ ಪಡೆಯುವಿರಿ. ಆಕಸ್ಮಿಕ ಧನಲಾಭಕ್ಕೆ ಹಿಂದೇಟು ಹಾಕುವಿರಿ. ಮೋಜಿನಲ್ಲಿ ನಿಮ್ಮ ಸಮಯವು ಕಳೆಯುವುದು. ಉದ್ಯೋಗದ ಕಾರಣಕ್ಕೆ ಪ್ರವಾಸ ಮಾಡಬೇಕಾಗಬಹುದು. ವಿದೇಶದ ಸಂಪರ್ಕವು ವ್ಯಾಪಾರಕ್ಕಾಗಿ ಇರಲಿದೆ. ಅಪಮಾನವನ್ನು ಸಹಿಸಲಾಗದೇ ಎದುರಿಸಲೂ ಆಗದೇ ಹತಾಶೆಗೊಳ್ಳುವಿರಿ. ದುಃಖವನ್ನು ಆಪ್ತರ ಬಳಿ ಮಾತ್ರ ಹಂಚಿಕೊಳ್ಳಿ. ನಿಮ್ಮ ಮಾತಿಗೆ ಕೆಲವರ ಬೆಂಬಲವು ನಿಮಗೆ ಖುಷಿಕೊಡುವುದು. ಶ್ರಮಪಟ್ಟು ಆರಂಭಿಸಿದ ಕಾರ್ಯಗಳು ಪಿತೂರಿಯಿಂದ ಅರ್ಧಕ್ಕೆ ಸ್ಥಗಿತವಾಗಬಹುದು. ಯಾರ ನೋವನ್ನಾದರೂ ಅಲೈಸುವ ಮನಸ್ಸು ಇರುವುದು.

ಕನ್ಯಾ ರಾಶಿ: ಇಂದು ನಕಾರಾತ್ಮಕವಾಗಿ ನಿಮ್ಮ ಮನಸ್ಸು ಹರಿಯುವುದು. ಸಂಗಾತಿಯ ಮನೋಭಾವಕ್ಕೆ ಹೊಂದಿಕೊಳ್ಳಲು ಕಷ್ಟವಾದೀತು. ಪರಿಚಿತರನ್ನು ಅಪರಿಚಿತರಂತೆ ಕಾಣುವಿರಿ. ಆಸ್ತಿಯ ದಾಖಲೆಗಳು ಕಾಣದೇ ಆತಂಕ ಉಂಟಾಗಬಹುದು. ಮಿತಿಯಲ್ಲಿ ನಿಮ್ಮ ಮಾತು ಇರಬೇಕಾಗುವುದು. ಸತ್ಯವನ್ನು ಮರೆಮಾಚಲು ತಂತ್ರವನ್ನು ಹೆಣೆಯಬಹುದು. ಮಕ್ಕಳು ನಿಮ್ಮ ಪ್ರತಿ ಬದಲಾವಣೆಯನ್ನೂ ಗಮನಿಸುವರು. ನಿಮ್ಮ ಜಾಣ್ಮೆಯಿಂದ ಆದಾಯವನ್ನು ಅಧಿಕ ಮಾಡಿಕೊಳ್ಳುವಿರಿ. ಕಲಾವಿದರಿಗೆ ಮನ್ನಣೆ ಸಿಗಲಿದೆ. ವಿದೇಶೀಯ ವಸ್ತುಗಳ ಬಳಕೆಯನ್ನು ಮಾಡುವುದು ಕಾರಣಾಂತರಗಳಿಂದ ಇಷ್ಟವಾಗದು. ನಿಮ್ಮ ಅಸಹಾಯಕತೆಯನ್ನು ಮನೆಯವರ ಮುಂದೆ ಹೇಳಿಕೊಳ್ಳುವಿರಿ. ಬಂಧುಗಳ ಜೊತೆ ನಿಮ್ಮ ಬಾಂಧವ್ಯವು ಗಟ್ಟಿಯಾಗಿ ಇರುವುದು. ನಿಮ್ಮ ಆದಾಯಕ್ಕೆ ತಕ್ಕಂತೆ ಜೀವನವಿರಲಿ.

