AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 28ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 28ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 28ರ ದಿನಭವಿಷ್ಯ
ರಾಶಿ ಭವಿಷ್ಯ
TV9 Web
| Edited By: |

Updated on:Nov 28, 2022 | 6:31 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 28ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂಥವರು, ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವಂಥವರು ಬಹಳ ಮುಖ್ಯವಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಭವಿಷ್ಯದ ದೃಷ್ಟಿಯಿಂದ ಆಲೋಚನೆ ಮಾಡಿ, ಸದ್ಯದ ಪರಿಸ್ಥಿತಿಯನ್ನು ಮಾತ್ರ ಆಲೋಚನೆ ಮಾಡದಿರಿ. ಅನುಭವಸ್ಥರ ಸಲಹೆ ಅಗತ್ಯ ಎನಿಸಿದಲ್ಲಿ ಖಂಡಿತಾ ಪಡೆದುಕೊಳ್ಳಿ.

ಜನ್ಮಸಂಖ್ಯೆ 2

ನಿಮಗೆ ಈ ದಿನ ಮಾರ್ಗದರ್ಶನ ನೀಡುವುದಕ್ಕೆ ಜನರಿರುತ್ತಾರೆ. ಇದನ್ನು ಸದುಪಯೋಗ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ವೈದ್ಯರು, ಡೇ ಕೇರ್ ಅಥವಾ ಶಾಲೆ ನಡೆಸುತ್ತಿರುವಂಥವರಿಗೆ ಭವಿಷ್ಯದ ಬಗ್ಗೆ ಒಂದಿಷ್ಟು ಚಿಂತೆ ಕಾಡಬಹುದು. ದಿನದ ಕೊನೆಗೆ ನಿಮಗಿಂತ ಕಿರಿಯ ವಯಸ್ಸಿನವರ ಜತೆಗಿನ ಮಾತುಕತೆಯಿಂದಾಗಿ ಮನಸ್ಸಿಗೆ ನೆಮ್ಮದಿ.

ಜನ್ಮಸಂಖ್ಯೆ 3

ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್, ಇಎಂಐ ಪಾವತಿ, ಸರ್ಕಾರಕ್ಕೆ ಬಾಕಿ ಉಳಿಸಿಕೊಂಡ ಯಾವುದೇ ಶುಲ್ಕವನ್ನು ನೀವು ಪಾವತಿ ಮಾಡಿದ್ದೀರಾ ಎಂಬುದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ಇನ್ನು ಕಟ್ಟಡ ಕಾರ್ಮಿಕರು ಸ್ವಲ್ಪ ಎಚ್ಚರಿಕೆಯಿಂದಲೇ ಕಾರ್ಯ ನಿರ್ವಹಿಸಿ, ಯಾರ ಜತೆಗೂ ಮನಸ್ತಾಪ ಸಲ್ಲದು. ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡುವುದು ಮುಖ್ಯ.

ಜನ್ಮಸಂಖ್ಯೆ 4

ಪೆಟ್ರೋಲ್ ಪಂಪ್ ನಡೆಸುವವರು, ಗ್ಯಾಸ್ ಏಜೆನ್ಸಿ ಇರುವಂಥವರು ವ್ಯವಹಾರಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನು ಬೇರೆಯವರಿಗೆ ವಹಿಸಬಾರದು. ಇನ್ನು ಒಂದು ಊರಿನಿಂದ ಮತ್ತೊಂದು ಊರಿಗೆ ಕೆಲಸದ ಸಲುವಾಗಿ ಪ್ರಯಾಣಿಸುವಂಥವರು ಬೆಲೆಬಾಳುವ ವಸ್ತುಗಳ ಕಡೆಗೆ ಗಮನ ನೀಡಿ. ನಾಲಗೆ ರುಚಿಯ ಮೇಲೆ ನಿಯಂತ್ರಣ ಇರಲಿ.

ಜನ್ಮಸಂಖ್ಯೆ 5

ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದ ದಿನ ಇದು. ಅದರಲ್ಲೂ ವಿದೇಶಕ್ಕೆ ವ್ಯಾಸಂಗಕ್ಕೆ ತೆರಳಬೇಕು ಎಂದುಕೊಳ್ಳುವವರಿಗೆ ಭವಿಷ್ಯದ ಬಗ್ಗೆ ಸ್ಪಷ್ಟವಾದ ಚಿತ್ರಣ ದೊರೆಯುತ್ತದೆ. ಡೇರಿ ವ್ಯವಹಾರದಲ್ಲಿ ತೊಡಗಿರುವವರಿಗೆ ಲಾಭದ ಪ್ರಮಾಣ ಹೆಚ್ಚಾಗುವ ದಾರಿ ಗೋಚರಿಸಲಿದೆ ಅಥವಾ ನೀವೇ ಹೂಡಿಕೆ ಮಾಡಲಿದ್ದೀರಿ.

