Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 9ರ ದಿನಭವಿಷ್ಯ

Numerology Prediction Daily Horoscope ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 9ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 9ರ ದಿನಭವಿಷ್ಯ
Numerology Prediction
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Dec 09, 2022 | 6:06 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು (Numerology Daily Horoscope )ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 9ರ ಶುಕ್ರವಾರದ ದಿನ ಭವಿಷ್ಯ(Daily Horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1

ವಿದೇಶಗಳಿಂದ ಸಮಾಚಾರ, ಸುದ್ದಿ, ನೆರವು ನಿರೀಕ್ಷೆ ಮಾಡುತ್ತಿದ್ದಲ್ಲಿ ಈ ದಿನ ದೊರೆಯಲಿದೆ. ಮಕ್ಕಳ ಭವಿಷ್ಯದ ಕಡೆಗೆ ಹೆಚ್ಚಿನ ನಿಗಾ ವಹಿಸಿ. ವಿಲಾಸಿ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಮನಸ್ಸಾಗುತ್ತದೆ. ಸಾಧ್ಯವಾದಷ್ಟೂ ಈ ದಿನ ಪ್ರಶಾಂತವಾಗಿರುವುದಕ್ಕೆ ಪ್ರಯತ್ನ ಮಾಡಿ. ಸ್ನೇಹಿತರೇನಾದರೂ ಪಾರ್ಟಿಗೆ ಆಹ್ವಾನ ಮಾಡಿದಲ್ಲಿ ಹೋಗದಿರುವುದು ಉತ್ತಮ.

ಜನ್ಮಸಂಖ್ಯೆ 2

ಈ ದಿನ ಬಹಳ ಉತ್ಸಾಹದಿಂದ ಇರುತ್ತೀರಿ. ಪುಷ್ಕಳವಾದ ಭೋಜನ, ಸ್ನೇಹಿತರೊಂದಿಗೆ ಉತ್ತಮವಾದ ಸಮಯ ಕಳೆಯಲಿದ್ದೀರಿ. ಕೆಲಸ ಬದಲಾವಣೆ ಮಾಡಬೇಕು ಎಂದಿರುವವರಿಗೆ ಅವಕಾಶಗಳು ತೆರೆದುಕೊಳ್ಳಲಿವೆ. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ಹಳೇ ಸ್ನೇಹಿತರು, ಪರಿಚಿತರ ಸಹಾಯ ನಿಮಗೆ ದೊರೆಯಲಿದೆ.

ಜನ್ಮಸಂಖ್ಯೆ 3

ಈ ದಿನ ಕಾರಣವೇ ಇಲ್ಲದೆ ಬೇಸರ ಪಡುವಂತಾಗುತ್ತದೆ. ನಿಮ್ಮ ಮನಸ್ಸಿಗೆ ನೋಯಿಸುವಂತೆ ಕೆಲವರು ಮಾತನಾಡುವುದರಿಂದ ಬೇಸರ ಉಂಟಾಗುತ್ತದೆ. ನಿಮಗೆ ಆಹ್ವಾನ ಇಲ್ಲದ ಕಡೆ ಹೋಗಬೇಡಿ. ಇನ್ನು ಮದ್ಯಪಾನ ಮಾಡುವಂಥವರಾಗಿದ್ದಲ್ಲಿ ಈ ದಿನ ಸಾಧ್ಯವಾದಷ್ಟೂ ಅದರಿಂದ ದೂರ ಇದ್ದರೆ ಉತ್ತಮ.

ಜನ್ಮಸಂಖ್ಯೆ 4

ಮನಸ್ಸಿಗೆ ಒಂದು ಬಗೆಯ ಉಲ್ಲಾಸ ಇರುತ್ತದೆ. ಕಾರು ಅಥವಾ ಬೇರೆ ಯಾವುದೇ ವಾಹನ ಖರೀದಿ ಮಾಡುವುದಕ್ಕೆ ಮುಂದಾಗಲಿದ್ದೀರಿ. ವ್ಯಾಪಾರ- ವ್ಯವಹಾರ ಮಾಡುವಂಥವರಿಗೆ ಹೊಸದಾಗಿ ಹೂಡಿಕೆ ಹರಿದು ಬರುವ ಸೂಚನೆಗಳು ದೊರೆಯಲಿವೆ. ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಕಾಗದ- ಪತ್ರಗಳ ಕಡೆಗೆ ಲಕ್ಷ್ಯ ನೀಡಿ.

ಜನ್ಮಸಂಖ್ಯೆ 5

ಈ ಹಿಂದೆ ನೀವು ಮಾಡಿದ ತಪ್ಪು ಇವತ್ತು ವಿಪರೀತ ಕಾಡಲಿದೆ. ಯಾರದೋ ಸ್ನೇಹ ಯಾಕಾದರೂ ಮಾಡಿದೆ ಎಂದು ಪರಿತಪಿಸುವಂತಾಗುತ್ತದೆ. ಒಂದು ವೇಳೆ ನಿಮ್ಮ ತಪ್ಪನ್ನು ಯಾರಾದರೂ ಎತ್ತಾಡಿದಲ್ಲಿ ನೀವು ಮಾಡಿದ್ದು ಸರಿ ಅಂತ ವಾದ ಮಾಡುತ್ತಾ ಕೂರದಿರಿ. ಇನ್ನು ಕ್ರಿಯೇಟಿವ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ಹೆಚ್ಚು ಲಕ್ಷ್ಯ ಕೊಟ್ಟು ಜವಾಬ್ದಾರಿ ಪೂರ್ತಿ ಮಾಡಿ.