ತುಲಾ ರಾಶಿ: ಇಂದು ನಿಮ್ಮ ಕೆಲವು ವಿಚಾರಕ್ಕೆ ಗೊಂದಲದ ಸ್ಥಿತಿ ಇರುವುದು. ಯಾವ ತಪ್ಪಿಗೂ ಯಾರನ್ನೂ ದೂಷಿಸಲಾರಿರಿ. ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡಿದರೂ ಅವಘಡಗಳು ಮತ್ತೆಲ್ಲಿಂದಲೋ ಬರಬಹುದು‌. ದೇವರ ಇಚ್ಛೆಯಂತೆ ಎಲ್ಲವೂ ಆಗುತ್ತದೆ ಎಂಬ ದಾರ್ಢ್ಯತೆಯು ನಿಮ್ಮ ಎಲ್ಲ ಕೆಲಸಕ್ಕೂ ಬಲವನ್ನು ಕೊಡುವುದು. ಕೆಲವನ್ನು ನೀವು ಬುದ್ಧಿಪೂರ್ವಕವಾಗಿ ಮಾಡುವಿರಿ. ಮನೋವಿಕಾರವನ್ನು ಕಡಿಮೆ‌ ಮಾಡಿಕೊಳ್ಳಿ. ಕುಟುಂಬದಲ್ಲಿ ನಡೆಯುವ ಕಾರ್ಯಗಳಿಗೆ ನಿಮ್ಮಿಂದ ಹೆಚ್ಚಿನ ಹಣ ಖರ್ಚು ಮಾಡುವ ಸನ್ನಿವೇಶವು ಬರಬಹುದು. ಕೃಷಿಯ ಉತ್ಪನ್ನಗಳನ್ನು ಸೂಕ್ತ ಸ್ಥಳದಲ್ಲಿ ಸಮಯದಲ್ಲಿ ಮಾರಾಟ ಮಾಡಿ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ಹೂಡಿಕೆಯಲ್ಲಿ ಉತ್ಸಾಹವಿರುವ ನೀವು ವಿವೇಚನೆಯಿಂದ ಮುಂದುವರಿಯುವಿರಿ.

ವೃಶ್ಚಿಕ ರಾಶಿ: ಇಂದು ಕಛೇರಿಯಲ್ಲಿ ನಿಮ್ಮ ವ್ಯಕ್ತಿತ್ವವು ಬದಲಾದಂತೆ ತೋರುವುದು. ಸಾಮಾಜಿಕ ಗೌರವದ ಅಪೇಕ್ಷೆಯು ಅಧಿಕವಾಗಿ ಇರುವುದು. ಹೇಳಿಕೊಳ್ಳುವಷ್ಟು ಆದಾಯವಿಲ್ಲದಿದ್ದರೂ ಅಹಂಕಾರಕ್ಕೇನು ಕೊರತೆ ಇರದು. ನಿಮ್ಮ ಮಾತಿನಿಂದ‌ ಶತ್ರುಗಳು ಹುಟ್ಟಿಕೊಳ್ಳಬಹುದು. ಮೇಲಿಂದ‌ ಮೇಲೆ‌ ಬರುತ್ತಿರುವ ಆರೋಗ್ಯದ ತೊಂದರೆಯು ನಿಮಗೆ ಅಸತಂಕವನ್ನು ಉಂಟುಮಾಡಬಹುದು. ಸಹೋದರರ ನಡುವಿನ ಭಿನ್ನಾಭಿಪ್ರಾಯಕ್ಕೆ ನೀವು ತೆರೆ ಎಳೆಯುವಿರಿ. ನಿಮ್ಮ ಕಾರ್ಯದಲ್ಲಿ ತಾಳ್ಮೆಯು ಅಗತ್ಯವಾಗಿ ಬೇಕಾಗುವುದು. ಶತ್ರುವನ್ನು ಉಪಾಯದಿಂದ ಗೆಲ್ಲುವ ತಂತ್ರ ಬಳಸಿ. ಅಳತೆಯನ್ನು ಅರಿತು ವ್ಯವಹರಿಸುವುದು ಎಲ್ಲ ದೃಷ್ಟಿಯಿಂದ ಉತ್ತಮ. ನಿಧಾನವಾಗಿ ವರ್ಧಿಸುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು. ಬರುವ ಸನ್ನಿವೇಶವನ್ನು ಎದುರಿಸಲು ನಿಮಗೆ ಗೊತ್ತಾಗುವುದು.