ಜನ್ಮಸಂಖ್ಯೆ 6

ಈ ದಿನ ಆಲಸ್ಯ ನಿಮ್ಮನ್ನು ಕಾಡಲಿದೆ. ಎಲ್ಲ ವಿಚಾರದಲ್ಲೂ ಒಂದು ಬಗೆಯ ನಿರಾಸಕ್ತಿ ಇರಲಿದೆ. ಇದು ಸಿಟ್ಟಾಗಿ ಪರಿವರ್ತನೆ ಆಗದಂತೆ ನೋಡಿಕೊಳ್ಳಿ. ಸ್ವಂತ ವ್ಯವಹಾರ ಮಾಡುತ್ತಿರುವವರು ಏನಾದರೂ ಬ್ಯಾಂಕ್‌ ಕೆಲಸಗಳು ಅಥವಾ ವ್ಯವಹಾರಗಳು ಇದ್ದರೆ ಅನಿವಾರ್ಯ ಅಂತಿಲ್ಲದಿದ್ದರೆ ಮುಂದೂಡುವುದು ಉತ್ತಮ. ಕೃಷಿಕರಿಗೆ ಮಿಶ್ರವಾದ ದಿನ ಇದು.

ಜನ್ಮಸಂಖ್ಯೆ 7

ಸಂಗಾತಿ ಮಾತಿಗೆ ಮನ್ನಣೆ ನೀಡಿ. ಸ್ನೇಹಿತರು ನಿಮ್ಮ ಬಗ್ಗೆ ಇರುವ ಪ್ರೀತಿ- ಗೌರವದ ಕಾರಣಕ್ಕೆ ಕೆಲವು ವಿಚಾರಗಳನ್ನು ಎದುರಿಗೆ ಹೇಳದಿರಬಹುದು. ಅದನ್ನು ತಿಳಿದುಕೊಂಡು, ಅವರಿಗೆ ಬೇಸರ ಆಗದಂತೆ ನಡೆದುಕೊಳ್ಳಿ. ಈ ದಿನ ಚಿನ್ನ- ಬೆಳ್ಳಿ ವಸ್ತುಗಳನ್ನು ಖರೀದಿ ಮಾಡದಿರುವುದು ಉತ್ತಮ. ಸ್ವಲ್ಪ ಕಾಲ ಅದನ್ನು ಮುಂದೂಡಿ.

ಜನ್ಮಸಂಖ್ಯೆ 8

ವಿದೇಶೀ ಕರೆನ್ಸಿಗಳ ವ್ಯವಹಾರ ನಡೆಸುವಂಥವರಿಗೆ ಈ ದಿನ ಸವಾಲಿನಿಂದ ಕೂಡಿರುತ್ತದೆ. ಕಾನೂನು ಕಟ್ಟಳೆಯನ್ನು ಪಾಲಿಸುವ ಕಡೆಗೆ ಲಕ್ಷ್ಯ ನೀಡಿ. ಪ್ರೇಮ ನಿವೇದನೆ ಮಾಡಬೇಕು ಅಂದುಕೊಳ್ಳುವವರಿಗೆ ಸೂಕ್ತ ವಾತಾವರಣ ನಿರ್ಮಾಣ ಆಗಲಿದೆ. ಕನಿಷ್ಠ ಪಕ್ಷ ನೀವು ಬಯಸುವ ವ್ಯಕ್ತಿಯ ಮನಸ್ಸಿನಲ್ಲಿ ಏನಿದೆ ಎಂಬ ಸೂಕ್ಷ್ಯ ಸಿಗಲಿದೆ.

ಜನ್ಮಸಂಖ್ಯೆ 9

ಮನೆಯವರು, ಕುಟುಂಬದವರ ಸಲುವಾಗಿ ಹೂಡಿಕೆ, ಉಳಿತಾಯದ ಬಗ್ಗೆ ಆಲೋಚನೆ ಮಾಡುತ್ತೀರಿ. ಇನ್ನು ನಿಮ್ಮಲ್ಲಿ ಕೆಲವರು ಹೊಸ ವಾಹನ ಖರೀದಿಗೆ ಕೂಡ ಮನಸ್ಸು ಮಾಡಲಿದ್ದೀರಿ. ಯಾರನ್ನಾದರೂ ಭೇಟಿ ಆಗಬೇಕು ಎಂಬ ಉದ್ದೇಶ ನಿಮಗಿದ್ದಲ್ಲಿ ಈ ದಿನ ಅವರೊಂದಿಗೆ ಚರ್ಚೆ ನಡೆಸಬಹುದು. ಭೇಟಿಗೆ ಮೊದಲು ಮನಸ್ಸಿನಲ್ಲಿ ಗಣಪತಿಯನ್ನು ಸ್ಮರಿಸಿ.