ಜನ್ಮಸಂಖ್ಯೆ 6

ಚಿನ್ನಾಭರಣ, ವಸ್ತ್ರ ಅಥವಾ ಹೊಸ ಗ್ಯಾಜೆಟ್‌ಗಳನ್ನು ಖರೀದಿಸುವ ಯೋಗ ನಿಮ್ಮ ಪಾಲಿಗಿದೆ. ಬೇರೆಯವರು ತಮ್ಮಿಂದ ಸಾಧ್ಯವಿಲ್ಲ ಎಂದು ಕೈ ಬಿಟ್ಟ ಕೆಲಸವನ್ನು ನೀವು ಮಾಡಿ ಮುಗಿಸಲಿದ್ದೀರಿ. ಈ ಕಾರಣಕ್ಕೆ ನಿಮ್ಮ ವೃತ್ತಿಯಲ್ಲಿ ಏಳ್ಗೆ ಕಾಣಲಿದ್ದೀರಿ. ಹೊಸದಾಗಿ ಆದಾಯ ಮೂಲವೊಂದು ದೊರೆಯಲಿದೆ.

ಜನ್ಮಸಂಖ್ಯೆ 7

ನಿಮ್ಮ ಹಣಕಾಸಿನ ನಿರ್ಣಯಗಳು ಇವತ್ತು ಪ್ರಾಮುಖ್ಯ ಪಡೆದುಕೊಳ್ಳುತ್ತವೆ. ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆ, ಶುಲ್ಕ ಪಾವತಿ ಆಗಿದೆಯಾ ಎಂದು ನೋಡಿಕೊಳ್ಳಿ. ಜತೆಗೆ ಈ ದಿನ ಸಿಗ್ನಲ್ ಜಂಪ್, ಹೆಲ್ಮೆಟ್ ಇಲ್ಲದೆ ಪ್ರಯಾಣ, ಕಾರಿನಲ್ಲಿ ಸೀಟ್ ಬೆಲ್ಟ್‌ ಇಲ್ಲದೆ ಪ್ರಯಾಣಿಸುವುದು ಇಂಥದ್ದೆಲ್ಲ ಮಾಡದಿರಿ.

ಜನ್ಮಸಂಖ್ಯೆ 8

ಹೊಸದಾಗಿ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಬೇಕು ಎಂದು ಇದ್ದಲ್ಲಿ ಈ ದಿನದ ಮಟ್ಟಿಗೆ ಮುಂದೂಡಿ. ನಿಮ್ಮ ಮೊಬೈಲ್‌ನಲ್ಲಿ ಇರುವ ಡೇಟಾ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ. ನಿಮ್ಮ ವೈಯಕ್ತಿಕ ಡೇಟಾ, ಫೋಟೋ, ಮಾಹಿತಿಗಳನ್ನು ಯಾರೂ ಕಳುವು ಮಾಡದಂತೆ ನೋಡಿಕೊಳ್ಳಿ. ಅಪರಿಚಿತ ಮೆಸೇಜ್, ಮೇಲ್‌ಗಳನ್ನು ತೆರೆಯುವ ಮುನ್ನ, ನಿಮ್ಮ ಗ್ಯಾಜೆಟ್‌ಗಳನ್ನು ಬೇರೆಯವರಿಗೆ ಕೊಡುವವರಿದ್ದಲ್ಲಿ ಜಾಗ್ರತೆ.

ಜನ್ಮಸಂಖ್ಯೆ 9

ಕ್ರೆಡಿಟ್ ಕಾರ್ಡ್‌ಗಳ ಬಿಲ್ ಪಾವತಿ ಮಾಡಿದ್ದೀರಿ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಸಾಲದ ಇಎಂಐ, ಬಡ್ಡಿ ಪಾವತಿ ಇತ್ಯಾದಿ ತಿಂಗಳು ತಿಂಗಳು ಪಾವತಿಸಬೇಕಾದ್ದನ್ನು ಪಾವತಿ ಮಾಡುವುದು ಉತ್ತಮ. ಕೃತಕ ಗರ್ಭಧಾರಣೆ ಮೂಲಕ ಸಂತಾನ ಪಡೆಯುವುದಕ್ಕೆ ಪ್ರಯತ್ನಿಸುತ್ತಿರುವವರಿಗೆ ಸರಿಯಾದ ಮಾರ್ಗದರ್ಶನ, ವೈದ್ಯರ ಸಲಹೆ ದೊರೆಯಲಿದೆ. ಲೇಖನ- ಎನ್‌.ಕೆ.ಸ್ವಾತಿ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