ಧನು ರಾಶಿ: ಇಂದು ನಿಮ್ಮ ಹಳೆಯ ಅವ್ಯವಹಾರವು ಬೆಳಕಿಗೆ ಬರಬಹುದು. ಸರಿಯಾದ ಕಡೆ ನಿಮ್ಮ ಹೂಡಿಕೆ ಇರಲಿ. ವ್ಯಾಪಾರಕ್ಕೆ ನೀವು ಯಾರನ್ನಾದರೂ ಆಕರ್ಷಿಸುವಿರಿ. ಕುಟುಂಬದಲ್ಲಿ ಶುಭ ಕಾರ್ಯಗಳನ್ನು ಮಾಡುವ ಮನಸ್ಸಾಗುವುದು. ಭೂಮಿಯ ವ್ಯವಹಾರವು ಪೂರ್ಣವಾಗಿ ಗೊತ್ತಾಗಲು ಸಮಯವನ್ನು ತೆಗೆಸುಕೊಳ್ಳುವಿರಿ. ಸ್ನೇಹಿತರ ನಿರೀಕ್ಷೆಯಲ್ಲಿ ಹೆಚ್ಚಿನ‌ ಸಮಯವು ಕಳೆದುಹೋಗುವುದು. ವೃತ್ತಿಯಲ್ಲಿ ನಿಮಗೆ ವಿರಾಮವು ಇಂದು ಸಿಗದೇ ನಿಮ್ಮ ಸ್ವಂತ ಕಾರ್ಯವನ್ನು ಕೈ ಬಿಡಬೇಕಾಗುವುದು. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಪ್ರಯತ್ನವು ನಡೆಯುವುದು. ಸಂಗಾತಿಯ ಬೆಂಬಲವು ನಿಮ್ಮ‌‌ ಕಾರ್ಯಗಳಿಗೆ ಸಿಗಲಿದೆ. ಅಗತ್ಯವಿದ್ದಾಗ ಮಾತ್ರ ಸಾಲದ ಬಗ್ಗೆ ಆಲೋಚಿಸಿ. ಸರ್ಕಾರಿ ಉದ್ಯೋಗದವರು ವರ್ಗಾವಣೆಯಿಂದ ದೂರವಿರಬೇಕಾಗಬಹುದು. ಗೃಹ ನಿರ್ಮಾಣದ ಕಾರ್ಯವನ್ನು ಆರಂಭಿಸಲು ಬಹಳ ಆತುರದಲ್ಲಿ ಇರುವಿರಿ.

ಮಕರ ರಾಶಿ: ಅನಿರೀಕ್ಷಿತವಾಗಿ ಇಂದು ಕುಟುಂಬದಲ್ಲಿ ಯಾವುದಾದರೂ ವಿಚಾರಕ್ಕೆ ಕಲಹವಾಗಬಹುದು. ವ್ಯವಹಾರದಲ್ಲಿ ನಿಮ್ಮ ಪಾಲುದಾರಿಕೆಯು ಪೂರ್ಣವಾಗಿ ಇರಲಾರದು. ಕೆಲವರ ನಡುವೆ ವೈಚಾರಿಕತೆಯಲ್ಲಿ ವೈರುಧ್ಯವುಂಟಾಗಬಹುದು. ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಅನ್ಯರ ಆಗಮನವು, ಸಲಹೆಯನ್ನು ಕೊಡುವುದು ಇಷ್ಟವಾಗದು. ಅಚ್ಚುಕಟ್ಟಾದ ಕಾರ್ಯಕ್ಕೆ ಪ್ರಸಿದ್ಧಿ ಸಿಗುವುದು. ಸಂಗಾತಿಯ ಸಂಪತ್ತಿನಿಂದ ನಿಮಗೆ ಬೇಕಾದುದನ್ನು ಪಡೆಯುವಿರಿ. ಕಛೇರಿಯ ಕೆಲಸದಲ್ಲಿ ನಿಮ್ಮ ಮಧ್ಯೆ ಅನಗತ್ಯರ ಪ್ರವೇಶದಿಂದ ಕೋಪಗೊಳ್ಳುವಿರಿ. ಅಲ್ಪ ಆದಾಯದಲ್ಲಿ ತೃಪ್ತಿ ಹೊಂದಬೇಕಾದೀತು. ಹೆಚ್ಚಿನ ಆದಾಯದಿಂದ ದುರಭ್ಯಾಸವು ಹೆಚ್ಚಾಗಬಹುದು. ಶಿಕ್ಷಕರು ವೇತನವನ್ನು ಹೆಚ್ಚಿಸಿಕೊಳ್ಳುವರು. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಉತ್ತಮ. ವಿದ್ಯಾರ್ಥಿಗಳ ಉತ್ಸಾಹವನ್ನು ಕುಗ್ಗಸುವುದು ಬೇಡ. ಸರಿಯಾದ ಮಾರ್ಗವನ್ನು ತೋರಿಸಿ.