ಲೇಖನ- ಎನ್‌.ಕೆ.ಸ್ವಾತಿ

Published On - 6:31 am, Mon, 28 November 22

ವಿದ್ಯಾರ್ಥಿಗಳ ಕೈಯಲ್ಲಿ ಗಾರೆ ಕೆಲಸ ಮಾಡಿಸಿದ ಶಿಕ್ಷಕರು, ವ್ಯಾಪಕ ಆಕ್ರೋಶ
ವಿದ್ಯಾರ್ಥಿಗಳ ಕೈಯಲ್ಲಿ ಗಾರೆ ಕೆಲಸ ಮಾಡಿಸಿದ ಶಿಕ್ಷಕರು, ವ್ಯಾಪಕ ಆಕ್ರೋಶ
ಎಣ್ಣೆ ಪಾರ್ಟಿ ಜತೆಗೇ ಕಡತ ನಿರ್ವಹಣೆ! ಬೆಸ್ಕಾಂ ಅಧಿಕಾರಿಗಳ ವಿಡಿಯೋ ವೈರಲ್
ಎಣ್ಣೆ ಪಾರ್ಟಿ ಜತೆಗೇ ಕಡತ ನಿರ್ವಹಣೆ! ಬೆಸ್ಕಾಂ ಅಧಿಕಾರಿಗಳ ವಿಡಿಯೋ ವೈರಲ್
‘ದೊಡ್ಮನೆ ಹಬ್ಬ’ದಲ್ಲಿ ಗಾನ ಬಜಾನ ತಂಡದ ಟ್ರೋಲ್ ಸಾಂಗ್
‘ದೊಡ್ಮನೆ ಹಬ್ಬ’ದಲ್ಲಿ ಗಾನ ಬಜಾನ ತಂಡದ ಟ್ರೋಲ್ ಸಾಂಗ್
ಹಂಪಿ ಉತ್ಸವದಲ್ಲಿ ಡ್ಯಾನ್ಸ್ ಮಾಡಿ ರಂಜಿಸಿದ ಶಿವರಾಜ್​​ಕುಮಾರ್
ಹಂಪಿ ಉತ್ಸವದಲ್ಲಿ ಡ್ಯಾನ್ಸ್ ಮಾಡಿ ರಂಜಿಸಿದ ಶಿವರಾಜ್​​ಕುಮಾರ್
ಶಿವರಾತ್ರಿಗೆ ಮಾದಪ್ಪನ ಸನ್ನಿಧಿಗೆ ತೆರಳುವ ಭಕ್ತರೇ ಎಚ್ಚರ
ಶಿವರಾತ್ರಿಗೆ ಮಾದಪ್ಪನ ಸನ್ನಿಧಿಗೆ ತೆರಳುವ ಭಕ್ತರೇ ಎಚ್ಚರ
ಧನುಸ್ಸು ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಧನುಸ್ಸು ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಾವಿರಾರು ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ
ಸಾವಿರಾರು ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ
ಮೈಸೂರು ಅರಮನೆ ತ್ರಿನೇಶ್ವರನಿಗೆ 11 ಕೆಜಿಯ ಚಿನ್ನದ ಮುಖವಾಡ! ಏನಿದರ ವಿಶೇಷ?
ಮೈಸೂರು ಅರಮನೆ ತ್ರಿನೇಶ್ವರನಿಗೆ 11 ಕೆಜಿಯ ಚಿನ್ನದ ಮುಖವಾಡ! ಏನಿದರ ವಿಶೇಷ?
ನಿರ್ಬಂಧದ ಮದ್ಯೆಯೂ ನಂದಿ ಗಿರಿಧಾಮಕ್ಕೆ ಬಂದ ಪ್ರೇಮಿಗಳು, ನಿರಾಸೆಯಿಂದ ವಾಪಸ್
ನಿರ್ಬಂಧದ ಮದ್ಯೆಯೂ ನಂದಿ ಗಿರಿಧಾಮಕ್ಕೆ ಬಂದ ಪ್ರೇಮಿಗಳು, ನಿರಾಸೆಯಿಂದ ವಾಪಸ್
ಬಿಲ್ವಪತ್ರೆಯ ಮಹತ್ವ, ಶಿವ ಬಿಲ್ವಪ್ರಿಯ ಯಾಕೆ?
ಬಿಲ್ವಪತ್ರೆಯ ಮಹತ್ವ, ಶಿವ ಬಿಲ್ವಪ್ರಿಯ ಯಾಕೆ?