ಕುಂಭ ರಾಶಿ: ನಿಮ್ಮದಲ್ಲದ ಕಾರ್ಯವನ್ನು ಮಾಡಬೇಕಾಗುವುದು. ಕಾರ್ಯದ ಒತ್ತಡದಲ್ಲಿಯೂ ಸ್ವಲ್ಪ ವಿರಾಮವನ್ನು ತೆಗೆದುಕೊಳ್ಳುವಿರಿ. ಆರ್ಥಿಕತೆಯ ಕುಸಿತದಿಂದ ಆತಂಕವಾಗಬಹುದು. ವಿವಾದವಾಗುವ ಮಾತುಗಳಿಂದ ದೂರವಿರುವಿರಿ. ಮಕ್ಕಳ ವಿದ್ಯಾಭ್ಯಾಸದ ಚಿಂತೆಯು ಶುರುವಾಗವಹುದು. ಬಾಯಿಯ ಚಪಲಕ್ಕೆ ವಿರುದ್ಧ ಆಹಾರವನ್ನು ತಿಂದು ಹೊಟ್ಟೆಯನ್ನು ಹಾಳುಮಾಡಿಕೊಳ್ಳಬೇಕಾಗುವುದು. ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲಕರವಿದ್ದರೂ ಅದನ್ನು ಬಳಸಿಕೊಳ್ಳುವ ಜಾಣತನವೂ ಅಗತ್ಯವಿದೆ. ಶುಭ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶಗಳಿದ್ದರೂ ಕಾರ್ಯದ ಒತ್ತಡದಿಂದ ಸಾಧ್ಯವಾಗದು. ನಿಮ್ಮ ಬದುಕಿನ ಬದಲಾವಣೆಯನ್ನು ಅನಿವಾರ್ಯವಾಗಿ ಮಾಡಿಕೊಳ್ಳಬೇಕಾಗಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು. ಸಹೋದ್ಯೋಗಿಗಳಿಗೆ ಸಹಕರಿಸುವ ಮನಸ್ಸಾಗುವುದು. ಮೋಜಿನ ಕಾರಣಕ್ಕೆ ಸುತ್ತಾಟ ಮಾಡುವಿರಿ.

ಮೀನ ರಾಶಿ: ಬಹಳ ದಿನಗಳ ಅನಂತರ ನಿಮ್ಮ ಆರೋಗ್ಯ ಉತ್ತಮವಾಗಿರುವುದು. ಕಾರ್ಯಕ್ಕೆ ಸಂಬಂಧಿಸಿದಂತೆ ಅಪರೂಪದ ವ್ಯಕ್ತಿಯ ಭೇಟಿಯಾಗಲಿದೆ. ಇಂದು ನಿಮ್ಮ ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಕುಟುಂಬದಲ್ಲಿ ಎಲ್ಲರಿಂದ ಮೆಚ್ಚುಗೆ ಸಿಗಲಿದೆ. ಇಂದಿನ ನಿಮ್ಮ ವ್ಯಾಪಾರವು ಬಹಳ ಶಿಸ್ತುಬದ್ಧವಾಗಿರಲಿದ್ದು, ಹಣದ ಹರಿವೂ ನಿಮಗೆ ಎಣಿಸಿದಂತೆ ಇರಲಿದೆ. ಹಳೆಯ ದಾಂಪತ್ಯವಾದರೂ ಸಂತೋಷಕ್ಕೆ ಕೊರತೆ ಇಲ್ಲದಂತೆ ಇರುವಿರಿ. ಕಛೇರಿಯ ಕೆಲಸಗಳನ್ನು ವೇಗವಾಗಿ ಮಾಡಿ ಜವಾಬ್ದಾರಿಯನ್ನು ಮುಗಿಸುವಿರಿ. ಕೆಲವು ಸಂಗತಿಗಳನ್ನು ನಿರೀಕ್ಷಿಸದೇ ಬರಬಹುದು. ನಿಮ್ಮನ್ನು ಕೆಲವರು ಅನಾದರ ಮಾಡಿದಂತೆ ಕಾಣಿಸೀತು. ನೀವು ವರ್ಗಾವಣೆಗೆ ಒತ್ತಡವನ್ನು ತರುವಿರಿ. ಮಕ್ಕಳ ಆರೋಗ್ಯಕ್ಕೆ ಖರ್ಚು ಮಾಡಬೇಕಾದೀತು. ವ್ಯವಹಾರದಲ್ಲಿ ಹೆಚ್ಚಿನ ಲಾಭವು ಬರಬಹುದು. ಪ್ರಸಾರ ಮಾಧ್ಯಮದವರು ದೂರ ಹೀಗಬೇಕಾಗಬಹುದು. ಸಾಹಿತ್ಯ ಕ್ಷೇತ್ರದಲ್ಲಿ ಇರುವವರಿಗೆ ಸಮ್ಮಾನ ಸಿಗುವ ಸಾಧ್ಯತೆ ಇದೆ.

ಲೋಹಿತ ಹೆಬ್ಬಾರ್ – 8762924271 (what’s app only)

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್